“ಗುರುಸೇವೆಯಿಂದ ಒಳಿತಾಗಿದೆ”: ಲಕ್ಷ್ಮೀ ಎಸ್.ಭಟ್

“ಹಲವಾರು ವರ್ಷಗಳಿಂದ ಶ್ರೀಮಠಕ್ಕೆ ಹೋಗುತ್ತಿದ್ದೇವೆ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿವಿಧ ಯೋಜನೆಗಳಲ್ಲಿ ಕಾರ್ಯಕರ್ತೆಯಾಗಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಲಭಿಸಿದೆ” ಎನ್ನುತ್ತಾರೆ ಉತ್ತರಕನ್ನಡ ಮೂಲದ ಹೊನ್ನಾವರ ತಾಲೂಕಿನ ಕಡತೋಕಾ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ಲಕ್ಷ್ಮೀ ಎಸ್. ಭಟ್. ಶ್ರೀಮಠದ ನಿರ್ದೇಶಾನುಸಾರವಾಗಿ ಪಠಿಸ ಬೇಕಾಗಿರುವ ಎಲ್ಲಾ ಸ್ತೋತ್ರಗಳನ್ನೂ ಕಂಠಪಾಠ ಮಾಡಿ ನಿತ್ಯವೂ ಪಠಿಸುವ ಲಕ್ಷ್ಮೀ ಭಟ್ ಅವರು ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣಗಳನ್ನೂ ಮಾಡುತ್ತಾರೆ. ಧಾರ್ಮಿಕ ವಿಚಾರಗಳಲ್ಲಿ ಅತ್ಯಂತ ಆಸಕ್ತಿ ಹೊಂದಿರುವ […]

Continue Reading

ಗಡಿನಾಡಿನ ಈ ಕುವರಿಕಥಾಪ್ರಸಂಗದ ಪ್ರತಿಭೆ!

ಹರಿಕಥೆ. ಹಿಂದೂಧಾರ್ಮಿಕ ಪ್ರವಚನದಒಂದುರೂಪಎಂದು ಪರಿಗಣಿತವಾದ, ಕಥೆ, ಕಾವ್ಯ, ಸಂಗೀತ, ನಾಟಕ, ನೃತ್ಯ ಮತ್ತುತತ್ವಶಾಸ್ತ್ರ ಸೇರಿರುವಒಂದು ಸಂಯುಕ್ತ ಕಲೆ. ಇಂತಹಒಂದುಅಪರೂಪದಕಲೆಯಲ್ಲಿತಮ್ಮದೇಆದ ವಿಶಿಷ್ಟ ಛಾಪು ಮೂಡಿಸಿ, ಗಮನ ಸೆಳೆದವರು ಶೃದ್ಧಾ ಭಟ್ ನಾಯರ್ಪಳ್ಳ. ಮೂಲತಃಕಾಸರಗೋಡಿನ ನಾಯರ್ಪಳ್ಳದ ವೈದಿಕ, ಕೃಷಿಕ ಗೋಪಾಲಕೃಷ್ಣ ಭಟ್ ಮತ್ತು ಮಾಲತಿ ಭಟ್ ದಂಪತಿಗಳ ಪುತ್ರಿ ಶೃದ್ಧಾ ಈ ಅಪರೂಪದ ಸಾಧಕಿ. ೮ನೆ ವಯಸ್ಸಿಗೇ ಹರಿಕಥೆಗೆ ಶರಣು: ಪ್ರಸ್ತುತಕಾಸರಗೋಡಿನ ಸರ್ಕಾರಿಕಾಲೇಜಿನಲ್ಲಿಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ ಶೃದ್ಧಾ, ಮೂರನೇತರಗತಿಯಲ್ಲಿರುವಾಗಲೇ ಶಾಲೆಯ ವಾರ್ಷಿಕೋತ್ಸವದಲ್ಲಿಕಥಾಪ್ರಸಂಗ ಹಾಡುವ ಮೂಲಕ ಹರಿಕಥೆ ಹಾಡಲು ಪ್ರಾರಂಭಿಸಿದಳು. […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೨

