ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ~ ಸಂಚಿಕೆ – ೬

ಮಹಾತೇಜಸ್ವಿ ಬಾಲಕ, ಯಮುನಾ ನದಿಯ ದ್ವೀಪದಲ್ಲಿ ಜನಿಸಿ ಹುಟ್ಟಿದೊಡನೆಯೇ ತಾಯಿಗೆ ಸಾಷ್ಟಾಂಗ ಪ್ರಣಾಮ ಮಾಡಿ ತಾಯಿಯ ಅನುಜ್ಞೆಯನ್ನು ಪಡೆದು ಸ್ಮರಿಸಿದಾಗ ಬರುವೆನೆಂದು ಆ ತಾಯಿಗೆ ಹೇಳಿ ತಪಸ್ಸನ್ನಾಚರಿಸಲು ನಡೆದ ಬಾಲಕ. ಅವನೇ ಮುಂದೆ ಲೋಕಪ್ರಸಿದ್ಧನಾದ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನ. ಅವಿಚ್ಛಿನ್ನ ಗುರುಪರಂಪರೆಯ ಅರಿವಿನ ಹರಿವು ಪರಾಶರರ ನಂತರ ಹೀಗೆ ಬ್ರಹ್ಮರ್ಷಿ ಶ್ರೀಕೃಷ್ಣದ್ವೈಪಾಯನರ ರೂಪದಿಂದ ಮುಂದುವರೆಯಿತು. ಬ್ರಹ್ಮರ್ಷಿ ಪರಾಶರ ಮತ್ತು ಸತ್ಯವತಿಯ ಸಮಾಗಮದಿಂದ ನದಿಯ ಮಧ್ಯದ ದ್ವೀಪದಲ್ಲಿ ಹುಟ್ಟಿದ್ದರಿಂದ ಶ್ರೀಕೃಷ್ಣದ್ವೈಪಾಯನರಿಗೆ ಅನ್ವರ್ಥವಾಗಿ ದ್ವೈಪಾಯನನೆಂದು ಮತ್ತು ಕಪ್ಪು ಬಣ್ಣ ಹೊಂದಿದ್ದರಿಂದ ಕೃಷ್ಣ […]

Continue Reading

ಗೋಮಾತೆಯ ಸೇವೆಯಿಂದ ಸಾರ್ಥಕ ಭಾವ ಮೂಡಿದೆ: ಕಂಜಾಕ್ಷಿ ನಾಗಭೂಷಣ

ಸಾಗರ ಸಮೀಪದ ಹುಕ್ಲು ಮೂಲದವರಾದ ಪ್ರಸ್ತುತ ಉದ್ಯೋಗ ನಿಮಿತ್ತ ಬೆಂಗಳೂರಿನ ಜೆಪಿ ನಗರ ನಿವಾಸಿಯಾಗಿರುವ ಕಂಜಾಕ್ಷಿ ನಾಗಭೂಷಣ ಅವರು ಶ್ರೀಮಠದ ಸೇವೆ, ಗೋಸೇವೆಯಲ್ಲಿ ಸಾರ್ಥಕತೆ ಕಂಡವರು. “ಶ್ರೀಗುರುಗಳ ಮಾತುಗಳಿಂದ ಪ್ರೇರಣೆಗೊಂಡು ಮಾಸದ ಮಾತೆಯಾದೆ. ಇದರಲ್ಲಿ ವೈವಿಧ್ಯಮಯ ಅನುಭವಗಳನ್ನು ಗಳಿಸಿಕೊಂಡು ಮಾತೃತ್ವಮ್ ಗುರಿಯನ್ನು ತಲುಪಿದೆ. ನನ್ನ ಕೈಲಾದ ಮಟ್ಟಿಗೆ ಗೋಸೇವೆ, ಗುರುಸೇವೆ ಮಾಡಿದ ನೆಮ್ಮದಿ, ಸಂತೃಪ್ತಿ ಮನದಲ್ಲಿದೆ” ಎನ್ನುವ ಇವರು ಈ ಹಿಂದೆ ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದವರು. ಈ ಅನುಭವವೇ ಅವರಿಗೆ ಮಾತೃತ್ವಮ್ ಗುರಿ […]

Continue Reading

ಬಹುಮುಖ ಪ್ರತಿಭೆ ಸಾನ್ವಿ ರಾವ್

ಭರತನಾಟ್ಯ, ಸಂಗೀತ, ಚೆಸ್, ಟೇಬಲ್ ಟೆನ್ನಿಸ್, ಏಕಪಾತ್ರಾಭಿನಯ, ಭಾಷಣ, ಚಿತ್ರಕಲೆ, ಕೈಬರಹ, ದೇಶಭಕ್ತಿಗೀತೆ, ಜನಪದ ಗೀತೆ, ಛದ್ಮವೇಷ…. ಹೀಗೆ ಹತ್ತಾರು ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ ಹದಿನಾಲ್ಕರ ಹರೆಯದ ಪ್ರತಿಭೆ. ಇವಳೇ ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಜಗದೀಶ ರಾವ್ ಬಿ.ಎಸ್. ಹಾಗೂ ವಿನುತಾ ಭಟ್ ದಂಪತಿಯ ಪುತ್ರಿ ಸಾನ್ವಿ ರಾವ್. ಹೊನ್ನಾವರದ ಎಂಪಿಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ ೯ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದಾಳೆ. ಸಂಗೀತ ಸಾಧಕಿ: ವಿ.ಸೌಮ್ಯ ಭಟ್ ಅವರ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೫

