ಗುರು – ಗೋ ಸೇವೆಯೇ ಬದುಕಿನ ಧನ್ಯತೆ : ವೀಣಾ ಪ್ರಭಾಕರ ಭಟ್

ಸಾಗರ ಪ್ರಾಂತ್ಯದ ಮಾತೃತ್ವಮ್ ನ ಅಧ್ಯಕ್ಷೆಯೂ, ಸಂಪನ್ಮೂಲ ಖಂಡದ ಸಂಯೋಜಕಿಯೂ ಆಗಿರುವ ವೀಣಾ ಪ್ರಭಾಕರ ಭಟ್ಟ ಅವರಿಗೆ ಮಾಸದ ಮಾತೆಯಾಗಿ ಗುರಿ ತಲುಪಿದುದಕ್ಕಿಂತಲೂ ಹೆಚ್ಚು ಸಂತಸ ಶ್ರೀ ಗುರುಗಳ ಸೇವೆಯಲ್ಲಿ ಒಂದು ಬಿಂದುವಾಗಿ ಸೇರಿದೆ ಎಂಬುದರ ಬಗ್ಗೆ. ಅಂಬಾಗಿರಿ ಮಠಕ್ಕೆ ಶ್ರೀ ಸಂಸ್ಥಾನದವರು ಭೇಟಿಯಿತ್ತ ಸಂದರ್ಭದಲ್ಲಿ ಮೊದಲ ಬಾರಿಗೆ ಮಂತ್ರಾಕ್ಷತೆ ಪಡೆದು ಕೊಂಡಾಗಲೇ ತನ್ನ ಬದುಕಿನ ಪಥ ಬದಲಾಯಿತು. ಗುರು ಚರಣ ಸೇವೆಯಿಂದ ಇಂದು ಬಾಳಿನಲ್ಲಿ ನೆಮ್ಮದಿ , ಸಂತಸ ಮನೆಮಾಡಿದೆ. ಅಂತರಂಗದಲ್ಲಿ ಬಚ್ಚಿಟ್ಟ ಕನಸುಗಳು ಸಹಾ […]

Continue Reading

ನಿರಂತರ ಮಠದ ಸಂಪರ್ಕವೇ ಗೋ ಸೇವೆಗೆ ಪ್ರೇರಣೆ: ಜ್ಯೋತಿಲಕ್ಷ್ಮಿ ಅಮೈ

“ಸುಮಾರು ಎರಡು ದಶಕಗಳಿಂದ ಶ್ರೀ ಮಠದ ನಿರಂತರ ಸಂಪರ್ಕವಿದೆ ಮಾತ್ರವಲ್ಲದೆ ಮಹಿಳಾ ಪರಿಷತ್ ಇರುವಾಗಲೇ ವಿವಿಧ ಸೇವಾ ಪ್ರಧಾನೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇರುವುದರಿಂದ ಶ್ರೀ ಮಠದ ಗೋ ಸೇವಾ ಯೋಜನೆಯಾದ ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಸ್ವಯಂ ಇಚ್ಛೆಯಿಂದ ಸೇರಿದೆ” ಎನ್ನುವ ಜ್ಯೋತಿಲಕ್ಷ್ಮಿ ಅಮೈ ಅವರು ಪ್ರಸ್ತುತ ಮಂಗಳೂರು ಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ. ಮುದ್ರಜೆ ಗೋವಿಂದ ಭಟ್, ಪಾರ್ವತಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಕೇಪು ವಲಯದ ಅಡ್ಯನಡ್ಕ ಸಮೀಪದ ಅಮೈ ಯಲ್ಲಿರುವ ಡಾ. ಕೃಷ್ಣಮೂರ್ತಿ ಅವರನ್ನು […]

