ಗೋಸ್ವರ್ಗಕ್ಕೆ ಸರ್ವಸಮ್ಮುಖಾಧಿಕಾರಿಗಳ ತಂಡ

ಗೋಸ್ವರ್ಗ: ಶ್ರೀರಾಮಚಂದ್ರಾಪುರಮಠದ ಸರ್ವಸಮ್ಮುಖಾಧಿಕಾರಿಗಳಾದ ಟಿ.ಮಡಿಯಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆ.ಜಿ.ಭಟ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.   ಗೋಸ್ವರ್ಗ ಹಾಗೂ ಶ್ರೀರಾಮದೇವ ಭಾನ್ಕುಳಿ ಮಠದ ವೀಕ್ಷಣೆ ಮಾಡಿ ಸಮಗ್ರ ಮಾಹಿತಿ ಪಡೆದರು. ಗೋಸ್ವರ್ಗದ ವ್ಯವಸ್ಥೆ, ಸ್ವಚ್ಛತೆ ಕುರಿತು ಸಮಾಧಾನ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಅಭಿವೃದ್ದಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಗೋಸ್ವರ್ಗದ ಎಲ್ಲಾ ಅಭಿವೃದ್ದಿಕಾರ್ಯಗಳಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.   ಈ ಸಂದರ್ಭದಲ್ಲಿ ಮೋಹನ ಹೆಗಡೆ ಹೆರವಟ್ಟಾ, ಆರ್ ಎಸ್ ಹೆಗಡೆ ಹರಗಿ, ಗಣಪತಿ ಹೆಗಡೆ […]

Continue Reading

ಗೋವರ್ಧನಗಿರಿಧಾರಿಗೆ ಸಮ್ಮುಖ ಸರ್ವಾಧಿಕಾರಿಗಳಿಂದ ವಿಶೇಷ ಪ್ರಾರ್ಥನೆ

ಗೋಲೋಕ: ಶ್ರೀರಾಮಚಂದ್ರಾಪುರಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್ ಅವರು ಮಹಾನಂದಿ ಗೋಲೋಕಕ್ಕೆ ಆಗಮಿಸಿ, ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.   ದೇಶೀ ಗೋತಳಿಗಳ ಸಂರಕ್ಷಣೆ ಮಾಡುತ್ತಿರುವ ಗೋಲೋಕ ವೀಕ್ಷಣೆ ಮಾಡಿದರು. ಶ್ರೀಮಠದ ಪ್ರಮುಖರಾದ ಮೋಹನ ಹೆಗಡೆ, ಪಿ. ಡಿ. ಶ್ರೀಧರ ರಾವ್, ಹರಿಪ್ರಸಾದ್ ಪೆರಿಯಪ್ಪು, ಕುಮಾರ ಕೌಲಕೈ, ಪ್ರಸನ್ನ ಉಡುಚೆ, ರಾಮಚಂದ್ರ ಭಟ್ ಮಳಲಿ, ಚಂದ್ರಶೇಖರ ಸಿ. ಎಸ್. ರಾಘವೇಂದ್ರ ಮಧ್ಯಸ್ಥ ಜೊತೆಗಿದ್ದರು.   ಗೋಲೋಕದ ವತಿಯಿಂದ ರಾಮಚಂದ್ರ ಭಟ್ ಪಂಜಾಜೆ, ಅಶೋಕ ಹೆಗಡೆ […]

