ಗೋಕರ್ಣದಲ್ಲಿ ಮಹಾರುದ್ರಾಭಿಷೇಕ ಸೇವೆ

ಗೋಕರ್ಣ: ಶ್ರೀಮಹಾಬಲೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇವೆ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ನಡೆಯಿತು. ಕುಮಟಾ ಮಂಡಲದ ೩೦, ಹೊನ್ನಾವರ ಮಂಡಲದ ೫೦ ಹಾಗೂ ಸ್ಥಳೀಯ ೪೦ ರುದ್ರಾಧ್ಯಾಯಿಗಳು ಭಾಗವಹಿಸಿದ್ದರು. ವೇ.ಮೂ.ಶಿತಿಕಂಠ ಭಟ್ಟರ ನೇತೃತ್ವದಲ್ಲಿ ಒಟ್ಟು ೧೩೫೬ ರುದ್ರಮಂತ್ರಗಳಿಂದ ಅಭಿಷೇಕ ನೆರವೇರಿತು.

Continue Reading

ಗೋಆಶ್ರಮಕ್ಕೆ ಹುಲ್ಲು ವಿತರಣೆ

ಮಾಲೂರು: ಗಂಗಾಪುರ ಶ್ರೀರಾಘವೇಂದ್ರ ಗೋಆಶ್ರಮಕ್ಕೆ ಕೊಲಾರದ ಕನ್ನಯಲಾಲ್ ನರಸಾಪುರ ಅವರು ಎರಡು ಟ್ರಾಕ್ಟರ್ ರಾಗಿ ಹುಲ್ಲನ್ನು ಕಳುಹಿಸಿರುತ್ತಾರೆ. ಅವರು ಸ್ವತಹ ಆರು ಟ್ರಾಕ್ಟರ್ ಹುಲ್ಲನ್ನು ಕಳೆದ ವರ್ಷ ನೀಡಿರುತ್ತಾರೆ ಹಾಗೂ ತಮ್ಮ ಸಮಾಜದ ಸಂಘಟನೆ ಹಾಗೂ ಮಿತ್ರರ ಮೂಲಕ ಸುಮಾರು ಎಂಟು ಟ್ರಾಕ್ಟರ್ ಹುಲ್ಲನ್ನು ಕೊಟ್ಟಿರುತ್ತಾರೆ.

Continue Reading

ಗೋಸ್ವರ್ಗದಿ ಚಿಣ್ಣರ ಕಲರವ

ಗೋಸ್ವರ್ಗ: ಸಿದ್ಧಾಪುರ ತಾಲೂಕಿನ ರಮಾನಂದ ಶಿಕ್ಷಣ ಸಂಸ್ಥೆ, ವಿದ್ಯಾಗಿರಿ, ಕತ್ರಗಾಲ ಇಲ್ಲಿನ ಪುಟಾಣಿ ಮಕ್ಕಳು ಗೋಸ್ವರ್ಗಕ್ಕೆ ಭೇಟಿನೀಡಿದ್ದರು. ಬೆಳಿಗ್ಗೆ 11ಗಂಟೆಗೆ ಆಗಮಿಸಿದ 120ಮಕ್ಕಳಿಗೆ ಶುದ್ಧದೇಸೀ ಹಾಲನ್ನು ವಿತರಿಸಲಾಯಿತು. ಶ್ರೀರಾಮ ಸನ್ನಿಧಿಯಲ್ಲಿ ಭಜನೆ, ಮಂಗಳಾರತಿ ಸೇವೆಗಳನ್ನು ಪೂರೈಸಿ ಗೋ ದರ್ಶನಕ್ಕೆ ತೆರಳಿದರು. ಗೋಸ್ವರ್ಗದ ಗೋವುಗಳು, ಕರುಗಳೊಡನೆ ಒಡನಾಡಿದರು. ಗೋವೃಂದದ ನಡುವೆ ಭಜನೆ, ಶ್ಲೋಕ ಪಠಣ ಮಾಡಿ ತೀರ್ಥರಾಜ ಮಹಾಸ್ನಾನದಲ್ಲಿ ಪಾಲ್ಗೊಂಡರು. ಮಧ್ಯಾಹ್ನದ ಪ್ರಸಾದ ಭೋಜನ ಸವಿದ ಚಿಣ್ಣರು ಮಠದಂಗಳದಿ ನಲಿದಾಡಿದರು.ಮಕ್ಕಳಿಗೆ ದೇಸೀ ಗೋವುಗಳ ಮಾಹಿತಿ ನೀಡುವ ಉದ್ದೇಶದಿಂದ ಕರೆತಂದ […]

