ಚದುರಂಗ ಚತುರೆ ದೀಪ್ತಿಲಕ್ಷ್ಮೀ

ದೀಪ್ತಿಲಕ್ಷ್ಮೀ ಕನ್ನೆಪ್ಪಾಡಿ, ಇದು ಪುತ್ತೂರು ಭಾಗದಲ್ಲಿ ಆಗ್ಗಿದ್ದಾಂಗೆ ಕೇಳಿ ಬರುವ ಹೆಸರು. ಚದುರಂಗ (ಚೆಸ್) ಆಟದಲ್ಲಿ ಆಗ್ಗಾಗೆ ತನ್ನದೇ ಆದ ಹೊಸ ಇತಿಹಾಸ ಬರೆಯುತ್ತಿರುವ ಅಸಾಧಾರಣ ಗ್ರಾಮೀಣ ಪ್ರತಿಭೆ. ಪುತ್ತೂರು ತಾಲೂಕಿನ ಚಿಕ್ಕಮುಂಡೇಲು ನಿವಾಸಿ ಶಂಕರಪ್ರಸಾದ್ ಮತ್ತು ಉಷಾ ಪ್ರಸಾದ್ ದಂಪತಿಯ ಮಗಳು ದೀಪ್ತಿಲಕ್ಷ್ಮೀ ಈಗಾಗಲೇ ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ಈವರೆಗೆ ಹಲವಾರು ಟೂರ್ನಿಯಲ್ಲಿ ಭಾಗವಹಿಸಿದ್ದಾಳೆ. ಅಣ್ಣನೇ ಸ್ಪೂರ್ತಿ: ಸಣ್ಣವಳಿದ್ದಾಗ ಅಣ್ಣ ಶ್ಯಾಮ್‌ಪ್ರಸಾದ್‌ನೊಂದಿಗೆ ಪ್ರತಿದಿನ ಚೆಸ್ ಆಡುತ್ತಿದ್ದ ದೀಪ್ತಿಲಕ್ಷ್ಮೀಗೆ, ದಿನ ಕಳೆದಂತೆ […]

Continue Reading

ಅವಿಚ್ಛಿನ್ನ ಗುರುಪರಂಪರೆಯ ಅರಿವು-ಹರಿವು – ಸಂಚಿಕೆ ೧

ನಮ್ಮ ತಾಯ್ನಾಡು ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತಾಂಬೆಯ ಮಕ್ಕಳಾದ ನಮಗೆ ನಮ್ಮ ಶ್ರೇಷ್ಠತೆ ಯಾವುದರಿಂದ ಎಂಬ ಸ್ವಸ್ವರೂಪದ ಅರಿವು ಅತ್ಯಮೂಲ್ಯವಲ್ಲವೇ? ಈ  ಸ್ವಸ್ವರೂಪದ ಅರಿವು ಮೂಡಬೇಕಾದರೆ ಗುರುವೊಬ್ಬ ಬೇಕು ಎಂಬುದು ನಮಗೆಲ್ಲ ಅರಿತ ವಿಚಾರ. ಈ ಒಬ್ಬ ಗುರುವಿನಿಂದ *ಅರಿವು* ಪರಂಪರಾನುಗತವಾಗಿ ತನ್ನ ಪರ್ಯಾಯವೇ ಎಂಬಂತೆ ಮತ್ತೊಂದು ದೇಹ, ಜೀವದ ಮುಖಾಂತರ ಹೇಗೆ ಹರಿದು ಭಾರತೀಯರನ್ನು  ‘ಭಾ'(ಬೆಳಕು)ದೆಡೆಗೆ ನಡೆಸುತ್ತಿದೆ ಎಂದು ಅವಲೋಕಿಸುವುದಕ್ಕಾಗಿ ನಮ್ಮದೊಂದು ಪುಟ್ಟ ಪ್ರಯತ್ನ  *”ಅವಿಚ್ಛಿನ್ನ ಗುರುಪರಂಪರೆಯ ಅರಿವು –  ಹರಿವು”* ಈ ಅರಿವು […]

Continue Reading

“ಶ್ರೀರಾಮನ ಅನುಗ್ರಹ ಶ್ರೀ ಗುರುಗಳ ಕೃಪೆಯಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ” : ಗಂಗಾಮಹೇಶ್ ಚೂಂತಾರು

