ಕನ್ಯಾನ ವಲಯದಲ್ಲಿ ಪ್ರತಿಭಾ ಪುರಸ್ಕಾರ

ಮಂಗಳೂರು ಮಂಡಲದ ಕನ್ಯಾನ ವಲಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.೨೭ರಂದು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಜರಗಿತು. ಹತ್ತನೇ ತರಗತಿಯಲ್ಲಿ ಶೇ. ೯೦ ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಕ್ಷಿತಾ.ಸಿ.ಎಚ್., ಅಮೃತ ವರ್ಷಿಣಿ ಎಂ., ಅನನ್ಯ ಲಕ್ಷ್ಮಿ. ಬಿ., ಕುಮಾರರಾದ ಸ್ವಸ್ತಿಕ ಕೃಷ್ಣ. ಪಿ. , ರಾಮಕೃಷ್ಣ. ಪಿ.ವಿ., ಶ್ರೀಶ ಶಂಕರ ಶರ್ಮ, ದ್ವಿತೀಯ ಪಿಯುಸಿಯಲ್ಲಿ ಶೇ. ೯೦ ಕ್ಕಿಂತ ಅಧಿಕ ಅಂಕ ಪಡೆದ ಶ್ರೀಶಕೃಷ್ಣ ಒಡಿಯೂರು, ವೈಷ್ಣವಿ ಪದ್ಯಾಣ, ವರಲಕ್ಷ್ಮಿ ಪಂಜಜೆ ಪ್ರತಿಭಾ ಪುರಸ್ಕಾರ ಗಳಿಸಿದರು. ಮಂಗಳೂರು […]

Continue Reading

ಮಂಡಲ ವೈದಿಕ ಸಂಗಮ ಕಾರ್ಯಕ್ರಮ

ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಮಚಂದ್ರಾಪುರ ಮಂಡಲ ವೈದಿಕ ವಿಭಾಗವತಿಯಿಂದ ಮಂಡಲ ವೈದಿಕ ಸಂಗಮ ಕಾರ್ಯಕ್ರಮ ಅ.೧ರಂದು ನಡೆಯಿತು. ಧರ್ಮಕರ್ಮ ಖಂಡದ ರಾಮಕೃಷ್ಣ ಭಟ್ಟ ಕೂಟೇಲು, ಹವ್ಯಕ ಮಹಾಮಂಡಳ ಅಧ್ಯಕ್ಷ ಆರ್ ಎಸ್ ಹೆಗಡೆ ಹರಗಿ, ರಾಮಚಂದ್ರಾಪುರ ಮಂಡಲ ಅಧ್ಯಕ್ಷ ಸತ್ಯನಾರಾಯಣ ಭಾಗಿ, ಪ್ರಧಾನಮಠದ ನಿರ್ವಹಣಾ ಸಮಿತಿಯ ಅಧ್ಯಕ್ಷ ಗಣಪತಿ ಭಟ್ಟ ಜಟ್ಟಿಮನೆ, ಮಹಾಮಂಡಳ ಸೇವಾಪ್ರಧಾನರು ಮತ್ತು ರಾಮಚಂದ್ರಾಪುರ ಮಂಡಲ ಉಸ್ತುವಾರಿ ಎಂ ಜಿ ರಾಮಚಂದ್ರ, ರಾಮಚಂದ್ರಾಪುರ ಮಂಡಲ ಪ್ರಧಾನ ಗುರಿಕ್ಕಾರ ಕೌಲಕೈ ಕುಮಾರ, ರಾಮಚಂದ್ರಾಪುರ ಮಂಡಳ ವೈದಿಕ […]

Continue Reading

ಕರಿಮಣಿ ಮಾಲೆ ಪುಸ್ತಕ ಬಿಡುಗಡೆ

ಅಶೋಕೆ ವಿದ್ಯಾನಂದ ಭವನದಲ್ಲಿ ಶುಕ್ರವಾರ ನಡೆದ ಪ್ಲವ ಸಂವತ್ಸರ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕರಿಮಣಿ ಮಾಲೆ ಹವ್ಯಕ ಕಥಾಸಂಕಲನ ಬಿಡುಗಡೆ ಮಾಡಿದರು. ಶ್ರೀಮುಖದ ಲೇಖಕಿ ಪ್ರಸನ್ನ ವಿ ಚೆಕ್ಕೆಮನೆಯವರು ಬರೆದ ಪುಸ್ತಕ ಇದಾಗಿದೆ.

