ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದೆ, ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ : ಪ್ರಣವ ಕೆ.ವಿ ಪುತ್ತೂರು

  ಕೆಲವೂಮ್ಮೆ ಪರಿಸ್ಥಿತಿ ಒಳ್ಳೆಯವರನ್ನು ಕೆಟ್ಟವರನ್ನಾಗಿ ಮಾಡುತ್ತದೆ. ಆದರೆ ಕೆಟ್ಟವರಾಗದೆ ಪರಿಸ್ಥಿತಿಯನ್ನು ಒಳ್ಳೆಯ ರೀತಿಯಲ್ಲಿ ಸ್ವಿಕರಿಸುವುದನ್ನು ಬಲ್ಲವರಾದರೆ ಅವರು ನಿಜವಾದ ಗುರು ಆಗುತ್ತಾರೆ. ಅಂತಹ ನಿರ್ಮಲ ಭಾವಕ್ಕೆ ಮಣ್ಣು ಎರಚಿದರೂ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುವ ಮನಸ್ಸು ದೊಡ್ಡದು. ಆದರೆ ಇದನ್ನೇ ಬಳಸಿ ಇನ್ನಷ್ಟು ಮತ್ತಷ್ಟು ಮೂರ್ಖಬುದ್ಧಿಯಿಂದ ವಿವಿಧ ಬಣ್ಣಗಳ ಮಣ್ಣನ್ನು ಎರಚುತ್ತ ತಾವು ಕೆಸರಿನಲ್ಲಿ ಮುಚ್ಚಿ ಹೋಗುತ್ತಿದ್ದಾರೆ ಎಂಬುದನ್ನು ಮರೆಯುತಿದ್ದಾರೆ.   ದೇವರು ಏನು ಕೊಟ್ಟ? ಏತಕ್ಕೆ ಕೊಟ್ಟ? ನಾವು ಹೇಗೆ ಬಳಸುತ್ತಿದ್ದೇವೆ? ಎಂಬುದನ್ನು ಒಮ್ಮೆ […]

Continue Reading

” ಗೋವಿಲ್ಲದೆ ನಾವಿಲ್ಲ” – ಜನರಿಗಿದರ ಅರಿವಾಗದೇ?

  ಗವತ್ತು ಗೋವಿಗೆ ಚಿತ್ರಹಿಂಸೆ ಕೊಡುವ ವೀಡೀಯೋ ನೋಡಿ, ಅತ್ಯಂತ ಸಂಕಟವಾಗಿ, “ದೇವರೇ ಗೋವಂಶವನ್ನೇ ನಿಲ್ಲಿಸಿಬಿಡು ಎಂದು ಪ್ರಾಥಿಸುತ್ತೇನೆ. ಭಾರತದಲ್ಲಿನ್ನು ಈ ಚಿತ್ರಹಿಂಸೆ ಜಾಸ್ತಿ ಆಗ್ತಾನೇ ಹೋಗತ್ತೆ. ಕರುಳು ಕಿತ್ತು ಬರುವಷ್ಟು ದುಃಖ ಆಗ್ತಾ ಇದೆ” ಎಂದು ನಮ್ಮ ಅತ್ಯಂತ ಕಿರಿಯ ನಿಕಟವರ್ತಿಯೊಬ್ಬರಲ್ಲಿ ತಿಳಿಸಿದೆ.   ಹಾಗಾದರೆ ಮೊದಲು “ಗೋವಿನ ಉತ್ಪನ್ನ ಬಳಸುವುದನ್ನು ಬಿಡ್ತೇನೆ ಎಂಬ ಸಂಕಲ್ಪ ಮಾಡಿ, ಅದನ್ನು ತ್ಯಜಿಸಿಬಿಡಿ. ಆಮೇಲೆ ಪ್ರಾರ್ಥನೆ ಮಾಡುವಿರಂತೆ” ಎಂದರವರು.   “ಗೋವಿನ ಉತ್ಪನ್ನ ಬಳಸುತ್ತಾ, ಗೋವಂಶ ನಿಲ್ಲಿಸುವಂತೆ ದೇವರನ್ನು […]