“ಶ್ರೀರಾಮನ ಅನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದಂತೆ. ಹೇಳಲಾರದೆ ಮನದಲ್ಲಿರಿಸಿದ ಕನಸುಗಳು ಸಹಾ ನನಸಾಗುವಂತಾಗುವುದು ಗುರುಕೃಪೆ ದೊರೆತಾಗ” ಎನ್ನುತ್ತಾರೆ ಚೂಂತಾರಿನ ಗಂಗಾಮಹೇಶ್ ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ಮಾತೃಪ್ರಧಾನೆಯಾಗಿರುವ ಗಂಗಾಲಕ್ಷ್ಮೀ ಮಹೇಶ್ ಅವರು ಪಳ್ಳ ಗೋವಿಂದ ಭಟ್ ಮತ್ತು ವೆಂಕಟೇಶ್ವರಿ ಅವರ ಪುತ್ರಿ. ಚೂಂತಾರು ವೇ.ಮೂ.ಲಕ್ಷ್ಮೀ ನಾರಾಯಣ ಭಟ್,ಸರೋಜಿನಿ ದಂಪತಿಯ ಪುತ್ರ ವೇ.ಮೂ.ಮಹೇಶ್ ಪ್ರಸಾದರ  ಪತ್ನಿ. ೨೦೦೨ರಿಂದ ಶ್ರೀಮಠದ ಸೇವೆಯಲ್ಲಿ  ಪಾಲ್ಗೊಳ್ಳುತ್ತಿರುವ ಗಂಗಾ ಅಭಯಾಕ್ಷರ ಅಭಿಯಾನ,ಹಾಲುಹಬ್ಬ, ಮಂಗಲಗೋಯಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. “ಹಿರಿಯರ […]

Continue Reading

ಯೋಗಸಾಗರಿ ಸಂಧ್ಯಾ ಹಿರಿಯರಿಗೂಯೋಗ ಕಲಿಸುವ ಸಾಧಕಿ!

ಈಕೆ ಇನ್ನೂ ಹದಿನೇಳರ ಪೋರಿ. ವಿಶೇಷಎಂದರೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಕೂಡಈಕೆಯನ್ನುತಮ್ಮ ಶಿಕ್ಷಕಿಯೆಂದು ಪರಿಗಣಿಸಿ, ಗೌರವಿಸುತ್ತಾರೆ! ಅಷ್ಟೇಅಲ್ಲಈಕೆಯ ಶಿಷ್ಯರಾಗಿ ಯೋಗಕಲಿಯಲು ಶಿರಸಿ, ಹೊಸನಗರ, ನಾಗರಕೋಡಿಗೆ…. ಹೀಗೆ ದೂರದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಯೋಗದಲ್ಲಿಇಷ್ಟುಚಿಕ್ಕ ವಯಸ್ಸಿಗೇ ಅಸಾಧಾರಣ ಸಾಧನೆ ಮಾಡಿದ ಸಂಧ್ಯಾಎಂ.ಎಸ್. ಯೋಗ ಸಾಧಕಿ. ಈಗಾಗಲೇ ’ಯೋಗಗುರು’ ಎಂಬ ಅಭಿದಾನಕ್ಕೂ ಪಾತ್ರಳಾಗಿದ್ದಾಳೆ. ತನಗಿಂತಲೂ ಹಿರಿಯ ಮತ್ತುಕಿರಿಯಆಸಕ್ತರಿಗೆಯೋಗಾಸನ ಕಲಿಸುತ್ತಿದ್ದಾಳೆ. ಬಡತನದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವ ಉದ್ದೇಶದಿಂದ ಸಾಗರದಲ್ಲಿ ’ಶ್ರೀ ಗುರುಕುಲಂಯೋಗಕೇಂದ್ರ’ ಆರಂಭಿಸಿದ್ದಾಳೆ. ಆ ಮೂಲಕ ಅತ್ಯಂತಕಿರಿಯ […]

Continue Reading

“ಎಲ್ಲವೂ ಶ್ರೀಗುರುಗಳ ಅನುಗ್ರಹ”: ಮಂಗಳಗೌರಿ ಸಾಗರ

ಶ್ರೀಮಠದ ಸೇವೆಗಳಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಂಡು ಪಾದರಸದಂತಹ ತಮ್ಮ ಚುರುಕುತನದ ಕೆಲಸಗಳಿಂದ ಹಲವಾರು ಜನರ ಮೆಚ್ಚುಗೆ ಗಳಿಸಿರುವ ಮಂಗಳಗೌರಿ ಚಿದಾನಂದ ಭಟ್ ಸಾಗರ ಇವರನ್ನು ಗುರುಬಂಧುಗಳೆಲ್ಲ ಅಕ್ಕರೆಯಿಂದ ಕರೆಯುವ ಹೆಸರು ಗೌರಕ್ಕ ಎಂದು. ” ಮಂಗಳಗೌರಿ ಅಂದರೆ ಯಾರಿಗೂ ಗೊತ್ತಿರಲ್ಲ, ಗೌರಕ್ಕ ಅಂದರೆ ಗೊತ್ತಾಗಬಹುದಷ್ಟೆ” ಎಂದು ಅಕ್ಕರೆಯಿಂದ ನುಡಿಯುವ ಗೌರಕ್ಕನಿಗೆ ಬಾಲ್ಯದಿಂದಲೇ ಶ್ರೀಮಠದ ನಿಕಟ ಸಂಪರ್ಕವಿದೆ. ಇವರ ತಂದೆ ಮಹಾಬಲೇಶ್ವರ ಭಟ್ಟರು ಹಿರಿಯ ಗುರುಗಳ ಕಾಲದಲ್ಲಿ ಶ್ರೀಮಠದ ಆಚಾರವಿಚಾರ ಭಟ್ಟರಾಗಿದ್ದುದರಿಂದ ಗೌರಕ್ಕನಿಗೆ ಶ್ರೀಮಠ,ಗುರುಪೀಠಗಳ ಬಗ್ಗೆ ಅತೀವ ಭಕ್ತಿ, […]

