ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದಿಂದ ಶ್ರೀಮದ್ವಾಲ್ಮೀಕಿರಾಮಾಯಣ ಪಾರಾಯಣ

ಉಪ್ಪಿನಂಗಡಿ: ಶ್ರೀಸಂಸ್ಥಾನದವರ ಮಹೋನ್ನತ ಸಂಕಲ್ಪ ಹಾಗೂ ಆಶಯದಂತೆ ನವಾಹ ಪದ್ಧತಿಯಂತೆ ನಡೆಯುತ್ತಿರುವ ಶ್ರೀಮದ್ವಾಲ್ಮೀಕಿ ರಾಮಾಯಣದ ಮೂರು ಪಾರಾಯಣವು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ನ. 12ರಂದು ಆರಂಭಗೊಂಡು ನ. 20ರಂದು ಸಮಾಪನಗೊಂಡಿತು.   ನ. 12ರಂದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಮೇಶ ಭಟ್ ಬೈಪದವು ಅವರ ಮನೆಯಲ್ಲಿ ಪಾರಾಯಣ ಪ್ರಾರಂಭಗೊಂಡಿತು. ನ. 13ರಂದು ವೇ.ಬ್ರ. ಬಡಜ ಶ್ರೀ ಜಯರಾಮ ಜೋಯಿಸ, 14ರಂದು ಸಂಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಎಮ್.ಎಚ್. ರಮೇಶ ಭಟ್, 15ರಂದು ಶ್ರೀ […]

Continue Reading

ಅಂಬಾಗಿರಿಯಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ನೂತನ ಯಾಗಶಾಲೆ ಉದ್ಘಾಟನೆ ಸಂಪನ್ನ

ಶಿರಸಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಶ್ವೀಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ, ಅಕ್ಟೋಬರ್ 10 ರಿಂದ 17ರವರೆಗೆ ಶ್ರಿಸಂಸ್ಥಾನದ ಮಾರ್ಗದರ್ಶನದಂತೆ ಶಿರಸಿಯ ಅಂಬಾಗಿರಿ ಕಾಳಿಕಾಮಠದಲ್ಲಿ ಶರನ್ನವರಾತ್ರಿ ಉತ್ಸವ ಜರುಗಿತು.   ಈ ಅಂಗವಾಗಿ ಪ್ರತಿನಿತ್ಯ ಮಾತೆಯರಿಂದ ಕುಂಕುಮಾರ್ಚನೆ, ಪುರುಷರಿಂದ ಗಾಯತ್ರಿಜಪ, ದೇವೀಪಾರಾಯಣ ಮಹಾಪೂಜೆಗಳು, ದಶಮಿಯಂದು ಸಿಮೋಲ್ಲಂಘನ, ಅಷ್ಟಾವಧಾನ ಸೇವೆ ಮಹಾಮಂಗಳಾರತಿಯೊಂದಿಗೆ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು.   ಅಲ್ಲದೇ ದಿನಾಂಕ 20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗೋಪ್ರವೇಶದೊಂದಿಗೆ ನೂತನ ಯಾಗಶಾಲೆ ಪ್ರಾರಂಭೋತ್ಸವ ನೆರವೇರಿತು. ಮರುದಿನ ದ್ವಾದಶಿಯಂದು […]

Continue Reading

ವಿದ್ಯಾರ್ಥಿಗಳಿಗೆ ಕಾರ್ಯಾಗಾರ : ಪರೀಕ್ಷೆ ಎದುರಿಸುವ ವಿಧಾನ – ಮುಂದಿನ ಅವಕಾಶಗಳ ಬಗ್ಗೆ ಮಾಹಿತಿ

ನಲ್ಯಪದವು: ಪಠ್ಯವನ್ನು ಮನನ ಮಾಡಿಕೊಳ್ಳುವ ಹಾಗೂ ಪರೀಕ್ಷೆಯನ್ನು ಎದುರಿಸುವ ವಿಧಾನಗಳು, ಹತ್ತನೆಯ ತರಗತಿಯ ಅನಂತರ ಎದುರಿಸುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಪ್ರೊ. ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.   ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾದಿಂದ ನಲ್ಯಪದವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಯಾವುದೇ ರೀತಿಯಲ್ಲೂ ಭಯಪಡದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಾಗಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಕುಮಾರಿ, ಕಂಪ್ಯೂಟರ್ […]

