ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾ ಕೂಟವನ್ನು ಸ್ಥಳೀಯ ಕಾರ್ಪೊರೇಟರ್ ಶಕೀಲಾ ಕಾವ ಉದ್ಘಾಟಿಸಿ, ಮಾತನಾಡಿ, ಸ್ಪರ್ಧೆಯಲ್ಲಿ ಸೋಲು ಗೆಲುವಿಗೆ ಮಹತ್ವ ಕೊಡದೆ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪಥಸಂಚಲನ ಗೌರವ ಸ್ವೀಕರಿಸಿದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ ಅವರು ಮಾತನಾಡಿ, ಸಂಸ್ಥೆಯ ಜೊತೆಗಿನ ಅನನ್ಯ ಸಂಬಂಧವನ್ನು ನೆನಪಿಸಿ ಉತ್ತಮ ಶಿಕ್ಷಣ ನೀಡುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು. ಕ್ರೀಡಾ […]

Continue Reading

ಎನ್ನೆಸ್ಸೆಸ್ ಘಟಕದ ಬೃಹತ್ ಸ್ವಚ್ಛತಾ ಆಂದೋಲನ, ಜಾಥಾ

ನಂತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕ, ಇಡ್ಕಿದು ಗ್ರಾ.ಪಂ. ಮತ್ತು ವಿಟ್ಲಮುಡ್ನೂರು ಗ್ರಾ.ಪಂ. ಸಹಯೋಗದಲ್ಲಿ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು. ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ಆಂದೋಲನವನ್ನು ಉದ್ಘಾಟಿಸಲಾಯಿತು. ಇಡ್ಕಿದು ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಜಾಥಾವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ […]

Continue Reading

ಮುಳ್ಳೇರಿಯ ಮಂಡಲದಿಂದ ಸಂತತಿ ಮಂಗಲ ಕಾರ್ಯಕ್ರಮ

ಮುಳ್ಳೇರಿಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ನಿರ್ದೇಶಾನುಸಾರ ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲದ ಆಶ್ರಯದಲ್ಲಿ ಪಳ್ಳತ್ತಡ್ಕ ವಲಯದ ಮುದ್ದು ಮಂದಿರದಲ್ಲಿ ವಿಶಿಷ್ಟ ಕಲ್ಪನೆಯ ಸಪ್ತ ಮಂಗಲಗಳಲ್ಲಿ ಒಂದಾದ, ನಮ್ಮ ಮುಂದಿನ ಪೀಳಿಗೆಯ ಶೇಯಸ್ಸಿಗಾಗಿ ನಾವು ಕೈಗೊಳ್ಳುವ ಕ್ರಮಗಳ ಕುರಿತು ತಿಳಿದು ಕೊಳ್ಳುವ ಸಂತತಿ ಮಂಗಲ ಕಾರ್ಯಕ್ರಮ ಮುಳ್ಳೆರಿಯ ಮಂಡಲ ಮಾತೃ ಪ್ರಧಾನರ ನೇತೃತ್ವದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಹಾಮಂಡಲ ಮಾತೃತ್ವಮ್ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇಕ೯ಡವು ಉದ್ಘಾಟಿಸಿದರು. ಮಂಡಲ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಸರ್ಪಮಲೆ ಸಮಾರಂಭದಲ್ಲಿ ಅಧ್ಯಕ್ಷತೆ […]

