ನಂತೂರು ಶ್ರೀ ಭಾರತೀ ಕಾಲೇಜಿನ ವಿದ್ಯಾರ್ಥಿಗಳು ಆಪದ್ಭಾಂಧವರಾದರು!

ನಂತೂರು: ರಕ್ತದಾನದ ಮಹಾಕಾರ್ಯದಲ್ಲಿ ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ತೊಡಗಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.   ಅನಾರೋಗ್ಯದಿಂದ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುವ ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ಹೊದಿಕೆಶಿರೂರು ಘಟಕದ ಗುರಿಕ್ಕಾರರಾದ ಗಣಪತಿ ಹೆಗಡೆಯವರು ಅವರಿಗೆ ತುರ್ತಾಗಿ ೫ ಯೂನಿಟ್ ರಕ್ತದ ಆವಶ್ಯಕತೆಯಿದೆ ಎಂಬ ವಿಚಾರವನ್ನು ಶ್ರೀರಾಮಚಂದ್ರಾಪುರಮಠದ ಶಾಸ್ತ್ರಿಗಳಾದ ವಿನಾಯಕ ಶಾಸ್ತ್ರಿಗಳು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅವರಿಗೆ ತಿಳಿಸಿದ್ದರು. ಇದರಂತೆ ಕಾರ್ಯ ಪ್ರವೃತ್ತರಾದ ಶ್ರೀಕೃಷ್ಣ ನೀರಮೂಲೆ […]

Continue Reading

ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ: ಶ್ರೀರಾಮಚಂದ್ರಾಪುರ ಮಠ ಕೊಡುಗೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂದಾರು- ಮೊಗ್ರು ಗ್ರಾಮದ ಪ್ರವಾಹ ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸುವ ಮಹತ್ವದ ಯೋಜನೆಯನ್ನು ಶ್ರೀರಾಮಚಂದ್ರಾಪುರ ಮಠ ಇಂದು ಪ್ರಕಟಿಸಿದೆ.   ಬೆಳ್ತಂಗಡಿ ತಾಲೂಕಿನ ಬಂದಾರು- ಮೊಗ್ರು ಗ್ರಾಮಗಳ ಸಂಪರ್ಕ ಸೇತುವಾಗಿದ್ದ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಈ ಗ್ರಾಮಗಳ ಹತ್ತಾರು ಮಕ್ಕಳು ಶಾಲೆಗಳಿಗೆ ತೆರಳಲು ಸಾಧ್ಯವಾಗದೇ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿತ್ತು. ನೇತ್ರಾವತಿ ನದಿಗೆ ಮುಗೇರಡ್ಕ ಎಂಬಲ್ಲಿ ಅಡ್ಡಲಾಗಿ ಕಟ್ಟಿದ್ದ ತೂಗುಸೇತುವೆ ಈ ತಿಂಗಳ 8ರಂದು ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. […]

Continue Reading

ರಾಮಚಂದ್ರಾಪುರ ಮಠದಿಂದ ಸಂತ್ರಸ್ತರ ಪರಿಹಾರ ಕೇಂದ್ರ

ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಬಳಿ ಇರುವ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸ್ವ-ಇಚ್ಛೆಯಿಂದ ಆರಂಭಿಸಿದೆ. ಯಾವುದೇ ಸರ್ಕಾರಿ ನೆರವು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನ ಕರ್ತವ್ಯ ಎಂದು ಭಾವಿಸಿ ಈ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.   ಗಿರಿನಗರದ ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿರುವ ಅವರು, ಶನಿವಾರ ಆಶೀರ್ವಚನದಲ್ಲಿ ಈ ವಿಷಯ ಪ್ರಕಟಿಸಿದರು.   ರಾಜ್ಯದ ಜನ ಭೀಕರ ಪ್ರವಾಹದಿಂದ […]

