ಗೋಆಶ್ರಮಕ್ಕೆ ಹಸಿಹುಲ್ಲು

ಮಾಲೂರು ತಾಲೂಕು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಬೆಂಗಳೂರಿನ ವಾಸುಪೂಜ್ಯ ಸೇವಾ ಮಂಡಲ್ ನ ಸದಸ್ಯರು ಒಂದು ಲೋಡ್ ಹಸಿಹುಲ್ಲನ್ನು ಕಳುಹಿಸಿ ಕೊಟ್ಟರು. ದಾನಿಗಳ ಪರವಾಗಿ ಜಗದೀಶ್ ಅವರು ಗೋಆಶ್ರಮಕ್ಕೆ ನೀಡಿದರು. ಈ ಸಂದರ್ಭದಲ್ಲಿ ರಾಮಚಂದ್ರ ಅಜ್ಜಕಾನ, ಅನಂತ ಹೆಗಡೆ ಉಪಸ್ಥಿತರಿದ್ದರು.

Continue Reading

ಪ್ರತಿಭಾ ಪುರಸ್ಕಾರ

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಆತ್ರೇಯ ಮಂಜುಳಗಿರಿ ವೆಂಕಟೇಶನಿಗೆ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಪ್ರತಿಭಾ ಪುರಸ್ಕಾರವನ್ನು ಅನುಗ್ರಹಿಸಿದರು.   ಕುಮಟಾ ಹವ್ಯಕ ಮಂಡಲಾಂತರ್ಗತ ಕಾರವಾರ – ಅಂಕೋಲಾ ವಲಯದ ಯಶೋದಾ ಗಿರಿ ಹಾಗೂ ಡಾ| ವೆಂಕಟೇಶ ಮಂಜುಳಗಿರಿ ಇವರ ಪುತ್ರ ಆತ್ರೇಯ ಮಂಜುಳಗಿರಿ ವೆಂಕಟೇಶ, ಯುರೋಪಿಯನ್ ಒಕ್ಕೂಟದ ಮೇಡಂ ಮೇರಿ ಕ್ಯೂರಿ ಫೆಲೋಶಿಪ್ ಗೆ ಆಯ್ಕೆಯಾಗುವ ಮೂಲಕ ವಿಶೇಷ ಸಾಧನೆಗೈದು ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರನಾಗಿದ್ದಾನೆ. ಪ್ರಪಂಚದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು […]

Continue Reading

ಗೋಆಶ್ರಮದ ವತಿಯಿಂದ ಶ್ರೀಗುರುಪಾದುಕಾಪೂಜಾ

ಮಾಲೂರು: ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದ ವತಿಯಿಂದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ರಾಮಾಯಣ ಚಾತುರ್ಮಾಸ್ಯ ಸಂದರ್ಭದಲ್ಲಿ ಬೆಂಗಳೂರು ಗಿರಿನಗರದ ಶ್ರೀರಾಮಚಂದ್ರಾಪುರದಲ್ಲಿ ಶ್ರೀಗುರುಪಾದುಕಾಪೂಜಾ ಕಾರ್ಯಕ್ರಮ ನಡೆಯಿತು.   ಮಂಜುನಾಥ ಭಟ್ ದಂಪತಿಗಳ ಪೂಜಾ ಸೇವೆ ನಡೆಸಿದರು. ಸಂದರ್ಭದಲ್ಲಿ ಗೋಆಶ್ರಮ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಹಗಡೆ, ಕೃಷ್ಣ ಭಟ್, ಲಕ್ಷ್ಮೀಶ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಪಾದುಕಾರಾಜ್ಯವು ರಾಮರಾಜ್ಯಕ್ಕಿಂತ ಶ್ರೇಷ್ಠವಾದುದು – ಶ್ರೀಸಂಸ್ಥಾನ

