ಮಾತು~ಮುತ್ತು : ಯಾವುದು ನಕಲಿ? ಯಾವುದು ಅಸಲಿ? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಬ್ಬ ಪುಟ್ಟ ಹುಡುಗಿ ಜಾತ್ರೆಯಲ್ಲಿ ಒಂದು ಮುತ್ತಿನಸರವನ್ನು ಖರೀದಿ ಮಾಡುತ್ತಾಳೆ. ಅದು ಅಸಲಿ ಮುತ್ತಲ್ಲ, ನಕಲಿ. ಆದರೂ ಅವಳು ಅದನ್ನು ‘ಅಸಲಿ’ ಎಂದೇ ಅತ್ಯಂತ ಜೋಪಾನವಾಗಿ ಕಾಪಾಡುತ್ತಾಳೆ. ಯಾರು ಕೇಳಿದರೂ ಕೊಡುತ್ತಿರಲಿಲ್ಲ. ಸ್ನಾನ ಮಾಡುವಾಗ ಮಾತ್ರ ನೀರು ತಾಗಿ ಹಾಳಾಗುತ್ತದೆ ಎಂಬ ಕಾರಣದಿಂದ ತೆಗೆದು ಇಟ್ಟಿರುತ್ತಿದ್ದಳು.   ಪ್ರತಿದಿನ ರಾತ್ರಿ ಅವಳು ಮಲಗುವಾಗ ಅವಳ ತಂದೆ ಒಂದು ಕಥೆ ಹೇಳಿ ಮಲಗಿಸುತ್ತಿದ್ದ. ಕಥೆ ಮುಗಿದ ಅನಂತರ- ‘ಆ ಹಾರ ನನಗೆ ಕೊಡು’ ಎಂದು ಪ್ರತಿದಿನ ಕೇಳುತ್ತಿದ್ದ. […]

Continue Reading

ಮಾತು~ಮುತ್ತು : ಪ್ರೀತಿಯ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಬ್ಬ ಯುವಕ ಒಂದು ಯುವತಿಯನ್ನು ತುಂಬ ತುಂಬಾ ಪ್ರೀತಿಸುತ್ತಿದ್ದ. ಅವನ ಈ ಹುಚ್ಚನ್ನು ನೋಡಿ ಅವನ ಸ್ನೇಹಿತರು, ಬಂಧುಗಳು- ‘ಇವನ ಪ್ರೀತಿ ತಿರಸ್ಕೃತವಾದರೆ ಏನು?’ ಎಂದು ಭಯಪಡುತ್ತಾರೆ.  ಆದರೆ ಆ ಯುವತಿಯ ಹತ್ತಿರ ಒಮ್ಮೆಯೂ ತನ್ನ ಪ್ರೀತಿಯ ವಿಷಯವನ್ನು ಆತ ಹೇಳಿರುವುದಿಲ್ಲ. ಆದರೆ ಇವನು ಪ್ರೀತಿಸುವ ವಿಷಯ ಅವಳಿಗೆ ತಿಳಿದಿರುತ್ತದೆ.   ಒಮ್ಮೆ ಹೇಗೋ ಮನಸ್ಸು ಮಾಡಿ ಆ ಯುವತಿಗೆ ತನ್ನ ಅಗಾಧ ಪ್ರೀತಿಯ ವಿಷಯ ಹೇಳುತ್ತಾನೆ. ಆಗ ಅವಳು- “ನನಗೆ ನಿನ್ನಲ್ಲಿ ಆ ರೀತಿಯ ಯಾವ […]

