ಮಾತು~ಮುತ್ತು : ಗ್ಲಾಸು ಕೆಳಗಿಡಿ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಕಾಲೇಜು, ಪ್ರೊಫೆಸರ್‌ ಒಬ್ಬರು ಒಂದು ಗ್ಲಾಸಿನ ತುಂಬ ನೀರನ್ನು ತಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ- “ಈ ಗ್ಲಾಸಿನಲ್ಲಿ ಎಷ್ಟು ತೂಕದ ನೀರಿರಬಹುದು?” ಎಂದು ಗ್ಲಾಸನ್ನು ಎತ್ತಿ ತೋರಿಸಿ ಕೇಳುತ್ತಾರೆ.   ಆಗ ವಿದ್ಯಾರ್ಥಿಗಳಲ್ಲಿ ಕೆಲವರು 100 ಗ್ರಾಂ, ಇನ್ನು ಕೆಲವರು 150 ಗ್ರಾಂ, ಇನ್ನು ಕೆಲವರು 200ಗ್ರಾಂ ಎನ್ನುತ್ತಾರೆ. “ತುಂಬ ಕಡಿಮೆ ತೂಕವಿರುವ ಈ ಗ್ಲಾಸನ್ನು ಹೀಗೆ ಎತ್ತಿ ಹಿಡಿದುಕೊಂಡು ಇಡೀ ದಿನವಿದ್ದರೆ ಏನು ಆಗಬಹುದು?” ಎಂದು ಕೇಳುತ್ತಾರೆ ಪ್ರೊಫೆಸರ್. ಆಗ ವಿದ್ಯಾರ್ಥಿಗಳು- “ಮೊದಲಿಗೆ ಕೈ ನೋವಾಗುತ್ತದೆ. […]

Continue Reading

ಮಾತು~ಮುತ್ತು : ಹೆಸರು ಶಾಶ್ವತವಲ್ಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಕೆಲವರು ಹಣಕ್ಕಾಗಿ, ಕೆಲವರು ಹೆಣ್ಣಿಗಾಗಿ, ಇನ್ನು ಕೆಲವರು ಹೆಸರಿಗಾಗಿ ಮಾಡಬಾರದ್ದೆನ್ನೆಲ್ಲ ಮಾಡುತ್ತಾರೆ. ಇದಕ್ಕೆ ಈ ಕಥೆ ಸಾಕ್ಷಿ.   ಒಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ. ಅವನಿಗೆ ತುಂಬ ಹೆಸರನ್ನು ಗಳಿಸಬೇಕೆಂದು ಮಹತ್ತ್ವಾಕಾಂಕ್ಷೆ ಉಂಟಾಯಿತು. ಅವನು ತನ್ನ ಆಸ್ಥಾನ ವಿದ್ವಾಂಸರನ್ನು ಒಂದು ಸಭೆ ಸೇರಿಸಿ, “ಬಹಳ ದೊಡ್ಡ ಹೆಸರು ಗಳಿಸಿದ ವ್ಯಕ್ತಿಯನ್ನು ಅವನ ಮರಣಾನಂತರ ಹೇಗೆ ಗೌರವಿಸುತ್ತಾರೆ?” ಎಂದು ಕೇಳುತ್ತಾನೆ.   ಆಗ ಆಸ್ಥಾನ ವಿದ್ವಾಂಸರುಗಳು- “ಯಾರು ಬಹಳ ದೊಡ್ಡ ಹೆಸರು ಗಳಿಸುತ್ತಾರೋ ಅವರನ್ನು ದೇವಲೋಕದಲ್ಲಿರುವ ಒಂದು ದೊಡ್ಡ […]

Continue Reading

ಮಾತು~ಮುತ್ತು : ಧೈರ್ಯಂ ಸರ್ವತ್ರ ಸಾಧನಂ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಮಹಾಪರಾಕ್ರಮಿಯಾದ ಒಬ್ಬ ರಾಜನಿದ್ದ. ಅವನಿಗೊಬ್ಬ ವೈರಿ ರಾಜನಿದ್ದ. ಅವನು ಇವನಷ್ಟು ಬಲಶಾಲಿಯಲ್ಲ. ಆದರೆ ಆತನಿಗೆ ಈ ಬಲಿಷ್ಠ ರಾಜನನ್ನು ಹೇಗಾದರೂ ಮಾಡಿ ಸೋಲಿಸಬೇಕೆಂಬ ಹಠ ಉಂಟಾಗುತ್ತದೆ. ಅವನು ಬಹಳ ಆಲೋಚಿಸುತ್ತಾನೆ. ಯುದ್ಧದಿಂದ  ಗೆಲ್ಲಲಾರದ್ದನ್ನು ಯುಕ್ತಿಯಿಂದ ಗೆಲ್ಲಬೇಕು ಎಂದು ಒಂದು ಉಪಾಯ ಮಾಡುತ್ತಾನೆ. ತನ್ನ ರಾಜ್ಯದಲ್ಲಿರುವ ಒಬ್ಬ ಪ್ರಸಿದ್ಧ ಜ್ಯೋತಿಷಿಯನ್ನು ಆಸ್ಥಾನಕ್ಕೆ ಕರೆಸಿಕೊಂಡು, ಅವನಿಗೆ ಕೆಲವು ಸೂಚನೆಗಳನ್ನು ಕೊಟ್ಟು, ಆ ವೈರಿ ರಾಜನಲ್ಲಿಗೆ ಕಳುಹಿಸುತ್ತಾನೆ. ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯಿದ್ದ ಆ ರಾಜನು ಈ ಜ್ಯೋತಿಷಿಯನ್ನು ಆದರದಿಂದ […]