ಪಾದ ಎಲ್ಲಕ್ಕಿಂತ ಕೆಳಗೆ, ರಾಮನ ಪಾದುಕೆ ಎಲ್ಲಕ್ಕಿಂತ ಮೇಲೆ. ’ರಾಮನ ಕಾಲಕೆಳಗಿರುವುದನ್ನು ತನ್ನ ತಲೆಯ ಮೇಲಿಟ್ಟುಕೊಂಡಾಗ ರಾಮನೆಷ್ಟು ಮೇಲೆ, ತಾನೆಷ್ಟು ಕೆಳಗೆ ’. ಭರತನಲ್ಲಿ ರಾಮನ ಭಾವ.   ನಾನು ದೊರೆಯಾಗಲಾರೆ. ನನ್ನಣ್ಣನಾಗಬೇಕು. ರಾಮನಿಗೆ ಭರತನಾಗಬೇಕು ಎನ್ನುವ ಆಸೆ. ಇಬ್ಬರೂ ದೊರೆಯಾಗಲಿಲ್ಲ. ಸಿಂಹಾಸನದ ಮೇಲೆ ಪಾದುಕೆಯನ್ನಿಟ್ಟ. ಪಾದುಕಾರಾಜ್ಯಕ್ಕೆ ರಾಮನ ಒಪ್ಪಿಗೆ. ಪಾದುಕಾ ಸ್ಪರ್ಶಕ್ಕೆ ಚೈತನ್ಯ.   ಶ್ರೀ ಶಂಕರಾಚಾರ್ಯರ ಸಂಕಲ್ಪ ನಮ್ಮ ಮಠ. ರಾಮ ಪಾದುಕೆಯನ್ನು ಕೊಟ್ಟು, ತನ್ನನ್ನಿಟ್ಟು ಕಳುಹಿಸಿದ. ಭರತ ಪಟ್ಟದಾನೆಯ ಮೇಲೆ ನೆತ್ತಿಯನಿಟ್ಟು, ಅದರ […]

Continue Reading

ಹೊಸಾಡ ಸಮಿತಿಯಿಂದ ಪದುಕಾ ಪೂಜೆ

ಬೆಂಗಳೂರು: ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ರಾಮಾಯಣ ಚಾತುರ್ಮಾಸದಲ್ಲಿ ಗೋ ಸಹಸಂಸ್ಥೆಗಳ ಪರವಾಗಿ ಹೊಸಾಡ ಅಮೃತಧಾರಾ ಗೋ ಬ್ಯಾಂಕ್ ಪರವಾಗಿ ಪಾದುಕಾಪೂಜೆ ನಡೆಯಿತು.   ಗೋ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಹೆಗಡೆ ಪಾದುಕಾ ಪೂಜೆ ನೆರವೇರಿಸಿದರು. ಗೋಬ್ಯಾಂಕ್ ಸಮಿತಿಯ ಸದಸ್ಯರು ಹಾಜರಿದ್ದರು. ಶ್ರೀ ಸಂಸ್ಥಾನದವರ ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದುಕೊಂಡರು.

Continue Reading

ಭರತ, ರಾಮರಿಗೆ ಅವರೇ ಸಾಟಿ..

ಸತ್ಪುರುಷರಿಗೆ ಕೋಪ ಯಾವಾಗ ಬರುತ್ತದೆ? ಧರ್ಮಕ್ಕೆ ಚ್ಯುತಿಯಾದಾಗ. ಧರ್ಮಕ್ಕೆ ಚ್ಯುತಿ ಮಾಡುವ ಕಾರ್ಯ ನಡೆದರೆ, ಚ್ಯುತಿಯ ಮಾತು ಕೇಳಿ ಬಂದರೆ ಸತ್ಪುರುಷರಿಗೆ ಕೋಪ ಬರುವುದುಂಟು. ಆಗಾಗ ಕೋಪ ಬರುವವವನಲ್ಲ ರಾಮ. ಜಾಬಾಲಿಗಳ ಮಾತು ನಂಬಿಕೆಗೆ ಚ್ಯುತಿ ಬರುವಂತಿತ್ತು. ಹಾಗಾಗಿ ಅವರ ಮಾತು ಕೇಳಿದಾಗ ರಾಮನಿಗೆ ಕೋಪ ಬಂತು.   ವಸಿಷ್ಠರು ರಾಮನಲ್ಲಿ “ದಶರಥನ ಹಿರಿಯ ಮಗ ನೀನು. ನಿನ್ನ ರಾಜ್ಯವನ್ನು ನೀನು ತೆಗೆದುಕೋ, ಸ್ವೀಕರಿಸು. ಇಕ್ಷ್ವಾಕು ವಂಶದಲ್ಲಿ ಹಿರಿಯವನೇ ರಾಜನಾದದ್ದು. ಹಾಗಾಗಿ ಇದು ನಿನಗೆ ಬರುವುದು ಸಹಜ. […]

