“ಕಷ್ಟ ಪರಂಪರೆಯಿಂದ ಮುಕ್ತಿ ದೊರಕಿದ್ದು ಶ್ರೀ ಗುರು ಕಾರುಣ್ಯದಿಂದ ” : ಕೃಷ್ಣಕುಮಾರಿ ಬದನಾಜೆ

“ಶ್ರೀ ಗುರುಚರಣಗಳನ್ನು ನಂಬಿದವರಿಗೆ ಬದುಕಿನಲ್ಲಿ ಸೋಲಿಲ್ಲ.ಎಂಥಹ ಕಷ್ಟದ ಹೊಡೆತವನ್ನು ನಿವಾರಿಸುವ ಶಕ್ತಿ ಗುರು ಕೃಪೆಗಿದೆ.ಇದು ನಮ್ಮ ಬದುಕಿನಲ್ಲಿ ಅನುಭವಿಸಿ ಅರಿತುಕೊಂಡ ಸತ್ಯ. ಆದುದರಿಂದಲೇ ಬದುಕಿನಲ್ಲಿ ಮೊದಲ ಆದ್ಯತೆ ಗುರು ಸೇವೆ,ಗೋಸೇವೆಗೆ” ಎನ್ನುತ್ತಾರೆ ಮಿಂಚಿನಡ್ಕ ಮೂಲದ ಪ್ರಸ್ತುತ ವಿಟ್ಲ ಸಮೀಪ ಬದನಾಜೆ ನಿವಾಸಿಗಳಾಗಿರುವ ಕೃಷ್ಣಕುಮಾರಿ ಬದನಾಜೆ. ಶ್ರೀಮಠದ ಸಂಪರ್ಕ ಅವರಿಗೆ ಎಳವೆಯಿಂದಲೇ ದೊರಕಿತ್ತು. ತಂದೆ ಶೇಂತಾರು ಗೋಪಾಲಕೃಷ್ಣ ಭಟ್ ಉರುವಾಲು ವಲಯದ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದವರು. ಪತಿ ಬದನಾಜೆ ಪುರುಷೋತ್ತಮ ಭಟ್ ಮಂಗಳೂರು ಹೋಬಳಿಯ ಅಮೃತಸತ್ವ ಸಂಚಾಲಕರಾಗಿ, ವಿಟ್ಲ […]

Continue Reading

ಗೋಸೇವೆ ಮತ್ತು ಶ್ರೀ ಮಠದ ಸೇವೆಯಿಂದ ದೊರಕುವ ಆತ್ಮತೃಪ್ತಿ ಇನ್ನೆಲ್ಲೂ ಸಿಗದು: ಡಾ. ಶಾರದಾ ಜಯಗೋವಿಂದ

ಮೂಲತಃ ಮುಂಗ್ಲಿಮನೆ ಫ್ರೊ. ಮರಿಯಪ್ಪ ಭಟ್ ಮತ್ತು ಸತ್ಯಭಾಮಾ ದಂಪತಿಗಳ ಪುತ್ರಿಯಾದ ಡಾ. ಶಾರದಾ ಜಯಗೋವಿಂದ ಅವರು ಎಂ.ಎ.ಪಿಎಚ್.ಡಿ ಪದವಿ ಗಳಿಸಿದವರು. ಚೆನ್ನೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ (Rank)ದೊಂದಿಗೆ ಇಂಗ್ಲೀಷ್ ಎಂ. ಎ.ಪದವಿ ಗಳಿಸಿದ ಅವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ದೆಹಲಿ,ನೈಜೀರಿಯಾಗಳಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು. ಆಲಂಗಾರು ಮನೆತನದ ಜಯಗೋವಿಂದ ಅವರ ಪತ್ನಿಯಾದ ಶಾರದಾ ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ನಿವಾಸಿಗಳಾಗಿ ಶ್ರೀಮಠದ ಸೇವೆಗೆ ಸದಾ ಮುಂಚೂಣಿಯಲ್ಲಿದ್ದಾರೆ. ೧೯೯೧ ರ […]

