ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೮

ಅರಿವೇ ಅವಿದ್ಯಾತಿಮಿರವನ್ನು ನಾಶ ಮಾಡುವ ಸಂಕಲ್ಪಹೊತ್ತು ಜ್ಞಾನಾಂಜನ ಶಲಾಕದಂತೆ ಶಂಕರರ ರೂಪದಲ್ಲಿ ಭುವಿಗಿಳಿದು ಬಂದಾಗ ತನ್ನ ದಿವ್ಯೌಷಧ ಪ್ರಭಾವದಿಂದ ಬೆಳಕ ಚೆಲ್ಲಿ ಪ್ರಕಾಶ ದರ್ಶನ ಮಾಡಿಸದೇ ಹಾಗೆಯೇ ಇದ್ದೀತೇ?? ಹೌದು, ಅದ್ವೈತ ತತ್ವ ಪ್ರತಿಪಾದಿಸಿ, ಪ್ರತಿಷ್ಠಾಪಿಸಿ ಆ ಪರಮ ತತ್ವ, ಪರಮಾತ್ಮನೆಂಬ ಮಧುರ ಫಲದ ಪ್ರಾಪ್ತಿ ಸರ್ವರಿಗೂ ಲಭಿಸಲೆಂದೇ ಆದ ಆ ಆಚಾರ್ಯ ಶಂಕರರ ಅವತಾರ ಆ ಕಾರ್ಯವನ್ನು ಹೇಗೆ ಮಾಡುತ್ತಾ ಸಾಗಿತೆಂಬುದನ್ನು ನೋಡೋಣ. ಸಂನಂದನನನ್ನು ಪದ್ಮ ಪಾದಾಚಾರ್ಯರನ್ನಾಗಿಸಿದುದ್ದನ್ನು  ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಿದ್ದೆವು. ಈ ಸಂಚಿಕೆಯಲ್ಲಿ ಮಂಡನ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೭

ಅವಿಚ್ಛಿನ್ನ ಅರಿವಿನ ಹರಿಯುವಿಕೆಯ ಕಾಪಿಡಲೋಸ್ಕರವೇ ಎಂಬಂತೆ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿಪಾತ್ರವೂ ಆ ಶುದ್ಧ ಪ್ರಕೃತಿಯನ್ನೇ ಆಯ್ದು, ಆ ಚೇತನವನ್ನು ಪ್ರಚೋದಿಸಿ ಪ್ರಕಾಶಿಸಿ ಜಗಕ್ಕೆ ಇದು ಗುರುಸ್ಥಾನ ಎಂದು ತೋರಿಸಿ ಸಂದಿಗ್ಧತೆಯನ್ನು ಅಳಿಸಿ ನಮ್ಮನ್ನುಳಿಸಿದ್ದಾರೆ. ಅಂತೆಯೇ ಗುರುಪರಂಪರಾ ಸರಣಿಯಲ್ಲಿ ಶಂಕರರ ಪಾತ್ರವಾಗಿ ಬಂದ ಚೈತನ್ಯವು ತಮ್ಮ ಶಿಷ್ಯಶ್ರೇಷ್ಠನನ್ನು ಆಯ್ದು ಪರಂಪರೆಯ ಮುಂದುವರಿಕೆಗೆ ಪಾತ್ರವನ್ನು ತೋರಿಸಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಗುರುಗೋವಿಂದರಲ್ಲಿ ಕ್ರಮಸಂನ್ಯಾಸವನ್ನು ಪಡೆದ ಆಚಾರ್ಯ ಶಂಕರರು ವಿವಿಧ ಭಾಷ್ಯ ರಚಿಸುವ ಮತ್ತು ಅದ್ವೈತ ಸ್ಥಾಪನೆಯ ಹೊಣೆ ಹೊತ್ತು ಕಾಶಿಕ್ಷೇತ್ರಕ್ಕೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೬

