ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶ – ಡಾ. ಎ. ಬಿ. ಪಾಟೀಲ್

ಗೋಸ್ವರ್ಗ: ರೈತರು ಸ್ಪರ್ಶದ ಮೂಲಕವೇ ಫಲವತ್ತೆಯನ್ನು ಅಳೆಯುತ್ತಿದ್ದರು. ರಾಸಾಯನಿಕಗಳಿಂದ ಮಣ್ಣಿನ ಅಗತ್ಯ ಗುಣಗಳು ನಾಶವಾಗುತ್ತಿದೆ. ಸಾವಯವ ಕೃಷಿಯನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಗೋಆಧಾರಿತ ಕೃಷಿ ಸಹಕಾರಿ ಯಾಗಿದೆ. ಕೈಗಾರಿಕೀಕರಣಗಳಿಂದ ಕೃಷಿ ಕಾರ್ಯಗಳು ಕಡಿಮೆಯಾಗುತ್ತಿದೆ. ಪಕೃತಿ ವಿಕೋಪಗಳನ್ನು ತಡೆಯುವ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕಾಗಿದೆ. ಆಧ್ಯಾತ್ಮಿಕ ಕೃಷಿಯ ಜತೆಗೆ ಎಲ್ಲಾ ವಿಜ್ಞಾನಿಗಳು ಕೈಜೋಡಿಸಬೇಕು ಎಂದು ಡಾ. ಎ. ಬಿ. ಪಾಟೀಲ್ ಹೇಳಿದರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ […]

Continue Reading

ಗೋ ಆಧರಿತ ಪದ್ಧತಿಯಿಂದಷ್ಟೇ ಕೃಷಿ ಪುನರುತ್ಥಾನ – ಕೃಷಿತಜ್ಞ ಎಸ್.ಎ.ಪಾಟೀಲ

ಗೋಸ್ವರ್ಗ (ಸಿದ್ದಾಪುರ): ದೇಶದಲ್ಲಿ ಕೃಷಿಯ ಪುನರುತ್ಥಾನಕ್ಕೆ ಗೋ ಆಧರಿತ ಕೃಷಿ ಅಗತ್ಯ. ಇದಕ್ಕೆ ಮಾನಸಿಕವಾಗಿ ವಿಜ್ಞಾನಿಗಳಲ್ಲೇ ಪರಿವರ್ತನೆ ಬರಬೇಕು ಎಂದು ನವದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ.ಎಸ್.ಎ.ಪಾಟೀಲ್ ಅಭಿಪ್ರಾಯಪಟ್ಟರು. ವಿಶ್ವಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀ ರಾಮಚಂದ್ರಾಪುರ ಮಠ, ಬಾಗಲಕೋಟೆ ತೋಟಗಾರಿಕೆ ವಿವಿ ಮತ್ತು ಶಿರಸಿ ಕೃಷಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮಣ್ಣಿನಲ್ಲೂ ವೈವಿಧ್ಯವಿದೆ. ಸೂಕ್ಷ್ಮಾಣು ಜೀವಿ, ಸಸ್ಯಸಂಕುಲ, ಗೋವು ಹಾಗೂ ಮನುಷ್ಯನಿಗೆ […]

Continue Reading

ಪ್ರತಿಭೆಯೊಂದಿಗೆ ಗುರು ಹಿರಿಯರ ಆಶೀರ್ವಾದ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ : ಚಿತ್ರ ನಟ ನಿರ್ದೇಶಕ ದಿನೇಶ್ ಅತ್ತಾವರ

ನಂತೂರು: ಸಿಯಾರ ಗಾಯ್ಸ್ ನಂತೂರು ಅವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಬಾರತೀ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಚಿತ್ರನಟ ದಿನೇಶ್ ಅತ್ತಾವರ ಅವರು ಭಾಗವಹಿಸಿ, ಮಾತನಾಡಿ ಗುರುಹಿರಿಯರು ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು ಎಂದರು. ತಮ್ಮ ಬಾಲ್ಯದ ನೆನಪನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಕೆಲವು ನಾಟಕದ ಸಂಭಾಷಣೆಯನ್ನು ಹೇಲಿ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದವಿ […]

