ಚಿತ್ರಕಲೆ, ಸಂಗೀತ ಸಾಧನೆಯತ್ತ ಭಾವನಾ ಯಾನ

ಚಿಕ್ಕಂದಿನಿಂದಲೂ ಸಂಗೀತವನ್ನು ಕೇಳುತ್ತಲೇ ಬೆಳೆದ ಈ ಪ್ರತಿಭೆ ಇಂದು ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ಬೆಂಗಳೂರಿನ ವಿದ್ಯಾರಣ್ಯಪುರದ ಬಾಲಚಂದ್ರ ಹೆಗಡೆ ಮತ್ತು ನಾಗರತ್ನ ಹೆಗಡೆ ದಂಪತಿಯ ಪುತ್ರಿ ಭಾವನಾ ಬಾಲಚಂದ್ರ ಹೆಗಡೆ ಇಂದಿನ ‘ಅಂಕುರ’ ದ ಅಪರೂಪದ ಸಾಧಕಿ. ಚಿಕ್ಕವಳಿದ್ದಾಗ ಅಮ್ಮ ಮನೆಯಲ್ಲಿ ಭಜನೆಯನ್ನು ಹೇಳಿಕೊಡುತ್ತಿದ್ದಳು. ಊರಿನ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮಗಳಲ್ಲಿ ತಂದೆ, ಅಜ್ಜ ಎಲ್ಲಾ ಭಾಗವಹಿಸುತ್ತಿದ್ದರು. ಹೀಗೆ ನಾನೂ ಕೂಡಾ ಸಂಗೀತ ಕಲಿಯಲು ಆರಂಭಿಸಿದೆ ಎನ್ನುತ್ತಾಳೆ ಭಾವನಾ. ವಿ. ಉಮಾ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೯

ಸುರೇಶ್ವರಾಚಾರ್ಯರು  ಎಂಬ ಅಭಿಧಾನದಿಂದ ಸಂನ್ಯಸ್ತರಾದ ಮಂಡನಮಿಶ್ರರು ಗುರುಗಳೊಂದಿಗೆ ಹೊರಡುತ್ತಿದ್ದಂತೆಯೇ…  ಉಭಯ ಭಾರತೀ ದೇವಿಯೂ ತನ್ನ ಕರ್ತವ್ಯಗಳನ್ನು ಮುಗಿಸಲೆಳಸಿದಳು..  ಉಭಯ ಭಾರತೀ ದೇವಿಯೇನೂ ಸಾಮಾನ್ಯಳಲ್ಲ..  ಪ್ರಕಾಂಡ ಕರ್ಮವಾದಿಗಳೆಂದೇ ಖ್ಯಾತರಾದ.. ಮಂಡನಮಿಶ್ರರ ಗುರುಗಳೂ ಆದ  ಕುಮಾರಿಲ ಭಟ್ಟರ ತಂಗಿ… ಸಾಂಗವಾಗಿ ವೇದ ಶಾಸ್ತ್ರಗಳ ಸಮಗ್ರ ಅಧ್ಯಯನ ಮಾಡಿದ್ದವಳು.. ತನ್ನ ಪತಿಯೊಂದಿಗೆ ಸರಿಸಮನಾಗಿ  ಗುರುಕುಲದ ಜವಾಬ್ದಾರಿಯನ್ನು ಹೊತ್ತಿದ್ದವಳು, ಈಗ ಪತಿಯು ವಿರಾಗಿಯಾಗಿ ಹೊರಟ ಕೂಡಲೇ, ಪತಿಯ ಹಿರಿಯ ಶಿಷ್ಯರ ಕೈಗೆ ಗುರುಕುಲದ ಜವಾಬ್ದಾರಿ ಒಪ್ಪಿಸಿ ..  ವೈರಾಗ್ಯದ ನೇರದಲ್ಲಿ ಮನೆಬಿಟ್ಟು ನಡೆದರು,  […]

Continue Reading

“ಶ್ರೀಮಠದ ಸೇವೆಗೆ ಶ್ರೀಗುರುಗಳೇ ಪ್ರೇರಣೆ” : ಜೆಡ್ಡು ಸರಸ್ವತಿ ಭಟ್

  ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ‘ಜೆಡ್ಡು ಅಕ್ಕ’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುವ ಸರಸ್ವತಿ ಭಟ್ ಅವರು ಮೂಲತಃ ವಿಟ್ಲ ಸಮೀಪದ ಜೆಡ್ಡು ಮನೆತನದವರು. ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ಜಯಪ್ರಕಾಶ ವಲಯ ನಿವಾಸಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ತಮ್ಮ ಎಲ್ಲಾ ಕೆಲಸಗಳಿಗೂ ಪ್ರೇರಣೆ ಶ್ರೀಗುರುಗಳು ಎಂಬುದು ದೃಢವಾದ ನಂಬಿಕೆ.‌ ಪೆರುವಾಜೆಯ ಗೋವಿಂದ ಭಟ್, ಗೌರೀ ದಂಪತಿಗಳ ಪುತ್ರಿಯಾದ ಇವರು ಜೆಡ್ಡು ರಾಮಚಂದ್ರ ಭಟ್ಟರ ಪತ್ನಿ. ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ […]

