ಶತಮಾನ ಕಂಡ, ಸಾವಿರ ವಿದ್ಯಾರ್ಥಿಗಳಿಗೆ ಬದುಕು ಕೊಟ್ಟ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ

ಕೆಕ್ಕಾರಿನ ಪ್ರಕೃತಿಯ ಸುಂದರ ಮಡಿಲಲ್ಲಿ ತಲೆ ಎತ್ತಿ ನಿಂತಿದೆ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ. ಡಿಸೆಂಬರ್ 12, 1911ರಲ್ಲಿ ವಿದ್ವಾಂಸರೂ, ಸಂಸ್ಕೃತಕಾವ್ಯಗಳ ರಚನೆಯಲ್ಲಿ ನಿಷ್ಣಾತರೂ ಆದ ಕೆಕ್ಕಾರಿನ ಶಿವಭಟ್ಟರು ಸಂಸ್ಕೃತಿ ಮತ್ತು ಸಂಸ್ಕಾರವಂತ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳು ಪರಿಶ್ರಮಿಸಿ ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿದರು. ಆಗಿನ ಕಾಲಕ್ಕೆ ಶಾಲೆಯದೇ ಆದ ಕಟ್ಟಡಗಳು ಇಲ್ಲದ ಕಾರಣ ಮಠದಲ್ಲಿ, ಕೆಕ್ಕಾರಿನ ಮನೆಗಳಲ್ಲಿ ಪಾಠ-ಪ್ರವಚನಗಳನ್ನು ಮಾಡಿ ಸಂಸ್ಕಾರವಂತ ಸಮಾಜಕ್ಕೆ ನಿರಂತರ ಶ್ರಮಿಸಿದರು; ಅವರಂತಹ ಅನೇಕ ಶ್ರೇಷ್ಠ ವಿದ್ವಾಂಸರನ್ನೂ ನಾಡಿಗೆ ಕೊಟ್ಟರು. ಆ ಕನಸಿನ […]

Continue Reading

ರಾಘವೇಂದ್ರ ಭಟ್ಟ, ಕ್ಯಾದಗಿಯವರಿಗೆ ಪಿಹೆಚ್.ಡಿ. ಪ್ರದಾನ

ದೇಶದ ಅತ್ಯುತ್ಕೃಷ್ಟ ಸಂಸ್ಕೃತ ವಿಶ್ವವಿದ್ಯಾಲಯವಾದ ತಿರುಪತಿಯ ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದಲ್ಲಿ 09.02.2019 ರಂದು ನಡೆದ 22 ನೇ ಘಟಿಕೋತ್ಸವದಲ್ಲಿ ರಾಘವೇಂದ್ರ ಭಟ್ಟ ಕ್ಯಾದಗಿ ಇವರಿಗೆ ಪಿಹೆಚ್.ಡಿ. ಪ್ರದಾನ ಮಾಡಲಾಯಿತು.   `ಮಾಧ್ಯಮಿಕಸ್ತರೇ ಸಂಸ್ಕೃತಾಧ್ಯಯನಸಮಸ್ಯಾನಾಂ ಪ್ರಯೋಗಾತ್ಮಕಮಧ್ಯಯನಂ ಪರಿಹಾರೋಪಾಯಾಶ್ಚ’ – `An Experimental Study of Problems of Learning Sanskrit at Secondary Level and Remedial Measures’ ಎಂಬ ವಿಷಯದಲ್ಲಿ ನಡೆಸಿದ ಪ್ರಯೋಗಾತ್ಮಕವಾದ ವೈಜ್ಞಾನಿಕ ಸಂಶೋಧನಾಧ್ಯಯನಕ್ಕೆ ಡಾಕ್ಟರೇಟ್ ಪದವಿ ಲಭಿಸಿದ್ದು, ರಾಷ್ಟ್ರಿಯ ಸಂಸ್ಕೃತ ವಿದ್ಯಾಪೀಠದ ಕುಲಾಧಿಪತಿ, ಭಾರತದ […]

Continue Reading

ಮಾಣಿ ಮಠದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 100 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅನುಗ್ರಹ

