ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ಜೂ.19ರಂದು ಹಲಸು ಮೇಳ – ಆಹಾರೋತ್ಸವ

  ಮಂಗಳೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಹಲಸು ಮೇಳ – ಆಹಾರೋತ್ಸವ ಜೂ.19ರಂದು ಬೆಳಗ್ಗೆ ಗಂಟೆ 8ರಿಂದ ರಾತ್ರಿ ಗಂಟೆ 8ರವರೆಗೆ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಂಪೂರ್ಣ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಈ ಮೇಳ ನಡೆಯಲಿದ್ದು ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹಲಸು ಮೇಳ – ಆಹಾರೋತ್ಸವ ಏರ್ಪಡಿಸಲಾಗಿದೆ. […]

Continue Reading

ವಾಸ್ತು, ಆಗಮದಿಂದ ದೇಗುಲಕ್ಕೆ ಶೋಭೆ: ರಾಘವೇಶ್ವರ ಶ್ರೀ

  ಬೆಂಗಳೂರು: ದೇವಾಲಯಗಳು ಇತ್ತೀಚೆಗೆ ಶಾಸ್ತ್ರದ ಬದಲು ಆಡಂಬರದ ಪ್ರದರ್ಶನಕ್ಕೆ ಮಾತ್ರ ಎಂಬಂಥ ವಿಕಟ ಸ್ಥಿತಿ ಇದೆ. ವಾಸ್ತು, ಜ್ಯೋತಿಷ್ಯ, ಆಗಮಗಳು ಸರಿಯಾಗಿದ್ದಾಗ ಮಾತ್ರ ದೇವಾಲಯಕ್ಕೆ ಶೋಭೆ. ಆದ್ದರಿಂದ ದೇವಾಲಯಗಳು ಶಾಸ್ತ್ರೋಕ್ತವಾಗಿ ನಿರ್ಮಾಣಗೊಳ್ಳಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ಬುಧವಾರ ನಡೆದ ಅಷ್ಟಬಂಧ- ಪುನಃಪ್ರತಿಷ್ಠೆ- ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು. ದೇಗುಲಗಳು ನಮ್ಮ ಪರಂಪರೆಯ ಭಾಗ. ಭಾರತದ ಪರಂಪರೆ ಅನುಪಮವಾಗಿದ್ದು, ಪರಂಪರೆಯನ್ನು […]

Continue Reading

ಗೋ ಸಹಿತ ಬದುಕು ಬದುಕಬೇಕು- ಶ್ರೀಸಂಸ್ಥಾನ

ಗೋವು ಶೂನ್ಯ ಬದುಕು ನಮ್ಮದಾಗಬಾರದು. ಗೋ ಸಹಿತ ಬದುಕು ಬದುಕಬೇಕು ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅವರು ಗೋಸ್ವರ್ಗದಲ್ಲಿ ಕಾಮದುಘಾ ಟ್ರಸ್ಟ್ ಹಾಗೂ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಆಶ್ರಯದಲ್ಲಿ ಅನುಪಮ ಗೋಸೇವಕರಿಗಾಗಿ ನೀಡಲ್ಪಡುವ ರಾಜ್ಯ ಮಟ್ಟದ ಗೋಪಾಲ ಗೌರವ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಪ್ರಶಸ್ತಿ ಪ್ರಧಾನ ಮಾಡಿದ ಮುಂಬಯಿ ದಿನೇಶ್ ಶಹರಾ ಪೌಂಡೇಶನ್ ಮುಖ್ಯಸ್ಥ ದಿನೇಶ್ ಶಹರಾ ಮಾತನಾಡಿ ಗೋವುಗಳು ಕುರಿತು ತಳುವಳಿಕೆ […]