ಅರಿವಿನ ಹರಿವಿನ ಕೊಂಡಿಗಳಾದ ಪಾತ್ರಗಳ ಪರಿಚಯ ಮಾಡಿಕೊಳ್ಳುತ್ತಾ ಶ್ರೀ ಗೌಡಪಾದರ ಜೀವನ ಘಟನಾವಳಿಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಈ ಪಾತ್ರದ ಆಳಕ್ಕಿಳಿದು ಅವಲೋಕಿಸಿ ಅರ್ಥೈಸಿಕೊಂಡರೆ ನಾವು ಪುನಃಪುನಃ ಎತ್ತಿ ಆಡಿದ, “ಎಲ್ಲಾ ಗುರುಗಳೂ ನಾರಾಯಣ ಸ್ವರೂಪವಷ್ಟೆ” ಎಂಬ ಮಾತುಗಳು ಎಲ್ಲರಿಗೂ ಸ್ವಯಂವೇದ್ಯವಾಗುತ್ತದಲ್ಲವೇ?.. ಹೌದು, ಅದ್ಹೇಗೆಂದು ಬಿಡಿಸಿ ಹೇಳುವುದಾದರೆ ನಾರಾಯಣನ ಪ್ರತಿರೂಪ ಆದಿಶೇಷನೇ ( ಪತಂಜಲಿಗಳು) ಗೌಡದೇಶದ ವ್ಯಕ್ತಿಯೊಬ್ಬನಿಗೆ ಅರಿವಿನ ಬೋಧನೆ ಮಾಡಿದ್ದು, ಆ ಅರಿವು ಅವರಲ್ಲಿ ಪೂರ್ಣವಾಗಿ ಸಾಕ್ಷಾತ್ಕಾರಗೊಂಡು, ವಿವಿಧ ಸನ್ನಿವೇಶಗಳಿಂದ ಹದಪಾಕವಾಗಿ ಪಕ್ವಗೊಂಡ ಶುದ್ಧಪ್ರಕೃತಿ ನಿರ್ಮಾಣವಾದಾಗ […]

Continue Reading

ಗೋ ಸೇವೆಯಲ್ಲಡಗಿದೆ ನೆಮ್ಮದಿಯ ಸೆಲೆ: ಸಿರಿ ಕೂಡೂರು

ಬೆಂಗಳೂರು ಮಹಾನಗರದಲ್ಲಿ ಹುಟ್ಟಿ,ಬೆಳೆದು  ಮಂಗಳೂರು ಹೋಬಳಿಯ ಉರಿಮಜಲು ಮೂಲದ ಕೂಡೂರು ಮನೆತನದ ಲಕ್ಷ್ಮೀ ನಾರಾಯಣ ಕೂಡೂರು(ಎಲ್.ಎನ್.ಕೂಡೂರು) ಅವರನ್ನು ವಿವಾಹವಾದ ಸಿರಿ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿದ್ದು ಮದುವೆಯ ನಂತರ. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿದ ನಂತರ ಶ್ರೀಮಠದ ಸಂಪರ್ಕ ಮತ್ತಷ್ಟು ನಿಕಟವಾಯಿತು. ಶ್ರೀಗುರುಗಳ  ನಿರ್ದೇಶನದಂತೆ ಮಹಿಳಾ ಪರಿಷತ್ ರೂಪೀಕರಣಗೊಂಡಾಗ ನಾನು ವಿಟ್ಲ ಸೀಮಾ ಪರಿಷತ್ ನ ಮಾತೃ ಪ್ರಧಾನೆಯಾಗಿದ್ದೆ. ಅಂದು ಸಂಘಟನೆ ಬಲಪಡಿಸಲು ಹಲವಾರು ಕಡೆಗೆ ಭೇಟಿ ನೀಡಿದೆ. ಶ್ರೀಮಠದ ಸೇವೆಯಲ್ಲಿ […]

Continue Reading

ಭರತನಾಟ್ಯದಅನರ್ಘ್ಯರತ್ನ ಸಿಂಧೂರಲಕ್ಷ್ಮೀ…

’ಭರತನಾಟ್ಯ’- ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲೊಂದು. ನವರಸಗಳನ್ನೊಳಗೊಂಡ ಭರತನಾಟ್ಯರಂಗದಲ್ಲಿಗೆಜ್ಜೆಕಟ್ಟಿಕುಣಿದು ಅಭಿಮಾನಿಗಳ ಹೃದಯಗೆದ್ದಅಪರೂಪದ ಪ್ರತಿಭೆ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ. ಕಡಲಿನ ಒಡಲುದಕ್ಷಿಣಕನ್ನಡದಕನ್ನೆಪ್ಪಾಡಿಯ ಶಿವರಾಮ ಭಟ್ ಮತ್ತು ಸಂಧ್ಯಾದಂಪತಿಯ ಪುತ್ರಿ ಸಿಂಧೂರಲಕ್ಷ್ಮೀ ಕನ್ನೆಪ್ಪಾಡಿ. ಮಂಗಳೂರಿನ ತ್ರಿಶಾಕಾಲೇಜ್‌ಆಫ್‌ ಕಾಮರ್ಸ್ & ಮ್ಯಾನೆಜ್‌ಮೆಂಟ್‌ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಮುಗಿಸಿ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯತಯಾರಿ ನಡೆಸುತ್ತಿರುವ ಈಕೆ ಒಂಭತ್ತನೆಯ ವಯಸ್ಸಿಗೇ ಭರತನಾಟ್ಯರಂಗವನ್ನು ಪ್ರವೇಶಿಸಿದಳು. ಪುತ್ತೂರಿನ ಶ್ರೀಮೂಕಾಂಬಿಕಾ ನೃತ್ಯಾಲಯದ ವಿ.ಬಿ. ದೀಪಕ್‌ಕುಮಾರ್‌ಅವರ ಬಳಿಯಲ್ಲಿ ಅಧ್ಯಯನ ನಡೆಸಿರುವ ಸಿಂಧೂರಲಕ್ಷ್ಮೀ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿರಾಜ್ಯಕ್ಕೆ ಏಳನೇ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೧