ಗುರು-ಶಿಷ್ಯರ ಬಂಧ ಅನಿರ್ವಚನೀಯವಲ್ಲವೇ..ಸಂನ್ಯಾಸ ಸಂಕಲ್ಪಿತನಾದ ವಟು ಶಂಕರ ಗುರುಗಳನ್ನು ಹುಡುಕಿಕೊಂಡು ಬಂದನೋ ಅಥವಾ ಗುರುವೇ ತಮ್ಮ ಕಾಂತೀಯ ಕ್ಷೇತ್ರದೊಳಗೆ ಸೆಳೆದರೋ ಅದು ನಮ್ಮ ತರ್ಕಕ್ಕೆ ಮೀರಿದ್ದು. ಒಟ್ಟಿನಲ್ಲಿ ಆಚಾರ್ಯ ಶಂಕರರು ನರ್ಮದಾ ನದಿ ದಂಡೆಯ ಗುಹೆಯ ಬಾಯಿ ಬಳಿಗೆ ಬಂದು ನಿಂತರು. ಕ್ರಮಸಂನ್ಯಾಸವನ್ನು ಪಡೆಯುವ ಸತ್ಕಾಮದ ಈಡೇರಿಕೆಗಾಗಿ ಗುರುಗಳನ್ನು ಸಂಧಿಸಲು ತವಕಿಸಿದರು. ಸಮಾಧಿ ಸ್ಥಿತಿಯಲ್ಲಿ ಪರಮಾನಂದವನ್ನು ಅನುಭವಿಸುತ್ತಿದ್ದ ತಮ್ಮ ಗೌರವಾನ್ವಿತ ಗುರುಗಳನ್ನು ಅತ್ಯಂತ ಪ್ರೇಮದಿಂದ ಸ್ತುತಿಸಿದರು. ಬಾಗಿಲ ಬಳಿ ನಿಂತ ವಟುವನ್ನು ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಗೋವಿಂದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೫

ಅರಿವು ಆಚಾರ್ಯ ಶಂಕರರ ರೂಪದಿಂದ ಭುವಿಗೆ ಬೆಳಕಾಗಿ ಬಂದು ಗುರುಪರಂಪರೆಯನ್ನು ಉದ್ಧರಿಸಿತೆನ್ನುತ್ತಾ ಪಾತ್ರದ ಪೂರ್ವಾಶ್ರಮ ಘಟನೆಗಳನ್ನು ಅವಲೋಕಿಸಿದೆವು. ಈಗ ಬಹುಜನಚರ್ಚಿತ  ಲೋಕಕಲ್ಯಾಣಿ ಈ ಪಾತ್ರವನ್ನು ಮತ್ತದರ ಶ್ರೇಷ್ಠ ಸಮರ್ಥನೀಯ ನಡೆಯನ್ನು ಈ ಸಂಚಿಕೆಯಲ್ಲಿ ನೋಡೋಣ. ಸಂಕಲ್ಪ ಮಾತ್ರದಿಂದ ಸಂನ್ಯಸ್ತನಾದ ಬಾಲ ವಟು ಶಂಕರನು ಆತ್ಮಸಾಧನೆಗೆ ಈ “ಶಾಖಾಯ ಲವಣಾಯ ಚ” ವೃತ್ತಿಗಳು ಯೋಗ್ಯವಾಗಲಾರದೆಂದು ನಿರ್ಧರಿಸಿದ್ದಾದ್ದರಿಂದ ತದುತ್ತರದ ಆಶ್ರಮಗಳಿಗೆ ಪ್ರವೇಶಿಸದೆ ಮಹೌನ್ನತ್ಯಕ್ಕಾಗಿ ಜನ್ಮಜಾಗವನ್ನು ತೊರೆದು ನಡೆಯಲು ಮನಸ್ಸು ಮಾಡಿದನು. ಹೌದು, ದಿವಿ ಸೂರ್ಯ ಸಹಸ್ರ ಸಮವಾದ ಆ ಬೆಳಕು, […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೪

ಅವಿಚ್ಛಿನ್ನ ಗುರುಪರಂಪರೆಯಲ್ಲಿ ನಾವೀಗ ಶಂಕರ ಭಗವತ್ಪಾದರ ಜೀವನ ಚರಿತ್ರೆಯನ್ನು ಅವಲೋಕಿಸುತ್ತಿದ್ದೇವೆ. ಅದರ ಮುಂದುವರಿಕೆಯಾಗಿ ಚರಿತ್ರೆ ಹೀಗೆ ಸಾಗುತ್ತದೆ. ಐದನೇ ವಯಸ್ಸಿಗೇ ಉಪನಯನವಾದ ಬಳಿಕ ಬಾಲ ಶಂಕರರು ಅಧ್ಯಯನಕ್ಕಾಗಿ ಗುರು ನಿವಾಸವನ್ನು ಸೇರಿದರು. ಕ್ರಮದಂತೆ  ನಿಯಮಿತ ಮನೆಗಳಲ್ಲಿ ಭಿಕ್ಷೆಗಾಗಿ ಹೋಗಬೇಕಿತ್ತು. ಅದರಂತೆ ಒಂದು ದಿನ ಭಿಕ್ಷಾಟನೆಗೆಂದು ಹೋದಾಗ ಬಡ ಬ್ರಾಹ್ಮಣನ ಮನೆಗೆ ಬಂದು ಭವತಿ ಭಿಕ್ಷಾಂ ದೇಹಿ ! ಎಂದ ಶಂಕರರ ಕರೆಗೆ  ಓಗೊಟ್ಟು ಹೊರ ಬಂದ ಆ ಮನೆಯ ಗೃಹಿಣಿ ಈ ಶ್ರೇಷ್ಠ ವಟುವನ್ನು  ನೋಡಿದೊಡನೆಯೇ ಕರಗಿದಳು. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೩

