” ಸತತ ಶ್ರೀಚರಣ ಸೇವೆ ದೊರಕಿಸೆಮಗೆ ರಾಮಾ ” : ವಿದ್ಯಾಗೌರಿ ಕುಳಮರ್ವ

  ” ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದ ಕಾರಣ ಮಠವೆಂದರೆ ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿಬಿಟ್ಟಿದೆ. ಪ್ರತಿದಿನವೂ ಗುರುಸ್ಮರಣೆಯೊಂದಿಗೇ ದಿನವನ್ನು ಆರಂಭಿಸುವವರು ನಾವು . ಇದೇ ಅಭ್ಯಾಸ ನಮ್ಮ ಮಕ್ಕಳಿಗೂ ದೊರಕಿದೆ ” ಎಂದು ಸತತ ಶ್ರೀಮಠದ ಸೇವೆಯಲ್ಲಿ ನಿರತವಾಗುವ ಹಂಬಲ ವ್ಯಕ್ತಪಡಿಸಿದವರು ವಿದ್ಯಾಗೌರಿ ಕುಳಮರ್ವ. ಕುಳಮರ್ವ ಮನೆತನದ ಕೃಷ್ಣ ಭಟ್ ಹಾಗೂ ದೇವಕಿಯವರ ಪುತ್ರಿಯಾದ ವಿದ್ಯಾಗೌರಿ ತಾಳ್ತಜೆ ಮಹಾಲಿಂಗ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ನಿವಾಸಿಗಳಾಗಿರುವ ವಿದ್ಯಾಗೌರಿ ಅವರು ಮದುವೆಯ ನಂತರವೂ ಶ್ರೀಮಠದ ಸೇವೆಯಲ್ಲಿ […]

Continue Reading

” ಬದುಕಿನ ನೋವುಗಳಿಗೆ ಮುಕ್ತಿ ದೊರಕಿದ್ದು ಶ್ರೀಮಠದ ಸೇವೆಯಲ್ಲಿ” : ಪ್ರೇಮಲತಾ ಉಪ್ಪಿನಂಗಡಿ

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಇರುವ ಕಾರಣ ಶ್ರೀಗುರುಗಳ ಕಾರುಣ್ಯದ ಬಗ್ಗೆ ತಿಳಿದಿತ್ತು. ಬದುಕಿನ ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಸಂಪೂರ್ಣ ಶರಣಾಗಿದ್ದು ಶ್ರೀಗುರು ಚರಣಕ್ಕೆ. ಶ್ರೀಗುರುಗಳ ಆಶೀರ್ವಚನಗಳೇ ಭರವಸೆಯ ಸಾಂತ್ವನದ ನುಡಿಗಳಾಗಿ ಕತ್ತಲ ಬಾಳಿಗೆ ಬೆಳಕಿನ ಹಾದಿಯನ್ನು ತೋರಿದಾಗ ಸಂಪೂರ್ಣವಾಗಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡೆ..ಇದರಲ್ಲಿ ದೊರಕುವ ನೆಮ್ಮದಿ, ಭರವಸೆ ಬೇರೆಲ್ಲೂ ಸಿಗಲಾರದು ಎಂಬುದು ನನ್ನ ಅನುಭವದ ನುಡಿ ” ಎನ್ನುತ್ತಾರೆ ಉಪ್ಪಿನಂಗಡಿ ಮಂಡಲದ , ಉಪ್ಪಿನಂಗಡಿ ವಲಯದ ನೆಕ್ಕಿಲಾಡಿ ಘಟಕದ ಪ್ರೇಮಲತಾ ಕಾಂಚನ ಅವರು. ಮಂಚಿಕಜೆಯ […]

