ಸ್ವಭಾಷಾ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀ ಘೋಷಣೆ – ಶಿಷ್ಯಹಿತಂ ಮಹಾಸಂಕಲ್ಪ: ಪ್ರತಿ ಶಿಷ್ಯರ ಮನೆಗೆ ಸ್ವರ್ಣಯಾತ್ರೆ

ಗೋಕರ್ಣ: ಸಮಸ್ತ ಗುರು ಪರಂಪರೆಯ ಆಶೀರ್ವಾದವನ್ನು ಹೊತ್ತು ಸಮಾಜದ ಪ್ರತಿ ಶಿಷ್ಯರ ಮನೆಗೆ ಸ್ವರ್ಣಪಾದುಕೆ ಚಿತ್ತೈಸುವ ಸ್ವರ್ಣಯಾತ್ರೆ ಈ ವರ್ಷದ ವಿಜಯದಶಮಿಯಿಂದ ಆರಂಭವಾಗಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡ ಶ್ರೀಗಳು ಸೀಮೋಲ್ಲಂಘನ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡುವ ವೇಳೆ ಈ ಉದ್ಘೋಷ ಮಾಡಿದರು. ಶ್ರೀಮಠದ ಶಿಷ್ಯತ್ವ ಹೊಂದಿರುವ ಎಲ್ಲರ ಹೆಸರಲ್ಲಿ ಸಂಕಲ್ಪ ಮಾಡಿ ಶಿಷ್ಯಹಿತಂ ಎಂಬ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸ್ವರ್ಣಪಾದುಕೆಗಳು ಮನೆ ಮನೆಗೆ […]

Continue Reading

ಸೆಪ್ಟೆಂಬರ್ – ೦೭- ಹುಣ್ಣಿಮೆ – ಭಾನುವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಮಂಜುನಾಥ ಸುವರ್ಣಗದ್ದೆ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೧೫ ಶ್ರೀಪೂಜೆ ೧೨.೧೦ ಪೀಠಕ್ಕೆ, ಭಿಕ್ಷಾಂಗ ಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ಸವಾರಿಯ ವಾಹನ ಚಾಲಕರಿಗೆ ಆಶೀರ್ವಾದ ೧೨.೩೦ ಸೀಮೋಲ್ಲಂಘನ ೧.೪೫ ಮಲ್ಲಿಕಾರ್ಜುನ ದೇವರದರ್ಶನ ೨.೦೦ ಸ್ವಾಗತ ಸಭೆ ಶತಕಂಠ ಗಾಯನ. ಸಂಗೀತ ಕಾರ್ಯಕ್ರಮ ದೇಣಿಗೆ ಸಮರ್ಪಣೆ ಸಾಮೂಹಿಕ ಫಲಸಮರ್ಪಣೆ ಸ್ವಾಗತ ಪ್ರಸ್ತಾವನೆ ವರದಿ ವಾಚನ ಆಶೀರ್ವನ ಮಂತ್ರಾಕ್ಷತೆ ೬.೪೦ ಶ್ರೀಪೂಜೆ

Continue Reading

ಆಂಗ್ಲರ ದಾಸ್ಯದಿಂದ ಹೊರಬನ್ನಿ: ರಾಘವೇಶ್ವರ ಶ್ರೀ

ಗೋಕರ್ಣ: ಬ್ರಿಟಿಷರ ಆಳ್ವಿಕೆ ಮುಗಿದು ಮೂರು ತಲೆಮಾರು ಕಳೆದರೂ, ನಾವು ಅವರ ದಾಸ್ಯದಿಂದ ಹೊರಬಂದಿಲ್ಲ. ಇಂಗ್ಲಿಷ್ ಮರೆಯುವ ಬದಲು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಿಷಾದಿಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 59ನೇ ದಿನವಾದ ಶನಿವಾರ ಮುಂಬೈ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಬರಬರುತ್ತಾ ಇಂಗ್ಲಿಷ್ ಭಾಷೆ ಸಂಸ್ಕೃತಿ ಮರೆಯಾಗಬೇಕಿತ್ತು. ಆದರೆ ಹೆಚ್ಚುತ್ತಿರುವುದು ಆತಂಕಕಾರಿ […]