Continue Reading

ದೇಶಭಕ್ತಿಯಷ್ಟೇ ದೇಶಜ್ಞಾನ ಮುಖ್ಯ: ಶ್ರೀಸಂಸ್ಥಾನ

ಬೆಂಗಳೂರು: ಭಾರತೀಯ ವಿದ್ಯೆ ಹಾಗೂ ಕಲೆಗಳನ್ನು ಒಂದೇ ಕಡೆ ಬೋಧಿಸುವ ವ್ಯವಸ್ಥೆ ದೇಶದಲ್ಲೆಲ್ಲೂ ಇಲ್ಲ. ಆದ್ದರಿಂದ ಸಮಗ್ರ ಭಾರತೀಯ ಕಲೆ, ವಿದ್ಯೆಗಳನ್ನು ಪರಿಚಯಿಸುವುದೇ ಉದ್ದೇಶಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶವಾಗಿದೆ. ದೇಶಭಕ್ತಿ ಹಾಗೂ ದೇಶಜ್ಞಾನದ ಸಮಗ್ರ ವಿದ್ಯಾವೀರರನ್ನು ಸೃಷ್ಟಿಸಿ, ಅವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೆಳಕಾಗುವಂತೆ ಬೆಳೆಯಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.   ಗಿರಿನಗರ ರಾಮಾಶ್ರಮದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು ಆಶೀರ್ವಚನ ನೀಡಿದರು.   ದೇಶದ ಬಗ್ಗೆ […]

Continue Reading

ಗೋಪರಿವಾರದಿಂದ ಮುಂದುವರಿದ ಪರಿಹಾರ ವಿತರಣೆ

ಹೊಸನಗರ: ಶ್ರೀರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಸಂಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ನೆರೆ ಸಂತ್ರಸ್ತ ಕುಟುಂಬಗಳ ಗೋವುಗಳಿಗೆ ವಿತರಣೆ ಮಾಡುವ ಕಾರ್ಯ ಮಹಾನಂದಿ ಗೋಲೋಕದಲ್ಲಿ ನಡೆಯಿತು.   ರಾಯಚೂರು ಜಿಲ್ಲೆ ಹಾಗೂ ಕೆ. ಆರ್. ನಗರದಿಂದ ಸುಮಾರು ೯ ಟನ್ ಪೌಷ್ಟಿಕ ಪಶು ಆಹಾರವನ್ನು ತರಿಸಿ ಮಹಾನಂದಿ ಗೋಲೋಕ ಹೊಸನಗರ ಹಾಗೂ ಗೋಸ್ವರ್ಗ ಭಾನ್ಕುಳಿ ಇವರ ಸಹಕಾರದೊಂದಿಗೆ ವಿತರಣೆ ಮಾಡಲಾಯಿತು. ಮೈಸೂರು ಭಾರತೀಯ ಗೋಪರಿವಾರದ ಮುಖ್ಯ ಸಂಚಾಲಕ ಕೆ. ಆರ್. ನಗರದ ಐಸಿರಿ ಮಹೇಶ್ ಮತ್ತು ಶ್ರೀರಾಮಚಂದ್ರಾಪುರಮಠ ಪ್ರಾಯೋಜಿಸಿದ್ದರು. […]

Continue Reading

ಪದಾಧಿಕಾರಿಗಳಿಗೆ ನಡೆದ ಕಾರ್ಯಾಗಾರ

ಭಾನ್ಕುಳಿ: ಗೋಸ್ವರ್ಗ ಶ್ರೀರಾಮದೇವ ಭಾನ್ಕುಳಿ ಮಠದಲ್ಲಿ ಹವ್ಯಕ ಮಹಾಮಂಡಲದಿಂದ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ ಕಾರ್ಯಾಗಾರ ನಡೆಯಿತು.   ಸಿದ್ದಾಪುರ ಮಂಡಲದ ಪದಾಧಿಕಾರಿಗಳಿಗೆ ಮಠದ ಯೋಜನೆ, ನೂತನ ಶಾಸನತಂತ್ರದ ಮಾಹಿತಿ, ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ನಡೆದ ಕಾರ್ಯಾಗಾರದ ನೇತೃತ್ವವನ್ನು ಸೇವಾಖಂಡದ ಶ್ರೀಸಂಯೋಜಕರಾದ ಮಹೇಶ ಚಟ್ನಳ್ಳಿ ವಹಿಸಿದ್ದರು. ಮಹಾಮಂಡಲದ ಪ್ರಮುಖರು ಪಾಲ್ಗೊಂಡು ಮಾಹಿತಿ ನೀಡಿದರು.   ಕಾರ್ಯಕ್ರಮದಲ್ಲಿ ಮಹಾಮಂಡಲದ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ, ಉಪಾಧ್ಯಕ್ಷೆ ಶೈಲಜಾ ಕೊಂಕೋಡಿ, ಕೋಶಾಧ್ಯಕ್ಷ ಜಿ.ಜಿ.ಹೆಗಡೆ, ಕಾರ್ಯದರ್ಶಿ ನಾಗರಾಜ ಭಟ್ಟ ಪಿದಮಲೆ, ಸಂಘಟನಾ ಕಾರ್ಯದರ್ಶಿ […]