Continue Reading

ಗೋಆಶ್ರಮದಲ್ಲಿ ಗೋಪೂಜೆ

ಮಾಲೂರು: ಕೊಲ್ಕತ್ತಾ ಇಮಾಮಿ ಸಮೂಹ ಶ್ರೀ ರಾಧೇಶ್ಯಾಮ್ ಗೊಯೆಂಕಾ ಅವರು ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಬೇಟಿ ನೀಡಿ, ಶ್ರೀ ಸಿದ್ಧಾಂಜನೇಯ ಸ್ವಾಮಿಯ ಪೂಜೆ ಹಾಗೂ ಗೋಪೂಜೆಯಲ್ಲಿ ಭಾಗವಹಿಸಿದರು. ಜೊತೆಯಲ್ಲಿ ಮಹಾಬೀರ್ ಸೋನಿಕಾ ಇದ್ದರು.

Continue Reading

ದೋಷ ಪರಿಹಾರಕ್ಕಾಗಿ ಗೋಗ್ರಾಸ ಸಮರ್ಪಣೆ

ಗೋಸ್ವರ್ಗ: ಧಾರವಾಡದ ಗೋಪ್ರೇಮಿಗಳಾದ ಶೀಲವಂತ ಮತ್ತು ಕುಟುಂಬದವರು ದೋಷ ಪರಿಹಾರಕ್ಕಾಗಿ ಗೋಸ್ವರ್ಗದಲ್ಲಿನ ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ಸಮರ್ಪಿಸಿದರು. ದೋಷ ಪರಿಹಾರಕ್ಕಾಗಿ ಪಂಡಿತರು ೧೦೦ಗೋವುಗಳಿಗೆ ಏಕಕಾಲದಲ್ಲಿ ಗ್ರಾಸ ಸಮರ್ಪಣೆಯ ಮಾರ್ಗವನ್ನು ಸೂಚಿಸಿದ್ದರಿಂದ ಹಲವು ಕಡೆ ವಿಚಾರಿಸಿ ಗೋಸ್ವರ್ಗದ ಮಾಹಿತಿ ಪಡೆದ ಶೀಲವಂತ ಅವರು ಕುಟುಂಬದವರೊಡನೆ ಗೋಸ್ವರ್ಗಕ್ಕೆ ಆಗಮಿಸಿದ್ದರು. ಕಡಲೆ, ಬೆಲ್ಲ, ಬಾಳೇಹಣ್ಣು, ಹಿಂಡಿ ಇವುಗಳ ವಿಶೇಷ ಗೋಗ್ರಾಸವನ್ನು ಗೋವುಗಳಿಗೆ ಸಮರ್ಪಿಸಿ, ಇಲ್ಲಿನ ವಾತಾವರಣ, ವ್ಯವಸ್ಥೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು. ಪ್ರತಿ ವರ್ಷ ಗೋಸ್ವರ್ಗಕ್ಕೆ ತಮ್ಮ ಸೇವೆಯನ್ನು ಸಲ್ಲಿಸುವ ಅಭಿಲಾಷೆ […]

