ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗೈಯುತ್ತಿರುವ ಶ್ರೀರಂಜಿನಿ.

  ದಿನೇದಿನೇ ಸಂಗೀತದ ಶಿಖರ ಸಾಧನೆಯ ಮೆಟ್ಟಿಲೇರುತ್ತಿರುವ ಶ್ರೀರಂಜಿನಿ , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿದಾನಂದ ಮತ್ತು ಗಾಯತ್ರಿ ಹೆಚ್.ಸಿ ಅವರ ಸುಪುತ್ರಿ . ಬಾಲ್ಯದಿಂದಲೇ ಸಂಗೀತದ ಕಡೆ ತನ್ನ ಚಿತ್ತವನಿತ್ತು ಅಜ್ಜಿ, ತಂದೆ ಮತ್ತು ತಾಯಿಯಿಂದ ಸಂಗೀತ ಸಂಸ್ಕಾರವನ್ನು ಪಡೆದು ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಶಾಲಾ ಮಟ್ಟದ ಹಾಡು, ನೃತ್ಯ, ಅಭಿನಯ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ನಂತರ ವಿದುಷಿ ವಸುಧಾ ಶರ್ಮ ಸಾಗರ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ […]

Continue Reading

ಅಪ್ಪಟ್ಟ ಗೋಪ್ರೇಮಿ ಶ್ರೀರಕ್ಷಾ ಎಮ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗಣೇಶ್ ಪ್ರಸಾದ್ ಎಮ್ ಮತ್ತು ವಿಜಯಲಕ್ಷ್ಮೀ ದಂಪತಿಯ ಸುಪುತ್ರಿ ಶ್ರೀರಕ್ಷಾ ಎಮ್ ಅಪ್ಪಟ್ಟ ಗೋಪ್ರೇಮಿ. 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಪ್ರತಿಭಾ ಕಾರಾಂಜಿಯ ರಂಗೋಲಿ ಸ್ಪರ್ಧೆಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಶ್ರೀರಕ್ಷಾ 6 ನೇ ತರಗತಿಯಲ್ಲಿ BYJUS ನವರು ಏರ್ಪಡಿಸಿದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಹಾಗೇ ಅದೇ ವರ್ಷ LIDO LEARNING ನವರು ಆಯೋಜಿಸಿದಂತಹ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದು SMILE FOUNDATION ಅವರಿಂದ certificate […]

Continue Reading

ಮಲೆನಾಡಿನ ರಾಷ್ಟೀಯ ಚೆಸ್ ಆಟಗಾರ್ತಿ ಮನಸ್ವಿನಿ ಆರ್

ಚೆಸ್ ನಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಸಾಗರದ ಮನಸ್ವಿನಿ ಮಲೆನಾಡಿನ ಶಿವಮೊಗ್ಗ ಜೆಲ್ಲೆಯ ಸಾಗರ ತಾಲೂಕಿನ ರಾಘವೇಂದ್ರ ಎಮ್. ಹೆಗಡೆ ಮತ್ತು ಪ್ರಮೋದ ಆರ್ ದಂಪತಿಯ ಸುಪುತ್ರಿ. ತನ್ನ ಏಳನೇ ತರಗತಿಯಲ್ಲಿ ಚೆಸ್ ಆಟಕ್ಕೆ ಪಾದಾರ್ಪಣೆ ಮಾಡಿದ ಇವರು ಹಿಂದುರುಗಿ ನೋಡದೆ ಯಶಸ್ಸಿನ ಹಾದಿಯತ್ತ ಸಾಗುತ್ತಿದ್ದಾರೆ ಎನ್ನುವುದು ಸಂತಸದ ವಿಷಯ. ಮೊದಲು ಚೆಸ್ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಮನಸ್ವಿನಿ ನಂತರ ಸತತವಾಗಿ 3 […]