Continue Reading

ಮಾತು~ಮುತ್ತು : ದೇವರು ಏನು ಮಾಡುತ್ತಾನೆ? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ರಾಜ್ಯದಲ್ಲಿ ಮಹಾದೈವಭಕ್ತನಾದ ಒಬ್ಬ ರಾಜನಿದ್ದ. ಅವನು ಪ್ರತಿದಿನ ದೇವತಾಕಾರ್ಯಗಳನ್ನು ನಿಷ್ಠೆಯಿಂದ ತಪ್ಪದೇ ಮಾಡುತ್ತಿದ್ದ. ಆದರೆ ಪೂಜಾಕಾರ್ಯ ಮಾಡುತ್ತಿರುವಾಗ ಅವನಿಗೆ 3 ಪ್ರಶ್ನೆಗಳು ಉಂಟಾಗುತ್ತಿತ್ತು. ಅವುಗಳೆಂದರೆ, 1.ದೇವರು ಇದ್ದಾನೆಯೇ? ಇದ್ದರೆ ಎಲ್ಲಿ ಇದ್ದಾನೆ? 2.ಅವನನ್ನು ನಾನು ನೋಡಬಹುದೇ? 3.ಅವನು ಏನು ಮಾಡುತ್ತಾನೆ?   ಈ ಮೂರು ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರ ಯಾರಿಂದಲೂ ಅವನಿಗೆ ಸಿಗುವುದಿಲ್ಲ. ಆಗ ಅವನು ತನ್ನ ರಾಜ್ಯದಲ್ಲಿ ಡಂಗುರ ಸಾರಿಸಿ ‘ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವವರಿಗೆ ದೊಡ್ಡ ಬಹುಮಾನ ನೀಡಲಾಗುತ್ತದೆ, ಯಾರು ವಿಫಲರಾಗುತ್ತಾರೋ […]

Continue Reading

ಮಾತು~ಮುತ್ತು : ಸೋಲು ಗೆಲುವಿನ ಮೂಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ    

ಮಾತು~ಮುತ್ತು : ಸೋಲು ಗೆಲುವಿನ ಮೂಲ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ   ಮಹಾಮೇಧಾವಿ ಥಾಮಸ್ ಅಲ್ವಾ ಎಡಿಸನ್ ವಿದ್ಯುತ್ ಬಲ್ಬನ ಫಿಲಮೆಂಟನ್ನು ಕಂಡು ಹಿಡಿಯುವಾಗ ಅವನ 2000 ಪ್ರಯತ್ನಗಳು ವ್ಯರ್ಥವಾಗುತ್ತವೆ. ಆಗ ಅವನ ಸಹಾಯಕ- “ಹಣ, ಸಮಯ ಎಲ್ಲವೂ ವ್ಯರ್ಥವಾಯಿತು” ಎಂದು ಗೊಣಗುತ್ತಾನೆ. ಆಗ ಎಟಿಸನ್- “2000 ಪ್ರಯೋಗಗಳಿಂದ ಬಲ್ಬನ ಫಿಲಮೆಂಟ್ ಆಗುವುದಿಲ್ಲ ಎಂದು ಗೊತ್ತಾಯಿತು. ಪ್ರಯತ್ನ ವ್ಯರ್ಥವೇನೂ ಆಗಲಿಲ್ಲ. ಈಗ 2001ನೇ ಪ್ರಯತ್ನ ಮಾಡೋಣ” ಎಂದು ಹೇಳಿ ಅದರಲ್ಲಿ ಯಶಸ್ವಿಯಾಗುತ್ತಾನೆ.   […]

