ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ – ಶ್ರೀಸಂಸ್ಥಾನ

ಮಾಣಿ: ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ. ಅದನ್ನು ಮಾಡದಿದ್ದರೆ ಅದು ದೊಡ್ಡ ಲೋಪವಾಗುತ್ತದೆ. ಇಪ್ಪತ್ತು ವರ್ಷದಲ್ಲಿ ತಲೆಮಾರು ಬದಲಾಗಿದೆ; ಇನ್ನು ವಿಳಂಬ ಮಾಡದೇ ಕಾಲಮಿತಿಯಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಸಂಕಲ್ಪ ಇದೀಗ ಕೈಗೂಡುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು. ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ ಮಹಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಶಂಕರರು ದೇಶ ಪರಿವರ್ತನೆ ಮಾಡಲು ಸಾಧ್ಯವಾದದ್ದು ಜ್ಞಾನದ ಬಲದಿಂದ. ಅತ್ಯುತ್ತಮ […]

Continue Reading

ಧಾರಾ ರಾಮಾಯಣದಲ್ಲಿ ವೈಭವದ ಸೀತಾರಾಮ ಕಲ್ಯಾಣ

ಮಿರುಗುವ ಮದುವೆ ಮಂಟಪ, ಪುರೋಹಿತರ ಮಂತ್ರಘೋಷ, ದಶರಥ ಮತ್ತು ಸೀರಧ್ವಜ ದಂಪತಿಗಳು, ರಾಮಾಶ್ರಮದಲ್ಲಿ ಸೀತಾರಾಮರ ವಿವಾಹಮಹೋತ್ಸವದ ಸುಂದರ ಪುಣ್ಯದೃಶ್ಯ. ಒಂದಂಗುಲವೂ ಎಡೆಬಿಡದೆ ಬಂದು ಸೇರಿದ ರಾಮಭಕ್ತರು ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.   ಹೌದು, ಪರಮಪೂಜ್ಯ ಶ್ರೀಸಂಸ್ಥಾನದವರು ಕಳೆದ ೨೦ ದಿನಗಳಿಂದ ಧಾರಾರಾಮಾಯಣವೆಂಬ ಹೆಸರಿನಲ್ಲಿ ರಾಮಕಥೆಯನ್ನು ಅನುಗ್ರಹಿಸುತ್ತಿರುವುದು ನಮಗೆ ತಳಿದಿರುವ ಸಂಗತಿ. ಈ ಮಾಲಿಕೆಯಲ್ಲಿ ಇಂದು ಸೀರಾರಾಮ ವಿವಾಹದ ಕಥೆ ಪ್ರಸ್ತುತವಾಯಿತು. ತದಂಗವಾಗಿ ಕಲ್ಯಾಣೋತ್ಸವವು ನಡೆಯಿತು. ಪ್ರತಿದಿನದಂತೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮನ ವಿವಾಹೋತ್ತರ ಕಥೆಯನ್ನೂ ಪ್ರಸ್ತುತಪಡಿಸಿದರು. ಅಮೃತವರ್ಷಿಣೀ […]

Continue Reading

ಸಲ್ಲದ ಆಸೆ ಹುಟ್ಟಿಕೊಂಡಾಗ ಒಡಕು ನಿಶ್ವಿತ – ಶ್ರೀಸಂಸ್ಥಾನ

ಗಿರಿನಗರ: ಕಾರ್ಯ ಸಾಧನೆಯನ್ನು ವಿಧಿ ಯಾವ ರೂಪದಲ್ಲಾದರೂ ಮಾಡಿಯೇ ಮಾಡುತ್ತದೆ. ಬಲ ಸಜ್ಜನರ ರಕ್ಷಣೆಗೆ ಹೊರತು, ದುರುಪಯೋಗಕ್ಕಲ್ಲ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೆಂಟನೇ ದಿನ ಆಶೀರ್ವಚನ ನೀಡಿದರು.   ಸಲ್ಲದ ಆಸೆ ಹುಟ್ಟಿಕೊಂಡಾಗ ಒಡಕು ನಿಶ್ವಿತ. ಆರಂಭಿಸಿದ ಕೆಲಸವನ್ನು ತುದಿ ಮುಟ್ಟಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇರುತ್ತದೆ. ಗೋವಿನ ಬಗ್ಗೆ ಸಲ್ಲದ ಆಸೆ ಪಟ್ಟರೂ, […]