Continue Reading

ಮಾತು~ಮುತ್ತು : ನಡವಳಿಕೆಯೇ ಆದರ್ಶ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ನಮ್ಮ ನಡವಳಿಕೆ ಆದರ್ಶವಾಗಿರಬೇಕು. ಒಮ್ಮೆ ಒಂದು ಪುಟ್ಟ ಮಗು ತನ್ನ ತಾಯಿಯನ್ನು, “ಅಮ್ಮಾ ನಿನ್ನ ಕೆಲವು ಕೂದಲುಗಳು ಮಾತ್ರ ಬಿಳಿಯಾಗಿವೆ; ಏಕೆ?” ಎಂದು ಕೇಳುತ್ತದೆ. ಅದಕ್ಕೆ ತಾಯಿ ಆಲೋಚಿಸಿ, “ನೀನು ಮಾಡಿದ ಒಂದೊಂದು ತಪ್ಪಿನಿಂದ ಒಂದೊಂದೇ ಕೂದಲು ಬಿಳಿಯಾಗಿದೆ” ಎನ್ನುತ್ತಾಳೆ. ಆಗ ಮಗು ಮುಗ್ಧತೆಯಿಂದ ಕೇಳುತ್ತದೆ, “ಅಜ್ಜಿಯ ಕೂದಲು ಪೂರಾ ಬಿಳಿಯಾಗಿದೆಯಲ್ಲ; ಅದಕ್ಕೆ ನೀನು ಮಾಡಿದ ತಪ್ಪುಗಳೇ ಕಾರಣವೇ?”ಎಂದು. ಆಗ ತಾಯಿಗೆ ತಾನು ಮಗುವಿನ ಪ್ರಶ್ನೆಗೆ ನೀಡಿದ ಉತ್ತರ ಸರಿಯಿಲ್ಲ ಎಂಬ ಅರಿವಾಗುತ್ತದೆ.   ಮಕ್ಕಳು ಹಸಿಗೋಡೆಯಿದ್ದಂತೆ. […]

Continue Reading

ಮಾತು~ಮುತ್ತು : ಸಮಯವಿರಲಿ ಎಲ್ಲಕ್ಕೂ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ದಿನ ಒಂದು ಪುಟ್ಟ ಮಗು ತನ್ನ ತಂದೆಯನ್ನು, “ನಿನಗೆ ಒಂದು ಗಂಟೆಗೆ ಎಷ್ಟು ಆದಾಯ ಬರುತ್ತದೆ?” ಎಂದು ಕೇಳುತ್ತದೆ. ತಂದೆ ಉತ್ತರ ಹೇಳುವುದಿಲ್ಲ. ಮಗು ಪದೇ ಪದೇ ಅದೇ ಪ್ರಶ್ನೆಯನ್ನು ಕೇಳಿದಾಗ ತಂದೆ, “ಒಂದು ಗಂಟೆಗೆ ನನ್ನ ಸಂಪಾದನೆ 500 ರೂಪಾಯಿಗಳು” ಎನ್ನುತ್ತಾನೆ. ಆಗ ಮಗು, “ನನಗೆ 300 ರೂಪಾಯಿ ಕೊಡು” ಎನ್ನುತ್ತದೆ. ತಂದೆ ಸಿಟ್ಟಿನಿಂದ, “ಇದಕ್ಕಾಗಿಯೇ ನನ್ನನ್ನು ಎಷ್ಟು ಪಗಾರ ಬರುತ್ತದೆ ಎಂದು ಕೇಳಿರುವೆಯಲ್ಲವೆ?” ಎನ್ನುತ್ತಾನೆ. ಮೊದಲ ಬಾರಿ ಕೇಳಿದಾಗ ತಂದೆ ಕೊಡುವುದಿಲ್ಲ. ಆದರೆ […]

Continue Reading

ರಾಮಮಂದಿರ‌‌ ನಿರ್ಮಾಣದ ಕುರಿತು ಶ್ರೀಸಂಸ್ಥಾನದ ನಿಲುವೇನು?- ವೀಕ್ಷಿಸಿ ನಾಳೆ ರಾತ್ರಿ ದಿಗ್ವಿಜಯ ಸುದ್ದಿವಾಹಿನಿಯಲ್ಲಿ