Continue Reading

ಉತ್ತಮ ವಿದ್ಯಾರ್ಥಿ – ಒಳ್ಳೆಯ ವಿದ್ವಾಂಸ

  ಈ ನಿಲುವೇ ಸೊಗಸು ಈ ನುಡಿಯೇ ಚೆಂದ. ತೀಕ್ಷ್ಣ ನೋಟ. ಅಸಂದಿಗ್ಧ ಭಾವಸ್ಫುರಣೆಯ ಮನೋಧೋರಣೆಯನ್ನು ಸಹಜವಾಗಿ ಹೊರ ಹೊಮ್ಮಿಸುವ ದೇಹಧರ್ಮ, ಒಪ್ಪ ಓರಣವಾದ ವಸನ, ಆರಂಭದಲ್ಲಿ ತುಸು ಹೆಚ್ಚು ಗಂಭೀರವೇನೋ ಎಂದು ಕಾಣುವಂತಿದ್ದರೂ, ಮೃದುವಾದ ಹಾಗೂ ಶೋಧಕತನದ ಮನಸ್ಸು, ಭಾವಶುದ್ಧ ಚರ್ಯೆ, ಸಾಂಘಿಕ ಚಟುವಟಿಕೆಯಲ್ಲಿದ್ದು ಆನಂದ ಅನುಭವಿಸುವ ಸಹಜತೆ, ಹೃದ್ಗತ ಅಭಿಪ್ರಾಯದ ಅಭಿವ್ಯಕ್ತಿಯಲ್ಲಿ ನಿರ್ಮೋಹ ಖಚಿತತೆ – ಈ ರೀತಿಯ ಗುಣಸ್ವಭಾವಗಳಿಂದ ಮೇಳವಿಸಿಕೊಂಡಿರುವ ಸಹೃದಯ ವಿದ್ವದ್ವರ ಕೆರೇಕೈ ಉಮಾಕಾಂತ ಭಟ್ಟರು.   ಜೀವನದಲ್ಲಿ ಆರವತ್ತು ಸಂವತ್ಸರಗಳನ್ನು […]

Continue Reading

ಗುರುಚರಣಕೆ ಶರಣಾಗಲಿ ಹರಣ – ವಿದ್ಯಾ ರವಿಶಂಕರ್ ಯೇಳ್ಕಾನ

ವಿಶ್ವಕೊಬ್ಬನೇ ಒಡೆಯ ಶ್ರೀರಾಮ. ವಿಶ್ವಕ್ಕೊಂದೇ ಅವಿಚ್ಛಿನ್ನ ಗುರುಪರಂಪರೆ. ಅದು ಶ್ರೀರಾಮಚಂದ್ರಾಪುರಮಠ ಗುರು ಪರಂಪರೆ. ಒಂದು ಪೀಠದಲ್ಲಿರುವ ಶ್ರೀಗಳು ತಮ್ಮ ನಂತರ ಪೀಠಾರೋಹಣ ಮಾಡಲು ಶಿಷ್ಯನನ್ನು ಆಯ್ಕೆಮಾಡಿ, ಅವರಿಗೆ ಸಂನ್ಯಾಸದೀಕ್ಷೆ-ಮಂತ್ರೋಪದೇಶ ನೀಡಿ ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸುವುದೊಂದು ಪದ್ಧತಿ. ಈ ರೀತಿಯ ಪದ್ಧತಿಯು ಮಧ್ಯದಲ್ಲಿ ವಿಚ್ಛಿನ್ನವಾಗದೇ ಮುಂದುವರಿದಲ್ಲಿ ಹಿಂದಿನ ಗುರುಪರಂಪರೆಯಿಂದ ಶಕ್ತಿಯು ಪ್ರವಾಹವಾಗಿ ಹರಿದು ಪೀಠಾಧಿಪತಿಗಳು ಪ್ರಭಾವಿಗಳಾಗುತ್ತಾರೆ. ಈ ರೀತಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿದ ಪರಂಪರೆಯನ್ನು ಅವಿಚ್ಛಿನ್ನಪರಂಪರೆ ಎನ್ನಲಾಗುತ್ತದೆ. ಹೀಗೆ ಶ್ರೀರಾಮಚಂದ್ರಾಪುರಮಠದ ಗುರುಪರಂಪರೆಯು ಸಹಸ್ರಮಾನಗಳ ಹಿಂದೆ ಶ್ರೀಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟು ಅಂದಿನಿಂದ […]