Continue Reading

ಪುರುಷೋತ್ತಮ’ ಪ್ರಶಸ್ತಿ ಪ್ರಧಾನ

ಸಿದ್ದಾಪುರ: ಜಗತ್ತಿನಲ್ಲಿ ಬಹಳಷ್ಟು ತತ್ವಜ್ಞಾನಿಗಳು ಆಗಿಹೋಗಿದ್ದಾರೆ. ಆದರೆ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನ ಎಂದು ಕರೆಯುವುದು ವಿಶೇಷವಾಗಿದೆ ಎಂದು ಶ್ರೀ ರಾಜಾರಾಮ ಕ್ಷೇತ್ರದ ಸ್ವಾಮೀಜಿಗಳಾದ ಬ್ರಹ್ಮಾನಂದ ಭಾರತಿ ಸ್ವಾಮಿಗಳು ಹೇಳಿದರು. ಅವರು ಶುಕ್ರವಾರ ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ನಡೆದ ಶಂಕರ ಪಂಚಮಿಯ ಧರ್ಮಸಭೆ ಮತ್ತು ಪುರುಷೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜಾತಿ, ಮತ ಭೇದವಿಲ್ಲದೆ ಸಾರ್ವಕಾಲಿಕವಾದ, ಸಾರ್ವದೇಶಿಕವಾದ ಉಪದೇಶ ನೀಡಿದಂತಹ ಶಂಕರರನ್ನು ಜಗದ್ಗುರು ಎಂದು ಕರೆಯಲಾಗಿದೆ. ಕರ್ಮ ಮತ್ತು ಚಿತ್ತ ಶುದ್ಧಿಯ ಮೂಲಕ ಮೋಕ್ಷಪ್ರಾಪ್ತಿ […]

Continue Reading

ರಾಮಸೇತು ವೈಜ್ಞಾನಿಕ ಸತ್ಯ

ರಾಮಸೇತು ವೈಜ್ಞಾನಿಕ ಸತ್ಯ. ಇದು ಕೇವಲ ಕಾಲ್ಪನಿಕವಲ್ಲ. ವಾಲ್ಮೀಕಿ ರಾಮಾಯಣದಲ್ಲಿ ವರ್ಣನೆಯಾದ ಅದ್ಭುತ ಸಾಗರಸೇತು ಆಧುನಿಕ ವಿಜ್ಞಾನದ ವಿಶ್ಲೇಷಣೆಯಲ್ಲೂ ಅಂತೆಯೇ ಇದೆ ಎಂದು ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು. ಮೂರೂರು ರಾಮಲೀಲಾ ಮೈದಾನದಲ್ಲಿ ನಡೆದ ರಾಮಕಥೆ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ತಳದಲ್ಲಿ ಮರ, ಎರಡನೇ ಸ್ತರದಲ್ಲಿ ಬಂಡೆ ಮತ್ತು ಮೇಲೆ ಮರಳಿನಿಂದ ಸಾಗರಸೇತು ನಿರ್ಮಾಣವಾಗಿದೆ ಎಂಬ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ವಿಶ್ವದ ಏಕೈಕ ಸಾಗರಸೇತುವನ್ನು ವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸಿದಾಗ ಕೂಡಾ ಇಂದೇ ಅಂಶಗಳು ದೃಢಪಟ್ಟಿವೆ” ಎಂದು […]

Continue Reading

ಶ್ರೀ ಅಖಿಲ ಹವ್ಯಕ ಮಹಾಸಭೆಯ  79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ

ಗಡ್ಡಬಿಟ್ಟವರು ಮಾತ್ರ ಋಷಿಗಳಲ್ಲ, ಸಾಧನೆ ಮಾಡಿ ಇಂದು ಇಲ್ಲಿ ಪುರಸ್ಕೃತರಾದ ಎಲ್ಲರೂ ಋಷಿ ಸಮಾನರೇ ಆಗಿದ್ದಾರೆ. ಆದರೆ ಸಾಧನೆಯ ವಿಧಾನಗಳು ಬೇರೆ ಬೇರೆ ಎಂದು  ಡಾ.ಜಿ.ಎಲ್ ಹೆಗಡೆ ಹೇಳಿದರು. ಶ್ರೀ ಅಖಿಲ ಹವ್ಯಕ ಮಹಾಸಭೆಯ  79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಹಾಗೂ  ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭ್ಯಾಗತರಾಗಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ, ನಾವು ಭವ್ಯವಾದ ಸಂಸ್ಕೃತಿ ಹೊಂದಿದ್ದೇವೆ. ದಿವ್ಯವಾದ ಇತಿಹಾಸ ಹೊಂದಿದ್ದೇವೆ. ಆದರೆ ನಮ್ಮ ಪಠ್ಯಗಳಲ್ಲಿ ರಾಬರ್ಟ್ ಕ್ಲೈವ್ ಹಾಗೂ ಅವನ ಸಂಸಾರದ ಕುರಿತು ಓದುವಂತಹ ಸ್ಥಿತಿ […]

