ಅವರು ಅವರ ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ : ಹರಿಕೃಷ್ಣ ಪುನರೂರು

  ಮಂಗಳೂರು, ಜ.14: ‘ಧರ್ಮ ಹಾಗೂ ಸಮಾಜವನ್ನು ರಕ್ಷಿಸಲು ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ನ್ಯಾಯಾಲಯವು ಶೀಘ್ರ ನಿರ್ಣಯ ಪ್ರಕಟಿಸಲಿ’ ಎಂದಿರುವ ಸ್ವರ್ಣವಲ್ಲಿ ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ದೇಶದಲ್ಲಿ ಧರ್ಮರಕ್ಷಣೆ ಸ್ವರ್ಣವಲ್ಲಿ ಹಾಗೂ ಯಡತೊರೆ ಸ್ವಾಮಿಗಳಿಂದ ಮಾತ್ರವೇ? ಅವರು ಶಿಷ್ಯರಿಗೆ ಮಾರ್ಗದರ್ಶನ ಮಾಡಲಿ, ಇನ್ನೊಂದು ಮಠಾಧೀಶರ ಬಗ್ಗೆ ಮಾತು ಬೇಡ. ರಾಘವೇಶ್ವರ ಸ್ವಾಮಿಗಳ ಬಗ್ಗೆ ಮಾತನಾಡಲು ಇವರು ಯಾರು? ಈ ರೀತಿ ಸಮಾಜವನ್ನು ಎತ್ತಿಕಟ್ಟಿ ಹಿಂದೂ ಸಮಾಜವನ್ನು ಒಡೆಯುವ ಕಾರ್ಯ ಮಾಡಬಾರದು […]

Continue Reading

ಷಡ್ಯಂತ್ರದ ಒಕ್ಕೂಟ

ಸಾವಿರಾರು ವರ್ಷಗಳಿಂದ ದಕ್ಷಿಣದ ಸರ್ವಶ್ರೇಷ್ಠ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಏನಾಗುತ್ತಿದೆ? ಇದಕ್ಕೆ ಉತ್ತರ ಪ್ರಾಯಶಃ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಾಗೆ ನೋಡಿದರೆ..ಶಬರಿಮಲೆ ಮಾತ್ರವಲ್ಲ, ಅದು ಅಮರನಾಥ ಯಾತ್ರೆಯಿರಬಹುದು, ಕುಂಭಮೇಳವಿರಬಹುದು, ಕಾವೇರಿಯ ತೀರ್ಥೋದ್ಭವವಿರಬಹುದು, ವರುಷಕ್ಕೊಮ್ಮೆ ನಡೆವ ನಮ್ಮ ನಾಡಿನ ಹೆಮ್ಮೆಯ ದಸರಾ ಮಹೋತ್ಸವವಿರಬಹುದು..ಹೀಗೇ ಸನಾತನದ ಧರ್ಮದ ಆಸ್ಥೆ, ಶ್ರದ್ಧೆಗಳು ಎಲ್ಲೆಲ್ಲಿ ಕೇಂದ್ರೀಕೃತವಾಗುತ್ತವೆಯೋ, ಅಲ್ಲೆಲ್ಲಾ ಒಂದಲ್ಲ ಒಂದು ರೀತಿಯ ಒಡಕು, ಅಶ್ರದ್ಧೆ, ಅನುಮಾನಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತವಾದ ಸಂಚು ಈ ಭರತ ಭೂಮಿಯಲ್ಲಿ ಬಹಳ ಕಾಲಗಳಿಂದ ನಡೆಯುತ್ತಲೇ ಇದೆ. ಅತಿ […]

Continue Reading

ಸರಘ್ ಸಾಫ್ಟ್‌ ಟೆಕ್ನಾಲಜೀಸ್ ಗೆ ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್

ದೆಹಲಿ: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ಸಚಿವಾಲಯವು (Ministry of Skill Development and Entrepreneurship – MSDE) ವಿವಿಧ ವಿಭಾಗದ ಉದ್ಯಮಗಳಿಗೆ ಸಂಬಂಧಿಸಿ ನೀಡುವ ಪ್ರತಿಷ್ಠಿತ ‘ನ್ಯಾಷನಲ್ ಎಂಟರ್ಪ್ರೆನರ್ಶಿಪ್ ಅವಾರ್ಡ್’ನ ಈ 2018ರ ಸಾಲಿನ ವಿಜೇತರನ್ನು ಘೋಷಿಸಿದೆ. ಶ್ರೀಮಠದ ಶಿಷ್ಯರ ಸಂಸ್ಥೆಯಾದ Saragh Soft Technologies Pvt. Ltd ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪ್ರಮೋದ್ ಕುಮಾರ್ ಎಂ. ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಶಂಕರ್ […]