Continue Reading

ಹೃದಯದಲ್ಲಿರುವುದು ಶ್ರೀಗುರುಗಳ ಮೂರ್ತಿ,ಶ್ರೀಗುರುವಚನಗಳೇ ಬಾಳಿಗೆ ಸ್ಪೂರ್ತಿ: ಶ್ರೀದೇವಿ ಎಸ್. ಭಟ್

“ಬದುಕಿನ ಪರೀಕ್ಷಣ ಘಟ್ಟಗಳಲ್ಲಿ ಆಸರೆಯಾಗಿ ಕಾಪಾಡಿದ್ದು ಶ್ರೀ ಗುರುಗಳ ಆಶೀರ್ವಾದ. ಅವರ ಕೃಪೆಯಿಂದ ಜೀವನದ ಹಲವಾರು ಏಳುಬೀಳುಗಳನ್ನು ದಾಟಿ ಇಂದು ಶ್ರೀ ಗುರುಸೇವೆ, ಗೋಸೇವೆಗಳ ಮೂಲಕ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ” ಎಂಬ ಸಂತೃಪ್ತ ಭಾವದಿಂದ ನುಡಿಗಳು ಪುಳು ಈಶ್ವರ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಪುತ್ರಿಯೂ, ಚಂಬರಕಟ್ಟ ಸುಬ್ರಹ್ಮಣ್ಯ ಭಟ್ ಅವರ ಪತ್ನಿಯೂ ಆಗಿರುವ ಶ್ರೀದೇವಿ ಎಸ್‌. ಭಟ್ ಅವರದ್ದು. ಪತಿ ಸುಬ್ರಹ್ಮಣ್ಯ ಭಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಹಾಸನದಲ್ಲಿದ್ದರೂ ತಮ್ಮಿಬ್ಬರು ಮಕ್ಕಳ ಜೊತೆಗೆ ಶ್ರೀಮಠದ […]

Continue Reading

“ಶ್ರೀ ಮಠದ ಸಂಘಟನೆಯನ್ನು ಬಲ ಪಡಿಸುವುದೇ ಜೀವನದ ಗುರಿ” : ದೇವಿಕಾ ಶಾಸ್ತ್ರಿ

ತವರುಮನೆ ಪೆರ್ನಾಜೆ ಮನೆತನದವರು ಬಹಳ ಹಿಂದಿನಿಂದಲೂ ಏಳು ಗ್ರಾಮಗಳ ಗುರಿಕ್ಕಾರರಾದುದರಿಂದ ಬೆಳ್ತಂಗಡಿ ಸಮೀಪದ ಪಿಲಿಗೂಡಿನಲ್ಲಿರುವ ಮಾತೃತ್ವಮ್ ಮಹಾಮಂಡಲ ಸಂಚಾಲಕಿಯಾಗಿರುವ ದೇವಿಕಾ ಶಾಸ್ತ್ರಿ ಅವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತು. “ನಾನು ಪುಟ್ಟ ಬಾಲಕಿಯಾಗಿದ್ದಾಗ ದೊಡ್ಡ ಗುರುಗಳು ಸುಮಾರು ಒಂದು ತಿಂಗಳಷ್ಟು ಸಮಯ ನಮ್ಮಲ್ಲಿ ಮೊಕ್ಕಾಂ ಹೂಡಿದ್ದರು. ಆಗ ನಾನು ಅತೀವ ಕುತೂಹಲ, ಶ್ರದ್ಧೆಗಳಿಂದ ನಿತ್ಯವೂ ಶ್ರೀಕರಾರ್ಚಿತ ಪೂಜೆಯನ್ನು ನೋಡುತ್ತಿದ್ದೆ. ಆಗಲೇ ಮನಸ್ಸಿನಲ್ಲಿ ಶ್ರೀಗುರುಗಳ ಬಗ್ಗೆ, ಶ್ರೀಮಠದ ಬಗ್ಗೆ ಭಕ್ತಿ ಭಾವ ಬೆಳೆಯಿತು. ಅದುವೇ ಮುಂದಿನ ಸೇವೆಗಳಿಗೆ ಭದ್ರ […]

Continue Reading

ಶ್ರೀ ಗುರುಸೇವೆ ಗೋಸೇವೆಯ ಭಾಗ್ಯ ದೊರಕುವುದು ಪೂರ್ವ ಜನ್ಮದ ಸುಕೃತದಿಂದ : ವಿದ್ಯಾ ರವಿಶಂಕರ್ ಏಳ್ಕಾನ