Continue Reading

” ರಾಮಾಯಣ ಸಿದ್ಧ ” ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣೆ.

  ಶ್ರೀ ಮದ್ವಾಲ್ಮೀಕಿ ರಾಮಾಯಣದ ೧೦೮ ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯದ ಕಾಟುಕುಕ್ಕೆ ಘಟಕದ ಗುರಿಕ್ಕಾರರಾಗಿರುವ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಸೆ.೨೬ರಂದು ಸಂಪನ್ನವಾಯಿತು. ಧ್ವಜಾರೋಹಣ ಶಂಖನಾದವಾಗಿ ಗುರುವಂದನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮಹಾ ಮಂಡಲ ಮುಷ್ಠಿ ಭಿಕ್ಷಾ ಪ್ರಧಾನರಾದ ಶ್ರೀಕೃಷ್ಣ ಭಟ್ಟ ಮೀನಗದ್ದೆ ಅವರು ಗೋಪೂಜೆ ನೆರವೇರಿಸಿದರು. ಬಳಿಕ […]

Continue Reading

ಶಿವಪದ ವೇದಿಕೆಯಿಂದ ಎಸ್. ಪಿ. ಬಿ. ನಿಧನಕ್ಕೆ ಸಂತಾಪ

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶಿವಪದ ವೇದಿಕೆಯ ಪರವಾಗಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಸಂಸ್ಥಾನ ಮಹಾಬಲೇಶ್ವರ ದೇವಾಲಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತಿರುವ “ಶಿವಪದ” ವೇದಿಕೆಯಲ್ಲಿ ಬಂದು ಹಾಡಲು ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ಗಾನಲೋಕದ ಮಹಾಮೇರುವಾಗಿದ್ದ ಗಾನಗಂಧರ್ವ ಎಸ್. ಪಿ. ಬಾಲಸುಬ್ರಹ್ಮಣ್ಯಂ” ಅವರ ನಿಧನ ಸಂಗೀತ […]

Continue Reading

ಕುಮಟಾ ಮಂಡಲದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶ್ರೀಸಂಸ್ಥಾನದವರ ಅನುಗ್ರಹದಿಂದ ಕುಮಟಾ ಮಂಡಲದ ಎಸೆಸೆಲ್ಸಿಯಲ್ಲಿ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಾಲಗಳ್ಳಿ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಜಿ. ಎಸ್. ಹೆಗಡೆಯವರು ವಹಿಸಿ ಮಾತನಾಡಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿ ವಾಹಿನಿಯ ಮಂಡಲ ಪ್ರಧಾನರಾದ ಎಂ.ಜಿ. ಭಟ್ ಇವರು ಮಾತನಾಡಿ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಾವುದೇ ಮನುಷ್ಯ ಯಶಸ್ಸು ಗಳಿಸಲು ಸಾಧ್ಯ. ಆದರೆ ನಮ್ಮ ಗುರುಗಳು ಮಠದ ಪ್ರತಿ ಶಿಷ್ಯನ […]

Continue Reading

ಗೋವಧೆ ನಿಷೇಧ, ತಳಿ ಸಂವರ್ಧನೆಗೆ ಕಾಯ್ದೆ: ರಾಘವೇಶ್ವರ ಶ್ರೀ ಒತ್ತಾಯ

ಗೋಕರ್ಣ: ರಾಜ್ಯದಲ್ಲಿ ಸಂಪೂರ್ಣ ಗೋವಧೆ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ & ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆಯನ್ನು ನಾಳೆ (ಸೆ. 21)ಯಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಆಂಗೀಕರಿಸಬೇಕು ಎಂದು ರಾಮಚಂದ್ರಾಪುರಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶ್ರೀರಾಮಚಂದ್ರಾಪುರ ಮಠದಿಂದ ಚಾಲಿತವಾದ ಭಾರತೀಯ ಗೋಪರಿವಾರ ವತಿಯಿಂದ ಈಗಾಗಲೇ ಅಭಯಾಕ್ಷರ ಅಭಿಯಾನದಡಿ ಒಂದು ಕೋಟಿಗೂ ಅಧಿಕ ಮಂದಿಯ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗಿದೆ. ಬಹುಜನರ ಅಭಿಪ್ರಾಯಕ್ಕೆ […]