ಬೆಂಗಳೂರು: ನಾಳೆ ಅಂದ್ರೆ‌ ನವೆಂಬರ್ ದಿಗ್ವಿಜಯ‌ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ವಿಶೇಷ ಧಾರ್ಮಿಕ‌ ಸಂದರ್ಶನ ಪ್ರಸಾರವಾಗಲಿದೆ. ರಾತ್ರಿ 9.27 ಕ್ಕೆ‌ ಸರಿಯಾಗಿ ದಿಗ್ವಿಜಯ ವಾಹಿನಿಯಲ್ಲಿ ಶ್ರೀಸಂಸ್ಥಾನದವರ ಇಂಟರವ್ಯೂ‌ಪ್ರಸಾರವಾಗಲಿದ್ದು ಹಲವು ವಿಚಾರಗಳ ಕುರಿತು ಶ್ರೀಸಂಸ್ಥಾನದವರು ತಮ್ಮ ‌ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರಾಮಮಂದಿರ‌ನಿರ್ಮಾಣ, ಹಾಗೂ ದೇಗುಲಗಳ ಸರ್ಕಾರಿ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳ‌ ಕುರಿತು ಶ್ರೀಸಂಸ್ಥಾನದವರು ಮುಕ್ತವಾಗಿ ಮಾತನಾಡಿದ್ದಾರೆ. ಇನ್ನು‌ ದಿಗ್ವಿಜಯ ವಾಹಿನಿಯಲ್ಲಿ ಸಂದರ್ಶನದ ಜೊತೆಗೆ ನಾಡಿನ‌ ಜನಪ್ರಿಯ‌ ದಿನಪತ್ರಿಕೆ ವಿಜಯವಾಣಿ ಯಲ್ಲಿ ಇದೇ ಸಂದರ್ಶನದ ವರದಿ […]

Continue Reading

ಮಾತು~ಮುತ್ತು : ವಿಶ್ವಾಸವೇ ಮುಖ್ಯ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ದಿನ ಒಂದು ಶಾಲೆಯಲ್ಲಿ ಒಬ್ಬ ಅಧ್ಯಾಪಕರು ವಿದ್ಯಾರ್ಥಿಗಳ ಹತ್ತಿರ, ದೇವರು ಕಾಣಿಸದೇ ಇರುವುದರಿಂದ ದೇವರಿಲ್ಲ ಎಂದು ತಿಳಿಸುವುದಕ್ಕಾಗಿ, “ನಿಮಗೆ ಹೊರಗಡೆ ಗಿಡಮರಗಳು ಕಾಣಿಸುತ್ತದೆಯೇ?” ಎಂದು ಕೇಳುತ್ತಾರೆ. ಆಗ ವಿದ್ಯಾರ್ಥಿಗಳು “ಹೌದು” ಎನ್ನುತ್ತಾರೆ. “ಆಕಾಶ ಕಾಣಿಸುತ್ತದೆಯೆ? ಸುತ್ತಮುತ್ತಲಿನ ವಸ್ತುಗಳು ಕಾಣಿಸುತ್ತವೆಯೆ?” ಎಂದು ಕೇಳುತ್ತಾರೆ. ವಿದ್ಯಾರ್ಥಿಗಳು “ಹೌದು” ಎನ್ನುತ್ತಾರೆ. ಕೊನೆಯಲ್ಲಿ, “ದೇವರು ಕಾಣಿಸುತ್ತಾನೆಯೆ?” ಎಂದು ಕೇಳುತ್ತಾರೆ. ವಿದ್ಯಾರ್ಥುಗಳು “ಇಲ್ಲ” ಎನ್ನುತ್ತಾರೆ. ಆಗ ಅಧ್ಯಾಪಕರು, “ಯಾವುದು ಕಣ್ಣಿಗೆ ಗೋಚರಿಸುವುದಿಲ್ಲವೋ ಅದು ಇಲ್ಲ ಎಂದೇ ಅರ್ಥ” ಎಂದು ವಿವರಿಸುತ್ತಾರೆ. ಆ ಅಧ್ಯಾಪಕರು […]

Continue Reading

ಮಾತು~ಮುತ್ತು : ಮಾತು ಬೆಳ್ಳಿ ; ಮೌನ ಬಂಗಾರ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಶ್ರೀರಾಮಾನುಜಾಚಾರ್ಯರಿಗೆ ಅನೇಕ ಶಿಷ್ಯರಿದ್ದರು. ಒಬ್ಬ ಶಿಷ್ಯ ಯಾವತ್ತೂ ಯಾವುದೇ ಮಾತನಾಡದೇ ಸದಾ ಮೌನಿಯಾಗಿ ದಡ್ಡನಂತೆ ತರಗತಿಗಳಲ್ಲಿ ಕುಳಿತಿರುತ್ತಿದ್ದ. ಅವನ ಸಹಪಾಠಿಗಳು ಕಲಿತು ಮುಂದೆ ಹೋದರೂ ಇವನು ಮಾತ್ರ 3-4 ಬಾರಿ ಒಂದೇ ತರಗತಿಯಲ್ಲಿ ಕುಳಿತಿರುತ್ತಿದ್ದ.  