ಬ್ರಹ್ಮರ್ಷಿ ಶಕ್ತಿ ಅದೃಶ್ಯಂತಿಯರ ಪುತ್ರ ಬ್ರಹ್ಮರ್ಷಿ ಪರಾಶರ. ವಂಶವೇ ನಶಿಸಿಹೋಗುವಾಗ ಕುಲವನ್ನು ಕಾಪಾಡಿ ವಂಶ ಬೆಳಗಿದ ಮಹಾಮುನಿ. ವಿಧಿಯಾಟದಂತೆ ತಮ್ಮ ನೂರು ಮಕ್ಕಳನ್ನೂ ಕಳೆದುಕೊಂಡು ಲೋಕನಿಯಮದಂತೆ ಮಹಾ ದುಃಖದಲ್ಲಿ ಮುಳುಗಿದ ವಸಿಷ್ಠರು ಆತ್ಮಹತ್ಯೆಗೆ ಮುಂದಾದಾಗ ಅವರಿಗೆ ತಿಳಿದ ಸಂಗತಿ ಸೊಸೆ ಅದೃಶ್ಯಂತಿ ಗರ್ಭವತಿ. ಆ ಗರ್ಭಸ್ಥ ಶಿಶು ವಸಿಷ್ಠರಿಗೆ ಬದುಕಿಗೆ ಭರವಸೆಯ ಬೆಳಕ ನೀಡಿ, ಅವರ ಸಾವನ್ನು ತಡೆದು ಜಯಿಸಿದ್ದಕ್ಕೆ ಅವರೇ ( ವಸಿಷ್ಠರೇ) ‘ಪರಾಶರ’ ಎಂಬ ನಾಮಕರಣವನ್ನು ಮಾಡಿದರು. ಮಗು ಹುಟ್ಟಿದ ಮೇಲೆ ವಸಿಷ್ಠರೇ ತಮ್ಮ […]

Continue Reading

ಶ್ರೀ ಸಂಸ್ಥಾನದವರ ಯೋಜನೆಗಳಲ್ಲಿ ಭಾಗಿಯಾಗುವುದೇ ಸೌಭಾಗ್ಯ : ಜ್ಯೋತಿ ಕೇಶವ ಭಟ್

ಅಳಿಕೆ ಗ್ರಾಮದ ಎರುಂಬು ಕೇಶವ ಭಟ್ ಇವರ ಪತ್ನಿಯಾಗಿರುವ ಜ್ಯೋತಿ ಕೆ.ಭಟ್ ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವವರು. ನೆಗಳಗುಳಿ ಮಹಾಬಲೇಶ್ವರ ಭಟ್ ಶಂಕರಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಜ್ಯೋತಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ವಿಪರೀತ ಪ್ರೀತಿ. “ತವರುಮನೆಯಲ್ಲಿದ್ದ ದೇಶೀ ತಳಿಯ ಹಸುವಿನ ಹಾಲು ಕುಡಿದೇ ಬೆಳೆದ ನನಗೆ ಈಗಲೂ ಗೋವುಗಳೆಂದರೆ ವಿಶೇಷ ವ್ಯಾಮೋಹ. ಆದರೆ ನಮ್ಮ ಉದ್ಯೋಗ ನಿಮಿತ್ತ ಪೇಟೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಬಂದ ಕಾರಣ ಶ್ರೀಗುರುಗಳ ಗೋಸೇವಾ ಯೋಜನೆಗಳಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಕಾರ […]

Continue Reading

ಕಲಾ ಸಾಧನೆಯ ಯುವ ಪ್ರತಿಭೆ ರವೀಂದ್ರ ಹೆಗಡೆ

ಕಲೆ ಎನ್ನುವುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲಾ ಲೋಕದಲ್ಲಿ ಸ್ವ ಪರಿಶ್ರಮದಿಂದ ಅಧ್ಯಯನ ನಡೆಸಿ ಛಾಪು ಮೂಡಿಸುತ್ತಿರುವ ಪ್ರತಿಭೆಯೇ ಸಿದ್ದಾಪುರದ ರಾಮಕೃಷ್ಣ ಹೆಗಡೆ ಮತ್ತು ರೇಖಾ ದಂಪತಿ ಪುತ್ರ ರವೀಂದ್ರ ಹೆಗಡೆ. ಮಣ್ಣಾಟದಿಂದ ಕುಂಚದವರೆಗೆ….: ‘ಬಾಲ್ಯದ ದಿನಗಳಲ್ಲಿ ದಿನವಿಡೀ ಮಣ್ಣಿನಲ್ಲೇ ಆಟ ಆಡುತ್ತಿದ್ದೆ. ಮಣ್ಣಿನಿಂದ ಬಟ್ಟೆಗಳನ್ನು ಕಲೆ ಮಾಡಿಕೊಳ್ಳುತ್ತಿದ್ದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನನ್ನ ತಾಯಿ ಬಣ್ಣದ ಬ್ರಶ್ ಕೊಟ್ಟು ಕೂರಿಸುತ್ತಿದ್ದರು. ಅಂದು ಬಟ್ಟೆ ಕಲೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೪