Continue Reading

ಗೋಸ್ವರ್ಗದಲ್ಲಿ ಗೋದೀಪ ಕಾರ್ಯಾಗಾರ

ಗೋಸ್ವರ್ಗ: ಮಾತೃ ಹಾಗೂ ಮಾತೃತ್ವಮ್ ವಿಭಾಗ ದವರಿಂದ ಗೋಮಯದಿಂದ ಹಣತೆ ಗೋದೀಪ ತಯಾರಿಸುವ ಕಾರ್ಯಾಗಾರವನ್ನು ನ.೨೨ ಮತ್ತು ನ.೨೪ರವರೆಗೆ ಹಮ್ಮಿಕೊಳ್ಳಲಾಗಿತ್ತು. ಮಾತೆಯರಿಗೆ ವಿಕ್ರಮ ಭಟ್ ಇವರು ಗೋದೀಪ ತಯಾರಿಕೆಯ ವಿಧಾನವನ್ನು ತಿಳಿಸಿಕೊಟ್ಟರು. ನ.೨೨ ೧೦ ಮಾತೆಯರಿಂದ ೧೫ ಕೆ. ಜಿ. ಗೋಮಯದಿಂದ ೪ ತಾಸಿಗೆ ೭೩೦ ಹಣತೆಗಳನ್ನು ತಯಾರಿಸಲಾಯಿತು. ನ.೨೪ರಂದು ೧೦ ಮಾತೆಯರಿಂದ ೨೦ಕೆಜಿ ಗೋಮಯದಿಂದ, ೪ ತಾಸಿಗೆ ೧೦೬೬ ಹಣತೆಯನ್ನು ತಯಾರಿಸಲಾಯಿತು. ಸಿದ್ದಾಪುರ ಮಂಡಲ ವ್ಯಾಪ್ತಿಯ ಮಾತೆಯರು ಪಾಲ್ಗೊಂಡಿದ್ದರು.

Continue Reading

ಭಕ್ತಿ ಭಾವದಿಂದ ನಡೆದ ಕಾರ್ತೀಕ ದೀಪೋತ್ಸವ

ಭಾನ್ಕುಳಿ: ಶ್ರೀರಾಮದೇವ ಭಾನ್ಕುಳಿಮಠದ ಶ್ರೀರಾಮದೇವ ಸನ್ನಿಧಿಯಲ್ಲಿ ಕಾರ್ತೀಕ ದೀಪೋತ್ಸವ ಸೇವೆ ನಡೆಯಿತು. ದೀಪಾವಳಿ ಪ್ರತಿಪದೆಯಿಂದ ಆರಂಭಗೊಂಡ ದೀಪೋತ್ಸವ ಸೇವೆ ಕಾರ್ತೀಕ ಮಾಸದ ಕೊನೆಯ ಸೋಮವಾರವಾದ ಕಾರಣ ವಿಜೃಂಭಣೆಯಿಂದ ನಡೆಯಿತು. ಸಹಸ್ರಾಧಿಕ ದೀಪಗಳಿಂದ ಶ್ರೀರಾಮ ಸನ್ನಿಧಿ ಕಂಗೊಳಿಸಿತು. ಗೋಸ್ವರ್ಗದ ಸನಿಹದಲ್ಲೇ ಇರುವ ಪುರಾತನ ಶಿವ ದೇವಾಲಯದಲ್ಲಿ ದೀಪೋತ್ಸವ ಸೇವೆ ನೆರವೇರಿಸಿ, ಸಪ್ತಸನ್ನಿಧಿಯಲ್ಲಿ ದೀಪ ಬೆಳಗಿಸಿ ನಂತರ ರಾಮಸನ್ನಿಧಿಯಲ್ಲಿ ಸೇವೆ ಸಲ್ಲಿಸಲಾಯಿತು. ಈ ದಿನ ೧೨ ಕರ್ತೃಗಳ ಸೇವೆ ರಾಮಾರ್ಪಣಗೊಂಡಿತು.