Continue Reading

ಗೋಸ್ವರ್ಗದಲ್ಲಿ ಸಂಗೀತ ಸೇವೆ

ಗೋಸ್ವರ್ಗ: ಗೋಸೌಖ್ಯ ಕೇಂದ್ರಿತವಾದ ಗೋಸ್ವರ್ಗದಲ್ಲಿ ಗೋವುಗಳ ಶ್ರವಣಾನಂದಕ್ಕಾಗಿಯೇ ನೆಡೆಯುವ ಸಂಗೀತ ಸೇವೆ ಸ್ವರ್ಗಸಂಗೀತ. ಈಬಾರಿಯ ಸೇವೆ ಪಶು ವೈದ್ಯರಾದ ಮಂಜುನಾಥ ಬಿ.ಪಿ ಇವರಿಂದ ನೆರವೇರಿತು. ವೃತ್ತಿಯಲ್ಲಿ ಪಶುವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಗೀತದಆರಾಧಕರಾದ ಶ್ರೀಯುತರು ಪಂ.ಪರಮೇಶ್ವರ ಹೆಗಡೆಯವರ ಶಿಷ್ಯರು. ಪಶುವೈದ್ಯರಾಗಿರುವುದರಿಂದ ಗೋವುಗಳ ಕುರಿತು ಪ್ರೀತಿ, ಕಾಳಜಿ ಇರುವ ಮಂಜುನಾಥರವರು ಬೆಂಗಳೂರಿನಿಂದ ಆಗಮಿಸಿ ತಮ್ಮ ಹಿಂದೂಸ್ಥಾನಿ ಸಂಗೀತಸೇವೆಯನ್ನು ಗೋಮಾತೆಯ ಪದತಲದಲ್ಲಿ ಸಮರ್ಪಿಸಿದರು. ಹಾರ್ಮೋನಿಯಂ ರಾಜೇಂದ್ರ ಕೊಳಗಿ ಹಾಗೂ ತಬಲಾದಲ್ಲಿ ಸ್ವರ್ಗಸಂಗೀತದ ನೇತೃತ್ವ ವಹಿಸಿರುವ ಶ್ರೀ ಶ್ರೀಕಾಂತ ಕಾಳಮಂಜಿ ಸಹಕರಿಸಿದರು. ಗುರುವಂದನೆ ಮೂಲಕ ಆರಂಭವಾದ […]

Continue Reading

ಕಂಬಳಬೆಟ್ಟು ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ನಂತೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ರವಿವಾರ ಉದ್ಘಾಟಿಸಲಾಯಿತು. ಧರ್ಮನಗರ ಧರ್ಮ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಉದ್ಘಾಟಿಸಿ, ಮಾತನಾಡಿ, ಮಹಾತ್ಮಾ ಗಾಂಧಿಜಿಯವರ 100ನೇ ಜನ್ಮದಿನದಂದು ಈ ರಾಷ್ಟ್ರೀಯ ಸೇವಾ ಯೋಜನೆಯನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿಯನ್ನು ಬೆಳೆಸುವ […]

Continue Reading

ರಾಮಾಯಣ ಕಲ್ಪನೆಯಲ್ಲ, ಇತಿಹಾಸ : ರಾಘವೇಶ್ವರ ಭಾರತೀ ಸ್ವಾಮೀಜಿ

ಬೆಂಗಳೂರು: ರಾಮಾಯಣವೊಂದರಲ್ಲೇ ಭಾರತೀಯ ವಿದ್ಯೆಯ ಸಮಗ್ರ ಚಿತ್ರಣವೂ ಸಿಗುತ್ತದೆ. ಪ್ರಯತ್ನದ ಫಲವು ಯಶಸ್ಸಿನ ಮೂಲಕ ಲಭಿಸುತ್ತದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭಾನುವಾರ ನಡೆದ ಧಾರಾ ರಾಮಾಯಣ ಪ್ರವಚನದ ಮಂಗಲದಲ್ಲಿ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ರಾಮಾಯಣ ಎಂಬುದು ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ, ಭಾಗವತ ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಲಯದಲ್ಲಿ ಈ ಮೂರನ್ನು ಮೂಲವಾಗಿಟ್ಟುಕೊಳ್ಳಲಾಗಿದೆ. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಸ್ಥಾಪನೆಯ ಮಹಾತ್ಕಾರ್ಯಕ್ಕಾಗಿ ಮಾಡಿದ ಸಂಕಲ್ಪಕ್ಕೆ […]