Continue Reading

ಸಜ್ಜನರ ಸಿಟ್ಟು ಲೋಕಕ್ಕೆ ಅಪಾಯಕಾರಿ; ರಾಘವೇಶ್ವರ ಶ್ರೀ

ಸಜ್ಜನರ ಸಮಾಧಾನ, ಕ್ಷಮೆ, ಸರಳತೆಯನ್ನು ಎಂದೂ ಅವರ ಅಸಾಮಥ್ರ್ಯ, ದೌರ್ಲಲ್ಯ ಎಂದು ಭಾವಿಸಬಾರದು; ಏಕೆಂದರೆ ಅವರ ಸಿಟ್ಟು ಲೋಕದ ಪಾಲಿಗೆ ಅಷ್ಟೇ ಕಂಟಕ ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ಸಾಗರಸೇತು’ ರಾಮಕಥಾ ಸರಣಿಯ ಮಂಗಲ ಪ್ರವಚನ ಅನುಗ್ರಹಿಸಿದ ಅವರು, ಸಿಟ್ಟು ನಮ್ಮ ವಿವೇಕವನ್ನು ಹಾಳು ಮಾಡುತ್ತದೆ. ಸಿಟ್ಟು ಶಿವನ ಸೃಷ್ಟಿ. ಅದು ನಮ್ಮ ಕೈಯಲ್ಲಿದ್ದರೆ ಗುಣ. ಆದರೆ ಸಿಟ್ಟಿನ ಕೈಯಲ್ಲಿ ನಾವಿದ್ದರೆ […]

Continue Reading

ನಮ್ಮ ಹೃದಯವೇ ರಾಮಮಂದಿರ; ರಾಘವೇಶ್ವರ ಶ್ರೀ

ಪ್ರತಿಯೊಬ್ಬರ ಅಂತರಾಳದಲ್ಲಿ ಆತ್ಮರೂಪದ ರಾಮನಿದ್ದಾನೆ. ನಮ್ಮ ಹೃದಯವೇ ರಾಮಮಂದಿರ ಎಂಬ ಸತ್ಯವನ್ನು ಅರಿತುಕೊಳ್ಳುವುದೇ ಬದುಕಿನ ಧರ್ಮ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ನಾಲ್ಕನೇ ದಿನದ ಪ್ರವಚನ ಅನುಗ್ರಹಿಸಿದ ಅವರು, ಲಂಕಾ ಸಾಮ್ರಾಜ್ಯ ತೊರೆದ ಬಳಿಕ ಆತ್ಮದಲ್ಲಿರುವ ರಾಮನಷ್ಟೇ ವಿಭೀಷಣನ ಆಸ್ತಿ. ವಿಭೀಷಣನ ಭವಿಷ್ಯದ ಬದುಕು ಅಮೂರ್ತವಾಗಿತ್ತು. ಅಮೂರ್ತದಿಂದ ರಾಮಮೂರ್ತಿಯನ್ನು ಕಂಡುಕೊಂಡಿದ್ದರಿಂದಲೇ ವಿಭೀಷಣನ ಮುಂದಿನ ಹಾಸಿ ಸ್ಪಷ್ಟವಾಯಿತು. ಈ ಅರಿವೇ ಮುಂದೆ […]

Continue Reading

ಆಸೆಯ ಪಾಶದಿಂದ ಮುಕ್ತಿ ಪಡೆದರಷ್ಟೇ ಮನಃಶಾಂತಿ: ರಾಘವೇಶ್ವರ ಶ್ರೀ

ಆಸೆಯ ಪಾಶದಿಂದ ಮುಕ್ತಿ ಪಡೆದರೆ ಮಾತ್ರ ಮನಃಶಾಂತಿ ಸಾಧಿಸಲು ಸಾಧ್ಯ. ಆಸೆಯ ಪಾಶದಿಂದ ಏನು ಅನಾಹುತವಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೂರನೇ ದಿನದ ಪ್ರವಚನ ಅನುಗ್ರಹಿಸಿದ ಅವರು, “ಆಸೆ ಮನದಾಳದಲ್ಲಿ ಹುಟ್ಟಿಕೊಂಡರೆ ತಾನು ಸುಮ್ಮನಿರುವುದಿಲ್ಲ. ನಮ್ಮನ್ನು ಸಮ್ಮನಿರಲು ಬಿಡುವುದಿಲ್ಲ. ಆಸೆ ಅನಾಹುತಕ್ಕೆ ಕಾರಣ. ಇದು ರಜೋಗುಣ. ಭಯ, ಚಿಂತೆ, ದ್ವೇಷ, ಕ್ರೋಧ ಎಲ್ಲವೂ ಆಸೆಯ […]