Continue Reading

ವಿಶ್ವ~ರಾಮ~ಸಂವಾದ (ಭಾಗ-೧) : ಉಂಡೆಮನೆ ವಿೇಶ್ವರ ಭಟ್

             1 ಗೋಮಾತೆ ವೇದದ ಸಾಕಾರ ರೂಪ. ವೇದಗಳ ರಕ್ಷಣೆ ಧರ್ಮಪೀಠಗಳ ಹೊಣೆ. ಗೋಮಾತೆಯ ರಕ್ಷಣೆಯೂ ಧರ್ಮಪೀಠಗಳ ಹೊಣೆ ತಾನೇ? ಗೋಹತ್ಯಾಚಾರದ ವಿರುದ್ಧ ಸರ್ಕಾರ ಧರ್ಮಪೀಠಾಧಿಪತಿಗಳು ಮೌನವಾಗಿದ್ದಾಗ; ಸಮಾಜ ಅಸಹಾಯಕವಾಗಿ ತನಗೆ ತೋರಿದ ರೀತಿಯಲ್ಲಿ ಪ್ರತಿಭಟನೆಗಿಳಿದು ಅಶಾಂತಿ ಹುಟ್ಟತೊಡಗಿದಾಗ; ಗೋರಕ್ಷಣೆಗೆ ಅಹಿಂಸಾತ್ಮಕವಾದ “ಭಾರತೀಯ ಗೋಸಂರಕ್ಷಣಾ ಆಂದೋಲನ” ವನ್ನು ಜನಜಾಗೃತಿ ಯಾತ್ರೆಯನ್ನು ದೇಶದೆಲ್ಲೆಡೆ ಕೈಗೊಂಡು ನಿರಂತರವಾಗಿ ಗೋಜಾಗೃತಿ ಮೂಡಿಸುತ್ತಿರುವ ಶಂಕರಕಿಂಕರ ಶ್ರೀ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ನಡೆ…   ರಾಮ, ಸರಿ […]