Continue Reading

ಶ್ರೀಉದನೇಶ್ವರನಿಗೆ ರಜತ ಛತ್ರ

ಪೆರಡಾಲ: ಪೆರಡಾಲ ವಲಯದ ಈಳಂತೋಡಿ ಘಟಕದ ಪಂಜಿತಡ್ಕ ಶ್ರೀ. ಟಿ.ಕೆ. ನಾರಾಯಣ ಭಟ್ ಮತ್ತು ಮನೆಯವರು ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ದಿನಾಂಕ 16.12.2018, ಬುಧವಾರದಂದು ಧನು ಸಂಕ್ರಮಣ ಜಾತ್ರಾ ಸಂದರ್ಭದಲ್ಲಿ ಬೆಳ್ಳಿಯ ಸತ್ತಿಗೆ ತುದಿಯಲ್ಲಿ ಅಲಂಕರಿಸಲಿರುವ ರಜತ ಛತ್ರವನ್ನು ಸಮರ್ಪಿಸಿದ್ದಾರೆ.   ಶ್ರೀಗುರುಪೀಠಕ್ಕೆ ಬಂದ ಗೊಂದಲ ನಿವಾರಣೆ, ಮಠ ಸಂರಕ್ಷಣೆಗಾಗಿ ಮತ್ತು ಗುರುಪೀಠವು ಪ್ರಕಾಶಮಾನವಾಗಿ ಬೆಳಗಲು, ಸರ್ವರಿಗೂ ಒಳಿತನ್ನು ಅಪೇಕ್ಷಿಸಿ ವಿಶೇಷ ಸಂಕಲ್ಪ ಕೈಗೊಂಡು ಈ ಸೇವೆಯನ್ನು ಅವರು ಸಮರ್ಪಿಸಿದ್ದಾರೆ.   ಮೂಲಕ ಗುರುಸೇವೆಗೈದಿದ್ದಾರೆ. […]

Continue Reading

ಸಂತೋಷವಾಗಿ ಸಾತ್ತ್ವಿಕವಾಗಿ ಸಕಾರಾತ್ಮಕವಾಗಿ ಅಮೃತಮಹೋತ್ಸವದಲ್ಲಿ ಭಾಗವಹಿಸೋಣ – ಶ್ರೀಸಂಸ್ಥಾನ

ಬೆಂಗಳೂರು : ಸಮಾಜಪುರುಷ ಮೈಕೊಡವಿ ಮೇಲೇಳುವ ಕಾಲ ಈ ಹವ್ಯಕ ವಿಶ್ವಸಮ್ಮೇಳನ. ಹನೂಮಂತನ ಹನೂಮತ್ತ್ವವೂ ಪ್ರಕಟವಾಗಿದ್ದು ಒಮ್ಮೆ ಮಾತ್ರ ಅದು ಸಾಗರೋಲ್ಲಂಘನದ ಸಮಯ. ಹಾಗೆಯೇ ಹವ್ಯಕ ಸಮಾಜವು ತನ್ನ ಮಹತ್ತನನ್ನು ಪ್ರಕಟಿಸುವ ಕಾಲ ಸನ್ನಿಹಿತವಾಗಿದೆ. ಅದು ಮೂರುದಿನಗಳ ಮಹೋನ್ನತ ಹಬ್ಬ. ಆ ಐತಿಹಾಸಿಕ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯೂ ಭಾಗಿಯೂ ಆಗಬೇಕು. ಮಹಾನಗರದ ಮೂಲೆಮೂಲೆಯಿಂದ ಗುರಿಕ್ಕಾರರು ಬಂದು ಸೇರಿದ್ದೀರಿ. ನಿವೆಲ್ಲರೂ ತಮ್ಮ ವ್ಯಾಪ್ತಿಯ ಮನೆಗಳಿಗೆ ನಿಮಂತ್ರಣವನ್ನು ನೀಡಿ ಎಲ್ಲ ಆಪ್ತರಿಗೂ ಪ್ರೀತಿಯ ಆಮಂತ್ರಣವನ್ನು ಕೊಡಿ. ಎಂದು ಶ್ರೀಪೀಠದ ನೇರಪ್ರತಿನಿಧಿಗಳಾದ […]