Continue Reading

ಬೆಳ್ಳೆಚ್ಚಾಲಿನಲ್ಲಿ ಪ್ರದೋಷಕಾಲದ ರುದ್ರಾರಾಧನೆ

ಶ್ರೀಸಂಸ್ಥಾನದವರ ನಿರ್ದೇಶನದಂತೆ ಲೋಕಕಲ್ಯಾಣಾರ್ಥವಾಗಿ ಪ್ರದೋಷಕಾಲದ ರುದ್ರಾರಾಧನೆಯು ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯದ ಬೆಳ್ಳೆಚ್ಚಾಲು ಘಟಕದ ಕುಜತ್ತೋಡಿ ಶ್ರೀ ರಾಜಗೋಪಾಲ ಶರ್ಮಾ ಅವರ ಮನೆಯಲ್ಲಿ ನವೆಂಬರ್ 20ರಂದು ನೆರವೇರಿತು.   ಈ ಕಾರ್ಯಕ್ರಮದಲ್ಲಿ 24 ಮಂದಿ ರುದ್ರಪಾಠಕರು ಭಾಗವಹಿಸಿದರು ಹಾಗೂ 17 ಮಂದಿ ಭಜನ ರಾಮಾಯಣ ಪಾರಾಯಣ ನಡೆಸಿದರು.

Continue Reading

ಗೋವಿಗಾಗಿ ಮೇವು : ಗುಂಪೆ ವಲಯದವರ ಶ್ರಮದಾನ

ಪೆರ್ಲ: ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗರ್ಶನದಲ್ಲಿರುವ ಕಾಸರಗೋಡು ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ನವೆಂಬರ್ 17ರಂದು ಜರಗಿತು.   ಗುಂಪೆ ವಲಯದ ಪುತ್ತಿಗೆ ಸುಬ್ರಾಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿದ್ದ ಹಸಿಹುಲ್ಲನ್ನು ಕತ್ತರಿಸಿ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಕಳುಹಿಸಿಕೊಡಲಾಯಿತು.   ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿಯ ಪ್ರಧಾನ ಶ್ರೀ ಕೇಶವ ಪ್ರಸಾದ ಎಡಕ್ಕಾನ, ಗುಂಪೆ ವಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಬೆಜಪ್ಪ, ನೀರ್ಚಾಲು ವಲಯದ ಶಿಷ್ಯಮಾಧ್ಯಮ ವಿಭಾಗದ ಶ್ರೀ […]

Continue Reading

ಪಳ್ಳತ್ತಡ್ಕ ವಲಯದಲ್ಲಿ ವಾರ್ಷಿಕೋತ್ಸವದ ಸಂಭ್ರಮ : ಶಿಷ್ಯವೃಂದದಿಂದ ಅಮೃತಪಥ, ವೈದಿಕ ಕಾರ್ಯಕ್ರಮ

ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ವಾರ್ಷಿಕೋತ್ಸವವು ನವೆಂಬರ್ 18ರ ಭಾನುವಾರ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಬೆಳಗ್ಗೆ ಗೋಪೂಜೆ, ಗಣಪತಿ ಹವನ, ಮಾತೆಯರಿಂದ ಕುಂಕುಮಾರ್ಚನೆ, ಭಜನೆ, ಭಜನ ರಾಮಾಯಣ, ವಿಷ್ಣುಸಹಸ್ರನಾಮ ಪಾರಾಯಣ ಹಾಗೂ ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಪರಮೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಶ್ರೀಸತ್ಯನಾರಾಯಣ ಪೂಜೆ ಸೇರಿದಂತೆ ಅನೇಕ ವೈದಿಕ ಕಾರ್ಯಕ್ರಮಗಳು ನೆರವೇರಿದವು. ವಲಯ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಭಟ್ ಏತಡ್ಕ ದಂಪತಿ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಕರ್ತೃಗಳಾಗಿ ಪಾಲ್ಗೊಂಡಿದ್ದರು.   ಅನಂತರ ನಡೆದ ಸಭಾ […]

Continue Reading

ಅಮೃತಪಥ : ಗೋವುಗಳು ಸಂಚರಿಸುವ ಹಾದಿ ಪ್ಲ್ಯಾಸ್ಟಿಕ್ ಮುಕ್ತಗೊಳಿಸುವ ವಿಶಿಷ್ಟ ಯೋಜನೆ – ವಲಯಗಳಲ್ಲಿ ಉತ್ತಮ‌ ಪ್ರತಿಕ್ರಿಯೆ