Continue Reading

“ನೀನುಪೇಕ್ಷೆಯ ಮಾಡೆ ಬೇರೆ ಗತಿ ಯಾರೆನಗೆ…..!!- ಪ್ರಸನ್ನಾ ವಿ ಚೆಕ್ಕೆಮನೆ

  ಏಕಾದಶಿ ಎಂದರೆ ಹರಿಸ್ಮರಣೆ. ಹರಿಸ್ಮರಣೆ ಎಂದರೆ ರಾಮಪದ. ಶ್ರೀರಾಮ ಪದತಲದಲ್ಲಿ ಶ್ರೀರಾಮ ಧ್ಯಾನ ಮಾಡುವ ದಿನ. ರಾಮನನ್ನೇ ಮೈಮನಗಳಲ್ಲಿ ತುಂಬಿಕೊಂಡು ಸಾರ್ಥಕ ಭಾವ ಪಡೆಯುವ ಪುಣ್ಯಕ್ಷಣ.   ಅದಕ್ಕಾಗಿಯೇ ಪ್ರತಿ ಏಕಾದಶಿಯ ಪವಿತ್ರ ದಿನವನ್ನು ಮನಸು ಕಾಯುತ್ತಲೇ ಇರುತ್ತದೆ. ರಾಮಧ್ಯಾನದಲ್ಲಿ ತಲ್ಲೀನಗೊಂಡು ಚಿಂತೆ, ತಲ್ಲಣಗಳನ್ನು ಮರೆತು ಶ್ರೀಗುರುಗಳ ಅಮೃತ ವಚನಗಳ ಸವಿಯುಂಡು ಒಂದಿಷ್ಟು ನೆಮ್ಮದಿ ಪಡೆಯಲು, ಶಾಂತಿಯನ್ನು ಬಯಸಲು.   ಸಕಲ ವಿದ್ಯಾ ಆದಿಪೂಜಿತ ಶ್ರೀಗಣನಾಥನ ವಂದನೆಯೊಂದಿಗೆ ಆರಂಭವಾದ ಮೊದಲ ಪದ. ಶ್ರೀಗುರುಗಳು ಗಣಪನನ್ನು ಬಣ್ಣಿಸಿದ […]

Continue Reading

ಪರವಶತೆಗೊಯ್ಯುವ ಶ್ರೀಕರಾರ್ಚಿತ ಪೂಜೆ – ಸಂಧ್ಯಾ ಕಾನತ್ತೂರು

ಸರ್ವಶಕ್ತನ ಮುಂದೆ ನಿಜಭಕ್ತ ಹಾಗೂ ಸರ್ವಭಕ್ತರ ಮುಂದೆ ಸರ್ವಶಕ್ತ – ಪರಸ್ಪರರ ದರ್ಶನ ಏಕಕಾಲದಲ್ಲಿ ಲಭ್ಯವಾಗುವ ಸಮಯವೆಂದರೆ ಮಹಾತ್ಮರು ದೇವತಾರ್ಚನೆಯಲ್ಲಿ ನಿರತವಾಗಿರುವ ಹೊತ್ತು!   ಈ ಅಲೌಕಿಕ ಅನುಭವ ಶ್ರೀಮಠದತ್ತ ನಿರಂತರಸೆಳೆಯುತ್ತದೆ ಎನ್ನುವುದು ಶ್ರೀಮಠದಲ್ಲಿ ನಡೆಯುವ ಶ್ರೀಕರಾರ್ಚಿತ ಪೂಜೆಯನ್ನು ಕಣ್ತುಂಬಿಕೊಂಡವರ ಸ್ಪಷ್ಟ ನುಡಿ.   ಸಾವಿರದ‌ ಮುನ್ನೂರು ವರ್ಷಗಳ ಇತಿಹಾಸವುಳ್ಳ ಜಗತ್ತಿನ ಏಕೈಕ ಅವಿಚ್ಛಿನ್ನ ಪರಂಪರೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಸಪರಿವಾರ ಶ್ರೀರಾಮ, ಚಂದ್ರಮೌಳೇಶ್ವರ, ರಾಜರಾಜೇಶ್ವರಿಯರ ಪೂಜೆ ದಿನಕ್ಕೆರಡು ಬಾರಿ ನಿರಂತರವಾಗಿ ನಡೆದು ಬಂದಿದೆ. ಅಗಸ್ತ್ಯರಿಂದ ಅನುಗ್ರಹಿತವಾದ, ವರದಮುನಿಗಳಿಂದ […]