  ಮಾಣಿ-ಪೆರಾಜೆ (ಶ್ರೀರಾಮಚಂದ್ರಾಪುರ ಮಠ): ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಒಟ್ಟು 100 ಮಂದಿ ವಿದ್ಯಾರ್ಥಿಗಳಿಗೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರತಿಭಾ ಪುರಸ್ಕಾರ ಅನುಗ್ರಹಿಸಿದರು. ಮಾಣಿ ಮಠದಲ್ಲಿ ದಿನಾಂಕ 09-02-2019 ಮತ್ತು 10-02-2019 ರಂದು ನಡೆದ ಮಂಗಳೂರು ಹೋಬಳಿ ವಾರ್ಷಿಕೋತ್ಸವ, ಶ್ರೀರಾಮ ವೇದ ಪಾಠಶಾಲೆಯ ವಾರ್ಷಿಕೋತ್ಸವ ಮತ್ತು ಸೂತ್ರಸಂಗಮ ಕಾರ್ಯಕ್ರಮಗಳ ಶುಭ ಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ವಿದ್ಯಾರ್ಥಿವಾಹಿನೀ ವಿಭಾಗದಿಂದ ಗುರುತಿಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಸಂಸ್ಥಾನದವರಿಂದ ಅನುಗ್ರಹ ಪೂರ್ವಕ ಪ್ರತಿಭಾ ಪುರಸ್ಕಾರ ಪ್ರಾಪ್ತವಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಶ್ರೀಸಂಸ್ಥಾನದವರು ಮಾತನಾಡಿಸಿ […]

Continue Reading

ಶ್ರೀಭಾರತಿ ವಿದ್ಯಾಲಯದಲ್ಲಿ ವಿಶಿಷ್ಟವಾದ ಶಾಲಾ ವಾರ್ಷಿಕೋತ್ಸವ

ಬೆಂಗಳೂರು: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನನ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹಂಪಿನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ನಡೆಯಿತು.   ಗುರುವಂದನೆಯೊಂದಿಗೆ ಉದ್ಘಾಟನೆಗೊಂಡ ಸಭೆಗೆ ಆಗಮಿಸಿದ ಶಿಕ್ಷಣ ತಜ್ಞ ಡಾ.ವೂಡೆ ಪಿ ಕೃಷ್ಣ ಅವರು ಪರಮಪೂಜ್ಯರ ದಿವ್ಯ ಪರಿಕಲ್ಪನೆಯನ್ನು, ಶಾಲಾಡಳಿತದ ಪರಿಶ್ರಮ, ಶಿಕ್ಷಕರ ನಿಷ್ಠೆ ಹಾಗೂ ಮಕ್ಕಳ ಪ್ರತಿಭಾಶಾಲಿತ್ವವನ್ನೂ ಪ್ರಶಂಸಿಸಿ ಪಾಲಕರಿಗೆ ಕಿವಿಮಾತನ್ನೂ ಹೇಳಿದರು.   ಶಾಲಾ ಪ್ರಶಾಸನ ಮಂಡಳಿ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆಯವರು ಗಣ್ಯರನ್ನು ಸ್ವಾಗತಿಸಿ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.   ಕಾರ್ಯದರ್ಶಿಗಳಾದ ಪ್ರಮೋದ […]

Continue Reading

ಮುಳ್ಳೇರಿಯ ಮಂಡಲದ ಗುಂಪೆ ವಲಯದಲ್ಲಿ ವಿದ್ಯಾರ್ಥಿವಾಹಿನಿಯಿಂದ ಪರೀಕ್ಷಾ ಸಿದ್ಧತಾ ಕಾರ್ಯಾಗಾರ : ಪರೀಕ್ಷೆ-ನಿರೀಕ್ಷೆ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುವ ಹವ್ಯಕ ಮಹಾ ಮಂಡಲದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಸಹಕಾರದೊಂದಿಗೆ ಗುಂಪೆ ವಲಯ ವಿದ್ಯಾರ್ಥಿವಾಹಿನಿಯ ಪ್ರಾಯೋಜಕತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕದಲ್ಲಿ ದಿನಾಂಕ 7-2-2019 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ಪರೀಕ್ಷೆ-ನಿರೀಕ್ಷೆ ಕಾರ್ಯಕ್ರಮ ನಡೆಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಶಂಕರನಾರಾಯಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತನಾರಾಯಣ ಪದಕಣ್ಣಾಯ, ಶ್ರೀ ಭಾರತೀ ಕಾಲೇಜು ನಂತೂರು ಶುಭ ಹಾರೈಸಿದರು. ” […]