Continue Reading

ಒಗ್ಗಟ್ಟಿನ ಸಂದೇಶ ಸಾರಿದ 76 ನೇ ವರ್ಷದ ಸರ್ವಸದಸ್ಯರ ಮಹಾಸಭೆ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆ(ರಿ) ಯ 76ನೇ ವರ್ಷದ ಸರ್ವಸದಸ್ಯರ ಮಹಾಸಭೆ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ , ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ ಎಲ್ಲಾ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತವಾಯಿತು. ಚುನಾವಣಾಧಿಕಾರಿ ರಾಮಭಟ್ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಉದ್ಘೋಷಿಸಿದರು. ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಡಾ. ಗಿರಿಧರ ಕಜೆ, ಮಹಾಸಭೆಯ […]

Continue Reading

ಹುಲ್ಲು ಸಮರ್ಪಣೆ

ಗೋಲೋಕ: ಶಿವಮೊಗ್ಗದಲ್ಲಿರುವ ರಘುರಾಮ ಭಟ್, ಪುತ್ರ ವಿವೇಕ ಭಟ್ ಕುಟುಂಬದವರು ಎರಡು ಗಾಡಿ (ಸುಮಾರು ೫.೨೫ ಟನ್) ಬಿಳಿ ಹುಲ್ಲನ್ನು ಮಹಾನಂದಿ ಗೋಲೋಕಕ್ಕೆ ಸಮರ್ಪಣೆ ಮಾಡಿದರು.

Continue Reading

ಗೋಸ್ವರ್ಗಕ್ಕೆ ಶುಭ ಹಾರೈಸಿದ ಚಿದಂಬರಾಶ್ರಮ ಶ್ರೀಗಳು

ಗೋಸ್ವರ್ಗ: ಸವದತ್ತಿ ತಾಲೂಕಿನ ಮುರಗೋಡದ ಶ್ರೀಶಿವ ಚಿದಂಬರಾಶ್ರಮದ ಪರಮಪೂಜ್ಯ ಶ್ರೀಶ್ರೀ ದಿವಾಕರ ದೀಕ್ಷಿತ ಮಹಾರಾಜರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಸ್ವತಹ ಗೋಶಾಲೆ ಮಾಡುವ ಯೋಜನೆಯಂತೆ ಬೇರೆ ಬೇರೆ ಗೋಶಾಲೆಗಳ ಸಂದರ್ಶನ ಮಾಡುತ್ತ ಈದಿನ ಗೋಸ್ವರ್ಗಕ್ಕೆ ಆಗಮಿಸಿದ್ದರು. ಗೋಸ್ವರ್ಗ ಯೋಜನೆ ಸಂಪೂರ್ಣ ಮಾಹಿತಿ ಪಡೆದು, ವೀಕ್ಷಣೆ ಮಾಡಿ ವ್ಯವಸ್ಥೆಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಗೋಗ್ರಾಸ, ಮತ್ಸ್ಯಗ್ರಾಸ ಸಮರ್ಪಿಸ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು. ಆಗಮಿಸಿದ ಶ್ರೀಗಳಿಗೆ ಗೋಸ್ವರ್ಗದಿಂದ ಫಲಕಾಣಿಕೆ ಸಮರ್ಪಿಸಿ ಗೌರವಿಸಲಾಯಿತು.

Continue Reading

ಡಿ.15ರಿಂದ ಡಿ.21 : ಕಂಬಳಬೆಟ್ಟು ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ

ನಂತೂರು : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಕ್ಕೊಳಪಟ್ಟಿರುವ ಶ್ರೀ ಭಾರತೀ ಪದವಿ ಕಾಲೇಜು ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಟ್ಲ ಸಮೀಪದ ಕಂಬಳಬೆಟ್ಟು ದ.ಕ.ಜಿ.ಪಂ.ಉ.ಹಿ. ಪ್ರಾ. ಶಾಲೆಯಲ್ಲಿ ಡಿ.15ರಿಂದ ಡಿ.21ರ ವರೆಗೆ ನಡೆಯಲಿದೆ. ಡಿ.15ರಂದು ಸಂಜೆ ಗಂಟೆ 4.30ಕ್ಕೆ ಧರ್ಮನಗರ ಸೇವಾ ವಿಶ್ವಸ್ಥ ಮಂಡಳಿಯ ಸಂಚಾಲಕ ಕೆ.ಟಿ.ವೆಂಕಟೇಶ್ವರ ಭಟ್ ನೂಜಿ ಉದ್ಘಾಟಿಸುತ್ತಾರೆ. ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಅಧ್ಯಕ್ಷ ಹಾರಕರೆ ನಾರಾಯಣ […]

Continue Reading

ಹೊಸಾಡ ಗೋಶಾಲೆಗೆ ಕೆಂಗೇರಿ ಶ್ರೀ ಬೇಟಿ

ಹೊಸಾಡ: ಬೆಳಗಾವಿ ಸೌಬತ್ತಿ ಮುರಗೋಡ ಶ್ರೀ ಕ್ಷೇತ್ರ ಕೆಂಗೇರಿ ಶ್ರೀ ಪೂಜ್ಯ ದಿವಾಕರ ದೀಕ್ಷಿತ ಗುರುಮಹಾರಾಜರು ಗುರುವಾರ ಹೊಸಾಡ ಅಮೃತಧಾರ ಗೋಶಾಲೆಗೆ ಭೇಟಿ ನೀಡಿದರು. ಸಾವಿನ ಮನೆಯ ಕದ ತಟ್ಟಿ ಬಂದ, ಅನಾಥವಾದ, ವೃದ್ಧ ಹಾಗೂ ಅಪಘಾತಕ್ಕೀಡಾದ ಗೋವುಗಳನ್ನು ಸಲಹುತ್ತಿರುವ ಹೊಸಾಡ ಗೋಶಾಲೆಯು ಗಾವೋ ವಿಶ್ವಸ್ಯ ಮಾತರಃ ಎಂಬ ವಾಕ್ಯಕ್ಕೆ ಸೂಕ್ತವಾದ ಸ್ಥಳ ಎಂದು ಹೇಳಿದಾಗ ನಿಜಕ್ಕೂ ಭಾವುಕರಾದೆವು. ಗೋಶಾಲೆಯನ್ನು ಮಾಡಲು ಬೇಕಾದ ಉಪಯುಕ್ತ ಮಾಹಿತಿಯನ್ನು ಕೇಳಿದರು. ಮೊದಲಿಗೆ ಕಾಮಧೇನುವಿಗೆ ಪೂಜೆಯನ್ನು ಅರ್ಪಿಸಿ, ಗೋವುಗಳಿಗೆ ಗೋಗ್ರಾಸವನ್ನು ನೀಡಿ […]

Continue Reading

ಗೋಲೋಕಕ್ಕೆ ಪ್ರಮಾಣ ಪತ್ರ

ಗೋಲೋಕ: ಕರ್ನಾಟಕ ಸರಕಾರದಿಂದ ಮಾಹಾನಂದಿ ಗೋಲೋಕಕ್ಕೆ ದೊರೆತಂತಹ ಪ್ರಮಾಣ ಪತ್ರವನ್ನು ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಇವರಿಂದ ಗೋಲೋಕದ ಅಧ್ಯಕ್ಷರಾದ ಡಾಕ್ಟರ್ ಸೀತಾರಾಮ ಪ್ರಸಾದ್ ಹಾಗೂ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಎಡಪ್ಪಾಡಿ ಅವರು ಸ್ವೀಕರಿಸಿದರು.