Continue Reading

ರಾಮಚಂದ್ರಾಪುರ ಮಠದಲ್ಲಿ ತ್ಯಾಗ ಪರ್ವ: ಸಾವಿರ ಭಕ್ತರಿಂದ ಸರಳ ಜೀವನ ಪ್ರತಿಜ್ಞೆ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ಸಾವಿರಕ್ಕೂ ಹೆಚ್ಚು ಶಿಷ್ಯಭಕ್ತರು ಅದ್ದೂರಿ- ಆಡಂಬರದ ಜೀವನಕ್ಕೆ ವಿದಾಯ ಹೇಳಿ ಭಾನುವಾರ ಸರಳ ಜೀವನದ ಪ್ರತಿಜ್ಞೆ ಕೈಗೊಂಡರು. ತಕ್ಷಶಿಲಾ ವಿಶ್ವವಿದ್ಯಾನಿಲಯದ ಪುನರವತರಣದ ಮಹಾಸಂಕಲ್ಪವಾಗಿ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಅನುಗ್ರಹಿಸುತ್ತಿರುವ ಧಾರಾ ರಾಮಾಯಣದ ಅಂಗವಾಗಿ ಇಲ್ಲಿನ ಗಿರಿನಗರ ರಾಮಾಶ್ರಮದಲ್ಲಿ ನಡೆದ ತ್ಯಾಗ ಪರ್ವದಲ್ಲಿ ನೂರಾರು ಮಂದಿ ದುಶ್ಚಟ- ವ್ಯಸನ, ಜೀವನಕ್ಕೆ ಅನಿವಾರ್ಯವಲ್ಲ ಎನ್ನುವ ವಸ್ತುಗಳನ್ನು ತ್ಯಜಿಸಿದರು. ಹಲವು ಮಂದಿ ಚಿನ್ನ, ವಜ್ರಾಭರಣಗಳನ್ನು ಉದ್ದೇಶಿತ ವಿಶ್ವವಿದ್ಯಾಪೀಠಕ್ಕೆ ದೇಣಿಗೆಯಾಗಿ ಸಮರ್ಪಿಸಿದರು. ಧಾರಾ ರಾಮಾಯಣ ಪ್ರವಚನವು ಪಾದುಕಾ ಪಟ್ಟಾಭಿಷೇಕ ಘಟ್ಟ ತಲುಪಿದ ಹಿನ್ನೆಲೆಯಲ್ಲಿ, […]

Continue Reading

ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೆಟ್ಟಂಪಾಡಿ: ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಂ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶಯದಂತೆ ಉಪ್ಪಿನಂಗಡಿ ಮಂಡಲ ಬೆಟ್ಟಂಪಾಡಿ ವಲಯದ ನೇತೃತ್ವದಲ್ಲಿ ಪ್ರಿಯದರ್ಶಿನಿ ಶಾಲಾ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.   ಕಾರ್ಯಕ್ರಮವನ್ನು ಪ್ರಿಯದರ್ಶಿನಿ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ರೈ ಗುಮ್ಮಟೆಗದ್ದೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಟ್ಟಂಪಾಡಿ ವಲಯ ಅಧ್ಯಕ್ಷ ಶ್ರೀಹರಿ ದರ್ಬೆ ವಹಿದ್ದರು. ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ನಿಡ್ಪಳ್ಳಿ ಗ್ರಾಮ […]

Continue Reading

ಅಮೃತಧಾರಾ ಗೋಶಾಲೆಯಲ್ಲಿ ಗಾಯತ್ರಿ ಹವನ

ಬಜಕೂಡ್ಲು: ಬಜಕೂಡ್ಲುವಿನ ಶ್ರೀ ಅಮೃತಧಾರಾ ಗೋಶಾಲೆ, ಗೋಲೋಕದ ಗೋವರ್ಧನ ಧರ್ಮ ಮಂದಿರದಲ್ಲಿ ಪ್ರಾಕೃತಿಕ ವೈಪರೀತ್ಯಶಮನ, ದುರಿತನಿವಾರಣೆ, ಆರೋಗ್ಯಪ್ರಾಪ್ತಿ ಹಾಗೂ ಶ್ರದ್ಧಾ-ಮೇಧಾ-ಪ್ರಜ್ಞಾಪ್ರಾಪ್ತಿಯ ಉದ್ದೇಶದಿಂದ ಗಾಯತ್ರೀಹವನವನ್ನು ಆ.೧೬ರಂದು ಹಮ್ಮಿಕೊಳ್ಳಲಾಗಿತ್ತು.   ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗ ವತಿಯಿಂದ ಪರಮಪವಿತ್ರವಾದ ಗಾಯತ್ರೀ ಪ್ರತಿಪತ್ (ಶ್ರಾವಣ ಕೃಷ್ಣ ಪ್ರತಿಪತ್) ನಂದು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲ ಸಂಸ್ಕಾರ […]