Continue Reading

ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸಲು ಶಿಷ್ಯಕೋಟಿಗೆ ಶ್ರೀಸಂಸ್ಥಾನ ಕರೆ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಶ್ರೀಮಠದ ಶಿಷ್ಯರು, ಭಕ್ತರು ಹಾಗೂ ಅಭಿಮಾನಿಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದ್ದಾರೆ.   ಇದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯ; ನೊಂದವರ ಬದುಕನ್ನು ಕಟ್ಟಿಕೊಡಲು, ನಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಮರ್ಪಿಸಬೇಕಾದ ಹೊತ್ತು. ಆದ್ದರಿಂದ ಶ್ರೀಮಠದ ಶಿಷ್ಯಭಕ್ತರೆಲ್ಲರೂ ತಮ್ಮಲ್ಲಿರುವುದನ್ನು ಸಮರ್ಪಿಸಿ ಮಾನವೀಯತೆ ಮೆರೆಯಬೇಕು ಎಂದು ಶಿಷ್ಯಕೋಟಿಗೆ ಕರೆ ನೀಡಿದ್ದಾರೆ.   ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಮೂಲಕ ನಿಮ್ಮೊಂದಿಗೆ […]

Continue Reading

ಗೋವುಗಳ ಮೂಲಕ ಆರ್ಥಿಕ ಸ್ಥಿತಿಯ ಬೆಳವಣಿಗೆ ಆಗಬೇಕು – ಪ್ರೊ. ವೈದ್ಯನಾಥನ್

ಮಾಲೂರು: ಭಾರತೀಯ ಕೃಷಿ ಪದ್ದತಿಗೆ ಮೂಲಾಧಾರ ಗೋವು. ಗೋಸಾಕಣೆಯ ಮೂಲಕ ರಾಸಾಯನಿಕ ಕೃಷಿಯಿಂದ ದೂರವಾಗಿ, ಸಾವಯವ ಕೃಷಿಯನ್ನು ನಡೆಸುವ ಅನಿರ್ವಾಯತೆ ಇದೆ. ಗೋವುಗಳ ಮೂಲಕ ಆರ್ಥಿಕ ಸ್ಥಿತಿಯ ಬೆಳವಣಿಗೆ ಆಗಬೇಕಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಕಾರ್ಯವಾಗಬೇಕಾಗಿದೆ ಎಂದು ನ್ಯಾಷನಲ್ ಸೆಕ್ಯುರಿಟಿ ಬೋರ್ಡ್ ಸದಸ್ಯ, ಐಐಎಂಬಿ ಪ್ರೊ. ಆರ್. ವೈದ್ಯನಾಥನ್ ಹೇಳಿದರು. ಅವರು ಮಾಲೂರು ಗಂಗಾಪುರ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಪಾಲ್ಸ್ ಸಂಸ್ಥೆಯ ವತಿಯಿಂದ ದೇಸೀ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆದ ಐ ಲೈವ್, ಐ ಕೇರ್, ಐ […]

Continue Reading

ಕಸಾಯಿಗೆ ಹೋಗುವ ಗೋವುಗಳ ರಕ್ಷಣೆ ಮಾಡಿದ ಗೋಸಂಜೀವಿನಿ

ಕಾಸರಗೋಡು: ಬಕ್ರೀದ್ ಹಿನ್ನೆಲೆಯಲ್ಲಿ ಕಸಾಯಿಗೆಂದು ಮಧ್ಯವರ್ತಿಯೊಬ್ಬ ಆಂಧ್ರ ಪ್ರದೇಶದಿಂದ ತರಿಸಿ ರಸ್ತೆ ಬದಿಯಲ್ಲಿ ಕಟ್ಟಿದ್ದ ಓಂಗೋಲ್ ತಳಿಯ 5 ಹೋರಿಗಳನ್ನು ಶ್ರೀರಾಮಚಂದ್ರಾಪುರ ಮಠದ ಗೋ ಸಂಜೀವಿನಿ ವಿಭಾಗದಿಂದ ಖರೀದಿಸುವ ಮೂಲಕ ರಕ್ಷಿಸಲಾಯಿತು.   ಕಾಸರಗೋಡು ಬೇಕಲ ಸಮೀಪದ ಚಿತ್ತಾರಿಯ ರಸ್ತೆ ಬದಿಯಲ್ಲಿ ಅಮಾನುಶವಾಗಿ ಗೋವುಗಳನ್ನು ಕಟ್ಟಿರುವ ವಿಚಾರವನ್ನು ಗಮನಿಸಿದ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿರ್ದೇಶನದ ಮೇರೆಗೆ ವಿಷ್ಣು ಪೂಚೆಕ್ಕಾಡು ಅವರ ಉಸ್ತುವಾರಿಯಲ್ಲಿ ರಕ್ಷಣೆ ಮಾಡಲಾಯಿತು.   ಗೋಪ್ರೇಮಿಗಳಿಂದ ದೇಣಿಗೆ ಸಂಗ್ರಹಿಸುವ ಮೂಲಕ […]