Continue Reading

ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಹತ್ತು ದಿನಗಳ ಕಾಲದ ಇಂಗ್ಲೀಷ್ ಮತ್ತು ವ್ಯಕ್ತಿವಿಕಾಸನ ಶಿಬಿರ

ಮಂಗಳೂರು : ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹತ್ತು ದಿನದ ರಜಾ ಕಾಲದ ವಿಶೇಷ Spoken English ಹಾಗೂ personality development ಶಿಬಿರ ಪ್ರಾರಂಭವಾಗಿದೆ. ಮೊದಲ ದಿನದ ಶಿಬಿರದಲ್ಲಿ ಅಂಗಡಿ ಮೊಗರು ಶಾಲೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೇರಳದ ಪಠ್ಯ ಪುಸ್ತಕ ಸಮಿತಿಯ ಸದಸ್ಯ ಮತ್ತು ರಾಜ್ಯ ಶಿಕ್ಷಕರ ಇಂಗ್ಲೀಷ್ ತರಬೇತಿದಾರರು, ರಾಜ್ಯ ಮಟ್ಟದ skill development ತರಬೇತಿದಾರರಾದ ರವಿಶಂಕರ ಭಟ್ ವಿದ್ಯಾರ್ಥಿಗಳಿಗೆ creativity and problem solving […]

Continue Reading

ಪರೀಕ್ಷೆ ಎದುರಿಸುವ ಸಾಮರ್ಥ್ಯದ ಬಗ್ಗೆ ಕಾರ್ಯಗಾರ

ಶ್ರೀ ಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾದಿಂದ ಶ್ರೀ ಅನಂತ ನಾರಾಯಣ ಪದಕಣ್ಣಯ್ಯ ಇವರಿಂದ ಸರ್ಕಾರಿ ಪ್ರೌಢಶಾಲೆ ಮೂಡುಶೆಡ್ಡೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮತ್ತು ಪರೀಕ್ಷೆ ಎದುರಿಸುವ ಸಾಮರ್ಥ್ಯ ಬಗ್ಗೆ ಕಾರ್ಯಾಗಾರ ನಡೆಸಲಾಯಿತು. ಸುಮಾರು 45 ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಭಾಸ್ಕರ್ ಹೊಸ ಮನೆ ಸ್ವಾಗತಿಸಿ, ವಂದಿಸಿದರು.  

Continue Reading

ವರ್ಧಂತಿ ಉತ್ಸವದಂತೆ ಆಚರಣೆಯಾಯ್ತು ಶಾಲೆಯ ಹುಟ್ಟುಹಬ್ಬ

ಮುಜುಂಗಾವು: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ವರ್ಧಂತ್ಯುತ್ಸವವು 26.01.2019ರ ಶನಿವಾರ ನಡೆಯಿತು. ಬೆಳಗ್ಗೆ 9.30ಕ್ಕೆ ದೀಪಪ್ರಜ್ವಲನೆ, ಶಂಖನಾದ ಹಾಗೂ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಪುರುಷೋತ್ತಮಾಚಾರ್ಯರು ಧ್ವಜಾರೋಹಣ ಮಾಡಿ ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್. ಎನ್. ರಾವ್ ಮುನ್ನಿಪ್ಪಾಡಿ ಹಿತವಚನ ನುಡಿದರು. ಅಪರಾಹ್ನ 2 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಎಡನಾಡು ಗ್ರಾಮದ ಗ್ರಾಮಾಧಿಕಾರಿಗಳಾದ ಶ್ರೀ ಸತ್ಯನಾರಾಯಣ ತಂತ್ರಿಯವರು ಮಾತನಾಡಿ, ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವೆಂದರೆ ಅವನಿಗೆ ಮಾತ್ರ […]

Continue Reading

ವಿಜ್ಞಾನ ಕಾರ್ಯಾಗಾರ : ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ

ಬೆಂಗಳೂರು: ಬೆಂಗಳೂರಿನ ಶ್ರೀಭಾರತೀ ವಿದ್ಯಾಲಯದಲ್ಲಿ ರಸಪ್ರಶ್ನೆ ಹಾಗೂ ವಿಜ್ಞಾನ ಕಾರ್ಯಾಗಾರ ನಡೆಯಿತು. ಇಸ್ರೋದ ನಿವೃತ್ತ ಹಾಗೂ ಹಿರಿಯ ವಿಜ್ಞಾನಿಗಳಾದ ಶ್ರೀ ಪಿ.ಜೆ . ಭಟ್ಟ ಕಾರ್ಯಾಗಾರ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. India’s space requirements and accomplishments ವಿಷಯದ ಬಗ್ಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಪನ್ಮೂಲ ವ್ಯಕ್ತಿಗಳು ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.  

