ಕೊರೋನಾ ಸಂಕಷ್ಟಕ್ಕೆ ಶ್ರೀರಾಮಚಂದ್ರಾಪುರಮಠ ಸ್ಪಂದನೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗುರುವಾರ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷ ರೂಪಾಯಿಗಳ ದೇಣಿಗೆ ನೀಡಲಾಯಿತು. ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್ ಮತ್ತು ಸಂದೇಶ ತಲಕಾಲಕೊಪ್ಪ ಶ್ರೀಮಠದ ಪರವಾಗಿ ದೇಣಿಕೆ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಶ್ರೀಮಠದ ವಿವಿಧ ಅಂಗಸಂಸ್ಥೆಗಳು ಈಗಾಗಲೇ ವಲಸೆ ಕಾರ್ಮಿಕರು ಮತ್ತು ಬಡವರಿಗೆ ಆಹಾರ ಕಿಟ್‍ಗಳನ್ನು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿವೆ. ಶ್ರೀಮಠದ ಭಾರತೀಯ ಗೋ ಪರಿವಾರ ಟ್ರಸ್ಟ್ ವತಿಯಿಂದ ಅಧ್ಯಕ್ಷ ಆರ್.ಕೆ.ಬೆಳ್ಳಾರೆಯವರ ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ […]

Continue Reading

ಶ್ರೀ ರಾಮಚಂದ್ರಾಪುರ ಮಠದಿಂದ ಕಿಟ್ ವಿತರಣೆ

ಶ್ರೀ ರಾಮಚಂದ್ರಾಪುರ ಮಠ ಹೊಸನಗರ ವತಿಯಿಂದ ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೊಳಗಾದ ದಿನಗೂಲಿಯಿಂದ ಜೀವನ ನಡೆಸುವ ೪೮ ಕುಟುಂಬಗಳಿಗೆ ಅಕ್ಕಿ, ಬೇಳೆಕಾಳು, ಬೆಲ್ಲ, ಉಪ್ಪು ಸೇರಿದ ಕಿಟ್ ವಿತರಣೆಯನ್ನು ರಾಮಚಂದ್ರಾಪುರ ಗ್ರಾಮಪಂಚಾಯತಿ ಮುಖಾಂತರ ಶಾಸಕ ಆರಗ ಜ್ಞಾನೇಂದ್ರ ಅವರು ಮಾಡಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಜಟ್ಟಿಮನೆ ಗಣಪತಿ, ವ್ಯವಸ್ಥಾಪಕ ರಾಘವೇಂದ್ರಮಧ್ಯಸ್ಥ, ಮಾಧ್ಯಮ ಸಂಚಾಲಕ ಒಡ್ಡಿನಭೈಲು ವೆಂಟೇಶ, ಜಿಲ್ಲಾ ಪಂಚಾಯತಿ ಸದಸ್ಯ ಸುರೇಶಸ್ವಾಮಿರಾವ್, ತಾಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿ, ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿ ಡಿ ಓ […]

Continue Reading

ಅಕ್ಷಯ ತೃತೀಯೆಯ ಶುಭ ದಿನದಂದು ಸುವರ್ಣ ನಾಣ್ಯಾಭಿಷೇಕ

ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಅಕ್ಷಯ ತೃತೀಯೆಯ ಶುಭ ದಿನದಂದು ಲೋಕಕಲ್ಯಾಣದ ಸಂಕಲ್ಪದಿಂದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಸುವರ್ಣ ನಾಣ್ಯಾಭಿಷೇಕ ಮಾಡಲಾಯಿತು. ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದವರು ಶತರುದ್ರ ಹೋಮವನ್ನು ನೆರೆವೇರಿಸಿದರು. ವೇ. ವಿ. ಸಾಂಬಾ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ಜಗತ್ತಿಗೆ ಬಂದ ಅತ್ಯಂತ ಹೆಮ್ಮಾರಿ ರೋಗವಾದ ಕರೋನಾ ನಿವಾರಣೆಯಾಗಲೆಂದು ಜಗದೀಶ್ವರನಲ್ಲಿ ಪ್ರಾರ್ಥಿಸಿಲಾಯಿತು.