ಬೆಂಗಳೂರು: ಶ್ರೀಸಂಸ್ಥಾನದವರ ದಿವ್ಯ ಮಾರ್ಗದರ್ಶನದಲ್ಲಿ ರೂಪ ಪಡೆದ ಅಮೃತಪಥ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಗೋವುಗಳು ಸಂಚರಿಸುವ ಹಾದಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಅಮೃತ ಸ್ವರೂಪವಾದ ಹಾಲು, ಗೋಮೂತ್ರ, ಗೋಮಯವನ್ನು ನೀಡುವ ಪುಣ್ಯಕೋಟಿಗೆ ಅಮೃತಪಥವನ್ನು ಮಾಡಿ ಕೊಡುವ ಸದುದ್ದೇಶದ ಯೋಜನೆಗೆ ಎಲ್ಲ ಮಂಡಲ ಹಾಗೂ ವಲಯಗಳ ಕಾರ್ಯಕರ್ತರು ಸಹಯೋಗ ನೀಡಿದ್ದಾರೆ.   ಮುಳ್ಳೇರಿಯ: ನಿರ್ಚಾಲು ವಲಯದಲ್ಲಿ ದಿನಾಂಕ ನವೆಂಬರ 18ರಂದು ಬೆಳಗ್ಗೆ 8 ಗಂಟೆಯಿಂದ 9ರವರೆಗೆ ಅಮೃತಪಥ ಕಾರ್ಯಕ್ರಮ ನಡೆಯಿತು. ಕುಂಟಿಕಾನ ಶಾಲೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ […]

Continue Reading

ಭಟ್ಕಳ ಹವ್ಯಕ ವಲಯೋತ್ಸವ: ಆರೋಗ್ಯ ರಕ್ಷಣೆಯ ಕುರಿತು ಉಪನ್ಯಾಸ

ಭಟ್ಕಳ: ಇಲ್ಲಿನ ಹವ್ಯಕ ವಲಯದ ವಾರ್ಷಿಕೋತ್ಸವದ ಅಂಗವಾಗಿ ಸರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ‌. ಇದರ ಪ್ರಥಮ ಕಾರ್ಯಕ್ರಮ ಶಿರಾಲಿ ಸಾಲೆಮನೆಯ ಶ್ರೀ ಪ್ರಕಾಶ ಭಟ್ಟರ ಮನೆಯಲ್ಲಿ ಭಾನುವಾರ ನಡೆಯಿತು.   ವಲಯೋತ್ಸವ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ರಕ್ಷಣೆಯ ಕುರಿತು ಉಪನ್ಯಾಸ ನಡೆಯಿತು. ಆರೋಗ್ಯ ರಕ್ಷಣೆಗೆ ನಾವು ವಹಿಸಬೇಕಾದ ಕಾಳಜಿ ಕುರಿತು ವೈದ್ಯರಾದ ಶ್ರೀ ಡಾ. ಬಾಲಕೃಷ್ಣ ಭಟ್ಟ ಮಾಹಿತಿ ನೀಡಿದರು.   ಶ್ರೀಮಠದ ಸಂಘಟನೆಯ ಕುರಿತು ಶ್ರೀ ನೀಲಕಂಠ ಯಾಜಿ ಮಾತನಾಡಿದರು. ಶ್ರೀ ಕೃಷ್ಣಾನಂದ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆ […]

Continue Reading

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ ಪ್ರೇರಣಾ ನೇತೃತ್ವದಲ್ಲಿ ಉಂಡೆಮನೆ ಶಂಭು ಶರ್ಮ ಪ್ರತಿಷ್ಠಾನದ ವತಿಯಿಂದ ಪರೀಕ್ಷೆ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.   ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಶ್ರೀ ಯು.ಎಸ್. ವಿಶ್ವೇಶ್ವರ ಭಟ್ ತರಬೇತಿ ನೀಡಿದರು.   ಪರೀಕ್ಷೆ ಹೇಗೆ ಎದುರಿಸಬೇಕು, ಯಾವ ರೀತಿ ಸಿದ್ಧರಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು. ಕೋ ಆರ್ಡಿನೇಟರ್ ಶ್ರೀ ಅನಂತನಾರಾಯಣ ಪದಕಣ್ಣಾಯ ತರಬೇತಿಗೆ ಸಹಾಯ […]