Continue Reading

ಹೊಸಾಡಕ್ಕೆ ಪ್ರಮಾಣ ಪತ್ರ

ಹೊಸಾಡ: ಕರ್ನಾಟಕ ಸರ್ಕಾರದಿಂದ ಹೊಸಾಡ ಅಮ್ರತಧಾರಾ ಗೋಶಾಲೆಗೆ ಪಶುಸಂಗೋಪನಾ ಸಚಿವರಾದ ಪ್ರಭು ಚಹ್ವಾಣ್ ಅವರಿಂದ ಗೋಶಾಲೆಯ ಪರವಾಗಿ ವಿನಾಯಕ ಎಸ್. ಭಟ್ ಅವರು ಪ್ರಮಾಣ ಪತ್ರ ವನ್ನು ಸ್ವೀಕರಿಸಿದರು.

Continue Reading

ಮಾತೃತ್ವಮ್ ಒಣಹುಲ್ಲು ಸಮರ್ಪಣೆ

ಜೇಡ್ಲ: ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರಕ್ಕೆ ಮಾತೃತ್ವಮ್ ವತಿಯಿಂದ ಒಣಹುಲ್ಲು ಸಮರ್ಪಣೆ ಮಾಡಲಾಗಿದೆ. ಬೆಲ್ಲ, ಹಿಂಡಿ ನೀಡಿ ಅರಸಿನ ಕುಂಕುಮ ಹಚ್ಚಿ ಆರತಿಯೊಂದಿಗೆ ಗೋಪೂಜೆ ಮಾಡಿ ಮಾತೆಯರು ಸಂಭ್ರಮಿಸಿದರು. ಕಾಮದುಘಾ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ, ಗೋಶಾಲೆ ಶ್ರೀಸಂಯೋಜಕ ತಿರುಮಲ ಪ್ರಸನ್ನ, ಗೋಶಾಲೆ ಸಮಿತಿಯ ಅಧ್ಯಕ್ಷರಾದ ಪ್ರೊಫೆಸರ್ ಶ್ರೀಕೃಷ್ಣ ಭಟ್ ತೆಕ್ಕೆಕೆರೆ, ಮಂಗಳೂರು ಪ್ರಾಂತ ಮಾತೃತ್ವಮ್ ಅಧಕ್ಷೆ ಸುಮಾ ರಮೇಶ್, ಕಾಸರಗೋಡು ನಗರ ಮಾತೃತ್ವಮ್ ಅಧಕ್ಷೆ ಕುಸುಮಾ ಪೆರುಮುಖ,ಕಾರ್ಯದರ್ಶಿ ಗೀತಾ ಅನಘ ಮತ್ತು ಮಾಸದ ಮಾತೆಯರು ಹಾಜರಿದ್ದರು.

Continue Reading

ಮಾತೃತ್ತಮ್ ನಿಂದ ಮೇವು ವಿತರಣೆ

ಹೊಸಾಡ: ಶ್ರೀರಾಮಚಂದ್ರಾಪುರ ಮಠದ ಮಾತೃತ್ತಮ್ ಮಹಿಳಾ ಸಂಘಟನೆಯಿಂದ ಬುಧವಾರ ಹೊಸಾಡಿನ ಅಮೃತಧಾರ ಗೋಶಾಲೆ ಗೋವುಗಳಿಗೆ ೫ ಲೋಡ್ ಮೇವನ್ನು ವಿತರಿಸಲಾಯಿತು. ಸಂಜೆ ಕಾಮಧೇನುವಿಗೆ ಪೂಜೆಯನ್ನು ಅರ್ಪಸಿದ ಮಾತೆಯರು ನಂತರ ಗೋಮಾತೆಗೆ ಮೇವನ್ನು ನೀಡಿದರು. ಗೋಮಾತೆಯೊಂದಿಗೆ ನಾವೀದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ನೀಡಿದರು. ಈಸಂದರ್ಭದಲ್ಲಿ ಗೋಶಾಲೆಯ ಆಡಳಿತ ಮಂಡಳಿಯವರು ಮತ್ತು ಹೋನ್ನವರ ಕುಮಟಾದ ಮಂಡಲದ ಮಾತೃತ್ತಮ್ ವಿಭಾಗ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಗೋಸ್ವರ್ಗಕ್ಕೆ ಭೇಟಿ