ಅವಿಚ್ಛಿನ್ನ ಗುರುಪರಂಪರೆಯ ಅರಿವಿನ  ಹರಿವಿನಲ್ಲಿ ಬರುವ ಮುಂದಿನ ಪಾತ್ರ ಬ್ರಹ್ಮರ್ಷಿ ಶಕ್ತಿ. ಹೋಲಿಕೆಯೇ ಇಲ್ಲದ ಎರಡು ವ್ಯಕ್ತಿತ್ವಗಳಾದ ವಸಿಷ್ಠ ಅರುಂಧತಿಯರ ಧರ್ಮದಾಂಪತ್ಯದ ಫಲ ಇವರು. ಹೆಸರೇ ಸೂಚಿಸುವಂತೆ ಬ್ರಹ್ಮರ್ಷಿ ಶಕ್ತಿಗಳ ಜ್ಞಾನ ಚಕ್ಷುವಿನ ಶಕ್ತಿ ಅಗಾಧ. ತಂದೆಯೊಡನೆ ಯಜ್ಞ, ಯಾಗ, ವಿದ್ಯಾದಾನ ಒಟ್ಟಿನಲ್ಲಿ ಬ್ರಹ್ಮಚರ್ಯೆ ಚಾಚೂ ತಪ್ಪದೇ ಸಾಗುತ್ತಿದ್ದರೂ ವಿಧಿನಿಯಾಮಕವಾದ ಭೂಲೋಕ ಇವರ ಬದುಕಿನಲ್ಲೂ ಚಿತ್ರ ವಿಚಿತ್ರ ಘಟನೆಗಳಿಗೆ ಇವರನ್ನು ಪಾತ್ರಧಾರಿಯನ್ನಾಗಿ ಮಾಡಿತು. ಅದೊಂದು ಸಂದರ್ಭ; ಇಕ್ಷ್ವಾಕು ವಂಶಸ್ಥನಾದ ಸತ್ಯವ್ರತನೆಂಬ ರಾಜ ಸಶರೀರ ಸ್ವರ್ಗಸ್ಥನಾಗಬೇಕೆಂಬ ಬಯಕೆಯ ಈಡೇರಿಕೆಗೆ […]

Continue Reading

“ಮಾಸದ ಮಾತೆಯಾಗಲು ಕಾರಣ, ಪ್ರೇರಣ ಹಾಗೂ ಧಾರಣಾಶಕ್ತಿ ಶ್ರೀಚರಣ” ಲಲಿತಾಲಕ್ಷ್ಮೀ ಭಟ್ಟ ಸಿದ್ಧಾಪುರ

ಲಲಿತಾಲಕ್ಷ್ಮೀ ಎಂಬ ಹೆಸರು ಶ್ರೀಮಠದ ಶಿಷ್ಯರಿಗೆ ಸದಾ ಸುಪರಿಚಿತ. ಅದರಲ್ಲೂ ಗುರುಚರಣ ಸೇವಕಿ ಲಲಿತಾಲಕ್ಷ್ಮೀ ಎಂಬ ಕಾವ್ಯನಾಮದಿಂದ ಸದಾ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ, ಶ್ರೀಮಠದ ಶಿಷ್ಯಬಂಧುಗಳ ಅನುಭವಗಳ ಬಗ್ಗೆ ಬಹಳ ಸೊಗಸಾದ ಭಾಷೆಯಲ್ಲಿ ಆಸ್ತಿಕರ ಮನಸ್ಸಿನಲ್ಲಿ ಭಾವುಕತೆ ತುಂಬುವಂತಹ ಆಪ್ತ ಶೈಲಿಯ ಬರಹವನ್ನು ಮಾಧ್ಯಮಗಳಲ್ಲಿ ಪ್ರಸ್ತುತ ಪಡಿಸುವ ಇವರ ಲೇಖನಗಳನ್ನು ಓದದ ಶಿಷ್ಯಬಂಧುಗಳು ವಿರಳ. ಶ್ರೀಮಠದ ಸೇವೆಯಲ್ಲಿ ಅತೀವ ಆಸಕ್ತಿ, ಶ್ರದ್ಧೆ,ಭಕ್ತಿ ಹೊಂದಿರುವ ಇವರು ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಆರಂಭಿಸಿ ಒಂದೇ […]

Continue Reading

ರಂಗೋಲಿ ಕಲೆಯ ಏಕಲವ್ಯ!