Continue Reading

ಗೋಸ್ವರ್ಗದಲ್ಲಿ ಶ್ರೀಸಾನ್ನಿಧ್ಯ

ಬಾನ್ಕುಳಿ: ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ರಾಮಾಯಣ ಚಾತುರ್ಮಾಸ್ಯವನ್ನು ಸಂಪನ್ನಗೊಳಿಸಿ, ಸೀಮೋಲ್ಲಂಘನದ ಬಳಿಕ ಶ್ರೀಸವಾರಿ ಗೋಸ್ವರ್ಗಕ್ಕೆ ಚಿತ್ತೈಸಿದರು.   ಸೆ.15ರ ಸಂಜೆ 5.45ಕ್ಕೆ ಆಗಮಿಸಿದ ಶ್ರೀಸಂಸ್ಥಾನದವರನ್ನು ಸಿದ್ಧಾಪುರ ಮಂಡಲ, ಗೋಸ್ವರ್ಗ ಹಾಗೂ ಸಮಸ್ತ ಶಿಷ್ಯಭಕ್ತರ ಪರವಾಗಿ ಗುಂಜಗೋಡು ಜಯರಾಮ ಭಟ್ ದಂಪತಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.   ಸೆ.16ರಂದು ಸಿದ್ಧಾಪುರ ಮಂಡಲದ ಶಿಷ್ಯಭಕ್ತರಿಂದ ಗುರುಪಾದುಕಾ ಪೂಜೆ ಹಾಗೂ ಭಿಕ್ಷಾಸೇವೆಗಳು ನಡೆಯಿತು. ಸಾರ್ವಜನಿಕ ಮಂತ್ರಾಕ್ಷತೆ ನೀಡಿದ ಶ್ರೀಸಂಸ್ಥಾನದವರು ಮಂಡಲದ ಪದಾಧಿಕಾರಿಗಳು ಹಾಗೂ ಗೋಸ್ವರ್ಗ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.   […]

Continue Reading

ಸಮಾಜದಲ್ಲಿ ಸನಾತನ ಸಂಸ್ಕೃತಿಯ ಹಸಿವು ಸ್ಪಷ್ಟ: ರಾಘವೇಶ್ವರ ಶ್ರೀ

ಬೆಂಗಳೂರು: ಭಾರತೀಯತೆಯ, ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಇಂದು ಸಮಾಜದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಸಮಾಜಕ್ಕೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನ ದೊರಕಿದಲ್ಲಿ ಮಾತ್ರ ಭಾರತ ವಿಶ್ವಗುರುವಾಗಬಲ್ಲದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.   ಗಿರಿನಗರ ರಾಮಾಶ್ರಯದಲ್ಲಿ ಶನಿವಾರ (ಸೆ. 14) ನಡೆದ ರಾಮಾಯಣ ಚಾತುರ್ಮಾಸ್ಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.   ಶ್ರೀರಾಮದೇವರು ಪ್ರತಿಯಈ ಬಾರಿಯ ಚಾತುರ್ಮಾಸ್ಯವನ್ನು ರಾಮಾಯಣ ಚಾತುರ್ಮಾಸ್ಯವಾಗಿ ಆಚರಿಸಲಾಗಿದ್ದು, ನಿರಂತರವಾಗಿ ಧಾರಾ ರಾಮಾಯಣ ಪ್ರವಚನ ನಡೆದಿದೆ. ರಾಮಾಯಣ ಸರ್ವವೇದಗಳ ಸಾರ; ಇದು […]