Continue Reading

ರಾಮ- ಸೀತೆಯರ ಪ್ರೀತಿ ಅಲೌಕಿಕ, ಧರ್ಮಸಮ್ಮತ: ರಾಘವೇಶ್ವರ ಸ್ವಾಮೀಜಿ

ರಾಮ- ಸೀತೆಯರ ಪ್ರೀತಿಯನ್ನು ಕ್ಷುದ್ರ ದೃಷ್ಟಿಯಿಂದ ನೋಡದೇ ಅದನ್ನು ಮೂಲಪ್ರಕೃತಿ ಮತ್ತು ಪರಮ ಪುರುಷನ ಪ್ರೀತಿಯಾಗಿ ಲೌಕಿಕ ದೃಷ್ಟಿಯಿಂದ ನೋಡಬೇಕು ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಎರಡನೇ ದಿನದ ಪ್ರವಚನ ಅನುಗ್ರಹಿಸಿದ ಅವರು, ರಾಮ ಸೀತೆಯ ಪ್ರೀತಿ ಪರಿಪೂರ್ಣ. ಪರಿಪೂರ್ಣ ಪ್ರೀತಿಯಷ್ಟೇ ವಿಶ್ವದ ಪ್ರೀತಿಯಾಗಿ ಭಗವತ್ ಪ್ರೀತಿಯಾಗಿ ಮಾರ್ಪಡುತ್ತದೆ ಎಂದು ವಿಶ್ಲೇಷಿಸಿದರು. ಪ್ರೀತಿ ಹಾಗೂ ತ್ಯಾಗಕ್ಕೆ ರಾಮ […]

Continue Reading

ರಾಮನ ಸೀತಾಪ್ರೀತಿ ಪ್ರಶ್ನಾತೀತ: ರಾಘವೇಶ್ವರ ಶ್ರೀ

ಅಗ್ನಿಪರೀಕ್ಷೆ ಹಿನ್ನೆಲೆಯಲ್ಲಿ ಸೀತೆಯ ಬಗೆಗಿನ ರಾಮನ ಪ್ರೀತಿಯನ್ನು ಪ್ರಶ್ನಿಸುವವರಿದ್ದಾರೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ರಾಮಸೇತು ಉತ್ತರ ಎಂದು ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಬುಧವಾರ ಆರಂಭವಾದ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ಮೊದಲ ದಿನದ ಪ್ರವಚನ ಅನುಗ್ರಹಿಸಿದ ಅವರು, “ಜಗತ್ತಿನ ತಂದೆ ತಾಯಿಗಳನ್ನು ಒಂದಾಗಿಸಿದ್ದು ರಾಮಸೇತು. ತ್ರೇತಾಯುಗ ಯುಗದಲ್ಲಿ ಸೀತೆಗಾಗಿ ವಿಶ್ವಯುದ್ಧವನ್ನೇ ರಾಮ ನಡೆಸಿದ್ದಾನೆ. ಸಮುದ್ರಕ್ಕೆ ಸೇತುವೆ ನಿರ್ಮಿಸಿದ್ದು ಸೀತೆಗಾಗಿ. ಇಂಥ ಪ್ರೀತಿಯನ್ನು […]

Continue Reading

ಜೂನ್‍ನಿಂದ ವಿವಿವಿಯಲ್ಲಿ ಪರಂಪರಾ ಗುರುಕುಲ ಆರಂಭ: ರಾಘವೇಶ್ವರ ಶ್ರೀ

ಮೆಕಾಲೆ ಪ್ರಣೀತವಲ್ಲದ, ಶುದ್ಧ ಭಾರತೀಯ ಪಾರಂಪರಿಕ ಶಿಕ್ಷಣ ನೀಡುವ ಪರಂಪರಾ ಗುರುಕುಲ ಈ ವರ್ಷದ ಜೂನ್‍ನಿಂದ ಗೋಕರ್ಣ ಸಮೀಪದ ಅಶೋಕೆಯಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು. ಜಾಲ್ಸೂರು ಸಮೀಪದ ಮುರೂರು ಮೀನಗದ್ದೆಯಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಂವಾದ ಕಾರ್ಯದಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು. ದೇಶದ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾದ ಹೆಜ್ಜೆ ಇದಾಗಿರುತ್ತದೆ. ಮೆಕಾಲೆ ಶಿಕ್ಷಣ ಜಾರಿಗೆ ಬರುವ ಮುನ್ನ ಇದ್ದ ಶಿಕ್ಷಣವನ್ನು ಮರಳಿ ತರುವ […]