Continue Reading

ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಇಂದು “ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

Continue Reading

ಶ್ರೀಭಾರತೀ ಸಂಸ್ಥೆಯಲ್ಲಿ ಮಾದಕದ್ರವ್ಯ ಜಾಗರಣ ಅಭಿಯಾನ

ನಂತೂರು: ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಉತ್ತಮ ಗುಣನಡತೆಗಳ ಮೂಲಕ ಹೆತ್ತವರಿಗೆ, ಗುರುಹಿರಿಯರಿಗೆ, ವಿದ್ಯಾಸಂಸ್ಥೆಗೆ ಕೀರ್ತಿ ತರಬೇಕು. ಮಾದಕ ದ್ರವ್ಯವ್ಯಸನಗಳಿಗೆ ಬಲಿಯಾಗಬಾರದು. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಕೆ ನೀಡುವುದರ ಜತೆಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತದೆ. ಇಲಾಖೆಯು ಮಾದಕ ವಸ್ತು ವಿತರಕರ ಜಾಲವನ್ನು ಪತ್ತೆ ಮಾಡಬೇಕು ಎಂದು ದ.ಕ.ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಒತ್ತಾಯಿಸಿದರು.   ಜನವರಿ 28, ಸೋಮವಾರದಂದು ಮಂಗಳೂರು ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಭವನದಲ್ಲಿ ಶ್ರೀಭಾರತೀ ಪದವಿ […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು: ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ ೭೦ನೇ ಗಣರಾಜ್ಯೋತ್ಸವವನ್ನು ವೈಭವಯುತವಾಗಿ ಆಚರಿಸಲಾಯಿತು.   ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಗಣರಾಜ್ಯೋತ್ಸವದ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಕವಾಯತು ಪ್ರದರ್ಶನ, ದೇಶಭಕ್ತಿ ಗೀತ ಗಾಯನ,ಮುಂತಾದ ಮನರಂಜನಾ ಕಾರ್ಯಕ್ರಮಗಳು ಪ್ರದರ್ಶನಗೊಂಡವು.   ಶ್ರೀ ಗೋಪಾಲಕೃಷ್ಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ಶಿಕ್ಷಕರ ಹಾಗೂ ಪಾಲಕರ ಕ್ರೀಡಾಕೂಟದಲ್ಲಿ ವಿಜೇತ ರಾದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಪ್ರಶಸ್ತಿಪತ್ರ ನೀಡಲಾಯಿತು.   ಶಾಲಾ ವಾರ್ಷಿಕೋತ್ಸವದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಲಲೋಒಯಿತು. ಶಾಲೆಯ […]

Continue Reading

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ `ವಸಂತೋತ್ಸವ’ ಸಮಾರಂಭ

ಬದಿಯಡ್ಕ: ಒಂದು ಮಗುವಿನ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಉದ್ದೇಶವಾಗಿದೆ ಪಠ್ಯೇತರ ಚಟುವಟಿಕೆಗಳಿಗೂ ಪಠ್ಯ ಚಟುವಟಿಕೆಗಳಷ್ಟೇ ಪ್ರಾಧಾನ್ಯವನ್ನಿಟ್ಟು ಕೌಶಲ್ಯಾಧಾರಿತ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯು ನೀಡುತ್ತಾ ಬಂದಿದೆ. ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ವಿಕಾಸಗೊಳ್ಳುವಂತೆ ಮಗುವಿನಲ್ಲಿರುವ ಪ್ರತಿಭೆಯನ್ನು ಮೊದಲೇ ಗುರುತಿಸಿ ರೂಪಿಸುವುದೇ ಶಿಕ್ಷಣವಾಗಿದೆ ಎಂಬುದಾಗಿ ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.   ಅವರು 20-01-2019 ರಂದು ನಡೆದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ `ವಸಂತೋತ್ಸವ’ ಸಮಾರಂಭದಲ್ಲಿ ವಿಶೇಷ ಅಭ್ಯಾಗತರಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. […]