Continue Reading

ಮಾತು~ಮುತ್ತು : ಪ್ರೀತಿ ಇದ್ದಲ್ಲಿ ನೋವು ಇರುತ್ತದೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅವನು ಒಬ್ಬ ಯುವಕ. ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಅವನು ಅವಳನ್ನು ತುಂಬ ಹಚ್ಚಿಕೊಂಡಿದ್ದ. ಅವಳಲ್ಲದೇ ಬದುಕೇ ಇಲ್ಲ ಎಂದುಕೊಂಡಿದ್ದ. ಆದರೆ ಇವನ ಪ್ರೀತಿಯನ್ನು ತಿರಸ್ಕರಿಸಿ ಆ ಯುವತಿ ಬೇರೆಯೊಬ್ಬನನ್ನು ಇಷ್ಟಪಡುತ್ತಿರುತ್ತಾಳೆ. ಆದರೆ ಆ ಬೇರೊಬ್ಬ ಯುವಕ ಇವಳನ್ನು ಇಷ್ಟಪಡದೇ ಇನ್ನೊಬ್ಬಳ ಬಗ್ಗೆ ಆಸಕ್ತಿ ಹೊಂದಿದ್ದ. ಹೀಗಿರುವಾಗ ಎಲ್ಲರಿಗೂ ಪ್ರೀತಿಯಿಂದ ನೋವೇ ಉಂಟಾಗುತ್ತದೆ.   ಜೀವನದಲ್ಲಿ ನೋವು ಇಲ್ಲದೇ ಇರುವ ಪ್ರೀತಿಯೆಂದರೆ ಭಗವಂತನಲ್ಲಿ ಇರುವ ಪ್ರೀತಿ ಮಾತ್ರ. ಅಲ್ಲಿ ಯಾವ ನೋವು ಇಲ್ಲ. ಜೀವನದಲ್ಲಿ ನಾವು ಯಾರನ್ನು ಪ್ರೀತಿಸುತ್ತೇವೆಯೋ […]

Continue Reading

ಮಾತು~ಮುತ್ತು : ಒಟ್ಟಾಗಿ ಮುನ್ನಡೆಯೋಣ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಹಿಮಗಿರಿ, ಅಲ್ಲಿ ನೂರಾರು ಮುಳ್ಳುಹಂದಿಗಳು ವಾಸಿಸುತ್ತಿದ್ದವು. ಒಮ್ಮೆ ತೀವ್ರವಾದ ಶೀತಮಾರುತ ಪ್ರಾರಂಭವಾಗುತ್ತದೆ. ತೀವ್ರವಾದ ಚಳಿಗಾಳಿಯನ್ನು ತಡೆದುಕೊಳ್ಳುವ ಬಗ್ಗೆ ಸಮಾಲೋಚಿಸಲು ಅವೆಲ್ಲ ಒಂದೆಡೆ ಸೇರುತ್ತವೆ. ಅಲ್ಲಿ ಬಂದ ಒಟ್ಟು ಅಭಿಪ್ರಾಯವೆಂದರೆ ಎಲ್ಲ ಮುಳ್ಳುಹಂದಿಗಳೂ ಒಂದಕ್ಕೊಂದು ಅಂಟಿಕೊಂಡಂತೆ ಒಟ್ಟಾಗಿ ಇದ್ದರೆ ಪರಸ್ಪರ ಶಾಖ ಉಂಟಾಗುವುದರಿಂದ ಚಳಿಯನ್ನು ತಡೆಯಬಹುದು ಎಂದು. ಆದರೆ ಅವು ಮುಳ್ಳುಹಂದಿಗಳಾದ್ದರಿಂದ ಒಂದು ಹಂದಿಯ ಮುಳ್ಳು ಇನ್ನೊಂದಕ್ಕೆ ಚುಚ್ಚುವುದರಿಂದ ಒಟ್ಟಾಗಿರಲು ಸಾಧ್ಯವಾಗದೇ ಬೇರೆ ಬೇರೆಯಾಗಿ ದೂರ ದೂರ ನಿಂತು ಚಳಿಯನ್ನು ತಡೆಯಲು ಪ್ರಯತ್ನಿಸುತ್ತವೆ. ಆದರೆ ಶೀತಮಾರುತ ಇನ್ನಷ್ಟು […]