Continue Reading

ಸಂಗೀತ ಮತ್ತು ಯಕ್ಷಗಾನ – ಸಾಧನೆಯ ಹಾದಿಯಲ್ಲಿ ಯುವ ಕಲಾವಿದೆ ನೇಹಾ

  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರದ ಸುರೇಶ ಜೆ ಭಟ್ಟ ಮತ್ತು ಮಮತಾ ಸುರೇಶ ಭಟ್ಟರವರ ಸುಪುತ್ರಿ ನೇಹಾ ಸುರೇಶ ಭಟ್ಟ ಗಾಯನ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ. ವಿವಿಧ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ನೇಹಾ ಭಟ್ಟ ಒಬ್ಬ ಅಪ್ಪಟ ಪ್ರತಿಭಾವಂತೆ. ಎಳೆಯ ವಯಸ್ಸಿನಿಂದಲೇ ಅಂದರೆ 2ನೇ ತರಗತಿಯಿಂದ 7ನೇ ತರಗತಿಯವರಗೆ ನಿರಂತರವಾಗಿ ಪ್ರತಿವರ್ಷವೂ ಪ್ರತಿಭಾ ಕಾರಂಜಿಯಲ್ಲಿ ಅಭಿನಯಗೀತೆ, ಕನ್ನಡ ಕಂಠಪಾಠ, ಲಘುಸಂಗೀತ, ಜಾನಪದ ನೃತ್ಯ, ದೇಶಭಕ್ತಿ ಗೀತೆ ಹೀಗೆ ವಿವಿಧ […]

Continue Reading

ಬಹುಮುಖ ಪ್ರತಿಭೆ ದೇವಿಕಾ

  ಯಕ್ಷಗಾನ, ಭರತನಾಟ್ಯ, ಸಂಗೀತ,ಓದು ಒಂದಾ ಎರಡಾ ಹೆಚ್ಚು ಕಡಿಮೆ ಎಲ್ಲಾ ಪ್ರತಿಭೆಗಳನ್ನು ತನ್ನದಾಗಿಸಿಕೊಂಡ ಬಹುಮುಖ ಪ್ರತಿಭೆ ದೇವಿಕಾಳ ಪರಿಚಯ ಇದೋ ನಿಮ್ಮ ಮುಂದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಸಮೀಪದ ಕುರಿಯಾಜೆ ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮಿ ಯವರ ಸುಪುತ್ರಿ ದೇವಿಕಾ ಕುರಿಯಾಜೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ೨೦೧೮-೧೯ನೇ ಸಾಲಿನ ಇಂಗ್ಲೀಷ್ ಕಿರುನಾಟಕದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಇವರು ಹತ್ತನೇ ತರಗತಿ […]

Continue Reading

ರೋಲರ್ ಸ್ಕೇಟಿಂಗ್ ಹಾಕಿಯಲ್ಲಿ ಹತ್ತನೇ ವಯಸ್ಸಿನಲ್ಲೇ ಚಿನ್ನದ ಪದಕ ಗೆದ್ದ-ನಮನ್

  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಸರಾಂತ ಯಕ್ಷಗಾನ ಮನೆತನದಲ್ಲಿ ಜನಿಸಿದ ನಮನ್ ಯಕ್ಷಗಾನ ಕಲಾವಿದ ಹಾಗೂ ಕಾರ್ಯಕ್ರಮ ನಿರೂಪಕರಾದ ಶಾಂತರಾಮ ಕೊಂಡದಕುಳಿ ಮತ್ತು ಸಂಧ್ಯಾರವರ ಸುಪುತ್ರ. ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ನಮನ್ ಯಲ್ಲಾಪುರದ ಪ್ರಸಿದ್ಧ ಸಂಕಲ್ಪ ಉತ್ಸವದಲ್ಲಿ ತನ್ನ ೫ನೇ ವಯಸ್ಸಿನಲ್ಲಿ ಅಜ್ಜಿಯ ಪಾತ್ರ ಮಾಡಿ ಅಲ್ಲಿ ನೆರೆದಿರುವಂತಹ ಅತಿಥಿ ಮತ್ತು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತನಾಗಿ ಜಿಲ್ಲಾ ಮಟ್ಟದ ಕಥೆ ಸ್ಪರ್ಧೆಯಲ್ಲಿ ಭಾಗವಹಿಸಿ […]