Continue Reading

ಶ್ರೀ ಮಠದ ಸೇವೆ ಮನಸ್ಸಿಗೆ ಮುದ ನೀಡುವ ಕಾರ್ಯ: ಮನೋರಂಜಿನಿ ಆರ್ .ಭಟ್ , ಮುಂಬೈ

“ಶ್ರೀಮಠದ ಸೇವೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಮುಂಬೈ ಮಹಾನಗರದಲ್ಲಿ ಪ್ರತೀ ತಿಂಗಳು ನಡೆಯುವ ಹವ್ಯಕ ಸಭೆಗಳು ನಮ್ಮ ಸಂಘಟನೆಯನ್ನು ಬಲ ಪಡಿಸಲು ಅತ್ಯಂತ ಉಪಯುಕ್ತವಾಗಿದೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದೇವೆ” ಈ ಮಾತುಗಳು ಸಿದ್ಧಮೂಲೆ ಮೂಲದ ಉದ್ಯೋಗ ನಿಮಿತ್ತ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ರಮಣ ಭಟ್ ಸಿದ್ಧಮೂಲೆ ಇವರ ಪತ್ನಿ ಮನೋರಂಜಿನಿಯವರದ್ದು. ಮಂಗಳೂರು ಸಮೀಪದ ಪಣಂಬೂರು ರಾಮರಾವ್,ಮೀನಾಕ್ಷಿ ದಂಪತಿಗಳ ಪುತ್ರಿಯಾದ ಮನೋರಂಜಿನಿಯವರು ಮುಂಬೈ ನಗರದಲ್ಲೇ ಬೆಳೆದವರು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಉದ್ಯೋಗದಲ್ಲಿದ್ದ […]

Continue Reading

ಗೋಮಾತೆಯ ಸೇವೆಯಿಂದ ಸಾರ್ಥಕ ಭಾವ ಮೂಡಿದೆ: ಕಂಜಾಕ್ಷಿ ನಾಗಭೂಷಣ

ಸಾಗರ ಸಮೀಪದ ಹುಕ್ಲು ಮೂಲದವರಾದ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಕಂಜಾಕ್ಷಿ ನಾಗಭೂಷಣ ಅವರು ಶ್ರೀಮಠದ ಸೇವೆ, ಗೋಸೇವೆಯಲ್ಲಿ ಸಾರ್ಥಕತೆ ಕಂಡವರು. “ಶ್ರೀಗುರುಗಳ ಮಾತುಗಳಿಂದ ಪ್ರೇರಣೆಗೊಂಡು ಮಾಸದ ಮಾತೆಯಾದೆ. ಇದರಲ್ಲಿ ವೈವಿಧ್ಯಮಯ ಅನುಭವಗಳನ್ನು ಗಳಿಸಿಕೊಂಡು ಮಾತೃತ್ವಮ್ ಗುರಿಯನ್ನು ತಲುಪಿದೆ. ನನ್ನ ಕೈಲಾದ ಮಟ್ಟಿಗೆ ಗೋಸೇವೆ, ಗುರುಸೇವೆ ಮಾಡಿದ ನೆಮ್ಮದಿ, ಸಂತೃಪ್ತಿ ಮನದಲ್ಲಿದೆ” ಎನ್ನುವ ಇವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು. ಈ ಅನುಭವವೇ ಅವರಿಗೆ ಮಾತೃತ್ವಮ್ ಗುರಿ […]

Continue Reading

ಶ್ರೀ ಸಂಸ್ಥಾನದವರ ಯೋಜನೆಗಳಲ್ಲಿ ಭಾಗಿಯಾಗುವುದೇ ಸೌಭಾಗ್ಯ : ಜ್ಯೋತಿ ಕೇಶವ ಭಟ್

ಅಳಿಕೆ ಗ್ರಾಮದ ಎರುಂಬು ಕೇಶವ ಭಟ್ ಇವರ ಪತ್ನಿಯಾಗಿರುವ ಜ್ಯೋತಿ ಕೆ.ಭಟ್ ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು. ನೆಗಳಗುಳಿ ಮಹಾಬಲೇಶ್ವರ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಜ್ಯೋತಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಪರೀತ ಪ್ರೀತಿ. “ತವರುಮನೆಯಲ್ಲಿದ್ದ ದೇಶೀ ತಳಿಯ ಹಸುವಿನ ಹಾಲು ಕುಡಿದೇ ಬೆಳೆದ ನನಗೆ ಈಗಲೂ ಗೋವುಗಳೆಂದರೆ ವಿಶೇಷ ವ್ಯಾಮೋಹ. ಆದರೆ ನಮ್ಮ ಉದ್ಯೋಗ ನಿಮಿತ್ತ ಪೇಟೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಬಂದ ಕಾರಣ ಶ್ರೀಗುರುಗಳ ಗೋಸೇವಾ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ […]

Continue Reading

“ಮಾಸದ ಮಾತೆಯಾಗಲು ಕಾರಣ, ಪ್ರೇರಣ ಹಾಗೂ ಧಾರಣಾಶಕ್ತಿ ಶ್ರೀಚರಣ” ಲಲಿತಾಲಕ್ಷ್ಮೀ ಭಟ್ಟ ಸಿದ್ಧಾಪುರ