Continue Reading

ಸಮಾಜ ಸೇವೆಯ ಮೂಲಕ ಶಿಕ್ಷಣ : ಪ್ರೊ. ವೇದವ್ಯಾಸ ರಾಮಕುಂಜ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳು ಗದ್ದೆ ನಾಟಿ ಮಾಡುವುದರ ಮುಖಾಂತರ ಕುರ್ನಾಡು ಗ್ರಾಮದ ಅಂಗಣೆಮಾರು ಎಂಬಲ್ಲಿ ನಡೆಯಿತು.   ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸಮಾಜ ಸೇವೆಯ ಮೂಲಕ ಶಿಕ್ಷಣ ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ರಾಷ್ಟ್ರೀಯ ಸೇವಾ ಯೋಜನೆ ಮುನ್ನಡೆಯುತ್ತಿದೆ ಎಂದರು. ರಾ.ಸೇ.ಯೋ. […]

Continue Reading

ಚಾತುರ್ಮಾಸ್ಯ ಚಿತ್ರ ಸ್ಪರ್ಧೆ ಫಲಿತಾಂಶ

ಬಾಲ ವಿಭಾಗದಲ್ಲಿ ಪ್ರಥಮ ಪೂರ್ಣ ಹೆಸರು: ದಿಶಾ ಹೆಬ್ಬಾರ್ ತಂದೆ-ತಾಯಿ ಹೆಸರು: ದತ್ತಾತ್ರೇಯ ಹೆಬ್ಬಾರ್ – ಸೀಮಂತಿನಿ ಹೆಬ್ಬಾರ್ ಕಲಿಯುವ ಶಾಲೆ: ಜೈ ಗೋಪಾಲ್ ಗಾರೋಡಿ ಯರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ರಾಮಮೂರ್ತಿ ನಗರ   ದ್ವಿತೀಯ ಪೂರ್ಣ ಹೆಸರು: ಅನ್ವಿತಾ ಸಾವಿತ್ರಿ ತಂದೆ-ತಾಯಿ ಹೆಸರು: ಮುರಳಿಕೃಷ್ಣ ಕುಕ್ಕುಪುಣಿ – ಡಾ. ಚೈತ್ರಲಕ್ಷ್ಮಿ ಕಮ್ಮಚೆ ಕಲಿಯುವ ಶಾಲೆ: ಶ್ರೀವಾಣಿ ವಿದ್ಯಾಕೇಂದ್ರ, ರಾರಾಜಿನಗರ, ಬೆಂಗಳೂರು   ಮೆಚ್ಚುಗೆ ಪೂರ್ಣ ಹೆಸರು: ಅಭಿರಾಮ್ ಎಸ್ ಭಟ್ ತಂದೆ – ತಾಯಿ: ಸುರೇಶಕುಕ್ಕಾಜೆ – […]

Continue Reading

ವಿವಿಧ ಕಡೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಬೆಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.   ಕಾರ್ಗಿಲ್ ಯುದ್ದಧಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರಾಗಿರುವ ಶ್ರೀಧರ್ ಭಟ್ಟ ಬೀಡ್ ಬೈಲ್ ಮಾತನಾಡಿ ಸೈನಿಕರು ದೇಶಕ್ಕಾಗಿ ೨೪ ಗಂಟೆಯೂ ಕೆಲಸ ಮಾಡ್ತಾರೆ. ಕೊರೆವ ಚಳಿ ಹಿಮಪಾತ ಯಾವುದನ್ನೂ ಲೆಕ್ಕಿಸದೇ ದೇಶ ಸೇವೆ ಮಾಡುತ್ತಾರೆ. ಭಾರತೀಯ ಸೇನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡಿಸಿದ ಅವರು ಸೈನಿಕರನ್ನೂ, ದೇಶವನ್ನೂ ಗೌರವಿಸಬೇಕೆಂದು ತಿಳಿಸಿದರು.   ಶ್ರೀಧರ್ ಭಟ್ಟ ಬೀಡ್ ಬೈಲ್ ಅವರನ್ನು ಗೌರವಿಸಲಾಯಿತು. ವಕೀಲ ಗೋವಿಂದ ರಾಜ […]