Continue Reading

ಮಾತು~ಮುತ್ತು : ಪ್ರೇರಣೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನಿಗೆ ಈರ್ವರು ಮಕ್ಕಳು. ಆ ವ್ಯಕ್ತಿ ಕಳ್ಳತನ, ಕುಡಿಯುವುದು, ವ್ಯಭಿಚಾರ ಇತ್ಯಾದಿ ಎಲ್ಲ ದುರ್ಗುಣಗಳನ್ನು ಹೊಂದಿದ್ದನಲ್ಲದೇ ಪ್ರತಿದಿನ ಕುಡಿದು ಬಂದು ಹೆಂಡತಿ ಮಕ್ಕಳನ್ನು ಹಿಂಸಿಸುತ್ತಿದ್ದ. ಸಮಾಜದಲ್ಲಿ ಕೆಟ್ಟವನೆನಿಸಿಕೊಂಡಿದ್ದ. ಅವನ ಇಬ್ಬರು ಮಕ್ಕಳೂ ಒಂದೇ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಓದಿ ಒಂದೊಂದೇ ತರಗತಿ ಓದುತ್ತಾ ದೊಡ್ಡವರಾದರು, ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತಿದ್ದರೂ, ಒಂದೇ ಮನೆಯಲ್ಲಿ ಒಟ್ಟಿಗೇ ವಾಸಿಸುತ್ತಿದ್ದರೂ, ಅವರ ಗುಣಗಳಲ್ಲಿ ತುಂಬಾ ಭಿನ್ನತೆಯಿತ್ತು. ಮೊದಲ ಮಗ ತಂದೆಯಂತೆಯೇ ದುರ್ಗುಣಯಾಗಿದ್ದರೆ, ಎರಡನೆಯವನು ಸದ್ಗುಣಿಯಾಗಿ […]

Continue Reading

ಮಾತು~ಮುತ್ತು : ನೆಮ್ಮದಿ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ನೆಮ್ಮದಿ ಒಮ್ಮೆ ಒಬ್ಬ ರೈತ ಒಂದು ಬೃಹದಾಕಾರದ ಉಗ್ರಾಣದಲ್ಲಿ ತನ್ನ ಕೈಗಡಿಯಾರವನ್ನು ಕಳೆದುಕೊಳ್ಳುತ್ತಾನೆ. ಎಷ್ಟು ಹುಡುಕಿದರೂ ಸಾಮಾನು ಸರಂಜಾಮುಗಳ ರಾಶಿಯಲ್ಲಿ ಅವನ ಕೈಗಡಿಯಾರ ಸಿಗುವುದೇ ಇಲ್ಲ. ಆಗ ಅವನು ಅಲ್ಲಿಯೇ ಆಟವಾಡುತ್ತಿದ್ದ ಹತ್ತಾರು ಮಕ್ಕಳನ್ನು ಕರೆದು ‘ಕೈಗಡಿಯಾರವನ್ನು ಹುಡುಕಿ ಕೊಟ್ಟವರಿಗೆ ಒಂದು ಬಹುಮಾನ ಕೊಡುತ್ತೇನೆ’ ಎಂದು ಹೇಳುತ್ತಾನೆ. ಆ ಮಕ್ಕಳು ಬಹುಮಾನದ ಆಸೆಯಿಂದ ಉಗ್ರಾಣದ ಒಳಗೆ ಹೋಗಿ, ಎಲ್ಲ ವಸ್ತುಗಳನ್ನು ಜಾಲಾಡಿ ಕೈಗಡಿಯಾರ ಸಿಗದೇ ನಿರಾಶರಾಗಿ ಹೊರಗೆ ಬರುತ್ತಾರೆ. ಆಗ […]