Continue Reading

ಮಾತು~ಮುತ್ತು : ಸದಾ ಕ್ರೀಯಾಶೀಲರಾಗೋಣ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಂದು ಊರಿನಲ್ಲಿ ಕಪ್ಪೆಗಳ ನಡುವೆ ಒಂದು ಎತ್ತರದ ಕಂಬವನ್ನು ಏರುವ ಸ್ಪರ್ಧೆ ಏರ್ಪಡುತ್ತದೆ. ಈ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಪ್ರಾಣಿಗಳೆಲ್ಲವೂ ಬಂದು ಸೇರುತ್ತವೆ. ಸ್ಪರ್ಧೆ ಪ್ರಾರಂಭವಾಗುತ್ತದೆ. ಆಗ ಕೆಲವು ಪ್ರಾಣಿಗಳು- “ಈ ಕಂಬ ತುಂಬ ಎತ್ತರ ಇರುವುದರಿಂದ ಈ ಪುಟ್ಟ ಪುಟ್ಟ ಕಪ್ಪೆಗಳಿಂದ ಅದನ್ನು ಏರಲು ಸಾಧ್ಯವೇ ಇಲ್ಲ” ಎಂದವು. ಇನ್ನು ಕೆಲವು ಪ್ರಾಣಿಗಳು- “ಕಂಬ ತುಂಬ ಜಾರುತ್ತಿರುವುದರಿಂದ ಈ ಕಪ್ಪೆಗಳಿಂದ ಕಂಬ ಏರಲು ಸಾಧ್ಯವಿಲ್ಲ” ಎಂದು ಹೇಳಿಕೊಳ್ಳುತ್ತಿದ್ದವು.   ಈ ಮಾತುಗಳನ್ನು ಕೇಳಿದ ಕಪ್ಪೆಗಳು- […]

Continue Reading

ಮಾತು~ಮುತ್ತು : ಒಂದು ಮಾತು ಸಾಕು – ಸ್ಫೂರ್ತಿ ತುಂಬಲು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಒಮ್ಮೆ ಅದಾವುದೋ ವಿಷಯವಾಗಿ ಕಂಪನಿಯ ವರಿಷ್ಠರೊಂದಿಗೆ ವಿರಸ ಉಂಟಾಗಿ, ಅದು ವಿಕೋಪಕ್ಕೆ ಹೋಗಿ, ಅವನನ್ನು ಕಂಪನಿಯಿಂದ ತೆಗೆದು ಹಾಕುತ್ತಾರೆ.   ಅವನು ತುಂಬ ಬೇಸರದಿಂದ ಮನೆಗೆ ಬರುತ್ತಾನೆ. ನಡೆದ ವಿಷಯ ಕೇಳಿ ಅವನ ಹೆಂಡತಿ- “ಏನೂ ಚಿಂತಿಸಬೇಡಿ; ಆಗುವುದೆಲ್ಲ ಒಳ್ಳೆಯದಕ್ಕೆ” ಎನ್ನುತ್ತಾಳೆ. ಆಗ ಅವನು- “ಅದು ಸರಿ; ಈಗ ಜೀವನಕ್ಕೇನು ಮಾಡೋಣ?” ಎನ್ನುತ್ತಾನೆ. ಆಗ ಅವಳು ಅಡಿಗೆ ಮನೆಗೆ ಹೋಗಿ ಡಬ್ಬಿಯಲ್ಲಿ ತಾನು ಸಂಗ್ರಹಿಸಿದ್ದ […]

Continue Reading

ಮಾತು~ಮುತ್ತು : ದೂರದ ಬೆಟ್ಟ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಪುಟ್ಟ ಬೆಟ್ಟ. ಬೆಟ್ಟದ ಮೇಲೊಂದು ಪುಟ್ಟ ಮನೆ. ಅದರಲ್ಲಿ ಪುಟ್ಟ ಪುಟ್ಟ ಕಿಟಕಿ ಬಾಗಿಲುಗಳು. ಆ ಮನೆಯಲ್ಲಿ ಒಬ್ಬ ಪುಟ್ಟ ಹುಡುಗಿ. ಅವಳು ಪ್ರತಿದಿನ ಕಿಟಕಿಯ ಹತ್ತಿರನಿಂತು ಹೊರಗಿನ ಪ್ರಪಂಚವನ್ನು ನೋಡುತ್ತಿರುತ್ತಾಳೆ. ಅವಳು ನೋಡುತ್ತಿರುವಾಗ ಎದುರು ಬೆಟ್ಟದಲ್ಲೂ ಒಂದು ಪುಟ್ಟ ಮನೆ ಗೋಚರಿಸುತ್ತದೆ. ಅದು ಚಿನ್ನದಂತೆ ಹೊಳೆಯುತ್ತಿರುವಂತೆ ಭಾಸವಾಗುತ್ತದೆ. ಈ ಹುಡುಗಿಗೆ ಅಲ್ಲಿಗೆ ಹೋಗಬೇಕೆಂದು ತುಂಬ ಆಸೆ ಆಗುತ್ತದೆ. ಅಲ್ಲದೆ ಅಲ್ಲಿಯೇ ವಾಸಿಸಬೇಕೆಂಬ ತುಡಿತ ಉಂಟಾಗುತ್ತದೆ.   ಕೆಲವು ವರ್ಷಗಳ ಅನಂತರ ಅವಳಿಗೆ ತಂದೆ ಒಂದು […]