Continue Reading

ಸಂಸ್ಕೃತಿಯುಕ್ತ ಶಿಕ್ಷಣ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ: ಆರತಿ ಆಳ್ವ

ನಂತೂರು: ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಗುರಿಯನ್ನು ತಲುಪಲು ಸಾಧ್ಯ. ಸಂಸ್ಕೃತಿಯುಕ್ತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ನೀಡುವ ಭಾರತೀ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ. ಸಂಸ್ಕೃತಿಯುಕ್ತ ಶಿಕ್ಷಣ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆರ್.ಆಳ್ವ ಹೇಳಿದರು.   ಅವರು ಮಂಗಳವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಸಾಂಸ್ಕೃತಿಕ ಸಂಘ ಕಲಾಭಾರತಿಯನ್ನು […]

Continue Reading

ಭಾರತೀಯ ಸಂಸ್ಕೃತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

ಬೆಂಗಳೂರು: ಶ್ರೀಶಂಕರ ಪೀಠದ ಸಂಕಲ್ಪ- ಧ್ಯೇಯಕ್ಕೆ ಬದ್ಧರಾಗುವುದೇ ನಿಜವಾದ ಸೇವೆ. ವರ್ಧಂತಿ ಉತ್ಸವದ ಈ ಸಂದರ್ಭದಲ್ಲಿ ಭಾರತೀಯ ಪರಂಪರೆ- ಸಂಸ್ಕೃತಿ, ಧರ್ಮದ ವರ್ಧಂತಿಗೆ ಪಣ ತೊಡೋಣ ಎಂದು ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಕರೆ ನೀಡಿದರು.   ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶುಕ್ರವಾರ (ಜುಲೈ ೧೯) ನಡೆದ ಶ್ರೀಗಳ ವರ್ಧಂತ್ಯುತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.   ಶ್ರೀಗುರುಗಳ, ಪೀಠದ ಸೇವೆಯಿಂದ ನಿಮಗೆ ಸಂತಸ, ಸಾರ್ಥಕತೆ ಸಿಗುವುದಾದರೆ ಇನ್ನಷ್ಟು ಸೇವೆ ಮಾಡಿ; ಒಂದು ದಿನ […]

Continue Reading

ಪುಸ್ತಕ ಬಿಡುಗಡೆ, ಭಿಕ್ಷಾಸೇವೆ

ಗಿರಿನಗರ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ರಾಮಾಯಣ ಚಾತುರ್ಮಾಸ್ಯದ ಎರಡನೇ ದಿನವಾದ ಬುಧವಾರ ಗಿರಿನಗರದ ಶ್ರೀ ರಾಮಾಶ್ರಮ ಆವರಣದಲ್ಲಿ ಶ್ರೀ ಪರಿವಾರದವರಿಂದ ಭಿಕ್ಷಾಸೇವೆ, ಕಾಮಧೇನು ಪೂಜೆ, ಶ್ರೀಕರಾರ್ಚಿತ ಪೂಜಾ ಸೇವೆಗಳು ನಡೆದವು.   ಇದೇ ಸಂದರ್ಭದಲ್ಲಿ ಭಾರತೀಪ್ರಕಾಶನ ಹೊರತಂದಿರುವ ಶ್ರೀಲಕ್ಷ್ಮೀನೃಸಿಂಹ ಸ್ತೋತ್ರ ಪುಸ್ತಕ ಬಿಡುಗಡೆ ನಡೆಯಿತು. ಭಿಕ್ಷಾಂಗಸೇವೆ ಅಂಗವಾಗಿ ರಾಮಾಯಣ ರಾಮಾರ್ಪಣ ಕೃತಿಯನ್ನು ಸಮಸ್ತ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು.   ಶ್ರೀಚರಣ ಖಂಡದ ಶ್ರೀಸಂಯೋಜಕ ಸತ್ಯ ಸಿಗಂದೂರು, ಸಂಯೋಜಕ ಸಂತೋಷ್, ಶ್ರೀ ಪರಿವಾರದ ಪ್ರಮುಖರಾದ […]