Continue Reading

ಬಹುಮುಖ ಪ್ರತಿಭೆ ಅಭಿಜ್ಞಾ ಭಟ್

  ಸಂಗೀತ, ಯಕ್ಷಗಾನ, ಭರತನಾಟ್ಯ, ಹರಿಕಥೆ, ಸಾಹಿತ್ಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ ಪ್ರತಿಭೆ ಅಭಿಜ್ಞಾ ಭಟ್ ಬೊಳುಂಬು. ಈಕೆ ಬದಿಯಡ್ಕದ ದಿನೇಶ ಬಿ. ಮತ್ತು ಗಾನಲತಾ ಎನ್. ದಂಪತಿಗಳ ಮಗಳು. ಅಗಲ್ಪಾಡಿಯ SAPHSS ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಈಕೆ ವಿವಿಧ ಕಲೆಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಅಭಿಜ್ಞಾಳ ತಾಯಿ ಗಾನಲತಾ ಅವರಿಗೆ ಯಕ್ಷಗಾನವೆಂದರೆ ಅಚ್ಚುಮೆಚ್ಚು. ಇದರಿಂದಾಗಿ ಅಭಿಜ್ಞಾ 3ನೇ ವರ್ಷದವಳಿದ್ದಾಗಲೇ ಯಕ್ಷಗಾನವನ್ನು ನೋಡಿ ಅನುಕರಣೆ ಮಾಡಲು ತೊಡಗಿದ್ದಳು. ಮಗಳ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೮

ಅರಿವೇ ಅವಿದ್ಯಾತಿಮಿರವನ್ನು ನಾಶ ಮಾಡುವ ಸಂಕಲ್ಪಹೊತ್ತು ಜ್ಞಾನಾಂಜನ ಶಲಾಕದಂತೆ ಶಂಕರರ ರೂಪದಲ್ಲಿ ಭುವಿಗಿಳಿದು ಬಂದಾಗ ತನ್ನ ದಿವ್ಯೌಷಧ ಪ್ರಭಾವದಿಂದ ಬೆಳಕ ಚೆಲ್ಲಿ ಪ್ರಕಾಶ ದರ್ಶನ ಮಾಡಿಸದೇ ಹಾಗೆಯೇ ಇದ್ದೀತೇ?? ಹೌದು, ಅದ್ವೈತ ತತ್ವ ಪ್ರತಿಪಾದಿಸಿ, ಪ್ರತಿಷ್ಠಾಪಿಸಿ ಆ ಪರಮ ತತ್ವ, ಪರಮಾತ್ಮನೆಂಬ ಮಧುರ ಫಲದ ಪ್ರಾಪ್ತಿ ಸರ್ವರಿಗೂ ಲಭಿಸಲೆಂದೇ ಆದ ಆ ಆಚಾರ್ಯ ಶಂಕರರ ಅವತಾರ ಆ ಕಾರ್ಯವನ್ನು ಹೇಗೆ ಮಾಡುತ್ತಾ ಸಾಗಿತೆಂಬುದನ್ನು ನೋಡೋಣ. ಸಂನಂದನನನ್ನು ಪದ್ಮ ಪಾದಾಚಾರ್ಯರನ್ನಾಗಿಸಿದುದ್ದನ್ನು  ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಿದ್ದೆವು. ಈ ಸಂಚಿಕೆಯಲ್ಲಿ ಮಂಡನ […]