Continue Reading

ಪ್ರತಿನಿತ್ಯವೂ ಗೋಸೇವೆ ಮಾಡುವ ಪುಣ್ಯಾವಕಾಶ ದೊರಕಿದೆ” : ಮಂಗಲಾ ನೀಲಕಂಠ ಉಪಾಧ್ಯಾಯ

ಹೊನ್ನಾವರ ಮಂಡಲದ ಭಟ್ಕಳ ವಲಯದ ದೇವಿಕಾನ ,ಕಾಯ್ಕಿಣಿಯ ಮಂಗಲಾ ನೀಲಕಂಠ ಉಪಾಧ್ಯಾಯ ಅವರು ನಿತ್ಯ ಗೋಸೇವೆಯಲ್ಲಿ ಸಂತೃಪ್ತಿ ಕಂಡವರು. ಸಾಗರದ ಸಮೀಪದ ವರದಹಳ್ಳಿಯ ಎಡಜಿಗಳೆ ಮಂಗಲಾ ಅವರ ತವರುಮನೆ. ಗೃಹಿಣಿಯಾಗಿರುವ ಇವರು ತಮ್ಮ ಗೃಹಕೃತ್ಯಗಳ ನಡುವೆ ಶ್ರೀಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಭಟ್ಕಳ ವಲಯದ ಮಾತೃ ಪ್ರಧಾನೆಯಾಗಿ ಆರು ವರ್ಷಗಳ ಕಾಲ ಸೇವೆ ಮಾಡಿದ ಇವರು ಪ್ರಸ್ತುತ ವಲಯ ಬಿಂದು ಸಿಂಧು ಸಂಚಾಲಕಿಯಾಗಿ ಶ್ರೀಗುರು ಸೇವೆ ಮಾಡುತ್ತಿದ್ದಾರೆ. ” ಚಿಕ್ಕಂದಿನಿಂದಲೇ ತವರುಮನೆಯಲ್ಲಿ ಗೋವುಗಳ ಒಡನಾಟದೊಂದಿಗೆ ಬೆಳೆದವಳು ನಾನು, […]

Continue Reading

” ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಆಶೀರ್ವಚನಗಳೇ ಪ್ರೇರಣೆ ” : ಮಾಲಿನಿ ಕೆ. ಭಟ್ಟ

ಹೊನ್ನಾವರ ಮಂಡಲದ ಭಟ್ಕಳ ವಲಯದ ಗುರಿ ತಲುಪಿದ ಮಾಸದ ಮಾತೆಯಾಗಿರುವ  ಮಾಲಿನಿ ಕೆ. ಭಟ್ ಬಲಸೆಯ ಕೃಷ್ಣಾನಂದ ಶಿವರಾಮ ಭಟ್ಟರ ಪತ್ನಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಭಟ್ಕಳದ ಕಾರಗದ್ದೆಯ ವಾಸುದೇವ ವೆಂಕಟರಮಣ ಭಟ್ಟ ಹಾಗೂ ಸರಸ್ವತಿ ವಾಸುದೇವ ಭಟ್ಟ ಇವರ ಪುತ್ರಿ. ಶ್ರೀ ರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀ ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸಿದ ಅನುಭವ ಇವರಿಗಿದೆ. ” ಬಾಲ್ಯದಿಂದಲೇ ಗೋವುಗಳ ಮೇಲೆ ತುಂಬಾ ಪ್ರೀತಿಯಿತ್ತು. ಶ್ರೀಗುರುಗಳ ವಿವಿಧ […]

Continue Reading

” ಮನೆಯ ಗೋವುಗಳಷ್ಟೇ ಕಾಳಜಿ ಶ್ರೀಮಠದ ಗೋವುಗಳ ಮೇಲೂ ಇದೆ ” : ವಿಜಯಲಕ್ಷ್ಮಿ ನರ್ಕಳ

ಶ್ರೀಮಠದ ಸೇವೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ತೊಡಗಿಸಿಕೊಂಡವರು ಇವರು. ಮಾಸದ ಮಾತೆಯಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದು ಲಕ್ಷ್ಮೀ ಪ್ರಕಾಶ್ ಇಳಂತಿಲ.ಮೊದಲು ಹೋದ ಮನೆಯಲ್ಲಿ ದೊರಕಿದ್ದು ಅತ್ಯಂತ ಕಹಿ ಅನುಭವ. ಕಣ್ಣೀರು ಸುರಿಸುತ್ತಲೇ ಹೊರಗೆ ನಡೆಯಬೇಕಾಗಿ ಬಂದ ಪರಿಸ್ಥಿತಿ. ‌ಆದರೂ ಶ್ರೀಗುರು ಚರಣಗಳಲ್ಲಿ ಇರಿಸಿದ ನಂಬಿಕೆ ಹುಸಿಯಾಗಲಿಲ್ಲ. ಗೋಪ್ರೇಮಿಯೊಬ್ಬರು ಒಂದು ಹಸುವಿನ ಒಂದು ವರ್ಷದ ನಿರ್ವಹಣಾ ವೆಚ್ಚವನ್ನು ಸಂಪೂರ್ಣವಾಗಿ ನೀಡಿದರು. ಇದರಿಂದಾಗಿ ಗುರಿ ತಲುಪಲು ಕಷ್ಟವಾಗಲಿಲ್ಲ.. ಇದು ಮಂಗಳೂರು ಮಂಡಲದ ಕಲ್ಲಡ್ಕ ವಲಯದ ಮಾತೃಪ್ರಧಾನೆಯಾಗಿರುವ ವಿಜಯಲಕ್ಷ್ಮಿ ನರ್ಕಳ ಅವರ […]