ತವರುಮನೆ ಸೂರ್ಯಂಬೈಲು ಮನೆಯವರು ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ಕಾಲದಿಂದಲೇ  ಗ್ರಾಮದ ಗುರಿಕ್ಕಾರರಾಗಿ ಸೇವೆ ಸಲ್ಲಿಸುತ್ತಾ ಬಂದವರು. ತಾಯಿಯ ತಂದೆ ಬೈಪ್ಪದವು ರಾಮಚಂದ್ರ ಭಟ್ ಅವರು ಪೆರಾಜೆಯ ಮಾಣಿ ಮಠ ಕಟ್ಟುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದವರು. ಇದರಿಂದಾಗಿ ಬಾಲ್ಯದಿಂದಲೇ ವಿದ್ಯಾ ಅವರಿಗೆ ಶ್ರೀ ಮಠದ ಸಂಪರ್ಕ ದೊರಕಿತು. ಶ್ರೀ ಮಠ,ಗುರುಗಳು ಎಂಬ ಅಭಿಮಾನ ಮೂಡಿ ಭಕ್ತಿ ಶ್ರದ್ಧೆ ಮೂಡಲು ಕಾರಣವಾಯಿತು. ನಿರಂತರ ಶ್ರೀ ಮಠದ ಸಂಪರ್ಕ, ಗುರುಸೇವೆ,ಗೋಸೇವೆಗಳು ಪೂರ್ವ ಜನ್ಮದ ಸುಕೃತದಿಂದ ಲಭಿಸುತ್ತದೆ ಎಂಬುದು ಏಳ್ಕಾನದ ಡಾ. […]

Continue Reading

“ತ್ಯಾಗದ ಪರ್ವಕ್ಕೆ ಪ್ರೇರಣೆ ಗುರುವಚನಗಳು” : ಸುಮಾ ರಮೇಶ್

“ಸೇವೆ ಮಾಡ ಬೇಕೆಂಬ ತುಡಿತವಿದ್ದರೆ ಯಾವುದಾದರೂ ಒಂದು ಹಾದಿ ತೆರೆಯುತ್ತದೆ. ಹಣದ ಮೂಲಕ ಸಹಕಾರ ನೀಡಬೇಕೆಂಬ ಮನಸ್ಸಿದ್ದರೆ ಯಾವುದೋ ಒಂದು ರೀತಿಯಲ್ಲಿ ಹಣ ಸಂಗ್ರಹವಾಗುತ್ತದೆ. ಇದು ನನ್ನ ಜೀವನದ ಅನುಭವ. ಶ್ರೀ ಮಠದ ಸೇವೆ, ಶ್ರೀ ಗುರುಗಳ ಸೇವೆ, ಗೋಸೇವೆ ಇವುಗಳಲ್ಲಿ ಆನಂದ ಕಂಡುಕೊಳ್ಳುವವಳು ನಾನು. ಇತರರಲ್ಲಿ ನಾನು ಕೇಳಿಕೊಳ್ಳುವುದು ಸಹಾ ಇದನ್ನೇ. ನಮ್ಮ ಗುರುಗಳ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಿ. ಆಗ ದೊರಕುವ ಆನಂದವೇ ನಿಜವಾದ ಸಂತೋಷ” ತುಂಬು ಹೃದಯದ ಈ ನುಡಿಗಳು ಸುಮಾ ರಮೇಶ್ […]

Continue Reading

ಗೋಮಾತೆಯ ಮೇಲಿನ ಮಮತೆಯಿಂದ ಮಾಸದ ಮಾತೆಯಾದೆ: ಚಂದ್ರಮತಿ ಹೆಗಡೆ

ಬಾಲ್ಯದಿಂದಲೇ ಗೋವುಗಳ ಮೇಲೆ ವಿಶೇಷ ಪ್ರೀತಿ. ತವರುಮನೆಯಲ್ಲಿ ಹಸುಗಳ ಒಡನಾಟದ ನಡುವೇ ಬೆಳೆದವರು. ಮುಂದೆ ವಿದ್ಯಾಭ್ಯಾಸ, ಸರಕಾರಿ ಉದ್ಯೋಗ, ಮದುವೆ, ಮಕ್ಕಳು ಎಂದು ಜೀವನದ ಹಲವಾರು ಜವಾಬ್ದಾರಿಯುತ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಾಗ ಗೋ ಸಾಕಣೆ ಇಷ್ಟವಿದ್ದರೂ ಅನಿವಾರ್ಯ ಕಾರಣಗಳಿಂದಾಗಿ ಆ ಕಡೆಗೆ ಗಮನ ನೀಡಲು ಆಗಲಿಲ್ಲ.  ಆದರೂ ಶ್ರೀ ಮಠದ ಸಂಪರ್ಕಕ್ಕೆ ಬಂದ ನಂತರ ಗೋವುಗಳ ಸಾಂಗತ್ಯ ಮತ್ತೆ ದೊರಕಿತು. ಶ್ರೀ ಸಂಸ್ಥಾನದವರ ಗೋಸಂರಕ್ಷಣಾ ಕಾರ್ಯಗಳು ಮನಸ್ಸಿಗೆ ಬಹಳ ಆಪ್ತವಾಯಿತು. ಗೋಸ್ವರ್ಗ ನಿರ್ಮಾಣದ ನಂತರ ಅಲ್ಲಿನ ಒಂದು […]