Continue Reading

ಶ್ರೀರಾಮಚಂದ್ರಾಪುರಮಠಕ್ಕೆ ಮತ್ತೊಮ್ಮೆ ಜಯ

ಬೆಂಗಳೂರು: ಗಿರಿನಗರ ಪುನರ್ವಸು ಜಾಗಕ್ಕೆ ಸಂಬಂಧಿಸಿ; ವಿಶ್ವಭಾರತೀ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಮಾಡಿದ್ದ ಮೇಲ್ಮನವಿಯನ್ನು ಬುಧವಾರ ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.   ಗಿರಿನಗರ ಶಾಖಾ ಮಠದ ಜಾಗಕ್ಕೆ ಸಂಬಂಧಿಸಿದ ವಿಚಾರಣೆಗೆ ತನ್ನನ್ನು ಪ್ರತಿವಾದಿಯಾಗಿ ಪುರಸ್ಕರಿಸಬೇಕು ಎಂದು ವಿಶ್ವಭಾರತೀ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಮಾಡಿದ್ದ ಮೇಲ್ಮನವಿಯು ರಾಜ್ಯ ಉಚ್ಚನ್ಯಾಯಾಲಯದ ದ್ವಿಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ವಿಶ್ವಭಾರತೀ ಸೊಸೈಟಿಯವರು ಪ್ರಕರಣದಿಂದ ಹಿಂದೆ ಸರಿದಿದ್ದರಿಂದ ಪ್ರಕರಣವು ವಜಾಗೊಂಡಿತು. ಈ ಹಿಂದೆ ಇದೇ […]

Continue Reading

ಭಾರತತ್ವ ಉಳಿಸಲು ವಿಶ್ವವಿದ್ಯಾಪೀಠ ಸ್ಥಾಪನೆ: ಶ್ರೀಸಂಸ್ಥಾನ

ಬೆಂಗಳೂರು: ದೇಶದ ಭಾರತತ್ವವನ್ನು ಉಳಿಸುವ ಸಲುವಾಗಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ಹೆಸರಿನಲ್ಲಿ ಜಗತ್ತಿನ ಏಕೈಕ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.   ರಾಮಾಯಣ ಚಾತುರ್ಮಾಸ್ಯ ವ್ರತ ಆರಂಭದ ದಿನವಾದ ಗುರುಪೂರ್ಣಿಮೆಯಂದು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪರಮಶ್ರೇಷ್ಠ ಗುರುವಿಗೆ, ಸ್ವಾರ್ಥರಹಿತ ಜೀವನಕ್ಕೆ ಚಾಣಕ್ಯ ಉದಾಹರಣೆ. ಚಂದ್ರಗುಪ್ತನಂಥ ಧರ್ಮನಿಷ್ಠ, ಸಂಸ್ಕೃತಿನಿಷ್ಠ ಧರ್ಮಯೋಧರನ್ನು ಸಿದ್ಧಪಡಿಸುವುದು ಇದರ ಉದ್ದೇಶ ಎಂದು ಬಣ್ಣಿಸಿದರು.   ಭಾರತದ ಗತವೈಭವ ಮರುಕಳಿಸುವಂತೆ ಮಾಡುವ ಈ ವಿಶ್ವವಿದ್ಯಾಪೀಠ, […]