Continue Reading

ಶ್ರೀ ಭಾರತೀ ಕಾಲೇಜಿನಲ್ಲಿ ಜೀವ ವಿಮೆಯಲ್ಲಿ ಉದ್ಯೋಗಾವಕಾಶಗಳು ಎಂಬ ಕುರಿತು ಮಾಹಿತಿ ಕಾರ್ಯಕ್ರಮ

ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಕಾಲೇಜಿನಲ್ಲಿ ಜೀವ ವಿಮೆಯಲ್ಲಿ ಉದ್ಯೋಗಾವಕಾಶಗಳು ಎಂಬ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.   ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಎಲ್‌ಐಸಿಯ ಶಾಖೆ-1ರಲ್ಲಿ ಹಿರಿಯ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರವಿರಾಜ್ ಕುಂಭಾಶಿ ಇವರು ಮಾತನಾಡಿ ಎಲ್‌ಐಸಿಯ ಮೂಲಕ ವಿದ್ಯಾರ್ಥಿಗಳಿಗೂ ಸ್ಕಾಲರ್‌ಶಿಪ್ ಅವಕಾಶವಿದೆ ಅದನ್ನು ಅವರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.   ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಎಲ್‌ಐಸಿಯ ಶಾಖೆ-1ರಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಶುಭಕರ್ ಇವರು […]

Continue Reading

ರಾಜ್ಯ ಮಟ್ಟದ ಚುನಾವಣಾ ರಸಪ್ರಶ್ನೆ : ಪ್ರಗತಿ ವಿದ್ಯಾಲಯ ಪ್ರಥಮ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಚುನಾವಣಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕು. ಸುಮುಖ ಭಟ್ಟ ಹಾಗೂ ಕು. ಸುಜಯ ಭಟ್ಟ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಶಿಕ್ಷಕವೃಂದ ಇವರನ್ನು ಅಭಿನಂದಿಸಿದೆ ಹಾಗೂ ಮುಂದಿನ ಹಂತದ ಸ್ಪರ್ಧೆಗೆ ಶುಭಕೋರಿದೆ.

Continue Reading

ವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿ : ಮಕ್ಕಳಲ್ಲಿ ರಾಷ್ಟ್ರಪ್ರಜ್ಞೆ ಬೆಳೆಸುವತ್ತ ಇನ್ನೊಂದು ಮುಖ್ಯ ಹೆಜ್ಜೆ

ಮೂರೂರು: ದಿನಾಂಕ 12.01.2019, ಶನಿವಾರದಂದು ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರೂ ಶಾಲೆಯ ಮುಖ್ಯ ಅಧ್ಯಾಪಕರೂ ಆದ ಶ್ರೀ ಎಮ್. ಜಿ. ಭಟ್ಟ ಮಾತನಾಡಿ ಸ್ವಾಮಿ ವಿವೇಕಾನಂದರು ಮತ್ತು ರಾಮಕೃಷ್ಣ ಪರಮಹಂಸರ ತತ್ತ್ವದ ಸಾರಾಂಶವನ್ನು ಕಥೆಯ ರೂಪದಲ್ಲಿ ವಿವರಿಸಿದರು.   ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರೆಸ್ಸೆಸ್ಸಿನ ಉತ್ತರಪ್ರಾಂತದ ಮಹಿಳಾ ಸಂಘಟಕರಾದ ಕುನಾರಿ ಸ್ನೇಹಾ ಹೆಗಡೆ ಉಪಸ್ಥಿತರಿದ್ದರು. ಪ್ರಗತಿ ವಿದ್ಯಾಲಯದ ವಿದ್ಯಾರ್ಥಿನಿ ಕು‌ಮಾರಿ ಸ್ವಾತಿ […]

Continue Reading

ಶ್ರೀಭಾರತೀ ವಿದ್ಯಾಲಯದಲ್ಲಿ ಪಾಲಕರ ಕ್ರೀಡಾಕೂಟ

ಬೆಂಗಳೂರು: ನಗರದ ಶ್ರೀಭಾರತೀ ವಿದ್ಯಾಲಯದಲ್ಲಿ ಪಾಲಕರ ಕ್ರೀಡಾಕೂಟವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.   ಕಾಮಧೇನು ಧ್ವಜಾರೋಹಣ ನೆರವೇರಿಸಿ, ದೀಪ ಪ್ರಜ್ವಲನದೊಂದಿಗೆ ಪಾಲಕರ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪಾಲಕರು ಆಸಕ್ತಿಯಿಂದ ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.   ಶಾಲೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಹೆಗಡೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ಪ್ರಮೋದ ಪಂಡಿತ್ ಅವರು ಕ್ರೀಡಾಕೂಟವನ್ನು ಉದ್ದೇಶಿಸಿ ಪ್ರೋತ್ಸಾಹ ಹಾಗೂ ಮೆಚ್ಚುಗೆಯ ಮಾತನಾಡಿದರು.  