Continue Reading

ಶ್ರೀ ಗುರುಗಳ ಪ್ರೇರಣಾ ನುಡಿಗಳೇ ಮಾಸದ ಮಾತೆಯಾಗಲು ದಾರಿದೀಪ : ಸಂಧ್ಯಾ ಕಾನತ್ತೂರು

“ಸಾವಿರದ ಸುರಭಿ ಯೋಜನೆಯಲ್ಲಿ ಭಾಗವಹಿಸಿದ್ದೆ. ಆದರೆ ಮಾಸದ ಮಾತೆಯಾಗಲು ಮಾತ್ರ ಯಾಕೋ ಧೈರ್ಯ ಮೂಡಲಿಲ್ಲ. ಸುರಭಿ ಸೇವಿಕೆಯಾಗಿ ಇತರ ಮಾಸದ ಮಾತೆಯರ ಜೊತೆ ಸಹಕರಿಸೋಣ ಎಂದು ಯೋಚಿಸಿದ್ದೆ. ಆದರೆ ಶ್ರೀ ಸಂಸ್ಥಾನದವರು ‘ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಸಂಧ್ಯಾ’ ಎಂದು ಭರವಸೆಯ ಆಶೀರ್ವಾದ ನೀಡಿದಾಗ ಅವರ ನುಡಿಗಳೇ ಗೋ ಸೇವಾ ಕಾರ್ಯಕ್ಕೆ ಶ್ರೀ ರಕ್ಷೆ ಎಂದು ಭಾವಿಸಿ ಮಾಸದ ಮಾತೆಯಾಗಿ ಸೇರಿ ಕೊಂಡೆ ” ಎಂದು ತುಂಬು ಹೃದಯದಿಂದ ನುಡಿಯುತ್ತಾರೆ ಸಂಧ್ಯಾ ಕಾನತ್ತೂರು . ಮುಳಿಯಾಲದ […]

Continue Reading

ಶ್ರೀ ಮಠದ ಸೇವೆ ಗೋಸೇವೆ ತಾಯ್ತಂದೆಯರ ಬಳುವಳಿ: ಈಶ್ವರೀ ರಾಮಕೃಷ್ಣ

ಮಾಣಿ ಮಠದ ಶ್ರೀರಾಮದೇವರ ಅರ್ಚಕರಾಗಿ ಸುಮಾರು ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಪೂಜ್ಯ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ‘ಪ್ರಾಮಾಣಿಕ ಸೇವೆಗಾಗಿ ಪುರಸ್ಕೃತಗೊಂಡ ಪಂಜಿಗುಡ್ಡೆ ನಾರಾಯಣ ಭಟ್ಟರ ಪುತ್ರಿಯಾಗಿರುವ ಕುರಿಯದ ಈಶ್ವರೀ ರಾಮಕೃಷ್ಣ ಅವರಿಗೆ ಗುರುಸೇವೆ, ಗೋಸೇವೆ ತಾಯ್ತಂದೆಯರು ತೋರಿದ ಹಾದಿ. ತಾಯಿ ಕಾವೇರಿ ಅವರು ಸಹಾ ಗೋಸಾಕಣಿಗೆಯಲ್ಲಿ ಶ್ರೀ ಸಂಸ್ಥಾನದವರಿಂದ ಸನ್ಮಾನಿಸಲ್ಪಟ್ಟವರು ಎಂಬುದು ಇವರ ಹೆಮ್ಮೆ. “ನನ್ನ ಬಾಲ್ಯವೇ ಮಾಣಿಮಠದಲ್ಲಿ. ಅರ್ಚಕರಾದ ತಂದೆಯ ಕಾರ್ಯಕ್ಕೆ ನೆರವಾಗುವ ತಾಯಿಯ ಜೊತೆಯಲ್ಲಿ ನಾವು ಸಹಾ […]