Continue Reading

ಮಾತು~ಮುತ್ತು : ಲಕ್ಷ್ಮೀ-ಅಲಕ್ಷ್ಮೀ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಲಕ್ಷ್ಮೀ-ಅಲಕ್ಷ್ಮೀ ಒಮ್ಮೆ ಲಕ್ಷ್ಮೀ ಮತ್ತು ಅಲಕ್ಷ್ಮಿಯರ ನಡುವೆ ‘ಯಾರು ಹೆಚ್ಚು ಚೆಂದ?’ ಎಂಬ ಬಗ್ಗೆ ಚರ್ಚೆ ಏರ್ಪಡುತ್ತದೆ. ಲಕ್ಷ್ಮೀ ತಾನು ಚೆಂದ ಎಂದರೆ ಅಲಕ್ಷ್ಮೀ ತಾನೇ ಹೆಚ್ಚು ಚೆಂದ ಎಂದು ಹೇಳುತ್ತಾಳೆ. ಇದನ್ನು ಹೇಗೆ ತೀರ್ಮಾನಿಸುವುದು ಎಂದು ಆಲೋಚಿಸಿ, ಭೂಲೋಕಕ್ಕೆ ಹೋಗಿ ಒಬ್ಬ ಸಿರಿವಂತ ವರ್ತಕನಲ್ಲಿ ‘ನಮ್ಮ ಇಬ್ಬರಲ್ಲಿ ಯಾರು ಹೆಚ್ಚು ಚೆಂದ? ಹೇಳು’ ಎಂದು ಕೇಳುತ್ತಾರೆ.   ವರ್ತಕ ಗೊಂದಲದಲ್ಲಿ ಬೀಳುತ್ತಾನೆ. ಯಾರು ಚೆಂದವೆಂದರೂ ತೊಂದರೆ ತಪ್ಪಿದ್ದಲ್ಲ ಎಂದು […]

Continue Reading

ಮಾತು~ಮುತ್ತು : ಅಲೆಯ ಸಾಗರವಾಗು

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಅಲೆಯ ಸಾಗರವಾಗು ಒಮ್ಮೆ ಸಮುದ್ರದಲ್ಲಿ ತೀವ್ರವಾದ ತರಂಗಗಳು ಏಳುತ್ತವೆ. ಆ ತರಂಗಗಳು ಮುಗಿಲೆತ್ತರಕ್ಕೆ ಏರುತ್ತಾ ರಭಸದಿಂದ ಮುನ್ನುಗ್ಗಿ ಬರುತ್ತಿರುತ್ತವೆ. ಹೀಗೆ ಬಂದ ತರಂಗಗಳು ಸಂಚರಿಸುತ್ತಾ, ಸಂಚರಿಸುತ್ತಾ ಸಮುದ್ರದ ದಂಡೆಗೆ ಅಪ್ಪಳಿಸಿ ನಾಶ ಹೊಂದುತ್ತವೆ. ಆಗ ತರಂಗಗಳಿಗೆ ತುಂಬಾ ಬೇಸರವಾಗುತ್ತದೆ. ‘ಇಷ್ಟೆಲ್ಲ ಅಬ್ಬರ ಮಾಡಿ ಏನು ಪ್ರಯೋಜನವಾಯಿತು? ಕೊನೆಗೆ ನಾಶ ಹೊಂದಿದಂತಾಯಿತು!’ ಎಂದು. ಬೇಸರದಿಂದ ಅವು ಭಗವಂತನಲ್ಲಿ ಕೇಳುತ್ತವೆ, “ಯಾಕೆ ಹೀಗೆ?” ಎಂದು. ಆಗ ಭಗವಂತ ಹೇಳುತ್ತಾನೆ “ಏಕೆ ಬೇಸರಗೊಳ್ಳುತ್ತೀರಿ? ನಾಶವಾದರೂ […]

Continue Reading

ಮಾತು~ಮುತ್ತು : ಯಾರ ನೆನೆಯಲಿ ಕೊನೆಗೆ?