Continue Reading

ಗೋ-ಮಯ ಪರಿಸರದ ಸವಿಯನುಂಡ ಸಂತರು

ಗೋಸ್ವರ್ಗ: ಬೆಂಗಳೂರು ಕೆ.ಆರ್ ಪುರದ ರಾಮಕೃಷ್ಣಾಶ್ರಮದ ಮುಖ್ಯಸ್ಥರಾದ ಸ್ವಾಮಿ ಚಂದ್ರೇಶಾನಂದಜೀ ರವರು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಗೋಸ್ವರ್ಗವನ್ನು ವೀಕ್ಷಿಸಿ, ಮಾಹಿತಿ ಪಡೆದರು. ಗವ್ಯೋತ್ಪನ್ನಗಳ ಬಗೆಗೆ ವಿವರ ಪಡೆದರು. ಶ್ರೀಸಂಸ್ಥಾನದವರ ದೂರದರ್ಶಿತ್ವ, ಸಂಕಲ್ಪ ಸಿದ್ಧಿ, ಗೋಸಂರಕ್ಷಣಾ ಕಾರ್ಯ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆಗಳ ಕುರಿತು ಅತೀವ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರಿನ ಇನ್ನೂ ಹಲವು ಭಕ್ತರೊಡಗೂಡಿ ಮತ್ತೊಮ್ಮೆ ಬಂದು ಗೋಸ್ವರ್ಗದಲ್ಲಿಯೇ ದಿನಪೂರ್ತಿ ಕಳೆವುದಾಗಿ ತಿಳಿಸಿದ್ದಾರೆ. ನಾಲ್ಕೈದು ಜನ ಭಕ್ತರೊಡನೆ ಆಗಮಿಸಿದ್ದ ಶ್ರೀಗಳು ರಾಮಸನ್ನಿಧಿ, ಸಪ್ತಸನ್ನಿಧಿ, ಗೋಸನ್ನಿಧಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

Continue Reading

ಯುವ ಸಮೂಹಕೆ ಗೋದರ್ಶನ

ಗೋಸ್ವರ್ಗ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಸಣೂರಿನ ಪ್ರಕೃತಿ ಕಾಲೇಜಿನ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿದ್ದರು. ರಾತ್ರಿ ಆಗಿದ್ದರೂ ಕೂಡ ಉತ್ಸುಕತೆಯಿಂದ ಗೋಸ್ವರ್ಗವನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದರು. ಗೋಸ್ವರ್ಗದ ಪ್ರಶಾಂತ ಪರಿಸರದಲ್ಲಿ ರಾತ್ರಿ ವಿಶ್ರಾಂತಿ ಮಾಡಿ ಬೆಳಿಗ್ಗೆ ಪುನಹ ಗೋಸ್ವರ್ಗಕ್ಕೆ ತೆರಳಿ ಇನ್ನಷ್ಟು ಮಾಹಿತಿಗಳನ್ನು ಪಡೆದರು. ಯುವ ಸಮೂಹದ ಈ ಉತ್ಸುಕತೆ, ದೇಸೀ ಗೋವುಗಳ ಕುರಿತು ಇರುವ ಕಾಳಜಿ ನಿಜಕ್ಕೂ ಶ್ಲಾಘನೀಯ. ಯುವ ಸಮುದಾಯಕ್ಕೆ ದೇಸೀ ಗೋವುಗಳ ಬಗೆಗೆ ಮಾಹಿತಿ ನೀಡುವ ಸದುದ್ದೇಶದಿಂದ ಗೋಸ್ವರ್ಗಕ್ಕೆ ಕರೆತಂದ […]