Continue Reading

” ಶ್ರೀ ಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ  ” : ಶಾರದಾ ಕೃಷ್ಣ , ಗಿರಿನಗರ

” ಶ್ರೀ ಮಠದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವುದು ಜೀವನದ ಅತ್ಯಂತ  ಹರ್ಷದ ಕ್ಷಣಗಳು. ಆ ನೆಮ್ಮದಿಯ, ಸಂತಸದ ಕ್ಷಣಗಳನ್ನು ವರ್ಣಿಸಲು ಸಾಧ್ಯವಿಲ್ಲ. ಮನಸ್ಸಿನಲ್ಲೇ ಬೇಡಿದ್ದನ್ನೂ ನಮಗೆ ಅನುಗ್ರಹಿಸುವ ಶ್ರೀಗುರುಗಳ ಅಭಯಹಸ್ತವೇ ಬದುಕಿನ ಶ್ರೀರಕ್ಷೆ ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಶಾರದಾ ಕೃಷ್ಣ ಅವರು. ದೈತೋಟದ ಶಂಕರನಾರಾಯಣ ಭಟ್, ವೆಂಕಟೇಶ್ವರಿ ಅಮ್ಮ ಅವರ ಪುತ್ರಿಯಾದ ಶಾರದಾ ಅವರಿಗೆ ಬಾಲ್ಯದಿಂದಲೇ ಹಸುಕರುಗಳೆಂದರೆ ಅತ್ಯಂತ ಪ್ರಿಯ. ತವರುಮನೆಯಲ್ಲಿ ಏಳೆಂಟು ಹಸುಗಳ ಒಡನಾಟದಲ್ಲಿ ಬೆಳೆದ ಶಾರದಾ […]

Continue Reading

ಗೋಮಾತೆಯ ಸೇವೆಗೆ ಸಕಾರಾತ್ಮಕ ಸ್ಪಂದನೆ ದೊರಕಿದೆ : ಉಮಾ ಪಿ. ಶೇಡಿಗುಮ್ಮೆ

೨೦೧೯ ರ ಚಾತುರ್ಮಾಸ್ಯದ ಸಂದರ್ಭದಲ್ಲಿ ವಲಯ ಭಿಕ್ಷಾಸೇವೆಯ ದಿವಸ ಶ್ರೀಗುರುಗಳ ಆಶೀರ್ವಚನದ ಪ್ರೇರಣೆ ಹಾಗೂ ವಲಯ ಮಾತೃ ವಿಭಾಗ ಪ್ರಧಾನೆಯಾಗಿರುವ ಶಿವಕುಮಾರಿ ಕುಂಚಿನಡ್ಕ ಇವರ ಬೆಂಬಲದಿಂದಾಗಿ ಮಾಸದ ಮಾತೆಯಾಗಿ ಸೇವೆ ಮಾಡಲು ಮುಂದೆ ಬಂದವರು ಶ್ರೀಮತಿ ಉಮಾ ಪಿ . ಶೇಡಿಗುಮ್ಮೆ . ಮುಳ್ಳೇರಿಯ ಮಂಡಲ, ಕುಂಬಳೆ ವಲಯ ಕಣಿಪುರ ಘಟಕದವರಾದ ಇವರು ಚೆರುವತ್ತೂರಿನ ಮಾಧವ ರಾವ್ ,ಸರಸ್ವತಿ ದಂಪತಿಗಳ ಪುತ್ರಿ ಹಾಗೂ ಶೇಡಿಗುಮ್ಮೆ ಗಣೇಶ್ ಕುಮಾರ್ ಅವರ ಪತ್ನಿ. ಎಂ.ಎಸ್ಸಿ, ಬಿ.ಎಡ್ ಪಧವೀಧರರಾಗಿರುವ ಇವರು ಕುಂಬಳೆಯ […]

