‘ಬದುಕಿನಹಾದಿಗೆ ಸದಾ ಬೆಳಕು ನೀಡುವುದು ಶ್ರೀಗುರುಗಳ ಅನುಗ್ರಹ ‘ – ವಿಜಯಲಕ್ಷ್ಮಿ ಮುಂಡೋಳುಮೂಲೆ
‘ ಬದುಕಿನ ಪ್ರತಿ ಹೆಜ್ಜೆಯಲ್ಲೂ ಗುರುಗಳ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದವಿದ್ದರೆ ಯಾವುದೇ ಕೊರತೆಯಿಲ್ಲದೆ ಜೀವನ ಸಾರ್ಥಕತೆಯತ್ತ ಸಾಗುತ್ತದೆ. ಇದು ನನ್ನ ಜೀವನದ ಅನುಭವ ‘ ಎಂದು ಭಾವಪೂರ್ಣವಾಗಿ ನುಡಿದವರು ಮುಳ್ಳೇರಿಯ ಮಂಡಲ, ಚಂದ್ರಗಿರಿ ವಲಯದ, ಮುಂಡೋಳುಮೂಲೆಯ ವೆಂಕಟೇಶ್ವರ ಭಟ್ ಅವರ ಪತ್ನಿ ವಿಜಯಲಕ್ಷ್ಮಿ. ಇವರು ಮೂಲತಃ ಪಾದೆಕಲ್ಲಿನ ಅರಸಳಿಕೆ ನಾರಾಯಣ ಭಟ್ ಮತ್ತು ಶಾರದಾ ದಂಪತಿಗಳ ಪುತ್ರಿ. ಸುಸಂಸ್ಕೃತ ಪಾದೆಕಲ್ಲು ಮನೆತನದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡವರು. ಗೋಮಾತೆಯ ಒಡನಾಟದಲ್ಲಿ ಬೆಳೆದ […]
Continue Reading