Continue Reading

ವಿಶ್ವ ಹವ್ಯಕ ಸಮ್ಮೇಳನದ ಪ್ರಚಾರಾರ್ಥವಾಗಿ “ಜಾಗೃತಿ ನಡಿಗೆ”

ಡಿಸೆಂಬರ್ 28,29,30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳ ಪ್ರಚಾರಾರ್ಥವಾಗಿ ಮಲ್ಲೇಶ್ವರಂನಲ್ಲಿ ಜಾಗೃತಿ ನಡಿಗೆ (ವಾಕಾಥಾನ್) ನಡೆಯಿತು. ಖ್ಯಾತ ನಾಯಕನಟ ಅಜೇಯ್ ರಾವ್  ಜಾಗೃತಿಯನ್ನು ನಡಿಗೆಗೆ ಚಾಲನೆ ನೀಡಿ ಮಾತನಾಡಿ ; ಹವ್ಯಕ ಸಂಸ್ಕೃತಿ ವಿಶೇಷವಾಗಿದ್ದು, ಆ ಸಂಸ್ಕೃತಿಯ ಆಚಾರ ವಿಚಾರಗಳನ್ನು ಹಾಗೂ ವೈಶಿಷ್ಟ್ಯಗಳನ್ನು ಜಗತ್ತಿಗೆ ಪರಿಚಯಿಸಲು 28 ರಿಂದ 30 ವರೆಗೆ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು […]

Continue Reading

ವಿವಾಹದಲ್ಲಿ ಮಂಗಲ ವಿದ್ಯಾನಿಧಿ ಸಮರ್ಪಣೆ : ಅನುಕರಣಾರ್ಹ ಹೆಜ್ಜೆ ಇಟ್ಟ ಕುಕ್ಕಿಲ ದಂಪತಿ

  ಮಾಣಿ: ಬಾಲ್ಯ ಶಂಕರ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರಿ ಅರ್ಚನಾಳೊಂದಿಗೆ ತಮ್ಮ ಪುತ್ರ ಶ್ರೀನಿಧಿಯ ವಿವಾಹ ಮಹೋತ್ಸವವು ನಡೆದ ಸಂದರ್ಭದಲ್ಲಿ, ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಶ್ರೀ ಶ್ರೀಪ್ರಕಾಶ ಕುಕ್ಕಿಲ ಮತ್ತು ಶ್ರೀಮತಿ ಜಯಲಕ್ಷ್ಮಿ ಕುಕ್ಕಿಲ ದಂಪತಿಯು ಮಂಗಲ ವಿದ್ಯಾನಿಧಿಯನ್ನು ಶ್ರೀಭಾರತೀ ಗುರುಕುಲಂ ಹೊಸನಗರ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ವಿಠಲ ವಿದ್ಯಾಸಂಘ ವಿಟ್ಲ, ಶ್ರೀ ಭಾರತೀ ಸಮೂಹ ಸಂಸ್ಥೆ ನಂತೂರು, ಶ್ರೀರಾಮಚಂದ್ರಾಪುರಮಠ ಸಂರಕ್ಷಣಾ ಸಮಿತಿ ಮತ್ತು ಮಿತ್ತೂರು ಪುರೋಹಿತ ತಿಮ್ಮಯ್ಯ ಪ್ರತಿಷ್ಠಾನ ಈ ಆರು […]