Continue Reading

ದೇಸಿಗೋವುಗಳ ಮಾಹಿತಿ ಪಡೆದ ಚಿಣ್ಣರು

ಗೋಸ್ವರ್ಗ: ಹೊನ್ನಾವರ ತಾಲ್ಲೂಕಿನ ಕವಲಕ್ಕಿಯ ಶ್ರೀಭಾರತೀ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗೋಸ್ವರ್ಗಕ್ಕೆ ಭೇಟಿ ನೀಡಿ ಗೋವುಗಳ ಮಾಹಿತಿ ಪಡೆದುಕೊಂಡರು. ಸುಮಾರು ೬೦ವಿದ್ಯಾರ್ಥಿಗಳು ಹಾಗೂ ೬ಜನ ಅಧ್ಯಾಪಕರ ತಂಡ ಗೋವುಗಳೊಡನೆ, ಕರುಗಳೊಡನೆ ಒಡನಾಡಿ ಸಂಭ್ರಮಿಸಿದ್ದಲ್ಲದೇ ಗವ್ಯೊತ್ಪನ್ನಗಳ ಕುರಿತು, ದೇಸೀ ಗೋವುಗಳ ವಿಶಿಷ್ಟತೆಯ ಕುರಿತು ಮಾಹಿತಿ ಪಡೆದರು. ಶ್ರೀಮಠದ ಪ್ರಸಾದ ಭೋಜನದ ಸವಿಯನ್ನು ಸವಿದು ಮಠದಂಗಳದಿ ನಲಿದಾಡಿದರು.

Continue Reading

ಶ್ರೀಮಠದ ಸಮಗ್ರ ರೂಪ ಈ ಜಾಲತಾಣ : ಶ್ರೀಸಂಸ್ಥಾನ

ಗಿರಿನಗರ: ದೇವರನ್ನು ತೋರಿಸುವುದು ಮಠ, ಶ್ರೀಮಠದ ಸಮಗ್ರ ರೂಪವನ್ನು ತೋರಿಸುವಲ್ಲಿ srisamsthana.org ಜಾಲತಾಣವು ಸಹಕಾರಿಯಾಗಲಿದೆ. ಮಠವು ಸಮಾಜಕ್ಕೆ ಬೆಳಕನ್ನು ಕೊಡಬೇಕು, ಮಠದ ಮೇಲೆ ಬೆಳಕನ್ನು ಚೆಲ್ಲಬೇಕು ಈ ಜಾಲತಾಣ. ಶ್ರೀಮಠವು ಎಲ್ಲರದ್ದೂ, ಜಗತ್ತಿನಲ್ಲಿರುವ ಎಲ್ಲರಿಗೂ ಮಠವು ಲಭ್ಯವಾಗಬೇಕು. ಮಠವು ನಮ್ಮದು ಹೌದು ಆದರೆ ನಮ್ಮದು ಮಾತ್ರವಲ್ಲ ಎಲ್ಲರದ್ದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ srisamsthana.org ಜಾಲತಾಣ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಆದಿಶಂಕರರು ಮಠವೆಂಬ ದೀಪವನ್ನು […]

Continue Reading

ರುದ್ರ ಮಂತ್ರ ತರಬೇತಿ ಕಾರ್ಯಕ್ರಮ

ಮುಳ್ಳೇರಿಯ: ಧರ್ಮಕರ್ಮ ವಿಭಾಗದ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ವೈದಿಕ ವಿಭಾಗದ ವತಿಯಿಂದ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನ.೨೩ನೇ ಶನಿವಾರ ಸಾಯಂಕಾಲ ವೆ.ಮೂ.ಗೋಪಾಲಕೃಷ್ಣ ಭಟ್ ನಾಯರ್ಪಳ್ಳ ಇವರಿಂದ ಆಸಕ್ತ ವೇದ ವಿದ್ಯಾರ್ಥಿಗಳಿಗೆ ರುದ್ರ ಮಂತ್ರ ತರಬೇತಿ ಕಾರ್ಯಕ್ರಮ ಆರಂಭವಾಯಿತು. ರುದ್ರ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಉದಯಕುಮಾರ್ ನೂಜಿ ಪುತ್ತೂರು ಇವರು ಉಚಿತವಾಗಿ ನೀಡಿದ ಮಂತ್ರ ಗುಚ್ಚ ಪುಸ್ತಕಗಳನ್ನು ವಿತರಿಸಲಾಯಿತು. ಶಂಖನಾದ, ಗುರುವಂದನೆ, ಗೋ ವಂದನೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಅಮ್ಮಂಕಲ್ಲು […]