Continue Reading

ಮಹಿಳೋದಯಕ್ಕೆ ಶ್ರೀರಾಮಚಂದ್ರಾಪುರ ಮಠದ ತಂಡ ಭೇಟಿ

ಬದಿಯಡ್ಕ: ಮುಳ್ಳೇರಿಯಾ ಮಂಡಲದ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಮಹಿಳೋದಯ ಸಂಸ್ಥೆಗೆ ಶ್ರೀ ಮಠದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಉಪಾಧ್ಯಕ್ಷೆ ಕನಕವಲ್ಲಿ ಬಡಗಮೂಲೆ, ಕಾರ್ಯದರ್ಶಿ ಕಿರಣಾ ಮೂರ್ತಿ ಏತಡ್ಕ, ಜತೆ ಕಾರ್ಯದರ್ಶಿ ಕುಸುಮಾ ಪೆರ್ಮುಖ, ಲೆಕ್ಕ ಪರಿಶೋಧಕಿ ಗಾಯತ್ರಿ, ಸ್ಮಿತಾ ಸರಳಿ, ಸಿಬ್ಬಂದಿ ಶಾಂತಿ, ಜಯಪ್ರಕಾಶ ಪಜಿಲ ಜೊತೆಗಿದ್ದರು.  

Continue Reading

ವೇದಾಧ್ಯಯನ ಪರಂಪರೆ ಬೆಳೆಯಲಿ: ರಾಘವೇಶ್ವರ ಶ್ರೀ ಆಶಯ

ಗೋಕರ್ಣ: ವೇದಾಧ್ಯಯನ ಪರಂಪರೆ ಬೆಳೆಯಬೇಕು. ನಿಷ್ಕಾರಣವಾಗಿ, ಫಲಾಪೇಕ್ಷೆ ಇಲ್ಲದೇ ಅಧ್ಯಯನ ಮಾಡಬೇಕು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.   ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 58ನೇ ದಿನವಾದ ಶುಕ್ರವಾರ ಬೆಂಗಳೂರಿನ ಹರ್ಷಕೃಷ್ಣ ಭಟ್ಟ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.   ನಮ್ಮ ಶಿವಗುರುಕುಲದಲ್ಲೇ ಘನಪಾಠಿಗಳು ತಯಾರಾಗಬೇಕು. ಆಗ ಗುರುಕುಲ ಸ್ಥಾಪನೆಯ ಉದ್ದೇಶ ಸಾಕಾರವಾಗುತ್ತದೆ. ಸಮಾಜ ಇದರ ಮಹತ್ವ ಅರಿತು ಅಧ್ಯಯನಾರ್ಥವಾಗಿ ಮಕ್ಕಳನ್ನು ಕಳುಹಿಸಿಕೊಡಬೇಕು. ಮುಂದೊಂದು ದಿನ […]

Continue Reading

ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ

ಪೆರ್ಲ: ಎಣ್ಮಕಜೆ ವಲಯದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಶ್ರೀರಾಮಚಂದ್ರಾಪುರ ಮಠದ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಭೇಟಿ ನೀಡಿ, ಪ್ರಗತಿಯನ್ನು ವೀಕ್ಷಿಸಿ ಮಾರ್ಗದರ್ಶನ ಮಾಡಿದರು. ಗೋಶಾಲೆಯ ಅಧ್ಯಕ್ಷರಾದ ಜಗದೀಶ ಗೋಳಿತ್ತಡ್ಕ, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಬನಾರಿ, ಕೋಶಾಧಿಕಾರಿ ಶ್ರೀಧರ ಭಟ್ ತೆಂಕಮಾಣಿಪ್ಪಾಡಿ ಜೊತೆಗಿದ್ದರು.

