ಮಕ್ಕಳಿಗೆ ಗೋವಿನ ಮಹತ್ವದ ಅರಿವು ಮೂಡಿಸುವ ಶಿಕ್ಷಕಿ: ವಿಜಯಾ ಶ್ಯಾನುಭಾಗ್
“ಮಕ್ಕಳಿಗೆ ಎಳವೆಯಿಂದಲೇ ಗೋವಿನ ಮೇಲೆ ಮಮತೆ ಮೂಡಿಸಿದರೆ ಮುಂದಿನ ಪೀಳಿಗೆಯೂ ಗೋ ಸಾಕಣೆಯತ್ತ ಮನಸ್ಸು ಮಾಡ ಬಹುದಷ್ಟೆ. ಅಳಿಯುತ್ತಿರುವ ಗೋತಳಿಗಳ ಪರಿಚಯ ಮಾಡಿಸಿ, ಆ ಹಸುಗಳ ವಿಶೇಷತೆಗಳ ಬಗ್ಗೆ ಮಕ್ಕಳಿಗೆ ತಿಳಿಸಿದರೆ ಮುಂದೊಂದು ದಿನ ನಮ್ಮ ಸಮಾಜ ಭಾರತೀಯ ಗೋತಳಿಗಳ ಮಹತ್ವವನ್ನು ಜಗತ್ತಿಗೇ ಸಾರಬಹುದು” ಎಂಬುದು ಶಿಕ್ಷಕಿಯಾಗಿರುವ ಶಿರಸಿಯ ವಿಜಯಾ ಶ್ಯಾನುಭಾಗ್ ಅವರ ಅಭಿಪ್ರಾಯ. ಸಿದ್ದಾಪುರ ಮಂಡಲದ ಅಂಬಾಗಿರಿ ವಲಯದ ವಿಜಯಾ ಶ್ಯಾನುಭಾಗ್ ಕೆಕ್ಕಾರು ಮಠದಲ್ಲಿ ಶ್ರೀ ಸಂಸ್ಥಾನದವರ ಚಾತುರ್ಮಾಸ್ಯದ ನಂತರ ಶ್ರೀ ಮಠದ ಸಂಪರ್ಕಕ್ಕೆ ಬಂದವರು. […]
Continue Reading