“नारायणं पद्मभवं वसिष्टं शक्तिञ्च तत् पुत्र पराशरं च। व्यासं शुकं गौडपदं महान्तं गोविन्द योगीन्द्रमथास्य शिष्यम्।। श्री शङ्कराचार्य मथास्य पद्मपादञ्च हस्तामलकञ्च शिष्यम्। तं तोटकं वार्तिककारमन्यानस्मद्गुरून्‌  सन्तत मानतोस्मि ।।” ಎಂದು ಗುರುಪರಂಪರೆಯನ್ನು ವಂದಿಸುತ್ತಾ… ಗುರುಪರಂಪರೆಯ ಸರಣಿಯಲ್ಲಿ ಶುಕರ ನಂತರ ಮುಂದಿನ ಪಾತ್ರವಾಗಿ ಪರಿಗಣನೆಯಾಗುವುದು ಶ್ರೀ ಗೌಡಪಾದಾಚಾರ್ಯರದ್ದು. ಪ್ರತಿ ಗುರುವು ಶ್ರೀಮನ್ನಾರಾಯಣನ ಪ್ರತಿರೂಪವೇ.. ಪ್ರಕೃತಿಧರ್ಮಕ್ಕನುಸಾರವಾಗಿ ಗುರುಸ್ವರೂಪದ ಭಿನ್ನತೆ ಅಂದರೆ ಪಾತ್ರಬದಲಿಕೆಯ ಕಾರಣ, ಅದೇ ಏಕಮೇವಾದ್ವಿತೀಯವಾದ ಅರಿವನ್ನು ಆ ಗುರುರೂಪಕ್ಕೂ ಸ್ವಾನುಭೂತಿಗೊಳಿಸಲು […]

Continue Reading

“ಶ್ರೀಮಠದ ಸೇವೆಯೇ ಹೃದಯದುಸಿರು” : ಸುಶೀಲಾ ಜಿ.ಕೆ.ಭಟ್ ಮತ್ತು ಗೀತಾ ಪ್ರಸನ್ನ

ಹೊಸಮನೆ ಮಹಾಲಿಂಗ ಭಟ್, ಪಾರ್ವತಿ ದಂಪತಿಗಳ ಪುತ್ರಿಯಾದ ಸುಶೀಲಾ ಜಿ.ಕೆ. ಭಟ್ ಮೂಲತಃ ಮುಳ್ಳೇರಿಯ ಮಂಡಲದ ವಳಕ್ಕುಂಜದ ಗೋಪಾಲಕೃಷ್ಣ ಭಟ್ ಅವರ ಪತ್ನಿ. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಆರ್. ಆರ್ . ಪುರ ನಿವಾಸಿಗಳಾಗಿರುವ ಇವರು ಹಾಗೂ ಇವರ ಪುತ್ರಿ, ಧರ್ಮತ್ತಡ್ಕ ಸಮೀಪದ ಪೂಕಳ ಕಂಪ ಸುಬ್ರಹ್ಮಣ್ಯ ಪ್ರಸನ್ನ ಇವರ ಪತ್ನಿಯಾದ ಗೀತಾ(ಪ್ರಸ್ತುತ ಬೆಂಗಳೂರು ನಿವಾಸಿಗಳು) ಇಬ್ಬರೂ ಗುರುಸೇವೆಯಲ್ಲಿ ಸದಾ ನಿರತರಾದವರು. “ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ನಂತರ ನಾವು ಶ್ರೀಮಠದ ನಿಕಟ […]

Continue Reading

ವಿಜ್ಞಾನ ಲೋಕದಅತ್ಯುತ್ತಮ ಬರಹಗಾರ ಪ್ರಗುಣ್

ಒಬ್ಬ ಹದಿನೈದು ವರ್ಷದ ಪೋರ ವಿಜ್ಞಾನ ವಿಷಯಗಳ ಕುರಿತಾದ ಲೇಖನಗಳನ್ನು ಬರೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆಂದರೆಅದು ಸುಲಭದ ಮಾತಲ್ಲ. ಈಗಾಗಲೇ ಈ ಯುವ ಪ್ರತಿಭೆಯ ಲೇಖನಗಳು ಇಂದುರಾಷ್ಟ್ರ ಮಟ್ಟದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನ ಲೋಕದ ಬರವಣಿಗೆಯಲ್ಲಿಛಾಪು ಮೂಡಿಸಿದ್ದಾನೆ. ಹೆಸರು ಪ್ರಗುಣ್ ಪುದಕೋಳಿ. ಬೆಂಗಳೂರಿನ ನಿವಾಸಿ ಉದಯಶಂಕರ ಪುದಕೋಳಿ ಮತ್ತು ವಿದ್ಯಾದಂಪತಿಯ ಪುತ್ರನಾದಈತ ಬೆಂಗಳೂರಿನ ಶಿಶುಗೃಹ ಮಾಂಟೆಸ್ಟರಿ ಮತ್ತು ಹೈಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿ. ಪ್ರಗುಣ್‌ನ ಸಾಧನೆಯ ಪುಟ್ಟ ಪರಿಚಯ ನಿಮಗಾಗಿ… […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೦