Continue Reading

ಮಾತು~ಮುತ್ತು : ಜಗತ್ತಿನ ಅದ್ಭುತಗಳು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಅದೊಂದು ಭೂಗೋಳಶಾಸ್ತ್ರದ ತರಗತಿ. ಒಂದು ದಿನ ಅಧ್ಯಾಪಕರು ವಿದ್ಯಾರ್ಥಿಗಳ ಹತ್ತಿರ “ಪ್ರಪಂಚದ ಏಳು ಅದ್ಭುತಗಳನ್ನು ಪಟ್ಟಿ ಮಾಡಿ” ಎನ್ನುತ್ತಾರೆ.  ಆಗ ವಿದ್ಯಾರ್ಥಿಗಳು ಸರಸರನೆ ಪಿರಮಿಡ್, ಚೀನಾದ ಮಹಾಗೋಡೆ, ತಾಜ್ ಮಹಲ್, ಪೀಸಾ ವಾಲುಗೋಪುರ ಇತ್ಯಾದಿ ಬರೆದು ಅಧ್ಯಾಪಕರಿಗೆ ತಂದು ತೋರಿಸುತ್ತಾರೆ.   ಆದರೆ ಒಂದು ಪುಟ್ಟ ಹುಡುಗಿ ಮಾತ್ರ ಖಾಲಿ ಹಾಳೆಯನ್ನು ತಂದು ಕೊಡುತ್ತಾಳೆ. ಆಶ್ಚರ್ಯಗೊಂಡು ಅಧ್ಯಾಪಕರು- “ಇದೇಕೆ?” ಎಂದು ಕೇಳುತ್ತಾರೆ. ಆಗ ಆ ಹುಡುಗಿ- “ಪ್ರಪಂಚದಲ್ಲಿ ಸಾಕಷ್ಟು ಅದ್ಭುತಗಳಿವೆ; ಯಾವುದನ್ನು ಬರೆಯುವುದು? ಎಂದೇ ನನಗೆ ಗೊತ್ತಾಗುತ್ತಿಲ್ಲ” […]

Continue Reading

ಮಾತು~ಮುತ್ತು : ನಮಗೆಷ್ಟು ಬೇಕು? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ಲೋಭಿ ಇದ್ದ. ಅವನ ಬಳಿ ಸಾಕಷ್ಟು ಹಣ-ಆಸ್ತಿ ಇದ್ದರೂ, ‘ಇನ್ನಷ್ಟು ಬೇಕು’ ಎಂದು ಬಯಸುತ್ತಿದ್ದ.   ಒಂದು ದಿನ ಆ ಊರಿನ ರಾಜನನ್ನು ಭೇಟಿಯಾಗಿ- “ನನಗೊಂದಿಷ್ಟು ಆಸ್ತಿ ಕೊಡಿ” ಎಂದು ಬೇಡಿಕೊಳ್ಳುತ್ತಾನೆ. ರಾಜ ಅವನನ್ನೊಮ್ಮೆ ಅವಲೋಕಿಸಿ- “ನಾಳೆ ಸೂರ್ಯೋದಯಕ್ಕೆ ಇಲ್ಲಿಗೆ ಬಾ; ಇಲ್ಲಿಂದ ಎಷ್ಟು ದೂರ ಸಾಧ್ಯ ಅಷ್ಟು ದೂರ ಕ್ರಮಿಸು; ಸೂರ್ಯಾಸ್ತದ ಒಳಗೆ ನೀನು ಪ್ರಾರಂಭಿಸಿದ ಸ್ಥಳಕ್ಕೆ ಬಂದು ತಲುಪಬೇಕು. ಆಗ ನೀನು ಕ್ರಮಿಸಿದಷ್ಟು ದೂರದ ಭೂಮಿ ನಿನ್ನದಾಗುತ್ತದೆ” ಎನ್ನುತ್ತಾನೆ.   […]