Continue Reading

ಗೋಆಶ್ರಮದಲ್ಲಿ ಗೋದಾನ ಸೇವೆ

ಮಾಲೂರು: ಚಿಕಾಗೋ ವಾಸಿ ಶ್ರೀಕಿರಣ್ ಕೆನ್ಮೆಡಿ ಇವರು ಇಂದು ಮಾಲೂರು ಗಂಗಾಪುರದ ಶ್ರೀ ರಾಘವೇಂದ್ರ ಗೋಆಶ್ರಮಕ್ಕೆ ಆಗಮಿಸಿ ಗೋದಾನ ಸೇವೆ ಮಾಡಿದರು. ಒಂದು ಓಂಗೋಲ್ ತಳಿಯ ಗೋವನ್ನು ಖರೀದಿಸಿ, ಒಂದು ವರ್ಷ ನಿರ್ವಹಣೆಯ ಖರ್ಚನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಗೋಪೂಜೆಯನ್ನು ನಡೆಸಲಾಯಿತು.

Continue Reading

ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯಕ್ಕೆ ಚಿತ್ತೈಸಿದ ಯತಿಗಳು

ಗೋಸ್ವರ್ಗ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶ ಶ್ರೀ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಗಳು ಗೋಸ್ವರ್ಗಕ್ಕೆ ಚಿತ್ತೈಸಿದ್ದರು. ಶ್ರೀಗಳು ಗೋಮಾತೆಗೆ ಗ್ರಾಸ ಸಮರ್ಪಿಸಿ, ಗೋಸ್ವರ್ಗದ ಸಂಪೂರ್ಣ ಮಾಹಿತಿ ಪಡೆದು ಕಾರ್ಯವೈಖರಿಯ ಕುರಿತು ಶುಭ ಹಾರೈಸಿದರು.ಯತಿಗಳೊಂದಿಗೆ ಸಿದ್ಧಾಪುರದ ಜಿ.ಎಸ್.ಬಿ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆಗಮಿಸಿದ ಯತಿಗಳನ್ನು ಗೋಸ್ವರ್ಗದ ವತಿಯಿಂದ ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಶ್ರೀರಾಮದೇವ ಸನ್ನಿಧಿಯಲ್ಲಿ ಮಂಗಳಾರತಿ ನೆರವೇರಿಸಿ, ಫಲ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಸಮಾಜಬಾಂಧವರ ಆಶಯದಂತೆ ದೇಶೀಗೋವಿನ ಪರಿಶುದ್ಧ ತಾಜಾ ಹಾಲನ್ನು ಸಮರ್ಪಿಸಲಾಯಿತು. ಈಸಂದರ್ಭದಲ್ಲಿ ಹವ್ಯಕ ಮಹಾಮಂಡಲದ ಅಧ್ಯಕ್ಷರಾದ […]