Continue Reading

“ಸಂಕಲ್ಪಿತ ಕಾರ್ಯಸಿದ್ಧಿ ಪ್ರವೀಣ” – ರವೀಂದ್ರ ಕೃಷ್ಣ ಭಟ್ಟ ಸೂರಿ

ಅವಿಚ್ಛಿನ್ನ ಪರಂಪರೆಯ ಹಿರಿಮೆ ಗರಿಮೆಯುಳ್ಳ ಶ್ರೀ ರಾಮಚಂದ್ರಾಪುರ ಮಠ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಶಂಕರ ಭಗವತ್ಪಾದರು ಪೂರ್ವ ಸಂಕಲ್ಪಿತರಾಗಿ ಸ್ಥಾಪಿಸಿದ ಪೀಠವಿದು. ಶ್ರೀಸುರೇಶ್ವರಾಚಾರ್ಯರಿಂದ ಸಂನ್ಯಾಸ ದೀಕ್ಷಿತರಾಗಿದ್ದ ತಮ್ಮ ಜ್ಞಾನ ಶಿಷ್ಯರಾದ ಶ್ರೀ ವಿದ್ಯಾನಂದಾಚಾರ್ಯರನ್ನು  ಮೂರನೆಯ ಪೀಠಾಧಿಪತಿಗಳನ್ನಾಗಿಸಿ ಅಗಸ್ತ್ಯ ಪ್ರಪೂಜಿತ ವರದಮುನಿ ಪ್ರದತ್ತ ಶ್ರೀರಾಮಾದಿ ವಿಗ್ರಹಗಳನ್ನೂ, ಚಂದ್ರಮೌಳೀಶ್ವರ ಲಿಂಗವನ್ನೂ, ಶ್ರೀಪಾದುಕೆಗಳನ್ನೂ ಅವರಿಗೆ ಅನುಗ್ರಹಿಸಿ ಸ್ಥಾಪಿಸಿದ ಪರಂಪರೆಯಿದು. ಅಖಂಡ ಭಾರತವರ್ಷದಲ್ಲಿ ಆದಿಗುರು ಶಂಕರಾಚಾರ್ಯ ಪರಂಪರೆಯಲ್ಲಿ ಮಹೋನ್ನತ ಇತಿಹಾಸವನ್ನು ಹೊಂದಿರುವಂತಹ ಏಕಮೇವ ಅವಿಚ್ಛಿನ್ನ ಪರಂಪರೆಯಿದು. ಈ ಶ್ರೀ ಪೀಠದ 36 ನೇ […]

Continue Reading

ಶ್ರೀ ಜಗದಾತ್ಮಾನಂದಜೀ : ಕಥೆ ಹೇಳಿ ಮಕ್ಕಳ ಬದುಕು ರೂಪಿಸಿದ ಸಂತ

ಶ್ರೀ ಗುರುಭ್ಯೋನ್ನಮ: ಇತ್ತೀಚೆಗೆ ಶ್ರೀ ರಾಮಕೃಷ್ಣಾಶ್ರಮದ  ಹಿರಿಯ ಸಂನ್ಯಾಸಿಗಳಾಗಿದ್ದ ಶ್ರೀ ಜಗದಾತ್ಮಾನಂದಜೀಯವರು ತೊಂಬತ್ತನೇ ವಯಸ್ಸಿನಲ್ಲಿ ಪರಮಗುರು ಶ್ರೀರಾಮಕೃಷ್ಣರ ಚರಣಕಮಲವನ್ನು ಸೇರಿದರು. ಎಂಬತ್ತರ ದಶಕದಲ್ಲಿ ಇವರು ಬರೆದ ‘ಬದುಕಲು ಕಲಿಯಿರಿ’ ಎಂಬ ಸೃಜನಶೀಲ ಸಾಹಿತ್ಯ ಕನ್ನಡನಾಡಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಆಧುನಿಕ ವಿಜ್ಞಾನದ ಹಿನ್ನೆಲೆಯೊಂದಿಗೆ ಆಧ್ಯಾತ್ಮಕ ನೆಲೆಗಟ್ಟಿನಲ್ಲಿ ಬದುಕನ್ನು ಸಕಾರಾತ್ಮಕವಾಗಿ ಎದುರಿಸುವ ಬಗೆಯನ್ನು ಪ್ರಾಯೋಗಿಕ ಉದಾಹರಣೆಗಳೊಂದಿಗೆ ತಿಳಿಸಿದ ಅತ್ಯಂತ ಅಪರೂಪದ ಪುಸ್ತಕ ಅದಾಗಿತ್ತು. ವಿಶೇಷವಾಗಿ ಯುವಜನತೆಗೆ ಅದು ಪ್ರೇರಣಾಗ್ರಂಥವಾಗಿದೆ.   ಸ್ವಾಮಿ ಜಗದಾತ್ಮಾನಂದರು ಅದನ್ನು ರಚಿಸಿದ್ದು 1977-80ರಲ್ಲಿ ಮೈಸೂರಿನ […]