Continue Reading

ಸರ್ವರಂಗದಲ್ಲಿಯೂ ಸಾಮರ್ಥ್ಯ ಹೊಂದಿರುವ ಹೇಮಸ್ವಾತಿ

  ಸಂಗೀತ, ಭರತನಾಟ್ಯ, ಶಿಕ್ಷಣ,ಭಾಗವತಿಕೆ, ಯಕ್ಷಗಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶೇಷ ಪ್ರತಿಭೆ ಹೇಮಸ್ವಾತಿ ಕುರಿಯಾಜೆ ಈ ವಾರದ ಅಂಕುರ ಸಾಧಕಿ. ಉದಯಶಂಕರ್ ಭಟ್ ಮತ್ತು ವಸಂತ ಲಕ್ಷ್ಮೀಯವರ ಸುಪುತ್ರಿ ಹೇಮಸ್ವಾತಿ ಹಲವು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈಯ್ಯುತ್ತಿದ್ದಾರೆ..ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ೨೦೧೫ರ ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಇವರು ೨೦೧೭-೧೮ರಲ್ಲಿ ಒಂಬತ್ತನೇ ತರಗತಿಯಿರುವಾಗ ರಾಜ್ಯ ಮಟ್ಟದ ಇಂಗ್ಲೀಷ್ ಕಿರುನಾಟಕದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹತ್ತನೇ ತರಗತಿ ಯಲ್ಲಿ ಜಿಲ್ಲಾ ಮಟ್ಟದ ಏಕವ್ಯಕ್ತಿ ಯಕ್ಷಗಾನದಲ್ಲಿ ಪ್ರಥಮ […]

Continue Reading

ಕುಂಚದಲ್ಲಿ ಅರಳುತ್ತಿದೆ ಪುಟ್ಟ ಹುಡುಗಿಯ ಗೋಪ್ರೇಮ!

  ಚಿತ್ರಕಲೆಯಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಇಡುತ್ತಿರುವ ಪ್ರತಿಭೆ ಶ್ರೀಲಕ್ಷ್ಮೀ. ಈಕೆ ಕಾಸರಗೋಡು ಜಿಲ್ಲೆಯ ಕಾಸರಗೋಡು ತಾಲೂಕಿನ ಚಂದ್ರಗಿರಿಯ ಗೋಪಾಲಕೃಷ್ಣ ಭಟ್ ಮತ್ತು ಸೌಮ್ಯಪ್ರಭಾ ರವರ ಸುಪುತ್ರಿ ಕಲಾ ಪ್ರಕಾರಗಳಲ್ಲಿ ಚಿತ್ರಕಲೆಯು ಇತರ ಪ್ರದರ್ಶನ ಕಲೆಗಳಿಗಿಂತ ತುಸು ಭಿನ್ನವಾದುದು. ಕಲೆಯೆಂಬುದು ಸುಲಭವಾಗಿ ಎಲ್ಲರಿಗೂ ಒದಗುವಂತದಲ್ಲ. ಅಂತಹ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವಂತಹ ಇದೀಗ ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲ ಪ್ರತಿಭೆ ಶ್ರೀಲಕ್ಷ್ಮೀ. _ಲಾಕ್ಡೌನ್ ಸಮಯದ ಸದುಪಯೋಗ_ ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಶ್ರೀಲಕ್ಷ್ಮೀ ಪ್ರತಿ […]

Continue Reading

ನೃತ್ಯ‌ಪ್ರಕಾರಗಳಲ್ಲಿ ನಿರಂತರ ಸಾಧನೆಗೈಯ್ಯುತ್ತಿರುವ ಬೆಂಗಳೂರಿನ ಪ್ರಜ್ಞಾ ಪಿ. ಶರ್ಮ

  ಬೆಂಗಳೂರು ಜಿಲ್ಲೆಯ ರಾಜಮಲ್ಲೇಶ್ವರಂ ವಲಯದ ಪ್ರಸನ್ನಕುಮಾರ್ ಮತ್ತು ಪ್ರಸನ್ನಕುಮಾರಿ ಅವರ ಸುಪುತ್ರಿ ಪ್ರಜ್ಞಾ ಪಿ.ಶರ್ಮ. ಕೂಚಿಪುಡಿ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಪ್ರಜ್ಞಾ ಪಿ.ಶರ್ಮ. ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯವನ್ನು ಎಳೆಯವಯಸ್ಸಿನಿಂದಲೇ ಅಂದರೆ ತನ್ನ ೯ ನೇ ವಯಸ್ಸಿನಿಂದಲೇ ಗುರುಗಳಾದ ವಿದುಷಿ ಅರ್ಚನಾ ಪುಣ್ಯೇಶ್ ರವರ ಬಳಿ ನಿರಂತರ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆಯ ಮೆಟ್ಟಿಲೇರುತ್ತಿದ್ದಾರೆ. ೨೦೧೯ರಲ್ಲಿ ಭರತನಾಟ್ಯ ಜೂನಿಯರ್ ೯೩% ಹಾಗೂ ಸೀನಿಯರ್ ೨೦೨೦ರಲ್ಲಿ ೮೩% , ೨೦೧೯ರಲ್ಲಿ ಕೂಚಿಪುಡಿ […]