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಯಾರ ನೆನೆಯಲಿ ಕೊನೆಗೆ? ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಒಬ್ಬ ವರ್ತಕನಿದ್ದ. ಅವನಿಗೆ ಸದಾ ವ್ಯಾಪಾರದ್ದೇ ಚಿಂತೆ. ಎಷ್ಟು ಲಾಭ ಬಂದರೂ ಸಮಾಧಾನವಿಲ್ಲ. ಒಮ್ಮೆ ಅವನನ್ನು ಅವನ ಸ್ನೇಹಿತರೊಬ್ಬರು ಒಬ್ಬ ದಾಸರು ನಡೆಸುತ್ತಿದ್ದ ಹರಿಕಥೆಗೆ ಅವನನ್ನು ಕರೆದುಕೊಂಡು ಹೋಗುತ್ತಾರೆ.   ಹರಿಕಥೆದಾಸರು ಮಹಾಹರಿಭಕ್ತನಾದ ಅಜಮಿಳನ ಕಥೆಯನ್ನು ಹೇಳುತ್ತಿರುತ್ತಾರೆ. ಕೊನೆಯಲ್ಲಿ ಅವರು “ಯಾರು ಅಂತ್ಯಕಾಲದಲ್ಲಿ ಶ್ರೀಹರಿಯನ್ನು ನೆನೆಯುತ್ತಾರೆಯೋ ಅವರು ಹರಿಪಾದವನ್ನೇ ಸೇರುತ್ತಾರೆ” ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ವರ್ತಕನಿಗೆ ತುಂಬ […]

Continue Reading

ಮಾತು~ಮುತ್ತು : ‘ನಾನು’ ಹೋಗಬೇಕು

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ‘ನಾನು’ ಹೋಗಬೇಕು ಶ್ರದ್ಧಾವಂತ ಭಕ್ತನೊಬ್ಬ ಒಮ್ಮೆ ದೇವರ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ “ಯಾರು?” ಎಂಬ ಧ್ವನಿ ಬರುತ್ತದೆ. ಭಕ್ತ “ನಾನು” ಎನ್ನುತ್ತಾನೆ. ಬಾಗಿಲು ತೆರೆಯುವುದಿಲ್ಲ. ಭಕ್ತ ಹಿಂತಿರುಗಿ ಬಂದು ಘೋರವಾದ ತಪಸ್ಸು ಮಾಡುತ್ತಾನೆ. ತಪಸ್ಸಿನಿಂದ ಅವನಿಗೆ ಜ್ಞಾನೋದಯವಾಗುತ್ತದೆ. ಅನಂತರ ಅವನು ದೇವರ ಮನೆಗೆ ಹೋಗಿ ಬಾಗಿಲು ತಟ್ಟುತ್ತಾನೆ. ಒಳಗಿನಿಂದ ಅದೇ ಧ್ವನಿ “ಯಾರು?” ಎಂದು ಬರುತ್ತದೆ. ಜ್ಞಾನಿಯಾದ ಭಕ್ತ ಹೇಳುತ್ತಾನೆ “ನೀನೇ!” ಆಗ ದೇವರು ಬಾಗಿಲು ತೆಗೆದು ದರ್ಶನ […]