Continue Reading

ಪ್ರಸಕ್ತ ಅಧಿವೇಶನದಲ್ಲೇ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಹಕ್ಕೊತ್ತಾಯ

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸಬೇಕು ಮತ್ತು ಭಾರತೀಯ ಗೋ ತಳಿಗಳ ಸಂವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಒಂದು ಕೋಟಿಗೂ ಅಧಿಕ ಕನ್ನಡಿಗರು ಸಹಿ ಮಾಡಿದ ಹಕ್ಕೊತ್ತಾಯ ಪತ್ರಗಳನ್ನು ಶ್ರೀರಾಮಚಂದ್ರಾಪುರ ಮಠ ಸಂಚಾಲಿತ ಭಾರತೀಯ ಗೋ ಪರಿವಾರ ವತಿಯಿಂದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಸಲ್ಲಿಸಲಾಯಿತು. ಈ ತಿಂಗಳ 21ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಆಂಗೀಕರಿಸಬೇಕು ಎಂದು ಒತ್ತಾಯಿಸಲಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ […]

Continue Reading

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವ್ಯ ಭವಿಷ್ಯದ ಸೂಚಕ: ರಾಘವೇಶ್ವರ ಶ್ರೀ

ಗೋಕರ್ಣ: ಭವ್ಯ ಭವಿಷ್ಯದ ಸೂಚಕ, ದೇಶದ ದಿಶೆಯನ್ನೇ ಬದಲಾಯಿಸಬಲ್ಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪ ವಿದ್ಯಾ ಚಾತುರ್ಮಾಸ್ಯ ಸಂದರ್ಭದಲ್ಲಿ ಸಾಕಾರಗೊಂಡಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕವನದ ಆವರಣದಲ್ಲಿ ನಡೆದ 27ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ತಕ್ಷಶಿಲೆಯ ಪುನಃಸೃಷ್ಟಿ ಇದಾಗಲಿದೆ. ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವಗಳು ಇಲ್ಲಿ ನಿರ್ಮಾಣವಾಗಲಿವೆ ಎಂದರು. ಶಿವನ ಆತ್ಮಲಿಂಗ ಕ್ಷೇತ್ರ, ಆಂಜನೇಯನ ಜನ್ಮಭೂಮಿ, ಶ್ರೀಶಂಕರರು ಮೂರು ಬಾರಿ ಪಾದಸ್ಪರ್ಶ ಮಾಡಿದ ಪುಣ್ಯಭೂಮಿ, ದೈವರಾತರ ಕರ್ಮಭೂಮಿಯಾದ ಗೋಕರ್ಣದ […]

Continue Reading

ರಾಘವೇಶ್ವರ ಶ್ರೀ ಸೀಮೋಲ್ಲಂಘನೆ, ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 26ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಹಾಗೂ ಶ್ರೀಮಠದ ವತಿಯಿಂದ ನೀಡಲಾಗುವ ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ (ಸೆ. 2) ಗೋಕರ್ಣ ಬಳಿಯ ಅಶೋಕವನದಲ್ಲಿ ನಡೆಯಲಿದೆ. ಸೀಮೋಲ್ಲಂಘನೆ ಅಂಗವಾಗಿ ಗಂಗಾವಳಿ ನದಿಯನ್ನು ದಾಟಿ ಅಶೋಕೆಗೆ ಮರಳಿ ಧರ್ಮಸಭೆ ನಡೆಸುವರು. ಕೆ.ಎಸ್.ಗುರುಮೂರ್ತಿ ಶಿಕಾರಿಪುರ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಲಿದ್ದಾರೆ ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮೂಲತಃ ಶಿರವಂತೆ ಸೀಮೆ ಹೊಸಳ್ಳಿ ಗ್ರಾಮದ ಕಲ್ಸೇಮನೆ ವಾಸಿ ಸಿಬ್ಬಯ್ಯನವರ ಪುತ್ರರಾದ ಗುರುಮೂರ್ತಿಯವರು […]