ನಮ್ಮ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿ ಗುರುರೂಪವೂ ಆಯಾ ಕಾಲಕ್ಕೆ ತಕ್ಕಂತೆ ಸಮಾಜಕ್ಕೆ ಅರಿವಿನ ಮಹತಿಯನ್ನು ಬೇರೆಬೇರೆ ಮಾರ್ಗದಲ್ಲಿ ಭಿನ್ನಹಿಕೆ ಮಾಡುತ್ತಲೇ ಸಮಾಜವನ್ನು ಸಾಗಿಸುತ್ತಿದೆ. ಈ ಕಾರಣಕ್ಕೆ ಎಂಬಂತೆಯೇ ದಿವ್ಯಪುರುಷರಾದ ವೇದವ್ಯಾಸರು ತಮ್ಮಾತ್ಮವಿಸ್ತಾರವೇ ಆದ ದಿವ್ಯತೆಯ ಶಿಖರವೆನಿಸಿದ ಶುಕಮುನಿಯನ್ನು ಹೆಚ್ಚಿನ ವಿದ್ಯಾಧ್ಯಯನಕ್ಕೆಂದು ರಾಜರ್ಷಿ ಜನಕನಲ್ಲಿಗೆ ಹೋಗುವಂತೆ ಆಗ್ರಹಿಸುತ್ತಾರೆ. ಅದು ಕಾಲ್ನಡಿಗೆಯಲ್ಲಿಯೇ ಸಾಗುವಂತೆ…ಅಂತರಿಕ್ಷಚರ್ಯೆ ಮಾಡುವ ಸಾಮರ್ಥ್ಯ ಸಾಧ್ಯವಿದ್ದರೂ ಸಹ ಕಾಲ್ನಡಿಗೆಯಲ್ಲಿಯೇ ಹೋಗಬೇಕೆಂಬ ಅಣತಿ. ಅಂತೆಯೇ ಶುಕರು ಮೇರುಪರ್ವತದಿಂದ ಮೂರುವರ್ಷಗಳನ್ನು ದಾಟಿ ( ಸುಮೇರು ವರ್ಷ, ಹೈಮವತ ವರ್ಷ, ಹರಿವರ್ಷ ) […]

Continue Reading

ಅನವರತ ಶ್ರೀ ಗುರುಚರಣ ಸ್ಮರಣೆಯೊಂದೇ ಮನದಲ್ಲಿ: ಯಶೋದಾ ಕೋಡಿಮೂಲೆ

“ನಮ್ಮ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೀಠವೇರಿದ ಸಂದರ್ಭದಲ್ಲಿ ಅವರ ಸಂದರ್ಶನವೊಂದನ್ನು ಪತ್ರಿಕೆಯಲ್ಲಿ ಓದಿದೆ. ಬದುಕಿನ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಂದು ನಾವಿದ್ದೆವು.‌ ಆಗ ಶ್ರೀ ಗುರುಚರಣಗಳನ್ನು ನಂಬಿದರೆ ಕಷ್ಟದಿಂದ ಮುಕ್ತಿ ಸಿಗಬಹುದು ಎಂದು ಮನಸ್ಸಿಗೆ ಅನ್ನಿಸಿತು. ಅಂದಿನಿಂದ ಸತತವಾಗಿ ಶ್ರೀಗುರುಗಳನ್ನು ಸ್ಮರಿಸುತ್ತಲೇ ಇದ್ದೆ. ಒಂದು ಬಾರಿ ಅವರ ದರ್ಶನ ಪಡೆದು ಮಂತ್ರಾಕ್ಷತೆ ಸ್ವೀಕರಿಸಬೇಕೆಂದು ಕಾತರಿಸುತ್ತಲೇ ಇದ್ದೆ. ನಾನಿರುವ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೂ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮಕ್ಕಳು ಹೊಸನಗರಕ್ಕೆ ಹೋಗುವಾಗ […]