Continue Reading

ಹಸುಗಳ ಕೊರಳ ಗಂಟೆಯ ಸದ್ದೇ ಬದುಕಿನ ಚೇತನ: ದೇವಕಿ ಭಟ್ ಪನ್ನೆ

ಮನೆಯಲ್ಲಿ ಮೂವತ್ತನಾಲ್ಕು ಹಸುಗಳನ್ನು ಸಾಕುತ್ತಿರುವಾಗಲೇ ಶ್ರೀ ಗುರುಗಳ ಸಮಾಜಮುಖಿ ಕಾರ್ಯಗಳಲ್ಲಿ ಆಸಕ್ತಿ ವಹಿಸಿ ಮಹಿಳಾ ಪರಿಷತ್ ನ ಮೂಲಕ ಸೇವೆ ಸಲ್ಲಿಸಲು ಆರಂಭಿಸಿದ ದೇವಕಿ ಭಟ್ ಪನ್ನೆ ಅವರು ಇಂದು ಕೂಡಾ ಮನೆಯಲ್ಲಿ ಹಸುಗಳನ್ನು ಸಾಕುವ ಜೊತೆಗೆ ಮಠದ ಗೋ ಸಾಕಣೆಗೂ ಕೈ ಜೋಡಿಸಿ ಇತರರಿಗೆ ಮಾದರಿಯಾಗಿರುವವರು. “ಮುಂಜಾನೆ ನಾಲ್ಕು ಗಂಟೆಗೆ ಎದ್ದು ಹತ್ತು ಹದಿನಾಲ್ಕು ಹಸುಗಳನ್ನು ಕರೆದು, ಅವುಗಳಿಗೆ ಹಿಂಡಿ,ಮೇವು ನೀಡಿ, ಉಳಿದ ಮನೆಗೆಲಸಗಳನ್ನು ಪೂರೈಸಿ ಮನೆಯಿಂದ ಹೊರಡುವವಳು ನಾನು. ನಮ್ಮ ಮನೆಯಲ್ಲಿ ಗೋವುಗಳನ್ನು ಸಾಕಿ […]

Continue Reading

ಗೋ ಸಂರಕ್ಷಣೆಯೇ ಬದುಕಿನ ಗುರಿ : ನಿಧಿ ಹೆಗಡೆ

ಬಾಲ್ಯದಿಂದಲೂ ಶ್ರೀಮಠದ ನಿರಂತರ ಸಂಪರ್ಕ. ಗೋವುಗಳ ಒಡನಾಟ. ಶ್ರೀ ಸಂಸ್ಥಾನದವರ ವಿವಿಧ ಯೋಜನೆಗಳ ಸದುದ್ದೇಶದ ಅರಿವು ಇವುಗಳೇ ಚಂದಾವರ ಸೀಮೆಯ ಕುಮಟಾ ಮೂಲದ ಶ್ರೀಧರ ಹೆಗಡೆ ಕೂಜಳ್ಳಿ, ಪಾರ್ವತಿ ಹೆಗಡೆ ಇವರ ಪುತ್ರಿ ನಿಧಿ ಹೆಗಡೆಗೆ ಗೋವುಗಳ ಮೇಲೆ  ಅಕ್ಕರೆ ಮೂಡಿಸುವಲ್ಲಿ ಯಶಸ್ವಿಯಾಯಿತು. “ಗೋವುಗಳ ಮೇಲೆ ವಿಶೇಷ ಮಮತೆ ಇದೆ. ಆದರೂ ಮಾಸದ ಮಾತೆಯಾಗಿ ಸೇವೆ ಮಾಡಿ ಗುರಿ ತಲುಪುವ ಭರವಸೆ ಇರಲಿಲ್ಲ. ಇದುವರೆಗೂ ಯಾವುದೇ ವಿಚಾರಕ್ಕೂ ಇತರರಲ್ಲಿ ಹಣ ಕೇಳಿ ಅನುಭವವಿಲ್ಲದ ನನಗೆ ಈ ವಿಷಯದಲ್ಲಿ […]

Continue Reading

ಮಗನಿಂದಲೇ ಮೊದಲ ದೇಣಿಗೆ: ಶ್ವೇತಾ ಕಾಡೂರು

“ಶ್ರೀ ಗುರುಗಳ ಗೋ ಸಂರಕ್ಷಣಾ ಕಾರ್ಯದ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ಮುಂದಾದರೂ ನನ್ನ ಕಾರ್ಯ ಕೈಗೂಡುವ ಬಗ್ಗೆ ಯಾವುದೋ ಆತಂಕ ಮನದಲ್ಲಿ ಮೂಡಿತ್ತು. ಈ ವಿಚಾರವಾಗಿ ಯೋಚಿಸುತ್ತಿರುವಾಗ ಪುಟ್ಟ ಮಗ ಪ್ರಣವ ತನ್ನ ‘ಪ್ಯಾಕೆಟ್ ಮನಿ’ ಯಿಂದ ತನ್ನ ಸಂಗ್ರಹವನ್ನು ನೀಡಿ ‘ ಅಮ್ಮಾ ಗೋ ಸೇವೆಗೆ ಇದು ನನ್ನ ಕಾಣಿಕೆ’ ಎಂದು ನೀಡಿದಾಗ ಸಂತಸದಿಂದ ಕಣ್ತುಂಬಿ ಬಂತು” ಎನ್ನುತ್ತಾರೆ ಶ್ವೇತಾ ಕಾಡೂರು. ಸಂಗೀತ, ನೃತ್ಯ, ಈಜು, ಪೈಂಟಿಂಗ್,ಚಿತ್ರಕಲೆಗಳಲ್ಲಿ ಅತೀವ ಆಸಕ್ತಿ ಇರುವ ಶ್ವೇತಾ, […]