Continue Reading

ಉಕ್ರೇನ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ

ಬೆಂಗಳೂರು: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಭಾರತ ಸರ್ಕಾರ ಆರಂಭಿಸಿದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಗೆ ಶ್ರೀರಾಮಚಂದ್ರಾಪುರ ಮಠ ಟ್ವಿಟ್ಟರ್‍ನಲ್ಲಿ ಸಹಾಯವಾಣಿ ಆರಂಭಿಸುವ ಮೂಲಕ ನೆರವು ನೀಡಿರುವುದು ಸಂತ್ರಸ್ತ ವಿದ್ಯಾರ್ಥಿಗಳ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಉಕ್ರೇನ್ ಮೇಲೆ ಫೆಬ್ರುವರಿ 24ರಂದು ರಷ್ಯಾ ಅತಿಕ್ರಮಣ ನಡೆಸಿದ ಸುದ್ದಿ ಸ್ಫೋಟವಾಗುತ್ತಿದ್ದಂತೆ, ಉಕ್ರೇನ್‍ನಲ್ಲಿರುವ ಅಪಾರ ಸಂಖ್ಯೆಯ ಶ್ರೀಮಠದ ಶಿಷ್ಯರು, ಕನ್ನಡಿಗ ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಉದ್ದೇಶದಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ […]

Continue Reading

ಶಾಂತಿ- ನೆಮ್ಮದಿಗೆ ಶ್ರದ್ಧಾಭಕ್ತಿಯ ಪೂಜೆಯೇ ಸಾಧನ: ರಾಘವೇಶ್ವರ ಶ್ರೀ

ಬೆಂಗಳೂರು: ಇಡೀ ಜಗತ್ತು ಇಂದು ಶಾಂತಿ- ನೆಮ್ಮದಿಗಾಗಿ ಹಪಹಪಿಸುತ್ತಿದ್ದು, ವಿಶ್ವಾದ್ಯಂತ ಜನ ಮನಃಶಾಂತಿಯ ಹುಡುಕಾಟದಲ್ಲಿದ್ದಾರೆ. ಆದರೆ ಶ್ರದ್ಧಾಭಕ್ತಿಯ ಪೂಜೆಯಿಂದ ಪರಮಾನಂದ ಪಡೆಯಬಹುದು ಎಂಬ ಸತ್ಯದರ್ಶನ ಅವರಿಗೆ ಆಗುತ್ತಿಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮಪ್ರದೋಷದಂದು ಲೋಕ ಹಿತಕ್ಕಾಗಿ ನಡೆದ ಅತ್ಯಪರೂಪದ ಸೋಮ ಸಪರ್ಯಾ ಧರ್ಮಸಭೆಯಲ್ಲಿ ಪರಮಪೂಜ್ಯರು ಸಂದೇಶ ಅನುಗ್ರಹಿಸಿದರು. ಶಿವ ಶೂಲಪಾಣಿಯಾಗಿ ಪ್ರದೋಷದಂದು ಸಂಚಾರ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಈ ಸಂದರ್ಭ ವಿಶೇಷ ಸಪರ್ಯ ನಡೆದಿದೆ. ರಾಜ್ಯದ […]