Continue Reading

ವ್ಯಕ್ತಿಯ ನಡೆ ನುಡಿಗಳಿಂದ ಯೋಗ್ಯತೆಯನ್ನು ತಿಳಿಯಬಹುದು – ಶ್ರೀಸಂಸ್ಥಾನ

ಗಿರಿನಗರ: ಬೇಡುವ ಭಾವ ಇರುವವರೆಲ್ಲಾ ದೇಹಿಗಳಾಗಿರುತ್ತಾರೆ. ಗಗನವೇ ಗಡಿ ಎಂಬಷ್ಟು ಅವಕಾಶಗಳಿರುವ ಸಾಧನೆಗೆ ಆದರ್ಶ ವ್ಯಕ್ತಿಗಳ ಸ್ಫೂರ್ತಿ ಬಹಳಷ್ಟು ಕಾರ್ಯ ಮಾಡುತ್ತದೆ. ಮನಸ್ಸು ಮಾಡಿದರೆ ಎಂಥಹಾ ಪಾತಾಳದಿಂದ ಎದ್ದು ಬರಲು ಸಾಧ್ಯವಿದೆ. ವ್ಯಕ್ತಿಯ ನಡೆ ನುಡಿಗಳಿಂದ ಯೋಗ್ಯತೆಯನ್ನು ತಿಳಿಯಬಹುದು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೇಳನೇ ದಿನ ಆಶೀರ್ವಚನ ನೀಡಿದರು.   ವಿಶ್ವಾಮಿತ್ರರ ಜತೆಗೆ ಮಿಥಿಲೆಯ ಕಡೆಗೆ ಹೋಗುತ್ತಿದ್ದ […]

Continue Reading

ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು – ಶ್ರೀಸಂಸ್ಥಾನ

ಗಿರಿನಗರ: ಪ್ರತಿಜ್ಞೆಯನ್ನು ಪೂರೈಸಿದಾಗ ಎಲ್ಲರಿಗಿಂತ ಮಿಗಿಲಾಗಬಹುದು. ಪ್ರತಿಯೊಂದು ದೇವರಿಗೆ ತಿಳಿಯುತ್ತದೆ ಎಂಬುದು ದೃಢವಾದಾಗ ಒಳ್ಳೆಯವರಾಗುತ್ತೇವೆ. ಮಕ್ಕಳು ಗ್ರಹಿಕೆ ಉಳ್ಳವರಾಗಿದ್ದಾಗ ಮಾತ್ರ ಸೂಕ್ಷ್ಮಗಳು ತಿಳಿಯಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನಾರನೇ ದಿನ ಆಶೀರ್ವಚನ ನೀಡಿದರು.   ನಮ್ಮ ಸಂಪಾದನೆಯಲ್ಲಿ ಪ್ರಕೃತಿ ಸೇರಿ ಪ್ರತಿಯೊಬ್ಬರಿಗೂ ಪಾಲಿದೆ ಎಂಬುದನ್ನು ಅರಿತುಕೊಳ್ಳಬೇಕು. ಗೌರವ ಯಾರಿಗೆ ಎಷ್ಟು ಸಲ್ಲಿಸಬೇಕೋ, ಅಷ್ಟು ಗೌರವ ಕೊಡಬೇಕು. […]