Continue Reading

ಗೋಆಶ್ರಮದಲ್ಲಿ ಗೋಪೂಜೆ

ಮಾಲೂರು: ಹೊಸಕೋಟೆ ತಾಲೂಕು ಈ ಮುತ್ಸಂದ್ರ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿಯವರು ತಮ್ಮ ಜನ್ಮದಿನಾಚರಣೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪೂಜೆಯೊಂದಿಗೆ ವಿಶೇಷವಾಗಿ ಆಚರಿಸಿದರು. ಇದೇ ಸಂದರ್ಭದಲ್ಲಿ ಸಂಸ್ಕೃತಿ ಕಲಾ ಸಂಘ ಹೊಸಕೋಟೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನೂ ಆಚರಿಸಲಾಯಿತು. ಗೋಆಶ್ರಮದ ಕೃಷ್ಣ ಭಟ್ ಇವರು ರಾಜ್ಯೋತ್ಸವದ ಬಗ್ಗೆ ಮಾತಾನಾಡುವ ಜೊತೆಗೆ, ಗೋಆಶ್ರಮದ ಬಗ್ಗೆ ಹಾಗೂ ಭಾರತೀಯ ಗೋವಂಶದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ರಾಜಮ್ಮ, ಕರುಣಾ, ರವಿಪ್ರಕಾಶ್, ಗೋಆಶ್ರಮದ […]

Continue Reading

ಗೋಸ್ವರ್ಗದಲ್ಲಿ ಡಿ. ೫ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಬೆಂಗಳೂರು: ಮಣ್ಣಿನ ಸಂರಕ್ಷಣೆಯೇ ಮನುಕುಲದ ಸಂರಕ್ಷಣೆ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶ್ರೀರಾಮಚಂದ್ರಾಪುರ ಮಠದ ಸಂಶೋಧನಾ ಖಂಡ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಡಿಸೆಂಬರ್ ೫ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ. ಕಾಮದುಘಾ ಟ್ರಸ್ಟ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಮತ್ತು ಶಿರಸಿ ತೋಟಗಾರಿಕಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆಯುವ ಒಂದು ದಿನದ ವಿಚಾರ ಸಂಕಿರಣದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವರು. ಅಂತರರಾಷ್ಟ್ರೀಯ […]

Continue Reading

ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕೇಪು: ಬಾಲ್ಯದಲ್ಲಿ ಹಲ್ಲಿನ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಹಲ್ಲಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ. ಹಳ್ಳಿ ಪ್ರದೇಶಕ್ಕೆ ವೈದ್ಯರು ಬಂದು ನೀಡುತ್ತಿರುವ ಸೇವೆಯನ್ನು ಸದುಪಡಿಸಿಕೊಳ್ಳಬೇಕು ಎಂದು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ರೈ ಹೇಳಿದರು. ಅವರು ಪುಣಚ ಶ್ರೀದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ ಕೇಪು ಹವ್ಯಕ ವಲಯದ ಆಶ್ರಯದಲ್ಲಿ ವಿಟ್ಲ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ವಿಟ್ಲ, ಶ್ರೀದೇವಿ ಪ್ರೌಢಶಾಲೆಯಲ್ಲಿ ನಿಟ್ಟೆ ಎಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಮುದಾಯ ದಂತ […]

Continue Reading

ಗೋಕರ್ಣದಲ್ಲಿ ಮಹಾರುದ್ರಾಭಿಷೇಕ ಸೇವೆ

ಗೋಕರ್ಣ: ಶ್ರೀಮಹಾಬಲೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇವೆ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ನಡೆಯಿತು. ಕುಮಟಾ ಮಂಡಲದ ೩೦, ಹೊನ್ನಾವರ ಮಂಡಲದ ೫೦ ಹಾಗೂ ಸ್ಥಳೀಯ ೪೦ ರುದ್ರಾಧ್ಯಾಯಿಗಳು ಭಾಗವಹಿಸಿದ್ದರು. ವೇ.ಮೂ.ಶಿತಿಕಂಠ ಭಟ್ಟರ ನೇತೃತ್ವದಲ್ಲಿ ಒಟ್ಟು ೧೩೫೬ ರುದ್ರಮಂತ್ರಗಳಿಂದ ಅಭಿಷೇಕ ನೆರವೇರಿತು.