Continue Reading

“ಪ್ರತಿಯೊಂದು ಹಸುವಿನಲ್ಲೂ ಲಕ್ಷ್ಮಿಯನ್ನು ಕಾಣುತ್ತಿದ್ದೇನೆ” : ಗೀತಾ ಯಾಜಿ, ಭಟ್ಕಳ

ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದ ಗೀತಾ ಯಾಜಿ ಅವರಿಗೆ ಹಸುಗಳೆಂದರೆ ವಿಪರೀತ ಮಮತೆ. ತಮ್ಮ ಬಳಿಗೆ ಬಂದ ಹಸುಗಳಿಗೆ ಒಂದಿಷ್ಟಾದರು ಮೇವು ಕೊಡದೆ ಕಳಿಸುವವರಲ್ಲ ಅವರು. ಪ್ರತಿಯೊಂದು ಹಸು ಬಳಿಗೆ ಬಂದಾಗಲೂ ಶ್ರೀಸಂಸ್ಥಾನದವರೇ ಆ ಹಸುವನ್ನು ತನ್ನ ಬಳಿಗೆ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೋಡುವ ಗೀತಾ ಯಾಜಿ ಹೊನ್ನಾವರ ಮಂಡಲದ ಭಟ್ಕಳ ವಲಯದವರು. “ತವರುಮನೆಯಲ್ಲಿ ಹಿಂದೆ ಎರಡು ಹಟ್ಟಿಗಳ ತುಂಬಾ ಹಸುಗಳಿದ್ದವು. ಆ ಹಸುಗಳ ಜೊತೆಗಿನ ಒಡನಾಟದಿಂದಾಗಿಯೇ ಗೋಮಾತೆಯ ಬಗ್ಗೆ ಪ್ರೀತಿ ಮೂಡಲು ಸಾಧ್ಯವಾಯಿತು” ಎನ್ನುವ ಇವರು […]

Continue Reading

ಅಪ್ರತಿಮ ಸಂಗೀತ ಸಾಧಕಿ ದೀಪ್ತಿ

ಚಿಕ್ಕಂದಿನಿಂದಲೂ ಈಕೆಗೆ ಸಂಗೀತವೆಂದರೆ ಅದೇನೋ ಆಕರ್ಷಣೆ. ಅಂದೇ ನಾನು ಕೂಡಾ ಪ್ರಸಿದ್ಧ ಗಾಯಕಿಯಾಗಬೇಕೆಂದು ನಿರ್ಧರಿಸಿದ್ದ ಈ ಪ್ರತಿಭೆ ಇಂದು ತನ್ನ ಶ್ರದ್ಧೆ, ಸತತ ಅಭ್ಯಾಸ, ಗುರುಗಳ ಮಾರ್ಗದರ್ಶನದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾಳೆ. ಬೆಂಗಳೂರಿನ ನಿವಾಸಿ ರಾಮಕೃಷ್ಣ ಭಟ್ ಮತ್ತು ಜಯಲಕ್ಷ್ಮಿ ಭಟ್ ದಂಪತಿಯ ಸುಪುತ್ರಿ ದೀಪ್ತಿ ಆರ್. ಭಟ್ ಈ ಸಂಗೀತ ಸಾಧಕಿ. ಸುಮಧುರ ಸಿರಿಕಂಠ ದೀಪ್ತಿಗೆ ದೈವದತ್ತವಾಗಿ ಒಲಿದ ವರ‌‌. ರಾಮಚಂದ್ರಾಪುರ ಮಠದ ಶ್ರೀಭಾರತೀ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದ ಇವಳು ಆ ದಿನಗಳಲ್ಲೇ ಸಂಗೀತ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೭

ಅವಿಚ್ಛಿನ್ನ ಅರಿವಿನ ಹರಿಯುವಿಕೆಯ ಕಾಪಿಡಲೋಸ್ಕರವೇ ಎಂಬಂತೆ ಗುರುಪರಂಪರೆಯಲ್ಲಿ ಆಗಿಹೋದ ಪ್ರತಿಪಾತ್ರವೂ ಆ ಶುದ್ಧ ಪ್ರಕೃತಿಯನ್ನೇ ಆಯ್ದು, ಆ ಚೇತನವನ್ನು ಪ್ರಚೋದಿಸಿ ಪ್ರಕಾಶಿಸಿ ಜಗಕ್ಕೆ ಇದು ಗುರುಸ್ಥಾನ ಎಂದು ತೋರಿಸಿ ಸಂದಿಗ್ಧತೆಯನ್ನು ಅಳಿಸಿ ನಮ್ಮನ್ನುಳಿಸಿದ್ದಾರೆ. ಅಂತೆಯೇ ಗುರುಪರಂಪರಾ ಸರಣಿಯಲ್ಲಿ ಶಂಕರರ ಪಾತ್ರವಾಗಿ ಬಂದ ಚೈತನ್ಯವು ತಮ್ಮ ಶಿಷ್ಯಶ್ರೇಷ್ಠನನ್ನು ಆಯ್ದು ಪರಂಪರೆಯ ಮುಂದುವರಿಕೆಗೆ ಪಾತ್ರವನ್ನು ತೋರಿಸಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಗುರುಗೋವಿಂದರಲ್ಲಿ ಕ್ರಮಸಂನ್ಯಾಸವನ್ನು ಪಡೆದ ಆಚಾರ್ಯ ಶಂಕರರು ವಿವಿಧ ಭಾಷ್ಯ ರಚಿಸುವ ಮತ್ತು ಅದ್ವೈತ ಸ್ಥಾಪನೆಯ ಹೊಣೆ ಹೊತ್ತು ಕಾಶಿಕ್ಷೇತ್ರಕ್ಕೆ […]