ಆರ್ಯಾವರ್ತದ ಪುಣ್ಯಭೂಮಿ ಭಾರತ ದೇಶದಲ್ಲಿ ಶ್ರೇಷ್ಠ ಸಂಸ್ಕೃತಿಯಿದ್ದು ‘ಅರಿವಿಗಾಗೇ’ ಜೀವಿಕೆ ಎಂಬಂತಿದ್ದರೂ, ತತ್ವ-ವಿಜ್ಞಾನದ ಹೆಸರಿನಲ್ಲಿ ಅವೈಜ್ಞಾನಿಕ,  ಅರಿವಿನ ಪೂರ್ಣಾನಂದದಿಂದ ಬೇರೆಡೆಗೆ ಕರೆದೊಯ್ಯುವ ಮತಗಳ ವಿಜೃಂಭಣೆ ನಮ್ಮತನಕ್ಕೆ ಗ್ರಹಣವುಂಟುಮಾಡಿದ ಪರಮಕಷ್ಟಕಾಲದಲ್ಲಿ ಭರವಸೆಯ ಬೆಳಕಾಗಿ ‘ನಾನು’ ಉಳಿಯಲು ಕಾರಣೀಕರ್ತರಾದವರು ಆಚಾರ್ಯ ಶಂಕರ ಭಗವತ್ಪಾದರು. ಹೌದು, ಅರಿವೇ ಮೈವೆತ್ತುಬಂದು ಗುರುಪರಂಪರೆಯನ್ನಾಗಿಸಾದ ಪಾತ್ರಗಳಲ್ಲೊಂದು ಮಹಾಮೇರು ಪಾತ್ರ ಆಚಾರ್ಯ ಶಂಕರರದ್ದು. ಗುರು ಗೋವಿಂದಭಗವತ್ಪಾದರ ನಂತರ ಗುರುಪರಂಪರಾ ಸರಣಿಯಲ್ಲಿ ಉಲ್ಲೇಖಗೊಳ್ಳುವ ಗಣನೀಯ ಪಾತ್ರ  ಶಂಕರಾಚಾರ್ಯರದ್ದು. ಗುರುಪರಂಪರೆ ಉಳಿದು ಅರಿವು ಅವಿಚ್ಛಿನ್ನವಾಗಿ ತಲೆಮಾರು ತಲೆಮಾರುಗಳಿಗೆ ಹರಿದು ಆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೨

ಅರಿವಿನ ಹರಿವಿನ ಕೊಂಡಿಗಳಾದ ಪಾತ್ರಗಳ ಪರಿಚಯ ಮಾಡಿಕೊಳ್ಳುತ್ತಾ ಶ್ರೀ ಗೌಡಪಾದರ ಜೀವನ ಘಟನಾವಳಿಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಈ ಪಾತ್ರದ ಆಳಕ್ಕಿಳಿದು ಅವಲೋಕಿಸಿ ಅರ್ಥೈಸಿಕೊಂಡರೆ ನಾವು ಪುನಃಪುನಃ ಎತ್ತಿ ಆಡಿದ, “ಎಲ್ಲಾ ಗುರುಗಳೂ ನಾರಾಯಣ ಸ್ವರೂಪವಷ್ಟೆ” ಎಂಬ ಮಾತುಗಳು ಎಲ್ಲರಿಗೂ ಸ್ವಯಂವೇದ್ಯವಾಗುತ್ತದಲ್ಲವೇ?.. ಹೌದು, ಅದ್ಹೇಗೆಂದು ಬಿಡಿಸಿ ಹೇಳುವುದಾದರೆ ನಾರಾಯಣನ ಪ್ರತಿರೂಪ ಆದಿಶೇಷನೇ ( ಪತಂಜಲಿಗಳು) ಗೌಡದೇಶದ ವ್ಯಕ್ತಿಯೊಬ್ಬನಿಗೆ ಅರಿವಿನ ಬೋಧನೆ ಮಾಡಿದ್ದು, ಆ ಅರಿವು ಅವರಲ್ಲಿ ಪೂರ್ಣವಾಗಿ ಸಾಕ್ಷಾತ್ಕಾರಗೊಂಡು, ವಿವಿಧ ಸನ್ನಿವೇಶಗಳಿಂದ ಹದಪಾಕವಾಗಿ ಪಕ್ವಗೊಂಡ ಶುದ್ಧಪ್ರಕೃತಿ ನಿರ್ಮಾಣವಾದಾಗ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೧

