ಗೋಸೇವೆಯಲ್ಲಿ ದೊರಕಿದ ಅನುಭವಗಳು ಆನಂದದಾಯಕ : ಜ್ಯೋತಿ ಹೇರಂಭ ಶಾಸ್ತ್ರಿ, ಉಪ್ಪಿನಂಗಡಿ

ಮಾತೃತ್ವಮ್

” ಇಂದಿನ ಯಾಂತ್ರಿಕ ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ನೆಮ್ಮದಿ ನೀಡುವ ವಿಚಾರವೆಂದರೆ ಅದು ಧಾರ್ಮಿಕತೆ. ಅಂತಹ ಧಾರ್ಮಿಕ ಕಾರ್ಯಗಳನ್ನು ಮಾಡಲು ಶಿಷ್ಯರಿಗೆ ಪ್ರೇರಣೆ ನೀಡುವ ನಮ್ಮ ಶ್ರೀಸಂಸ್ಥಾನದವರ ಸಮಾಜೋನ್ಮುಖೀ ಕಾರ್ಯಗಳಲ್ಲಿ ಸೇವೆ ಮಾಡಲು ದೊರಕುವ ಅವಕಾಶಗಳು ಬದುಕಿಗೆ ಆನಂದದಾಯಕವಾಗಿರುತ್ತದೆ‌ ” ಎನ್ನುವವರು ಉಪ್ಪಿನಂಗಡಿ ಮಂಡಲ ಉಪ್ಪಿನಂಗಡಿ ವಲಯದ ಜ್ಯೋತಿ ಹೇರಂಭಶಾಸ್ತ್ರಿ.

ಕೈಪ್ಪಂಗಳ ಕೃಷ್ಣಭಟ್ ಪಾರ್ವತಿ ದಂಪತಿಗಳ ಪುತ್ರಿಯಾದ ಜ್ಯೋತಿ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

ಉಪ್ಪಿನಂಗಡಿ ಮಂಡಲದ ಅಧ್ಯಕ್ಷರಾದ ಹೇರಂಭಶಾಸ್ತ್ರಿಯವರ ಪತ್ನಿಯಾದ ಜ್ಯೋತಿಗೆ ಸಹಜವಾಗಿಯೇ ಶ್ರೀಮಠದ ಸಂಪರ್ಕ ದೊರಕಿತು. ಅಭಯಾಕ್ಷರ ಅಭಿಯಾನ, ಹಾಲು ಹಬ್ಬಗಳಲ್ಲಿ ಭಾಗವಹಿಸಿದ ಇವರು ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಸ್ವಯಂ ಇಚ್ಚೆಯಿಂದಲೇ ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾದವರು.

” ಅನೇಕ ಮಂದಿ ಗೋಪ್ರೇಮಿಗಳ ಸಹಕಾರದಿಂದ ಎರಡು ವರ್ಷಗಳ ಗುರಿ ತಲುಪಿದೆ. ದೇಶೀಯ ಹಸುಗಳ ಮಹತ್ವವನ್ನು ಅರಿತ ಅನೇಕ ಮಂದಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಶ್ರೀಗುರುಗಳ ಕೃಪೆಯಿಂದ ಗುರಿ ತಲುಪಲು ಸಾಧ್ಯವಾಯಿತು ” ಎನ್ನುವ ಜ್ಯೋತಿ ತಮ್ಮ ಬದುಕಿನ ನೋವು ನಲಿವುಗಳ ಸಂದರ್ಭಗಳಲ್ಲಿ ಶ್ರೀಗುರು ಚರಣಗಳನ್ನು ದೃಢವಾಗಿ ನಂಬಿದವರು.

ಭಜನೆ, ಹೊಲಿಗೆ, ಸ್ತೋತ್ರ ಪಠಣಗಳಲ್ಲಿ ಆಸಕ್ತಿ ಹೊಂದಿರುವ ಜ್ಯೋತಿ ಅವರ ಎಲ್ಲಾ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಸಹಕಾರವಿದೆ.

” ಶ್ರೀಗುರುಗಳು ನಮ್ಮ ಮನೆ ‘ ಧರ್ಮಚಕ್ರ ‘ ಕ್ಕೆ ಭೇಟಿ ನೀಡಿದ್ದು ಬದುಕಿನ ಅತ್ಯಂತ ಖುಷಿಯ ವಿಚಾರ ಎನ್ನುವ ಜ್ಯೋತಿಯ ಕಿರಿಯ ಪುತ್ರ ವಿ ವಿ ವಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶ್ರೀಮಠದ ಎಲ್ಲಾ ಯೋಜನೆಗಳಲ್ಲೂ ಸಾಧ್ಯವಾದ ರೀತಿಯಲ್ಲಿ ತೊಡಗಿಸಿಕೊಳ್ಳುವ ಇವರಿಗೆ ಇನ್ನಷ್ಟು ಗೋಸೇವೆ, ಶ್ರೀಗುರು ಸೇವೆ ಮಾಡಬೇಕೆಂಬ ಕನಸು.

Author Details


Srimukha

Leave a Reply

Your email address will not be published. Required fields are marked *