Continue Reading

ರಾಮಾಯಣ ಚಾತುರ್ಮಾಸ್ಯ: ಶ್ರೀಸಂಸ್ಥಾನದವರ ಪುರಪ್ರವೇಶ

ಬೆಂಗಳೂರು: ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತ ಮಂಗಳವಾರ (ಜುಲೈ 16) ಆರಂಭವಾಗುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಪುರಪ್ರವೇಶ ಅದ್ದೂರಿಯಿಂದ ನೆರವೇರಿತು.   ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಭಟ್ ಬೇರ್ಕಡವು, ಚಾತುರ್ಮಾಸ್ಯ ಕ್ರಿಯಾಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಕೋರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ರಾಮಾಯಣ ಕ್ರಿಯಾಸಮಿತಿ ಅಧ್ಯಕ್ಷ ಶಾರದಾ ಜಯಗೋವಿಂದ್, ಕೆಕ್ಕಾರ್ ರಾಮಚಂದ್ರ ಭಟ್ ಹಾಗೂ ಶ್ರೀಮಠದ ಅಪಾರ ಶಿಷ್ಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ಪುರಪ್ರವೇಶ ಮಾಡಿದ ಶ್ರೀಗಳನ್ನು ಭಕ್ತಿಪೂರ್ವಕವಾಗಿ […]

Continue Reading

ಶರಾವತಿ ಯೋಜನೆ ತುಘಲಕ್ ದರ್ಬಾರ್

ಸಾಗರ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಯತ್ನ ತುಘಲಕ್ ದರ್ಬಾರ್ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.   ಇಲ್ಲಿನ ಶ್ರೀರಾಘವೇಶ್ವರ ಭವನದಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮಾರ್ಗದರ್ಶನ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ನೆಲ- ಜಲ ರಕ್ಷಣೆಗೆ ಶ್ರೀಮಠ ದಶಕಗಳಿಂದಲೂ ಶ್ರಮಿಸುತ್ತಿದೆ ಎಂದು ಹೇಳಿದರು.   ನಿಸರ್ಗದ ಮೇಲೆ ದೌರ್ಜನ್ಯವನ್ನು ಸಹಿಸೆವು. ಈ ಹುಚ್ಚು ಯೋಜನೆಗೆ ಶ್ರೀಮಠದ ಖಡಾಖಂಡಿತ ವಿರೋಧವಿದೆ. ಶರಾವತಿ ವಿಚಾರದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟರೆ, ಶ್ರೀಮಠ ಹಾಗೂ ಶ್ರೀಮಠದ ಕಾರ್ಯಕರ್ತರು ಇದನ್ನು ವಿರೋಧಿಸಲು […]

Continue Reading

ಹವ್ಯಕದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮಲ್ಲೇಶ್ವರಂನಲ್ಲಿರುವ ಹವ್ಯಕ ಮಹಾಸಭೆಯ ಭವನದಲ್ಲಿ ಭಾನುವಾರ ನಡೆಯಿತು.   ಪ್ರಸಿದ್ಧ ಡಾ. ಎಸ್.ಆರ್. ಹೆಗಡೆ, ಡಾ. ಶ್ರೀಪಾದ ಹೆಗಡೆ, ಡಾ. ಶಿವರಾಮ ಗಂಗೋತ್ರಿ, ಡಾ. ನರಸಿಂಹ ಭಟ್, ಡಾ. ನರಸಿಂಹಕುಮಾರ್, ಡಾ. ಎಚ್.ಕೆ.ಕೆ. ಭಟ್, ಡಾ. ಈಶ್ವರ ಭಟ್, ಡಾ. ರವಿಕಿರಣ್ ಭಟ್, ಡಾ. ಶ್ವೇತಾ ಕೆ ಹೆಗಡೆ, ಡಾ. […]