Continue Reading

ಗೋಆಶ್ರಮದಲ್ಲಿ ಬರ ಗೋಶಾಲೆ ಉದ್ಘಾಟನೆ

ಮಾಲೂರು: ಕೋಲಾರ ಪಶುಸಂಗೋಪನಾ ಇಲಾಖೆ ವತಿಯಿಂದ ಮಾಲೂರು ಪಶುವೈದ್ಯಕೀಯ ಚಿಕಿತ್ಸಾಲಯದ ಸಹೋಯೋಗದಲ್ಲಿ ಮಾಲೂರು ತಾಲೂಕು ಬರ ಗೋಶಾಲೆಯನ್ನು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ತೆರೆಯಲಾಗಿದೆ.   ಮಾಲೂರು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಗೋಶಾಲೆಯನ್ನು ಉದ್ಘಾಟಿಸಿದರು. ಸಂಚಾರಿ ಗೋಶಾಲೆಯ ಪಶು ವೈದ್ಯಾಧಿಕಾರಿ ಡಾ. ರೆಡ್ಡಪ್ಪ, ಗೋಆಶ್ರಮದ ವಿಶೇಷ ಕರ್ತವ್ಯ ಅಧಿಕಾರಿ ರಾಮಚಂದ್ರ ಅಜ್ಜಕಾನ, ಗೋಶಾಲೆಯ ಕೃಷ್ಣ ಭಟ್, ಅನಂತ ಹೆಗಡೆ ಹಾಜರಿದ್ದರು. ಮಾಲೂರು ತಾಲೂಕಿನಲ್ಲಿ ತೀವ್ರ ಬರದ ಹಿನ್ನಲೆಯಲ್ಲಿ ಸರ್ಕಾರ ಈ ಗೋಶಾಲೆಯನ್ನು ಇಲ್ಲಿ […]

Continue Reading

ಅಂಕೋಲಾ ನೆರೆ ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠ ನೆರವು

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿ ವಿತರಿಸಲಾಯಿತು.   ಹುಬ್ಬಳ್ಳಿಯ ಪ್ರಸಾದ ಪಾಟೀಲ ಸಹಯೋಗದಲ್ಲಿ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಡೋಂಗ್ರಿ ಪಂಚಾಯತ್ ವ್ಯಾಪ್ತಿಯ ಹೆಗ್ಗಗಣೆ, ನೇರಳೆಬೈಲ್, ಹೊಸಗದ್ದೆ, ಡೋಂಗ್ರಿ, ಬಿದರಳ್ಳಿ, ಸುಂಕನಾಳ ಪಂಚಾಯತ್ ವ್ಯಾಪ್ತಿಯ ರಾಜನಗುಳಿ, ಹೊಳೆಗದ್ದೆ, ಸುಂಕದಗುಳಿ, ಹಿಲ್ಲೂರು ಪಂಚಾಯ್ತಿ ವ್ಯಾಪ್ತಿಯ ತೊಗಸೆ, ಹೊಸಕಂಬಿ, ಹೊಳೆಮಕ್ಕಿ, ಹಡಿನಗದ್ದೆ, ಎಕ್ಕೆಗುಳಿ, ಮಾಸ್ತಿಕಟ್ಟೆ, ಆಚಾರಿಮನೆಕೇರಿ, ಮೊಗಟಾ ಪಂಚಾಯ್ತಿಯ ಮಂಗನಖಾನ, […]

Continue Reading

ಇದು ಮರದ ಕತೆಯಲ್ಲ, ರಾಮನ ಕತೆ.