Continue Reading

ನಿರಂತರವಾಗಿ ಗುರುಸೇವೆಯೇ ಜೀವನದ ಗುರಿ: ಇಂದಿರಾ ಬೈಲಕೇರಿ

  ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಲ್ಲಿಸಿ ನಿವೃತ್ತರಾಗಿರುವ ಇಂದಿರಾ ಬೈಲಕೇರಿ ಅವರು ಮೂಲತಃ ಗೋಕರ್ಣ ನಿವಾಸಿಗಳಾದರೂ ಪ್ರಸ್ತುತ ಶಿರಸಿಯ ಮಾರಿಕಾಂಬಾ ಕಾಲೋನಿಯಲ್ಲಿ ವಾಸಿಸುತ್ತಿರುವವರು. ಮೋಟಿನಸರ ವಿದ್ವಾನ್ ನರಸಿಂಹ ಶಾಸ್ತ್ರಿ ಮತ್ತು ಭವಾನಿ ದಂಪತಿಗಳ ಪುತ್ರಿಯಾದ ಇಂದಿರಾ ಅವರ ಪತಿ ರಾಮಚಂದ್ರ ಶಿವರಾಮ ಬೈಲಕೇರಿ . ಬಿ.ಎಸ್.ಎನ್.ಎಲ್.ನಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತರಾಗಿರುವ ಇವರು ಕಳೆದ ನಾಲ್ಕು ವರ್ಷಗಳಿಂದ ಅಂಬಾಗಿರಿ ವಲಯದಲ್ಲಿ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತಿಯ ಜೊತೆಗೂಡಿ ಇಂದಿರಾ ಅವರು ತಮ್ಮ ನಿವೃತ್ತ ಜೀವನವನ್ನು […]

Continue Reading

ಕೃಷ್ಣ ನಗರಿಯ ಬಹುಮುಖ ಪ್ರತಿಭೆ ಸಂಹಿತಾ

ಈಕೆಯ ವಯಸ್ಸು ಕೇವಲ 13. ಆದರೆ ಸಾಧನೆ ಮಾತ್ರ ಅಗಾಧವಾದದ್ದು. ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ನಾಟಕ, ಭಾಷಣ, ನಟನೆ…. ಅಬ್ಬಾ! ಒಂದೋ ಎರಡೋ. ವಿವಿಧ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾಳೆ. ಕನ್ನಡದ ಪ್ರಸಿದ್ಧ ವಾಹಿಸಿ ಝೀ ಕನ್ನಡ ನಡೆಸುವ ಜನಪ್ರಿಯ ಶೋ ‘ಕನ್ನಡದ ಕಣ್ಮಣಿ’ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಈಕೆಯದ್ದು‌. ಅಂದಹಾಗೆ ಈ ಪ್ರತಿಭೆಯ ಹೆಸರು ಸಂಹಿತಾ ಜಿ.ಪಿ. ಮಣಿಪಾಲದ ಪರ್ಕಳದ ನಿವಾಸಿ, ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಶಿಕ್ಷಕ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೬

ಗುರು-ಶಿಷ್ಯರ ಬಂಧ ಅನಿರ್ವಚನೀಯವಲ್ಲವೇ..ಸಂನ್ಯಾಸ ಸಂಕಲ್ಪಿತನಾದ ವಟು ಶಂಕರ ಗುರುಗಳನ್ನು ಹುಡುಕಿಕೊಂಡು ಬಂದನೋ ಅಥವಾ ಗುರುವೇ ತಮ್ಮ ಕಾಂತೀಯ ಕ್ಷೇತ್ರದೊಳಗೆ ಸೆಳೆದರೋ ಅದು ನಮ್ಮ ತರ್ಕಕ್ಕೆ ಮೀರಿದ್ದು. ಒಟ್ಟಿನಲ್ಲಿ ಆಚಾರ್ಯ ಶಂಕರರು ನರ್ಮದಾ ನದಿ ದಂಡೆಯ ಗುಹೆಯ ಬಾಯಿ ಬಳಿಗೆ ಬಂದು ನಿಂತರು. ಕ್ರಮಸಂನ್ಯಾಸವನ್ನು ಪಡೆಯುವ ಸತ್ಕಾಮದ ಈಡೇರಿಕೆಗಾಗಿ ಗುರುಗಳನ್ನು ಸಂಧಿಸಲು ತವಕಿಸಿದರು. ಸಮಾಧಿ ಸ್ಥಿತಿಯಲ್ಲಿ ಪರಮಾನಂದವನ್ನು ಅನುಭವಿಸುತ್ತಿದ್ದ ತಮ್ಮ ಗೌರವಾನ್ವಿತ ಗುರುಗಳನ್ನು ಅತ್ಯಂತ ಪ್ರೇಮದಿಂದ ಸ್ತುತಿಸಿದರು. ಬಾಗಿಲ ಬಳಿ ನಿಂತ ವಟುವನ್ನು ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಗೋವಿಂದ […]

