ಶ್ರೀಗುರು ಕರುಣೆಯ ಕಿರಣಗಳು ಬಾಳಿನ ಬೆಳಕು : ಯಶೋದಾ ವಿಷ್ಣು ಭಟ್, ಬೆಂಗಳೂರು

ಮಾತೃತ್ವಮ್

” ಶ್ರೀಮಠದ ಸಂಪರ್ಕಕ್ಕೆ ಬರುವುದಕ್ಕೆ ಮೊದಲೆ ನನ್ನ ಮನದಲ್ಲಿ ಒಂದು ರೀತಿಯ ತೊಳಲಾಟವಿತ್ತು. ಮನದಲ್ಲಿ ಮೂಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿಯದೆ ಗೊಂದಲದಲ್ಲಿದ್ದೆ. ಯಾವಾಗ ಶ್ರೀಮಠದ ಸಂಪರ್ಕಕ್ಕೆ ಬಂದೆನೋ ಅಂದಿನಿಂದ ಒಣಮರದಂತೆ ಬೋಳಾಗಿದ್ದ ಮನಸ್ಸು ಜೀವನದ ಮೌಲ್ಯಗಳನ್ನು ಅರಿತುಕೊಂಡು ಹಸಿರಾಯಿತು. ಜೀವನ ಎಂದರೇನು, ಜೀವನದ ಅರ್ಥವೇನು ಎಂಬುದು ಸರಿಯಾಗಿ ಮನದಟ್ಟಾಯಿತು. ಶ್ರೀಗುರು ಚರಣಗಳನ್ನು ನಂಬಿ ನಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಬದುಕುವುದೇ ಜೀವನದ ಗುರಿ ಎಂಬ ಭಾವ ಬಂತು ” ಎಂದು ಭಾವಪೂರ್ಣವಾಗಿ ನುಡಿದವರು ಹೊನ್ನಾವರ ಕವಲಕ್ಕಿಯ ಮುಗ್ವ ವಲಯದ ಪ್ರಸ್ತುತ ಬೆಂಗಳೂರಿನ ಗಿರಿನಗರ ನಿವಾಸಿಗಳಾಗಿರುವ ವಿಷ್ಣು ಭಟ್ ಅವರ ಪತ್ನಿ ಯಶೋದಾ ವಿಷ್ಣು ಭಟ್.

ಹೊಸನಗರದ ನಿಟ್ಟೂರು ಬಾಲಚಂದ್ರ ಭಟ್, ಶಾರದಾ ಭಟ್ ದಂಪತಿಗಳ ಪುತ್ರಿಯಾದ ಯಶೋದಾ ಅವರು ಚದರವಳ್ಳಿಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು.

೪ ವರ್ಷಗಳ ಕಾಲ ಶ್ರೀಮಠದ ಅಂತರ್ಜಾಲ ವಿಭಾಗದಲ್ಲಿ ಹಾಗೂ ೪ ತಿಂಗಳುಗಳ ಕಾಲ ಶ್ರೀಭಾರತೀ ಪ್ರಕಾಶನದಲ್ಲೂ ಸೇವೆ ಮಾಡಿದ ಅನುಭವ ಹೊಂದಿರುವ ಯಶೋದಾ ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ.

” ಬೇರ್ಕಡವು ಈಶ್ವರಿ ಅಕ್ಕನ ಪ್ರೇರಣೆಯಿಂದ ಮಾಸದ ಮಾತೆಯಾದೆ. ಗೋಮಾತೆಯ ಸೇವೆಗೆ ಸಹಕಾರ ಕೇಳಿದವರೆಲ್ಲ ಪ್ರೀತಿಯಿಂದ ಕೈ ಜೋಡಿಸಿದ್ದಾರೆ‌. ಒಂದು ವರ್ಷದ ಗುರಿ ತಲುಪಿದ ಕೇವಲ ಹದಿನೈದೇ ದಿನಗಳಲ್ಲಿ ಎರಡನೇ ವರ್ಷದ ಗುರಿಯನ್ನು ತಲುಪುವಂತಾಗಿದ್ದು ಶ್ರೀಗುರುಕೃಪೆ ” ಎನ್ನುವ ಯಶೋದಾ ಅವರು ಬಿಡುವಿನ ವೇಳೆಗಳಲ್ಲಿ ಶ್ರೀಗುರುಗಳ ಆಶೀರ್ವಚನಗಳನ್ನು ಕೇಳುತ್ತಾರೆ.

” ಶ್ರೀಗುರುಗಳ ಪ್ರವಚನಗಳು ಬಾಳಿಗೆ ಬೆಳಕನ್ನು ನೀಡುತ್ತವೆ. ಹಿರಿಯರಿಂದ ಕಿರಿಯರ ವರೆಗೂ ಆಪ್ತವಾಗುವ ಭರವಸೆಯ ಕಿರಣಗಳು ಅವು. ಬದುಕಿನ ಅನೇಕ ಸಮಸ್ಯೆಗಳಿಗೆ ಉತ್ತರ ಶ್ರೀಗುರುಗಳ ಆಶೀರ್ವಚನಗಳು ” ಎನ್ನುವ ಯಶೋದಾ ಅವರ ಗೋಸೇವೆ, ಶ್ರೀಮಠದ ಸೇವೆಗೆ ಮನೆಯವರೆಲ್ಲರ ಸಹಕಾರವಿದೆ.

Author Details


Srimukha

Leave a Reply

Your email address will not be published. Required fields are marked *