Continue Reading

ಶ್ರೀಸಂಸ್ಥಾನದವರಿಗೆ ‘ಸಮರಸ’ ಟ್ರಸ್ಟಿನ ಯೋಜನೆಯ ರೇಖಾಪ್ರತಿ ಸಮರ್ಪಣೆ

  ಬೆಂಗಳೂರು: ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕಮಂಡಲದ ಕೇಂದ್ರಬಿಂದುವಾಗಿ ಮುಳ್ಳೇರಿಯ – ಬದಿಯಡ್ಕ ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ಶ್ರೀಮಠದ ಅಂಗಸಂಸ್ಥೆಯಾಗಿ ಸಮರಸ ನಿರ್ಮಾಣವಾಗಲಿದೆ.   ಶ್ರೀಮಠದ ಅಂಗಸಂಸ್ಥೆಯಾದ ‘ಸಮರಸ’ ಯೋಜನೆಯ ಭೂಮಿಯ ರೇಖಾಪ್ರತಿಯನ್ನು ಈ‌ ಭಾನುವಾರ, 16.12.2018ರಂದು ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರಿಗೆ ಸಮರ್ಪಿಸಲಾಯಿತು.   ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಶ್ರೀ ಹರಿಪ್ರಸಾದ್ ಪೆರಿಯಾಪ್ಪು, ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದುಕೊಂಡರು.   ಶ್ರೀಸಂಸ್ಥಾನದವರು ಯೋಜನೆಯ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಕಾರ್ಯಸಿದ್ಧಿಯಾಗಲೆಂದು ಅನುಗ್ರಹಿಸಿ ಮಂತ್ರಾಕ್ಷತೆಯನ್ನಿತ್ತು […]

Continue Reading

ಗವ್ಯೋತ್ವನ್ನ ಮಾರಾಟ ಮಳಿಗೆಯ ಶುಭಾರಂಭ

ಮಾಣಿ: ಪೆರಾಜೆಯ ಮಾಣಿಯಲ್ಲಿರುವ ಶ್ರೀರಾಮಚಂದ್ರಾಪುರಮಠದಲ್ಲಿ ಗವ್ಯೋತ್ವನ್ನ ಮಾರಾಟ ಮಳಿಗೆಯು ಶುಭಾರಂಭಗೊಂಡಿದೆ. ದಿನಾಂಕ 04-11-2018ರ ಮಂಗಳವಾರದಂದು ಆರಂಭವಾದ ಗವ್ಯೋತ್ವನ್ನ ಮಾರಾಟ ಮಳಿಗೆಯನ್ನು ಸೇವಾ ಸಮಿತಿಯ ಸದಸ್ಯರಾದ ಶ್ರೀ ಗೋವಿಂದ ಭಟ್ ಮುದ್ರಜೆಯವರು ಉದ್ಘಾಟಿಸಿದರು. ಸೇವಾ ಸಮಿತಿಯ ಕೋಶಾಧಿಕಾರಿ ಮೈಕ್ಕೆ ಶ್ರೀ ಗಣೇಶ್ ಭಟ್ ರವರು ಗವ್ಯೋತ್ಪನ್ನಗಳನ್ನು ಖರೀದಿಸುವ ಮೂಲಕ ಮೊದಲ ಗ್ರಾಹಕರಾದರು.   ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಹಾರಕರೆ ಶ್ರೀ ನಾರಾಯಣ ಭಟ್, ಕಾರ್ಯದರ್ಶಿಗಳಾದ ಬಂಗಾರಡ್ಕ ಶ್ರೀ ಜನಾರ್ದನ ಭಟ್, ಸದಸ್ಯರಾದ ಶ್ರೀ ಗಿರಿಶಂಕರ ಕೈಲಾರು, […]

Continue Reading

ಶ್ರೀಮಠದ ನೂತನ ಕ್ಯಾಲೆಂಡರ್ ಲೋಕಾರ್ಪಣೆ

ಬೆಂಗಳೂರು: ಶ್ರೀಭಾರತೀ ಪ್ರಕಾಶನ ಸಿದ್ಧಪಡಿಸಿದ 2019ನೆಯ ವರ್ಷದ ಕ್ಯಾಲೆಂಡರ್ ಶ್ರೀಸಂಸ್ಥಾನದವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.   ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖಸರ್ವಾಧಿಕಾರಿ ಶ್ರೀ ಟಿ. ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಜಿ. ಭಟ್, ವಿದ್ವಾನ್ ಜಗದೀಶಶರ್ಮಾ, ಶ್ರೀ ಜಯಗೋವಿಂದ್ ಹಾಗೂ ಶ್ರೀಮತಿಅನುರಾಧಾ ಪಾರ್ವತಿ ಉಪಸ್ಥಿತರಿದ್ದರು.