Continue Reading

ನ್ಯಾಯಾಂಗದ ಮೇಲೆ ಪ್ರತಿವಾದಿಗಳಿಂದಲೇ ಒತ್ತಡ

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಅಥವಾ ಶ್ರೀಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ತನಿಖೆಯಿಂದ ಹಿಂದೆ ಸರಿದಾಗಲೆಲ್ಲ, ಅವರ ಮೇಲೆ ಶ್ರೀಮಠದ ಪ್ರತಿವಾದಿಗಳು ಒತ್ತಡ ತಂದಿದ್ದಾರೆಯೇ ವಿನಃ ಶ್ರೀಮಠ ಯಾವುದೇ ಒತ್ತಡ ತಂದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠ ಸ್ಪಷ್ಟಪಡಿಸಿದೆ.   ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಅಥವಾ ಪ್ರಸ್ತುತ ನ್ಯಾಯಮೂರ್ತಿಗಳಾಗಿರುವ  ಮೋಹನ ಶಾಂತನಗೌಡರ ಮತ್ತು ಫಣೀಂದ್ರ ವಿರುದ್ಧ ಪ್ರತಿವಾದಿಗಳು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು; ಫಣೀಂದ್ರ ಅವರ ಮೇಲಂತೂ ಸುಪ್ರೀಂಕೋರ್ಟ್, ರಾಷ್ಟ್ರಪತಿಗಳಿಗೆ ಕೂಡಾ ಪ್ರತಿವಾದಿಗಳು ದೂರು ನೀಡಿದ ನಿದರ್ಶನಗಳು ಕಣ್ಣ ಮುಂದಿವೆ ಎಂದು […]

Continue Reading

ಕೇರಳದ ಬುಡಕಟ್ಟು ಜನಾಂಗಕ್ಕೆ ಪರಿಹಾರ ವಸ್ತುಗಳ ಪೂರೈಕೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಜಗದ್ಗುರು ಶಂಕರಾಚಾರ್ಯ ಶ್ರಿಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟು ಮತ್ತು ಮೇಪಾಡಿ ಗ್ರಾಮಗಳ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಸುಮಾರು ೧೫೦ ನೆರೆ ಸಂತ್ರಸ್ತ ಬುಡಕಟ್ಟು ಕುಟುಂಬಗಳಿಗೆ ಹೊದಿಕೆ, ಮಹಿಳೆ-ಪುರುಷ-ಮಕ್ಕಳ ದಿನಬಳಕೆ ಉಡುಪುಗಳು, ಅಕ್ಕಿ-ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.   ಈ ಪ್ರದೇಶಗಳು ದಟ್ಟ ಅರಣ್ಯದಲ್ಲಿ ಇರುವುದರಿಂದ ನಗರ ಜೀವನದೊಂದಿಗೆ ಅಷ್ಟಾಗಿ ಸಂಪರ್ಕವನ್ನು ಹೊಂದಿರುವುದಿಲ್ಲ, ಹಾಗಾಗಿ ಸರ್ಕಾರವಾಗಲಿ, ಸಂಘ ಸಂಸ್ಥೆಗಳಾಗಲಿ ಅವರನ್ನು ತಲುಪಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ […]