Continue Reading

ಶ್ರೀಮಠದ ಸೇವೆಯಲ್ಲಿ ಬದುಕು ಪಾವನವಾಗುತ್ತಿದೆ : ಸುಲೋಚನ‌ ಗಿರಿನಗರ

  ” ಶ್ರೀಮಠದ, ಗೋಮಾತೆಯ, ಶ್ರೀಗುರುಗಳ ಸೇವೆ ಮಾಡಲು ನಮಗೆ ದೊರಕಿರುವ ಈ ಅವಕಾಶ ನಿಜಕ್ಕೂ ಪೂರ್ವ ಜನ್ಮದ ಸುಕೃತದಿಂದ ಲಭಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಶ್ರೀಗುರುಗಳ ಆಶೀರ್ವಾದ ಪಡೆದು ಆರಂಭಿಸುವ ಯಾವುದೇ ಕಾರ್ಯವಾದರೂ ಅತಿ ಶೀಘ್ರದಲ್ಲಿ ಫಲ ದೊರಕುತ್ತದೆ ಎಂಬ ಅನುಭವ ನನ್ನದು ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ವಲಯದ ಸುಲೋಚನ ಗಿರಿನಗರ. ಸಿದ್ಧಾಪುರ ತಾಲೂಕಿನ ಇಟಗಿ ಹೊನ್ನೆಮಡಿಕೆಯ ಭಾಸ್ಕರ ಗಣೇಶ ಹೆಗಡೆ ಹಾಗೂ ಸರೋಜಾ ಭಾಸ್ಕರ ಹೆಗಡೆಯವರ ಪುತ್ರಿಯಾದ ಸುಲೋಚನ […]

Continue Reading

” ಸದಾ ಶ್ರೀಮಠದ ಸೇವೆಗೆ ತುಡಿಯುತ್ತಿದೆ ಮನಸ್ಸು ” : ವಿಜಯಾ ಸರ್ಪಂಗಳ

” ಶ್ರೀಗುರುಗಳ ಗೋಪ್ರೇಮ, ಗೋಮಾತೆಯ ರಕ್ಷಣೆಗಾಗಿ ಶ್ರೀ ಸಂಸ್ಥಾನದವರು ಕೈಗೊಂಡ ವಿವಿಧ ಯೋಜನೆಗಳು‌ ಹಾಗೂ ಶ್ರೀಮಠದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳಬೇಕೆಂಬ ಹಂಬಲ ‘ ಇವುಗಳ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇರಿಕೊಂಡೆ. ಈಗಾಗಲೇ ಒಂದು ವರ್ಷದ ಗುರಿ ತಲುಪಿರುವೆ. ಇನ್ನೊಂದು ವರ್ಷದ ಗುರಿ ತಲುಪುವ ಭರವಸೆಯಿದೆ ” ಎನ್ನುತ್ತಾರೆ ಮೂಲತಃ ಕಾಸರಗೋಡಿನ ಸರ್ಪಂಗಳದವರಾದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀ ಅನ್ನಪೂರ್ಣೇಶ್ವರಿ ವಲಯ ನಿವಾಸಿಗಳಾಗಿರುವ ಎಸ್. ರಾಮಚಂದ್ರ ಭಟ್ಟರ ಪತ್ನಿ ವಿಜಯಾ ಸರ್ಪಂಗಳ ಅವರು. ಹಾಡು,ಸಂಗೀತ, ಹೊಲಿಗೆ, ಕಸೂತಿಗಳಲ್ಲಿ […]