ಆತ ಡಿಪ್ಲೋಮಾ ಅಧ್ಯಯನ ಮಾಡುತ್ತಿರುವ ಕಿಶೋರ. ಈತ ರಂಗೋಲಿ ಪುಡಿಯನ್ನು ಹಿಡಿದರೆ ಸರಾಗವಾಗಿ ವಿವಿಧ ಕಲಾಕೃತಿಗಳನ್ನು ಚಿತ್ರಿಸಬಲ್ಲ. ಕ್ಲೇ ಮಾಡೆಲಿಂಗ್‌ನಲ್ಲೂ ಹಲವಾರು ಕಲಾಕೃತಿ ಮತ್ತು ಎಕ್ರೆಲಿಕ್ ಪೇಂಟ್ ಮೂಲಕ ಚಿತ್ರ ಬಿಡಿಸುವ ವಿಶಿಷ್ಟ ಕಲೆಯನ್ನು ಒಲಿಸಿಕೊಂಡಿದ್ದಾನೆ. ಕಲಾ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡುತ್ತಿರುವ ವಿನಾಯಕ ಹೆಬ್ಬಾರ್ ಈ ಕಲಾ ಸಾಧಕ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಗ್ರಾಮದ ರಾಮಚಂದ್ರ ಹೆಬ್ಬಾರ್ ಮತ್ತು ವಿನೋದಿನಿ ಹೆಬ್ಬಾರ ದಂಪತಿಗಳ ಪುತ್ರ ವಿನಾಯಕ ತನ್ನ ಅವಿರತ ಶ್ರಮದ ಮೂಲಕ ಕಲಾ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೩

ಗುರುಪರಂಪರಾನುಗತವಾಗಿ  ಅರಿವು ಅವಿಚ್ಚಿನ್ನವಾಗಿ ಹೇಗೆ ಹರಿಯಿತು ಎಂದು ಅವಲೋಕಿಸುವಾಗ ಗುರು ಎಂದು, ಜ್ಞಾನಪರಂಪರೆಯ ಹರಿವಿನ ಕೊಂಡಿಗಳಿಗೆ ಬೆಸುಗೆಯೆಂದು ಎನ್ನಿಸಿಕೊಳ್ಳುವ ಪಾತ್ರಗಳ ಪರಿಚಯ ಮಾಡಿಕೊಳ್ಳುವುದು ಅತ್ಯವಶ್ಯ. ಮೊದಲನೆ ಸಂಚಿಕೆಯಲ್ಲೇ ಅವಲೋಕಿಸಿದಂತೆ ಶ್ವೇತಾಶ್ವತರೋಪನಿಷತ್ತಿನ ಅನುಕ್ರಮಣಿಕೆಯ ಪ್ರಕಾರ ಬ್ರಹ್ಮನ ತರುವಾಯು ಬರುವ ಶುದ್ಧಪಾತ್ರ ಬ್ರಹ್ಮರ್ಷಿ ವಸಿಷ್ಠ ಮುನಿಶ್ರೇಷ್ಠ ಕ್ಷಮಾಮೂರ್ತಿ ಎಲ್ಲೂ ಕೊರತೆಯನ್ನೇ ಕಾಣಲಾಗದ ವ್ಯಕ್ತಿತ್ವ. ಇವರ ಜನನವೇ ಒಂದದ್ಭುತ. ಸತ್ಯಯುಗದ ಕಾಲದಲ್ಲಿ ಮಹಾತಪಸ್ವಿ ಮೈತ್ರಾವರುಣರು ತಪವಗೈಯ್ಯುತ್ತಿದ್ದಾಗ ದೇವಲೋಕದ ಅಪ್ಸರೆ ಊರ್ವಶಿ ಆ ಜಾಗದ ಸನಿಹಕ್ಕೆ ಬಂದು ನೃತ್ಯಗೈದಳು. ಅದ್ಯಾವ ಘಳಿಗೆಯೋ ಏನೋ!! […]