ಲಲಿತಾಲಕ್ಷ್ಮೀ ಎಂಬ ಹೆಸರು ಶ್ರೀಮಠದ ಶಿಷ್ಯರಿಗೆ ಸದಾ ಸುಪರಿಚಿತ. ಅದರಲ್ಲೂ ಗುರುಚರಣ ಸೇವಕಿ ಲಲಿತಾಲಕ್ಷ್ಮೀ ಎಂಬ ಕಾವ್ಯನಾಮದಿಂದ ಸದಾ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ, ಶ್ರೀಮಠದ ಶಿಷ್ಯಬಂಧುಗಳ ಅನುಭವಗಳ ಬಗ್ಗೆ ಬಹಳ ಸೊಗಸಾದ ಭಾಷೆಯಲ್ಲಿ ಆಸ್ತಿಕರ ಮನಸ್ಸಿನಲ್ಲಿ ಭಾವುಕತೆ ತುಂಬುವಂತಹ ಆಪ್ತ ಶೈಲಿಯ ಬರಹವನ್ನು ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಇವರ ಲೇಖನಗಳನ್ನು ಓದದ ಶಿಷ್ಯಬಂಧುಗಳು ವಿರಳ. ಶ್ರೀಮಠದ ಸೇವೆಯಲ್ಲಿ ಅತೀವ ಆಸಕ್ತಿ, ಶ್ರದ್ಧೆ,ಭಕ್ತಿ ಹೊಂದಿರುವ ಇವರು ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಒಂದೇ […]

Continue Reading

“ಶ್ರೀಮಠದ ಸೇವೆಗೆ ಬದುಕಿನಲ್ಲಿ ಮೊದಲ ಆದ್ಯತೆ” : ಮಲ್ಲಿಕಾ ಕಲ್ಲಡ್ಕ

ವದ್ವ ಲಕ್ಷ್ಮೀ ನಾರಾಯಣ ಭಟ್ ಹಾಗೂ ಸರಸ್ವತಿ ಇವರ ಪುತ್ರಿಯಾದ ಮಲ್ಲಿಕಾ ಕಲ್ಲಡ್ಕ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಅತೀವ ಆಸಕ್ತಿ. ಮುಳಿಯ ಗೋಪಾಲಕೃಷ್ಣ ಭಟ್ ಅವರನ್ನು ವಿವಾಹವಾದ ನಂತರ ಶ್ರೀಮಠದ ಸಂಪರ್ಕ ದೊರಕಿತು. ಜೊತೆಗೆ ಶ್ರೀ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಭಾಗಿಯಾಗುವ ಸದವಕಾಶವೂ ಒದಗಿಬಂತು. ಪ್ರಸ್ತುತ ಮಾತೃತ್ವಮ್ ನ ವಿವೇಕ ಲಕ್ಷ್ಮಿ ವಿಭಾಗದ ಕೇಂದ್ರ ಮಟ್ಟದ ಅಧ್ಯಕ್ಷೆಯಾಗಿರುವ ಮಲ್ಲಿಕಾ ಅವರು ತಮ್ಮ ಸೇವೆಯ ಸಂದರ್ಭದಲ್ಲಿ ವೈವಿಧ್ಯಮಯ ಅನುಭವಗಳನ್ನು ಪಡೆದುಕೊಂಡವರು. “ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ […]

Continue Reading

ದೇಶೀ ಹಸುಗಳ ಮಹತ್ವವನ್ನು ಸಮಾಜ ಗುರುತಿಸಿದೆ: ಲಲಿತಾ ಹೆಬ್ಬಾರ್ ಕುಮಟಾ

“ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಪಡೆದವಳು ನಾನು. ಮಾಸದ ಮಾತೆಯಾಗಿ ಸೇರಿದಾಗ ಗುರಿತಲುಪ ಬಲ್ಲೆನೇ ಎಂಬ ಆತಂಕ ಸಹಜವಾಗಿ ಮೂಡಿ ಬಂದಿತ್ತು. ಆದರೆ ಶ್ರೀಗುರು ವಚನಗಳೇ ಗೋಸೇವೆಯಲ್ಲಿ ನನಗೆ ದಾರಿದೀಪ. ಗುರುಚರಣಗಳನ್ನು ಸ್ಮರಿಸಿ ಮುನ್ನಡೆದೆ. ಕೇವಲ ಎರಡೇ ತಿಂಗಳಿನಲ್ಲಿ ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ನನ್ನ ಗುರಿ ತಲುಪಿದೆ. ಎಲ್ಲವೂ ಗೋಮಾತೆ,ಶ್ರೀರಾಮ ದೇವರ ಕೃಪೆ” ಎನ್ನುತ್ತಾರೆ ಕುಮಟಾ ಮಂಡಲದ ಮಾತೃತ್ವಮ್ ನ ಮಂಡಲಾಧ್ಯಕ್ಷೆಯಾಗಿರುವ ಲಲಿತಾ […]