Continue Reading

ತ್ಯಾಗವಿಲ್ಲದೆ ನಾಯಕತ್ವ ಇರಲು ಸಾಧ್ಯವಿಲ್ಲ – ಶ್ರೀಸಂಸ್ಥಾನ

ಗಿರಿನಗರ: ಸಮುದಾಯಕ್ಕೆ ಮುಂದಾಳುತ್ವವಿದ್ದಾಗ ವ್ಯವಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ. ದೈವ ನಿರ್ಣಯದ ಮುಂದೆ ಬೇರಾವುದೂ ಇಲ್ಲ. ಮಾಡುವ ಕಾರ್ಯದಲ್ಲಿ ವಿವೇಚನೆ ಅಗತ್ಯವಿದೆ. ತ್ಯಾಗವಿಲ್ಲದೆ ನಾಯಕತ್ವ ಇರಲು ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಗಿರಿನಗರ ಶ್ರೀರಾಮಾಶ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪದಲ್ಲಿ ನಡೆಯುತ್ತಿರುವ ಧಾರಾರಾಮಾಯಣ ಪ್ರವಚನ ಮಾಲಿಕೆಯ ಹದಿನೈದನೇ ದಿನ ಆಶೀರ್ವಚನ ನೀಡಿದರು.   ದೇಸೀ ತುಪ್ಪದ ಪ್ರಭಾವವನ್ನು ಪುರಾಣ ಕಾಲದಲ್ಲಿ ಕಾಣಬಹುದಾಗಿದೆ. ಮಂತ್ರಿಗಳು ಸಮಾಜದ ಶ್ರೇಯಸ್ಸನ್ನು ಬಯಸುವವರಾಗಿರಬೇಕು. ಬೂದಿಗೂ ಚಿಗುರಿಗೂ ಬಹಳಷ್ಟು ಸಂಬಂಧವಿದೆ. […]

Continue Reading

ಗೋವು ಹಾಲಿಗೇ ಮೀಸಲಾಗಬಾರದು – ಸೂಲಿಬೆಲೆ

ಮಾಲೂರು: ಗೋವು ಹಾಲಿಗೇ ಮೀಸಲು ಆಗದೆ, ಕೃಷಿ ಚಟುವಟಿಕೆಗೆ ಅಗತ್ಯ ಎಂಬುದನ್ನು ಅರಿಯುವ ಕಾರ್ಯವಾಗಬೇಕು. ಕೃಷಿ ಭೂಮಿಗೆ ದೇಸೀ ಗೋವಿನ ಸಗಣಿ ಬೇಕಾದಷ್ಟು ಮಟ್ಟಿಗೆ ಸಿಗುತ್ತಿಲ್ಲವೆಂಬ ಪರಿಸ್ಥಿತಿ ಈಗ ಇದೆ. ಯುವ ಶಕ್ತಿಯನ್ನು ಬಳಸಿಕೊಂಡು ಯುವ ಫಾರ್ಮ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.   ಗೋಶಾಲೆ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ಪಡೆಯಲು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ನಡೆಸಲ್ಪಡುತ್ತಿರುವ ಮಾಲೂರು ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ […]

Continue Reading

ಶರಾವತಿ ತಿರುವು ಅವೈಜ್ಞಾನಿಕ ; ಶ್ರೀಸಂಸ್ಥಾನ

ಬೆಂಗಳೂರು : ಜೂ. 25 ಶರಾವತಿ ನೀರನ್ನು ಬೆಂಗಳೂರಿಗೆ ತರುವ ಪ್ರಸ್ತಾವಿತ ಯೋಜನೆ ಅವೈಜ್ಞಾನಿಕ ಹಾಗೂ ಅತಾರ್ಕಿಕ. ವಿಶ್ವದಲ್ಲೇ ಅತಿವಿರಳ ಜೀವವೈವಿಧ್ಯ ತಾಣ ಎನಿಸಿದ ಪಶ್ಚಿಮಘಟ್ಟ ಪರಿಸರಕ್ಕೆ ಈ ಯೋಜನೆ ಮಾರಕ. ಕಾರ್ಯಸಾಧುವಲ್ಲದ ಈ ಪ್ರಸ್ತಾವಿತ ಯೋಜನೆಯನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದ ಪರಮಪೂಜ್ಯರು ಆಗ್ರಹಿಸಿದ್ದಾರೆ. ಇಂಥ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯ ಬದಲಾಗಿ ಮಳೆ ನೀರು ಕೊಯ್ಲಿನಂಥ ಪರ್ಯಾಯ ವಿಧಾನದ ಮೂಲಕ ರಾಜಧಾನಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ. ಅಭಿವೃದ್ಧಿಗೆ ನಮ್ಮ […]