Continue Reading

ಮಾತು~ಮುತ್ತು : ಗುರುವಿನ ಮಹತ್ತ್ವ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ಯುವಕನಿಗೆ ಜುಡೋ ಕಲಿಯಬೇಕೆಂಬ ಇಚ್ಛೆಯಾಗುತ್ತದೆ. ಅವನು ಗುರುವನ್ನು ಅರಸುತ್ತಾ ಹೋಗುತ್ತಾನೆ. ಹೀಗಿರುವಾಗ ಜುಡೋ ಕಲಿಸುವ ಒಬ್ಬ ಗುರು ಅವನಿಗೆ ಸಿಗುತ್ತಾನೆ.   ಆದರೆ ಯುವಕನಿಗೆ ಒಂದು ಕೈ ಇಲ್ಲದಿರುವುದನ್ನು ಗಮನಿಸಿದ ಗುರು ಒಂದು ಕೈಯಿಂದ ಆಟವಾಡುವ ಒಂದು ಪಾಠವನ್ನು ಮಾತ್ರ ಅವನಿಗೆ ಕಲಿಸಿಕೊಟ್ಟು ಪ್ರತಿದಿನ ಅಭ್ಯಾಸ ಮಾಡುವಂತೆ ಹೇಳುತ್ತಾನೆ. ಯುವಕ ಅತ್ಯಂತ ಶ್ರದ್ಧೆಯಿಂದ ಆ ಪಾಠವನ್ನು ಕರಗತ ಮಾಡಿಕೊಳ್ಳುತ್ತಾನೆ.   ಕೆಲವು ಸಮಯದ ಅನಂತರ ಅವನು ಒಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಒಂದು, ಎರಡು, […]

Continue Reading

ಮಾತು~ಮುತ್ತು : ಈಸಬೇಕು; ಇದ್ದು ಜಯಿಸಬೇಕು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನ ಒಂದು ದೊಡ್ಡ ಕೆರೆಯಲ್ಲಿ ಎರಡು ಕಪ್ಪೆಗಳಿದ್ದವು. ಒಂದು ದಪ್ಪವಿದ್ದರೆ ಇನ್ನೊಂದು ತೆಳ್ಳಗಿತ್ತು. ಈ ಎರಡೂ ಕಪ್ಪೆಗಳೂ ಒಂದು ದಿನ ಹಾರುತ್ತಾ ಹಾರುತ್ತಾ ಒಂದು ಮನೆಯೊಳಗೆ ಪ್ರವೇಶಿಸಿ ಅಡುಗೆ ಮನೆಗೆ ಹೋಗಿ ಅಕಸ್ಮಾತ್ ಆಗಿ ಒಂದು ದೊಡ್ಡ ಮೊಸರಿನ ಪಾತ್ರೆಯಲ್ಲಿ ಬಿದ್ದುಬಿಡುತ್ತವೆ. ಎಷ್ಟೇ ಪ್ರಯತ್ನ ಮಾಡಿದರೂ ಅವಕ್ಕೆ ಮೇಲೆ ಬರಲು ಸಾಧ್ಯವಾಗುವುದಿಲ್ಲ.   ಆಗ ದಪ್ಪ ಕಪ್ಪೆ, ಸಣ್ಣ ಕಪ್ಪೆಯ ಬಳಿ- ‘ನನ್ನಿಂದ ಕಾಲು ಬಡಿಯಲು ಸಾಧ್ಯವಾಗುತ್ತಿಲ್ಲ. ನಾನು ಸತ್ತು ಹೋಗುತ್ತೇನೆ’ ಎಂದು ಹೇಳುತ್ತದೆ. ಅದಕ್ಕೆ […]

Continue Reading

ಮಾತು~ಮುತ್ತು : ಎಷ್ಟಿರಬೇಕು ಐಶ್ವರ್ಯ? – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಧನದತ್ತ ಮತ್ತು ದೇವದತ್ತ ಎಂಬ ಈರ್ವರು ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಧನದತ್ತ ಹೆಸರಿಗೆ ತಕ್ಕಂತೆ ಅಪಾರ ಐಶ್ವರ್ಯ ಉಳ್ಳವನಾಗಿದ್ದ. ಆದರೆ ದೇವದತ್ತನಿಗೆ ದೈನಂದಿನ ಜೀವನಕ್ಕೆ ಸಾಕಾಗುವಷ್ಟು ಧನ ಮಾತ್ರ ಇತ್ತು.   ಧನದತ್ತನಿಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಕಾರಣ ಹೆದರಿಕೆ. ಯಾವುದೇ ಸಮಯದಲ್ಲಿ ಕಳ್ಳರು ಬರಬಹುದು; ತನ್ನ ಐಶ್ವರ್ಯವನ್ನು ದೋಚಿಕೊಂಡು ಹೋಗಬಹುದು ಎಂದು ಸದಾ ಚಿಂತಿತನಾಗಿ ರಾತ್ರಿ ಪದೇ ಪದೇ ಎದ್ದು, ಬಾಗಿಲು ಹಾಕಿದ್ದೇನೆಯೇ? ಚಿಲಕ ಹಾಕಿದ್ದೇನೆಯೇ? ಎಂದು ಆಗ ಆಗ ಪರೀಕ್ಷಿಸುತ್ತಿದ್ದ. […]