ಬೆಂಗಳೂರು: ಬೀಜ ಬೆಳೆದು ಮರ, ಮರ ಬೆಳೆದು ಹೆಮ್ಮರವಾಗಬೇಕು. ಇದು ಮರದ ಕತೆಯಲ್ಲ, ರಾಮನ ಕತೆ. ನನಗೆ ತಂದೆಯಿಂದ ರಾಜ್ಯದ ಹಕ್ಕು ಬಂದಿದೆ. ಅದನ್ನು ನಿನಗೆ ಸಮರ್ಪಣೆ ಮಾಡುವೆ ಎಂದ ಭರತ. ’ತಾ’ ಎಂದರೆ ತಾತ, ಮುತ್ತಾತರಿಗೆ ಗೊತ್ತಿದೆ. ಈಚೆಗೆ ಕೊಡು ಎಂದರ್ಥ. ಕೊ ಎಂದರೆ ಕೊಡು. ಅದು ಕುಲಕೋಟಿಗೂ ಗೊತ್ತಿಲ್ಲ. ತನ್ನದಲ್ಲ ಎನ್ನುವ ಸ್ವಭಾವ ಭರತನಂಥವರದ್ದು ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಅವರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ […]

Continue Reading

ಭಾರತೀಯರ ಬಲಿದಾನವನ್ನು ಮರೆಯದೆ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು : ಶ್ರೀಕೃಷ್ಣ ಶರ್ಮ ಹಳೆಮನೆ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು.   ಮಂಗಳೂರು ಹವ್ಯಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಹಳೆಮನೆ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಾರತೀಯರನ್ನು ಮರೆಯದೆ ನಾವು ಸ್ವಾರ್ಥವನ್ನು ಬಿಟ್ಟು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಅಖಂಡ ಭಾರತದ ಏಕತೆಗೆ ನಾವು ಕೈಜೋಡಿಸಬೇಕು ಎಂದರು.   ಮುಖ್ಯ ಅತಿಥಿಗಳಾಗಿ ಕೆನರಾ ಮೆಷಿನ್ ಸ್ಟೋರ್ಸ್ನ ಪಾಲುದಾರರಾದ ಎನ್. ಸುಬ್ರಹ್ಮಣ್ಯ ಭಟ್ ಅವರು ಭಾಗವಹಿಸಿ, ಎಲ್ಲರಿಗೂ ಸಿಹಿ ಹಂಚಿ ಶುಭಹಾರೈಸಿದರು. […]

Continue Reading

ನಾವೆಲ್ಲರೂ ಸಂಸ್ಕಾರಯುತ ಭಾರತೀಯರಾಗೋಣ : ಪ್ರಶಾಂತ್ ಹೆಗ್ಡೆ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುವಾರ ರಕ್ಷಾ ಬಂಧನ ಕಾರ್ಯಕ್ರಮ ಜರುಗಿತು.   ಆರೆಸ್ಸೆಸ್‌ನ ಮಂಗಳೂರು ಮಹಾನಗರ ಸೇವಾ ಪ್ರಮುಖ್ ಪ್ರಶಾಂತ್ ಹೆಗಡೆ ಅವರು ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ನಾವು ಅರ್ಥೈಸಿಕೊಂಡಾಗ ನಮ್ಮಲ್ಲಿ ದೇಶ ಸೇವೆಯ ಭಾವನೆ ಜಾಗೃತವಾಗುತ್ತದೆ. ವಿದ್ಯಾರ್ಥಿಗಳು ಈ ಭಾವನೆಯನ್ನು ಮೈಗೂಡಿಸಿಕೊಂಡು ಸಂಸ್ಕಾರಯುತ ಭಾರತೀಯರಾಗಬೇಕು ಎಂದರು.   ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್‌ದಾಸ್ ಅವರು ಮಾತನಾಡಿ, ಒಗ್ಗಟ್ಟು ಮತ್ತು ಧೈರ್ಯದಲ್ಲಿ […]

Continue Reading

ನಂತೂರು ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಚಾರ್ಮಾಡಿಯಲ್ಲಿ ಶ್ರಮದಾನ