Continue Reading

ವಿಜ್ಞಾನ ಲೋಕದ ಕಣ್ಮಣಿ ಸ್ವಸ್ತಿಕ್ ಪದ್ಮ

ಈತನ ವಯಸ್ಸು ೧೯. ಆದರೆ ಈತನ ಸಾಧನೆ ಮಾತ್ರ ನೂರೆಂಟು. ಹೆಸರು ಸ್ವಸ್ತಿಕ ಪದ್ಮ. ದಕ್ಷಿಣ ಕನ್ನಡದ ಬಂಟ್ವಾಳದ ಮುರ್ಗಜೆಯ ಶ್ರೀರಾಮ ಭಟ್ ಎಂ. ಮತ್ತು ಮಲ್ಲಿಕಾ ದಂಪತಿಯ ಪುತ್ರನಾದ ಈ ಪೋರ ಇಂದು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಬಾಲ್ಯದ ದಿನಗಳಿಂದಲೂ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಂಶೋಧನೆಗಳನ್ನು ಆರಂಭಿಸಿದ ಸ್ವಸ್ತಿಕ್ ಪದ್ಮ ಸ್ಥಳೀಯ ಮಟ್ಟದಿಂದ ಆರಂಭಿಸಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆಯ ಶಿಖರ ಏರುತ್ತಿದ್ದಾನೆ. ಇದು ಸ್ವಸ್ತಿಕ್‌ನ ವಿಜ್ಞಾನ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೯

ವೇದವ್ಯಾಸರಿಂದ ಅರಿವು ಅವಿಚ್ಛಿನ್ನವಾಗಿ ಶುಕರಿಗೆ ಹೇಗೆ ಹರಿದು ಗುರುಪರಂಪರೆಯನ್ನು ಉದ್ಧರಿಸಿತು ಎಂದು ಚರ್ಚಿಸುವಾಗ ಶುಕರ ಪಾತ್ರಪರಿಚಯ ಮಾಡಿಕೊಳ್ಳುತ್ತಾ ಜಾತಮಾತ್ರವೇ ಶುಕರಿಗೆ ಉಪನಯನವಾಯಿತು ಎನ್ನುವಲ್ಲಿಗೆ ಬಂದು ನಿಂತಿದ್ದೆವು. ಹೌದು ಅರಣೀಗರ್ಭಸಂಭೂತನಾದ ಶುಕನಿಗೆ ಸಾಕ್ಷಾತ್ ಪರಮೇಶ್ವರ ಪಾರ್ವತಿಯೇ ಬಂದು ಮಾತಾಪಿತೃ ಸ್ಥಾನದಲ್ಲಿ ನಿಂತು ಬ್ರಹ್ಮೋಪದೇಶಗೈದರು. ಸವಿತೃ ದೇವತೆಗಳಿಂದ ಸಾವಿತ್ರಿಯೇ ಭೂಷಣಳಾಗಿ ಬಂದಳು. ದೇವಾಚಾರ್ಯ ಬೃಹಸ್ಪತಿ ಬ್ರಹ್ಮಸೂತ್ರವನ್ನಿತ್ತರು. ಕಾಶ್ಯಪರು ಮೇಖಲ (ಮುಮುಂಜಿ)ಯನ್ನು ಪ್ರದಾನ ಮಾಡಿದರು. ದ್ಯೌಃ (ದಿವಿಗಳು) ಕೌಪೀನ ಆಚ್ಛಾದನ ಮಾಡಿದರು. ಶ್ವೇತಾಂಬರದರೆ ವಿದ್ಯಾದಾಯಿ ಸರಸ್ವತಿ ತನ್ನ ಅಕ್ಷಮಾಲೆಯನ್ನೇ ಕೊಟ್ಟಳು. ಈ […]

Continue Reading

“ಕಷ್ಟ ಪರಂಪರೆಯಿಂದ ಮುಕ್ತಿ ದೊರಕಿದ್ದು ಶ್ರೀ ಗುರು ಕಾರುಣ್ಯದಿಂದ ” : ಕೃಷ್ಣಕುಮಾರಿ ಬದನಾಜೆ

“ಶ್ರೀ ಗುರುಚರಣಗಳನ್ನು ನಂಬಿದವರಿಗೆ ಬದುಕಿನಲ್ಲಿ ಸೋಲಿಲ್ಲ.ಎಂಥಹ ಕಷ್ಟದ ಹೊಡೆತವನ್ನು ನಿವಾರಿಸುವ ಶಕ್ತಿ ಗುರು ಕೃಪೆಗಿದೆ.ಇದು ನಮ್ಮ ಬದುಕಿನಲ್ಲಿ ಅನುಭವಿಸಿ ಅರಿತುಕೊಂಡ ಸತ್ಯ. ಆದುದರಿಂದಲೇ ಬದುಕಿನಲ್ಲಿ ಮೊದಲ ಆದ್ಯತೆ ಗುರು ಸೇವೆ,ಗೋಸೇವೆಗೆ” ಎನ್ನುತ್ತಾರೆ ಮಿಂಚಿನಡ್ಕ ಮೂಲದ ಪ್ರಸ್ತುತ ವಿಟ್ಲ ಸಮೀಪ ಬದನಾಜೆ ನಿವಾಸಿಗಳಾಗಿರುವ ಕೃಷ್ಣಕುಮಾರಿ ಬದನಾಜೆ. ಶ್ರೀಮಠದ ಸಂಪರ್ಕ ಅವರಿಗೆ ಎಳವೆಯಿಂದಲೇ ದೊರಕಿತ್ತು. ತಂದೆ ಶೇಂತಾರು ಗೋಪಾಲಕೃಷ್ಣ ಭಟ್ ಉರುವಾಲು ವಲಯದ ಗುರಿಕ್ಕಾರರಾಗಿ ಸೇವೆ ಸಲ್ಲಿಸಿದವರು. ಪತಿ ಬದನಾಜೆ ಪುರುಷೋತ್ತಮ ಭಟ್ ಮಂಗಳೂರು ಹೋಬಳಿಯ ಅಮೃತಸತ್ವ ಸಂಚಾಲಕರಾಗಿ, ವಿಟ್ಲ […]