Continue Reading

ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ

  ಮುಳ್ಳೇರಿಯಾ: ಚಂದ್ರಗಿರಿ ವಲಯದ ಸಮರಸಭೂಮಿಗೆ ಶ್ರೀಮಠದ ಪದಾಧಿಕಾರಿಗಳು ಭೇಟಿ ನೀಡಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನ ಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ತಂಡ ಭೇಟಿಯಿತ್ತು ಸಮರಸ ಕಟ್ಟಡ ನಿರ್ಮಾಣ ಹಂತವನ್ನು – ವ್ಯವಸ್ಥೆಯನ್ನು ಕೂಲಂಕುಶವಾಗಿ ತಿಳಿದುಕೊಂಡರು. ವಾಸ್ತುತಜ್ಞ ಬೆಳ್ಳಿಗೆ ನಾರಾಯಣ ಭಟ್ಟರು ನಕ್ಷೆಯಲ್ಲಿನ ವ್ಯವಸ್ಥೆ, ಗುರುನಿವಾಸದ ವ್ಯವಸ್ಥೆ ಬಗ್ಗೆಯೂ ಸಮಗ್ರ ಮಾಹಿತಿ ನೀಡಿದರು. ಟ್ರಸ್ಟ್ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ […]

Continue Reading

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನವೀಕರಣಗೊಂಡ ಭೋಜನ ಶಾಲೆ

ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠದಲ್ಲಿ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ನವೀಕರಣಗೊಂಡ ‘ಅನ್ನಮಯೀ’ ಭೋಜನ ಶಾಲೆಯಲ್ಲಿ ಗುರುವಾರ ಸಂಜೆ ಹಾಗೂ ಶುಕ್ರವಾರದಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಕಟ್ಟಡದ ಲೋಕಾರ್ಪಣಾ ಸಮಾರಂಭದ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮಗಳಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷರು ಗಣೇಶ ಜೆ.ಎಲ್., ಸುಶಾಸನಾ ಖಂಡದ ಶ್ರೀ ಸಂಯೋಜಕ ಪ್ರವೀಣ ಭೀಮನಕೋಣೆ, ಶಾಲಾ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಅಧ್ಯಾಪಕ ವೃಂದದವರು, ಶಾಲಾ ಹಿತೈಶಿಗಳು ಪಾಲ್ಗೊಂಡಿದ್ದರು.    

Continue Reading

ಸೆಪ್ಟೆಂಬರ್ – ೦೬ – ಚತುರ್ದಶಿ – ಶನಿವಾರ

ಕಾರ್ಯಕ್ರಮದ ವಿವರ ಭಿಕ್ಷಾಸೇವೆ – ಭಾರತ ಮಂಡಲ ಸೇವಾಕರ್ತರು – ವೆಂಕಟರಮಣ ಭಾಗ್ವತ್ ಡೊಂಬಿವಿಲಿ ಮೊಕ್ಕಾಂ – ಸೇವಾಸೌಧ, ಅಶೋಕೆ ೮.೦೦ ಶ್ರೀಪೂಜೆ ೧೨.೩೦ ಪೀಠಕ್ಕೆ, * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಗಣ್ಯರಿಗೆ ಆಶೀರ್ವಾದ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೬ ಮಂಗಳಾರತಿ) * ಶ್ರೀಸಂದೇಶ * ಮಂತ್ರಾಕ್ಷತೆ ೬.೫೫ ಶ್ರೀಪೂಜೆ

Continue Reading

ನೂತನ ಸಭಾಭವನ ‘ಹವ್ಯಗಂಧ’ದ ನಿರ್ಮಾಣ ಸ್ಥಳಕ್ಕೆ ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳ ಭೇಟಿ