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ತಂಡವು ಚಾರ್ಮಾಡಿಗೆ ತೆರಳಿ, ದಿನವಿಡೀ ಶ್ರಮದಾನ ನಡೆಸಿ, ನೆರೆ ಸಂತ್ರಸ್ತರಿಗೆ ಅವಶ್ಯ ಕಾಮಗಾರಿ ನಡೆಸಿದೆ. ಹೊರಭಾಗದಿಂದ ಈ ಪ್ರದೇಶದ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದ ಪ್ರಥಮ ತಂಡವೆಂಬ ಹೆಗ್ಗಳಿಕೆಯನ್ನೂ ಪಡೆಯಿತು.   ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್, ಉಪನ್ಯಾಸಕ – ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಮತ್ತು ಉಪನ್ಯಾಸಕ ಸಹಯೋಜನಾಧಿಕಾರಿ ಪ್ರವೀಣ್ ಪಿ. ಅವರ ನೇತೃತ್ವದಲ್ಲಿ 24 ವಿದ್ಯಾರ್ಥಿಗಳ ತಂಡವು ಬೆಳಗ್ಗೆ 10 […]

Continue Reading

ಸುಖದಲ್ಲಿ ದಿನವು ಕ್ಷಣವಾಗುತ್ತದೆ – ಶ್ರೀಸಂಸ್ಥಾನ

ಬೆಂಗಳೂರು: ಧರ್ಮಕ್ಕೆ ಧರ್ಮವೇ ಮೂಲ. ಧರ್ಮದಿಂದ ಅಧರ್ಮ, ಅಧರ್ಮದಿಂದ ಧರ್ಮವೂ ಸಾಧ್ಯವಿಲ್ಲ. ಕುಲಧರ್ಮವೇ ಅಧರ್ಮವಾದರೆ ಪಾಪ ಹುಟ್ಟಬಹುದು. ರಾಜನೆಂದರೆ ದೇವರೇ. ರಾಮನೆಂದರೆ ಜಗತ್ತಿಗೇ ದೇವರು. ಅವನ ಕಾರ್ಯ ಧರ್ಮಪೂರ್ಣ, ಅರ್ಥಪೂರ್ಣ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.   ಅವರು ಗಿರಿನಗರ ರಾಮಾಶ್ರಮದಲ್ಲಿ ನಡೆಯುತ್ತಿರುವ ಧಾರಾ ರಾಮಾಯಣ ೫೩ನೇ ದಿನ ಪ್ರವಚನ ನೀಡಿರು.   ಪ್ರಿಯವಾದವರು ನೀಡಿದ ತರ್ಪಣ, ಪಿಂಡ ಅಕ್ಷಯವಾಗುತ್ತದೆ. ಒಬ್ಬ ಅಂತಿಮ ಕಾಲದಲ್ಲಿ ಯಾರನ್ನು ಜಪಿಸುತ್ತಾನೋ ಅವನು ಅದುವೇ ಆಗುತ್ತಾನೆ. […]

Continue Reading

ಸಂತ್ರಸ್ತ ಗೋವುಗಳಿಗೆ ರಾಮಚಂದ್ರಾಪುರಮಠ ಅಭಯ

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಗೋವುಗಳ ರಕ್ಷಣೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ, ನೆರಿಯ, ಕಕ್ಕಿಂಜೆ, ಮುಂಡಾಜೆ, ಚಾರ್ಮಾಡಿ ಮತ್ತಿತರ ಕಡೆಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನೂರಾರು ಕುಟುಂಬಗಳ ಬದುಕು ಬೀದಿಗೆ ಬಂದಿದ್ದು, ಅವರು ಸಾಕುತ್ತಿದ್ದ ಗೋವುಗಳು ದಯನೀಯ ಸ್ಥಿತಿಯಲ್ಲಿರುವುದನ್ನು ಮನಗಂಡು ಶ್ರೀರಾಮಚಂದ್ರಾಪುರ ಮಠ ಈ ಘೋಷಣೆ ಮಾಡಿದೆ.   ಈ ಪ್ರದೇಶದಲ್ಲಿ ಬಹಳಷ್ಟು ಮಂದಿ ಪ್ರೀತಿಯಿಂದ ಸಾಕಿದ ಗೋವುಗಳ ಮಾರಾಟಕ್ಕೆ ಮುಂದಾಗಿದ್ದು, ಯಾರೂ ಗೋವುಗಳನ್ನು ಮಾರಾಟ […]