Continue Reading

ಮಾತು~ಮುತ್ತು : ಮರಕಡಿಯುವವನ ಕಥೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ಊರಿನಲ್ಲಿ ಒಬ್ಬ ಮರ ಕಡಿಯುವವನಿದ್ದ. ಒಮ್ಮೆ ಅವನು ಒಬ್ಬ ಮರದ ವ್ಯಾಪಾರಿಯ ಹತ್ತಿರ ಕೆಲಸಕ್ಕೆ ಸೇರುತ್ತಾನೆ. ಬಲಿಷ್ಠನಾದ ಅವನು ಅತ್ಯಂತ ಉತ್ಸಾಹದಿಂದ ಮರ ಕಡಿಯಲು ಪ್ರಾರಂಭಿಸುತ್ತಾನೆ. ಮೊದಲನೆಯ ದಿನ ೧೮ ಮರಗಳನ್ನು ಕಡಿಯುತ್ತಾನೆ. ಎರಡನೆಯ ದಿನ ಇನ್ನೂ ಹೆಚ್ಚು ಪ್ರಯತ್ನ ಮಾಡಿದರೂ ಕೇವಲ ೧೫ ಮರಗಳನ್ನು ಮಾತ್ರ ಕಡಿಯಲು ಸಾಧ್ಯವಾಗುತ್ತದೆ. ಮೂರನೆಯ ದಿನ ೧೨, ನಾಲ್ಕನೇ ದಿನ ೧೦. ಹೀಗೆ ದಿನದಿಂದ ದಿನಕ್ಕೆ ಪ್ರಯತ್ನ ಹೆಚ್ಚಾಗುತ್ತದೆ. ಫಲ ಕಡಿಮೆಯಾಗುತ್ತಾ ಹೋಗುತ್ತದೆ. ‘ಇದೇಕೆ ಹೀಗಾಗುತ್ತಿದೆ?’ ಎಂದು ತಿಳಿಯದ […]

Continue Reading

ಮಾತು~ಮುತ್ತು : ಲಾಕ್ ತೆಗೆಯಬೇಕು – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಂದು ದಿನ ತಿಮ್ಮ ಕಾರಿನಲ್ಲಿ ಪ್ರಯಾಣ ಹೊರಡುತ್ತಾನೆ.  ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ತನ್ನ ಕೆಲಸಕ್ಕಾಗಿ ಹೋಗುತ್ತಾನೆ. ಕೆಲಸ ಮುಗಿಸಿ ಹಿಂತಿರುಗಿ ಬರುವಾಗ ಜೋರಾಗಿ ಮಳೆ ಬರುತ್ತದೆ. ನಿಲ್ಲಲು ಜಾಗವಿಲ್ಲದ ತಿಮ್ಮ ಮಳೆಯಲ್ಲಿಯೇ ಒಂದು ಮರದ ಬುಡದಲ್ಲಿ ನಿಲ್ಲುತ್ತಾನೆ.  ತಿಮ್ಮನ ಹತ್ತಿರ ಕೊಡೆ, ರೈನ್‌ಕೋಟ್ ಎರಡೂ ಇರುತ್ತದೆ. ಅವು ಕಾರಿನಲ್ಲಿದ್ದು ಕಾರು ಲಾಕ್ ಆಗಿರುತ್ತದೆ. ಕಾರಿನ ಲಾಕ್ ತೆಗೆಯದೇ ಅವನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ಜೋರಾಗಿ ಮಳೆ ಬರುತ್ತಿದ್ದರಿಂದ ಕಾರಿನ ಹತ್ತಿರ ಹೋಗುವುದಕ್ಕೂ ತಿಮ್ಮನಿಗೆ ಸಾಧ್ಯವಾಗುವುದಿಲ್ಲ.   […]

Continue Reading

ಮಾತು~ಮುತ್ತು : ದೃಷ್ಟಿಯ ಹಿಂದಿನ ಕಥೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