Continue Reading

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಂಡಡೊಂಜಿ ದಿನ ಸಮಾರೋಪ

ನಂತೂರು: ಇಂದು ಮಾನವನಿಗೆ ಸದಾ ಅನಾರೋಗ್ಯ ಕಾಡುತ್ತದೆ. ಹಿಂದಿನ ಕಾಲ ಶ್ರಮ ಜೀವನವಾಗಿತ್ತು ಮತ್ತು ಆರೋಗ್ಯದಾಯಕವಾಗಿತ್ತು. ಗದ್ದೆಯಲ್ಲಿ ಕೆಸರು ಮೆತ್ತಿದ ಶರೀರಕ್ಕೆ ಅನಾರೋಗ್ಯ ಕಾಡುವುದಿಲ್ಲ. ಇಂದು ಆಧುನಿಕ ಯುಗದಲ್ಲಿ ಶರೀರ ಬೆವರುವುದಿಲ್ಲ. ಎಲ್ಲವೂ ಕುಳಿತಲ್ಲೇ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತದೆ. ಇಂದು ಇಡೀ ದಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ಸಂತಸ, ಸಂಭ್ರಮಪಟ್ಟಿದ್ದು, ಕೃಷಿಯ ಅನುಭವವನ್ನು ಅರ್ಥ ಮಾಡಿಕೊಳ್ಳುವಂತಾಗಿದೆ ಎಂದು ಕುರ್ನಾಡು ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ ಹೇಳಿದರು.   ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ […]

Continue Reading

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ : ಕಂಡಡೊಂಜಿ ದಿನ ಉದ್ಘಾಟನೆ

ನಂತೂರು: ಗ್ರಾಮೀಣ ಪ್ರದೇಶದ ಗದ್ದೆಗೆ ನಗರದ ಮಕ್ಕಳನ್ನು ಇಳಿಸಿ, ಬೇಸಾಯದ ಮಾಹಿತಿ ನೀಡುವ ಶಿಕ್ಷಣ ಅರ್ಥಪೂರ್ಣವಾಗಿದೆ. ಪಠ್ಯದ ಜತೆಗೆ ಭಾರತೀಯ ಸಂಸ್ಕೃತಿ, ಶಿಷ್ಟಾಚಾರ, ಆಚಾರ, ವಿಚಾರಗಳನ್ನು ತಿಳಿಸುವ ಈ ಸಂಪ್ರದಾಯ ಶಿಕ್ಷಣ ಮಾರ್ಗದಲ್ಲಿ ಅತೀ ಅಗತ್ಯ. ಗದ್ದೆಯಲ್ಲಿ ಆಟೋಟಗಳನ್ನು ಏರ್ಪಡಿಸುವುದು ಕೂಡಾ ಸೂಕ್ತವಾಗಿದೆ. ಆ ಅವಕಾಶವನ್ನು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಒದಗಿಸುತ್ತಿರುವುದು ಅತ್ಯಂತ ಶ್ರೇಷ್ಠವಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.   ಅವರು ಶನಿವಾರ ಮಂಗಳೂರು ನಂತೂರು ಶ್ರೀ […]

Continue Reading

ಇಂಗ್ಲಿಷ್ ಸಂವಹನ ಕೌಶಲ್ಯ ವೃದ್ಧಿ – ಕಾರ್ಯಾಗಾರ

ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠ ಶಾಲೆಯಲ್ಲಿ ಅಧ್ಯಾಪಕರಿಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಇಂಗ್ಲಿಷ್ ಸಂವಹನ ಕೌಶಲ್ಯ ವೃದ್ಧಿ – ಕಾರ್ಯಾಗಾರ ನಡೆಯಿತು.   ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂಗಡಿಮೊಗರು ಸರಕಾರೀ ಪ್ರೌಢ ಶಾಲೆಯ ಅಧ್ಯಾಪಕ ರವಿಶಂಕರ್ ನೆಗಳಗುಳಿ ಅಧ್ಯಾಪಕನಾದವನು ನಿರಂತರ ವಿದ್ಯಾರ್ಥಿ ಎಂಬುದನ್ನು ಉಲ್ಲೇಖಿಸುತ್ತಾ ಆಗಾಗ ಇಂತಹ ಕಾರ್ಯಾಗಾರವನ್ನು ಏರ್ಪಡಿಸುತ್ತಿರುವ ಆಡಳಿತ ಮಂಡಳಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಹಾಡು, ಕಥೆ, ನಾಟಕ ಮೂಲಕ ಇಂಗ್ಲೀಷ್ ಸಂವಹನಕ್ಕೆ ಉತ್ತೇಜನ ನೀಡಿದರು.   ಶಾಲಾಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಇವರು […]

Continue Reading