Continue Reading

ಮಂಗನಕಾಯಿಲೆ ಶಾಶ್ವತ ಪರಿಹಾರಕ್ಕೆ ರಾಘವೇಶ್ವರ ಶ್ರೀ ಒತ್ತಾಯ

ಗೋಕರ್ಣ: ವಿಶ್ವದಲ್ಲಿ ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯದ ಮಲೆನಾಡು ಭಾಗದಲ್ಲಿ ಹಾಗೂ ನೆರೆ ರಾಜ್ಯಗಳ ಕೆಲವೆಡೆ ಮಂಗನ ಕಾಯಿಲೆ ವ್ಯಾಪಕವಾಗಿ ಹರಡಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಸ್ವಾಮೀಜಿಯವರು ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲಿ ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ್ದು, 250ಕ್ಕೂ ಹೆಚ್ಚು ಮಂದಿಗೆ ಸೊಂಕು ತಗುಲಿದೆ. […]

Continue Reading

ಧರ್ಮಭಾರತೀ ಎಪ್ರಿಲ್ 2020 ಪತ್ರಿಕೆ

      ಸಸ್ನೇಹ ವಂದನೆಗಳು ದೇಶದೆಲ್ಲೆಡೆ ಹರಡುತ್ತಿರುವ ಕೊರೊನಾ ಮಹಾಮಾರಿಯ ತಡೆಗಟ್ಟುವಿಕೆಗೆ ಮಾನ್ಯ ಪ್ರಧಾನಮಂತ್ರಿಯವರ ಆದೇಶದಂತೆ ದೇಶದಲ್ಲಿ 21 ದಿನ lockdown ಮಾಡಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಧರ್ಮಭಾರತೀ ಎಪ್ರಿಲ್ 2020 ಸಂಚಿಕೆಯು ತಮ್ಮ ಮನೆಗಳಿಗೆ ತಲುಪುವಲ್ಲಿ ವಿಳಂಬವಾದೀತೆಂಬ ಎಂಬ ವಿಚಾರ ಈಗಾಗಲೇ ನಮಗೆಲ್ಲ ತಿಳಿದಿದೆ. ಅಂದರೂ, ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಎಪ್ರಿಲ್ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚಲಿದ್ದೇವೆ. ಅಂಚೆ ವ್ಯವಸ್ಥೆ ಪುನಃ ಕಾರ್ಯಾಚರಿಸಲು […]

Continue Reading

ರಾಮನವಮಿಯ ಚಿತ್ರಗಳು

ಮಹಾಮಾರಿ ಕರೊನಾ ಹಿನ್ನಲೆಯಲ್ಲಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿಯಲ್ಲಿ ರಾಮನವಮಿಯನ್ನು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಸಿದ್ದಾಪುರ ನಿವಾಸಿ ರಾಮಕೃಷ್ಣ ಹೆಗಡೆ ಮತ್ತು ರೇಖ ಆರ್ ಹೆಗಡೆ ದಂಪತಿಗಳ ಪುತ್ರ ರವೀಂದ್ರ ಆರ್. ಹೆಗಡೆ ರಾಮಸೇತು ನಿರ್ಮಾಣದ ಸಮಯ ಅಳಿಲು ಜೊತೆಗೆ ಶ್ರೀರಾಮನ ಚಿತ್ರ ಬಿಡಿಸಿದರು. ಪೆಲತ್ತಡಿ ನಿವಾಸಿ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯ ಪ್ರಭಾ ದಂಪತಿಗಳ ಪುತ್ರಿ ೯ನೇ ತರಗತಿಯ ಶ್ರೀಲಕ್ಷ್ಮೀ ರಾಮನ ಚಿತ್ರ ಹಾಗೂ ಶ್ರೀರಾಮ ಹನುಮನ ಚಿತ್ರವನ್ನು ಬಿಡಿಸಿದರು.

Continue Reading

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಶ್ರೀ ಗೋಪಾಲಕೃಷ್ಣ ಪೂಜೆ, ಗೋಪೂಜೆ, ಭಜನೆ

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪುಣ್ಯ ಯೋಜನೆ ಕಾಮದುಘಾದಡಿಯಲ್ಲಿ ಕಾರ್ಯಚರಿಸುತ್ತಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿಯಂದು ಜರಗುವ ಗೋಪೂಜೆ, ಗೋಪಾಲಕೃಷ್ಣ ಪೂಜೆ ಹಾಗೂ ಭಜನೆ ಸೋಮವಾರ ಸಾಯಂಕಾಲ ೬ ರಿಂದ ವೇ. ಮೂ. ಕೃಷ್ಣ ಭಟ್ಟ ಗುಂಡ್ಯಡ್ಕ ಇವರ ನೇತೃತ್ವದಲ್ಲಿ ಜರಗಿತು. ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆಯು ಈ ಸಂಧರ್ಭದಲ್ಲಿ ಜರಗಿತು.