  ಒಮ್ಮೆ ಒಬ್ಬ ತಂದೆ ತನ್ನ 25 ವರ್ಷದ ಮಗನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಅವರ ಎದುರಿನಲ್ಲಿ ಆಗ ತಾನೇ ಮದುವೆಯಾದ ನವದಂಪತಿಗಳು ಕುಳಿತ್ತಿದ್ದರು. ರೈಲು ಸಾಗುತ್ತಿತ್ತು.   ಸ್ವಲ್ಪ ಸಮಯದ ಅನಂತರ ಯುವಕ ಹೊರಗಡೆ ನೋಡುತ್ತಾ, ತಂದೆಯ ಹತ್ತಿರ- “ಮರಗಳೆಲ್ಲ ಓಡುತ್ತಿವೆ; ನೋಡು” ಎನ್ನುತ್ತಾನೆ. ಆಗ ತಂದೆ- “ಹೌದು ಹೌದು” ಎನ್ನುತ್ತಾನೆ. ಇನ್ನು ಸ್ವಲ್ಪ ದೂರ ಸಾಗಿದ ಅನಂತರ ಅಲ್ಲಿ ಕಾಣುವ ಒಂದೊಂದೇ ವಸ್ತುಗಳನ್ನು ನೋಡುತ್ತಾ ಆ ಯುವಕ ಅವೇ ಮಾತುಗಳನ್ನು ಹೇಳುತ್ತಾ ಹೋಗುತ್ತಾನೆ. ತಂದೆ ಹೌದು […]

Continue Reading

ಮಾತು~ಮುತ್ತು : ಸ್ವಪ್ರಯತ್ನ ಮತ್ತು ದೈವಕೃಪೆ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಅಕ್ಬರ್ ಮತ್ತು ಬೀರಬಲ್ ಕಾಡಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎಷ್ಟು ದೂರ ಸಾಗಿದರೂ ಯಾವುದೇ ಊರು, ಮನೆ ಸಿಗುವುದಿಲ್ಲ. ಇವರಿಗೆ ತುಂಬಾ ಬಾಯಾರಿಕೆ ಹಾಗೂ ಹಸಿವೆಯಾಗುತ್ತದೆ. ಆಗ ಬೀರಬಲ್ ಒಂದು ಮರದ ಕೆಳಗೆ ಕುಳಿತು- “ರಾಮ!  ರಾಮ!” ಎಂದು ರಾಮನ ಜಪ ಮಾಡಲು ಆರಂಭಿಸುತ್ತಾನೆ. ಆಗ ಅಕ್ಬರ್- “ಜಪ ಮಾಡುವುದರಿಂದ ಊಟ ಸಿಗುವುದಿಲ್ಲ” ಎಂದು ಹೇಳಿ ಮುಂದೆ ಸಾಗುತ್ತಾನೆ.   ಹೀಗೆ ಸ್ವಲ್ಪ ದೂರ ಸಾಗುವಾಗ ಒಂದು ಊರು ಸಿಗುತ್ತದೆ. ಆ ಊರಿನ ಒಂದು ಮನೆಯ ಬಾಗಿಲಿಗೆ ಹೋಗಿ- […]

Continue Reading

ಮಾತು~ಮುತ್ತು : ವಿಶ್ವಾಸದಲ್ಲಿದೆ ಶ್ವಾಸ – ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪ್ರವಚನಾಮೃತ

ಒಮ್ಮೆ ಒಬ್ಬ ವ್ಯಕ್ತಿ ಒಂದು ದೊಡ್ಡ ಪರ್ವತವನ್ನು ಏರಲು ಹೊರಟಿದ್ದ. ಅವನೊಂದಿಗೆ ಇನ್ನೂ ಕೆಲವು ವ್ಯಕ್ತಿಗಳಿದ್ದರು. ಆದರೆ ಅವನು ತಾನೇ ಮೊದಲು ಏರಬೇಕೆಂದು ತ್ವರಿತವಾಗಿ ಮುಂದುವರಿಯುತ್ತಿರುತ್ತಾನೆ. ಅಲ್ಲಿ ಮಂಜು ಮುಸುಕಿದ ವಾತಾವಾರಣ; ಹಿಮಾಚ್ಛಾದಿತ. ಆ ಪರ್ವತದಲ್ಲಿ ಉಸಿರಾಡುವುದೇ ಕಷ್ಟವಾಗುತ್ತದೆ. ನಡೆಯಲಾಗದೇ ಅವನು ಕೆಳಗೆ ಬೀಳುತ್ತಾನೆ. ಅವನು ನಡುವಿಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಪ್ರಪಾತಕ್ಕೆ ಬೀಳದೇ ಮಧ್ಯದಲ್ಲಿಯೇ ತೇಲಾಡುತ್ತಿರುತ್ತಾನೆ.   ಆ ಸಮಯದಲ್ಲಿ ಅವನು ಭಗವಂತನನ್ನು- ‘ಹೇಗಾದರೂ ನನ್ನನ್ನು ಕಾಪಾಡು!’ ಎಂದು ಬೇಡಿಕೊಳ್ಳುತ್ತಾನೆ. ಆಗ ಆಕಾಶದಲ್ಲಿ ಒಂದು ಧ್ವನಿ- ‘ನೀನು […]

Continue Reading