Continue Reading

ಫಕೀರೇಶ್ವರ ಸಂಸ್ಥಾನಮಠದ ಶ್ರೀಗಳ ಬೇಟಿ

ಹೊಸನಗರ: ಶ್ರೀರಾಮಚಂದ್ರಾಪುರಮಠದ ವತಿಯಿಂದ ಭಾರತೀಯ ಗೋತಳಿಗಳ ಸಂವರ್ಧನಾ ಕೇಂದ್ರವಾದ ಮಹಾನಂದಿ ಗೋಲೋಕಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಶ್ರೀ ಫಕೀರ ಸಿದ್ಧರಾಮ ಸ್ವಾಮಿಗಳು ಬೇಟಿ ನೀಡಿದರು.   ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೊಶಾಲೆಯಲ್ಲಿ ಕಾಲ ಕಳೆದದ್ದು ಸಂತಸವನ್ನು ತಂದಿದೆ. ಇಲ್ಲಿರುವ ಉತ್ಪನ್ನಕ್ಕಿಂತ ಶ್ರಮವೇ ಜಾಸ್ತಿ ಇದೆ. ಭಾರತೀಯ ಗೋಸಂತತಿಗಳನ್ನ ಉಳಿಸಿ ಬೆಳೆಸುವ ಶ್ರೀಗಳವರ ಪ್ರಯತ್ನ ಬಹು ಶ್ಲಾಘನೀಯ ಎಂದು ತಿಳಿಸಿದ್ದಾರೆ.   ಮಹಾನಂದಿ ಗೋಲೋಕದ ಉಸ್ತುವಾರಿ ಕೆ. ಪಿ. ಎಡಪ್ಪಾಡಿ, ಗೋಶಾಲೆಯ ಜಿ. […]

Continue Reading

ಗಣೇಶಚತುರ್ಥಿ ಚಿತ್ರ ಸ್ಪರ್ಧೆಯಲ್ಲಿ ಗೆದ್ದವರಾರು?

ಬಾಲ ವಿಭಾಗದಲ್ಲಿ ಪ್ರಥಮ ಪುಣ್ಯ ಭಟ್ ಬಿ.   ದ್ವಿತೀಯ ಅನ್ವಿತಾ ಸಾವಿತ್ರಿ   ಮೆಚ್ಚುಗೆ ನಿಯತಿ ಯು. ಭಟ್   ಈಶಾನ್ ಎನ್.   ಪ್ರೌಢ ವಿಭಾಗದಲ್ಲಿ ಪ್ರಥಮ ರಮ್ಯ ಕೆ. ಎಂ.   ದ್ವಿತೀಯ ಆತ್ಮಿಕಾ ಎಸ್. ಭಟ್   ಮೆಚ್ಚುಗೆ ಲಕ್ಷ್ಮೀ ಕೆ. ಜಿ.   ಭಾವನಾ ಬಾಲಚಂದ್ರ ಹೆಗಡೆ     ಯುವ ವಿಭಾಗದಲ್ಲಿ ಪ್ರಥಮ ರವೀಂದ್ರ ಹೆಗಡೆ   ದ್ವಿತೀಯ ಮುಗ್ದಾ ಭಟ್   ಮೆಚ್ಚುಗೆ ವಿದ್ಯಾ ಹೆಗಡೆ   […]

Continue Reading

ತೇಜೋವಧೆ ಮಾಡುತ್ತಿದ್ದವರಿಗೆ ನ್ಯಾಯಾಲಯ ಮಾಡಿದ್ದೇನು !

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ಆಧಾರರಹಿತವಾದ ವದಂತಿಗಳನ್ನು ಹಬ್ಬಿಸಿ, ತೇಜೋವಧೆ ಮಾಡುವ ಹಾಗೂ ಸಮಾಜದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಹೊಳೆನರಸಿಪುರ ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯ ಆದೇಶ ನೀಡಿದೆ.   ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಸಮಾಜದಲ್ಲಿ ಧಾರ್ಮಿಕತೆಯನ್ನು ಬೆಳೆಸುವ ಜೊತೆಗೆ ಸರ್ವಸಮಾಜದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಮಠದ ವ್ಯವಹಾರಗಳನ್ನು ಪಾರದರ್ಶಕವಾಗಿ ಇಟ್ಟಿರುವ ಜೊತೆಗೆ ಸುವ್ಯವಸ್ಥಿತ ಆಡಳಿತವನ್ನು ನೀಡಿದ್ದಾರೆ. […]