Continue Reading

ಗೋಮಹತಿ ಕಾರ್ಯಾಗಾರ

ನೀವು ೧೮-೨೫ ವರ್ಷದೊಳಗಿನವರಾಗಿದ್ದು, ಗೋವನ್ನು ಪ್ರೀತಿಸುವವರಾಗಿದ್ದು, ಗೋವಿನ ಕುರಿತು ಜಾಗೃತಿ ಮೂಡಿಸಲು ಆಸಕ್ತರಿದ್ದೀರೇ? ಉತ್ತಮ ಭಾಷಣಕಾರರಾಗುವ ಗುರಿ ನಿಮಗಿದೆಯೇ? ಹಾಗಿದ್ದರೇ ಈ ಕಾರ್ಯಾಗಾರ ನಿಮಗಾಗಿಯೇ..   ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಘಟಕದ ಗೋಮಹತಿ‌ ವಿಭಾಗ ದಿಂದ ಇದೇ ಡಿಸೆಂಬರ್ 2, ಭಾನುವಾರದಂದು 18 ರಿಂದ 25 ವಯಸ್ಸಿನವರಿಗೆ ಕೋಲಾರ ಜಿಲ್ಲೆಯ ಮಾಲೂರಿನ ಶ್ರೀ ರಾಘವೇಂದ್ರ ಗೋಆಶ್ರಮದಲ್ಲಿ ಗೋಮಹತಿ ಕಾರ್ಯಾಗಾರ ಎಂಬ ಒಂದು ದಿನದ ಉಚಿತ ಭಾಷಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಗೋವಿಚಾರ ಜಾಗೃತಿ, ಭಾಷಣ […]

Continue Reading

ವಿಶಿಷ್ಟ ಗೋಧಾಮ ಗೋಸ್ವರ್ಗಕ್ಕೆ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ್ ಭಟ್, ಕಾರ್ಯದರ್ಶಿ ಪ್ರಶಾಂತ್ ಭಟ್ ಮಳವಳ್ಳಿ, ವಿನಾಯಕ ಮಧ್ಯಸ್ಥ ಹಾಗೂ ಮಹಾಸಭೆಯ ಪದಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.

Continue Reading

ಗೋಸ್ವರ್ಗಕ್ಕೆ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಮಿಸಿ, ಗೋಸ್ವರ್ಗದ ವೀಕ್ಷಣೆ ನೆಡೆಸಿದರು. ಈ ಸಂದರ್ಭದಲ್ಲಿ ಶ್ರೀ ಆರ್.ಎಸ್.ಹೆಗಡೆಯವರು ಉಪಸ್ಥಿತರಿದ್ದರು

Continue Reading

ಉತ್ಥಾನ ದ್ವಾದಶಿಯಂದು ಶ್ರೀಕರಾರ್ಚಿತ ಶ್ರೀರಾಮನಿಗೆ ೧೨೨ ಕೆಜಿ ಗೋಧಿ ಪಾಯಸ ನೈವೇದ್ಯ

ಬೆಂಗಳೂರು: ಉತ್ಥಾನದ್ವಾದಶಿಯ ಪುಣ್ಯಕಾಲದಂದು ಶ್ರೀಸಂಸ್ಥಾನದವರ ಸಂಕಲ್ಪದಂತೆ ಸಪರಿವಾರ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ಅಖಂಡ (ಖಂಡವಿಲ್ಲದ ಇಡಿಯ ಗೋಧಿ) ಗೋಧಿ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು.   ಮುಂಜಾನೆ ಶ್ರೀಸಂಸ್ಥಾನದವರು ರಾಮದೇವರ ಪೂಜೆ ಗೈಯ್ಯುವ ವೇಳೆಗೆ ಘಮಘಮಿಸುವ ತುಂಡಿಲ್ಲದ ಗೋಧಿಯ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ಒಟ್ಟು 8 ದ್ರೋಣದ ಪ್ರಮಾಣದಲ್ಲಿ ಅಂದ್ರೆ ಒಂದು ದ್ರೋಣಕ್ಕೆ 16 ಸೇರಿನ ಪ್ರಮಾಣದಲ್ಲಿ ಒಟ್ಟು 122.850 ಕೆಜಿ ಇಡಿ ಗೋಧಿಯ ಪಾಯಸ ಶ್ರೀರಾಮನಿಗೆ ಸಮರ್ಪಿತಗೊಂಡಿತು. ಶ್ರೀಸಂಸ್ಥಾನದ ಕರದಿಂದ ಅರ್ಚಿತಗೊಳ್ಳುವ ಶ್ರೀರಾಮನಿಗೆ ಪಾಯಸ ಸಮಪರ್ಣೆಗೊಂಡ ಬಳಿಕ ಪ್ರಸಾದವಾಗಿ ಈ […]