Continue Reading

“ಶ್ರೀರಾಮನ ಅನುಗ್ರಹ ಶ್ರೀ ಗುರುಗಳ ಕೃಪೆಯಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ” : ಗಂಗಾಮಹೇಶ್ ಚೂಂತಾರು

“ಶ್ರೀರಾಮನ ಅನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ. ಹೇಳಲಾರದೆ ಮನದಲ್ಲಿರಿಸಿದ ಕನಸುಗಳು ಸಹಾ ನನಸಾಗುವಂತಾಗುವುದು ಗುರುಕೃಪೆ ದೊರೆತಾಗ” ಎನ್ನುತ್ತಾರೆ ಚೂಂತಾರಿನ ಗಂಗಾಮಹೇಶ್ ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ಮಾತೃಪ್ರಧಾನೆಯಾಗಿರುವ ಗಂಗಾಲಕ್ಷ್ಮೀ ಮಹೇಶ್ ಅವರು ಪಳ್ಳ ಗೋವಿಂದ ಭಟ್ ಮತ್ತು ವೆಂಕಟೇಶ್ವರಿ ಅವರ ಪುತ್ರಿ. ಚೂಂತಾರು ವೇ.ಮೂ.ಲಕ್ಷ್ಮೀ ನಾರಾಯಣ ಭಟ್,ಸರೋಜಿನಿ ದಂಪತಿಯ ಪುತ್ರ ವೇ.ಮೂ.ಮಹೇಶ್ ಪ್ರಸಾದರ  ಪತ್ನಿ. ೨೦೦೨ರಿಂದ ಶ್ರೀಮಠದ ಸೇವೆಯಲ್ಲಿ  ಪಾಲ್ಗೊಳ್ಳುತ್ತಿರುವ ಗಂಗಾ ಅಭಯಾಕ್ಷರ ಅಭಿಯಾನ,ಹಾಲುಹಬ್ಬ, ಮಂಗಲಗೋಯಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. “ಹಿರಿಯರ […]

Continue Reading

“ಎಲ್ಲವೂ ಶ್ರೀಗುರುಗಳ ಅನುಗ್ರಹ”: ಮಂಗಳಗೌರಿ ಸಾಗರ

ಶ್ರೀಮಠದ ಸೇವೆಗಳಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಂಡು ಪಾದರಸದಂತಹ ತಮ್ಮ ಚುರುಕುತನದ ಕೆಲಸಗಳಿಂದ ಹಲವಾರು ಜನರ ಮೆಚ್ಚುಗೆ ಗಳಿಸಿರುವ ಮಂಗಳಗೌರಿ ಚಿದಾನಂದ ಭಟ್ ಸಾಗರ ಇವರನ್ನು ಗುರುಬಂಧುಗಳೆಲ್ಲ ಅಕ್ಕರೆಯಿಂದ ಕರೆಯುವ ಹೆಸರು ಗೌರಕ್ಕ ಎಂದು. ” ಮಂಗಳಗೌರಿ ಅಂದರೆ ಯಾರಿಗೂ ಗೊತ್ತಿರಲ್ಲ, ಗೌರಕ್ಕ ಅಂದರೆ ಗೊತ್ತಾಗಬಹುದಷ್ಟೆ” ಎಂದು ಅಕ್ಕರೆಯಿಂದ ನುಡಿಯುವ ಗೌರಕ್ಕನಿಗೆ ಬಾಲ್ಯದಿಂದಲೇ ಶ್ರೀಮಠದ ನಿಕಟ ಸಂಪರ್ಕವಿದೆ. ಇವರ ತಂದೆ ಮಹಾಬಲೇಶ್ವರ ಭಟ್ಟರು ಹಿರಿಯ ಗುರುಗಳ ಕಾಲದಲ್ಲಿ ಶ್ರೀಮಠದ ಆಚಾರವಿಚಾರ ಭಟ್ಟರಾಗಿದ್ದುದರಿಂದ ಗೌರಕ್ಕನಿಗೆ ಶ್ರೀಮಠ,ಗುರುಪೀಠಗಳ ಬಗ್ಗೆ ಅತೀವ ಭಕ್ತಿ, […]