Continue Reading

ಗೋಆಶ್ರಮಕ್ಕೆ ಹುಲ್ಲು ವಿತರಣೆ

ಮಾಲೂರು: ಗಂಗಾಪುರ ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಕೊಲಾರದ ಕನ್ನಯಲಾಲ್ ನರಸಾಪುರ ಅವರು ಎರಡು ಟ್ರಾಕ್ಟರ್ ರಾಗಿ ಹುಲ್ಲನ್ನು ಕಳುಹಿಸಿರುತ್ತಾರೆ. ಅವರು ಸ್ವತಹ ಆರು ಟ್ರಾಕ್ಟರ್ ಹುಲ್ಲನ್ನು ಕಳೆದ ವರ್ಷ ನೀಡಿರುತ್ತಾರೆ ಹಾಗೂ ತಮ್ಮ ಸಮಾಜದ ಸಂಘಟನೆ ಹಾಗೂ ಮಿತ್ರರ ಮೂಲಕ ಸುಮಾರು ಎಂಟು ಟ್ರಾಕ್ಟರ್ ಹುಲ್ಲನ್ನು ಕೊಟ್ಟಿರುತ್ತಾರೆ.

Continue Reading

ಗೋಸ್ವರ್ಗದಿ ಚಿಣ್ಣರ ಕಲರವ

ಗೋಸ್ವರ್ಗ: ಸಿದ್ಧಾಪುರ ತಾಲೂಕಿನ ರಮಾನಂದ ಶಿಕ್ಷಣ ಸಂಸ್ಥೆ, ವಿದ್ಯಾಗಿರಿ, ಕತ್ರಗಾಲ ಇಲ್ಲಿನ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಭೇಟಿನೀಡಿದ್ದರು. ಬೆಳಿಗ್ಗೆ 11ಗಂಟೆಗೆ ಆಗಮಿಸಿದ 120ಮಕ್ಕಳಿಗೆ ಶುದ್ಧದೇಸೀ ಹಾಲನ್ನು ವಿತರಿಸಲಾಯಿತು. ಶ್ರೀರಾಮ ಸನ್ನಿಧಿಯಲ್ಲಿ ಭಜನೆ, ಮಂಗಳಾರತಿ ಸೇವೆಗಳನ್ನು ಪೂರೈಸಿ ಗೋ ದರ್ಶನಕ್ಕೆ ತೆರಳಿದರು. ಗೋಸ್ವರ್ಗದ ಗೋವುಗಳು, ಕರುಗಳೊಡನೆ ಒಡನಾಡಿದರು. ಗೋವೃಂದದ ನಡುವೆ ಭಜನೆ, ಶ್ಲೋಕ ಪಠಣ ಮಾಡಿ ತೀರ್ಥರಾಜ ಮಹಾಸ್ನಾನದಲ್ಲಿ ಪಾಲ್ಗೊಂಡರು. ಮಧ್ಯಾಹ್ನದ ಪ್ರಸಾದ ಭೋಜನ ಸವಿದ ಚಿಣ್ಣರು ಮಠದಂಗಳದಿ ನಲಿದಾಡಿದರು.ಮಕ್ಕಳಿಗೆ ದೇಸೀ ಗೋವುಗಳ ಮಾಹಿತಿ ನೀಡುವ ಉದ್ದೇಶದಿಂದ ಕರೆತಂದ […]

Continue Reading

ಗೋಆಶ್ರಮದಲ್ಲಿ ಗೋಪೂಜೆ

ಮಾಲೂರು: ಕೊಲ್ಕತ್ತಾ ಇಮಾಮಿ ಸಮೂಹ ಶ್ರೀ ರಾಧೇಶ್ಯಾಮ್ ಗೊಯೆಂಕಾ ಅವರು ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಬೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ಪೂಜೆ ಹಾಗೂ ಗೋಪೂಜೆಯಲ್ಲಿ ಭಾಗವಹಿಸಿದರು. ಜೊತೆಯಲ್ಲಿ ಮಹಾಬೀರ್ ಸೋನಿಕಾ ಇದ್ದರು.