Continue Reading

ಭಾರತೀಯ ಗೋ ಪರಿವಾರದಿಂದ ಮುಂದುವರಿದ ನೆರವು ವಿತರಣೆ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರದ ವತಿಯಿಂದ ೧ಲೋಡ್ ಮೇವು ಚಿಕ್ಕಬಳ್ಳಾಪುರ ಭಾಗದಿಂದ ಸಂಗ್ರಹಿಸಿ ಹೊಸನಗರ, ನಗರ ಪ್ರದೇಶದ ನೆರೆ ಸಂತ್ರಸ್ತರಿಗೆ ವಿತರಣೆ ಮಾಡಲಾಯಿತು. ಮೇವಿನ ಪ್ರಾಯೋಜಕತ್ವವನ್ನು ಭಾರತೀಯ ಗೋ ಪರಿವಾರ ಚಿಕ್ಕಬಳ್ಳಾಪುರ ಸಂಚಾಲಕ ನಾರಾಯಣಪ್ಪ ಮತ್ತು ತಂಡ ಮಾಡಿದರು. ಶ್ರೀರಾಮಚಂದ್ರಾಪುರ ಮಠ ಸಾಗಾಣಿಕೆಯ ಜಾವಾಬ್ದಾರಿ ವಹಿಸಿದ್ದು, ಭಾರತೀಯ ಗೋಪರಿವಾರದ ಶ್ರೀಸಂಯೋಜಕ ಆರ್ ಕೆ ಭಟ್ ಸಂಯೋಜನೆ ಮಾಡಿದ್ದಾರೆ. ಭಾರತೀಯ ಗೋಪರಿವಾರ ಮಾರ್ಗದರ್ಶಕ ವಿ ಡಿ ಭಟ್ ಮತ್ತು ತಂಡದ ಸಂಯೋಜನೆಯಲ್ಲಿ ಅಂಕೋಲ, ಗುಂಡಬಾಳ, ಹಿಲ್ಲೂರು ಭಾಗದ […]

Continue Reading

ಬಜಕೂಡ್ಲು ಗೋಶಾಲೆಯಲ್ಲಿ ಗಣೇಶ ಚತುರ್ಥಿ

ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕಾಮದುಘಾ ಯೋಜನೆಯಲ್ಲಿ ಕಾರ್ಯಾಚರಿಸುತ್ತಿರುವ ಬಜಕೋಡ್ಲು ಅಮೃತಧಾರಾ ಗೋಶಾಲೆಯಲ್ಲಿ ಎಣ್ಮಕಜೆ ವಲಯ ವೈದಿಕ ವಿಭಾಗದ ನೇತೃತ್ವದಲ್ಲಿ ಸೆ.೨ರಂದು ಬೆಳಗ್ಗೆ ಗಣಪತಿ ಹವನ, ಗೋಪಾಲಕೃಷ್ಣ ಪೂಜೆ, ಗೋಪೂಜೆಯೊಂದಿಗೆ ಗಣೇಶ ಚತುರ್ಥಿ ಸಮಾರಂಭ ನಡೆಯಿತು. ಮಹಾಮಂಡಲ ಧರ್ಮಕರ್ಮ ಸಹಕಾರ್ಯದರ್ಶಿ ವೇ. ಮೂ. ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.

Continue Reading

ನೆರೆಯಿಂದ ಸಂತ್ರಸ್ತ ಜನತೆಗೆ ಭಾರತೀಯ ಗೋಪರಿವಾರದ ನೆರವು

ಬೆಂಗಳೂರು: ಶ್ರೀರಾಮಚಂದ್ರಾಪುರಮಠ ಭಾರತೀಯ ಗೋಪರಿವಾರ ತಂಡದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ನೆರೆ ಸಂತ್ರಸ್ತ ಪ್ರದೇಶಗಳಿಗೆ ಸುಮಾರು 25ಲೋಡ್ ಮೇವು, ಸುಮಾರು 4ಲಕ್ಷ ಮೌಲ್ಯದ ಅಗತ್ಯ ವಸ್ತುಗಳು, 1ಟನ್ ಅಕ್ಕಿ, 18ಟನ್ ಪಶು ಆಹಾರ ಸಂಗ್ರಹಿಸಿ ವಿತರಣೆ ಮಾಡುವ ಮಹಾ ಕಾರ್ಯವನ್ನು ಮಾಡಲಾಯಿತು. ದಾವಣಗೆರೆ ಜಿಲ್ಲೆಯಿಂದ 2ಲೋಡ್ ಒಣಹುಲ್ಲನ್ನು ಜಿಲ್ಲಾ ಗೋ ಸಂಚಾಲಕ ಶ್ರೀಕಾಂತ್ ಮತ್ತು ಗೋಪರಿವಾರದ ಸದಸ್ಯರು ದಾನಿಗಳಿಂದ ಸಂಗ್ರಹಿಸಿ ಹಾನಗಲ್‌ನ ತಿಳುವಳ್ಳಿಯ ವಿಶ್ವಹಿಂದೂ ಪರಿಷತ್, ಭಜರಂಗ ದಳ ಸಂಚಾಲಿತ ಗೋಶಾಲೆಗೆ […]