“नारायणं पद्मभवं वसिष्टं शक्तिञ्च तत् पुत्र पराशरं च। व्यासं शुकं गौडपदं महान्तं गोविन्द योगीन्द्रमथास्य शिष्यम्।। श्री शङ्कराचार्य मथास्य पद्मपादञ्च हस्तामलकञ्च शिष्यम्। तं तोटकं वार्तिककारमन्यानस्मद्गुरून्‌  सन्तत मानतोस्मि ।।” ಎಂದು ಗುರುಪರಂಪರೆಯನ್ನು ವಂದಿಸುತ್ತಾ… ಗುರುಪರಂಪರೆಯ ಸರಣಿಯಲ್ಲಿ ಶುಕರ ನಂತರ ಮುಂದಿನ ಪಾತ್ರವಾಗಿ ಪರಿಗಣನೆಯಾಗುವುದು ಶ್ರೀ ಗೌಡಪಾದಾಚಾರ್ಯರದ್ದು. ಪ್ರತಿ ಗುರುವು ಶ್ರೀಮನ್ನಾರಾಯಣನ ಪ್ರತಿರೂಪವೇ.. ಪ್ರಕೃತಿಧರ್ಮಕ್ಕನುಸಾರವಾಗಿ ಗುರುಸ್ವರೂಪದ ಭಿನ್ನತೆ ಅಂದರೆ ಪಾತ್ರಬದಲಿಕೆಯ ಕಾರಣ, ಅದೇ ಏಕಮೇವಾದ್ವಿತೀಯವಾದ ಅರಿವನ್ನು ಆ ಗುರುರೂಪಕ್ಕೂ ಸ್ವಾನುಭೂತಿಗೊಳಿಸಲು […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೦

ನಮ್ಮ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿ ಗುರುರೂಪವೂ ಆಯಾ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಅರಿವಿನ ಮಹತಿಯನ್ನು ಬೇರೆಬೇರೆ ಮಾರ್ಗದಲ್ಲಿ ಭಿನ್ನಹಿಕೆ ಮಾಡುತ್ತಲೇ ಸಮಾಜವನ್ನು ಸಾಗಿಸುತ್ತಿದೆ. ಈ ಕಾರಣಕ್ಕೆ ಎಂಬಂತೆಯೇ ದಿವ್ಯಪುರುಷರಾದ ವೇದವ್ಯಾಸರು ತಮ್ಮಾತ್ಮವಿಸ್ತಾರವೇ ಆದ ದಿವ್ಯತೆಯ ಶಿಖರವೆನಿಸಿದ ಶುಕಮುನಿಯನ್ನು ಹೆಚ್ಚಿನ ವಿದ್ಯಾಧ್ಯಯನಕ್ಕೆಂದು ರಾಜರ್ಷಿ ಜನಕನಲ್ಲಿಗೆ ಹೋಗುವಂತೆ ಆಗ್ರಹಿಸುತ್ತಾರೆ. ಅದು ಕಾಲ್ನಡಿಗೆಯಲ್ಲಿಯೇ ಸಾಗುವಂತೆ…ಅಂತರಿಕ್ಷಚರ್ಯೆ ಮಾಡುವ ಸಾಮರ್ಥ್ಯ ಸಾಧ್ಯವಿದ್ದರೂ ಸಹ ಕಾಲ್ನಡಿಗೆಯಲ್ಲಿಯೇ ಹೋಗಬೇಕೆಂಬ ಅಣತಿ. ಅಂತೆಯೇ ಶುಕರು ಮೇರುಪರ್ವತದಿಂದ ಮೂರುವರ್ಷಗಳನ್ನು ದಾಟಿ ( ಸುಮೇರು ವರ್ಷ, ಹೈಮವತ ವರ್ಷ, ಹರಿವರ್ಷ ) […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೯