Continue Reading

ದೋಷ ಪರಿಹಾರಕ್ಕಾಗಿ ಗೋಗ್ರಾಸ ಸಮರ್ಪಣೆ

ಗೋಸ್ವರ್ಗ: ಧಾರವಾಡದ ಗೋಪ್ರೇಮಿಗಳಾದ ಶೀಲವಂತ ಮತ್ತು ಕುಟುಂಬದವರು ದೋಷ ಪರಿಹಾರಕ್ಕಾಗಿ ಗೋಸ್ವರ್ಗದಲ್ಲಿನ ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ಸಮರ್ಪಿಸಿದರು. ದೋಷ ಪರಿಹಾರಕ್ಕಾಗಿ ಪಂಡಿತರು ೧೦೦ಗೋವುಗಳಿಗೆ ಏಕಕಾಲದಲ್ಲಿ ಗ್ರಾಸ ಸಮರ್ಪಣೆಯ ಮಾರ್ಗವನ್ನು ಸೂಚಿಸಿದ್ದರಿಂದ ಹಲವು ಕಡೆ ವಿಚಾರಿಸಿ ಗೋಸ್ವರ್ಗದ ಮಾಹಿತಿ ಪಡೆದ ಶೀಲವಂತ ಅವರು ಕುಟುಂಬದವರೊಡನೆ ಗೋಸ್ವರ್ಗಕ್ಕೆ ಆಗಮಿಸಿದ್ದರು. ಕಡಲೆ, ಬೆಲ್ಲ, ಬಾಳೇಹಣ್ಣು, ಹಿಂಡಿ ಇವುಗಳ ವಿಶೇಷ ಗೋಗ್ರಾಸವನ್ನು ಗೋವುಗಳಿಗೆ ಸಮರ್ಪಿಸಿ, ಇಲ್ಲಿನ ವಾತಾವರಣ, ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಪ್ರತಿ ವರ್ಷ ಗೋಸ್ವರ್ಗಕ್ಕೆ ತಮ್ಮ ಸೇವೆಯನ್ನು ಸಲ್ಲಿಸುವ ಅಭಿಲಾಷೆ […]

Continue Reading

ಗೋಸ್ವರ್ಗದಲ್ಲಿ ಗೋದೀಪ ಕಾರ್ಯಾಗಾರ

ಗೋಸ್ವರ್ಗ: ಮಾತೃ ಹಾಗೂ ಮಾತೃತ್ವಮ್ ವಿಭಾಗ ದವರಿಂದ ಗೋಮಯದಿಂದ ಹಣತೆ ಗೋದೀಪ ತಯಾರಿಸುವ ಕಾರ್ಯಾಗಾರವನ್ನು ನ.೨೨ ಮತ್ತು ನ.೨೪ರವರೆಗೆ ಹಮ್ಮಿಕೊಳ್ಳಲಾಗಿತ್ತು. ಮಾತೆಯರಿಗೆ ವಿಕ್ರಮ ಭಟ್ ಇವರು ಗೋದೀಪ ತಯಾರಿಕೆಯ ವಿಧಾನವನ್ನು ತಿಳಿಸಿಕೊಟ್ಟರು. ನ.೨೨ ೧೦ ಮಾತೆಯರಿಂದ ೧೫ ಕೆ. ಜಿ. ಗೋಮಯದಿಂದ ೪ ತಾಸಿಗೆ ೭೩೦ ಹಣತೆಗಳನ್ನು ತಯಾರಿಸಲಾಯಿತು. ನ.೨೪ರಂದು ೧೦ ಮಾತೆಯರಿಂದ ೨೦ಕೆಜಿ ಗೋಮಯದಿಂದ, ೪ ತಾಸಿಗೆ ೧೦೬೬ ಹಣತೆಯನ್ನು ತಯಾರಿಸಲಾಯಿತು. ಸಿದ್ದಾಪುರ ಮಂಡಲ ವ್ಯಾಪ್ತಿಯ ಮಾತೆಯರು ಪಾಲ್ಗೊಂಡಿದ್ದರು.