Continue Reading

ಗೋ ಪ್ರೀತಿಗೆ ಪ್ರೇರಣೆ ನಮ್ಮಪ್ಪ: ಸರಿತಾ ಪ್ರಕಾಶ್

“ಬಾಲ್ಯದಲ್ಲೇ ಗೋವಿನ ಮೇಲೆ ವಿಶೇಷ ಪ್ರೀತಿ ಮೂಡಲು ಕಾರಣ ನಮ್ಮಪ್ಪ ವೆಂಕಟ್ರಮಣ ಭಟ್, ಪ್ರತಿದಿನವೂ ಮುಂಜಾನೆ ಗೋವಿಗೆ ಒಂದು ಹಿಡಿಯಷ್ಟಾದರೂ ಮೇವು ನೀಡದೆ ಇತರ ಕಾರ್ಯಗಳತ್ತ ಗಮನ ಹರಿಸಿದವರಲ್ಲ ನಮ್ಮಪ್ಪ. ಇದುವೇ ಗೋವಿನ ಮೇಲೆ ಮಮತೆ ಮೂಡಲು ಕಾರಣ. ಮುಂದೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಗೋ ಸಂರಕ್ಷಣಾ ಕಾರ್ಯವು ಮನಸ್ಸಿಗೆ ಹೊಸ ಸ್ಪೂರ್ತಿ ನೀಡಿತು. ಇದರಿಂದ ಪ್ರೇರಣೆಗೊಂಡು ಸಮಾಜದಲ್ಲಿ ಭಾರತೀಯ ಗೋತಳಿಗಳ ಬಗ್ಗೆ ಅರಿವು ಮೂಡಿಸ ಬೇಕು, ಅವುಗಳ ಸಂರಕ್ಷಣೆಗಾಗಿ ಕಿಂಚಿತ್ ಸೇವೆ ಮಾಡಬೇಕು’ ಎಂಬ […]

Continue Reading

ಮನೆಯ ಹಸುಗಳಿಗೂ ಮುಕ್ತ ವಾತಾವರಣ ನೀಡಿದ ಮಾಸದ ಮಾತೆ: ವಿಜಯಲಕ್ಷ್ಮಿ ಕಲ್ಲಕಟ್ಟ

ಗೋಸ್ವರ್ಗಕ್ಕೆ ಹೋಗಿ ಬಂದ ಮೇಲೆ ಅಲ್ಲಿ ಹಸುಗಳಿಗೆ ನೀಡಿದ ಮುಕ್ತ ಸ್ವಾತಂತ್ರ್ಯವನ್ನು ಕಂಡು, ಮೆಚ್ಚಿ ತಮ್ಮ ಮನೆಯಲ್ಲಿರುವ ಹಸುಗಳಿಗೂ ಇಂತಹುದೇ ವಾತಾವರಣ ಕಲ್ಪಿಸಿಕೊಟ್ಟವರು ಮುಳ್ಳೇರಿಯ ಮಂಡಲದ ಪೆರಡಾಲ ವಲಯದಿಂದ ಮಾಸದ ಮಾತೆಯಾಗಿ ಗುರಿ ತಲುಪಿದ ವಿಜಯಲಕ್ಷ್ಮಿ ಕಲ್ಲಕಟ್ಟ. ಕಾಕೆಕೊಚ್ಚಿ ನಾರಾಯಣ ಭಟ್, ಹೊನ್ನಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಗಳಲ್ಲಿ ಪರಿಣತಿಯಿದೆ. ಕೃಷಿ, ಹೋದೋಟ ಇಷ್ಟ ಪಡುವ ಅವರ ಮನೆಯ ಮುಂದೆ ಸುಂದರವಾದ ಹೂಗಳು, ತಾವರೆಕೊಳ ಜನಮನ ಸೆಳೆಯುತ್ತಿರುವುದು ಇವರ ಆಸಕ್ತಿಗೆ ಸಾಕ್ಷಿಯಾಗಿದೆ. ಸುಮಾರು […]