Continue Reading

ಅಕ್ಷಯದ ಅನುಗ್ರಹ – ಮುಷ್ಟಿಭಿಕ್ಷೆ : ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ ಧರ್ಮತ್ತಡ್ಕ

ಆದಿಶಂಕರರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನವಾಗಿ ಮುಂದುವರಿದಿರುವ ಶ್ರೀರಾಮಚಂದ್ರಾಪುರಮಠದ ಮೂವತ್ತಾರನೆಯ ಯತಿವರರಾದ ಶ್ರೀರಾಘವೇಶ್ವರಭಾರತೀ ಶ್ರೀಗಳ ಶಿಷ್ಯರು ನಾವು ಎಂಬುದೇ ಮನಸ್ಸಿಗೆ ಪರಮಾಪ್ತವಾದ ವಿಚಾರ.   ಸಮಾಜದ ಅಭಿವೃದ್ಧಿಯನ್ನೇ ಪರಮಗುರಿಯನ್ನಾಗಿಸಿಕೊಂಡ ಶ್ರೀಗಳು ಕೈಗೊಂಡಿರುವ ಯೋಜನೆಗಳು ಹಲವಾರು. ಆ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಮಾರ್ಗ ನಿಜಕ್ಕೂ ವಿಶಿಷ್ಟ ಹಾಗೂ ಅದ್ಭುತ.   ಸವೆದು ಹೋಗುತ್ತಿದ್ದ ಪ್ರೀತಿ, ವಿಶ್ವಾಸ, ಮಾನವೀಯತೆಯ ಸರಪಣಿಗೆ ಹೊಸ ರೂಪುರೇಷೆ ಕೊಟ್ಟು, ಸಮಾಜದ ಎಲ್ಲರನ್ನೂ ಒಂದೇ ರೀತಿಯ ಮಮತೆಯ ಕೊಂಡಿಯಿಂದ ಬೆಸೆದು, ಶಿಷ್ಯಭಕ್ತರಿಗೆ ಸೂಕ್ತ ಮಾರ್ಗದರ್ಶನವಿತ್ತು, ಸಹಜೀವನದ ಮಹತ್ತ್ವವನ್ನು ಮನಗಾಣಿಸಿ ಧರ್ಮಸ್ಥಾಪನೆಗಾಗಿ […]