ವೇದವ್ಯಾಸರಿಂದ ಅರಿವು ಅವಿಚ್ಛಿನ್ನವಾಗಿ ಶುಕರಿಗೆ ಹೇಗೆ ಹರಿದು ಗುರುಪರಂಪರೆಯನ್ನು ಉದ್ಧರಿಸಿತು ಎಂದು ಚರ್ಚಿಸುವಾಗ ಶುಕರ ಪಾತ್ರಪರಿಚಯ ಮಾಡಿಕೊಳ್ಳುತ್ತಾ ಜಾತಮಾತ್ರವೇ ಶುಕರಿಗೆ ಉಪನಯನವಾಯಿತು ಎನ್ನುವಲ್ಲಿಗೆ ಬಂದು ನಿಂತಿದ್ದೆವು. ಹೌದು ಅರಣೀಗರ್ಭಸಂಭೂತನಾದ ಶುಕನಿಗೆ ಸಾಕ್ಷಾತ್ ಪರಮೇಶ್ವರ ಪಾರ್ವತಿಯೇ ಬಂದು ಮಾತಾಪಿತೃ ಸ್ಥಾನದಲ್ಲಿ ನಿಂತು ಬ್ರಹ್ಮೋಪದೇಶಗೈದರು. ಸವಿತೃ ದೇವತೆಗಳಿಂದ ಸಾವಿತ್ರಿಯೇ ಭೂಷಣಳಾಗಿ ಬಂದಳು. ದೇವಾಚಾರ್ಯ ಬೃಹಸ್ಪತಿ ಬ್ರಹ್ಮಸೂತ್ರವನ್ನಿತ್ತರು. ಕಾಶ್ಯಪರು ಮೇಖಲ (ಮುಮುಂಜಿ)ಯನ್ನು ಪ್ರದಾನ ಮಾಡಿದರು. ದ್ಯೌಃ (ದಿವಿಗಳು) ಕೌಪೀನ ಆಚ್ಛಾದನ ಮಾಡಿದರು. ಶ್ವೇತಾಂಬರದರೆ ವಿದ್ಯಾದಾಯಿ ಸರಸ್ವತಿ ತನ್ನ ಅಕ್ಷಮಾಲೆಯನ್ನೇ ಕೊಟ್ಟಳು. ಈ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ-೮

ವ್ಯಾಸಮಹರ್ಷಿಗಳ ರೂಪದ ಬೆಳಕು ಶುಕಮಹರ್ಷಿಗಳ ರೂಪದಿಂದ ಹೊರಹೊಮ್ಮಿ ಅವಿಚ್ಛಿನ್ನ ಗುರುಪರಂಪರೆಯನ್ನು ಮುಂದುವರೆಸಿತು. ಗುರುಪರಂಪರೆಗೆ ಮೆರಗು ನೀಡಿ ಲೋಕ ಬೆಳಗಿದ ಶುಕ ಮುನಿಯ ಪಾತ್ರ ಪರಿಚಯವನ್ನು ಮಾಡಿಕೊಳ್ಳೋಣ. ಶುಕರು ಜನಿಸಿದ್ದು ಅರಣಿಯಲ್ಲಿ. (ಅರಣಿಯೆಂದರೆ ಯಜ್ಞಾಗ್ನಿಯನ್ನು ಸಿದ್ಧಪಡಿಸುವ ಸಾಧನ). ವ್ಯಾಸರು ಅಗ್ನಿಯಂತಹ, ಭೂಮಿಯಂತಹ, ಜಲದಂತಹ, ವಾಯುವಿನಂತಹ, ಅಂತರಿಕ್ಷದಂತಹ ಧೈರ್ಯಹೊಂದಿರುವ ಪುತ್ರಾಪೇಕ್ಷೆಯ ಸುಸಂಕಲ್ಪವ  ಹೊತ್ತು ಮಹೇಶ್ವರನ ಕುರಿತು  ದಿವ್ಯಂಶತವರ್ಷಗಳ ದೀರ್ಘತಪಸ್ಸನ್ನಾಚರಿಸುತ್ತಾರೆ. ತತ್ಫಲವಾಗಿ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾಗಿ ಅಗ್ನಿಯಂತಹ, ವಾಯುವಿನಂತಹ, ಭೂಮಿಯಂತಹ, ಜಲದಂತಹ ಶುದ್ಧವಾದ ಮಹಾತ್ಮನಾದ ಸುತ ಜನಿಸುವನೆಂದು ವರ ದಯಪಾಲಿಸುತ್ತಾನೆ. ವರ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೭

ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರರ ಪುತ್ರ ಮತ್ತು ಶುಕಬ್ರಹ್ಮರ್ಷಿಯ ತಂದೆಯಾದ ಅಕಲ್ಮಷರೂ, ತಪೋನಿಧಿಯೂ ಆದ ವ್ಯಾಸಮಹರ್ಷಿಗಳಿಗೆ ನಮಿಸುತ್ತಾ ಮುಂದುವರೆಯೋಣ. ತಾಯಿ ದೇವಿ ಸತ್ಯವತಿಯ ಆಜ್ಞಾನುಸಾರ ಸಂತತಿಯ ಭಾಗ್ಯವನ್ನು ಕರುಣಿಸಿ ನಶಿಸುತ್ತಿದ್ದ ಆ ಕುರುಕುಲವನ್ನು ಉಳಿಸಿದ ಮಹಾಮಹಿಮರು. ಸಮಾಜಕ್ಕೆ ಅವರ ಅರಿವಿನ ಹರಿವು ಯಾವ ಯಾವ ರೂಪದಿಂದ ಹರಿಯಿತೆಂದು ತಿಳಿಯಲು ಅವರ ರಚನೆಗಳನ್ನು ಅವಲೋಕಿಸೋಣ.  ಮಹಾಕಾವ್ಯ ಮಹಾಭಾರತ, ವೇದರಾಶಿಯ ವಿಂಗಡಣೆಯಷ್ಟೇ ಅಲ್ಲದೆ ವೇದಾಂತನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರ, ವೇದಾರ್ಥವನ್ನು ವಿವರಿಸುವ ಹದಿನೆಂಟು ಪುರಾಣಗಳನ್ನು ರಚಿಸಿದರೆಂದು […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ~ ಸಂಚಿಕೆ – ೬

ಮಹಾತೇಜಸ್ವಿ ಬಾಲಕ, ಯಮುನಾ ನದಿಯ ದ್ವೀಪದಲ್ಲಿ ಜನಿಸಿ ಹುಟ್ಟಿದೊಡನೆಯೇ ತಾಯಿಗೆ ಸಾಷ್ಟಾಂಗ ಪ್ರಣಾಮ ಮಾಡಿ ತಾಯಿಯ ಅನುಜ್ಞೆಯನ್ನು ಪಡೆದು ಸ್ಮರಿಸಿದಾಗ ಬರುವೆನೆಂದು ಆ ತಾಯಿಗೆ ಹೇಳಿ ತಪಸ್ಸನ್ನಾಚರಿಸಲು ನಡೆದ ಬಾಲಕ. ಅವನೇ ಮುಂದೆ ಲೋಕಪ್ರಸಿದ್ಧನಾದ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನ. ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವು ಪರಾಶರರ ನಂತರ ಹೀಗೆ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನರ ರೂಪದಿಂದ ಮುಂದುವರೆಯಿತು. ಬ್ರಹ್ಮರ್ಷಿ ಪರಾಶರ ಮತ್ತು ಸತ್ಯವತಿಯ ಸಮಾಗಮದಿಂದ ನದಿಯ ಮಧ್ಯದ ದ್ವೀಪದಲ್ಲಿ ಹುಟ್ಟಿದ್ದರಿಂದ ಶ್ರೀಕೃಷ್ಣದ್ವೈಪಾಯನರಿಗೆ ಅನ್ವರ್ಥವಾಗಿ ದ್ವೈಪಾಯನನೆಂದು ಮತ್ತು ಕಪ್ಪು ಬಣ್ಣ ಹೊಂದಿದ್ದರಿಂದ ಕೃಷ್ಣ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೫

ಬ್ರಹ್ಮರ್ಷಿ ಶಕ್ತಿ ಅದೃಶ್ಯಂತಿಯರ ಪುತ್ರ ಬ್ರಹ್ಮರ್ಷಿ ಪರಾಶರ. ವಂಶವೇ ನಶಿಸಿಹೋಗುವಾಗ ಕುಲವನ್ನು ಕಾಪಾಡಿ ವಂಶ ಬೆಳಗಿದ ಮಹಾಮುನಿ. ವಿಧಿಯಾಟದಂತೆ ತಮ್ಮ ನೂರು ಮಕ್ಕಳನ್ನೂ ಕಳೆದುಕೊಂಡು ಲೋಕನಿಯಮದಂತೆ ಮಹಾ ದುಃಖದಲ್ಲಿ ಮುಳುಗಿದ ವಸಿಷ್ಠರು ಆತ್ಮಹತ್ಯೆಗೆ ಮುಂದಾದಾಗ ಅವರಿಗೆ ತಿಳಿದ ಸಂಗತಿ ಸೊಸೆ ಅದೃಶ್ಯಂತಿ ಗರ್ಭವತಿ. ಆ ಗರ್ಭಸ್ಥ ಶಿಶು ವಸಿಷ್ಠರಿಗೆ ಬದುಕಿಗೆ ಭರವಸೆಯ ಬೆಳಕ ನೀಡಿ, ಅವರ ಸಾವನ್ನು ತಡೆದು ಜಯಿಸಿದ್ದಕ್ಕೆ ಅವರೇ ( ವಸಿಷ್ಠರೇ) ‘ಪರಾಶರ’ ಎಂಬ ನಾಮಕರಣವನ್ನು ಮಾಡಿದರು. ಮಗು ಹುಟ್ಟಿದ ಮೇಲೆ ವಸಿಷ್ಠರೇ ತಮ್ಮ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೪

