ಕಾವ್ಯಾರಾಮ – ಭರತಮುನಿಯ ಧ್ರುವಾ ಧಾಮ
‘ಕಾವ್ಯಾರಾಮ’ ವೆಂಬ ವಾಟ್ಸಾಪ್ (ಈಗ ಫೇಸ್ಬುಕ್ ನಲ್ಲಿಯೂ) ಗ್ರೂಪೊಂದು ಮೂರ್ನಾಲ್ಕು ವರ್ಷಗಳಿಂದ ಅತ್ಯುತ್ತಮ ಮೇಧಾವಿ ಕವಿಗಳು-ಕವಯಿತ್ರಿಗಳನ್ನು ಹೊಂದಿದ್ದು ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕವಿತೆಗಳನ್ನು ಛಂದೋಬದ್ಧವಾಗಿಯೂ ಮನೋಜ್ಞ ಕಲ್ಪನೆಗಳಲ್ಲಿಯೂ ರಚಿಸುತ್ತ ಸದ್ದಿಲ್ಲದೆ ಕನ್ನಡಾಂಬೆಯ, ಸಾಹಿತ್ಯಸರಸ್ವತಿಯ ಸೇವೆಗೈಯುತ್ತಿದೆ. ಇದನ್ನು ಆರಂಭಿಸಿ ರೂಪಿಸಿದ್ದು ಹಿರಿಯ ವಿದ್ವಾಂಸರೂ, ಕವಿಗಳೂ, ಬರಹಗಾರರೂ, ರಂಗಭೂಮಿಯಲ್ಲಿ ಬಹಳವಾದ ಪರಿಶ್ರಮವಿದ್ದು ಇನ್ನೂರೈವತ್ತಕ್ಕೂ ಮಿಕ್ಕಿ ರಂಗರೂಪಕಗಳನ್ನು ರಚಿಸಿ, ಮಾಡಿಸಿದ, ಪ್ರಖ್ಯಾತ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರವರು. ಆಶುಕವಿತ್ವದಲ್ಲಿಯೂ ಈ ಗ್ರೂಪಿನ ಕವಿ-ಕವಯಿತ್ರಿಗಳು ಅನೇಕ ವಿಷಯಗಳಲ್ಲಿ ಅನನ್ಯ ಕವಿತೆಗಳನ್ನು ರಚಿಸುತ್ತ ನಮ್ಮಂತಹವರಿಗೆ […]
Continue Reading