Continue Reading

ಗೋಮಾತೆಯ ಶ್ರೀಮಾತೆಯಾಗಿ ಪುಟಾಣಿ ಶ್ರೀರಕ್ಷಾ

ಈಕೆ ಇನ್ನೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ. ಗೆಳೆಯ ಗೆಳತಿಯರೊಡನೆ ಸ್ವಚ್ಛಂದವಾಗಿ ಆಟವಾಡುವ ಮುಗ್ಧ ಬಾಲ್ಯ. ಮನೆಯವರ ಜೊತೆಗೆ, ಮುದ್ದು ತಂಗಿಯ ಜೊತೆಗೆ ಬಾಲ್ಯ ಸಹಜವಾದ ತುಂಟಾಟವಾಡುವ ಸಮಯ. ಆದರೂ ಆಕೆ ಇಂದು ಹೊತ್ತುಕೊಂಡಿರುವ ಮಹತ್ತರ ಜವಾಬ್ದಾರಿ ನಿಜಕ್ಕೂ ಅದ್ಬುತ, ಅನುಕರಣೀಯ. ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಸ್ವಯಂ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದಾಳೆ ಈ ಬಾಲೆ. ಮುಳ್ಳೇರಿಯ ಮಂಡಲದ […]

Continue Reading

ಮಕ್ಕಳಿಗೆ ಗೋವಿನ ಮಹತ್ವದ ಅರಿವು ಮೂಡಿಸುವ ಶಿಕ್ಷಕಿ: ವಿಜಯಾ ಶ್ಯಾನುಭಾಗ್

“ಮಕ್ಕಳಿಗೆ ಎಳವೆಯಿಂದಲೇ ಗೋವಿನ ಮೇಲೆ ಮಮತೆ ಮೂಡಿಸಿದರೆ  ಮುಂದಿನ ಪೀಳಿಗೆಯೂ ಗೋ ಸಾಕಣೆಯತ್ತ ಮನಸ್ಸು ಮಾಡ ಬಹುದಷ್ಟೆ. ಅಳಿಯುತ್ತಿರುವ ಗೋತಳಿಗಳ ಪರಿಚಯ ಮಾಡಿಸಿ, ಆ ಹಸುಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮುಂದೊಂದು ದಿನ ನಮ್ಮ ಸಮಾಜ ಭಾರತೀಯ ಗೋತಳಿಗಳ ಮಹತ್ವವನ್ನು ಜಗತ್ತಿಗೇ ಸಾರಬಹುದು” ಎಂಬುದು ಶಿಕ್ಷಕಿಯಾಗಿರುವ ಶಿರಸಿಯ ವಿಜಯಾ ಶ್ಯಾನುಭಾಗ್ ಅವರ ಅಭಿಪ್ರಾಯ. ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಾ ಶ್ಯಾನುಭಾಗ್ ಕೆಕ್ಕಾರು ಮಠದಲ್ಲಿ ಶ್ರೀ ಸಂಸ್ಥಾನದವರ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕಕ್ಕೆ ಬಂದವರು.  […]

Continue Reading

ಗೋವಿನ ಬಗ್ಗೆ ಸಮಾಜದಲ್ಲಿ ಉತ್ತಮ ಸ್ಪಂದನೆ ಇದೆ: ರಾಜರಾಜೇಶ್ವರಿ ಬೆಂಗಳೂರು

ಕೆದಿಲ ಗ್ರಾಮದ ಬಡೆಕ್ಕಿಲ ಶಂಕರ ಭಟ್,ಶಂಕರಿ ಅಮ್ಮ ಇವರ ಪುತ್ರಿಯಾದ ರಾಜರಾಜೇಶ್ವರಿ ಅವರು ಶಿರಂಕಲ್ಲು ಉಬರು ಮನೆತನದ ಗಣಪತಿ ಭಟ್ ಅವರನ್ನು ವಿವಾಹವಾಗಿ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಅನ್ನಪೂರ್ಣೇಶ್ವರಿ ವಲಯದ ಆರೋಗ್ಯ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವನ್ನು ಸಾಕುವ ಹೊಣೆ ಹೊತ್ತು ಮಾಸದ ಮಾತೆಯ ಗುರಿ ತಲುಪಿದವರು. ಹಲವಾರು ವರ್ಷಗಳಿಂದ ಶ್ರೀ ಮಠದ ನಿರಂತರ ಸಂಪರ್ಕದಿಂದಾಗಿ ಮಠದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ರಾಜರಾಜೇಶ್ವರಿ ಈ […]