Continue Reading

ಶ್ರೀಗುರುಗಳ ಕಾರುಣ್ಯದಿಂದ ಬದುಕಿನಲ್ಲಿ ಪವಾಡವೇ ನಡೆದಿದೆ: ಮಹಾದೇವಿ ಎಸ್‌ . ಭಟ್

  “ಶ್ರೀಗುರುಗಳ ಅನುಗ್ರಹವೊಂದಿದ್ದರೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ.‌ಗುರುವೊಲಿದರೆ ಕೊರಡು ಕೊನರುವುದು. ಇದಕ್ಕೆ ನನ್ನ ಬದುಕಿನಲ್ಲಿ ನಡೆದ ಸತ್ಯ ಘಟನೆಗಳೇ ಸಾಕ್ಷಿ” ಎಂದು ಭಾವಪೂರ್ಣವಾಗಿ ನುಡಿಯುತ್ತಾರೆ ಕುಮಟಾ ಮಂಡಲದ, ಗುಡೇ ಅಂಗಡಿ ವಲಯದ ದೇವನಿ ಮನೆತನದ ಸೀತಾರಾಮ ಅನಂತ ಭಟ್ಟರ ಪತ್ನಿ ಮಹಾದೇವಿ ಎಸ್. ಭಟ್ . ಸಾಲಕೋಡು ಗ್ರಾಮದ ಕೆರೆಕೋಣ ವೆಂಕಟೇಶ ಹೆಗಡೆ ಮತ್ತು ಸುಬ್ಬಿ ಅವರ ಪುತ್ರಿಯಾದ ಮಹಾದೇವಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಹಿಂದಿನ ಗುರುಗಳ ಕಾಲದಿಂದಲೂ ಇವರ ತವರುಮನೆಯವರು ಶ್ರೀಮಠದ […]

Continue Reading

“ಶ್ರೀಮಠದ ಸೇವೆಗೆ ಶ್ರೀಗುರುಗಳೇ ಪ್ರೇರಣೆ” : ಜೆಡ್ಡು ಸರಸ್ವತಿ ಭಟ್

  ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ‘ಜೆಡ್ಡು ಅಕ್ಕ’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುವ ಸರಸ್ವತಿ ಭಟ್ ಅವರು ಮೂಲತಃ ವಿಟ್ಲ ಸಮೀಪದ ಜೆಡ್ಡು ಮನೆತನದವರು. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಜಯಪ್ರಕಾಶ ವಲಯ ನಿವಾಸಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ತಮ್ಮ ಎಲ್ಲಾ ಕೆಲಸಗಳಿಗೂ ಪ್ರೇರಣೆ ಶ್ರೀಗುರುಗಳು ಎಂಬುದು ದೃಢವಾದ ನಂಬಿಕೆ.‌ ಪೆರುವಾಜೆಯ ಗೋವಿಂದ ಭಟ್, ಗೌರೀ ದಂಪತಿಗಳ ಪುತ್ರಿಯಾದ ಇವರು ಜೆಡ್ಡು ರಾಮಚಂದ್ರ ಭಟ್ಟರ ಪತ್ನಿ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ […]

Continue Reading

“ಪ್ರತಿಯೊಂದು ಹಸುವಿನಲ್ಲೂ ಲಕ್ಷ್ಮಿಯನ್ನು ಕಾಣುತ್ತಿದ್ದೇನೆ” : ಗೀತಾ ಯಾಜಿ, ಭಟ್ಕಳ

ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದ ಗೀತಾ ಯಾಜಿ ಅವರಿಗೆ ಹಸುಗಳೆಂದರೆ ವಿಪರೀತ ಮಮತೆ. ತಮ್ಮ ಬಳಿಗೆ ಬಂದ ಹಸುಗಳಿಗೆ ಒಂದಿಷ್ಟಾದರು ಮೇವು ಕೊಡದೆ ಕಳಿಸುವವರಲ್ಲ ಅವರು. ಪ್ರತಿಯೊಂದು ಹಸು ಬಳಿಗೆ ಬಂದಾಗಲೂ ಶ್ರೀಸಂಸ್ಥಾನದವರೇ ಆ ಹಸುವನ್ನು ತನ್ನ ಬಳಿಗೆ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೋಡುವ ಗೀತಾ ಯಾಜಿ ಹೊನ್ನಾವರ ಮಂಡಲದ ಭಟ್ಕಳ ವಲಯದವರು. “ತವರುಮನೆಯಲ್ಲಿ ಹಿಂದೆ ಎರಡು ಹಟ್ಟಿಗಳ ತುಂಬಾ ಹಸುಗಳಿದ್ದವು. ಆ ಹಸುಗಳ ಜೊತೆಗಿನ ಒಡನಾಟದಿಂದಾಗಿಯೇ ಗೋಮಾತೆಯ ಬಗ್ಗೆ ಪ್ರೀತಿ ಮೂಡಲು ಸಾಧ್ಯವಾಯಿತು” ಎನ್ನುವ ಇವರು […]