Continue Reading

ಕಪ್ಪು ಚಿನ್ನದಿಂದ ರೈತರಿಗೆ ಆರ್ಥಿಕ ಭದ್ರತೆ: ಕೃಷಿವಿಜ್ಞಾನಿ ಸಲಹೆ

ಗೋಕರ್ಣ: ಕಪ್ಪು ಚಿನ್ನ ಎಂದೇ ಪರಿಗಣಿಸಲಾಗುವ ಕಾಳುಮೆಣಸು ಕೃಷಿಗೆ ಆದ್ಯತೆ ನೀಡುವ ಮೂಲಕ ರೈತರು ಆರ್ಥಿಕ ಭದ್ರತೆ ಕಂಡುಕೊಳ್ಳಲು ಸಾಧ್ಯ ಎಂದು ಕಲ್ಲಿಕೋಟೆಯ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ,ಎಂ.ಎನ್.ಆರ್.ವೇಣುಪಾಲ್ ಅಭಿಪ್ರಾಯಪಟ್ಟರು. ಶ್ರೀ ರಾಮಚಂದ್ರಾಪುರ ಮಠದ ಗೋಫಲ ಟ್ರಸ್ಟ್, ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯ, ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಹವ್ಯಕ ಮಹಾಮಂಡಲ, ಕಾಮದುಘಾ ಟ್ರಸ್ಟ್ ಹಾಗೂ ಭಾರತೀಯ ಗೋ ಪರಿವಾರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ‘ಕಾಳುಮೆಣಸು […]

Continue Reading

ಸಿದ್ಧಿಗಾಗಿ ಪ್ರಯತ್ನ ಇರಲಿ, ಪ್ರಸಿದ್ಧಿಗಾಗಿ ಅಲ್ಲ: ರಾಘವೇಶ್ವರ ಶ್ರೀ

ಮಾಲೂರು: ಇಡೀ ಜಗತ್ತು ಇಂದು ಪ್ರಸಿದ್ಧಿಯ ಭ್ರಮೆಯಲ್ಲಿದೆ. ಜೀವನದಲ್ಲಿ ಸಿದ್ಧಿ ಸಾಧಿಸಿದಾಗ ಸಹಜವಾಗಿಯೇ ಪ್ರಸಿದ್ಧಿ ಬರುತ್ತದೆ. ಆದ್ದರಿಂದ ನಮ್ಮೆಲ್ಲರ ಪ್ರಯತ್ನ ಸಿದ್ಧಿಯತ್ತ ಇರಲಿ. ಭಕ್ತನಾಗಿ, ಯೋಗಿಯಾಗಿ ಮತ್ತು ಯೋಧನಾಗಿ ಸಿದ್ಧಿ ಸಾಧಿಸಿದ ಆಂಜನೇಯ ನಮಗೆಲ್ಲರಿಗೆ ಮಾದರಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮಾಲೂರು ಸಮೀಪದ ಗಂಗಾಪುರದ ಶ್ರೀ ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಸಿದ್ದಾಂಜನೇಯ ಸ್ವಾಮಿ ದೇವಾಲಯದ ಅಷ್ಟಬಂಧ-ಪುನಃಪ್ರತಿಷ್ಠಾ-ಬ್ರಹ್ಮಕಲಶೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಯೋಗದ ಸಿದ್ದಿಯ […]

Continue Reading

ಸೇವೆಯಿಂದ ದಿವ್ಯತೆ, ಪವಿತ್ರತೆ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಮಂಗಳೂರು: ಮಠಕ್ಕೆ ಭೇಟಿ ನೀಡುವುದೇ ಒಂದು ಪುಣ್ಯಸ್ನಾನ ಇದ್ದಂತೆ. ಸೇವೆ ಸಲ್ಲಿಸುವುದು ಇನ್ನಷ್ಟು ಶ್ರೇಷ್ಠ. ನಮ್ಮ ಜೀವ- ಆತ್ಮವನ್ನು ಶುಚಿಗೊಳಿಸುವಂಥದ್ದು. ದಿವ್ಯತೆ, ಶುದ್ಧತೆ, ಪವಿತ್ರತೆ ನಮಗೆ ಗುರುಸೇವೆಯಿಂದ ಪ್ರಾಪ್ತವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಮಾಣಿಯ ಪೆರಾಜೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ 49ನೇ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಮಠದ ಕೆಲಸ ಕಾರ್ಯ, ಸೇವೆ ನಮ್ಮ ಜೀವನದ ಸಾರ್ಥಕತೆಗಾಗಿ ಇರುವಂಥದ್ದು. ಅತೀವ ಶಾಂತಿ- ಸಮಾಧಾನವನ್ನು […]