Continue Reading

ಗುರು – ಗೋ ಸೇವೆಯೇ ಬದುಕಿನ ಧನ್ಯತೆ : ವೀಣಾ ಪ್ರಭಾಕರ ಭಟ್

ಸಾಗರ ಪ್ರಾಂತ್ಯದ ಮಾತೃತ್ವಮ್ ನ ಅಧ್ಯಕ್ಷೆಯೂ, ಸಂಪನ್ಮೂಲ ಖಂಡದ ಸಂಯೋಜಕಿಯೂ ಆಗಿರುವ ವೀಣಾ ಪ್ರಭಾಕರ ಭಟ್ಟ ಅವರಿಗೆ ಮಾಸದ ಮಾತೆಯಾಗಿ ಗುರಿ ತಲುಪಿದುದಕ್ಕಿಂತಲೂ ಹೆಚ್ಚು ಸಂತಸ ಶ್ರೀ ಗುರುಗಳ ಸೇವೆಯಲ್ಲಿ ಒಂದು ಬಿಂದುವಾಗಿ ಸೇರಿದೆ ಎಂಬುದರ ಬಗ್ಗೆ. ಅಂಬಾಗಿರಿ ಮಠಕ್ಕೆ ಶ್ರೀ ಸಂಸ್ಥಾನದವರು ಭೇಟಿಯಿತ್ತ ಸಂದರ್ಭದಲ್ಲಿ ಮೊದಲ ಬಾರಿಗೆ ಮಂತ್ರಾಕ್ಷತೆ ಪಡೆದು ಕೊಂಡಾಗಲೇ ತನ್ನ ಬದುಕಿನ ಪಥ ಬದಲಾಯಿತು. ಗುರು ಚರಣ ಸೇವೆಯಿಂದ ಇಂದು ಬಾಳಿನಲ್ಲಿ ನೆಮ್ಮದಿ , ಸಂತಸ ಮನೆಮಾಡಿದೆ. ಅಂತರಂಗದಲ್ಲಿ ಬಚ್ಚಿಟ್ಟ ಕನಸುಗಳು ಸಹಾ […]

Continue Reading

ನಿರಂತರ ಮಠದ ಸಂಪರ್ಕವೇ ಗೋ ಸೇವೆಗೆ ಪ್ರೇರಣೆ: ಜ್ಯೋತಿಲಕ್ಷ್ಮಿ ಅಮೈ

“ಸುಮಾರು ಎರಡು ದಶಕಗಳಿಂದ ಶ್ರೀ ಮಠದ ನಿರಂತರ ಸಂಪರ್ಕವಿದೆ ಮಾತ್ರವಲ್ಲದೆ ಮಹಿಳಾ ಪರಿಷತ್ ಇರುವಾಗಲೇ ವಿವಿಧ ಸೇವಾ ಪ್ರಧಾನೆಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಇರುವುದರಿಂದ ಶ್ರೀ ಮಠದ ಗೋ ಸೇವಾ ಯೋಜನೆಯಾದ ಮಾತೃತ್ವಮ್ ಮೂಲಕ ಮಾಸದ ಮಾತೆಯಾಗಿ ಸ್ವಯಂ ಇಚ್ಛೆಯಿಂದ ಸೇರಿದೆ” ಎನ್ನುವ ಜ್ಯೋತಿಲಕ್ಷ್ಮಿ ಅಮೈ ಅವರು ಪ್ರಸ್ತುತ ಮಂಗಳೂರು ಮಂಡಲದ ಮಾತೃ ಪ್ರಧಾನೆಯಾಗಿದ್ದಾರೆ. ಮುದ್ರಜೆ ಗೋವಿಂದ ಭಟ್, ಪಾರ್ವತಿ ಅಮ್ಮ ದಂಪತಿಗಳ ಪುತ್ರಿಯಾಗಿರುವ ಇವರು ಕೇಪು ವಲಯದ ಅಡ್ಯನಡ್ಕ ಸಮೀಪದ ಅಮೈ ಯಲ್ಲಿರುವ ಡಾ. ಕೃಷ್ಣಮೂರ್ತಿ ಅವರನ್ನು […]