Continue Reading

“ಶ್ರೀಗುರುಗಳ ಸೇವೆಗಾಗಿ ದೊರಕಿದ ಪುನರ್ಜನ್ಮವಿದು”: ಕಲ್ಪನಾ ತಳವಾಟ

“೧೯೯೯ರಲ್ಲಿ ಶ್ರೀಮಠಕ್ಕೆ ಕುಟುಂಬ ಸಮೇತಳಾಗಿ ಹೋಗಿದ್ದಾಗ ಶ್ರೀ ಸಂಸ್ಥಾನದವರು ‘ಗುರುಸೇವೆ ಮಾಡು’ ಎಂದು ಆಶೀರ್ವಾದ ಮಾಡಿದ್ದರು. ಅಂದಿನಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ೨೦೦೩ ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದೆ, ಮುಂದೆ ಆರು ವರ್ಷಗಳ ನಂತರ ಸಿದ್ಧಾಪುರ ಮಂಡಲದ ಮಾತೃಪ್ರಧಾನೆಯಾದೆ, ಮುಂದಿನ ಮೂರು ವರ್ಷಗಳ ಕಾಲ ಮಹಾಮಂಡಲದ ಮಾತೃಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದೇನೆ” ಎನ್ನುವ ಕಲ್ಪನಾ ತಳವಾಟ ಇವರು ಸಿದ್ಧಾಪುರ ಮಂಡಲದ ತಾಳಗುಪ್ಪ ವಲಯದ ಸತೀಶ್ ತಳವಾಟ ಅವರ ಪತ್ನಿ. ಪ್ರಸ್ತುತ ಮಾತೃತ್ವಮ್ ನ ಗೃಹ ಲಕ್ಷ್ಮಿ ಯಾಗಿ […]

Continue Reading

ಕಾಮಿಡಿ ಲೋಕದ ಪ್ರಚಂಡ ಅನೂಪ್

ದಕ್ಷಿಣ ಭಾರತದ ಪ್ರಸಿದ್ಧ ವಾಹಿನಿ ಜೀ ಕನ್ನಡ ವಾಹಿನಿ ನಡೆಸುವ ಜನಪ್ರಿಯ ಕಾಮಿಡಿ ಶೋ ‘ಡ್ರಾಮಾ ಜ್ಯೂನಿಯರ್ಸ್’. ಇಂತಹ ಜನಪ್ರಿಯ ಶೋನಲ್ಲಿ ತನ್ನ ಹಾಸ್ಯದ ಮೂಲಕ ಗಮನ ಸೆಳೆದ ಪ್ರತಿಭೆ ಅನೂಪ್ ರಮಣ ಎನ್.ಎಂ. ಗಡಿನಾಡು ಕಾಸರಗೋಡಿನ ಮುಳ್ಳೇರಿಯಾದ ಮಹಾಲಿಂಗೇಶ್ವರ ಎನ್. ಮತ್ತು ಪದ್ಮಾ ಕೆ. ದಂಪತಿಯ ಪುತ್ರ ಅನೂಪ್ ರಮಣ ಈ ಅಪರೂಪದ ಸಾಧಕ. ಅವಕಾಶವೇ ಅನಿರೀಕ್ಷಿತ! ಚಿಕ್ಕವನಿದ್ದಾಗಲೇ ಯಕ್ಷಗಾನ ಕಲೆಯತ್ತ ಆಕರ್ಷಿತನಾಗಿದ್ದ ಅನೂಪ್, ಆಗಲೇ ಯಕ್ಷಗಾನದ ಹಾಸ್ಯ ಪ್ರಸಂಗಗಳನ್ನು ಅನುಕರಿಸಲು ತೊಡಗಿದ್ದ. ಶ್ರೀಭಾರತೀ ವಿದ್ಯಾಪೀಠದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೫