Continue Reading

ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ

  ಮಠ ಸನಾತನ ಸಂಸ್ಥೆಯಾದರೆ, ಹವ್ಯಕ ಮಹಾಸಭೆಯು ಪುರಾತನ ಸಂಸ್ಥೆಯಾಗಿದೆ. ಸಮಾಜದ ಹಿತ ಸಾಧನೆಯಲ್ಲಿ ನಿರತವಾಗಿರುವ ಮಹಾಸಭೆಯು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀರಾಮಚಂದ್ರಾಪುರಮಠದ ಮೂಲಮಠವಾದ; ಗೋಕರ್ಣದ ಅಶೋಕೆಯ ಪರಿಸರದಲ್ಲಿ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಮಹಾಸಭೆಯಿಂದ ಸಮರ್ಪಿಸಲಾದ ಗುರುಭಿಕ್ಷಾ ಸೇವೆ, ಗುರುಪಾದುಕಾ ಪೂಜೆ, ಗೋಸೇವೆಗಳನ್ನು ಸ್ವೀಕರಿಸಿ ಮಾತನಾಡಿ; ಭಾರತೀಯ ವಿದ್ಯೆಗೆ ಒತ್ತು ಕೊಡಲಾಗಿಯೇ, ಈ ವರ್ಷದ ಚಾತುರ್ಮಾಸ್ಯವನ್ನು “ವಿದ್ಯಾ ಚಾತುರ್ಮಾಸ್ಯ” […]

Continue Reading

ಗೋನಿರ್ಭರತೆಯಿಂದ ಆತ್ಮನಿರಭರತೆ ಸಾಧ್ಯ – ಶ್ರೀಸಂಸ್ಥಾನ

ರಾಸಾಯನಿಕ ಕೃಷಿ ಒಂದಲ್ಲಒಂದು ದಿನ ರೈತನಕುತ್ತಿಗೆಗೆ ಉರುಳಾಗುತ್ತದೆ. ದೇಶೀ ಗೋವನ್ನು ಸಾಕಿಕೊಂಡುಇದ್ದವರುಯಾರೂಆತ್ಮಹತ್ಯೆ ಮಾಡಿಕೊಂಡಿಲ್ಲ. ಸ್ವಾವಲಂಬಿ ಎಂಬುದಕ್ಕೆ ಗೋವು ಬಲುದೊಡ್ಡ ನಿದರ್ಶನ. ಗೋನಿರ್ಭರತೆಯಿಂದಆತ್ಮನಿರಭರತೆ ಸಾಧ್ಯವಾಗುತ್ತದೆ.ದೇಶದ ಗಮನ ಗೋವಿನ ಕಡೆಗೆ ಹರಿಯುವಂತೆ ಮಾಡಬೇಕು.ಗೋವು ದೇಶಕ್ಕೆ ಬೆಳಕಿನ ಕಿರಣವಾಗಿದ್ದು, ತಂತ್ರಜ್ಞಾನಗಳು ಗೋಜ್ಞಾನದಕಡೆಗೆಕೊಂಡೊಯ್ಯುವಂತಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು. ಶ್ರೀರಾಮಾಂದ್ರಾಪುರ ಮಠದ ವತಿಯಿಂದ ಎ೧ ಲಾಜಿಕ್ಸ್ ಮಂಗಳೂರು ಸಹಕಾರದಲ್ಲಿ ದೇಸೀ ಗೋವು ಆಧಾರಿತಕೃಷಿಯಕುರಿತು ದೇಸೀ ಗೋವು – ಸ್ವಾವಲಂಬಿ ಸಾವಯವ ಕೃಷಿ ವೆಬಿನಾರ್ ಸರಣಿಕಾರ್ಯಕ್ರಮದಲ್ಲಿ ಪರಮಪೂಜ್ಯರು ವಿಶೇಷ ಆಶೀರ್ವಚನ ನೀಡಿದರು. […]