ಕಾಯರಕಟ್ಟೆ: ಬಾಯಾರು ವಲಯದ ಕಾಯರಕಟ್ಟೆಯಲ್ಲಿ ನೂತನ ಸಭಾಭವನ ಹವ್ಯಗಂಧ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳದ ನೆಲವನ್ನು ಸಮತಟ್ಟುಮಾಡಲು ಭೂಖನನ ಕಾರ್ಯ ಪ್ರಾರಂಭಿಸಲಾಗಿದೆ. ಧರ್ಮಚಕ್ರ ಟ್ರಸ್ಟ್ ನ ಕೇಂದ್ರ ಪದಾಧಿಕಾರಿಗಳಾದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆಡ್ಡಿನಮನೆ, ಸುಶಾಸನಖಂಡದ ಶ್ರೀಸಂಯೋಜಕ ಪ್ರವೀಣ ಭೀಮನಕೋಣೆ ಹವ್ಯಗಂಧ ನಿವೇಶನಕ್ಕೆ ಭೇಟಿ ಕೊಟ್ಟು ಕೆಲಸದ ಮಾಹಿತಿಗಳನ್ನು ಸಂಗ್ರಹಿಸಿ, ಸಲಹೆ ಸೂಚನೆಗಳನ್ನಿತ್ತರು. ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.

Continue Reading

ಎಡನೀರು ಮಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕಾಸರಗೋಡು: ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದರ್ಶನವನ್ನು ಪಡೆದ ಶ್ರೀರಾಮಚಂದ್ರಾಪುರ ಮಠದ ನಿಯೋಗ. ಮಠದ ನಿಯೋಗದಲ್ಲಿ ಡಾ. ವೈ ವಿ. ಕೃಷ್ಣ ಮೂರ್ತಿ, ಕೆ. ಎನ್. ಭಟ್, ನವನೀತ ಪ್ರಿಯ, ಬಳ್ಳಮೂಲೆ ಗೋವಿಂದ ಭಟ್, ಶಾಮಪ್ರಸಾದ್ ಮತ್ತಿತರರು ತೆರಳಿದ್ದರು.

Continue Reading

ಸಮಾಜದ ಉನ್ನತಿಗೆ ಗುರುಪರಂಪರೆಯ ಆಶೀರ್ವಾದ ಅಗತ್ಯ – ರಾಘವೇಶ್ವರಶ್ರೀ

ಗೋಕರ್ಣ: ಗುರು ಪರಂಪರೆಯ ಆಶೀರ್ವಾದ ಸಮಾಜದ ಉನ್ನತಿಗೆ ಅಗತ್ಯ; ಶಂಕರಾಚಾರ್ಯರ ಆದಿಯಾಗಿ ಎಲ್ಲ ಗುರುಗಳ ಕೃಪೆಯಿಂದ ಸಮಾಜ ಪಾಪಮುಕ್ತವಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹಾರೈಸಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 57ನೇ ದಿನವಾದ ಗುರುವಾರ ಮುಂಬೈನ ರಮಣ ಭಟ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಗುರುಪರಂಪರೆಯ ಪ್ರೀತ್ಯರ್ಥವಾಗಿ ಎಂಟು ಗುರುವಾರಗಳಂದು ಲಕ್ಷ ತುಳಸಿ ಅರ್ಚನೆ ನಡೆದಿದೆ. ಸದುದ್ದೇಶಕ್ಕೆ ತುಳಸಿ ಕುಡಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದಂತೆ ಸಂಘಟನೆಗಾಗಿ […]

Continue Reading

ಸೆಪ್ಟೆಂಬರ್ – ೦೪ – ದ್ವಾದಶಿ – ಗುರುವಾರ

  ಕಾರ್ಯಕ್ರಮದ ವಿವರ   ಭಿಕ್ಷಾಸೇವೆ – ರಮಣ ಭಟ್ ಮುಂಬೈ ಮೊಕ್ಕಾಂ – ಸೇವಾಸೌಧ, ಅಶೋಕೆ   ೬.೦೦ ಶ್ರೀಪೂಜೆ   ೧೨.೪೫ ಭಿಕ್ಷಾಂಗ ಪಾದುಕಾಪೂಜೆ, ಪರಂಪರಾ ಭಿಕ್ಷಾಂಗ ಪಾದುಕಾಪೂಜೆ, ಸುವರ್ಣಪಾದುಕಾಪೂಜೆ ಶ್ರೀಪಾದುಕಾಪೂಜೆ ಮಂಗಳಾರತಿ ಆಶೀರ್ವಾದ ( ಒಟ್ಟು ೧೧ ಮಂಗಳಾರತಿ) (ನಾಮದಾರಿ ಸಮಾಜ)   ೧.೩೦ ಪೀಠಕ್ಕೆ,   * ಗಣ್ಯರಿಗೆ ಆಶೀರ್ವಾದ * ವಿವಿಧ ಯೋಜನೆಗಳಿಗೆ ಸಮರ್ಪಣೆ ಆಶೀರ್ವಾದ * ಸಾಮೂಹಿಕ ಫಲಸಮರ್ಪಣೆ * ಶ್ರೀಸಂದೇಶ * ಮಂತ್ರಾಕ್ಷತೆ   ೬.೫೫ ಶ್ರೀಪೂಜೆ