Continue Reading

“ಶ್ರೀಮಠದ ಸೇವೆಗೆ ಬದುಕಿನಲ್ಲಿ ಮೊದಲ ಆದ್ಯತೆ” : ಮಲ್ಲಿಕಾ ಕಲ್ಲಡ್ಕ

ವದ್ವ ಲಕ್ಷ್ಮೀ ನಾರಾಯಣ ಭಟ್ ಹಾಗೂ ಸರಸ್ವತಿ ಇವರ ಪುತ್ರಿಯಾದ ಮಲ್ಲಿಕಾ ಕಲ್ಲಡ್ಕ ಅವರಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಅತೀವ ಆಸಕ್ತಿ. ಮುಳಿಯ ಗೋಪಾಲಕೃಷ್ಣ ಭಟ್ ಅವರನ್ನು ವಿವಾಹವಾದ ನಂತರ ಶ್ರೀಮಠದ ಸಂಪರ್ಕ ದೊರಕಿತು. ಜೊತೆಗೆ ಶ್ರೀ ಮಠದ ವಿವಿಧ ಸೇವಾ ಯೋಜನೆಗಳಲ್ಲಿ ಭಾಗಿಯಾಗುವ ಸದವಕಾಶವೂ ಒದಗಿಬಂತು. ಪ್ರಸ್ತುತ ಮಾತೃತ್ವಮ್ ನ ವಿವೇಕ ಲಕ್ಷ್ಮಿ ವಿಭಾಗದ ಕೇಂದ್ರ ಮಟ್ಟದ ಅಧ್ಯಕ್ಷೆಯಾಗಿರುವ ಮಲ್ಲಿಕಾ ಅವರು ತಮ್ಮ ಸೇವೆಯ ಸಂದರ್ಭದಲ್ಲಿ ವೈವಿಧ್ಯಮಯ ಅನುಭವಗಳನ್ನು ಪಡೆದುಕೊಂಡವರು. “ಹಿರಿಯ ಗುರುಗಳ ಕಾಲದಿಂದಲೂ ಶ್ರೀಮಠದ […]

Continue Reading

ಲಾಕ್‌ಡೌನ್ ಸಮಯ ಸದ್ಭಳಕೆ: ಮನೆಯಲ್ಲೇಯಕ್ಷಗಾನ ಮುಖವರ್ಣಿಕೆ ಬಿಡಿಸಿ ಹೆಜ್ಜೆ ಹಾಕುತ್ತಿದ್ದಾನೆ ೧೪ ರ ಪೋರ!

ಕಳೆದ ೩-೪ ತಿಂಗಳುಗಳಿಂದ ಎಲ್ಲಿ ನೋಡಿದರೂಕೊರೊನಾದ್ದೇ ಸುದ್ದಿ. ಮನೆಯಿಂದ ಹೊರಬಂದರೂಅದೇ ಸುದ್ದಿ. ಸರ್ಕಾರದ ಜಾರಿಗೊಳಿಸಿದ್ದ ಲಾಕ್‌ಡೌನ್ ಬಹುತೇಕ ಸಡಿಲಿಕೆಆಗುತ್ತಾ ಬಂದರೂ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವಕುರಿತು ಸರ್ಕಾರ ಮೀನಾಮೇಷಎಣಿಸುತ್ತಿದೆ. ಆದರೆಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಪೋರತಾನೇ ಸ್ವತಃಯಕ್ಷಗಾನ ಮುಖವರ್ಣಿಕೆ ಬರೆದುಕೊಂಡು ಮನೆಯಲ್ಲೇಯಕ್ಷಗಾನ ಮಾಡುತ್ತಿದ್ದಾನೆ. ಈತನ ನೃತ್ಯಕ್ಕೆ ಇವನ ಪಾಲಕರೇ ಪ್ರೇಕ್ಷಕರು! ಅಷ್ಟೇಅಲ್ಲದೇಕ್ರಾಫ್ಟ್, ಪೇಂಟಿಂಗ್‌ಗಳನ್ನು ಮಾಡುತ್ತಾ ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾನೆ. ಈತನ ಹೆಸರು ಸ್ವಸ್ತಿಕ ಶರ್ಮಾ. ಗಡಿನಾಡುಕಾಸರಗೋಡುಜಿಲ್ಲೆಯ ಮುಳ್ಳೇರಿಯಾದ ಪಳ್ಳತ್ತಡ್ಕದ ಕೇಶವ ಶರ್ಮಾ ಮತ್ತು ದಿವ್ಯಾದಂಪತಿಯ ಪುತ್ರನಾದಈತ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ೯ನೇ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ -೨

ಅರಿವು ಗುರುಪರಂಪರಾನುಗತವಾಗಿ   ಹರಿದು ಬಂದಿದ್ದೆನಿತು ಎಂದು ಅವಲೋಕಿಸುತ್ತಾ ಹೋದರೆ ಈ ಪ್ರಶ್ನೆಗಳೆಲ್ಲಾ ಮನಸ್ಸಿನಲ್ಲಿ ಮೂಡುತ್ತದೆ..ಅರಿವೇಕೆ ಅವಿಚ್ಛಿನ್ನ ಗುರುಪರಂಪರೆಯಲ್ಲಿಯೇ ಹರಿದು ಬರಬೇಕು..? ಅದರ ಔಚಿತ್ಯವಾದರೂ ಏನು..? ಸ್ವಯಂ ಸಾಧನೆಯಿಂದ ಕಂಡುಕೊಳ್ಳಬಹುದಲ್ಲವೇ ಎಂದೆಲ್ಲ ಅನಿಸಿದರೆ…ಅದಕ್ಕೆ ಪ್ರತ್ಯುತ್ತರವಿಷ್ಟೆ..ಗುರು ಮಾಡಿಸುವ ಅರಿವಿನ ದರ್ಶನ ಸುಲಿದಿಟ್ಟ ಬಾಳೆಹಣ್ಣಿನಂತೆ. ರಾಮಕೃಷ್ಣ ಪರಮಹಂಸರೇ ಹೇಳುವಂತೆ ಜ್ಞಾನಿ ತರಗೆಲೆಯಂತೆ ಅವನು ತಾನೊಬ್ಬ ತೇಲಿಕೊಂಡು ದಾಟಬಲ್ಲ. ಆದರೆ ಇನ್ನೊಬ್ಬರನ್ನು ಹೊತ್ತೊಯ್ಯಲಾರ. ಅದೇ ಗುರುವೊಬ್ಬ ನೌಕೆಯಂತೆ. ಶರಣಾಗತರಾದ ಶಿಷ್ಯರನ್ನು ತನ್ನ ಮೇಲೆ ಹೊತ್ತೊಯ್ಯಬಲ್ಲ. ಪಂಡಿತನನ್ನು, ಪಾಮರನನ್ನು ಒಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ […]

