ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು ಸಂಚಿಕೆ-೩೫
ಅವಿಚ್ಛಿನ್ನ ಗುರುಪರಂಪರೆಯನ್ನು ಉಳಿಸಿ ಕಲಿಯುಗದಂತಹ ಕ್ರೂರ ಕಾಲದಲ್ಲಿಯೂ ಶಿಷ್ಟರ ರಕ್ಷಣೆಗಾಗಿ ಮತ್ತು ದುಷ್ಟರನ್ನೂ ಶಿಷ್ಟಾಚಾರದಲ್ಲಿ ತೊಡಗಿಸಲು ಸದಾ ದಯೆತೋರುತ್ತಾ ಭುವಿಯಲ್ಲಿ ಗುರುವೆಂಬ ಸ್ಥಾನದಲ್ಲಿ ಮೂಡಿಬರುತ್ತಿರುವ ಶ್ರೀಮನ್ನಾರಾಯಣ, ೨೭ನೇ ಗುರುಮೂರ್ತಿಯಾಗಿ ಶ್ರೀ ಶ್ರೀಮದ್ರಘೂತ್ತಮ ಭಾರತೀ(೩) ಎಂಬ ಶುಭನಾಮದಿಂದ ತೋರ್ಪಟ್ಟ. ಹಾಗೆ ಅಂದಿನಿಂದಲೂ ತೋರ್ಪಡುತ್ತಾ ಬಂದಿರುವ ಶ್ರೀಮನ್ನಾರಾಯಣ ಪ್ರತಿರೂಪಿ ಗುರು ಹೇಗಿರುತ್ತಾನೆಂದು ಶ್ರೀಮದಾಚಾರ್ಯ ಶಂಕರಭಗವತ್ಪಾದರ ಮಠಾಮ್ನಾಯದಲ್ಲಿ ಉಲ್ಲೇಖಿಸಿದೆ. ಶುಚಿರ್ಜಿತೇಂದ್ರಿಯೋ ವೇದವೇದಾಂಗ ವಿಶಾರದಃ | ಯೋಗಜ್ಞಃ ಸರ್ವತಂತ್ರಾಣಾಮಸ್ಮದಾಸ್ಥಾನಮಾಪ್ನುಯಾತ್ || ಇಂತೆಯೇ ಶ್ರೀ ಶ್ರೀಮದ್ರಘೂತ್ತಮ ಭಾರತೀ ಮಹಾಸ್ವಾಮಿಗಳು (೩) ಸರ್ವದಾ ಶುಚಿಭೂತರೂ, ಇಂದ್ರಿಯ […]
Continue Reading
 
		 
		 
		 
		 
		 
		 
		 
		 
		 
		 
		 
		 
		 
		