Continue Reading

ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರ ಬೇಟಿ

ಹೊಸಾಡ ಅಮೃತಧಾರಾ ಗೋಶಾಲೆಗೆ ವಿಜಾಪುರದ ಗೋರಕ್ಷಾ ಕೇಂದ್ರ ಗೋಶಾಲೆಯ ಹಿರಿಯ ಮುಖಂಡರು ಆಗಮಿಸಿ ಗೋಶಾಲೆಯನ್ನು ವೀಕ್ಷಿಸಿದರು. ಅಪಘಾತಕ್ಕೊಳಗಾದ, ಮುದಿ ವಯಸ್ಸಿನ ಮತ್ತು ಕಸಾಯಿಖಾನೆಗೆ ಹೋಗುವ ಗೋವುಗಳನ್ನು ಸಂರಕ್ಷಿಸುತ್ತಿರುವ ಗೋಪಾಲಕರನ್ನು ಮತ್ತು ನಿರ್ವಹಿಸುತ್ತಿರುವ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ವಿಜಾಪುರದ ಗೋ ರಕ್ಷಾ ಕೇಂದ್ರ ಗೋಶಾಲೆಯಲ್ಲಿ ೬೫೦ ಕ್ಕೂ ಹೆಚ್ಚಿನ ಗೋವುಗಳನ್ನು ಸಂರಕ್ಷಿಸಲಾಗುತ್ತಿದ್ದು, ನಾಲ್ಕೈದು ಸಂಸ್ಥೆಗಳು ಸೇರಿ ಈ ಗೋಶಾಲೆಯನ್ನು ನಡೆಸುತ್ತಿದ್ದೇವೆ ರಾಮನ ಗೌಡ ಬಾಪು ಗೌಡ ಪಾಟೀಲ್ ಯತ್ನಾಳ ಅವರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಪ್ರತಿ ತಿಂಗಳು ೭ […]

Continue Reading

ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ

ಮಹಾನಂದಿ ಗೋಲೋಕದಲ್ಲಿ ವಿರಾಜಮಾನನಾಗಿರುವ ಗೋವರ್ಧನಗಿರಿಧಾರಿ ಶ್ರೀಗೋಪಾಲಕೃಷ್ಣನ ಸನ್ನಿಧಿಯಲ್ಲಿ ಪ್ರತೀ ಹುಣ್ಣಿಮೆಯಂದು ಸಂಪನ್ನಗೊಳ್ಳುವ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಕಥಾವಾಚನ ನಡೆದಿರುತ್ತದೆ. ೬ನೇ ತಿಂಗಳಿನ ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ವೇದಮೂರ್ತಿ ಸತೀಶ್ ಭಟ್ ರವರು ವಿಧ್ಯಾರ್ಥಿಗಳಾದ ಭರತ ಹಾಗೂ ಶ್ರೀಹರ್ಷ ಇವರೊಂದಿಗೆ ಸಾಂಗವಾಗಿ ನೆರವೇರಿಸಿಕೊಟ್ಟರು. ಶಿವಮೊಗ್ಗದ ಗುರುರಾಜ್ (ನೆಪ್ಚೂನ್) ದಂಪತಿಗಳ ಯಾಜಮಾನತ್ವದಲ್ಲಿ ನಡೆದಿರುತ್ತದೆ. ಸಮಿತಿಯ ಸದಸ್ಯರುಗಳಾದ ಮಳಲಿ ಅನಂತ ಭಟ್, ಶಂಕರನಾರಾಯಣ ಮಾಗಲು, ಶಂಕರ್ ಭಟ್ ಕಣಿವೆಬಾಗಿಲು, ನೆಲ್ಲುಂಡೆ ನಾಗೇಂದ್ರರಾಯರು ಇವರುಗಳೊಂದಿಗೆ ಗೋಲೋಕದ ಸಿಬ್ಬಂದಿಗಳು, ಗೋಪಾಲಕರು, ಶ್ರೀಮಠದ […]

Continue Reading

ಗೋಶಾಲೆಗೆ ಸಮರ್ಪಣೆ

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ವೆಂಕಟ್ರಮಣ ಕೋಡುಮಾಡು ಅವರು ವೈವಾಹಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಸಂದರ್ಭ ೪೦ ಕಿಲೋ ಹಿಂಡಿಯನ್ನು ಗೋಗ್ರಾಸವಾಗಿ ಸಮರ್ಪಿಸಿದರು.