Continue Reading

ಗೋ ಪ್ರೀತಿಗೆ ಪ್ರೇರಣೆ ನಮ್ಮಪ್ಪ: ಸರಿತಾ ಪ್ರಕಾಶ್

“ಬಾಲ್ಯದಲ್ಲೇ ಗೋವಿನ ಮೇಲೆ ವಿಶೇಷ ಪ್ರೀತಿ ಮೂಡಲು ಕಾರಣ ನಮ್ಮಪ್ಪ ವೆಂಕಟ್ರಮಣ ಭಟ್, ಪ್ರತಿದಿನವೂ ಮುಂಜಾನೆ ಗೋವಿಗೆ ಒಂದು ಹಿಡಿಯಷ್ಟಾದರೂ ಮೇವು ನೀಡದೆ ಇತರ ಕಾರ್ಯಗಳತ್ತ ಗಮನ ಹರಿಸಿದವರಲ್ಲ ನಮ್ಮಪ್ಪ. ಇದುವೇ ಗೋವಿನ ಮೇಲೆ ಮಮತೆ ಮೂಡಲು ಕಾರಣ. ಮುಂದೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಗೋ ಸಂರಕ್ಷಣಾ ಕಾರ್ಯವು ಮನಸ್ಸಿಗೆ ಹೊಸ ಸ್ಪೂರ್ತಿ ನೀಡಿತು. ಇದರಿಂದ ಪ್ರೇರಣೆಗೊಂಡು ಸಮಾಜದಲ್ಲಿ ಭಾರತೀಯ ಗೋತಳಿಗಳ ಬಗ್ಗೆ ಅರಿವು ಮೂಡಿಸ ಬೇಕು, ಅವುಗಳ ಸಂರಕ್ಷಣೆಗಾಗಿ ಕಿಂಚಿತ್ ಸೇವೆ ಮಾಡಬೇಕು’ ಎಂಬ […]

Continue Reading

ಮನೆಯ ಹಸುಗಳಿಗೂ ಮುಕ್ತ ವಾತಾವರಣ ನೀಡಿದ ಮಾಸದ ಮಾತೆ: ವಿಜಯಲಕ್ಷ್ಮಿ ಕಲ್ಲಕಟ್ಟ

ಗೋಸ್ವರ್ಗಕ್ಕೆ ಹೋಗಿ ಬಂದ ಮೇಲೆ ಅಲ್ಲಿ ಹಸುಗಳಿಗೆ ನೀಡಿದ ಮುಕ್ತ ಸ್ವಾತಂತ್ರ್ಯವನ್ನು ಕಂಡು, ಮೆಚ್ಚಿ ತಮ್ಮ ಮನೆಯಲ್ಲಿರುವ ಹಸುಗಳಿಗೂ ಇಂತಹುದೇ ವಾತಾವರಣ ಕಲ್ಪಿಸಿಕೊಟ್ಟವರು ಮುಳ್ಳೇರಿಯ ಮಂಡಲದ ಪೆರಡಾಲ ವಲಯದಿಂದ ಮಾಸದ ಮಾತೆಯಾಗಿ ಗುರಿ ತಲುಪಿದ ವಿಜಯಲಕ್ಷ್ಮಿ ಕಲ್ಲಕಟ್ಟ. ಕಾಕೆಕೊಚ್ಚಿ ನಾರಾಯಣ ಭಟ್, ಹೊನ್ನಮ್ಮ ದಂಪತಿಗಳ ಪುತ್ರಿಯಾದ ಇವರಿಗೆ ಹೊಲಿಗೆ, ಕಸೂತಿ, ಕರಕುಶಲ ಕಲೆಗಳಲ್ಲಿ ಪರಿಣತಿಯಿದೆ. ಕೃಷಿ, ಹೋದೋಟ ಇಷ್ಟ ಪಡುವ ಅವರ ಮನೆಯ ಮುಂದೆ ಸುಂದರವಾದ ಹೂಗಳು, ತಾವರೆಕೊಳ ಜನಮನ ಸೆಳೆಯುತ್ತಿರುವುದು ಇವರ ಆಸಕ್ತಿಗೆ ಸಾಕ್ಷಿಯಾಗಿದೆ. ಸುಮಾರು […]

Continue Reading

ಗೋಮಾತೆಯ ಶ್ರೀಮಾತೆಯಾಗಿ ಪುಟಾಣಿ ಶ್ರೀರಕ್ಷಾ

ಈಕೆ ಇನ್ನೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ. ಗೆಳೆಯ ಗೆಳತಿಯರೊಡನೆ ಸ್ವಚ್ಛಂದವಾಗಿ ಆಟವಾಡುವ ಮುಗ್ಧ ಬಾಲ್ಯ. ಮನೆಯವರ ಜೊತೆಗೆ, ಮುದ್ದು ತಂಗಿಯ ಜೊತೆಗೆ ಬಾಲ್ಯ ಸಹಜವಾದ ತುಂಟಾಟವಾಡುವ ಸಮಯ. ಆದರೂ ಆಕೆ ಇಂದು ಹೊತ್ತುಕೊಂಡಿರುವ ಮಹತ್ತರ ಜವಾಬ್ದಾರಿ ನಿಜಕ್ಕೂ ಅದ್ಬುತ, ಅನುಕರಣೀಯ. ಮಾಸದ ಮಾತೆಯಾಗಿ ಸೇವೆ ಸಲ್ಲಿಸಿ ಸ್ವಯಂ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಎರಡು ವರ್ಷಗಳಿಗೆ ಒಂದು ಹಸುವಿನ ನಿರ್ವಹಣಾ ವೆಚ್ಚವನ್ನು ಭರಿಸುವ ಮೂಲಕ ಸಮಾಜದ ಎಲ್ಲರಿಗೂ ಮಾದರಿಯಾಗಿದ್ದಾಳೆ ಈ ಬಾಲೆ. ಮುಳ್ಳೇರಿಯ ಮಂಡಲದ […]

Continue Reading