Continue Reading

ಗೋ ಸೇವೆಯಲ್ಲಿ ಸಾರ್ಥಕತೆ ಇದೆ: ಶೋಭಾ ಲಕ್ಷ್ಮಿ ಬಂಗಾರಡ್ಕ

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠವೇರಿದ ನಂತರ ನಿರಂತರ ಮಠದ ಸಂಪರ್ಕದಲ್ಲಿದ್ದ ಕುಟುಂಬ ಬಂಗಾರಡ್ಕದ ಶೋಭಾಲಕ್ಷ್ಮಿ ಇವರದ್ದು. ಉಪ್ಪಿನಂಗಡಿ ಮಂಡಲದ ಕಬಕ ವಲಯದ ಈಗ ಪುತ್ತೂರು ಸಮೀಪದ ಕೊಡಿಪ್ಪಾಡಿಯಲ್ಲಿ ವಾಸಿಸುತ್ತಿರುವ ಬಂಗಾರಡ್ಕ ಜನಾರ್ದನ ಭಟ್ ಅವರ ಪತ್ನಿ ಶೋಭಾಲಕ್ಷ್ಮಿ ಬಂಗಾರಡ್ಕ .ಏಕೈಕ ಪುತ್ರ ಎಂ.ಬಿ.ಬಿ.ಎಸ್.ಮುಗಿಸಿ, ಎಂ.ಎಸ್ ಮಾಡುತ್ತಿದ್ದಾನೆ. ಸಾಹಿತ್ಯ, ಸಂಗೀತ ಸಹಿತ ಎಲ್ಲಾ ಕಲೆಗಳಲ್ಲೂ ಆಸಕ್ತಿ ಇರುವ ಶೋಭಾಲಕ್ಷ್ಮಿ ಗೆ ಆಧ್ಯಾತ್ಮಿಕ ವಿಚಾರದತ್ತ ಹೆಚ್ಚಿನ ಸೆಳೆತ. ತವರುಮನೆ ನಿಡುಗಳದಲ್ಲೂ ಗೋಸಾಕಣೆ ಇದ್ದುದರಿಂದ ಗೋವಿನ ಮೇಲಿನ ಮಮತೆ […]

Continue Reading

ಗುರು ಕಾರುಣ್ಯದಿಂದ ಗುರಿ ಸೇರಿದೆ: ಎನ್ನುವ ಗೀತಾ ಪ್ರಸಾದ್ ಪೋಳ್ಯ

ಗೀತಾಪ್ರಸಾದ್ ಪೋಳ್ಯ ಇವರು ಗೋ ಸೇವೆಯಲ್ಲಿ ಆಸಕ್ತಿ ಹೊಂದಿ ಗುರು ಸೇವೆಯ ಶ್ರದ್ಧೆಯಿಂದ ಮಾಸದ ಮಾತೆಯಾಗಿ ಸೇರಿ ಗುರಿ ತಲುಪಿದ ಮಾಸದ ಮಾತೆ. “ಪೆರಾಜೆ ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮೊದಲ ಬಾರಿಗೆ ಶ್ರೀ ಸಂಸ್ಥಾನದವರ ಆಶೀರ್ವಚನ, ರಾಮಕಥೆಗಳನ್ನು ಕೇಳಿಸಿಕೊಂಡೆ. ನಂತರ ಆಧ್ಯಾತ್ಮಿಕವಾಗಿ ಬಹಳಷ್ಟು ಸೆಳೆತವುಂಟಾಯಿತು.ಇದು ಅನೇಕ ಮಾನಸಿಕ ಒತ್ತಡಗಳಿಂದ ಮುಕ್ತಿಯನ್ನು ನೀಡಿದಾಗ ಶ್ರೀ ಗುರುಗಳ ನಿರ್ದೇಶಾನುಸಾರವಾಗಿ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ” ಎನ್ನುವ ಗೀತಾ ಪೋಳ್ಯ ಅವರು ತಮ್ಮ ಮಾಸದ ಮಾತೆಯಾದ ಅನುಭವವನ್ನು […]