Continue Reading

ತಮ್ಮತನ ಕಾಯ್ದುಕೊಂಡು ಸಮಗ್ರ ಹಿಂದೂ ಸಮಾಜಕ್ಕೆ ಕೊಡುಗೆ ನೀಡಿ: ರಾಘವೇಶ್ವರ ಶ್ರೀ ಹಿತವಚನ

ಪುತ್ತೂರು: ಹಿಂದೂ ಸಮಾಜದ ಪ್ರತಿಯೊಂದು ಸಮುದಾಯಗಳು ತಮ್ಮ ವೈಶಿಷ್ಯವನ್ನು ಕಾಪಾಡಿಕೊಂಡು ಸಮಗ್ರ ಹಿಂದೂ ಸಮಾಜ ಬೆಳೆಯಲು ಕೊಡುಗೆ ನೀಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು. ಪುತ್ತೂರಿನ ಹವ್ಯಕ ಸಭಾಭವನ ಸಮರ್ಪಣಮ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು, “ಸಮಾಜದ ಯಾವುದೇ ಸಮುದಾಯಗಳು ತಮ್ಮತನವನ್ನು ಮರೆತರೆ ಹಿಂದೂ ಸಮಾಜಕ್ಕೆ ಅಸ್ತಿತ್ವ ಇಲ್ಲ. ಆಯಾ ಸಮಾಜ ತನ್ನ ವೈಶಿಷ್ಟ್ಯಗಳನ್ನು, ನಡೆ, ನುಡಿ, ಆಚಾರ ವಿಚಾರಗಳನ್ನು ಕಾಪಾಡಿಕೊಂಡು ಬಂದರೆ ಮಾತ್ರ ಹಿಂದೂ ಸಮಾಜ ಎದ್ದು ನಿಲ್ಲಲು ಸಾಧ್ಯ. […]

Continue Reading

ಹವ್ಯಕ ಸಭಾಭವನ ಉದ್ಘಾಟನೆ

ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಪುತ್ತೂರಿನಲ್ಲಿ ನೂತನವಾಗಿ ನಿರ್ಮಿಸಿರುವ ‘ಹವ್ಯಕ ಸಭಾಭವನ’ ದ ಉದ್ಘಾಟನಾ ಕಾರ್ಯಕ್ರಮ ಜನವರಿ 2 ಭಾನುವಾರ 11.30 ಕ್ಕೆ ನಡೆಯಲಿದೆ. ಶ್ರೀರಾಮಚಂದ್ರಾಪುರಮಠದ ಗೋಕರ್ಣಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಲಿದ್ದು, ಕೇಂದ್ರ ಮಾಜಿ ಸಚಿವರಾದ ಡಿ.ವಿ ಸದಾನಂದ ಗೌಡ ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಅಭ್ಯಾಗತರಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಸಚಿವರಾದ ಎಸ್ ಅಂಗಾರ, ಸುನಿಲ್ ಕುಮಾರ್, ಸಂಸದ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ […]

Continue Reading

ಭಾವ, ರಾಗ, ತಾಳ ಮೇಳೈಸಿದರೆ ಜೀವನ ಆಹ್ಲಾದಕರ: ರಾಘವೇಶ್ವರ ಶ್ರೀ

ಗೋಕರ್ಣ: ಭಾವ, ರಾಗ, ತಾಳ ಮೇಳೈಸಿದಾಗ ಸಂಗೀತ ಹೇಗೆ ಸುಶ್ರಾವ್ಯವಾಗುವುದೋ ಜೀವನ ಆಹ್ಲಾದಕರ ಆಗಬೇಕಾದರೆ ಮನಸ್ಸು, ಮಾತು ಮತ್ತು ಕೃತಿ ಒಂದಾಗಬೇಕು ಎಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಶುಕ್ರವಾರ ಅಶೋಕೆಯ ವಿದ್ಯಾವಿಶ್ವ ಸಭಾಂಗಣದಲ್ಲಿ ಆಯೋಜಿಸಿದ್ದ ಭಾವಸಂಗೀತೋತ್ಸವದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಜೀವನ ಕೂಡಾ ಒಂದು ಸಂಗೀತ. ಜೀವನ ಮುನ್ನಡೆಯಬೇಕಾದರೆ ಅಂದರೆ ಜೀವನದಲ್ಲಿ ‘ಭರತ’ ಬರಬೇಕಾದರೆ ಭಾವ, ರಾಗ ಹಾಗೂ ತಾಳ ಅಗತ್ಯ. […]

Continue Reading