Continue Reading

ನಿರಂತರವಾಗಿ ಗುರುಸೇವೆಯೇ ಜೀವನದ ಗುರಿ: ಇಂದಿರಾ ಬೈಲಕೇರಿ

  ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಲ್ಲಿಸಿ ನಿವೃತ್ತರಾಗಿರುವ ಇಂದಿರಾ ಬೈಲಕೇರಿ ಅವರು ಮೂಲತಃ ಗೋಕರ್ಣ ನಿವಾಸಿಗಳಾದರೂ ಪ್ರಸ್ತುತ ಶಿರಸಿಯ ಮಾರಿಕಾಂಬಾ ಕಾಲೋನಿಯಲ್ಲಿ ವಾಸಿಸುತ್ತಿರುವವರು. ಮೋಟಿನಸರ ವಿದ್ವಾನ್ ನರಸಿಂಹ ಶಾಸ್ತ್ರಿ ಮತ್ತು ಭವಾನಿ ದಂಪತಿಗಳ ಪುತ್ರಿಯಾದ ಇಂದಿರಾ ಅವರ ಪತಿ ರಾಮಚಂದ್ರ ಶಿವರಾಮ ಬೈಲಕೇರಿ . ಬಿ.ಎಸ್.ಎನ್.ಎಲ್.ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತರಾಗಿರುವ ಇವರು ಕಳೆದ ನಾಲ್ಕು ವರ್ಷಗಳಿಂದ ಅಂಬಾಗಿರಿ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತಿಯ ಜೊತೆಗೂಡಿ ಇಂದಿರಾ ಅವರು ತಮ್ಮ ನಿವೃತ್ತ ಜೀವನವನ್ನು […]

Continue Reading

“ಶ್ರೀಗುರುಗಳ ಸೇವೆಗಾಗಿ ದೊರಕಿದ ಪುನರ್ಜನ್ಮವಿದು”: ಕಲ್ಪನಾ ತಳವಾಟ

“೧೯೯೯ರಲ್ಲಿ ಶ್ರೀಮಠಕ್ಕೆ ಕುಟುಂಬ ಸಮೇತಳಾಗಿ ಹೋಗಿದ್ದಾಗ ಶ್ರೀ ಸಂಸ್ಥಾನದವರು ‘ಗುರುಸೇವೆ ಮಾಡು’ ಎಂದು ಆಶೀರ್ವಾದ ಮಾಡಿದ್ದರು. ಅಂದಿನಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ೨೦೦೩ ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ, ಮುಂದೆ ಆರು ವರ್ಷಗಳ ನಂತರ ಸಿದ್ಧಾಪುರ ಮಂಡಲದ ಮಾತೃಪ್ರಧಾನೆಯಾದೆ, ಮುಂದಿನ ಮೂರು ವರ್ಷಗಳ ಕಾಲ ಮಹಾಮಂಡಲದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದೇನೆ” ಎನ್ನುವ ಕಲ್ಪನಾ ತಳವಾಟ ಇವರು ಸಿದ್ಧಾಪುರ ಮಂಡಲದ ತಾಳಗುಪ್ಪ ವಲಯದ ಸತೀಶ್ ತಳವಾಟ ಅವರ ಪತ್ನಿ. ಪ್ರಸ್ತುತ ಮಾತೃತ್ವಮ್ ನ ಗೃಹ ಲಕ್ಷ್ಮಿ ಯಾಗಿ […]

Continue Reading

ಗುರುಕೃಪಾ ಕಟಾಕ್ಷದಿಂದಲೇ ದೊರಕಿದ ಶ್ರೀಗುರು ಸೇವಾಭಾಗ್ಯ: ಸುವರ್ಣ ಮಾಲಿನಿ ,ಹೊಸಮನೆ

  ಮಂಗಳೂರು ಮಂಡಲ ಮಧ್ಯವಲಯದ ಮೇರಿಹಿಲ್ ಗುರು ನಗರದ ಗುರುನಿಲಯ ನಿವಾಸಿಗಳಾಗಿರುವ ಭಾಸ್ಕರ ಹೊಸಮನೆ ಅವರ ಪತ್ನಿಯಾಗಿರುವ ಸುವರ್ಣ ಮಾಲಿನಿ ಅವರು ಸುಳ್ಯ ಸಮೀಪದ ಬದಂತಡ್ಕದ ನರಸಿಂಹ ಭಟ್ ಹಾಗೂ ಸುಮತಿ ದಂಪತಿಗಳ ಪುತ್ರಿ. ಮಂಗಳೂರಿನ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಾಣಿಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುವ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸ್ವತಃ ತಾವೇ ಪೂರ್ಣ […]