Continue Reading

ಹೃದಯದಲ್ಲಿರುವುದು ಶ್ರೀಗುರುಗಳ ಮೂರ್ತಿ,ಶ್ರೀಗುರುವಚನಗಳೇ ಬಾಳಿಗೆ ಸ್ಪೂರ್ತಿ: ಶ್ರೀದೇವಿ ಎಸ್. ಭಟ್

“ಬದುಕಿನ ಪರೀಕ್ಷಣ ಘಟ್ಟಗಳಲ್ಲಿ ಆಸರೆಯಾಗಿ ಕಾಪಾಡಿದ್ದು ಶ್ರೀ ಗುರುಗಳ ಆಶೀರ್ವಾದ. ಅವರ ಕೃಪೆಯಿಂದ ಜೀವನದ ಹಲವಾರು ಏಳುಬೀಳುಗಳನ್ನು ದಾಟಿ ಇಂದು ಶ್ರೀ ಗುರುಸೇವೆ, ಗೋಸೇವೆಗಳ ಮೂಲಕ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ” ಎಂಬ ಸಂತೃಪ್ತ ಭಾವದಿಂದ ನುಡಿಗಳು ಪುಳು ಈಶ್ವರ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಪುತ್ರಿಯೂ, ಚಂಬರಕಟ್ಟ ಸುಬ್ರಹ್ಮಣ್ಯ ಭಟ್ ಅವರ ಪತ್ನಿಯೂ ಆಗಿರುವ ಶ್ರೀದೇವಿ ಎಸ್‌. ಭಟ್ ಅವರದ್ದು. ಪತಿ ಸುಬ್ರಹ್ಮಣ್ಯ ಭಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಹಾಸನದಲ್ಲಿದ್ದರೂ ತಮ್ಮಿಬ್ಬರು ಮಕ್ಕಳ ಜೊತೆಗೆ ಶ್ರೀಮಠದ […]

Continue Reading

“ಶ್ರೀ ಮಠದ ಸಂಘಟನೆಯನ್ನು ಬಲ ಪಡಿಸುವುದೇ ಜೀವನದ ಗುರಿ” : ದೇವಿಕಾ ಶಾಸ್ತ್ರಿ

ತವರುಮನೆ ಪೆರ್ನಾಜೆ ಮನೆತನದವರು ಬಹಳ ಹಿಂದಿನಿಂದಲೂ ಏಳು ಗ್ರಾಮಗಳ ಗುರಿಕ್ಕಾರರಾದುದರಿಂದ ಬೆಳ್ತಂಗಡಿ ಸಮೀಪದ ಪಿಲಿಗೂಡಿನಲ್ಲಿರುವ ಮಾತೃತ್ವಮ್ ಮಹಾಮಂಡಲ ಸಂಚಾಲಕಿಯಾಗಿರುವ ದೇವಿಕಾ ಶಾಸ್ತ್ರಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತು. “ನಾನು ಪುಟ್ಟ ಬಾಲಕಿಯಾಗಿದ್ದಾಗ ದೊಡ್ಡ ಗುರುಗಳು ಸುಮಾರು ಒಂದು ತಿಂಗಳಷ್ಟು ಸಮಯ ನಮ್ಮಲ್ಲಿ ಮೊಕ್ಕಾಂ ಹೂಡಿದ್ದರು. ಆಗ ನಾನು ಅತೀವ ಕುತೂಹಲ, ಶ್ರದ್ಧೆಗಳಿಂದ ನಿತ್ಯವೂ ಶ್ರೀಕರಾರ್ಚಿತ ಪೂಜೆಯನ್ನು ನೋಡುತ್ತಿದ್ದೆ. ಆಗಲೇ ಮನಸ್ಸಿನಲ್ಲಿ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ ಭಕ್ತಿ ಭಾವ ಬೆಳೆಯಿತು. ಅದುವೇ ಮುಂದಿನ ಸೇವೆಗಳಿಗೆ ಭದ್ರ […]

Continue Reading

ಶ್ರೀ ಗುರುಸೇವೆ ಗೋಸೇವೆಯ ಭಾಗ್ಯ ದೊರಕುವುದು ಪೂರ್ವ ಜನ್ಮದ ಸುಕೃತದಿಂದ : ವಿದ್ಯಾ ರವಿಶಂಕರ್ ಏಳ್ಕಾನ