Continue Reading

ಶಕಟಪುರದ ಶ್ರೀ ವಿದ್ಯಾ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕೊಪ್ಪ: ಶ್ರೀ ಕ್ಷೇತ್ರ ಶಕಟಪುರದ ಶ್ರೀ ವಿದ್ಯಾ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠಾಧೀಶ್ವರರಾದ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ದರ್ಶನ ಹಾಗೂ “ನವರಾತ್ರ ನಮಸ್ಯಾ” ಆಮಂತ್ರಣ ಪ್ರತಿಯನ್ನು ಸಮರ್ಪಿಸಿದ ಶ್ರೀರಾಮಚಂದ್ರಾಪುರ ಮಠದ ನಿಯೋಗ. ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.    

Continue Reading

ಕಾಂಚಿ ಕಾಮಕೋಟಿಗೆ ಶ್ರೀರಾಮಚಂದ್ರಾಪುರ ಮಠದ ನಿಯೋಗ

ಕಾಂಚಿಪುರಂ: ಶ್ರೀ ಕಾಂಚಿ ಕಾಮಕೋಟಿ ಪೀಠಕ್ಕೆ ಶ್ರೀರಾಮಚಂದ್ರಾಪುರ ಮಠದ ನಿಯೋಗ ತೆರಳಿ ಪರಮಪೂಜ್ಯರ ಆಶೀರ್ವಾದ ಪಡೆದುಕೊಂಡಿತು. ವಿಶ್ವಾವಸು ಸಂವತ್ಸರ ಚಾತುರ್ಮಾಸ್ಯ ವ್ರತದೀಕ್ಷೆಯಲ್ಲಿರುವ ಶ್ರೀಮಠ ಸಂಸ್ಥಾನ ಕಾಂಚಿ ಕಾಮಕೋಟಿ ಪೀಠಾಧೀಶ್ವರರಾದ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀಶ್ರೀಸತ್ಯ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡಿತು. ಮಠದ ನಿಯೋಗದಲ್ಲಿ ಲೋಕಸಂಪರ್ಕ ತಂಡದ ರಾಮಚಂದ್ರ ಭಟ್ ಕೆಕ್ಕಾರು, ನಾರಾಯಣ ಭಾಗವತ್, ಸೂರ್ಯ ನಾರಾಯಣ, ಶಂಕರ ನಾರಾಯಣ (ಹಿರೇ ಗಂಗೆ) ತೆರಳಿದ್ದರು.    

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಸೂರಜ್ ನಾಯ್ಕ್ ಸೋನಿ ಭೇಟಿ

ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿದ್ದ ಸೂರಜ್ ನಾಯ್ಕ್ ಸೋನಿ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.      

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ

  ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು.