Continue Reading

ಭಕ್ತಿ ಭಾವದಿಂದ ನಡೆದ ಕಾರ್ತೀಕ ದೀಪೋತ್ಸವ

ಭಾನ್ಕುಳಿ: ಶ್ರೀರಾಮದೇವ ಭಾನ್ಕುಳಿಮಠದ ಶ್ರೀರಾಮದೇವ ಸನ್ನಿಧಿಯಲ್ಲಿ ಕಾರ್ತೀಕ ದೀಪೋತ್ಸವ ಸೇವೆ ನಡೆಯಿತು. ದೀಪಾವಳಿ ಪ್ರತಿಪದೆಯಿಂದ ಆರಂಭಗೊಂಡ ದೀಪೋತ್ಸವ ಸೇವೆ ಕಾರ್ತೀಕ ಮಾಸದ ಕೊನೆಯ ಸೋಮವಾರವಾದ ಕಾರಣ ವಿಜೃಂಭಣೆಯಿಂದ ನಡೆಯಿತು. ಸಹಸ್ರಾಧಿಕ ದೀಪಗಳಿಂದ ಶ್ರೀರಾಮ ಸನ್ನಿಧಿ ಕಂಗೊಳಿಸಿತು. ಗೋಸ್ವರ್ಗದ ಸನಿಹದಲ್ಲೇ ಇರುವ ಪುರಾತನ ಶಿವ ದೇವಾಲಯದಲ್ಲಿ ದೀಪೋತ್ಸವ ಸೇವೆ ನೆರವೇರಿಸಿ, ಸಪ್ತಸನ್ನಿಧಿಯಲ್ಲಿ ದೀಪ ಬೆಳಗಿಸಿ ನಂತರ ರಾಮಸನ್ನಿಧಿಯಲ್ಲಿ ಸೇವೆ ಸಲ್ಲಿಸಲಾಯಿತು. ಈ ದಿನ ೧೨ ಕರ್ತೃಗಳ ಸೇವೆ ರಾಮಾರ್ಪಣಗೊಂಡಿತು.

Continue Reading

ದೇಸಿಗೋವುಗಳ ಮಾಹಿತಿ ಪಡೆದ ಚಿಣ್ಣರು

ಗೋಸ್ವರ್ಗ: ಹೊನ್ನಾವರ ತಾಲ್ಲೂಕಿನ ಕವಲಕ್ಕಿಯ ಶ್ರೀಭಾರತೀ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿ ಗೋವುಗಳ ಮಾಹಿತಿ ಪಡೆದುಕೊಂಡರು. ಸುಮಾರು ೬೦ವಿದ್ಯಾರ್ಥಿಗಳು ಹಾಗೂ ೬ಜನ ಅಧ್ಯಾಪಕರ ತಂಡ ಗೋವುಗಳೊಡನೆ, ಕರುಗಳೊಡನೆ ಒಡನಾಡಿ ಸಂಭ್ರಮಿಸಿದ್ದಲ್ಲದೇ ಗವ್ಯೊತ್ಪನ್ನಗಳ ಕುರಿತು, ದೇಸೀ ಗೋವುಗಳ ವಿಶಿಷ್ಟತೆಯ ಕುರಿತು ಮಾಹಿತಿ ಪಡೆದರು. ಶ್ರೀಮಠದ ಪ್ರಸಾದ ಭೋಜನದ ಸವಿಯನ್ನು ಸವಿದು ಮಠದಂಗಳದಿ ನಲಿದಾಡಿದರು.