ತವರುಮನೆ ಸೂರ್ಯಂಬೈಲು ಮನೆಯವರು ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ಕಾಲದಿಂದಲೇ  ಗ್ರಾಮದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಾ ಬಂದವರು. ತಾಯಿಯ ತಂದೆ ಬೈಪ್ಪದವು ರಾಮಚಂದ್ರ ಭಟ್ ಅವರು ಪೆರಾಜೆಯ ಮಾಣಿ ಮಠ ಕಟ್ಟುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದವರು. ಇದರಿಂದಾಗಿ ಬಾಲ್ಯದಿಂದಲೇ ವಿದ್ಯಾ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿತು. ಶ್ರೀ ಮಠ,ಗುರುಗಳು ಎಂಬ ಅಭಿಮಾನ ಮೂಡಿ ಭಕ್ತಿ ಶ್ರದ್ಧೆ ಮೂಡಲು ಕಾರಣವಾಯಿತು. ನಿರಂತರ ಶ್ರೀ ಮಠದ ಸಂಪರ್ಕ, ಗುರುಸೇವೆ,ಗೋಸೇವೆಗಳು ಪೂರ್ವ ಜನ್ಮದ ಸುಕೃತದಿಂದ ಲಭಿಸುತ್ತದೆ ಎಂಬುದು ಏಳ್ಕಾನದ ಡಾ. […]

Continue Reading

“ತ್ಯಾಗದ ಪರ್ವಕ್ಕೆ ಪ್ರೇರಣೆ ಗುರುವಚನಗಳು” : ಸುಮಾ ರಮೇಶ್

“ಸೇವೆ ಮಾಡ ಬೇಕೆಂಬ ತುಡಿತವಿದ್ದರೆ ಯಾವುದಾದರೂ ಒಂದು ಹಾದಿ ತೆರೆಯುತ್ತದೆ. ಹಣದ ಮೂಲಕ ಸಹಕಾರ ನೀಡಬೇಕೆಂಬ ಮನಸ್ಸಿದ್ದರೆ ಯಾವುದೋ ಒಂದು ರೀತಿಯಲ್ಲಿ ಹಣ ಸಂಗ್ರಹವಾಗುತ್ತದೆ. ಇದು ನನ್ನ ಜೀವನದ ಅನುಭವ. ಶ್ರೀ ಮಠದ ಸೇವೆ, ಶ್ರೀ ಗುರುಗಳ ಸೇವೆ, ಗೋಸೇವೆ ಇವುಗಳಲ್ಲಿ ಆನಂದ ಕಂಡುಕೊಳ್ಳುವವಳು ನಾನು. ಇತರರಲ್ಲಿ ನಾನು ಕೇಳಿಕೊಳ್ಳುವುದು ಸಹಾ ಇದನ್ನೇ. ನಮ್ಮ ಗುರುಗಳ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿ. ಆಗ ದೊರಕುವ ಆನಂದವೇ ನಿಜವಾದ ಸಂತೋಷ” ತುಂಬು ಹೃದಯದ ಈ ನುಡಿಗಳು ಸುಮಾ ರಮೇಶ್ […]

Continue Reading

ಗೋಮಾತೆಯ ಮೇಲಿನ ಮಮತೆಯಿಂದ ಮಾಸದ ಮಾತೆಯಾದೆ: ಚಂದ್ರಮತಿ ಹೆಗಡೆ

ಬಾಲ್ಯದಿಂದಲೇ ಗೋವುಗಳ ಮೇಲೆ ವಿಶೇಷ ಪ್ರೀತಿ. ತವರುಮನೆಯಲ್ಲಿ ಹಸುಗಳ ಒಡನಾಟದ ನಡುವೇ ಬೆಳೆದವರು. ಮುಂದೆ ವಿದ್ಯಾಭ್ಯಾಸ, ಸರಕಾರಿ ಉದ್ಯೋಗ, ಮದುವೆ, ಮಕ್ಕಳು ಎಂದು ಜೀವನದ ಹಲವಾರು ಜವಾಬ್ದಾರಿಯುತ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಾಗ ಗೋ ಸಾಕಣೆ ಇಷ್ಟವಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಆ ಕಡೆಗೆ ಗಮನ ನೀಡಲು ಆಗಲಿಲ್ಲ.  ಆದರೂ ಶ್ರೀ ಮಠದ ಸಂಪರ್ಕಕ್ಕೆ ಬಂದ ನಂತರ ಗೋವುಗಳ ಸಾಂಗತ್ಯ ಮತ್ತೆ ದೊರಕಿತು. ಶ್ರೀ ಸಂಸ್ಥಾನದವರ ಗೋಸಂರಕ್ಷಣಾ ಕಾರ್ಯಗಳು ಮನಸ್ಸಿಗೆ ಬಹಳ ಆಪ್ತವಾಯಿತು. ಗೋಸ್ವರ್ಗ ನಿರ್ಮಾಣದ ನಂತರ ಅಲ್ಲಿನ ಒಂದು […]