Continue Reading

ಶ್ರೀಮಠದ ಸೇವೆ ಬದುಕಿನ ಪಲ್ಲವಿ: ಭಾರತೀ ಕೊಡಿಪ್ಪಾಡಿ

ಭಾರತಿ ಅವರ ಮಕ್ಕಳಿಬ್ಬರೂ ಉನ್ನತ ಪದವಿ ಗಳಿಸಿ ಉದ್ಯೋಗ ನಿರತರು. ಅಮ್ಮನೆಂದರೆ ಅವರಿಗೆ ವಿಪರೀತ ಪ್ರೀತಿ. ತಾಯಿಯ ಇಚ್ಛೆ ಮೀರಿದವರಲ್ಲ. ಇಂಥಹ ತುಂಬು ಪ್ರೀತಿಯ ವಾತಾವರಣವಿರುವ ಕುಟುಂಬವಿದ್ದರೂ ಅವರು ಬಯಸಿದ್ದು ಸರಳ ಜೀವನವನ್ನು, ಗೋಸೇವೆಯನ್ನು,ಅದರಲ್ಲೂ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿರುವ ಗೋವುಗಳ ಸೇವೆಯನ್ನು. ಶ್ರೀಮಠಕ್ಕೆ ಬರುವ ಅತಿಥಿಗಳನ್ನು ಉಪಚರಿಸುತ್ತಾ ,ಗೋಶಾಲೆಯಲ್ಲಿರುವ ಹಸುಗಳ ಸೇವೆ ಮಾಡುತ್ತಾ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಪಡಾರು ಪಿ.ಕೆ.ನಾರಾಯಣ ಭಟ್ ಹಾಗೂ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಚೆಕ್ಕೆಮನೆ ಮೂಲದ ಸುಳುಗೋಡು ಚಂದ್ರಶೇಖರ […]

Continue Reading

“ಗುರುಸೇವೆಯಿಂದ ಒಳಿತಾಗಿದೆ”: ಲಕ್ಷ್ಮೀ ಎಸ್.ಭಟ್

“ಹಲವಾರು ವರ್ಷಗಳಿಂದ ಶ್ರೀಮಠಕ್ಕೆ ಹೋಗುತ್ತಿದ್ದೇವೆ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿವಿಧ ಯೋಜನೆಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸಿದೆ” ಎನ್ನುತ್ತಾರೆ ಉತ್ತರಕನ್ನಡ ಮೂಲದ ಹೊನ್ನಾವರ ತಾಲೂಕಿನ ಕಡತೋಕಾ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ಲಕ್ಷ್ಮೀ ಎಸ್. ಭಟ್. ಶ್ರೀಮಠದ ನಿರ್ದೇಶಾನುಸಾರವಾಗಿ ಪಠಿಸ ಬೇಕಾಗಿರುವ ಎಲ್ಲಾ ಸ್ತೋತ್ರಗಳನ್ನೂ ಕಂಠಪಾಠ ಮಾಡಿ ನಿತ್ಯವೂ ಪಠಿಸುವ ಲಕ್ಷ್ಮೀ ಭಟ್ ಅವರು ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣಗಳನ್ನೂ ಮಾಡುತ್ತಾರೆ. ಧಾರ್ಮಿಕ ವಿಚಾರಗಳಲ್ಲಿ ಅತ್ಯಂತ ಆಸಕ್ತಿ ಹೊಂದಿರುವ […]