Continue Reading

ಹೋಳಿಗೆ ಮುರಳಿಗಾಯನ

ಹೊಸಾಡಿನ ಅಮೃತಧಾರಾ ಗೋಶಾಲೆಯಲ್ಲಿ ಹೋಳಿ ಹಬ್ಬದ ಸೂರ್ಯಾಸ್ತದ ಸಂದರ್ಭದಲ್ಲಿ ಗೋಲಾಕೃಷ್ಣ ವಿಗ್ರಹದ ಮುಂಭಾಗದಲ್ಲಿ ಮನಕ್ಕೆ ಮುದ ನೀಡುವ ಮುರಳಿ ಗಾಯನ ಹಾಗೂ ಗೋವುಗಳ ವೀಕ್ಷಣೆ ನಡೆಯಿತು.

Continue Reading

ತುಳುನಾಡಿನ ಸಂಸ್ಕೃತಿ ಅತ್ಯಂತ ಶ್ರೇಷ್ಠ : ಅರವಿಂದ ರೈ ಅರ್ಪಿಣಿಗುತ್ತು

ನಂತೂರು ಮಾ.೮ : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ದಿನಾಚರಣೆಯನ್ನು ಆಯೋಜಿಸಲಾಯಿತು. ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಅರ್ಪಿಣಿಗುತ್ತು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಶ್ರೀ ಭಾರತೀ ವಿದ್ಯಾ ಸಂಸ್ಥೆಯು ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ನೀಡುತ್ತದೆ. ತುಳುನಾಡಿನ ಸಂಸ್ಕೃತಿ ಅತ್ಯಂತ ಶ್ರೇಷ್ಠ. ನಾಡಿನ ಅನೇಕ ಕಡೆಗಳಿಗೆ ತೆರಳಿದಾಗ […]

Continue Reading

ಸಚಿವ ಶಿವರಾಮ ಹೆಬ್ಬಾರ್ ಗೆ ಹವ್ಯಕ ಮಹಾಸಭೆಯಿಂದ ಸನ್ಮಾನ 

ರಾಜ್ಯ ಸರ್ಕಾರದ ನೂತನ ಮಂತ್ರಿಗಳಾಗಿ ಆಯ್ಕೆಯಾಗಿ, ಕಾರ್ಮಿಕ ಮತ್ತು ಸಕ್ಕರೆ ಖಾತೆಯ ಹೊಣೆಯೊಂದಿಗೆ ಸೇವೆಸಲ್ಲಿಸುತ್ತಿರುವ ಹೆಮ್ಮೆಯ ಹವ್ಯಕ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದ್ದು, 10.03.2020   ಮಂಗಳವಾರ ಸಂಜೆ 6.00  ಗಂಟೆಗೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮಹಾಸಭೆಯ ಗೌರವವನ್ನು ಸ್ವೀಕರಿಸಲಿದ್ದು, ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ […]

Continue Reading

ಶಾಸಕ ಅಂಗಾರ ಬೇಟಿ

ಗೋಪಾಲಕೃಷ್ಣ ದೇವಕಿ ಪಶುಸಂಗೋಪನಾ ಕೇಂದ್ರ ಜೇಡ್ಲ ಸಂಪಾಜೆಗೆ ಸುಳ್ಯ ಶಾಸಕರಾದ ಅಂಗಾರ ಅವರು ಬೇಟಿ ನೀಡಿದರು. ಈ ಸಂದರ್ಭದಲ್ಲಿ ಗೋಶಾಲಾ ಸ್ಥಳ ದಾನಿಗಳಾದ ವೆಂಕಟ್ರಮಣಯ್ಯ ಇವರನ್ನು ಗೌರವಿಸಲಾಯಿತು. ಅರಂತೋಡು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಸುಳ್ಯ ಭಾಜಾಪ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹವ್ಯಕ ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್ ಕೆ ಟಿ, ಗೋಶಾಲಾ ಶ್ರೀಸಂಯೋಜಕ ತಿರುಮಲೇಶ್ವರ ಪ್ರಸನ್ನ, ಭಾರತೀಯ ಗೋಪರಿವಾರದ ಅಶೋಕ ಕೆದ್ಲ, ಡಾ. ರವಿ, ಮಧುಗೋಮತಿ, ರಾಮಚಂದ್ರ ಅಜ್ಜಕಾನ ಉಪಸ್ಥಿತರಿದ್ದರು.