Continue Reading

ಶ್ರೀ ಗುರುಗಳ ಪ್ರೇರಣಾ ನುಡಿಗಳೇ ಮಾಸದ ಮಾತೆಯಾಗಲು ದಾರಿದೀಪ : ಸಂಧ್ಯಾ ಕಾನತ್ತೂರು

“ಸಾವಿರದ ಸುರಭಿ ಯೋಜನೆಯಲ್ಲಿ ಭಾಗವಹಿಸಿದ್ದೆ. ಆದರೆ ಮಾಸದ ಮಾತೆಯಾಗಲು ಮಾತ್ರ ಯಾಕೋ ಧೈರ್ಯ ಮೂಡಲಿಲ್ಲ. ಸುರಭಿ ಸೇವಿಕೆಯಾಗಿ ಇತರ ಮಾಸದ ಮಾತೆಯರ ಜೊತೆ ಸಹಕರಿಸೋಣ ಎಂದು ಯೋಚಿಸಿದ್ದೆ. ಆದರೆ ಶ್ರೀ ಸಂಸ್ಥಾನದವರು ‘ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಸಂಧ್ಯಾ’ ಎಂದು ಭರವಸೆಯ ಆಶೀರ್ವಾದ ನೀಡಿದಾಗ ಅವರ ನುಡಿಗಳೇ ಗೋ ಸೇವಾ ಕಾರ್ಯಕ್ಕೆ ಶ್ರೀ ರಕ್ಷೆ ಎಂದು ಭಾವಿಸಿ ಮಾಸದ ಮಾತೆಯಾಗಿ ಸೇರಿ ಕೊಂಡೆ ” ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ಸಂಧ್ಯಾ ಕಾನತ್ತೂರು . ಮುಳಿಯಾಲದ […]

Continue Reading

ಶ್ರೀ ಮಠದ ಸೇವೆ ಗೋಸೇವೆ ತಾಯ್ತಂದೆಯರ ಬಳುವಳಿ: ಈಶ್ವರೀ ರಾಮಕೃಷ್ಣ

ಮಾಣಿ ಮಠದ ಶ್ರೀರಾಮದೇವರ ಅರ್ಚಕರಾಗಿ ಸುಮಾರು ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ಪ್ರಾಮಾಣಿಕ ಸೇವೆಗಾಗಿ ಪುರಸ್ಕೃತಗೊಂಡ ಪಂಜಿಗುಡ್ಡೆ ನಾರಾಯಣ ಭಟ್ಟರ ಪುತ್ರಿಯಾಗಿರುವ ಕುರಿಯದ ಈಶ್ವರೀ ರಾಮಕೃಷ್ಣ ಅವರಿಗೆ ಗುರುಸೇವೆ, ಗೋಸೇವೆ ತಾಯ್ತಂದೆಯರು ತೋರಿದ ಹಾದಿ. ತಾಯಿ ಕಾವೇರಿ ಅವರು ಸಹಾ ಗೋಸಾಕಣಿಗೆಯಲ್ಲಿ ಶ್ರೀ ಸಂಸ್ಥಾನದವರಿಂದ ಸನ್ಮಾನಿಸಲ್ಪಟ್ಟವರು ಎಂಬುದು ಇವರ ಹೆಮ್ಮೆ. “ನನ್ನ ಬಾಲ್ಯವೇ ಮಾಣಿಮಠದಲ್ಲಿ. ಅರ್ಚಕರಾದ ತಂದೆಯ ಕಾರ್ಯಕ್ಕೆ ನೆರವಾಗುವ ತಾಯಿಯ ಜೊತೆಯಲ್ಲಿ ನಾವು ಸಹಾ […]