Continue Reading

‘ಅಶು’ವೆಂಬ ಹಸುವಿಗೊಂದು ಪತ್ರ – ಶ್ರೀಮತಿ ಶುಭಶ್ರೀ ಭಟ್ಟ, ಗುಡಬಳ್ಳಿ ಕುಮಟಾ

‘ಅಶೂ!! ಹೇಗಿದ್ದಿಯಾ ಮರಿ? ಕಾಮಧೇನುವಿನ ಸ್ವರ್ಗದಲ್ಲಿ ಎಲ್ಲರೂ ಚೆನ್ನಾಗಿ ನೋಡ್ಕೊತಾ ಇದಾರಲ್ವಾ?ಹಿಂಡಿ, ಗಂಜಿ, ಅಕ್ಕಚ್ಚು, ನೀರು, ಹಣ್ಣೆಲ್ಲಾ ಚೆಂದ ಇರ್ತದಾ? ಬೇಕಾದಷ್ಟು, ಹೊಟ್ಟೆ ತುಂಬುವಷ್ಟು, ತಿಂದು ತೇಗುವಷ್ಟು ತಿನ್ನಲಿಕ್ಕೆ ಕೊಡ್ತಾರಾ ಅಶೂ? ನನ್ನ ಮೇಲಿನ್ನೂ ಸಿಟ್ಟುಂಟಾ? ನಾನೇನ್ ಮಾಡ್ಲಿ ಹೇಳು ನಾನಾಗ ತುಂಬಾ ಚಿಕ್ಕೋಳು.   ಕುಂದಾಪುರದ ಅತ್ತೆ ಮನೆಯಿಂದ ನಿನ್ನಮ್ಮ ಸರಸ್ವತಿಯ ಜೊತೆ ಪುಟು-ಪುಟುವೆಂದು ತಪ್ಪು ಹೆಜ್ಜೆ ಇಡುತ್ತಾ ಬಂದವಳು ನೀನು. ವಾರವೂ ತುಂಬಿರದ ನೀನು ನಮ್ಮೆಲ್ಲರಿಗೂ ಬಲು ಅಚ್ಚುಮೆಚ್ಚಾಗಿದ್ದೆ. ಕಪ್ಪುರೋಮದ ಮೈಯಿ, ಬಿಳಿ ಹಂಡಾಪಟ್ಟೆ […]

Continue Reading

ಮಾನವೀಯತೆಯ ಸಾಕಾರ ಮಹದೀಶ್ವರ

ಕೇರಳದ ತುತ್ತತುದಿ ಮತ್ತು ಕರ್ನಾಟಕದ ಪಾದಮೂಲದಲ್ಲಿರುವ ಗಡಿನಾಡು ಕಾಸರಗೋಡು. ೧೯೫೬ರಲ್ಲಿ ಕೇರಳದ ತೆಕ್ಕೆಗೆ ಸೇರಿದ ಈ ಊರು ೧೯೮೪ರಲ್ಲಿ ಜಿಲ್ಲಾಕೇಂದ್ರವಾಯ್ತು. ಹೆಚ್ಚುಕಡಿಮೆ ಹದಿಮೂರು ಲಕ್ಷ ಜನಸಂಖ್ಯೆ. ಸಂಖ್ಯಾ ಬಾಹುಳ್ಯದಲ್ಲಿ ಹಿಂದೂಗಳ ಅನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ೩.೪೮ ಕೋಟಿ ಕೇರಳದ ಜನಸಂಖ್ಯೆ. `ಟೈಮ್ಸ್ ಆಫ್ ಇಂಡಿಯಾ’ ಮತ್ತು `ದಿ ಹಿಂದು’ ವರದಿ (೨೦೧೫-೨೦೧೬)ಗಳ ಪ್ರಕಾರ ಭಾರತ ದೇಶದಲ್ಲೇ ಅತ್ಯಧಿಕ ಬೀಫ್ (ಹಸು ಮತ್ತು ಕೋಣಗಳ ಮಾಂಸ) ಬಳಕೆಯಾಗುತ್ತಿರುವ ರಾಜ್ಯ ಕೇರಳ. ಸಂಖ್ಯಾ ಸಮೀಕ್ಷೆ: ೩೫,೩೨೪ ಸಾವಿರ ಮೆಟ್ರಿಕ್ ಟನ್ […]

Continue Reading

ದ್ವೀಪದಲ್ಲೊಂದು ದಿವ್ಯತೆ; ಪ್ರಕೃತಿಯ ಅನುಪಮ ರಮ್ಯತೆ; ಶ್ರೀಕ್ಷೇತ್ರ ಹೈಗುಂದ; ಅಪರೂಪ; ಅತಿವಿಶಿಷ್ಟ