Continue Reading

ಗೋ ಸೇವೆಯಲ್ಲಡಗಿದೆ ನೆಮ್ಮದಿಯ ಸೆಲೆ: ಸಿರಿ ಕೂಡೂರು

ಬೆಂಗಳೂರು ಮಹಾನಗರದಲ್ಲಿ ಹುಟ್ಟಿ,ಬೆಳೆದು  ಮಂಗಳೂರು ಹೋಬಳಿಯ ಉರಿಮಜಲು ಮೂಲದ ಕೂಡೂರು ಮನೆತನದ ಲಕ್ಷ್ಮೀ ನಾರಾಯಣ ಕೂಡೂರು(ಎಲ್.ಎನ್.ಕೂಡೂರು) ಅವರನ್ನು ವಿವಾಹವಾದ ಸಿರಿ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿದ್ದು ಮದುವೆಯ ನಂತರ. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಶ್ರೀಗುರುಗಳ  ನಿರ್ದೇಶನದಂತೆ ಮಹಿಳಾ ಪರಿಷತ್ ರೂಪೀಕರಣಗೊಂಡಾಗ ನಾನು ವಿಟ್ಲ ಸೀಮಾ ಪರಿಷತ್ ನ ಮಾತೃ ಪ್ರಧಾನೆಯಾಗಿದ್ದೆ. ಅಂದು ಸಂಘಟನೆ ಬಲಪಡಿಸಲು ಹಲವಾರು ಕಡೆಗೆ ಭೇಟಿ ನೀಡಿದೆ. ಶ್ರೀಮಠದ ಸೇವೆಯಲ್ಲಿ […]

Continue Reading

“ಶ್ರೀಮಠದ ಸೇವೆಯೇ ಹೃದಯದುಸಿರು” : ಸುಶೀಲಾ ಜಿ.ಕೆ.ಭಟ್ ಮತ್ತು ಗೀತಾ ಪ್ರಸನ್ನ

ಹೊಸಮನೆ ಮಹಾಲಿಂಗ ಭಟ್, ಪಾರ್ವತಿ ದಂಪತಿಗಳ ಪುತ್ರಿಯಾದ ಸುಶೀಲಾ ಜಿ.ಕೆ. ಭಟ್ ಮೂಲತಃ ಮುಳ್ಳೇರಿಯ ಮಂಡಲದ ವಳಕ್ಕುಂಜದ ಗೋಪಾಲಕೃಷ್ಣ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಆರ್. ಆರ್ . ಪುರ ನಿವಾಸಿಗಳಾಗಿರುವ ಇವರು ಹಾಗೂ ಇವರ ಪುತ್ರಿ, ಧರ್ಮತ್ತಡ್ಕ ಸಮೀಪದ ಪೂಕಳ ಕಂಪ ಸುಬ್ರಹ್ಮಣ್ಯ ಪ್ರಸನ್ನ ಇವರ ಪತ್ನಿಯಾದ ಗೀತಾ(ಪ್ರಸ್ತುತ ಬೆಂಗಳೂರು ನಿವಾಸಿಗಳು) ಇಬ್ಬರೂ ಗುರುಸೇವೆಯಲ್ಲಿ ಸದಾ ನಿರತರಾದವರು. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ನಂತರ ನಾವು ಶ್ರೀಮಠದ ನಿಕಟ […]

Continue Reading

ಅನವರತ ಶ್ರೀ ಗುರುಚರಣ ಸ್ಮರಣೆಯೊಂದೇ ಮನದಲ್ಲಿ: ಯಶೋದಾ ಕೋಡಿಮೂಲೆ

“ನಮ್ಮ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠವೇರಿದ ಸಂದರ್ಭದಲ್ಲಿ ಅವರ ಸಂದರ್ಶನವೊಂದನ್ನು ಪತ್ರಿಕೆಯಲ್ಲಿ ಓದಿದೆ. ಬದುಕಿನ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಂದು ನಾವಿದ್ದೆವು.‌ ಆಗ ಶ್ರೀ ಗುರುಚರಣಗಳನ್ನು ನಂಬಿದರೆ ಕಷ್ಟದಿಂದ ಮುಕ್ತಿ ಸಿಗಬಹುದು ಎಂದು ಮನಸ್ಸಿಗೆ ಅನ್ನಿಸಿತು. ಅಂದಿನಿಂದ ಸತತವಾಗಿ ಶ್ರೀಗುರುಗಳನ್ನು ಸ್ಮರಿಸುತ್ತಲೇ ಇದ್ದೆ. ಒಂದು ಬಾರಿ ಅವರ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಬೇಕೆಂದು ಕಾತರಿಸುತ್ತಲೇ ಇದ್ದೆ. ನಾನಿರುವ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಹೊಸನಗರಕ್ಕೆ ಹೋಗುವಾಗ […]

Continue Reading