Continue Reading

ಮಂಗಳೂರು ಶ್ರೀಭಾರತೀ ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ : ಮಾತಾಪಿತೃ ಪೂಜೆಯೊಂದಿಗೆ ಆಚರಣೆ

ಮಂಗಳೂರು: ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಗಳ ಪ್ರೌಢಶಾಲೆಯಲ್ಲಿ‌ ಮಕ್ಕಳ ದಿನಾಚರಣೆಯಂದು ಮಾತಾಪಿತೃ ಪೂಜೆ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.   ಶಾಲೆಯ ಶಂಕರಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತಾಪಿತೃ ಪೂಜೆ ಕಾರ್ಯಕ್ರಮದಲ್ಲಿ 10ನೆಯ ತರಗತಿಯ ಮಕ್ಕಳು ತಮ್ಮ ತಂದೆ-ತಾಯಿಗಳ ಪಾದಪೂಜೆ ನೆರವೇರಿಸಿದರು.   ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಶ್ರೀ ಕೇಶವ ಭಟ್ ದಿವಾಣ ಮಾತನಾಡಿ, ತಂದೆ-ತಾಯಿ ನಮ್ಮ‌ ಕಣ್ಣಿಗೆ ಕಾಣುವ ದೇವರು. ಅವರ ಆಶೀರ್ವಾದ ಇದ್ದಾಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ ಎಂದರು. ಹೆತ್ತವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವ […]

Continue Reading

ಮಕ್ಕಳ ಬದುಕಲ್ಲಿ ದೀಪಾವಳಿಯ ಬೆಳಕು ಮೂಡಿಸಿದ ಶ್ರೀರಾಮಚಂದ್ರಾಪುರಮಠ

ಬೆಂಗಳೂರು: ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ಜನಸಾಮಾನ್ಯರ ಹಿತಕ್ಕಾಗಿ ದುಡಿಯುತ್ತಿರುವ ಶ್ರೀರಾಮಚಂದ್ರಾಪುರಮಠವು ಪುಟ್ಟ ಪುಟ್ಟ ಮಕ್ಕಳ ಮುಖದಲ್ಲೂ ನಗುವರಳಿಸಿದೆ. “Fly Higher India” ಸಂಸ್ಥೆಯ ಮೂಲಕ ಇಂತಹದೊಂದು ಅನುಕರಣೀಯ ಕಾರ್ಯವನ್ನು ಶ್ರೀಮಠ ಮಾಡಿದೆ.   Fly Higher India, ಇದೊಂದು ಸರ್ಕಾರೇತರ ಸಂಸ್ಥೆಯಾಗಿದ್ದು ದೇಶಾದ್ಯಂತ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದರಡಿಯಲ್ಲಿ ಅದೆಷ್ಟೋ ಕಾರ್ಯಕರ್ತರು ನಿರಂತರ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯು ತಿಂಗಳಲ್ಲಿ ಒಂದು ಭಾನುವಾರ ಯಾವುದಾದರೂ ಬಡ ಮಕ್ಕಳ ಶಾಲೆ, ಅನಾಥಾಶ್ರಮ ಅಥವಾ […]