Continue Reading

24.06.2019

          ವಿಕಾರಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ/ ಕೃಷ್ಣಪಕ್ಷ/‌ಸಪ್ತಮಿ ತಿಥಿ/ ಸೋಮವಾರ/ಪೂರ್ವಾಭಾದ್ರಾ ನಕ್ಷತ್ರ / ದಿನಾಂಕ 24.06.2019  °~•~°~•~°~•~°~•~°~•~° ಮೇಷ          ಕೃಷಿಕರಿಗೆ ಉತ್ತಮ ಬೆಳೆ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಅಭಿವೃದ್ಧಿ ದೊರೆಯಲಿದೆ. ವಿದ್ಯಾರ್ಥಿಗಳು ಉತ್ತಮ ಪರಿಶ್ರಮದಿಂದ ಮುನ್ನಡೆದರೆ ಮಾತ್ರ ಅಭಿವೃದ್ಧಿ ದೊರೆಯಲಿದೆ. ಪರಿಹಾರ : ದೇವಿಯ ಆರಾಧನೆಯಿಂದ ಶುಭ. ಜಪಿಸಲು : ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || °~•~°~•~°~•~°~•~°~•~° […]

Continue Reading

ಧಾರಾ~ರಾಮಾಯಣ ಪ್ರವಚನ ಮಾಲಿಕೆ: ನೇರಪ್ರಸಾರ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಹಾಸಂಕಲ್ಪದಲ್ಲಿ ಶ್ರೀಸಂಸ್ಥಾನದವರು ಧಾರಾ~ರಾಮಾಯಣ ಪ್ರವಚನಮಾಲಿಕೆಯನ್ನು ಗಿರಿನಗರದ ಶ್ರೀರಾಮಾಶ್ರಮದಲ್ಲಿ ಪ್ರಾರಂಭಿಸುತ್ತಿರುವುದು ನಮಗೆಲ್ಲರಿಗೂ ತಿಳಿದೆದೆಯಷ್ಟೇ. ದೂರದೂರಿನವರಿಗೆ, ಬಂದು ಭಾಗವಹಿಸಲು ಸಾಧ್ಯವಿಲ್ಲದವರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದ ಜತೆಗೆ ಇದೊಂದು ಹೊಸ ಪ್ರಯತ್ನ. ಇಂದಿನ ಪ್ರಥಮ ಪ್ರವಚನವನ್ನು 3D view ನಲ್ಲಿ ಅಂತಹವರು ಇದ್ದಲ್ಲಿಂದಲೇ ಕಂಡು ಧನ್ಯರಾಗಬಹುದು! ಈ application ಅನ್ನು download ಮಾಡಿಕೊಳ್ಳಿ, ಇಲ್ಲಿ ಇಂದು ಸಂಜೆ 6.45 ರಿಂದ ಪ್ರವಚನದ ನೇರಪ್ರಸಾರವನ್ನು 3D view ನಲ್ಲಿ ಮಾಡಲಾಗುತ್ತದೆ: https://play.google.com/store/apps/details?id=com.kalpnik.vrdevotee

Continue Reading

ನಿರಂತರ ಗೋಸೇವೆಯಿಂದ ಬ್ರಹ್ಮಜ್ಞಾನಿಯಾಗಲು ಸಾಧ್ಯವಿದೆ : ಶ್ರೀಸಂಸ್ಥಾನ 

ತಳಗೇರಿ: ದೇವರ ಸೊತ್ತನ್ನು ನುಂಗುವುದರಿಂದ ಪಾಪವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಬದುಕಿನಲ್ಲಿ ನಮ್ಮ ಪೂರ್ವ ಕರ್ಮಕ್ಕನುಗುಣವಾಗಿ ಎಲ್ಲವೂ ಬರುತ್ತದೆ. ಗುರುಪರಂಪರೆ ಕೃಪೆ ಮಾಡಿ ದೇವರ ಇಚ್ಛೆ ಇದ್ದಾಗ ಮಾತ್ರ ಸಾತ್ವಿಕ ಅಪೇಕ್ಷೆಗಳು ಈಡೇರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಹೇಳಿದರು. ತಳಗೇರಿ ವಿಜಯಕುಮಾರ್ ನಿವಾಸದಲ್ಲಿ ಭಿಕ್ಷಾ ಸೇವಾ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಒಳ್ಳೆಯ ದಾರಿಯಲ್ಲಿ ಇದ್ದಾಗ ಹಲವು ಶುಭಗಳು ಸೇರಿ ಬರುತ್ತವೆ. ಧರ್ಮ ಯಾವತ್ತಿದ್ದರೂ ದೊಡ್ಡದು, ದ್ರವ್ಯವಲ್ಲ. ಸೇವೆ ತ್ಯಾಗದ ಮೂಲಕ ಧರ್ಮ ಪ್ರಾಪ್ತಿಯಾಗುತ್ತದೆ. ಗೋವನ್ನು […]