ಗೋಸ್ವರ್ಗ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಕೆ.ಎನ್ ವೆಂಕಟನಾರಾಯಣ ಮತ್ತು ಪದಾಧಿಕಾರಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ಗೋವುಗಳ ವೀಕ್ಷಣೆ ಮಾಡಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪರಿಕಲ್ಪನೆ ಹಾಗೂ ಇಲ್ಲಿನ ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಗೋಸ್ವಾದು ಮಳಿಗೆಯಲ್ಲಿ ಹಾಲಿನ ಉತ್ಪನ್ನಗಳನ್ನು ಸವಿದು ಸಂತಸಗೊಂಡರು. ಗೋಸ್ವರ್ಗಕ್ಕೆ ಮಹಾಸಭಾದಿಂದ ಹೆಚ್ಚಿನ ಸಹಕಾರ, ದಾನಿಗಳಿಂದ ಸಹಾಯ ಕೊಡಿಸುವ ಮೂಲಕ ಗೋರಕ್ಷಣಾಕಾರ್ಯದಲ್ಲಿ ಕೈಜೋಡಿಸುವ ಭರವಸೆ ನೀಡಿದರು.

Continue Reading

ಮಾತೃತ್ವಮ್ ವತಿಯಿಂದ ಗೋಆಶ್ರಮಕ್ಕೆ ಒಣಮೇವು ಸಮರ್ಪಣೆ

ಮಾಲೂರು: ಶ್ರೀ ರಾಘವೇಂದ್ರ ಗೋ ಆಶ್ರಮಕ್ಕೆ ಶ್ರೀಮಠದ ಮಾತೃತ್ವಮ್ ವತಿಯಿಂದ ಎರಡು(ಐದು ಲೋಡ್ ನಲ್ಲಿ) ಲೋಡ್ ಒಣಹುಲ್ಲನ್ನು ಸಮರ್ಪಣೆ ಮಾಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಾಸದ ಮಾತೆಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಗೋ ಆಶ್ರಮದ ವಿಶೇಷ ಕರ್ತವ್ಯಾಧಿಕಾರಿ ರಾಮಚಂದ್ರ ಅಜ್ಜಕಾನ ಅವರಿಗೆ ಸಾಂಕೇತಿಕವಾಗಿ ಮೇವು ಹಸ್ತಾಂತರಿಸಲಾಯಿತು. ಇದಕ್ಕೂ ಮೊದಲು ಮಾತೆಯರು ಶ್ರೀ ಸಿದ್ಧಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರು. ನಂತರ ಗೋಪೂಜೆಯನ್ನು ನೆರವೇರಿಸಿದರು. ಗೋಆಶ್ರಮದ ವತಿಯಿಂದ ಅಮೃತಾನ್ನ ಪ್ರಸಾದ ನೀಡಲಾಯಿತು. ಮಾತೃತ್ವಮ್ ಅಧ್ಯಕ್ಷೆ ಈಶ್ವರೀ ಬೇರ್ಕಡವು, […]

Continue Reading

ಸಾಮೂಹಿಕ ಭಗವದ್ಗೀತೆ ಪಾರಾಯಣ

ಗೋಲೋಕ: ಹೊಸನಗರ ಮಹಾನಂದಿ ಗೋಲೋಕದಲ್ಲಿ ಡಿ.೭ರಂದು ಗೀತಾಜಯಂತಿಯ ಅಂಗವಾಗಿ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಸಾಮೂಹಿಕ ಭಗವದ್ಗೀತೆ ಪಾರಾಯಣ ಸಂಪನ್ನಗೊಂಡಿದೆ. ಬೆಳಿಗ್ಗೆ ೯-೩೦ಕ್ಕೆ ಪ್ರಾರಂಭವಾದ ಪಾರಾಯಣ ಅಪರಾಹ್ನ ೧೨-೩೦ ರವರೆಗೆ ನೆರವೇರಿದೆ. ಪುರುಷ ಮತ್ತು ಮಹಿಳೆಯರು ಭಾಗವಹಿಸಿದ್ದ ಈ ಕಾರ್ಯಕ್ರಮದ ನೇತೃತ್ವವನ್ನು ವಿದ್ವಾನ್ ಶೇಷಗಿರಿ ಭಟ್ ರವರು ವಹಿಸಿದ್ದರು. ನಂತರ ಶ್ರೀಕೃಷ್ಣನಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀಮಠದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬ್ರಾಹ್ಮಣಸಭಾ ಅಧ್ಯಕ್ಷರಾದ ಡಾ. ರಾಮಚಂದ್ರರಾವ್ ಹಿರಿಯರಾದ ಶ್ರೀಧರ ಉಡುಪ ಮುಂತಾದವರು ಉಪಸ್ಥಿತರಿದ್ದರು.