Continue Reading

ಬಾಲ ಸಂಶೋಧಕಿ ನೇಹಾ ಭಟ್

ವಯಸ್ಸು ಇನ್ನು ಕಿರಿಯದು. ಆದರೆ ಸಾಧನೆ ಹಿರಿಯದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುರಳೀಧರ ಕೆ. ಮತ್ತು ಮೀರಾ ಮುರಳಿ ಇವರ ಸುಪುತ್ರಿ ನೇಹಾ ಭಟ್ ಬಾಲ ಸಂಶೋಧಕಿಯಾಗಿ ಭವ್ಯ ಭವಿಷ್ಯದ ಭರವಸೆ ಮೂಡಿಸುತ್ತಿದ್ದಾರೆ . ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಯಲ್ಲಿ ದ್ವಿತೀಯ ಸ್ಥಾನ ಪಡೆದು, 9ನೇ ತರಗತಿಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಅದೇ ವರ್ಷ INSEF ಪ್ರಾಂತೀಯ […]

Continue Reading

ಚದುರಂಗ ಚತುರ ಸಾತ್ವಿಕ್ ಶಿವಾನಂದ.

  ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಚೆಸ್ ಆಟಕ್ಕೆ ‌ಪಾದಾರ್ಪಣೆ ಮಾಡಿದ ಈ ಬಾಲಕ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಪಾಟಾಜೆಯ ಶ್ರೀರಾಮ – ಶಿಲ್ಪ ದಂಪತಿಗಳ ಪುತ್ರನಾದ ಸಾತ್ವಿಕ್ ಶಿವಾನಂದ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2015 ನೇ ಜೂನ್ ತಿಂಗಳಲ್ಲಿ ವಿಧ್ಯಾಭ್ಯಾಸದ ಜೊತೆಗೆ ಚೆಸ್ ಆಡುವುದನ್ನು ಪ್ರಾರಂಭಿಸಿದ ಇವರು ಪುತ್ತೂರಿನಲ್ಲಿ ‘ಜೀನಿಯಸ್ ಚೆಸ್ ಸ್ಕೂಲ್’ನಲ್ಲಿ ಸತ್ಯಪ್ರಸಾದ್ ಕೋಟೆ ಹಾಗೂ ಆಶಾಕಾವೇರಿ ಅವರಿಂದ ತರಬೇತಿ ಪಡೆದುಕೊಳ್ಳುತ್ತಾ 2016ರಲ್ಲಿ […]

Continue Reading

ಯುವ ಬರಹಗಾರ್ತಿ ಪಂಚಮಿ

  ಜ್ಞಾನವೃದ್ಧಿಗೆ ಓದುವುದು ಹೇಗೆ ಪ್ರಮುಖ ಕಾರಣವೋ ಹಾಗೆ ಬರವಣಿಗೆಯೂ ಕೂಡ ಬಹಳ ಮುಖ್ಯ. ಅಂತಹ ಬರವಣಿಗೆ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿದ್ದಾರೆ ಪಂಚಮಿ. ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕಿನ ಬಾಕಿಲಪದವಿನ ವೆಂಕಟ್ರಮಣ ಭಟ್ ಮತ್ತು ಗುಣಶ್ರೀ ದಂಪತಿಯ ಸುಪುತ್ರಿ ಪಂಚಮಿ ಯುವಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಮಟ್ಟದ ಕವಿಗೋಷ್ಠಿಗೆ ಅಧ್ಯಕ್ಷಯಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಎಳೆಯ ವಯಸ್ಸಿನಲ್ಲೇ ಅಂದರೆ 10 ನೇ ತರಗತಿ ಇರುವಾಗಲೇ “ಆರಾಧನೆ ” ಎಂಬ ಇವರ ಕವನ ಸಂಕಲನ ಬಿಡುಗಡೆಗೊಂಡಿದ್ದು, ಧರ್ಮಭಾರತೀಯಲ್ಲಿ […]

Continue Reading

ಮಿಂಚಿನ ವೇಗದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ವಿದುಷಿ ವಾಣಿಶ್ರೀ ವಿ.

  ಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕರಗಳಲ್ಲಿ ಒಂದು. ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯಕಲೆ…ಭರತನಾಟ್ಯದ ವೈಭವವನ್ನು ಬಣ್ಣಿಸಲು ಅಸಾಧ್ಯ.ಅಂತಹ ಭರತನಾಟ್ಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ ವಿದುಷಿ ವಾಣಿಶ್ರೀ ವಿ. ದಕ್ಷಿಣ ಕನ್ನಡ ಜಿಲ್ಲೆಯ ಶಂಕರನಾರಾಯಣಭಟ್ ಮತ್ತು ಮಮತಾ ದಂಪತಿಗಳ ಪುತ್ರಿ ನಾಲ್ಕು ವರ್ಷದ ಆ ಎಳೆಯ ವಯಸ್ಸಿನಲ್ಲೇ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕದ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾ ಮಣಿ ಶೇಖರ್ ಹಾಗೂ‌ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಇವರ ಶಿಷ್ಯ ವೃತ್ತಿ […]

Continue Reading

ಸಂಗೀತ ಮತ್ತು ಯೋಗ ಕ್ಷೇತ್ರದ ಅರಳು ಪ್ರತಿಭೆ – ಸಾನ್ವಿ ಜಿ. ಭಟ್

  ಯೋಗ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ಬಾಲಪ್ರತಿಭೆ ಸಾನ್ವಿ ಜಿ.ಭಟ್. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಎಳೆಯ ವಯಸ್ಸಿನಲ್ಲೇ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಪುಟಾಣಿ ಪೋರಿ ಈಕೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾರೇಕೊಪ್ಪ ಎಂಬ ಊರಿನ ಗಣೇಶ ಎಚ್.ಎನ್.ಮತ್ತು ಚಂದ್ರಿಕಾ ಕೆ.ಎನ್. ದಂಪತಿಗಳ ಸುಪುತ್ರಿಯಾಗಿರುವ ಸಾನ್ವಿ ಜಿ.ಭಟ್ ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈಯ್ಯುತ್ತಿರುವುದು ಸಂತಸದ ವಿಷಯ. ವಿದುಷಿ ವಸುಧಾ ಶರ್ಮ ಇವರಿಂದ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಸಾನ್ವಿ ಹಲವಾರು ಸಂಗೀತ ಸ್ಪರ್ಧೆಯಲ್ಲಿ […]

Continue Reading

ಬರವಣಿಗೆ ಕ್ಷೇತ್ರದಲ್ಲೊಂದು ಭರವಸೆಯ ಬೆಳಕು – ಶೋಭಿತ್

ಬರವಣೆಗೆ ಮೂಲಕ ಛಾಪು ಮೂಡಿಸುತ್ತಿರುವ ಎಂ. ಎಸ್ ಶೋಭಿತ್. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೂಡ್ಕಣಿಯ ಸತೀಶ್ ಈಶ್ವರ ಹೆಗಡೆ ಮತ್ತು ತಾಯಿ ಸುನೀತಾ ಸತೀಶ್ ಹೆಗಡೆ ದಂಪತಿಯ ಸುಪುತ್ರರಾಗಿರುವ ಇವರು ಯುವ ಬರಹಗರನಾಗಿ ಹೊರಹೊಮ್ಮಿದ್ದಾರೆ. ಎಳೆಯ ವಯಸ್ಸಿನಿಂದಲೇ ಬರವಣಿಗೆ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಶೋಭಿತ್ 2018 ಮಾರ್ಚ್ 19 ರಂದು ವಿಜಯವಾಣಿ ದಿನಪತ್ರಿಕೆಯ ‘ಸಂಸ್ಕೃತಿ ‘ಪುರವಣೆಯಲ್ಲಿ ಪ್ರಕಟವಾದ “ಕರುಣೆಯ ಕಡಲು ಶ್ರೀಧರ ಸ್ವಾಮಿಗಳು “ಲೇಖನದ ಮೂಲಕ ಬರವಣಿಗೆಯ ಮೊದಲ ಹೆಜ್ಜೆ ಗುರುತು ಮೂಡಿಸಿದರು. […]

Continue Reading

ಬಹುಮುಖ ಪ್ರತಿಭೆ ಪದ್ಮಿನಿ ಸಿ.ಆರ್.