Continue Reading

ಶ್ರೀಮಠದ ಸಮಗ್ರ ರೂಪ ಈ ಜಾಲತಾಣ : ಶ್ರೀಸಂಸ್ಥಾನ

ಗಿರಿನಗರ: ದೇವರನ್ನು ತೋರಿಸುವುದು ಮಠ, ಶ್ರೀಮಠದ ಸಮಗ್ರ ರೂಪವನ್ನು ತೋರಿಸುವಲ್ಲಿ srisamsthana.org ಜಾಲತಾಣವು ಸಹಕಾರಿಯಾಗಲಿದೆ. ಮಠವು ಸಮಾಜಕ್ಕೆ ಬೆಳಕನ್ನು ಕೊಡಬೇಕು, ಮಠದ ಮೇಲೆ ಬೆಳಕನ್ನು ಚೆಲ್ಲಬೇಕು ಈ ಜಾಲತಾಣ. ಶ್ರೀಮಠವು ಎಲ್ಲರದ್ದೂ, ಜಗತ್ತಿನಲ್ಲಿರುವ ಎಲ್ಲರಿಗೂ ಮಠವು ಲಭ್ಯವಾಗಬೇಕು. ಮಠವು ನಮ್ಮದು ಹೌದು ಆದರೆ ನಮ್ಮದು ಮಾತ್ರವಲ್ಲ ಎಲ್ಲರದ್ದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ srisamsthana.org ಜಾಲತಾಣ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆದಿಶಂಕರರು ಮಠವೆಂಬ ದೀಪವನ್ನು […]

Continue Reading

ರುದ್ರ ಮಂತ್ರ ತರಬೇತಿ ಕಾರ್ಯಕ್ರಮ

ಮುಳ್ಳೇರಿಯ: ಧರ್ಮಕರ್ಮ ವಿಭಾಗದ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ವೈದಿಕ ವಿಭಾಗದ ವತಿಯಿಂದ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನ.೨೩ನೇ ಶನಿವಾರ ಸಾಯಂಕಾಲ ವೆ.ಮೂ.ಗೋಪಾಲಕೃಷ್ಣ ಭಟ್ ನಾಯರ್ಪಳ್ಳ ಇವರಿಂದ ಆಸಕ್ತ ವೇದ ವಿದ್ಯಾರ್ಥಿಗಳಿಗೆ ರುದ್ರ ಮಂತ್ರ ತರಬೇತಿ ಕಾರ್ಯಕ್ರಮ ಆರಂಭವಾಯಿತು. ರುದ್ರ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಉದಯಕುಮಾರ್ ನೂಜಿ ಪುತ್ತೂರು ಇವರು ಉಚಿತವಾಗಿ ನೀಡಿದ ಮಂತ್ರ ಗುಚ್ಚ ಪುಸ್ತಕಗಳನ್ನು ವಿತರಿಸಲಾಯಿತು. ಶಂಖನಾದ, ಗುರುವಂದನೆ, ಗೋ ವಂದನೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು […]

Continue Reading

ಗೋಆಶ್ರಮದಲ್ಲಿ ಗೋದಾನ ಸೇವೆ

ಮಾಲೂರು: ಚಿಕಾಗೋ ವಾಸಿ ಶ್ರೀಕಿರಣ್ ಕೆನ್ಮೆಡಿ ಇವರು ಇಂದು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಆಗಮಿಸಿ ಗೋದಾನ ಸೇವೆ ಮಾಡಿದರು. ಒಂದು ಓಂಗೋಲ್ ತಳಿಯ ಗೋವನ್ನು ಖರೀದಿಸಿ, ಒಂದು ವರ್ಷ ನಿರ್ವಹಣೆಯ ಖರ್ಚನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಗೋಪೂಜೆಯನ್ನು ನಡೆಸಲಾಯಿತು.

Continue Reading