Continue Reading

ಸಾಧನಾ ಸಂಕಲ್ಪ ಪ್ರತಿಜ್ಞಾ ಸಮಾರಂಭ ಹಾಗೂ ಕಾಗೇರಿಯವರಿಗೆ ಸನ್ಮಾನ

ಬೆಂಗಳೂರು: ಇಂದು ಜನನಾಯಕರ ಕುರಿತಾಗಿ ಬಹಳಷ್ಟು ಮಾತನಾಡಲಾಗುತ್ತದೆ. ಆದರೆ ಜನರು ಹೇಗಿರುತ್ತಾರೋ ಅದೇ ರೀತಿಯ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿಧಾನಸಭಾಧ್ಯಕ್ಷರಾದ ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಮಲ್ಲೇಶ್ವರದಲ್ಲಿರುವ ಶ್ರೀಅಖಿಲ ಹವ್ಯಕ ಮಹಾಸಭೆಯಲ್ಲಿ ನ.18ರಂದು ನಡೆದ ‘ಅಭಿನಂದನಾ ಸಮಾರಂಭ’ ಹಾಗೂ ‘ಸಾಧನಾ ಸಂಕಲ್ಪ’ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭೆಯ ಗೌರವವನ್ನು ಸ್ವೀಕರಿಸಿ ಮಾತನಾಡಿದ ಕಾಗೇರಿಯವರು, ಸಮಷ್ಟಿ ಸಮಾಜದ ಎಲ್ಲಾ ವಿಭಾಗಗಳಲ್ಲಿ ಹವ್ಯಕರು ತಮ್ಮ ಪ್ರತಿಭಿಯಿಂದ ನಮ್ಮ ಸಮಾಜವನ್ನು ನಾಡು ಗುರುತಿಸುವಂತೆ ಆಗಿದೆ. ಸಮಾಜದ ಸಂಘಟನೆ […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಬಜಕೂಡ್ಲು: ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಆಹಾರದ ಪೂರೈಕೆಗಾಗಿ ಗೋವಿಗಾಗಿ ಮೇವು – ಸೇವಾ ಅರ್ಘ್ಯ – ಶ್ರಮಾದಾನ ಕಾರ್ಯವು ಮುಳ್ಳೇರಿಯಾ ಹವ್ಯಕ ಮಂಡಲದ ಕುಂಬ್ಳೆ ವಲಯದ ಕಳತ್ತೂರು ಕಾರಿಂಜ ಹಳೆಮನೆ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಗುರುವಂದನೆ, ಗೋವಂದನೆಯೊಂದಿಗೆ ನ.೧೭ ನಡೆಯಿತು. ಮುಳ್ಳೆರಿಯ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಗುರುಮೂರ್ತಿ ಮೇಣ ಇವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಮಾತೃತ್ವಂ ವಿಭಾಗದ ಕಂಬಾರು ಘಟಕದ ಸಂಚಾಲಕಿ ಸುಲೋಚನಾ ಬೆಜಪ್ಪೆಯ ನೇತೃತ್ವದಲ್ಲಿ ಹುಲ್ಲಿನ ಕಟಾವು ಮಾಡುವ ಕೆಲಸ ಪ್ರಾರಂಭ ಮಾಡಲಾಯಿತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ […]

Continue Reading

ಗೋಆಶ್ರಮದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋಪ್ರೇಮಿಗಳು

ಮಾಲೂರು: ಬೆಂಗಳೂರು ನಗರದ ಎಚ್. ಬಿ. ಆರ್. ಬಡಾವಣೆಯ ಸುತ್ತಮುತ್ತಲಿನ ಗೋ ಪ್ರೇಮಿಗಳು ಗೋಆಶ್ಧಾರಮಕ್ಕೆ ಬೇಟಿ ನೀಡಿ ಗೋದಾನ‌, ಗೋಪೂಜೆ ಮಾಡಿ ಗೋಗ್ರಾಸ ನೀಡಿದರು. ಗೋಪೂಜೆಯ ನೇತೃತ್ವವ್ವನ್ನು ವಹಿಸಿದ ವೇ. ಮೂ. ಗೋಪಾಲಕೃಷ್ಣ ಕಾಕತ್ಕರ್ ಅವರು ಗೋಪೂಜೆಯ ಮಹತ್ವದವನ್ನು ವಿವರಿಸಿದರು. ಗೋಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಡಾ. ಶ್ಯಾಮಪ್ರಸಾದ್ ಗೋಶಾಲೆಯ ಹಾಗೂ ಭಾರತೀಯ ಗೋತಳಿಗಳ ಮಾಹಿತಿಯನ್ನು ನೀಡಿದರು. ಗೌವ್ಯ ಉತ್ಪನ್ನಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಗೋಪ್ರೇಮಿಗಳು ಮರೆಯಾಗುವ ದೇಸೀ ಆಟಗಳ ಪರಿಚಯ ಮಾಡುವ ಜತೆಗೆ […]