ಸಂಗೀತ, ಭರತನಾಟ್ಯ, ಚಿತ್ರಕಲೆ, ಶಿಕ್ಷಣ… ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿರುವ ವಿಶಿಷ್ಟ ಪ್ರತಿಭೆ ಪದ್ಮಿನಿ ಸಿ.ಆರ್.ಬಾಳಿಲ ಸಮೀಪದ ನಿಡ್ಮಾರಿನ ಸಿ.ವಿ.ರಾಜಾರಾಮ ಮತ್ತು ರತ್ನಕುಮಾರಿ ದಂಪತಿಯ ಪುತ್ರಿ ಪದ್ಮಿನಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಾ ಗಮನಸೆಳೆದಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಜ್ಯೂನಿಯರ್ ಪರೀಕ್ಷೆಯಲ್ಲಿ 98% ಅಂಕ ಗಳಿಸಿರುವ ಈಕೆ, ವಿ.ಶಂಕರಿಮೂರ್ತಿ ಬಾಳಿಲ ಅವರ ಶಿಷ್ಯೆ. ಶಾಸ್ತ್ರೀಯ ಸಂಗೀತದ ಜೊತೆಗೆ ಗಾನಸಿರಿ ಡಾ.ಕಿರಣಕುಮಾರ್ ಮತ್ತು ಬಾಬಣ್ಣ ಪುತ್ತೂರು ಇವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.ಭರತನಾಟ್ಯದಲ್ಲಿಯೂ ಆಸಕ್ತಿ ಹೊಂದಿರುವ ಪದ್ಮಿನಿ, […]

Continue Reading

ಅಪರೂಪದ ಮಹಿಳಾ ಕ್ರೀಡಾ ಸಾಧಕಿ ದಿವ್ಯಭಾರತಿ

ಕಾಸರಗೋಡು ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಒಳಗೊಂಡ ವಿಶಿಷ್ಟ ನಾಡು. ಚಿಕ್ಕವಯಸ್ಸಿನಲ್ಲೇ ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರ ಪೈಕಿ ದಿವ್ಯಭಾರತಿ ಕೆ. ಕೂಡಾ ಒಬ್ಬರು. ಕಾಸರಗೋಡು ಜಿಲ್ಲೆಯ ಕುರುಡುಪದವು ಸಮೀಪದ ‌ಕುರಿಯ ಗ್ರಾಮದ ವಿಜಯ ವಿಠಲ ಕೆ. ಮತ್ತು ಸಲಿಲ ಕುಮಾರಿ ವಿ.ಕೆ. ದಂಪತಿಯ ಪುತ್ರಿ ದಿವ್ಯಭಾರತಿ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಕುರುಡುಪದವು AUPS  ಶಾಲೆಯಲ್ಲಿ ಶೈಕ್ಷಣಿಕ ವ್ಯಾಸಂಗವನ್ನು ಪ್ರಾರಂಭಿಸಿದ ಇವರು, 6 ನೇ ತರಗತಿಯಿಂದನೇ ಕೇರಳ ರಾಜ್ಯದ ವಲಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ […]

Continue Reading

ಬಾಲ ಯಕ್ಷಗಾನ ಕಲಾವಿದ ವಿನೀತ್ ಕಶ್ಯಪ್

ಚಿಕ್ಕವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗಮನಾರ್ಹ ಸಾಧನೆಗೈಯ್ಯುತ್ತಿರುವ ಪ್ರತಿಭೆ ವಿನೀತ್ ಕಶ್ಯಪ್. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗುಂಜಗೋಡಿನ ಗಣಪತಿ ಹೆಗಡೆ ಮತ್ತು ಪ್ರವೀಣಾ ಹೆಗಡೆ ದಂಪತಿಯ ಪುತ್ರ ವಿನೀತ್ ಕಶ್ಯಪ್ ಯಕ್ಷಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವತ್ತ ದಾಪುಗಾಲು ಹಾಕಿದ್ದಾನೆ.ಒಂಬತ್ತು ವರ್ಷದವನಿದ್ದಾಗಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಈತ, ಪ್ರಾರಂಭದಲ್ಲಿ ಯಕ್ಷಗುರು ತೃಯಂಬಕ ಹೆಗಡೆ ಇಡುವಾಣಿ ಅವರಲ್ಲಿ ಅಭ್ಯಾಸ ಮಾಡಿ, ಬಳಿಕ ತಂದೆಯ ಬಳಿಯಲ್ಲೇ ಅಧ್ಯಯನ ಮುಂದುವರಿಸಿದ್ದಾನೆ. ಕೃಷ್ಣ, ರುಕ್ಮಾಂಗ, ವಿಭೀಷಣ, ಲೋಹಿತಾಶ್ವ, ಅಭಿಮನ್ಯು, ಸೀತೆ, ರುಕ್ಮಿಣಿ… ಹೀಗೆ ವಿವಿಧ […]

Continue Reading

ಸರಾಗವಾಗಿ ಚಂಡೆ, ಮದ್ದಲೆ ಬಾರಿಸುವ 9 ರ ಪೋರ!