Continue Reading

ಶ್ರೀರಾಮಾಶ್ರಮದಲ್ಲಿ ಬೆಣ್ಣೆ ಸವಿದರಾ ಕೃಷ್ಣ – ರಾಧೆಯರು ?

ಬೆಂಗಳೂರು: ಗಿರಿನಗರದ ಶ್ರೀರಾಮಾಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವೈವಿಧ್ಯಮಯವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.   ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಜರುಗಿದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಬೆಳಗ್ಗೆ ಕೃಷ್ಣ-ರಾಧೆ ವೇಷಭೂಷಣ ತೊಟ್ಟು ಬಂದ ಪುಟಾಣಿಗಳಿಗೆ ಕೃಷ್ಣನ ಕುರಿತಾದ ರಸಪ್ರಶ್ನೆಗಳನ್ನು ಕೇಳಲಾಯಿತು. ಆ ಬಳಿಕ ಯಶೋಧೆ ಮಾತೆಯರು ಕೃಷ್ಣನನ್ನು ಮಡಿಲಲ್ಲಿ ಕೂರಿಸಿಕೊಂಡು ಮೊಸರನ್ನು ಕಡೆದು ಬೆಣ್ಣೆ ತೆಗೆದ ಸಂದರ್ಭವು ಸಂತಸವನ್ನು ಹೆಚ್ಚಿಸಿತು. ಈ ಬೆಣ್ಣೆಯನ್ನು ಕೃಷ್ಣ-ರಾಧೆ ವೇಷ ತೊಟ್ಟ ಮಕ್ಕಳಿಗೆ ಶ್ರೀ ರಾಘವೇಶ್ವರ […]

Continue Reading

ಗೋ ಆಶ್ರಮದಲ್ಲಿ ತಂತ್ರಜ್ಞರಿಂದ ಶ್ರಮ ಸೇವೆ.

ಮಾಲೂರು: ತಾಲೂಕಿನ ಗಂಗಾಪುರ ಶ್ರೀ ರಾಘವೇಂದ್ರ ಗೋ ಆಶ್ರಮದಲ್ಲಿ ಅಂತರಾಷ್ಟ್ರೀಯ ಸಂಸ್ಥೆ ಡೆಲ್ – ಇಎಂಸಿ ಗೋಪಾಲ್ಸ್ ಸ್ವಯಂಸೇವಕರು ಗುರುವಾರ ಶ್ರಮ ಸೇವೆ ನಡೆಸಿದರು.   ಸೋಮವಾರ ಸುರಿದ ಬಾರಿ ಮಳೆಯಿಂದ ಗೋಆಶ್ರಮದ ಕೊಟ್ಟಿಗೆಯೊಂದರ ಗೋಡೆ ಭಾಗಶಃ ಕುಸಿದಿದ್ದು, ಇದರ ಕಲ್ಲುಗಳ ಸ್ಥಳಾಂತರಿಸಿ, ಸ್ವಚ್ಛ ಮಾಡಿದರು.   ಗೋಶಾಲೆಯಲ್ಲಿರುವ ಸುಮಾರು ಎಂಟು ಗೋತಳಿಗಳ ವಿಶೇಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋಶಾಲೆಯ ಆವರಣದಲ್ಲಿ ವರ್ಷದ ಹಿಂದೆ ತಾವು ನೆಟ್ಟ ಗಿಡಗಳ ನಡುವೆ ಬೆಳೆದ ಕಳೆಗಳನ್ನು ಕಿತ್ತು ಸ್ವಚ್ಛ ಗೊಳಿಸಿದರು. […]

