” ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಮಾತೆಯ ಸೇವೆ ಆರಂಭಿಸುವಾಗ ಗುರಿ ತಲುಪಲು ಸಾಧ್ಯವೇ ‘ ಎಂಬ ಅಳುಕು ಮನದಲ್ಲಿತ್ತು. ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆದ ಮೇಲೆ ಬಹು ಬೇಗನೆ ಗುರಿ ಮುಟ್ಟಿದೆ. ಶ್ರೀಗುರು ಕರುಣೆಯ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲು ಇನ್ನೇನಿದೆ ?” ಎಂದವರು ಮುಂಡಾಜೆ ಮೂಲದ ಪ್ರಸ್ತುತ ಉಪ್ಪಿನಂಗಡಿ ಮಂಡಲ ,ಮಾಣಿ ವಲಯದ ಕೆದಿಲ ನಿವಾಸಿಗಳಾಗಿರುವ ನರಸಿಂಹರಾಜ್ ಅವರ ಪತ್ನಿ ಶುಭಲಕ್ಷ್ಮಿ.
ಸಾಮೆತ್ತಡ್ಕ ಸತ್ಯನಾರಾಯಣ ಭಟ್, ಸರ್ವಮಂಗಳಾ ದಂಪತಿಗಳ ಪುತ್ರಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.
ಈ ಹಿಂದೆ ಬೆಂಗಳೂರು ನಿವಾಸಿಗಳಾಗಿದ್ದ ಇವರು ಮಹಾಲಕ್ಷ್ಮಿ ವಲಯದ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದವರು. ವಿ ವಿ ವಿ ಅಭಿಯಾನದಲ್ಲೂ ಸಕ್ರಿಯವಾಗಿ ಭಾಗವಹಿಸಿದ ಶುಭಲಕ್ಷ್ಮಿ ಕಳೆದ ಎರಡೂವರೆ ವರ್ಷಗಳಿಂದ ಊರಿನಲ್ಲಿ ನೆಲೆಸಿದ್ದಾರೆ.
” ಮಾತೃಪ್ರಧಾನೆಯಾಗಿದ್ದ ಕಾರಣ ಬೆಂಗಳೂರಿನಲ್ಲಿ ಅನೇಕ ಮಂದಿಯ ಸಂಪರ್ಕ ಸಾಧ್ಯವಾಯಿತು. ಇದು ಮಾತೃತ್ವಮ್ ಯೋಜನೆಯ ಗುರಿ ತಲುಪಲು ಸುಗಮವಾಯಿತು. ದೇಶೀಯ ಗೋವುಗಳ ಮಹತ್ವದ ಬಗ್ಗೆ ತಿಳಿಸಿದಾಗ ಎಲ್ಲರೂ ಉತ್ತಮ ಸ್ಪಂದನೆ ನೀಡಿ ಗೋಮಾತೆಯ ಸೇವೆಗೆ ಸಹಕಾರ ನೀಡಿದ್ದಾರೆ. ಶ್ರೀಗುರುಗಳನ್ನು, ಗುರುಪೀಠವನ್ನು ನಂಬುವವರಿಗೆ ಬದುಕಿನಲ್ಲಿ ಸದಾ ಒಳಿತಾಗುವುದು ನಿಶ್ಚಿತ ” ಎನ್ನುವ ಶುಭಲಕ್ಷ್ಮಿ ಅವರ ಗೋಸೇವೆಗೆ ತುಂಬು ಕುಟುಂಬದ ಎಲ್ಲರ ಬೆಂಬಲವೂ ಸಂಪೂರ್ಣವಾಗಿ ದೊರಕಿದೆ.
ಪ್ರಸನ್ನಾ ವಿ ಚೆಕ್ಕೆಮನೆ