ಶಾಂತಗಂಭೀರವಾಗಿ ಹರಿಯುವ ಸುಂದರ ಶರಾವತಿಯ ಮಡಿಲಲ್ಲಿದೆ ಹೈಗುಂದ. ತಾಯಿ ಶ್ರೀದುರ್ಗಾಂಬಿಕೆಯ ಸಾನ್ನಿಧ್ಯದ ಮಹಿಮೆ ಇದರದ್ದು. ಹವ್ಯಕ ಬ್ರಾಹ್ಮಣರ ಮೂಲನೆಲೆ ಈ ಪ್ರಾಚೀನ ಯಾಗಭೂಮಿ. ವರ್ಷಋತುವಿನ ವರ್ಷಾಧಾರೆಯ ತಂಪಿನಲ್ಲೂ, ಗ್ರೀಷ್ಮದ ಸುಡುಬಿಸಿಲಿನ ತಾಪದಲ್ಲೂ ಹಚ್ಚಹಸುರಾಗಿ ತೋರುವದು ಈ ದ್ವೀಪ.   ಸುಮಾರು ೧೫೦೦ ವರ್ಷಗಳ ಹಿಂದೆ ಕದಂಬರ ದೊರೆ ಬನವಾಸಿಯ ರಾಜ ಮಯೂರವರ್ಮ ಯಾಗಕ್ಕಾಗಿ ಆರಿಸಿದ ಸ್ಥಳ ಹೈಗುಂದ. ಯಾಗರಕ್ಷಣೆಗಾಗಿ ನದಿಯನ್ನು ಎರಡು ಭಾಗವಾಗಿಸಿ ಯಾಗಭೂಮಿಯ ಸುತ್ತಲೂ ನೀರು ಹರಿಯುವಂತೆ ಮಾಡಿದ. ಸರಸ್ವತೀ ನದಿಯ ತೀರದಲ್ಲಿರುವ ಅಹಿಚ್ಛತ್ರವೆಂಬ ನಗರದಿಂದ […]

Continue Reading

ಮಠವೆಂಬ ಮನೆ, ಗುರುವೆಂಬ ತಾಯಿ – ರಮ್ಯಾ ಸುರೇಶ್ ಮಾಬಲಡ್ಕ

ಮಠವೆಂಬ ಮನೆ, ಗುರುವೆಂಬ ತಾಯಿ, ಈ ಶೀರ್ಷಿಕೆ ಯಾಕೆಂದರೆ, ನಮ್ಮ ಮಠದಲ್ಲಿದ್ದರೆ ಮನೆಯದ್ದೇ ಭಾವ, ಮನೆಗಿಂತಲೂ ಹೆಚ್ಚಿನ ನೆಮ್ಮದಿ. ಗುರು ದೃಷ್ಟಿಗೆ ಸಿಲುಕುವಂತ್ತಿದ್ದಲ್ಲಿ, ತಾಯಿಯ ಮಮತೆಯ ಭಾವ, ತಾಯಿಯ ಮಡಿಲಿಗಿಂತಲೂ ಹೆಚ್ಚಿನ ನೆಮ್ಮದಿ. ಯಾವ ಮಠ ಅಂತೀರಾ – ನಮ್ಮ ಪ್ರೀತಿಯ ಶ್ರೀ ರಾಮಚಂದ್ರಾಪುರ ಮಠ. ಯಾವ ಗುರು ಕೇಳ್ತೀರಾ – ನಮ್ಮ ಪ್ರೀತಿಯ ಶ್ರೀ ಸಂಸ್ಥಾನ. ಅಜ್ಞಾನ, ಅಂಧಕಾರಗಳು ಮನೆ ಮಾಡಿತ್ತು. ಸಂಸ್ಕಾರ, ಧರ್ಮವೆಂಬ ಶಬ್ಧಗಳೇ ಹಿಂದೆ ಸರಿಯುತ್ತಾ ಇತ್ತು. ಶಾಲೆ, ಕಾಲೇಜು, ಉದ್ಯೋಗ, foreign […]

Continue Reading