ಅವಿಚ್ಛಿನ್ನ ಗುರುಪರಂಪರೆಯ ಅರಿವಿನ  ಹರಿವಿನಲ್ಲಿ ಬರುವ ಮುಂದಿನ ಪಾತ್ರ ಬ್ರಹ್ಮರ್ಷಿ ಶಕ್ತಿ. ಹೋಲಿಕೆಯೇ ಇಲ್ಲದ ಎರಡು ವ್ಯಕ್ತಿತ್ವಗಳಾದ ವಸಿಷ್ಠ ಅರುಂಧತಿಯರ ಧರ್ಮದಾಂಪತ್ಯದ ಫಲ ಇವರು. ಹೆಸರೇ ಸೂಚಿಸುವಂತೆ ಬ್ರಹ್ಮರ್ಷಿ ಶಕ್ತಿಗಳ ಜ್ಞಾನ ಚಕ್ಷುವಿನ ಶಕ್ತಿ ಅಗಾಧ. ತಂದೆಯೊಡನೆ ಯಜ್ಞ, ಯಾಗ, ವಿದ್ಯಾದಾನ ಒಟ್ಟಿನಲ್ಲಿ ಬ್ರಹ್ಮಚರ್ಯೆ ಚಾಚೂ ತಪ್ಪದೇ ಸಾಗುತ್ತಿದ್ದರೂ ವಿಧಿನಿಯಾಮಕವಾದ ಭೂಲೋಕ ಇವರ ಬದುಕಿನಲ್ಲೂ ಚಿತ್ರ ವಿಚಿತ್ರ ಘಟನೆಗಳಿಗೆ ಇವರನ್ನು ಪಾತ್ರಧಾರಿಯನ್ನಾಗಿ ಮಾಡಿತು. ಅದೊಂದು ಸಂದರ್ಭ; ಇಕ್ಷ್ವಾಕು ವಂಶಸ್ಥನಾದ ಸತ್ಯವ್ರತನೆಂಬ ರಾಜ ಸಶರೀರ ಸ್ವರ್ಗಸ್ಥನಾಗಬೇಕೆಂಬ ಬಯಕೆಯ ಈಡೇರಿಕೆಗೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೩

ಗುರುಪರಂಪರಾನುಗತವಾಗಿ  ಅರಿವು ಅವಿಚ್ಚಿನ್ನವಾಗಿ ಹೇಗೆ ಹರಿಯಿತು ಎಂದು ಅವಲೋಕಿಸುವಾಗ ಗುರು ಎಂದು, ಜ್ಞಾನಪರಂಪರೆಯ ಹರಿವಿನ ಕೊಂಡಿಗಳಿಗೆ ಬೆಸುಗೆಯೆಂದು ಎನ್ನಿಸಿಕೊಳ್ಳುವ ಪಾತ್ರಗಳ ಪರಿಚಯ ಮಾಡಿಕೊಳ್ಳುವುದು ಅತ್ಯವಶ್ಯ. ಮೊದಲನೆ ಸಂಚಿಕೆಯಲ್ಲೇ ಅವಲೋಕಿಸಿದಂತೆ ಶ್ವೇತಾಶ್ವತರೋಪನಿಷತ್ತಿನ ಅನುಕ್ರಮಣಿಕೆಯ ಪ್ರಕಾರ ಬ್ರಹ್ಮನ ತರುವಾಯು ಬರುವ ಶುದ್ಧಪಾತ್ರ ಬ್ರಹ್ಮರ್ಷಿ ವಸಿಷ್ಠ ಮುನಿಶ್ರೇಷ್ಠ ಕ್ಷಮಾಮೂರ್ತಿ ಎಲ್ಲೂ ಕೊರತೆಯನ್ನೇ ಕಾಣಲಾಗದ ವ್ಯಕ್ತಿತ್ವ. ಇವರ ಜನನವೇ ಒಂದದ್ಭುತ. ಸತ್ಯಯುಗದ ಕಾಲದಲ್ಲಿ ಮಹಾತಪಸ್ವಿ ಮೈತ್ರಾವರುಣರು ತಪವಗೈಯ್ಯುತ್ತಿದ್ದಾಗ ದೇವಲೋಕದ ಅಪ್ಸರೆ ಊರ್ವಶಿ ಆ ಜಾಗದ ಸನಿಹಕ್ಕೆ ಬಂದು ನೃತ್ಯಗೈದಳು. ಅದ್ಯಾವ ಘಳಿಗೆಯೋ ಏನೋ!! […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೨