Continue Reading

ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ : ಹರಿಕೃಷ್ಣ ಪುನರೂರು

ನಂತೂರು: ಕರ್ನಾಟಕದಲ್ಲಿ ಶೇ.35ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಿದ್ದಾರೆ. ಬೇರೆ ರಾಜ್ಯದವರು ಕರ್ನಾಟಕಕ್ಕೆ ಬಂದು ಕನ್ನಡವನ್ನು ಕಲಿಯುತ್ತಿಲ್ಲ. ಇಂಗ್ಲಿಷ್ ಮಾಧ್ಯಮಕ್ಕೆ ವಿರೋಧವಲ್ಲ. ಆದರೆ ಕನ್ನಡ ಮತ್ತು ತುಳುವನ್ನು ಮರೆಯಬಾರದು. ಎಲ್ಲ ಭಾಷೆ ಕಲಿಯಬಹುದು. ಮಕ್ಕಳು ಮನಸ್ಸನ್ನು ಅರಳಿಸುವ ಸಾಹಿತ್ಯ ಓದಬೇಕು. ಕೆರಳಿಸುವುದನ್ನಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹೇಳಿದರು.   ಅವರು ಬುಧವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ಕನ್ನಡ […]

Continue Reading

ಹವ್ಯಕ ಮಹಾಸಭಾದಿಂದ ಗುರುಭಿಕ್ಷಾಸೇವೆ.

ಹವ್ಯಕ ಮಹಾಸಭೆಯು ಸಮಾಜಮುಖೀ ಕಾರ್ಯದಲ್ಲಿ ನಿರತವಾಗಿದ್ದು, ಸಮಾಜಕ್ಕೆ ಶಕ್ತಿ ತುಂಬುವ; ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಮಹಾಸಭೆಯ ಕಾರ್ಯಗಳ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶಾಖಾಮಠದಲ್ಲಿ ಚಾತುರ್ಮಾಸ್ಯವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಮಹಾಸಭೆಯ ಕಾರ್ಯಗಳ ಬಗ್ಗೆ ಪದಾಧಿಕಾರಿಗಳಿಂದ ಮಾಹಿತಿಪಡೆದು, ಮಹಾಸಭೆಗೆ ಗುರುಪೀಠದ ಆಶೀರ್ವಾದ ಹಾಗೂ ಮಾರ್ಗದರ್ಶನ ಸದಾ ಇರಲಿದೆ ಎಂದರು. ಮಹಾಸಭೆಯ […]

Continue Reading

ಮನೆ ಮನೆಯಲ್ಲಿ ರುದ್ರಪಠಣ

ನಮ್ಮ ಮನೆ ಮನೆಗಳಲ್ಲಿ ರುದ್ರಪಠಣವಾಗಬೇಕು ಎನ್ನುವ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹಾಸಂಕಲ್ಪದಂತೆ ಅದರಂತೆ ಇಂದು ಗುರುವಂದನೆಯೊಂದಿಗೆ ಮಂಗಳೂರು ಮಂಡಲ-ವಿಟ್ಲ ವಲಯದ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ರುದ್ರಪಠಣವು ನಡೆಯಿತು.   ಮಂಡಲದ ವೈದಿಕ ಪ್ರಧಾನರಾದ ವೇ. ಮೂ. ಅಮೈ ಶಿವಪ್ರಸಾದ ಭಟ್ಟರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವೈದಿಕರು, ವಲಯ ಪದಾಧಿಕಾರಿಗಳು ಮತ್ತು ಶಿಷ್ಯ ಭಕ್ತರು ಇದರಲ್ಲಿ ಭಾಗವಹಿಸಿದ್ದರು.

Continue Reading