Continue Reading

ವಿಶೇಷ ಪ್ರತಿಭೆಗೆ ಪ್ರತಿಭಾ ಪುರಸ್ಕಾರದ ಅನುಗ್ರಹ

ಬೆಂಗಳೂರು: ಚದುರಂಗ ಕ್ಷೇತ್ರದ ವಿಶೇಷ ಪ್ರತಿಭೆ, ಹೊನ್ನಾವರದ ಸಮರ್ಥ ಜಗದೀಶ ರಾವ್ ಗೆ ಗುರುವಾರ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪ್ರತಿಭಾ ಪುರಸ್ಕಾರವನ್ನು ಅನುಗ್ರಹಿಸಿದರು.   ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವಮಟ್ಟದ ಕಿರಿಯ ವಿಕಲ ಚೇತನರ ಚೆಸ್ ಚಾಂಪಿಯನ್ ಶಿಪ್‌ನ 7ಸುತ್ತಿನಲ್ಲಿ 5.5 ಅಂಕ ಗಳಿಸಿ, ದೈಹಿಕ ದುರ್ಬಲರ ವಿಭಾಗದಲ್ಲಿ ಸಮರ್ಥ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅನುಪಮ ಸಾಧನೆಗೈದಿದ್ದಾನೆ.   ಹೊನ್ನಾವರದ ಎಸ್.ಡಿ.ಎಂ ಕಾಲೇಜ್ ನಲ್ಲಿ 2ನೇ ಬಿ.ಕಾಮ್ ನಲ್ಲಿರುವ ಸಮರ್ಥ್ […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಸ್ವಾತಂತ್ರೋತ್ಸವ

ಬೆಂಗಳೂರು: ಹಂಪಿನಗರದಲ್ಲಿರುವ ಶ್ರೀಭಾರತೀ ವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಶಾಲೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆ ಧ್ವಜಾರೋಹಣ ಮಾಡಿ ಮಾತನಾಡಿದರು.   ವಿದ್ಯಾರ್ಥಿಗಳಿಂದ ಕವಾಯತ್ತು ಪ್ರದರ್ಶನ, ಪಿರಾಮಿಡ್ ಪ್ರದರ್ಶನ, ನೃತ್ಯ, ದೇಶಭಕ್ತಿ ಗೀತೆ ಗಾಯನ, ಭಾಷಣ ಇವೇ ಮೊದಲಾದ ಮನರಂಜನಾ ಕಾರ್ಯಕ್ರಮಗಳು ನಡೆದವು. 2018-19ನೇ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಇಸ್ರೋದ ಹಿರಿಯ ವಿಜ್ಞಾನಿಗಳಾದ ಪಿ.ಜೆ.ಭಟ್ಟ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶಾಲೆಯ ಆಡಳಿತ ಸಮಿತಿಯ ಸದಸ್ಯರಾದ […]

Continue Reading

ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಕಾಲೇಜಿನ ಎನ್ನೆಸ್ಸೆಸ್ ಘಟಕದ ಸೇವಾ ಕಾರ್ಯ

ನಂತೂರು : ಮಂಗಳೂರು ವಾಮಂಜೂರು ಪಚ್ಚನಾಡಿಯ ಮಂದಾರ ಎಂಬಲ್ಲಿ ಮೊನ್ನೆಯ ಭಾರೀ ಮಳೆಗೆ ಡಂಪಿಂಗ್ ಯಾರ್ಡ್ ಕುಸಿದು ಹತ್ತಿರದ ಮನೆಗಳಿಗೆ ಅಪಾಯಕಾರಿ ವಾತಾವರಣ ಸೃಷ್ಟಿಸಿತ್ತು. ಕಸದ ರಾಶಿ ಸುಮಾರು 2 ಕಿಮೀ ದೂರ ಸಂಚರಿಸಿತ್ತೆನ್ನಲಾಗಿದೆ.   ಆ ಡಂಪಿಂಗ್ ಯಾರ್ಡ್ ನಲ್ಲಿ ಕಸ, ಪ್ಲಾಸ್ಟಿಕ್ ರಾಶಿ ಹಾಕಲಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಕಸದ ರಾಶಿ ನಿಧಾನವಾಗಿ ಕುಸಿದು ಬಂದಿರುವುದನ್ನು ಗಮನಿಸಿದ ರಕ್ಷಣಾಪಡೆ ಅಲ್ಲಿನ 27 ಕುಟುಂಬಗಳನ್ನು ಸ್ಥಳಾಂತರಿಸಿತ್ತು. ಅದಾಗಲೇ ಕೆಲವೊಂದು ಮನೆಗಳು ನೆಲಸಮವಾಗಿದ್ದರೆ, ಮತ್ತೆ ಕೆಲವು ಬಿರುಕುಬಿಟ್ಟಿತ್ತು. […]

Continue Reading