Continue Reading

ಗುರು ಚರಣಕೆ ಶರಣು : ವಿಜಯಲಕ್ಷ್ಮಿ ಅಂಗಡಿ (ಪ್ರತಿಭಾ ಅಂಗಡಿ)

ಶ್ರೀ ಗುರುಗಳ ಗೋವಿನ ಬಗ್ಗೆ ಇರುವ ಕಾಳಜಿಯ ಪ್ರೇರಣೆ, ಶ್ರೀ ಗುರು ವಚನದ ಮೇಲಿನ ಶ್ರದ್ಧೆ, ಬಾಲ್ಯದಿಂದಲೂ ಗೋವಿನ ಮೇಲೆ ಇದ್ದಂತಹ ಪ್ರೀತಿ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಗೈಯಲು ಮುಂದೆ ಬಂದೆ. ಶ್ರೀ ಗುರುಗಳ ಅನುಗ್ರಹದಿಂದ ನಿರೀಕ್ಷೆಗೂ ಮುನ್ನವೇ ಗುರಿ ಸೇರಿದ ಸಾರ್ಥಕ ಭಾವ ಮನದಲ್ಲಿ ಮೂಡಿದೆ ಎನ್ನುತ್ತಾರೆ ಕರ್ಕಿ ಹೊನ್ನಾವರ ಮೂಲದ ಪ್ರಸ್ತುತ ಶಿರಸಿಯಲ್ಲಿ ವಾಸ್ತವ್ಯವಿರುವ ವಿಜಯಲಕ್ಷ್ಮಿ ಅಂಗಡಿ ಅವರ ಮಾತುಗಳು. ಸಿದ್ಧಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಲಕ್ಷ್ಮಿ ಅವರು ಮಾಸದ ಮಾತೆಯಾಗಿ […]

Continue Reading

ಸಾವಿರದ ಗುರಿ ಹೊತ್ತ ಮಾಸದ ಮಾತೆ: ಲಕ್ಷ್ಮೀ ಪ್ರಕಾಶ್ ಇಳಂತಿಲ

ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮಹತ್ವ ಪೂರ್ಣ ಕಲ್ಪನೆಯ ಸಾಕ್ಷಾತ್ಕಾರವೇ ಮಾತೃತ್ವಮ್ ಯೋಜನೆಯ ಮಾಸದ ಮಾತೆ. ಈಗಾಗಲೇ ಮಾಸದ ಮಾತೆಯರಾಗಿ ಸ್ವ ಇಚ್ಛೆಯಿಂದ ಮುಂದೆ ಬಂದು ತಮ್ಮ ಗುರಿ ತಲುಪಿದ ಮಾತೆಯರಲ್ಲಿ ಮಂಗಳೂರು ನಗರದ ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ, ಮಾತೃತ್ವಮ್ ಮಂಗಳೂರು ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಪ್ರಕಾಶ್ ಇಳಂತಿಲ ಮೊದಲಿಗರು. ಲಕ್ಷ್ಮೀ ಪ್ರಕಾಶ್ ಅವರು ವಿಟ್ಲ ನೂಜಿ ನಿವಾಸಿಗಳಾದ ಕೆ. ರಾಮಚಂದ್ರ ಭಟ್ ಮತ್ತು ಸರಸ್ವತಿ ಭಟ್ ಅವರ ಪುತ್ರಿ. ಬಿ.ಕಾಂ.ಪದವೀಧರೆಯಾಗಿರುವ ಇವರು ಹೊಸದಿಗಂತ ಪತ್ರಿಕೆಯ ಸ್ಥಾನೀಯ […]

Continue Reading