Continue Reading

ಮಣ್ಣಿನ ಸವಕಳಿ ತಪ್ಪಿಸುವ ಕಾರ್ಯವಾಗಬೇಕು – ಉಪಕುಲಪತಿ ಡಾ. ಇಂದ್ರೇಶ್

ಗೋಸ್ವರ್ಗ: ಮಣ್ಣಿನ ಸಂರಕ್ಷಣೆಯ ಬಗ್ಗೆ ರೈತರು ಹೆಚ್ಚಿನ ಮಹತ್ವ ನೀಡಿದಾಗ ಕೃಷಿಯಲ್ಲಿ ಯಶಸ್ಸು ಪಡೆಯಬಹುದು. ಅನಾವೃಷ್ಠಿ ಅತೀವೃಷ್ಠಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಹಿಂದೆ ಪ್ರತಿ ಗ್ರಾಮಗಳಲ್ಲಿ ಗೋಮಾಳಗಳಿತ್ತು. ಬೆಳೆಯುತ್ತಿರುವ ಪಟ್ಟಣ – ಕಾರ್ಖಾನೆಗಳಿಂದ ವಾತಾವರಣ ಹಾಳಾಗುತ್ತಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅನಿವಾರ್ಯತೆ ಇದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಇಂದ್ರೇಶ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ […]

Continue Reading

ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯ ಮಾಡಲಿ – ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್

ಗೋಸ್ವರ್ಗ: ಪ್ರಕೃತಿಯನ್ನು ಅರ್ಥಮಾಡಿಕೊಂಡು ಕೃಷಿ ಮಾಡುವ ಕಾರ್ಯ ಮಾಡಬೇಕು. ವಿದ್ಯಾರ್ಥಿಗಳಿಗೆ ದೇಸಿ ಮಣ್ಣಿನ ಸೊಗಡನ್ನು ಅರಿತುಕೊಳ್ಳಬೇಕು. ಪ್ರಶ್ನೆಯ ಜತೆಗೆ ಕ್ರಿಯೆ ಇದ್ದಾಗ ಕೃಷಿಯಲ್ಲಿ ಯಶಸ್ಸು ಕಾಣಬಹುದು. ಜ್ಞಾನಿಗಳು ಕೃಷಿ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು. ವಾರಾಂತ್ಯದ ಕಾರ್ಯಕ್ರಮಗಳನ್ನು ರೆಸಾರ್ಟ್ ನಲ್ಲಿ ಕಳೆಯುವ ಬದಲು ರೈತರ ಮನೆಗಳಲ್ಲಿ ಆಚರಣೆ ಮಾಡುವಂತಾಗಲಿ. ಹಣವಂತರು ರೈತರನ್ನು ದತ್ತು ತೆಗೆದುಕೊಳ್ಳುವ ಕಾರ್ಯವಾದಾಗ ಕೃಷಿ ಮುಂದೆ ಬರಲು ಸಾಧ್ಯ ಎಂದು ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಹೇಳಿದರು. ಗೋಸ್ವರ್ಗದಲ್ಲಿ ಶ್ರೀರಾಮಚಂದ್ರಾಪುರಮಠ, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ, […]

Continue Reading