Continue Reading

ವಿಶ್ವ ಹವ್ಯಕ ಸಮ್ಮೇಳನ – ಅಮೃತಮಹೋತ್ಸವ ಕಾರ್ಯಕ್ರಮ – ಮಹಾಸಮಿತಿ ರಚನೆ

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.   ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು […]

Continue Reading

ಕಾಸರಗೋಡು ವಲಯದಲ್ಲಿ ಅಮೃತಪಥ-ಅರ್ಘ್ಯ ಕಾರ್ಯಕ್ರಮ

ಮುಳ್ಳೇರಿಯಾ: ಕಾಸರಗೋಡು ವಲಯದಲ್ಲಿ ಅಮೃತಪಥ, ಅರ್ಘ್ಯ ಕಾರ್ಯಕ್ರಮಗಳು ಗುಡ್ಡೆ ಮಹಾಲಿಂಗೇಶ್ವರ ದೇಗುಲದ ಪರಿಸರದಲ್ಲಿ ದಿನಾಂಕ 02.12.2018ರಂದು ನಡೆದವು. ದೇವಾಲಯದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಪರಿಕ್ರಮಪಥವನ್ನು ಶುಚಿಗೊಳಿಸಲಾಯಿತು. ವಲಯದ 15 ಮಂದಿ ಗುರುಭಕ್ತರು ಈ ಶ್ರಮದಾನದಲ್ಲಿ ಪಾಲ್ಗೊಂಡರು.  

Continue Reading

ಕೊಡಗು ಅತಿವೃಷ್ಟಿ ಸಂತ್ರಸ್ತರಿಗೆ ಸಹಾಯಧನ ವಿತರಣೆ

ಮುಳ್ಳೇರಿಯ: ಗುತ್ತಿಗಾರು ವಲಯದಿಂದ ಕೊಡಗು ಅತಿವೃಷ್ಟಿ ಸಂತ್ರಸ್ತರಿಗಾಗಿ ಧನಸಂಗ್ರಹ ಮಾಡಲಾಗಿತ್ತು. ಹೀಗೆ ಸಂಗ್ರಹವಾದ ₹ 10,250/-ನ್ನು ಕೊಡಗು ಹವ್ಯಕ ವಲಯದ ಮಾಸಿಕ ಸಭೆಯಲ್ಲಿ, ಶ್ರೀಗುರುಗಳ ಆಶೀರ್ವಾದ ರೂಪದಲ್ಲಿ, ದಿ.ಗಣಪತಿ ಭಟ್ಟರ ಮಗ ಶ್ರೀ ಶಶಾಂಕ ಮತ್ತು ಶ್ರೀ ಕೊಲ್ಚರು ವೆಂಕಟ್ರಮಣ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

Continue Reading

ಅಮೃತಪಥಕ್ಕೆ ಚಾಲನೆ : ಸರ್ವಧಾರಿ-ಸೋಮೇಶ್ವರ-ವಿದ್ಯಾರಣ್ಯ ವಲಯಗಳಲ್ಲಿ ಪ್ಲಾಸ್ಟಿಕ್ ಮುಕ್ತ ಪಥ

ಬೆಂಗಳೂರು: ಗೋವುಗಳು ಸಂಚರಿಸುವ ಮಾರ್ಗ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಶ್ರೀಸಂಸ್ಥಾನದವರು ಸಂಕಲ್ಪಿಸಿದ ‘ಅಮೃತಪಥ ‘ ಕಾರ್ಯಕ್ರಮಕ್ಕೆ ಸರ್ವಧಾರಿ, ಸೋಮೇಶ್ವರ, ವಿದ್ಯಾರಣ್ಯ ವಲಯಗಳಲ್ಲಿ ಚಾಲನೆ ನೀಡಲಾಯಿತು.   ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಭಾನುವಾರ ಬೆಳಗ್ಗೆ 7ರಿಂದ 9ಗಂಟೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸ ಎಸೆಯದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಬಿಬಿಎಂಪಿ ಸದಸ್ಯ ಶ್ರೀ ಸೋಮಶೇಖರ್ ಕಾರ್ಯಕರ್ತರ ತಂಡದೊಂದಿಗೆ ಸಂವಾದ ನಡೆಸಿದರು.