Continue Reading

ಇರುವ ಸ್ಥಳ ಪರಿಶುದ್ಧತೆಯನ್ನು ಸೂಚಿಸುತ್ತದೆ – ಗಿರೀಶ್ ಭರದ್ವಾಜ

ಸುಳ್ಯ: ಶ್ರದ್ಧೆಯಿಂದ ಸೇವೆ ಮಾಡಿದರೆ ಸಂಪತ್ತು ಹಾಗೂ ಕೀರ್ತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಯುವ ಸಮುದಾಯ ವಿದೇಶದ ಶೋಕೀ ಜೀವನದಕ್ಕೆ ಮಾರು ಹೋಗದೆ ಸ್ವದೇಶೀ ಸಂಸ್ಕೃತಿಯನ್ನು ಪ್ರೀತಿಸುವ ಕಾರ್ಯ ಮಾಡಬೇಕು. ಮಳೆ ನೀರು ಬೀಳುವ ಸ್ಥಳದ ಮೇಲೆ ಪರಿಶುದ್ಧತೆಯನ್ನು ಪಡೆಯುತ್ತದೆ. ವಿದೇಶಿ ತಳಿಗಳನ್ನು ಬಿಟ್ಟು, ನಮ್ಮ ತಳಿಗಳನ್ನು ಸಾಕಿ ಲಾಭ ಪಡೆಯುವ ಸಮಯ ಈಗ ಬಂದಿದೆ. ದೇಶೀ ದನಗಳಷ್ಟು ನಾಜೂಕು ಪ್ರಾಣಿಗಳು ಬೇರೊಂದಿಲ್ಲ, ಅವುಗಳ ದೇಹವನ್ನು ಸವರುವುದರಿಂದ ನಮ್ಮಲ್ಲಿನ ಒತ್ತಡವನ್ನು ಕಮ್ಮಿಮಾಡಿಕೊಳ್ಳಬಹುದಾಗಿದೆ ಎಂದು ಪದ್ಮಶ್ರೀ ಗಿರೀಶ್ ಭರದ್ವಾಜ […]

Continue Reading

ವ್ಯಕ್ತಿಯ ಸಾಧನೆಗೆ ತಾಯಿಯ ಆಶೀರ್ವಾದದ ಬಲ ಬೇಕು: ಜಶೋದಾ ಬೆನ್ ಮೋದಿ

ಹೊಸನಗರ: ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರಿಗೆ ತಾಯಿಯ ಆಶೀರ್ವಾದ ಬಲ ವಿಶೇಷವಾಗಿತ್ತು. ಪ್ರತಿಯೊಬ್ಬರೂ ಇದನ್ನು ಗಮನಿಸಬೇಕಿದೆ, ಎಲ್ಲಿ ಆಧ್ಮಾತ್ಮಿಕ ಒಲವು ಇದೆಯೋ ಅಲ್ಲಿ ದೈವೀ ಬಲ ಇರಲಿದೆ ಎಂದು ಜಶೋದಾ ಬೆನ್ ಮೋದಿ ಹೇಳಿದರು. ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದ ಆವರಣದಲ್ಲಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ, ಸಹಸ್ರ ಛತ್ರ ಮೆರವಣಿಗೆ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, […]

Continue Reading

ಹೊಸನಗರ ಮಹಾನಂದಿ ಗೋಲೋಕದಲ್ಲಿ ವೈಭವದ ‘ಕೃಷ್ಣಾರ್ಪಣಮ್’ ಸಂಪನ್ನ

  ಹೊಸನಗರ: ಹೊಸನಗರದ ಮಹಾನಂದಿ ಗೋಲೋಕದಲ್ಲಿ ಇಂದು ಪ್ರತಿಷ್ಠಾ ವರ್ಧಂತಿ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣದ ಸಮರ್ಪಣೆಯ ‘ಕೃಷ್ಣಾರ್ಪಣಮ್’ ಕಾರ್ಯಕ್ರಮಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ಸಮ್ಮುಖದಲ್ಲಿ ನಡೆದವು. ಬೆಳಗ್ಗೆ 8 ಗಂಟೆಗೆ ಶ್ರೀಕರಾರ್ಚಿತ ಪೂಜೆ, 10 ಗಂಟೆಗೆ ಶ್ರೀಗುರುಭಿಕ್ಷಾ ಸೇವೆಗಳು ನಡೆದವು. 10:45ಕ್ಕೆ ಗೋಬಂಧಮುಕ್ತಿ ಗೋಶಾಲೆ ಲೋಕಾರ್ಪಣೆ ನಡೆಯಿತು. ಶ್ರೀ ದಿನೇಶ್ ಗುರೂಜಿ ಪಟ್ಟಣಗೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬಳಿಕ ಶ್ರೀಸಂಸ್ಥಾನದವರ ಸಾನಿಧ್ಯದಲ್ಲಿ ಶಿಲಾಸೋಪಾನಮಾಲೆ ಶಿಲಾನ್ಯಾಸ […]