ಅರಿವು ಆಚಾರ್ಯ ಶಂಕರರ ರೂಪದಿಂದ ಭುವಿಗೆ ಬೆಳಕಾಗಿ ಬಂದು ಗುರುಪರಂಪರೆಯನ್ನು ಉದ್ಧರಿಸಿತೆನ್ನುತ್ತಾ ಪಾತ್ರದ ಪೂರ್ವಾಶ್ರಮ ಘಟನೆಗಳನ್ನು ಅವಲೋಕಿಸಿದೆವು. ಈಗ ಬಹುಜನಚರ್ಚಿತ  ಲೋಕಕಲ್ಯಾಣಿ ಈ ಪಾತ್ರವನ್ನು ಮತ್ತದರ ಶ್ರೇಷ್ಠ ಸಮರ್ಥನೀಯ ನಡೆಯನ್ನು ಈ ಸಂಚಿಕೆಯಲ್ಲಿ ನೋಡೋಣ. ಸಂಕಲ್ಪ ಮಾತ್ರದಿಂದ ಸಂನ್ಯಸ್ತನಾದ ಬಾಲ ವಟು ಶಂಕರನು ಆತ್ಮಸಾಧನೆಗೆ ಈ “ಶಾಖಾಯ ಲವಣಾಯ ಚ” ವೃತ್ತಿಗಳು ಯೋಗ್ಯವಾಗಲಾರದೆಂದು ನಿರ್ಧರಿಸಿದ್ದಾದ್ದರಿಂದ ತದುತ್ತರದ ಆಶ್ರಮಗಳಿಗೆ ಪ್ರವೇಶಿಸದೆ ಮಹೌನ್ನತ್ಯಕ್ಕಾಗಿ ಜನ್ಮಜಾಗವನ್ನು ತೊರೆದು ನಡೆಯಲು ಮನಸ್ಸು ಮಾಡಿದನು. ಹೌದು, ದಿವಿ ಸೂರ್ಯ ಸಹಸ್ರ ಸಮವಾದ ಆ ಬೆಳಕು, […]

Continue Reading

ಗುರುಕೃಪಾ ಕಟಾಕ್ಷದಿಂದಲೇ ದೊರಕಿದ ಶ್ರೀಗುರು ಸೇವಾಭಾಗ್ಯ: ಸುವರ್ಣ ಮಾಲಿನಿ ,ಹೊಸಮನೆ

  ಮಂಗಳೂರು ಮಂಡಲ ಮಧ್ಯವಲಯದ ಮೇರಿಹಿಲ್ ಗುರು ನಗರದ ಗುರುನಿಲಯ ನಿವಾಸಿಗಳಾಗಿರುವ ಭಾಸ್ಕರ ಹೊಸಮನೆ ಅವರ ಪತ್ನಿಯಾಗಿರುವ ಸುವರ್ಣ ಮಾಲಿನಿ ಅವರು ಸುಳ್ಯ ಸಮೀಪದ ಬದಂತಡ್ಕದ ನರಸಿಂಹ ಭಟ್ ಹಾಗೂ ಸುಮತಿ ದಂಪತಿಗಳ ಪುತ್ರಿ. ಮಂಗಳೂರಿನ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಾಣಿಜ್ಯ ಶಾಸ್ತ್ರದ ಸಹ ಪ್ರಾಧ್ಯಾಪಕಿ ಹಾಗೂ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುವ ಇವರು ಮಾತೃತ್ವಮ್ ಯೋಜನೆಯ ಮೂಲಕ ಎರಡು ವರ್ಷಗಳ ಕಾಲ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಸ್ವತಃ ತಾವೇ ಪೂರ್ಣ […]

Continue Reading

ಗಡಿನಾಡಿನ ಸಹೋದರಿಯರ ‘ರಾಮಕಥಾ’ ಗಾನಪಯಣ..