Continue Reading

ಚಂದನ್‌ಗೆ ಒಲಿದ ಯೋಗ

ಇತ್ತೀಚೆಗೆ ಹಲವಾರು ವರ್ಷಗಳಿಂದ ಯೋಗ ವಿಶ್ವದ ಗಮನ ಸೆಳೆದಿದೆ. ಶಾಲಾ-ಕಾಲೇಜುಗಳಲ್ಲಿ ಪ್ರತಿವರ್ಷ ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದ ತನಕ ವಿವಿಧ ಹಂತಗಳಲ್ಲಿ ಯೋಗ ಸ್ಪರ್ಧೆಯೂ ನಡೆಯುತ್ತಿದೆ. ಹೀಗೆ ಸ್ಪರ್ಧೆಗಳಿಂದ ಆಕರ್ಷಿತನಾದ ಈ ಪ್ರತಿಭೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾನೆ. ಹೀಗೆ ಚಿಕ್ಕ ವಯಸ್ಸಿಗೇ ಯೋಗ ಒಲಿಸಿಕೊಂಡ ಸಾಧಕ ಚಂದನ್ ಕೆ.ಆರ್. ಈಗಾಗಲೇ ಜನರಿಂದ ‘ಯೋಗ ಚಂದನ್ ಎಂಬ ಅಭಿದಾನಕ್ಕೂ ಪಾತ್ರನಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನುಗೋಡಿನ ವಕೀಲ ರಾಘವೇಂದ್ರ ಕೆ.ಎಸ್. ಮತ್ತು ವಿಜಯಲಕ್ಷ್ಮೀ ಕೆ.ಆರ್. ದಂಪತಿಯ ಪುತ್ರ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ-೮

ವ್ಯಾಸಮಹರ್ಷಿಗಳ ರೂಪದ ಬೆಳಕು ಶುಕಮಹರ್ಷಿಗಳ ರೂಪದಿಂದ ಹೊರಹೊಮ್ಮಿ ಅವಿಚ್ಛಿನ್ನ ಗುರುಪರಂಪರೆಯನ್ನು ಮುಂದುವರೆಸಿತು. ಗುರುಪರಂಪರೆಗೆ ಮೆರಗು ನೀಡಿ ಲೋಕ ಬೆಳಗಿದ ಶುಕ ಮುನಿಯ ಪಾತ್ರ ಪರಿಚಯವನ್ನು ಮಾಡಿಕೊಳ್ಳೋಣ. ಶುಕರು ಜನಿಸಿದ್ದು ಅರಣಿಯಲ್ಲಿ. (ಅರಣಿಯೆಂದರೆ ಯಜ್ಞಾಗ್ನಿಯನ್ನು ಸಿದ್ಧಪಡಿಸುವ ಸಾಧನ). ವ್ಯಾಸರು ಅಗ್ನಿಯಂತಹ, ಭೂಮಿಯಂತಹ, ಜಲದಂತಹ, ವಾಯುವಿನಂತಹ, ಅಂತರಿಕ್ಷದಂತಹ ಧೈರ್ಯಹೊಂದಿರುವ ಪುತ್ರಾಪೇಕ್ಷೆಯ ಸುಸಂಕಲ್ಪವ  ಹೊತ್ತು ಮಹೇಶ್ವರನ ಕುರಿತು  ದಿವ್ಯಂಶತವರ್ಷಗಳ ದೀರ್ಘತಪಸ್ಸನ್ನಾಚರಿಸುತ್ತಾರೆ. ತತ್ಫಲವಾಗಿ ಸಾಕ್ಷಾತ್ ಪರಮೇಶ್ವರನೇ ಪ್ರತ್ಯಕ್ಷನಾಗಿ ಅಗ್ನಿಯಂತಹ, ವಾಯುವಿನಂತಹ, ಭೂಮಿಯಂತಹ, ಜಲದಂತಹ ಶುದ್ಧವಾದ ಮಹಾತ್ಮನಾದ ಸುತ ಜನಿಸುವನೆಂದು ವರ ದಯಪಾಲಿಸುತ್ತಾನೆ. ವರ […]