Continue Reading

ಉರುವಾಲು ಶಾಲೆಯಲ್ಲಿ ಸ್ವಾತಂತ್ರ್ಯ ದಿನ

ಉರುವಾಲು ಶ್ರೀಭಾರತೀ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಣ್ಣಪ್ಪ ದ್ವಜಾರೋಹಣ ನಡೆಸಿದರು. ಸೇವಾಸಮಿತಿ ಅಧ್ಯಕ್ಷ ಶಂಕರನಾರಾಯಣ ಭಟ್, ಮುಖ್ಯಶಿಕ್ಷಕಿ ಶೋಭಿತಾ ಕೆ. ಆರ್. ಮತ್ತಿತ್ತರರು ಉಪಸ್ಥಿತರಿದ್ದರು.

Continue Reading

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಈ ದಿನ ಸ್ಮರಿಸಬೇಕಾದ ಭಾರತೀಯರಾದ ನಮ್ಮ ಆದ್ಯ ಕರ್ತವ್ಯ – ಶ್ರೀ ರಾಜಶೇಖರ್ ಕಾಕುಂಜೆ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಸಲಾಯಿತು. ಬಿ.ಎ.ಎಸ್.ಎಫ್. ಪ್ರಧಾನ ವ್ಯವಸ್ಥಾಪಕ ಶ್ರೀ ರಾಜಶೇಖರ್ ಕಾಕುಂಜೆ ಇವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಾರತೀಯರನ್ನು ಈ ದಿನ ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಕೋವಿಡ್ – 19 ರ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಅರಿವು ಮೂಡಿಸಿದರು. ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಕುಡ್ಲ ಇದರ ಅಧ್ಯಕ್ಷ ಶ್ರೀ ಹರೀಶ್ ಕೆ., ಕಾರ್ಯದರ್ಶಿ ಶ್ರೀ ಶ್ರೀಧರ್ ರಾಜ್ […]

Continue Reading

ಉರುವಾಲು ಪ್ರೌಢಶಾಲೆಗೆ ಶೇ.೧೦೦ ಫಲಿತಾಂಶ

ಶ್ರೀರಾಮಚಂದ್ರಾಪುರಮಠದ ಧರ್ಮಚಕ್ರ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಉರುವಾಲು ಶ್ರೀ ಭಾರತೀ ಆಂಗ್ಲಮಾದ್ಯಮ ಪ್ರೌಢಶಾಲೆ ಒಟ್ಟು ೧೦ ಮಕ್ಕಳು ಪರೀಕ್ಷೆ ಬರೆದಿದ್ದು, ೮ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ ಹಾಗೂ ೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಶೇ.೧೦೦ ಫಲಿತಾಂಶ ದಾಖಲಿಸಿದೆ. ಅಸ್ಮಿತ್ ೬೧೩ ಅಂಕ ಪಡೆಯುವ ಮೂಲಕ ಶಾಲೆ ಪ್ರಥಮ ಸ್ಥಾನ, ಅಪೂರ್ವ ೬೦೭ ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Continue Reading

ಹಂಪಿನಗರ ಶ್ರೀಭಾರತೀ ವಿದ್ಯಾಲಯಕ್ಕೆ ರಾಜ್ಯದಲ್ಲಿ ಏಳನೇ ರ‍್ಯಾಂಕ್

ಬೆಂಗಳೂರು ಹಂಪಿನಗರ ಶ್ರೀಭಾರತೀ ವಿದ್ಯಾಲಯ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೨೫ ವಿದ್ಯಾರ್ಥಿಗಳು ಹಾಜರಾಗಿದ್ದು, ೬ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, ೧೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆಯುವ ಮೂಲಕ ಶೇ.೮೮ ಫಲಿತಾಂಶ ದಾಖಲಿಸಿದೆ. ಸುದೀಕ್ಷಾ ಶೇ.೯೯.೦೪ (೬೧೯/೬೨೫) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ೭ ನೇ ಸ್ಥಾನ ಪಡೆದಿದ್ದಾರೆ. ಗಣಿತ ಹಾಗೂ ಕನ್ನಡ ವಿಷಯಗಳಲ್ಲಿ ಪೂರ್ಣಾಂಕವನ್ನು ಗಳಿಸಿದ್ದಾರೆ. ಸ್ಫೂರ್ತಿ ಹಾಗೂ ಪೂರ್ವಿ ಅವರು ಶೇ.೯೩.೬ ಅಂಕದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನವನ್ನು, ಪಲ್ಲವಿ ಶೇ.೯೨.೬೪ ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

Continue Reading

ಭತ್ತದ ಭಕ್ತಿ – ರಾಮ ನೈವೇದ್ಯ.

