ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ದೇವರ ದರ್ಶನಕ್ಕೆ ವ್ಯವಸ್ಥೆ
ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ರವಿವಾರದ ಚೂಡಾಮಣಿ ಸೂರ್ಯಗ್ರಹಣದ ಸಮಯದಲ್ಲಿ ಗೋಕರ್ಣದ ಊರಿನವರಿಗೆ ನಿಯಮಗಳ ಪ್ರಕಾರ ನಂದಿ ಮಂಟಪದವರೆಗೆ ಹೋಗಿ ದರ್ಶನ ಪಡೆದು ನಮಸ್ಕಾರ ಮಾಡಿ ಬರಲು ಅವಕಾಶ ನೀಡಲಾಗಿತ್ತು. ಬಹಳಷ್ಟು ಜನ ಊರಿನವರು ದೇವರ ದರ್ಶನ ಪಡೆದರು. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಗ್ರಹಣದ ವೇಳೆಯಲ್ಲಿ ಈಶ್ವರನ ದರ್ಶನ ಪಡೆದು ಸಮುದ್ರಕ್ಕೆ ಹೋಗಿ ಸ್ನಾನ ಮಾಡಿ, ಜಪ-ತಪಗಳನ್ನು ಮಾಡುವ ರೂಢಿಗತ ಪರಂಪರೆಗೆ ಅನುಕೂಲವಾಗಲೆಂದು “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಲ್ಲಿ ಈ ಅವಕಾಶಗಳನ್ನು ನೀಡಲಾಯಿತು. […]
Continue Reading