Continue Reading

ದೇಶೀ ಹಸುಗಳ ಮಹತ್ವವನ್ನು ಸಮಾಜ ಗುರುತಿಸಿದೆ: ಲಲಿತಾ ಹೆಬ್ಬಾರ್ ಕುಮಟಾ

“ಸಾವಿರದ ಸುರಭಿ ಯೋಜನೆಯ ಮೂಲಕ ಲಕ್ಷ ಭಾಗಿನಿಯಾಗಿ ಶ್ರೀ ಸಂಸ್ಥಾನದವರಿಂದ ಬಾಗಿನ ಪಡೆದವಳು ನಾನು. ಮಾಸದ ಮಾತೆಯಾಗಿ ಸೇರಿದಾಗ ಗುರಿತಲುಪ ಬಲ್ಲೆನೇ ಎಂಬ ಆತಂಕ ಸಹಜವಾಗಿ ಮೂಡಿ ಬಂದಿತ್ತು. ಆದರೆ ಶ್ರೀಗುರು ವಚನಗಳೇ ಗೋಸೇವೆಯಲ್ಲಿ ನನಗೆ ದಾರಿದೀಪ. ಗುರುಚರಣಗಳನ್ನು ಸ್ಮರಿಸಿ ಮುನ್ನಡೆದೆ. ಕೇವಲ ಎರಡೇ ತಿಂಗಳಿನಲ್ಲಿ ಒಂದು ವರ್ಷಕ್ಕೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ನನ್ನ ಗುರಿ ತಲುಪಿದೆ. ಎಲ್ಲವೂ ಗೋಮಾತೆ,ಶ್ರೀರಾಮ ದೇವರ ಕೃಪೆ” ಎನ್ನುತ್ತಾರೆ ಕುಮಟಾ ಮಂಡಲದ ಮಾತೃತ್ವಮ್ ನ ಮಂಡಲಾಧ್ಯಕ್ಷೆಯಾಗಿರುವ ಲಲಿತಾ […]

Continue Reading

ಚದುರಂಗ ಚತುರೆ ದೀಪ್ತಿಲಕ್ಷ್ಮೀ

ದೀಪ್ತಿಲಕ್ಷ್ಮೀ ಕನ್ನೆಪ್ಪಾಡಿ, ಇದು ಪುತ್ತೂರು ಭಾಗದಲ್ಲಿ ಆಗ್ಗಿದ್ದಾಂಗೆ ಕೇಳಿ ಬರುವ ಹೆಸರು. ಚದುರಂಗ (ಚೆಸ್) ಆಟದಲ್ಲಿ ಆಗ್ಗಾಗೆ ತನ್ನದೇ ಆದ ಹೊಸ ಇತಿಹಾಸ ಬರೆಯುತ್ತಿರುವ ಅಸಾಧಾರಣ ಗ್ರಾಮೀಣ ಪ್ರತಿಭೆ. ಪುತ್ತೂರು ತಾಲೂಕಿನ ಚಿಕ್ಕಮುಂಡೇಲು ನಿವಾಸಿ ಶಂಕರಪ್ರಸಾದ್ ಮತ್ತು ಉಷಾ ಪ್ರಸಾದ್ ದಂಪತಿಯ ಮಗಳು ದೀಪ್ತಿಲಕ್ಷ್ಮೀ ಈಗಾಗಲೇ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಈವರೆಗೆ ಹಲವಾರು ಟೂರ್ನಿಯಲ್ಲಿ ಭಾಗವಹಿಸಿದ್ದಾಳೆ. ಅಣ್ಣನೇ ಸ್ಪೂರ್ತಿ: ಸಣ್ಣವಳಿದ್ದಾಗ ಅಣ್ಣ ಶ್ಯಾಮ್‌ಪ್ರಸಾದ್‌ನೊಂದಿಗೆ ಪ್ರತಿದಿನ ಚೆಸ್ ಆಡುತ್ತಿದ್ದ ದೀಪ್ತಿಲಕ್ಷ್ಮೀಗೆ, ದಿನ ಕಳೆದಂತೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ ೧