Continue Reading

ಮುಳ್ಳೆರಿಯಾ ಹವ್ಯಕ ಮಂಡಲ ಸಭೆ : ಗೋವಿಗಾಗಿ ಮೇವು ಯೋಜನೆಯ ಕುರಿತು ಮಾಹಿತಿ

ಗುತ್ತಿಗಾರು : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಗುತ್ತಿಗಾರು ವಲಯದ ಅಧ್ಯಕ್ಷ ಅಡಿಕೆಹಿತ್ಲು ಶ್ರೀ ಸೀತಾರಾಮ ಭಟ್ ಅವರ ಮನೆಯಲ್ಲಿ 25.11.2018ರಂದು ಜರಗಿತು.   ಮಂಡಲಾಧ್ಯಕ್ಷ ಪ್ರೊ. ಟಿ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆಗೈದು, ಗತಸಭೆಯ ವರದಿಯನ್ನು ಮಂಡಿಸಿದರು. ಕೋಶಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಗಬ್ಲಲಡ್ಕ ಇವರು ಲಕ್ಷ್ಮೀಲಕ್ಷಣದ ಮಾಹಿತಿ ನೀಡಿ ಲೆಕ್ಕಪತ್ರ ಮಂಡಿಸಿದರು. ವಲಯ ಪದಾಧಿಕಾರಿಗಳು ಮತ್ತು ವಿಭಾಗ ಪ್ರಧಾನರು ವರದಿ ನೀಡಿ […]

Continue Reading

ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಗತಿ ವಿದ್ಯಾಲಯದ ಪ್ರತಿಭೆಗಳ ಸಾಧನೆ

ಮೂರೂರು: ಅಂಕೋಲಾದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾಕಾರಂಜಿಯಲ್ಲಿ ಮೂರೂರು ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ‌ ಸಾಧನೆ ತೋರಿದ್ದಾರೆ.   ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿಭಾಗದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕುಮಾರ ಸೃಜನ್ ನಾಯ್ಕ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.   ಪ್ರೌಢಶಾಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಭೈರವ್ ಹೆಗಡೆ ನೀಲ್ಕೋಡ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.   ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಅಧ್ಯಾಪಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿ,ಸಿಬ್ಬಂದಿ ಶುಭಕೋರಿ […]

Continue Reading

ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೇರ್ಲ ಸಮೀಪದ ಬಜಕೊಡ್ಲುವಿನಲ್ಲಿರುವ ಅಮೃತಧಾರ ಗೋಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 18ರಿಂದ 20ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 16ರ ಬೆಳಗ್ಗೆ 9ಗಂಟೆಗೆ ಪ್ರಾರಂಭವಾಗಿ ಜನವರಿ 18ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಬಜಕೊಡ್ಲು ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ […]

Continue Reading

ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ

ಭಾರತೀಯ ಗೋಪರಿವಾರ-ಕರ್ನಾಟಕ ವತಿಯಿಂದ ಈ ಬಾರಿಯ ಪಂಚಗವ್ಯ ಪ್ರಶಿಕ್ಷಣವನ್ನು ಕಲಬುರಗಿ(ಗುಲ್ಬರ್ಗ) ಜಿಲ್ಲೆಯ ಜೀವರ್ಗಿ ತಾಲೂಕಿನ ಗಂವ್ಹಾರದ ಶ್ರೀತ್ರಿವಿಕ್ರಮಾನಂದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಜನವರಿ 4ರಿಂದ 6ರವರೆಗೆ ಮೂರುದಿನಗಳ ಕಾಲ ಪಂಚಗವ್ಯ ಪ್ರಶಿಕ್ಷಣ ನಡೆಯಲಿದೆ. ಜನವರಿ 4ರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ಜನವರಿ 6ರ ಸಂಜೆ 5 ಘಂಟೆಗೆ ಮುಕ್ತಾಯಗೊಳ್ಳುತ್ತದೆ. ★ಪಂಚಗವ್ಯ ಪ್ರಶಿಕ್ಷಣ-ಗಂವ್ಹಾರ ಶಿಬಿರದಲ್ಲಿ… ◆ಗೋವುಗಳ ಪರಿಚಯ ◆ಗವ್ಯ ಉತ್ಪನ್ನಗಳ ಪರಿಚಯ ◆ಗವ್ಯ ಉತ್ಪನ್ನಗಳ ತಯಾರಿಕೆ (ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿ) ◆ಗೋ ಆಧಾರಿತ ಕೃಷಿ ◆ಗೋ ಆಧಾರಿತ […]

Continue Reading

ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ‌ ಸಮ್ಮೇಳನದ ಅಂಗವಾಗಿ “ಕರಕುಶಲ ವಸ್ತು ಪ್ರದರ್ಶನ ಮತ್ತು ಸ್ಪರ್ಧೆ” ಆಯೋಜಿಸಲಾಗಿದ್ದು ಆಸಕ್ತರು ಭಾಗವಹಿಸಲು ಕೋರಲಾಗಿದೆ.

Continue Reading