Continue Reading

ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯ ಬೆಂಗಳೂರಿನಲ್ಲಿ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ 26ನೇ ಚಾತುರ್ಮಾಸ್ಯ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದ ಆವರಣದಲ್ಲಿ ನಡೆಯಲಿದೆ.   ಜುಲೈ 16ರಂದು ಆರಂಭವಾಗುವ ಚಾತುರ್ಮಾಸ್ಯ ಸೆಪ್ಟೆಂಬರ್ 14ರಂದು ಸಂಪನ್ನವಾಗಲಿದ್ದು, ಈ ಬಾರಿಯ ಚಾತುರ್ಮಾಸ್ಯಕ್ಕೆ ರಾಮಾಯಣ ಚಾತುರ್ಮಾಸ್ಯ ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 14ರಂದು ಶನಿವಾರ ಸೀಮೋಲ್ಲಂಘನ ನಡೆಯಲಿದೆ.   ಶ್ರೀಗಳು ಸನ್ಯಾಸ ಸ್ವೀಕರಿಸಿ 25 ವರ್ಷಗಳನ್ನು ಪೂರೈಸಿದ್ದು, ಈ ಬಾರಿ 26ನೇ ವರ್ಷದ ಚಾತುರ್ಮಾಸ್ಯವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಶಿಷ್ಯರು ಹಾಗೂ ಭಕ್ತರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. […]

Continue Reading

ಮಾಧ್ಯಮಗಳನ್ನು ಧಮನಿಸುತ್ತಿರುವುದು ಖಂಡನೀಯ

ನಾಡಿನ ಹಿರಿಯ ಪತ್ರಕರ್ತರು ಹಾಗೂ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮೇಲೆ ಪತ್ರಿಕಾ ವರದಿಯೊಂದರ ಕಾರಣಕ್ಕಾಗಿ ದೂರು ದಾಖಲಿಸಿರುವುದು ಖಂಡನೀಯವಾಗಿದ್ದು,  ಪತ್ರಿಕಾರಂಗದ ಮೇಲಿನ ಈ ದಮನಕಾರಿ ನೀತಿಯನ್ನು ಶ್ರೀ ಅಖಿಲ ಹವ್ಯಕ ಮಹಾಸಭೆ ಖಂಡಿಸುತ್ತದೆ.   ಉಪಲಬ್ಧವಾದ ಮಾಹಿತಿಯನ್ನಾಧರಿಸಿ ವರದಿಗಳನ್ನು ಪ್ರಕಟಿಸುವುದು ಮಾಧ್ಯಮಗಳಲ್ಲಿ ಸರ್ವೇಸಾಮಾನ್ಯ. ಸುದ್ದಿ ಮೂಲವನ್ನಾಧರಿಸಿದ ಪತ್ರಿಕಾ ವರದಿ ಪ್ರಕಟಿಸಿದ ಮಾತ್ರಕ್ಕೆ ವಿವಿಧ ಸೆಕ್ಷನ್’ಗಳಡಿಯಲ್ಲಿ ದೂರು ದಾಖಲಿಸಿ ; ಪತ್ರಿಕೆಯನ್ನು ಯಾ ಪತ್ರಕರ್ತರನ್ನು ಪ್ರತಿಬಂಧಿಸಲು ಉದ್ಯುಕ್ತವಾಗಿರುವುದು ಆಡಳಿತ ಪಕ್ಷಕ್ಕೆ ಶೋಭೆತರುವಂತದ್ದಲ್ಲ. […]