Continue Reading

ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕ್ರತ ಮಹಾವಿದ್ಯಾಲಯದ ವಾಣೀಪೂಜಾ ಮತ್ತು ವಾರ್ಷಿಕೋತ್ಸವ

ವಿದ್ಯೆಯ ಸಾರ್ಥಕತೆಯು ಅದರ ಆಚರಣೆಯಲ್ಲಿದೆ : ಪ್ರಮೋದ ಪಂಡಿತ   ವೇದ-ಸಂಸ್ಕ್ರತಗಳ ಮಹತ್ತ್ವವು ಕೇವಲ ಅಧ್ಯಯನದಲ್ಲಿಲ್ಲ; ಅದರ ಆಚರಣೆಯಲ್ಲಿದೆ. ಆಚಾರವಂತನಾದ ವಿದ್ವಾಂಸನಿಗೇ ಜಗತ್ತು ಗೌರವವನ್ನು ಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳೆಲ್ಲರೂ ಜೀವನದಲ್ಲಿ ಆಚಾರ – ವಿಚಾರಗಳ ಶುದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ವಾಂಸ  ಹಾಗೂ ಅವನು ಕಲಿತ ವಿದ್ಯಾಲಯ ಎರಡೂ ಕೀರ್ತಿ ಪಡೆಯುತ್ತವೆ. ನಮ್ಮ ಪೂರ್ವಾಚಾರ್ಯರಿಂದ ಸ್ಥಾಪಿತವಾದ ಈ ವಿದ್ಯಾಲಯವು ನಮ್ಮೆಲ್ಲರ ಆರಾಧ್ಯ ಶ್ರೀಸಂಸ್ಥಾನದವರ ಕೃಪಾಶೀರ್ವಾದದಿಂದ ಸಾವಿರಾರು ವಿದ್ಯಾರ್ಥಿಗಳ ಆಶ್ರಯ ಸ್ಥಾನವಾಗಲಿ. ನಾಡಿನ ಎಲ್ಲ ವಿದ್ಯಾಲಯಗಳಿಗೆ ಆದರ್ಶವಾಗಲಿ, ಎಂದು ವಿದ್ಯಾವಿಭಾಗದ ಕಾರ್ಯದರ್ಶಿಗಳಾದ ಶ್ರೀ […]

Continue Reading

ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿ : ಮೂರೂರು ಶಾಲೆಯ ಮುಕುಟಕ್ಕೆ ಇನ್ನೊಂದು ಗರಿ

ಮೂರೂರು: ಮೂರೂರು ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ವಿಭಾಗದ ಕು. ಅಭಿ ಅಡಿಗುಂಡಿ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು, ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾನೆ.   ಅಭಿ ಸತತ ಲ 3ನೆಯ ಬಾರಿ ರಾಷ್ಟ್ರಮಟ್ಟವನ್ನು ತಲುಪಿದ್ದು ಈತನ‌ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕವರ್ಗ ಅಭಿನಂದನೆ ಕೋರಿವೆ.  

Continue Reading

ಶ್ರೀ ಭಾರತೀ ಗುರುಕುಲಂನಲ್ಲಿ ಅಷ್ಟಾವಧಾನ ಸಹಿತ ಪ್ರದೋಷ ಪೂಜೆ

ಹೊಸನಗರ : ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ಭಾರತೀ ಗುರುಕುಲಂನಲ್ಲಿ ದಿನಾಂಕ 20.12.2018ರ ಬುಧವಾರದಂದು ಅಷ್ಟಾವಧಾನ ಸಹಿತ ಪ್ರದೋಷ ಪೂಜೆ ಸಂಪನ್ನಗೊಂಡಿದೆ. ವೇದ, ಶಾಸ್ತ್ರ, ಪುರಾಣ,ಅಷ್ಟಕ,ಸಂಗೀತ, ವೇಣು,ವೀಣೆ,ಮೃದಂಗ, ಭರತನೃತ್ಯ ಸೇರಿದಂತೆ ಅಷ್ಟಾವಧಾನ ಸೇವೆ ನೆರವೇರಿದೆ.  

Continue Reading