Continue Reading

ಹಸುಗಳ ಕೊರಳ ಗಂಟೆಯ ಸದ್ದೇ ಬದುಕಿನ ಚೇತನ: ದೇವಕಿ ಭಟ್ ಪನ್ನೆ

ಮನೆಯಲ್ಲಿ ಮೂವತ್ತನಾಲ್ಕು ಹಸುಗಳನ್ನು ಸಾಕುತ್ತಿರುವಾಗಲೇ ಶ್ರೀ ಗುರುಗಳ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಮಹಿಳಾ ಪರಿಷತ್ ನ ಮೂಲಕ ಸೇವೆ ಸಲ್ಲಿಸಲು ಆರಂಭಿಸಿದ ದೇವಕಿ ಭಟ್ ಪನ್ನೆ ಅವರು ಇಂದು ಕೂಡಾ ಮನೆಯಲ್ಲಿ ಹಸುಗಳನ್ನು ಸಾಕುವ ಜೊತೆಗೆ ಮಠದ ಗೋ ಸಾಕಣೆಗೂ ಕೈ ಜೋಡಿಸಿ ಇತರರಿಗೆ ಮಾದರಿಯಾಗಿರುವವರು. “ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹತ್ತು ಹದಿನಾಲ್ಕು ಹಸುಗಳನ್ನು ಕರೆದು, ಅವುಗಳಿಗೆ ಹಿಂಡಿ,ಮೇವು ನೀಡಿ, ಉಳಿದ ಮನೆಗೆಲಸಗಳನ್ನು ಪೂರೈಸಿ ಮನೆಯಿಂದ ಹೊರಡುವವಳು ನಾನು. ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿ […]

Continue Reading

ಗೋ ಸಂರಕ್ಷಣೆಯೇ ಬದುಕಿನ ಗುರಿ : ನಿಧಿ ಹೆಗಡೆ

ಬಾಲ್ಯದಿಂದಲೂ ಶ್ರೀಮಠದ ನಿರಂತರ ಸಂಪರ್ಕ. ಗೋವುಗಳ ಒಡನಾಟ. ಶ್ರೀ ಸಂಸ್ಥಾನದವರ ವಿವಿಧ ಯೋಜನೆಗಳ ಸದುದ್ದೇಶದ ಅರಿವು ಇವುಗಳೇ ಚಂದಾವರ ಸೀಮೆಯ ಕುಮಟಾ ಮೂಲದ ಶ್ರೀಧರ ಹೆಗಡೆ ಕೂಜಳ್ಳಿ, ಪಾರ್ವತಿ ಹೆಗಡೆ ಇವರ ಪುತ್ರಿ ನಿಧಿ ಹೆಗಡೆಗೆ ಗೋವುಗಳ ಮೇಲೆ  ಅಕ್ಕರೆ ಮೂಡಿಸುವಲ್ಲಿ ಯಶಸ್ವಿಯಾಯಿತು. “ಗೋವುಗಳ ಮೇಲೆ ವಿಶೇಷ ಮಮತೆ ಇದೆ. ಆದರೂ ಮಾಸದ ಮಾತೆಯಾಗಿ ಸೇವೆ ಮಾಡಿ ಗುರಿ ತಲುಪುವ ಭರವಸೆ ಇರಲಿಲ್ಲ. ಇದುವರೆಗೂ ಯಾವುದೇ ವಿಚಾರಕ್ಕೂ ಇತರರಲ್ಲಿ ಹಣ ಕೇಳಿ ಅನುಭವವಿಲ್ಲದ ನನಗೆ ಈ ವಿಷಯದಲ್ಲಿ […]

Continue Reading

ಮಗನಿಂದಲೇ ಮೊದಲ ದೇಣಿಗೆ: ಶ್ವೇತಾ ಕಾಡೂರು

“ಶ್ರೀ ಗುರುಗಳ ಗೋ ಸಂರಕ್ಷಣಾ ಕಾರ್ಯದ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದಾದರೂ ನನ್ನ ಕಾರ್ಯ ಕೈಗೂಡುವ ಬಗ್ಗೆ ಯಾವುದೋ ಆತಂಕ ಮನದಲ್ಲಿ ಮೂಡಿತ್ತು. ಈ ವಿಚಾರವಾಗಿ ಯೋಚಿಸುತ್ತಿರುವಾಗ ಪುಟ್ಟ ಮಗ ಪ್ರಣವ ತನ್ನ ‘ಪ್ಯಾಕೆಟ್ ಮನಿ’ ಯಿಂದ ತನ್ನ ಸಂಗ್ರಹವನ್ನು ನೀಡಿ ‘ ಅಮ್ಮಾ ಗೋ ಸೇವೆಗೆ ಇದು ನನ್ನ ಕಾಣಿಕೆ’ ಎಂದು ನೀಡಿದಾಗ ಸಂತಸದಿಂದ ಕಣ್ತುಂಬಿ ಬಂತು” ಎನ್ನುತ್ತಾರೆ ಶ್ವೇತಾ ಕಾಡೂರು. ಸಂಗೀತ, ನೃತ್ಯ, ಈಜು, ಪೈಂಟಿಂಗ್,ಚಿತ್ರಕಲೆಗಳಲ್ಲಿ ಅತೀವ ಆಸಕ್ತಿ ಇರುವ ಶ್ವೇತಾ, […]

Continue Reading