Continue Reading

ಗೋಸ್ವರ್ಗದಲಿ ಸ್ವರಸಂಗಮ

ಗೋಸ್ವರ್ಗ: ಇಮ್ಯಾಜಿನೇಷನ್ ಸ್ಟುಡಿಯೋ ಪ್ರಸ್ತುತಪಡಿಸುತ್ತಿರುವ ಸ್ವರಸಂಗಮ ಮಾಸ್ಟರ್ ಸಿಂಗರ್’ನ ಮೂರನೇ ಸುತ್ತಿನ ಕಾರ್ಯಗಾರವು ಸಿದ್ದಾಪುರದ ಗೋಸ್ವರ್ಗದಲ್ಲಿ ನಡೆಯಿತು. ಮೂರು ದಿನಗಳ ಕಾಲ ಸ್ಪರ್ಧಾಳುಗಳು ಮುಂದಿನ ಹಂತದ ಸ್ಪರ್ಧೆಯ ವಿವಿಧ ರೀತಿಯ ವಿಷಯಗಳ ಬಗ್ಗೆ ಶ್ರೀಕಾಂತ ಕಾಳಮಂಜಿ, ಜಯರಾಮ ಭಟ್ ಹೆಗ್ಗಾರಳ್ಳಿ, ದೀಪಕ್ ಸಿದ್ದಾಪುರ, ಪ್ರತೀಕ್ ಟಿ ಎಂ ಸಾಗರ, ಹಾಗೂ ವಿಶೇಷ ಅತಿಥಿಯಾಗಿ ಆಗಮಿಸಿದಂತಹ ವಿದುಷಿ ಗಾಯತ್ರಿ ರವೀಂದ್ರ ಇವರುಗಳಿಂದ ಅನೇಕ ವಿಷಯಗಳ ಬಗ್ಗೆ ಹಾಗು ಸಂಗೀತದ ಚಾಕಚಕ್ಯತೆಗಳ ಬಗ್ಗೆ ತರಬೇತಿಯನ್ನಪಡೆದರು. ಪೂಜಾ ಭುವನಿ, ಆದಿಶೇಷ ಪಡುವಗೋಡು, […]

Continue Reading

ಗೋಸ್ವರ್ಗದಲ್ಲಿ ಮಾತೃವಿಭಾಗದಿಂದ ಗೋಪೂಜೆ

ಗೋಸ್ವರ್ಗ: ಸಿದ್ದಾಪುರ ಮಂಡಲದ ಮಾತೃವಿಭಾಗದಿಂದ ಗೋ ಪೂಜೆ ಹಾಗೂ ಕಾರ್ತೀಕ ದೀಪೋತ್ಸವ ಗಜಾನನ ಶಾಸ್ತ್ರೀಗಳವರ ನೇತೃತ್ವದಲ್ಲಿ ನಡೆಯಿತು. ಮಂಡಲದ ಮಾತೃಪ್ರಧಾನೆ ರಾಧಿಕಾ ಮತ್ತು ಗಜಾನನ ಭಟ್ಟ ದಂಪತಿಗಳು ಯಜಮಾನರಾಗಿ ಸಂಕಲ್ಪದಲ್ಲಿ ಪಾಲ್ಗೊಂಡರು. ಮಾತೃವಿಭಾಗದಿಂದ ಗೋವಿಗೆ ಹಿಂಡಿ ಚೀಲವೊಂದನ್ನು ಸಮರ್ಪಿಸಿಲಾಯಿತು. ಮಂಡಲದ ಅಧ್ಯಕ್ಷರಾದ ಸುಬ್ರಾಯ ಹೆಗಡೆ, ಕಾರ್ಯದರ್ಶಿ ಹರ್ಷಾ ಭಟ್ಟ. ಸಂಘಟನಾ ಕಾರ್ಯದರ್ಶಿ ಎಮ್ ಎಮ್ ಹೆಗಡೆ ಮಗೇಗಾರ, ಹಿರಿಯ ಮಾತೆ ಚಂದ್ರಮತಿ ಆರ್ ಹರ್ಗಿ, ಹಾಗೂ ವಲಯದ ಮಾತೃಪ್ರಧಾನರು ಹಾಗೂ ಮಾತೃತ್ವಮ್ ಸಾಗರ ಪ್ರಾಂತ್ಯ ಅಧ್ಯಕ್ಷೆ ವೀಣಾ […]