Continue Reading

ನಾದಬ್ರಹ್ಮ ದಿವಂಗತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ

ಸಭೆ ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆಯಿತು. ಯಕ್ಷಗಾನಕ್ಷೇತ್ರದ ಭಾಗವತಿಕೆಯಲ್ಲಿ ಮಹೋನ್ನತ ಸಾಧನೆಗೈದ ನೆಬ್ಬೂರು ಭಾಗವತರು ಹವ್ಯಕ ಸಮಾಜದ ಹೆಮ್ಮೆಯಾಗಿದ್ದು, ಪುಷ್ಪಾಂಜಲಿ, ಕಾವ್ಯಾಂಜಲಿ, ಭಾವಾಂಜಲಿ ಹಾಗೂ ನಾಟ್ಯಾಂಜಲಿ ಎಂಬ ವಿವಿಧ ಪ್ರಾಕಾರಗಳ ಮೂಲಕ ನೆಬ್ಬೂರರನ್ನು ಸ್ಮರಿಸಿ ಅವರಿಗೆ ಅರ್ಥಪೂರ್ಣವಾದ ಶ್ರದ್ಧಾಂಜಲಿ ಸಲ್ಲಿಸಲಾಯಿತು.   ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಎಂ ಎ ಹೆಗಡೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಅಧ್ಯಕ್ಷತೆವಹಿಸಿದ್ದರು.   ಯಕ್ಷಗಾನ ಚಿಂತಕ ಹುಕ್ಲಮಕ್ಕಿ ಶ್ರೀಪಾದ […]

Continue Reading

ಹಲಸು ಮೇಳ ಸಿದ್ಧತಾ ಚಿಂತನೆ ಸಂಪನ್ನ

ಬದಿಯಡ್ಕ, 15.05.2019 : ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ನಡೆದಯುತ್ತಿರುವ ಅನನ್ಯ ವಿಶಿಷ್ಟ ಯೋಜನೆಯಾದ ಕಾಮದುಘಾದ ಅಡಿಯಲ್ಲಿ ಮುನ್ನಡೆಯುತ್ತಿರುವ ಬಜಕೂಡ್ಲುವಿನ ಅಮೃತಧಾರಾ ಗೋಶಾಲೆಗೆ ನಿರಂತರ ಆಹಾರ ವ್ಯವಸ್ಥೆಯನ್ನು ಪೂರೈಸುವ ಯೋಜನೆಗೆ ಪೂರಕವಾಗಿ ಹಲಸುಮೇಳವನ್ನು ಆಯೋಜಿಸಲಾಗುತ್ತಿದೆ. ಜೂನ್ 8 ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ, ಅಮೃತಧಾರಾ ಗೋಶಾಲೆ ಬಜಕ್ಕೂಡ್ಲು ಪೆರ್ಲ, ಮತ್ತು ಮಹಿಳೋದಯ ಬದಿಯಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ “ಹಲಸು ಬೆಳೆಸಿ ಗೋವು ಉಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜರಗಲಿರುವ ಈ ಹಲಸು ಮೇಳದ ಯಶಸ್ಸಿಗಾಗಿ […]

Continue Reading

ಆಲಕ್ಕೋಡ್ನಲ್ಲಿ ಶ್ರೀಮದ್ಭಾಗವತ ಸಪ್ತಾಹಯಜ್ಞ

ಆಲಕ್ಕೋಡ್ ಗೋಕುಲದ ವಿಷ್ಣುಪ್ರಸಾದ್ ಹೆಬ್ಬಾರ್ ಇವರ ‘ ಪರಂಪರಾ ‘ ಎಂಬ ಹೊಸ ಮನೆಯಲ್ಲಿ 17.05. 2019 ಸಾಯಂ 6 ಗಂಟೆಗೆ : ಶೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಗೆ ಪೂರ್ಣಕುಂಭ ಸ್ವಾಗತ 18.05.2019   ಮಧ್ಯಾಹ್ನ 12 ಗಂಟೆ ಆಶೀರ್ವಚನ : ಶೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು , ಶ್ರೀ ರಾಮಚಂದ್ರಾಪುರ ಮಠ ಹೊಸನಗ.   ಗೋಕುಲಂ, ಆಲಕ್ಕೋಡ್, P.O. ಪಾಕ್ಕಂ. ಬೇಕಲ ಕೋಟೆ, ಕಾಸರಗೋಡು 9446423641 9447413641 9495703296

Continue Reading

ಮಂಡಲಸಭೆಯಲ್ಲಿ ಶ್ರೀಮಾತಾಪ್ರಶಸ್ತಿಭೂಷಿತೆಗೆ ಮತ್ತು ಪೀಯೂಸೀ ವಾಣಿಜ್ಯ ಪ್ರತಿಭೆಗೆ ಸಮ್ಮಾನದ ಗೌರವ