Continue Reading

ಸಾಗರ ವಲಯೋತ್ಸವದ ಅಂಗವಾಗಿ ಶ್ರೀದೇವೀ ಪಾರಾಯಣ

ಸಾಗರ: ಸಾಗರ ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳ ವಲಯೋತ್ಸವ ನವೆಂಬರ 17, ಶನಿವಾರದಂದು ನಡೆಯಿತು.   ಬೆಳಗ್ಗೆ 8.30ಕ್ಕೆ ವಲಯೋತ್ಸವನ್ನು ಗುರುವಂದನೆ ಹಾಗೂ ದೀಪಪ್ರಜ್ವಲನಗಳ ಮೂಲಕ ಉದ್ಘಾಟಿಸಲಾಯಿತು.   ಬಳಿಕ ಶ್ರೀದೇವೀ ಪಾರಾಯಣ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಂಕಲ್ಪ, ಮಹಿಳೆಯರಿಂದ ಕುಂಕುಮಾರ್ಚನೆ, ಭಜನರಾಮಾಯಣ ಪಠಣ, ರುದ್ರ ಪಠಣ ನಡೆಯಿತು.   ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಸಾಗರ ಮಂಡಲದಿಂದ ವಿದ್ಯಾ ಸಹಾಯನಿಧಿಯನ್ನು ಮಕ್ಕಳಿಗೆ ವಿತರಿಸಲಾಯಿತು. ಸಂಜೆ ಗೋಪೂಜೆ, ಕಾರ್ತೀಕ ದೀಪೋತ್ಸವ ನಡೆಸಲಾಯಿತು.  

Continue Reading

ಶ್ರೀಕ್ಷೇತ್ರ ಗೋಕರ್ಣದಲ್ಲಿ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ಲಕ್ಷಬಿಲ್ವಾರ್ಚನೆ – ತೆಪ್ಪೋತ್ಸವ

ಗೋಕರ್ಣ: ಶ್ರೀಸಂಸ್ಥಾನದವರ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ವಿಲಂಬ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ ನಿಮಿತ್ತ ನವೆಂಬರ್ 22ರಂದು ಗುರುವಾರ ಮಧ್ಯಾಹ್ನ ಲಕ್ಷ ಬಿಲ್ವಾರ್ಚನೆ ಸಹಿತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.   ಮುಂಜಾನೆ ಲಕ್ಷಬಿಲ್ವಾರ್ಚನೆ, ವಿಶೇಷ ಮಹಾಪೂಜೆ, ಬಿಲ್ವಾರ್ಚನಾ ಹವನ , ನೈಮಿತ್ತಿಕ ಬಲಿ, ಅನಂತರ ಭೀಮಕೊಂಡಕ್ಕೆ ಉತ್ಸವ ಹೋಗಿ ಅಲ್ಲಿ ಧಾತ್ರಿ ಹವನ, ವನಭೋಜನ ಜರುಗಲಿವೆ.   ರಾತ್ರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿ ಜಲಾಯನ ದೀಪೋತ್ಸವ , ತೆಪ್ಪೋತ್ಸವ ಹಾಗೂ […]

Continue Reading

ಕಲ್ಲಡ್ಕದ ಶ್ರೀಉಮಾಶಿವ ಕ್ಷೇತ್ರದಲ್ಲಿ ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ಸಂಪನ್ನ

ಕಲ್ಲಡ್ಕ: ಕಲ್ಲಡ್ಕದ ಕಲ್ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀಸಂಸ್ಥಾನದವರ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಶನಿವಾರ ಸಂಜೆ ಸಾಮೂಹಿಕ  ಶ್ರೀಶನೈಶ್ಚರ ಕಲ್ಪೋಕ್ತ ಪೂಜೆ ನೆರವೇರಿತು.   ಸೇವಾಸಮಿತಿಯ ಅಧ್ಯಕ್ಷರಾದ ರಾಕೋಡಿ ಶ್ರೀ ಈಶ್ವರ ಭಟ್ ಮತ್ತು ಪದಾಧಿಕಾರಿಗಳು, ಮಂಗಳೂರು ಮಂಡಲ ಗುರಿಕಾರರಾದ ಶ್ರೀ ಉದಯ ಕುಮಾರ್ ಖಂಡಿಗ, ಮೂಲಮಠ ಪ್ರತಿನಿಧಿ ಮುಳ್ಳುಂಜ ಶ್ರೀ ವೆಂಕಟೇಶ್ವರ ಭಟ್, ಕಲ್ಲಡ್ಕ ಹವ್ಯಕ ವಲಯಾಧ್ಯಕ್ಷ ಶ್ರೀ ಯು.ಎಸ್. ಚಂದ್ರಶೇಖರ ಭಟ್ ನೆಕ್ಕಿದರವು, ವಿಟ್ಲ ವಲಯ ದಿಗ್ದರ್ಶಕ ಶ್ರೀ ಸತೀಶ ಪಂಜಿಗದ್ದೆ, ಕೇಪು ವಲಯ […]

Continue Reading