Continue Reading

ದತ್ತು ಗ್ರಾಮದಲ್ಲಿ ಭತ್ತದ ಕೊಯ್ಲು

ನಂತೂರು: ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದತ್ತು ಸ್ವೀಕರಿಸಿದ ಕುರ್ನಾಡು ಗ್ರಾಮದ ಗದ್ದೆಯಲ್ಲಿ ಭತ್ತದ ಕೊಯ್ಲು ನೆರವೇರಿಸಿತು. ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್., ಸಹಶಿಬಿರಾಧಿಕಾರಿ ಪ್ರವೀಣ್ ಪಿ. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ಅವರ ನೇತೃತ್ವದಲ್ಲಿ ಎನ್ನೆಸ್ಸೆಸ್ ಸ್ವಯಂಸೇವಕರು ಶುಕ್ರವಾರ ಬೆಳಗ್ಗೆ ಗದ್ದೆಗಿಳಿದು ಕೊಯ್ಲು ಆರಂಭಿಸಿದರು. ಅರ್ಧ ಎಕರೆ ಗದ್ದೆಯಲ್ಲಿ ಎಂ.ಆರ್.೪ ಮತ್ತು ಭದ್ರಾ […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಬಜಕೂಡ್ಲು: ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿಯವರ ಸದಾಶಯದಂತೆ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿಗಾಗಿ ಶ್ರೀಯುತ ಪಡಿಯಡ್ಪು ಮಹೇಶ ಭಟ್ ರ ಹಿತ್ತಲಿನ ಹಸಿ ಹುಲ್ಲನ್ನು ಕಟಾವು ಮಾಡಲಾಯಿತು. ಪೆರಡಾಲವಲಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲದ ಗೋ ಸೇವಕರ ಸೇವಾ ಅರ್ಘ್ಯ ನಡೆಯಿತು. ಮಹೇಶ ಭಟ್ ದಂಪತಿಗಳು ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿದರು. ಶ್ರೀರಾಮಚಂದ್ರಾಪುರ ಮಠದ ಕಾಮದುಘ ಕಾರ್ಯದರ್ಶಿ ಡಾ. ವೈ. ವಿ. ಕೃಷ್ಣ ಮೂರ್ತಿ, ಗೋ ವಿಜ್ಞಾನ ತಂಡದ ಸಂಯೋಜಕ ಡಾ. ಜಯಪ್ರಕಾಶ ಲಾಡ, ಬಜಕೂಡ್ಲು ಗೋಶಾಲೆ […]

Continue Reading

ಗೋವಿಗಾಗಿ ಮೇವು ಮೇವಿಗಾಗಿ ನಾವು

ಜೇಡ್ಲ: ಸುಳ್ಯ ವಲಯ ಅಧ್ಯಕ್ಷ ಈಶ್ವರಕುಮಾರ ಭಟ್ಟ ಇವರ ನೇತ್ರತ್ವದಲ್ಲಿ ಗೋಶಾಲೆಯಲ್ಲಿರುವ ಗೋವಿಗಾಗಿ ಹಸಿಹುಲ್ಲನ್ನು ಕತ್ತರಿಸಿ ಕೊಡುವ ಕಾರ್ಯಕ್ರಮ ನ.೬ರಂದು ನಡೆಯಿತು. ಸುಳ್ಯ ಹವ್ಯಕ ವಲಯ ಸೇವಾ ವಿಭಾಗದ ವತಿಯಿಂದ ಡಾ.ರಾಜಾರಾಮರವರ ಆಶ್ರಯ ಕಂಪೌಂಡ್ ವಠಾರದ (ಸರಕಾರಿ ಆಸ್ಪತ್ರೆ ಹಿಂಭಾಗ)ಲ್ಲಿ ಹಸಿಹುಲ್ಲನ್ನು ಕತ್ತರಿಸಿ ಜೇಡ್ಲ ಗೋಶಾಲೆಗೆ ಕಳುಹಿಸಿ ಕೊಡಲಾಯಿತು. ಮೂಲಮಠದ ವಿವಿಪೀಠದ ನಿರ್ದೇಶಕರಾದ ಪ್ರೊ ಶ್ರೀಕೃಷ್ಣ ಭಟ್, ಮಾತೃವಿಭಾಗದ ರಾಜರಾಜೇಶ್ವರಿ, ವಲಯ ಕಾರ್ಯದರ್ಶಿ ವಿಜಯಕೃಷ್ಣ, ಈಶ್ವರ ಭಟ್ ಸೂರ್ತಿಲ, ಸೇವಾ ವಿಭಾಗದ ನಿರ್ದೇಶಕರಾದ ಎಂ.ಪ್ರಶಾಂತ್ ಭಟ್, ವೇಣುಗೋಪಾಲ […]

Continue Reading