Continue Reading

ಮಧೂರು ದೇವಸ್ಥಾನದಲ್ಲಿ ಶ್ರೀರಾಮಚಂದ್ರಾಪುರ ಮಠದ ಸೇವೆ – 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪ, ಶತರುದ್ರಾಭಿಷೇಕ ಸೇವೆ

ಕುಂಬಳೆ: ಸೀಮಾಕ್ಷೇತ್ರ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಅನುಗ್ರಹದೊಂದಿಗೆ ಶ್ರೀಮಠದ ವತಿಯಿಂದ 108 ಕಾಯಿ ಗಣಪತಿ ಹೋಮ, ಮುಡಿ ಅಕ್ಕಿ ಅಪ್ಪಸೇವೆ ಹಾಗೂ ಶತರುದ್ರಾಭಿಷೇಕ ಸೇವೆಗಳು ಜರಗಿತು. ಗೌರಿಹಬ್ಬದ ಪ್ರಯುಕ್ತ ಮಾತೆಯರು ಕುಂಕುಮಾರ್ಚನೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗೌರೀ ಸಂಪ್ರೀತಿಗಾಗಿ ಪ್ರಾರ್ಥಿಸಲಾಯಿತು. ರುದ್ರಪಾರಾಯಣ, ಗಣಪತಿ ಅಥರ್ವಶೀರ್ಷ ಪಾರಾಯಣ, ಶ್ರೀಗಣೇಶ ಪಂಚರತ್ನ ಸ್ತೋತ್ರ ಹಾಗೂ ಶಿವಪಂಚಾಕ್ಷರೀ ಸ್ತೋತ್ರ ಪಠಣ ನಡೆಯಿತು. ವಿವಿಧ ವಲಯಗಳಿಂದ 100ಕ್ಕೂ ಹೆಚ್ಚುಮಂದಿ ರುದ್ರಪಾಠಕರು ಶತರುದ್ರಾಭಿಷೇಕದ […]

Continue Reading

ಸ್ವಭಾಷಾ ಅಭಿಯಾನ ನಿರಂತರ: ರಾಘವೇಶ್ವರ ಶ್ರೀ

ಗೋಕರ್ಣ: ಮಠದ ಕೊನೆಯ ಶಿಷ್ಯರ ಕೊನೆಯ ಆಂಗ್ಲಪದ ನಿವೃತ್ತಿಯಾಗುವವರೆಗೂ ಸ್ವಭಾಷಾ ಅಭಿಯಾನ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 55ನೇ ದಿನವಾದ ಮಂಗಳವಾರ ಬೆಂಗಳೂರಿನ ಕೆ.ಟಿ.ಶ್ರೀರಾಮ್ ದಂಪತಿಗಳಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಹೊಸಪೇಟೆಯ ಸುಬ್ರಾಯ ಹೆಗಡೆ ಮಹಾಸೇವೆ ನೆರವೇರಿಸಿದರು. ಇದು ಕೇವಲ ನಮ್ಮ ಸಮಾಜ ಅಥವಾ ಭಾಷೆಗೆ ಮಾತ್ರ ಸೀಮಿತವಲ್ಲ; ಎಲ್ಲ ಭಾರತೀಯ ಭಾಷೆಗಳಿಗೆ ಅನ್ವಯಿಸುವಂಥದ್ದು ಮತ್ತು ಸಮಾಜದ ಎಲ್ಲ ವರ್ಗದಲ್ಲೂ ಇದು […]

Continue Reading

ಸ್ವಭಾಷಾ ಚಾತುರ್ಮಾಸ್ಯಕ್ಕೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಭೇಟಿ

ಗೋಕರ್ಣ: ಅಶೋಕೆಯಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ಸ್ವಭಾಷಾ ಚಾತುರ್ಮಾಸ್ಯ ವ್ರತದ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಭೇಟಿ ನೀಡಿ, ಶ್ರೀಸಂಸ್ಥಾನದವರ ದರ್ಶನಾಶೀರ್ವಾದ ಪಡೆದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿ ಸ್ವಭಾಷಾ ಚಾತುರ್ಮಾಸ್ಯ ಪರಿಕಲ್ಪನೆಯ ಸುಂದರವಾಗಿದೆ. ಶ್ರೀಸಂಸ್ಥಾನದವರ ಪ್ರತಿಯೊಂದು ಯೋಚನೆಯಲ್ಲೂ ವಿಭಿನ್ನತೆಯಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದು ಈಗಿನ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜಿ.ಎಲ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪ್ರಧಾನ […]

Continue Reading