ಮಠದಲ್ಲಿ ಎಷ್ಟು ಬಗೆಯ ಸೇವೆಗಳಿದ್ದರೂ ಈ ಸೇವೆ ಅತಿವಿಶಿಷ್ಟವಾದುದು , ನೇರವಾಗಿ ಶ್ರೀರಾಮದೇವರಿಗೇ ಅದು ನೈವೇದ್ಯವಾಗಿ ಸಲ್ಲುವುದಲ್ಲವೇ ? – ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು , ಶ್ರೀರಾಮಚಂದ್ರಾಪುರಮಠ ರಾಮನೈವೇದ್ಯ ಭತ್ತದ ಭಕ್ತಿಯಲ್ಲಿ ಮುಳ್ಳೇರಿಯ ಮಂಡಲ ಗದ್ದೆ ವ್ಯವಸಾಯವು ವಿರಳವಾಗುತ್ತಿರುವ ಈ ದಿನಗಳಲ್ಲಿ ಹಿರಿಯರು ಮತ್ತು ಅವರ ಮಾರ್ಗದರ್ಶನದಲ್ಲಿ ಮಕ್ಕಳು ರಾಮದೇವರ ನೈವೇದ್ಯಕ್ಕಾಗಿ ಭತ್ತದ ಕೃಷಿ ನಡೆಸಲು ನೇಜಿ ನೆಡುವ ಸುಂದರ ದೃಶ್ಯ ಕಂಡು ಬಂದದ್ದು ಕುಂಬಳೆ ಸೀಮೆ ಪ್ರದೇಶದಲ್ಲಿ. ಕೊರೋನಾ ಕಾರಣದಿಂದ ಎಲ್ಲೆಡೆ ಲಾಕ್ ಡೌನ್, ಪ್ರಯಾಣ, ಶಾಲೆ […]

Continue Reading

ಪೆರಾಜೆ ಗೋಶಾಲೆಯಲ್ಲಿ ಗೋವರ್ಧನಧಾರಿ ಗೋಪಾಲಕೃಷ್ಣ

ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಅಮೃತಧಾರ ಗೋಶಾಲೆಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದ ಶ್ರವಣ ನಕ್ಷತ್ರಕ್ಕೆ ಜರಗುವ ಗೋವರ್ಧನಧಾರಿ ಗೋಪಾಲಕೃಷ್ಣ ಪೂಜೆ,ಗೋಪೂಜೆ ಯು ಸೋಮವಾರ ವೇ.ಮೂ ಮಿತ್ತೂರು ತಿರುಮಲೇಶ್ವರ ಭಟ್ ರವರ ನೇತೃತ್ವದಲ್ಲಿ ನಡೆಯಿತು. ಶೀಮಠದ ಮ್ಯಾನೇಜರ್ ಶಿವಪ್ರಸಾದ್ ರವರು ಪೂಜಾಕೈಂಕರ್ಯ ವನ್ನು ನೆರವೇರಿಸಿದರು. ಸೇವಾಸಮಿತಿ ಯ ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್ ರವರು ಈ ಕಾರ್ಯಕ್ರಮ ದಲ್ಲಿ ಬಾಗವಹಿಸಿದರು.

Continue Reading

ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಉಪಾಕರ್ಮ

  ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಉಪಾಕರ್ಮ ಕಾರ್ಯ ರಾಮಚಂದ್ರಾಪುರ ಮಂಡಲದ ವೈದಿಕಪ್ರಧಾನರಾದ ಶೇಷಗಿರಿ ಭಟ್ಟ, ಲಕ್ಷ್ಮೀನಾರಾಯಣ ಭಟ್ಟ ಮಾಗಲು, ರಾಘವೇಂದ್ರ ಪ್ರಸಾದ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

Continue Reading