Continue Reading

ಮತ್ತೆ ಮಠಕ್ಕೆ‌ ಮಹಾಬಲ : ಕ್ಷೇತ್ರದ ಪುನರುತ್ಥಾನಕ್ಕೆ ಸರ್ವರಿಗೆ ಶ್ರೀಸಂಸ್ಥಾನದ ಕರೆ

ಮಹಾಬಲೇಶ್ವರ-ಮಹಾಸಮರದಲ್ಲಿ ಇತ್ತ ನಿಂತವರೇ, ಅತ್ತ ನಿಂತವರೇ, ಸುತ್ತ ನಿಂತವರೇ, ಎಲ್ಲರೂ ಬನ್ನಿ! ನಾವೆಲ್ಲ ಜೊತೆಗೂಡಿ ಪ್ರಪಂಚಕ್ಕೇ ಮಾದರಿಯಾಗುವ ಪರಿಯಲ್ಲಿ ಕ್ಷೇತ್ರವನ್ನು‌ ಕಟ್ಟೋಣ. ಮಹಾಬಲನ ಮಹಾಪ್ರಸಾದವನ್ನು ಸರ್ವಜೀವಗಳಿಗೂ ತಲುಪಿಸೋಣ. – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ‌ಮಹಾಸ್ವಾಮಿಗಳು ಶ್ರೀಸಂಸ್ಥಾನ‌ಗೋಕರ್ಣ-ಶ್ರೀರಾಮಚಂದ್ರಾಪುರಮಠ

Continue Reading

ಮಾತು~ಮುತ್ತು : ಪ್ರತಿದಿನ ಬೇಕೇ ಪ್ರಾರ್ಥನೆ?

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಪ್ರತಿದಿನ ಬೇಕೇ ಪ್ರಾರ್ಥನೆ? ಒಮ್ಮೆ ಒಬ್ಬ ಶಿಷ್ಯ ಗುರುವನ್ನು “ಪ್ರತಿದಿನ ಏಕೆ ದೇವರ ಪ್ರಾರ್ಥನೆ ಮಾಡಬೇಕು?” ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಗುರುಗಳು ಒಂದು ಕೊಳಕಾದ ಬಟ್ಟೆಯನ್ನು ಕೊಟ್ಟು, “ಇದರಲ್ಲಿ, ಅಗೋ ಅಲ್ಲಿ ಕಾಣುತ್ತಿದೆಯಲ್ಲಾ, ಆ ಕೆರೆಯಿಂದ ನೀರು ತೆಗೆದುಕೊಂಡು ಬಾ” ಎಂದು ಹೇಳುತ್ತಾರೆ.   ಬಟ್ಟೆ ತೂತುಗಳನ್ನು ಹೊಂದಿದ್ದರಿಂದ ಎಷ್ಟು ಬಾರಿ ಪ್ರಯತ್ನಿಸಿದರೂ ನೀರನ್ನು ತರುವಾಗ ಅದು ದಾರಿಯಲ್ಲೇ ಸೋರಿ ಹೋಗುತ್ತಿತ್ತು. ಅವನು ಗುರುವಿನ ಹತ್ತಿರ ಬಂದು, “ಆ […]

Continue Reading

ಮಾತು~ಮುತ್ತು : ಸತ್ಸಂಗವೇಕೆ?

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ ಸತ್ಸಂಗವೇಕೆ? ತ್ರಿಲೋಕಸಂಚಾರಿಯಾದ ನಾರದರು ಒಮ್ಮೆ ನಾರಾಯಣನನ್ನು ಕೇಳುತ್ತಾರೆ, “ಸತ್ಸಂಗದಿಂದ ದೊರೆಯುವ ಪ್ರಯೋಜನವೇನು?” ಎಂದು. ಆಗ, ಶ್ರೀಹರಿ “ಭೂಲೋಕಕ್ಕೆ ಹೋಗಿ ಈಗ ತಾನೇ ಹುಟ್ಟಿದ ಒಂದು ಹುಳುವನ್ನು ಕೇಳು” ಎನ್ನುತ್ತಾನೆ. ನಾರದರು ಹಾಗೇ ಮಾಡಲು, ಆ ಹುಳು ತಕ್ಷಣ ಮರಣ ಹೊಂದುತ್ತದೆ. ಹಿಂತಿರುಗಿ ಬಂದ ನಾರದರು “ಹೀಗೇಕೆ?” ಎಂದು ಶ್ರೀಹರಿಯನ್ನು ಕೇಳುತ್ತಾರೆ. ಆಗ ಶ್ರೀಹರಿ “ಈಗ ತಾನೇ ಹುಟ್ಟಿದ ಒಂದು ಪುಟ್ಟ ಹಕ್ಕಿಯನ್ನು ನೋಡು” ಎನ್ನುತ್ತಾನೆ. ನಾರದರು ಹಾಗೇ ಮಾಡಲು, ಆ […]

Continue Reading