ಅರಿವು ಗುರುಪರಂಪರಾನುಗತವಾಗಿ   ಹರಿದು ಬಂದಿದ್ದೆನಿತು ಎಂದು ಅವಲೋಕಿಸುತ್ತಾ ಹೋದರೆ ಈ ಪ್ರಶ್ನೆಗಳೆಲ್ಲಾ ಮನಸ್ಸಿನಲ್ಲಿ ಮೂಡುತ್ತದೆ..ಅರಿವೇಕೆ ಅವಿಚ್ಛಿನ್ನ ಗುರುಪರಂಪರೆಯಲ್ಲಿಯೇ ಹರಿದು ಬರಬೇಕು..? ಅದರ ಔಚಿತ್ಯವಾದರೂ ಏನು..? ಸ್ವಯಂ ಸಾಧನೆಯಿಂದ ಕಂಡುಕೊಳ್ಳಬಹುದಲ್ಲವೇ ಎಂದೆಲ್ಲ ಅನಿಸಿದರೆ…ಅದಕ್ಕೆ ಪ್ರತ್ಯುತ್ತರವಿಷ್ಟೆ..ಗುರು ಮಾಡಿಸುವ ಅರಿವಿನ ದರ್ಶನ ಸುಲಿದಿಟ್ಟ ಬಾಳೆಹಣ್ಣಿನಂತೆ. ರಾಮಕೃಷ್ಣ ಪರಮಹಂಸರೇ ಹೇಳುವಂತೆ ಜ್ಞಾನಿ ತರಗೆಲೆಯಂತೆ ಅವನು ತಾನೊಬ್ಬ ತೇಲಿಕೊಂಡು ದಾಟಬಲ್ಲ. ಆದರೆ ಇನ್ನೊಬ್ಬರನ್ನು ಹೊತ್ತೊಯ್ಯಲಾರ. ಅದೇ ಗುರುವೊಬ್ಬ ನೌಕೆಯಂತೆ. ಶರಣಾಗತರಾದ ಶಿಷ್ಯರನ್ನು ತನ್ನ ಮೇಲೆ ಹೊತ್ತೊಯ್ಯಬಲ್ಲ. ಪಂಡಿತನನ್ನು, ಪಾಮರನನ್ನು ಒಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ ೧

ನಮ್ಮ ತಾಯ್ನಾಡು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತಾಂಬೆಯ ಮಕ್ಕಳಾದ ನಮಗೆ ನಮ್ಮ ಶ್ರೇಷ್ಠತೆ ಯಾವುದರಿಂದ ಎಂಬ ಸ್ವಸ್ವರೂಪದ ಅರಿವು ಅತ್ಯಮೂಲ್ಯವಲ್ಲವೇ? ಈ  ಸ್ವಸ್ವರೂಪದ ಅರಿವು ಮೂಡಬೇಕಾದರೆ ಗುರುವೊಬ್ಬ ಬೇಕು ಎಂಬುದು ನಮಗೆಲ್ಲ ಅರಿತ ವಿಚಾರ. ಈ ಒಬ್ಬ ಗುರುವಿನಿಂದ *ಅರಿವು* ಪರಂಪರಾನುಗತವಾಗಿ ತನ್ನ ಪರ್ಯಾಯವೇ ಎಂಬಂತೆ ಮತ್ತೊಂದು ದೇಹ, ಜೀವದ ಮುಖಾಂತರ ಹೇಗೆ ಹರಿದು ಭಾರತೀಯರನ್ನು  ‘ಭಾ'(ಬೆಳಕು)ದೆಡೆಗೆ ನಡೆಸುತ್ತಿದೆ ಎಂದು ಅವಲೋಕಿಸುವುದಕ್ಕಾಗಿ ನಮ್ಮದೊಂದು ಪುಟ್ಟ ಪ್ರಯತ್ನ  *”ಅವಿಚ್ಛಿನ್ನ ಗುರುಪರಂಪರೆಯ ಅರಿವು –  ಹರಿವು”* ಈ ಅರಿವು […]

Continue Reading