Continue Reading

ಗೋಸೇವೆ ಮತ್ತು ಶ್ರೀ ಮಠದ ಸೇವೆಯಿಂದ ದೊರಕುವ ಆತ್ಮತೃಪ್ತಿ ಇನ್ನೆಲ್ಲೂ ಸಿಗದು: ಡಾ. ಶಾರದಾ ಜಯಗೋವಿಂದ

ಮೂಲತಃ ಮುಂಗ್ಲಿಮನೆ ಫ್ರೊ. ಮರಿಯಪ್ಪ ಭಟ್ ಮತ್ತು ಸತ್ಯಭಾಮಾ ದಂಪತಿಗಳ ಪುತ್ರಿಯಾದ ಡಾ. ಶಾರದಾ ಜಯಗೋವಿಂದ ಅವರು ಎಂ.ಎ.ಪಿಎಚ್.ಡಿ ಪದವಿ ಗಳಿಸಿದವರು. ಚೆನ್ನೈ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ (Rank)ದೊಂದಿಗೆ ಇಂಗ್ಲೀಷ್ ಎಂ. ಎ.ಪದವಿ ಗಳಿಸಿದ ಅವರು ಆಂಗ್ಲಭಾಷಾ ಉಪನ್ಯಾಸಕಿಯಾಗಿ ದೆಹಲಿ,ನೈಜೀರಿಯಾಗಳಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರು. ಆಲಂಗಾರು ಮನೆತನದ ಜಯಗೋವಿಂದ ಅವರ ಪತ್ನಿಯಾದ ಶಾರದಾ ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಗಿರಿನಗರ ನಿವಾಸಿಗಳಾಗಿ ಶ್ರೀಮಠದ ಸೇವೆಗೆ ಸದಾ ಮುಂಚೂಣಿಯಲ್ಲಿದ್ದಾರೆ. ೧೯೯೧ ರ […]

Continue Reading

ಗುರುಕಿರಣ್ ಹೆಗಡೆಯ ಹಾಡಿನ ಲಹರಿ

ಪ್ರಪಂಚದಲ್ಲಿ ನಾನಾ ಕಲೆಗಳಿದ್ದರೂ ಸಂಗೀತದ ಆಕರ್ಷಣೆಯೇ ವಿಭಿನ್ನ. ಇಂತಹ ಸಂಗೀತದ ವಿವಿಧ ಪ್ರಕಾರಗಳನ್ನು ಒಲಿಸಿಕೊಂಡಿರುವ ಸರಸ್ವತೀ ಪುತ್ರ ಹೊನ್ನಾವರದ ಗುರುಕಿರಣ್ ಹೆಗಡೆ. ಮನೆಯಲ್ಲಿ ಈತನ ತಾಯಿ ಹಾಡುತ್ತಿದ್ದರು. ಹಾಗಾಗಿ ಚಿಕ್ಕಂದಿನಿಂದಲೇ ತಾಯಿಯ ಮಾರ್ಗದರ್ಶನದಲ್ಲಿ ಸಂಗೀತ ಶಾರದೆಗೆ ಶರಣೆಂದ ಈತ ಇಂದು ಝೀ ಕನ್ನಡ ಸರಿಗಮಪ ಸ್ಪರ್ಧೆಯಲ್ಲಿ ರನ್ನರ್‌ಅಪ್ ಸ್ಥಾನ ಪಡೆಯುವ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾನೆ. ಪ್ರಾರಂಭದಲ್ಲಿ ತಾಯಿಯ ಬಳಿ ಅಧ್ಯಯನ ನಡೆಸಿದ ಈತ ಬಳಿಕ ಕೆಲಕಾಲ ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಹೊನ್ನಾವರದ ವಿ.ರಾಜೇಶ್ವರಿ ಭಟ್ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ -೭

ಬ್ರಹ್ಮರ್ಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಮರಿಮಗ, ಶಕ್ತಿ ಮಹರ್ಷಿಯ ಮೊಮ್ಮಗ, ಪರಾಶರರ ಪುತ್ರ ಮತ್ತು ಶುಕಬ್ರಹ್ಮರ್ಷಿಯ ತಂದೆಯಾದ ಅಕಲ್ಮಷರೂ, ತಪೋನಿಧಿಯೂ ಆದ ವ್ಯಾಸಮಹರ್ಷಿಗಳಿಗೆ ನಮಿಸುತ್ತಾ ಮುಂದುವರೆಯೋಣ. ತಾಯಿ ದೇವಿ ಸತ್ಯವತಿಯ ಆಜ್ಞಾನುಸಾರ ಸಂತತಿಯ ಭಾಗ್ಯವನ್ನು ಕರುಣಿಸಿ ನಶಿಸುತ್ತಿದ್ದ ಆ ಕುರುಕುಲವನ್ನು ಉಳಿಸಿದ ಮಹಾಮಹಿಮರು. ಸಮಾಜಕ್ಕೆ ಅವರ ಅರಿವಿನ ಹರಿವು ಯಾವ ಯಾವ ರೂಪದಿಂದ ಹರಿಯಿತೆಂದು ತಿಳಿಯಲು ಅವರ ರಚನೆಗಳನ್ನು ಅವಲೋಕಿಸೋಣ.  ಮಹಾಕಾವ್ಯ ಮಹಾಭಾರತ, ವೇದರಾಶಿಯ ವಿಂಗಡಣೆಯಷ್ಟೇ ಅಲ್ಲದೆ ವೇದಾಂತನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರ, ವೇದಾರ್ಥವನ್ನು ವಿವರಿಸುವ ಹದಿನೆಂಟು ಪುರಾಣಗಳನ್ನು ರಚಿಸಿದರೆಂದು […]