ಈ ತಿಂಗಳ ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯಲ್ಲಿ ನೆರವೇರಿತು. ಕೊಡಗು ಹವ್ಯಕ ವಲಯಾಧ್ಯಕ್ಷ ಡಾ. ರಾಜಾರಾಮ ಭಟ್ಟ ಅವರ ನಿವಾಸದಲ್ಲಿ ಜರುಗಿದ ಮಾಸಿಕ ಸಭೆಯು ದೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ಟ ಸರ್ಪಮಲೆಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಗತಸಭೆಯ ವರದಿ ನೀಡಿದರು. ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನರು ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ […]

Continue Reading

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶ

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ಆಯೋಜಿಸಿದ್ದ ವಿಷು-ವಿಶೇಷ ಸ್ಪರ್ಧೆ -೨೦೧೯ರ ಫಲಿತಾಂಶವು ಪ್ರಕಟಗೊಂಡಿದ್ದು, ಮೇ-೫ರಂದು ಕಾವು ಜನಮಂಗಲ ಸಭಾಭವನದಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು. ಫಲಿತಾಂಶದ ವಿವರವನ್ನು ಮಾಧ್ಯಮ ಪ್ರಕಟಣೆಗಾಗಿ ಲಗತ್ತಿಸಿದೆ.

Continue Reading

ಈಶಾವಾಸ್ಯಂ ನಿವಾಸದಲ್ಲಿ ಪ್ರತಿರುದ್ರ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆ ಸಂಪನ್ನ

ನೀರ್ಚಾಲು: ಶ್ರೀಸಂಸ್ಥಾನದವರ ಅನುಗ್ರಹ ಆಶೀರ್ವಾದಗಳೊಂದಿಗೆ ಮಂಗಳೂರು ಹೋಬಳಿಯ ಮುಳ್ಳೇರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ. ಬಾಲಕೃಷ್ಣ ಪ್ರಸಾದರ ನಿವಾಸ ಈಶಾವಾಸ್ಯಂ ನಲ್ಲಿ 02.04.2019ರಂದು ಶ್ರೀಮಠ ರಕ್ಷಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಸಂಪನ್ನವಾಯಿತು. ಮಹಾಮಂಡಲಾಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು ಧ್ವಜಾರೋಹಣ ಮಾಡಿ, ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಮಂಗಳೂರು ಉಪ್ಪಿನಂಗಡಿ ಮುಳ್ಳೇರಿಯಾ ಹವ್ಯಕ ಮಂಡಲಗಳಿಂದ ಬಂದು ಸೇರಿದ ರುದ್ರಾಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು. ಮಾತೃ ವಿಭಾಗದವರಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆಯು ಜರಗಿತು. […]

Continue Reading

ನಕಲಿ ಅಶ್ಲೀಲ ಸಿಡಿ ಕೇಸ್ – ಚಾರ್ಜ್’ಶೀಟ್ ರದ್ಧತಿಗೆ ನಕಾರ ; ತನಿಖೆ ಮುಂದುವರಿಸಲು ಆದೇಶ

ನಕಲಿ ಅಶ್ಲೀಲ ಸಿಡಿ ತಯಾರಿಸಿ; ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್’ಶೀಟ್ ರದ್ಧತಿಗೆ ಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಿದೆ.   2010 ರಲ್ಲಿ ಪೂಜ್ಯ ಶ್ರೀಗಳನ್ನು ಹೋಲುವ ವ್ಯಕ್ತಿಗೆ ಶ್ರೀಗಳಂತೆ ಉಡುಗೆತೊಡುಗೆಯನ್ನು ತೊಡೆಸಿ, ಶ್ರೀಗಳಂತೆ ಹಾವ-ಭಾವಗಳ ಅಭ್ಯಾಸ ಮಾಡಿಸಿ; ಚಿತ್ರೀಕರಣ ಮಾಡಲಾಗಿತ್ತು. ವೈದಿಕ ವೃತ್ತಿಯಲ್ಲಿರುವ ಆರೋಪಿಗಳು, ತಮ್ಮ ಮಧ್ಯೆ ನಡೆಸಿದ ಸಂಭಾಷಣೆಗಳು, […]

Continue Reading