  ಧಾರ್ಮಿಕ-ಸಾಂಸ್ಕೃತಿಕ- ಸಾಮಾಜಿಕ-ಮೌಲ್ಯಗಳನ್ನೊಳಗೊಂಡ ವಿಶಿಷ್ಟವಾದ ಸಂಕಥನ ‘ರಾಮಕಥಾ’. ಶ್ರೀರಾಘವೇಶ್ವರ ಶ್ರೀಗಳು ಸಮಷ್ಟಿಗಾಗಿ ರೂಪಿಸಿದ ಹೊಸದೊಂದು ರಾಮಸೇವಾವಿಧಾನವೇ ಭಾರತ ದೇಶದಲ್ಲಿಯೇ ಅಪರೂಪ-ಅತಿವಿಶೇಷವಾದ ರಾಮಕಥಾ. ಇಂತಹ ವಿಶಿಷ್ಟವಾದ ರಾಮಕಥೆಯಲ್ಲಿ ಸಹಗಾಯನದ ಮೂಲಕ ಗಾಯನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಹೋದರಿಯರು ಪೂಜಾ ಭಟ್ ಕೆ. ಮತ್ತು ಪ್ರಿಯಾಂಕಾ ಭಟ್ ಕೆ. ಮೂಲತಃ ಗಡಿನಾಡು ಕಾಸರಗೋಡಿನವರಾದ ಸದ್ಯ ಬೆಂಗಳೂರಿನ ಗಿರಿನಗರದಲ್ಲಿ ವಾಸವಾಗಿರುವ ಕೆ.ಗೋವಿಂದರಾಜ್ ಮತ್ತು ಇಂದಿರಾ ಜ್ಯೋತಿ ದಂಪತಿಯ ಪುತ್ರಿಯರಾದ ಪೂಜಾ ಮತ್ತು ಪ್ರಿಯಾಂಕಾ ಇವರೇ ಈ ಪ್ರತಿಭೆಗಳು. ಬಾಲ್ಯದಿಂದಲೇ ಮಠದ ಒಡನಾಟದಲ್ಲಿಯೇ ಬೆಳೆದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೪

ಅವಿಚ್ಛಿನ್ನ ಗುರುಪರಂಪರೆಯಲ್ಲಿ ನಾವೀಗ ಶಂಕರ ಭಗವತ್ಪಾದರ ಜೀವನ ಚರಿತ್ರೆಯನ್ನು ಅವಲೋಕಿಸುತ್ತಿದ್ದೇವೆ. ಅದರ ಮುಂದುವರಿಕೆಯಾಗಿ ಚರಿತ್ರೆ ಹೀಗೆ ಸಾಗುತ್ತದೆ. ಐದನೇ ವಯಸ್ಸಿಗೇ ಉಪನಯನವಾದ ಬಳಿಕ ಬಾಲ ಶಂಕರರು ಅಧ್ಯಯನಕ್ಕಾಗಿ ಗುರು ನಿವಾಸವನ್ನು ಸೇರಿದರು. ಕ್ರಮದಂತೆ  ನಿಯಮಿತ ಮನೆಗಳಲ್ಲಿ ಭಿಕ್ಷೆಗಾಗಿ ಹೋಗಬೇಕಿತ್ತು. ಅದರಂತೆ ಒಂದು ದಿನ ಭಿಕ್ಷಾಟನೆಗೆಂದು ಹೋದಾಗ ಬಡ ಬ್ರಾಹ್ಮಣನ ಮನೆಗೆ ಬಂದು ಭವತಿ ಭಿಕ್ಷಾಂ ದೇಹಿ ! ಎಂದ ಶಂಕರರ ಕರೆಗೆ  ಓಗೊಟ್ಟು ಹೊರ ಬಂದ ಆ ಮನೆಯ ಗೃಹಿಣಿ ಈ ಶ್ರೇಷ್ಠ ವಟುವನ್ನು  ನೋಡಿದೊಡನೆಯೇ ಕರಗಿದಳು. […]

Continue Reading

ಶ್ರೀಮಠದ ಸೇವೆ ಬದುಕಿನ ಪಲ್ಲವಿ: ಭಾರತೀ ಕೊಡಿಪ್ಪಾಡಿ

ಭಾರತಿ ಅವರ ಮಕ್ಕಳಿಬ್ಬರೂ ಉನ್ನತ ಪದವಿ ಗಳಿಸಿ ಉದ್ಯೋಗ ನಿರತರು. ಅಮ್ಮನೆಂದರೆ ಅವರಿಗೆ ವಿಪರೀತ ಪ್ರೀತಿ. ತಾಯಿಯ ಇಚ್ಛೆ ಮೀರಿದವರಲ್ಲ. ಇಂಥಹ ತುಂಬು ಪ್ರೀತಿಯ ವಾತಾವರಣವಿರುವ ಕುಟುಂಬವಿದ್ದರೂ ಅವರು ಬಯಸಿದ್ದು ಸರಳ ಜೀವನವನ್ನು, ಗೋಸೇವೆಯನ್ನು,ಅದರಲ್ಲೂ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿರುವ ಗೋವುಗಳ ಸೇವೆಯನ್ನು. ಶ್ರೀಮಠಕ್ಕೆ ಬರುವ ಅತಿಥಿಗಳನ್ನು ಉಪಚರಿಸುತ್ತಾ ,ಗೋಶಾಲೆಯಲ್ಲಿರುವ ಹಸುಗಳ ಸೇವೆ ಮಾಡುತ್ತಾ ನಿಸ್ವಾರ್ಥ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡವರು. ಪಡಾರು ಪಿ.ಕೆ.ನಾರಾಯಣ ಭಟ್ ಹಾಗೂ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಚೆಕ್ಕೆಮನೆ ಮೂಲದ ಸುಳುಗೋಡು ಚಂದ್ರಶೇಖರ […]

