ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

ಮಾತೃತ್ವಮ್

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ .

ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ.

ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಗಣಿತದ ಅಧ್ಯಾಪಿಕೆಯಾಗಿದ್ದಾರೆ‌.

” ವಲಯ ಕಾರ್ಯದರ್ಶಿಯೂ ಆಗಿರುವ ಭಾವ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ ಅವರು ಮಾತೃತ್ವಮ್ ಗೆ ಮೊದಲ ಕಾಣಿಕೆ ನೀಡಿದರು. ಮುಂದೆ ಸಹೋದ್ಯೋಗಿಗಳು, ಸಂಬಂಧಿಕರು, ಮಿತ್ರರು…….ಹೀಗೆ ಗೋಮಾತೆಯ ಸೇವೆಯ ಬಗ್ಗೆ ತಿಳಿಸಿದಾಗ ಎಲ್ಲರೂ ಬಹಳ ಸಂತೋಷದಿಂದ ಕೈ ಜೋಡಿಸಿದರು. ನಾನು ಸಂಪರ್ಕಿಸಿದವರೆಲ್ಲರೂ ಇದೊಂದು ಉತ್ತಮ ಕಾರ್ಯವೆಂದು ಶ್ಲಾಘಿಸಿದ್ದಾರೆ. ಇದು ನನಗೆ ಇನ್ನಷ್ಟು ಗೋ ಸೇವೆ ಮಾಡಲು ಪ್ರೇರಣೆ ನೀಡಿದೆ ” ಎನ್ನುತ್ತಾರೆ ಉಮಾ.

ದಾನಿಯೊಬ್ಬರು ಪ್ರತಿನಿತ್ಯವೂ ತಮ್ಮ ಆದಾಯದಲ್ಲಿ ನಿಶ್ಚಿತ ಮೊತ್ತ ತೆಗೆದಿರಿಸುವಂತೆ ಮಾಡಿ ಆ ಮೂಲಕ ದೇಶೀಯ ತಳಿಯ ಹಸುಗಳ ರಕ್ಷಣೆಗೆ ಕೈ ಜೋಡಿಸುವಂತೆ ತಮ್ಮ ಕಾರ್ಯವಿಧಾನ ರೂಪಿಸಿರುವ ಉಮಾ ಅವರು ಹಲವಾರು ಮಂದಿಗೆ ಗೋಸೇವೆಯ ಮಹತ್ವವನ್ನು ತಿಳಿಸಿದ್ದಾರೆ.

” ಶ್ರೀ ಮಠದ ನಿರ್ದೇಶಾನುಸಾರವಾಗಿ ವಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತೇನೆ. ಮುಜುಂಗಾವು ಹಾಗೂ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಪರೀಕ್ಷಾ ತರಬೇತಿಯನ್ನು ನಡೆಸಿಕೊಟ್ಟಿದ್ದೇನೆ. ಶ್ರೀ ಮಠದ ಸೇವೆಯಿಂದ ಧನ್ಯತಾಭಾವ , ಹುರುಪು ಹಾಗೂ ಮಾನಸಿಕ ನೆಮ್ಮದಿ ದೊರಕಿದೆ ” ಎಂದು ನುಡಿಯುವ ಉಮಾ ಅವರು ಮಾಸದ ಮಾತೆಯಾಗಿ ಕಾರ್ಯ ನಿರ್ವಹಿಸಿ ಒಂದು ವರ್ಷದ ಗುರಿ ತಲುಪಿದವರು.

ಸಂಗೀತ, ಭಜನೆ , ಗಣಿತದ ಸಮಸ್ಯೆಗಳನ್ನು ಪರಿಹರಿಸುವುದೇ ಮೊದಲಾದ ಹವ್ಯಾಸಗಳಿರುವ ಉಮಾ ಶೇಡಿಗುಮ್ಮೆ ಅವರಿಗೆ ಸಾಧ್ಯವಾದಷ್ಟು ಕಾಲ ಶ್ರೀಮಠದ, ಗೋಮಾತೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹಂಬಲವಿದೆ.

Author Details


Srimukha

Leave a Reply

Your email address will not be published. Required fields are marked *