Continue Reading

ಶ್ರೀ ಮಠದ ಸೇವೆ ಮನಸ್ಸಿಗೆ ಮುದ ನೀಡುವ ಕಾರ್ಯ: ಮನೋರಂಜಿನಿ ಆರ್ .ಭಟ್ , ಮುಂಬೈ

“ಶ್ರೀಮಠದ ಸೇವೆ ಮನಸ್ಸಿಗೆ ಅತ್ಯಂತ ಮುದ ನೀಡುತ್ತಿದೆ. ಮುಂಬೈ ಮಹಾನಗರದಲ್ಲಿ ಪ್ರತೀ ತಿಂಗಳು ನಡೆಯುವ ಹವ್ಯಕ ಸಭೆಗಳು ನಮ್ಮ ಸಂಘಟನೆಯನ್ನು ಬಲ ಪಡಿಸಲು ಅತ್ಯಂತ ಉಪಯುಕ್ತವಾಗಿದೆ. ಶ್ರೀಗುರುಗಳ ಎಲ್ಲಾ ಯೋಜನೆಗಳಲ್ಲೂ ನಾವೆಲ್ಲ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿದ್ದೇವೆ” ಈ ಮಾತುಗಳು ಸಿದ್ಧಮೂಲೆ ಮೂಲದ ಉದ್ಯೋಗ ನಿಮಿತ್ತ ಪ್ರಸ್ತುತ ಮುಂಬೈ ನಿವಾಸಿಗಳಾಗಿರುವ ರಮಣ ಭಟ್ ಸಿದ್ಧಮೂಲೆ ಇವರ ಪತ್ನಿ ಮನೋರಂಜಿನಿಯವರದ್ದು. ಮಂಗಳೂರು ಸಮೀಪದ ಪಣಂಬೂರು ರಾಮರಾವ್,ಮೀನಾಕ್ಷಿ ದಂಪತಿಗಳ ಪುತ್ರಿಯಾದ ಮನೋರಂಜಿನಿಯವರು ಮುಂಬೈ ನಗರದಲ್ಲೇ ಬೆಳೆದವರು. ಕೆನರಾ ಬ್ಯಾಂಕ್ ನಲ್ಲಿ ಉನ್ನತ ಉದ್ಯೋಗದಲ್ಲಿದ್ದ […]

Continue Reading

ಸಮರ್ಥ್ ರಾವ್ ಎಂಬ ಚೆಸ್ ರಂಗದ ಅದ್ಭುತ!

ಹುಟ್ಟುವ ಸಂದsದಲ್ಲೇ ಸೆಲೆಬ್ರಲ್ ಪಾಲ್ಸಿ ಎಂಬ ಅಂಗವೈಕಲ್ಯತೆಗೆ ತುತ್ತಾದ ಪರಿಣಾಮ ಸ್ವತಂತ್ರವಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಿಲ್ಲ. ದೇಹದ ಸಮತೋಲನ ಇಲ್ಲದ ಇವರಿಗೆ ೭೫% ಕ್ಕಿಂತಲೂ ಅಧಿಕ ಅಂಗವೈಕಲ್ಯತೆ ಆವರಿಸಿದೆ. ದೈನಂದಿನ ಚಟುವಟಿಕೆ ನಡೆಸಲು ಕೂಡ ಬೇರೆಯವರನ್ನು ಅವಲಂಬಿಸಿದ್ದಾರೆ. ಆದರೆ ಈ ಎಲ್ಲದರ ನಡುವೆಯೂ ತನ್ನ ಅವಿರತ ಪರಿಶ್ರಮದಿಂದ ಇಂದು ಚದುರಂಗ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಅಂದಹಾಗೆ ಇವರ ಹೆಸರು ಸಮರ್ಥ್ ಜೆ. ರಾವ್. ಮೂಲತಃ ಕುಂದಾಪುರದ ಬಸ್ರೂರಿನ ಸದ್ಯ ಹೊನ್ನಾವರದಲ್ಲಿ ನೆಲೆಸಿರುವ […]

Continue Reading