Continue Reading

ಯಕ್ಷಗಾನದ ಬಾಲ ಪ್ರತಿಭೆ ಸಾನಿಕಾ

ವೇದಿಕೆಯ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ, ಎದುರಿಗೆ ಕುಳಿತ ಸಭಿಕರನ್ನು ಬೆರಗುಗೊಳಿಸುವ ಈ ಪ್ರತಿಭೆಯ ಹೆಸರು ಸಾನಿಕಾ ಬಿ.ಎಸ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಭಾಸಿಯ ಶ್ರೀಕಾಂತ್ ಮತ್ತು ವೀಣಾ ದಂಪತಿಯ ಪುತ್ರಿ ಸಾನಿಕಾ ಕಿರಿಯ ವಯಸ್ಸಿನಲ್ಲೇ ಕೇವಲ ಯಕ್ಷಗಾನವನ್ನಲ್ಲದೇ ಹರಿವಾಣ ನೃತ್ಯ, ಕೊಡದ ಮೇಲಿನ ನೃತ್ಯ, ಭರತನಾಟ್ಯದಲ್ಲಿಯೂ ಗಮನ ಸೆಳೆದಿದ್ದಾಳೆ. 6 ನೇ ತರಗತಿಯಲ್ಲಿರುವಾಗಲೇ ನಿಟ್ಟೂರಿನ ಡಿ.ಎಸ್.ಸುಬ್ರಹ್ಮಣ್ಯ ಭಟ್ ಅವರಲ್ಲಿ ಯಕ್ಷಗಾನ ಕಲಿಯಲು ಪ್ರಾರಂಭಿಸಿದ ಸಾನಿಕಾ, ಹಲವಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾಳೆ. ಯಕ್ಷಗಾನದ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೧೩

ಆರ್ಯಾವರ್ತದ ಪುಣ್ಯಭೂಮಿ ಭಾರತ ದೇಶದಲ್ಲಿ ಶ್ರೇಷ್ಠ ಸಂಸ್ಕೃತಿಯಿದ್ದು ‘ಅರಿವಿಗಾಗೇ’ ಜೀವಿಕೆ ಎಂಬಂತಿದ್ದರೂ, ತತ್ವ-ವಿಜ್ಞಾನದ ಹೆಸರಿನಲ್ಲಿ ಅವೈಜ್ಞಾನಿಕ,  ಅರಿವಿನ ಪೂರ್ಣಾನಂದದಿಂದ ಬೇರೆಡೆಗೆ ಕರೆದೊಯ್ಯುವ ಮತಗಳ ವಿಜೃಂಭಣೆ ನಮ್ಮತನಕ್ಕೆ ಗ್ರಹಣವುಂಟುಮಾಡಿದ ಪರಮಕಷ್ಟಕಾಲದಲ್ಲಿ ಭರವಸೆಯ ಬೆಳಕಾಗಿ ‘ನಾನು’ ಉಳಿಯಲು ಕಾರಣೀಕರ್ತರಾದವರು ಆಚಾರ್ಯ ಶಂಕರ ಭಗವತ್ಪಾದರು. ಹೌದು, ಅರಿವೇ ಮೈವೆತ್ತುಬಂದು ಗುರುಪರಂಪರೆಯನ್ನಾಗಿಸಾದ ಪಾತ್ರಗಳಲ್ಲೊಂದು ಮಹಾಮೇರು ಪಾತ್ರ ಆಚಾರ್ಯ ಶಂಕರರದ್ದು. ಗುರು ಗೋವಿಂದಭಗವತ್ಪಾದರ ನಂತರ ಗುರುಪರಂಪರಾ ಸರಣಿಯಲ್ಲಿ ಉಲ್ಲೇಖಗೊಳ್ಳುವ ಗಣನೀಯ ಪಾತ್ರ  ಶಂಕರಾಚಾರ್ಯರದ್ದು. ಗುರುಪರಂಪರೆ ಉಳಿದು ಅರಿವು ಅವಿಚ್ಛಿನ್ನವಾಗಿ ತಲೆಮಾರು ತಲೆಮಾರುಗಳಿಗೆ ಹರಿದು ಆ […]

Continue Reading