ನಮ್ಮ ತಾಯ್ನಾಡು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತಾಂಬೆಯ ಮಕ್ಕಳಾದ ನಮಗೆ ನಮ್ಮ ಶ್ರೇಷ್ಠತೆ ಯಾವುದರಿಂದ ಎಂಬ ಸ್ವಸ್ವರೂಪದ ಅರಿವು ಅತ್ಯಮೂಲ್ಯವಲ್ಲವೇ? ಈ  ಸ್ವಸ್ವರೂಪದ ಅರಿವು ಮೂಡಬೇಕಾದರೆ ಗುರುವೊಬ್ಬ ಬೇಕು ಎಂಬುದು ನಮಗೆಲ್ಲ ಅರಿತ ವಿಚಾರ. ಈ ಒಬ್ಬ ಗುರುವಿನಿಂದ *ಅರಿವು* ಪರಂಪರಾನುಗತವಾಗಿ ತನ್ನ ಪರ್ಯಾಯವೇ ಎಂಬಂತೆ ಮತ್ತೊಂದು ದೇಹ, ಜೀವದ ಮುಖಾಂತರ ಹೇಗೆ ಹರಿದು ಭಾರತೀಯರನ್ನು  ‘ಭಾ'(ಬೆಳಕು)ದೆಡೆಗೆ ನಡೆಸುತ್ತಿದೆ ಎಂದು ಅವಲೋಕಿಸುವುದಕ್ಕಾಗಿ ನಮ್ಮದೊಂದು ಪುಟ್ಟ ಪ್ರಯತ್ನ  *”ಅವಿಚ್ಛಿನ್ನ ಗುರುಪರಂಪರೆಯ ಅರಿವು –  ಹರಿವು”* ಈ ಅರಿವು […]

Continue Reading

“ಶ್ರೀರಾಮನ ಅನುಗ್ರಹ ಶ್ರೀ ಗುರುಗಳ ಕೃಪೆಯಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ” : ಗಂಗಾಮಹೇಶ್ ಚೂಂತಾರು

“ಶ್ರೀರಾಮನ ಅನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ. ಹೇಳಲಾರದೆ ಮನದಲ್ಲಿರಿಸಿದ ಕನಸುಗಳು ಸಹಾ ನನಸಾಗುವಂತಾಗುವುದು ಗುರುಕೃಪೆ ದೊರೆತಾಗ” ಎನ್ನುತ್ತಾರೆ ಚೂಂತಾರಿನ ಗಂಗಾಮಹೇಶ್ ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ಮಾತೃಪ್ರಧಾನೆಯಾಗಿರುವ ಗಂಗಾಲಕ್ಷ್ಮೀ ಮಹೇಶ್ ಅವರು ಪಳ್ಳ ಗೋವಿಂದ ಭಟ್ ಮತ್ತು ವೆಂಕಟೇಶ್ವರಿ ಅವರ ಪುತ್ರಿ. ಚೂಂತಾರು ವೇ.ಮೂ.ಲಕ್ಷ್ಮೀ ನಾರಾಯಣ ಭಟ್,ಸರೋಜಿನಿ ದಂಪತಿಯ ಪುತ್ರ ವೇ.ಮೂ.ಮಹೇಶ್ ಪ್ರಸಾದರ  ಪತ್ನಿ. ೨೦೦೨ರಿಂದ ಶ್ರೀಮಠದ ಸೇವೆಯಲ್ಲಿ  ಪಾಲ್ಗೊಳ್ಳುತ್ತಿರುವ ಗಂಗಾ ಅಭಯಾಕ್ಷರ ಅಭಿಯಾನ,ಹಾಲುಹಬ್ಬ, ಮಂಗಲಗೋಯಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. “ಹಿರಿಯರ […]

Continue Reading

ಯೋಗಸಾಗರಿ ಸಂಧ್ಯಾ ಹಿರಿಯರಿಗೂಯೋಗ ಕಲಿಸುವ ಸಾಧಕಿ!

ಈಕೆ ಇನ್ನೂ ಹದಿನೇಳರ ಪೋರಿ. ವಿಶೇಷಎಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಕೂಡಈಕೆಯನ್ನುತಮ್ಮ ಶಿಕ್ಷಕಿಯೆಂದು ಪರಿಗಣಿಸಿ, ಗೌರವಿಸುತ್ತಾರೆ! ಅಷ್ಟೇಅಲ್ಲಈಕೆಯ ಶಿಷ್ಯರಾಗಿ ಯೋಗಕಲಿಯಲು ಶಿರಸಿ, ಹೊಸನಗರ, ನಾಗರಕೋಡಿಗೆ…. ಹೀಗೆ ದೂರದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಯೋಗದಲ್ಲಿಇಷ್ಟುಚಿಕ್ಕ ವಯಸ್ಸಿಗೇ ಅಸಾಧಾರಣ ಸಾಧನೆ ಮಾಡಿದ ಸಂಧ್ಯಾಎಂ.ಎಸ್. ಯೋಗ ಸಾಧಕಿ. ಈಗಾಗಲೇ ’ಯೋಗಗುರು’ ಎಂಬ ಅಭಿದಾನಕ್ಕೂ ಪಾತ್ರಳಾಗಿದ್ದಾಳೆ. ತನಗಿಂತಲೂ ಹಿರಿಯ ಮತ್ತುಕಿರಿಯಆಸಕ್ತರಿಗೆಯೋಗಾಸನ ಕಲಿಸುತ್ತಿದ್ದಾಳೆ. ಬಡತನದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಉದ್ದೇಶದಿಂದ ಸಾಗರದಲ್ಲಿ ’ಶ್ರೀ ಗುರುಕುಲಂಯೋಗಕೇಂದ್ರ’ ಆರಂಭಿಸಿದ್ದಾಳೆ. ಆ ಮೂಲಕ ಅತ್ಯಂತಕಿರಿಯ […]