Continue Reading

ಚಿತ್ರ ಸಮರ್ಪಣೆ

ಗೋಸ್ವರ್ಗದಲ್ಲಿ ನಡೆದ ಸರ್ವ ಸೇವಕ ಸಮಾವೇಶದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳವರಿಗೆ ರವೀಂದ್ರ ಹೆಗಡೆ ಅವರು ಬಿಡಿಸಿದ ಚಿತ್ರವನ್ನು ಸಮರ್ಪಿಸಿ ಆಶೀರ್ವಾದ ಮಂತ್ರಾಕ್ಷತೆ ಪಡೆದರು.

Continue Reading

ಸೇವಕತ್ವ ದೇವತ್ವಕ್ಕೆ ಹತ್ತಿರ: ರಾಘವೇಶ್ವರ ಶ್ರೀ

ಸಿದ್ದಾಪುರ : ಸೇವಕತ್ವ ಕನಿಷ್ಟವಲ್ಲ, ಮನುಷ್ಯತ್ವಕ್ಕಿಂತ ಮೇಲಿನ ಮೆಟ್ಟಿಲು, ಅದು ಶ್ರೇಷ್ಠ. ನಾನು ನನಗಾಗಿ ಎಂದು ಸಾಮಾನ್ಯರು ಯೋಚಿಸಿದರೆ ದೇವರು ಅನವರತ ವಿಶ್ವಹಿತ ಚಿಂತನೆ ಮಾಡುತ್ತಾನೆ. ಸಮಾಜಕ್ಕಾಗಿ ಬದುಕುವವರು ದೇವರೇ ಆಗುತ್ತಾರೆ, ಸಾರ್ವಭೌಮನಾದ ಶ್ರೀರಾಮಚಂದ್ರನೂ ತನ್ನ ಬಗ್ಗೆ ಚಿಂತನೆ ನಡೆಸದೇ ಜೀವಕೋಟಿಗಳ ಕಲ್ಯಾಣಕ್ಕಾಗಿ, ಸರ್ವಭೂಮಿಯ ಹಿತಚಿಂತನೆಗಾಗಿ ಕಾರ್ಯ ಮಾಡುತ್ತಾನೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು. ಶ್ರೀರಾಮದೇವ ಭಾನ್ಕುಳಿ ಮಠ ಆವಾರದ ಗೋಸ್ವರ್ಗದಲ್ಲಿ ಹಮ್ಮಿಕೊಂಡಿದ್ದ “ಸರ್ವಸೇವಕ ಸಮಾವೇಶ”ದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವಭೂಮಿಯ ಹಿತಚಿಂತನೆ […]

Continue Reading

ಶ್ರೀರಾಮಚಂದ್ರಾಪುರ ಮಠದಿಂದ ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ

ಗೋಕರ್ಣ: ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ. ತಕ್ಷಶಿಲೆ ವಿವಿ ಮಾದರಿಯಲ್ಲಿ ಇದು ಬೃಹದಾಕಾರವಾಗಿ ಬೆಳೆಯಲಿದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು. ಇಂಥ ವಿದ್ಯಾಸಂಸ್ಥೆ ಕಟ್ಟುವ ಮುನ್ನ ಭದ್ರಕಾಳಿ ಶಿಕ್ಷಣ ಸಂಸ್ಥೆಯಂಥ ಉತ್ತಮ ಸಂಸ್ಥೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು. ಭಾರತೀಯ ಪ್ರಾಚೀನ ಶಿಕ್ಷಣ, ಕಲೆಗಳ ಪುನರುತ್ಥಾನ ನೂತನ ವಿದ್ಯಾಪೀಠದ ಉದ್ದೇಶ ಎಂದು ಹೇಳಿದರು. ಪುರಾತನ […]

Continue Reading