“ನಮ್ಮದು ಯಕ್ಷಗಾನ ಪರಂಪರೆ ಹೊಂದಿರುವ ಕುಟುಂಬ. ಭಾಗವತರು, ವೇಷಧಾರಿಗಳು, ಮದ್ದಳೆ ವಾದಕರು ಹೀಗೆ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿದ್ದ ಕುಟುಂಬ ನಮ್ಮದು. ನನ್ನ ತಂದೆ ಕೂಡಾ ಪ್ರಸಿದ್ಧ ಛಾಯಾಗ್ರಾಹಕ ಮತ್ತು ಮದ್ದಳೆ ವಾದಕ. ಹೀಗಾಗಿ ನಮ್ಮ ಮನೆಗೆ ಆಗಾಗ ಭಾಗವತರು, ಮದ್ದಳೆ ವಾದಕರು ಭೇಟಿ ನೀಡುವುದು ಅದೇ ಸಂದರ್ಭದಲ್ಲಿ ಭಾಗವತಿಕೆ, ಮದ್ದಳೆ ವಾದನ ನಡೆಯುತ್ತಿರುತ್ತದೆ. ಹೀಗೆ ಸದಾ ಯಕ್ಷಗಾನದ ವಾತಾವರಣದಲ್ಲಿ ನೆಲೆಸಿರುವುದರಿಂದ ಯಕ್ಷಗಾನದ ಚಂಡೆ, ಮದ್ದಳೆ ವಾದನ ಕಲಿಯಲು ಸ್ಪೂರ್ತಿ ಸಿಕ್ಕಿತು”. ಹೀಗೆ ಮಾತನ್ನು ಆರಂಭಿಸಿದವರು ಬಾಲ […]

Continue Reading

ಯಶಸ್ಸಿನ ಹಾದಿಯತ್ತ ಯುವ ಟೆಕ್ ಉದ್ಯಮಿ ಶ್ರೀನಿಧಿ

  ವಿಜ್ಞಾನ ತಂತ್ರಜ್ಞಾನವೆಂದರೆ ಇವರಿಗೆ ಪ್ರಾಥಮಿಕ ಶಾಲಾ ದಿನಗಳಲ್ಲೇ ಅಚ್ಚುಮೆಚ್ಚು. ಅಂದಿನಿಂದಲೇ ತಂತ್ರಜ್ಞಾನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತವಕದಿಂದ ಅಂತರ್ಜಾಲದ ಮೂಲಕ ಮಾಹಿತಿಯನ್ನು ಅನ್ವೇಷಿಸಲು ಆರಂಭಿಸಿದರು. ನಿರಂತರ ಪ್ರಯತ್ನ, ತಾಳ್ಮೆ, ಪರಿಶ್ರಮದಿಂದಾಗಿ 8ನೇ ತರಗತಿಯಲ್ಲಿರುವಾಗಲೇ ಯುವ ಟೆಕ್ ಉದ್ಯಮಿ ಎಂದು ಗುರುತಿಸಿಕೊಂಡರು! ಹೌದು. ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕಡ ರವಿಶಂಕರ್ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರ ಶ್ರೀನಿಧಿ ಆರ್.ಎಸ್. ಇಂದು ಯುವ ಟೆಕ್ ಉದ್ಯಮಿಯಾಗಿ ಗುರುತಿಸಿಕೊಂಡು ಗಮನಸೆಳೆಯುತ್ತಿದ್ದಾರೆ. 8ನೇ ತರಗತಿಯಲ್ಲಿರುವಾಗ ಸ್ನೇಹಿತರೊಂದಿಗೆ ವಿವಿಧ ಮಾಹಿತಿಯನ್ನು ಕಲೆ ಹಾಕುತ್ತಿದ್ದ ಶ್ರೀನಿಧಿ […]

Continue Reading