Continue Reading

“ಎಲ್ಲವೂ ಶ್ರೀಗುರುಗಳ ಅನುಗ್ರಹ”: ಮಂಗಳಗೌರಿ ಸಾಗರ

ಶ್ರೀಮಠದ ಸೇವೆಗಳಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಂಡು ಪಾದರಸದಂತಹ ತಮ್ಮ ಚುರುಕುತನದ ಕೆಲಸಗಳಿಂದ ಹಲವಾರು ಜನರ ಮೆಚ್ಚುಗೆ ಗಳಿಸಿರುವ ಮಂಗಳಗೌರಿ ಚಿದಾನಂದ ಭಟ್ ಸಾಗರ ಇವರನ್ನು ಗುರುಬಂಧುಗಳೆಲ್ಲ ಅಕ್ಕರೆಯಿಂದ ಕರೆಯುವ ಹೆಸರು ಗೌರಕ್ಕ ಎಂದು. ” ಮಂಗಳಗೌರಿ ಅಂದರೆ ಯಾರಿಗೂ ಗೊತ್ತಿರಲ್ಲ, ಗೌರಕ್ಕ ಅಂದರೆ ಗೊತ್ತಾಗಬಹುದಷ್ಟೆ” ಎಂದು ಅಕ್ಕರೆಯಿಂದ ನುಡಿಯುವ ಗೌರಕ್ಕನಿಗೆ ಬಾಲ್ಯದಿಂದಲೇ ಶ್ರೀಮಠದ ನಿಕಟ ಸಂಪರ್ಕವಿದೆ. ಇವರ ತಂದೆ ಮಹಾಬಲೇಶ್ವರ ಭಟ್ಟರು ಹಿರಿಯ ಗುರುಗಳ ಕಾಲದಲ್ಲಿ ಶ್ರೀಮಠದ ಆಚಾರವಿಚಾರ ಭಟ್ಟರಾಗಿದ್ದುದರಿಂದ ಗೌರಕ್ಕನಿಗೆ ಶ್ರೀಮಠ,ಗುರುಪೀಠಗಳ ಬಗ್ಗೆ ಅತೀವ ಭಕ್ತಿ, […]

Continue Reading

ಹೃದಯದಲ್ಲಿರುವುದು ಶ್ರೀಗುರುಗಳ ಮೂರ್ತಿ,ಶ್ರೀಗುರುವಚನಗಳೇ ಬಾಳಿಗೆ ಸ್ಪೂರ್ತಿ: ಶ್ರೀದೇವಿ ಎಸ್. ಭಟ್

“ಬದುಕಿನ ಪರೀಕ್ಷಣ ಘಟ್ಟಗಳಲ್ಲಿ ಆಸರೆಯಾಗಿ ಕಾಪಾಡಿದ್ದು ಶ್ರೀ ಗುರುಗಳ ಆಶೀರ್ವಾದ. ಅವರ ಕೃಪೆಯಿಂದ ಜೀವನದ ಹಲವಾರು ಏಳುಬೀಳುಗಳನ್ನು ದಾಟಿ ಇಂದು ಶ್ರೀ ಗುರುಸೇವೆ, ಗೋಸೇವೆಗಳ ಮೂಲಕ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ” ಎಂಬ ಸಂತೃಪ್ತ ಭಾವದಿಂದ ನುಡಿಗಳು ಪುಳು ಈಶ್ವರ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಪುತ್ರಿಯೂ, ಚಂಬರಕಟ್ಟ ಸುಬ್ರಹ್ಮಣ್ಯ ಭಟ್ ಅವರ ಪತ್ನಿಯೂ ಆಗಿರುವ ಶ್ರೀದೇವಿ ಎಸ್‌. ಭಟ್ ಅವರದ್ದು. ಪತಿ ಸುಬ್ರಹ್ಮಣ್ಯ ಭಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಹಾಸನದಲ್ಲಿದ್ದರೂ ತಮ್ಮಿಬ್ಬರು ಮಕ್ಕಳ ಜೊತೆಗೆ ಶ್ರೀಮಠದ […]

Continue Reading