” ಶ್ರೀ ಗುರುಕೃಪೆಯಿಂದ ನಿರಂತರ ಸೇವಾಭಾಗ್ಯ ದೊರಕಿದೆ ” : ಪ್ರತಿಮಾ ಭಟ್ಟ

  ” ಎರಡೂವರೆ ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ತವರುಮನೆಯಲ್ಲಿರುವಾಗಲೇ ಶ್ರೀಮಠದ ಸಂಪರ್ಕವಿತ್ತು. ಈಗ ಸೇವಾ ಭಾಗ್ಯವೂ ದೊರಕಿದೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ ” ಎಂಬ ನುಡಿಗಳು ಮೂಲತಃ ಸಿದ್ಧಾಪುರ ಮಂಡಲದವರಾದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲ , ಬನಶಂಕರಿ ವಲಯ ನಿವಾಸಿಗಳಾಗಿರುವ ಗುಡ್ಡೆಕಣ ರಾಧಾಕೃಷ್ಣ ಹೆಗಡೆ ಅವರ ಪತ್ನಿ ಪ್ರತಿಮಾ ಭಟ್ ಅವರದ್ದು. ಸಿದ್ಧಾಪುರ ತಾಲೂಕು ಮುಸವಳ್ಳಿ ಗ್ರಾಮದ ಕಲಗಾರು ಮಹಾಬಲೇಶ್ವರ ಭಟ್ , ಸಾವಿತ್ರಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ […]

Continue Reading

” ಗೋಸೇವೆಗೆ ಪ್ರೇರಣೆ ನನ್ನ ಅತ್ತೆ ” : ಶ್ವೇತಾ ಗಿರೀಶ್, ಕಲ್ಲಕಟ್ಟ

” ನಮ್ಮ ಮನೆಯಲ್ಲಿ ಅನೇಕ ಗೋವುಗಳಿವೆ. ದೇಶೀ ಗೋತಳಿಗಳ ಮಹತ್ವವನ್ನು ಸರಿಯಾಗಿ ತಿಳಿಸಿದವರು ನಮ್ಮ ಅತ್ತೆ. ಗೋಜನ್ಯ ಉತ್ಪನ್ನಗಳ ಮಹತ್ವವನ್ನು ತಿಳಿಸಿ , ಕಾಮಧೇನುವಿನ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ನನ್ನ ಅತ್ತೆಯವರೇ ಪ್ರೇರಣೆ ” ಎಂದವರು ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಶ್ವೇತಾ ಗಿರೀಶ್ ಕಲ್ಲಕಟ್ಟ. ಮೂಲತಃ ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಕಲ್ಲಕಟ್ಟ ನಿವಾಸಿಗಳಾಗಿರುವ ಗೋಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವಿಜಯಲಕ್ಷ್ಮಿ ಕಲ್ಲಕಟ್ಟ ಹಾಗೂ ನಾರಾಯಣ […]

Continue Reading

” ಗೋವು ಬದುಕಿನ ಜೀವನಾಡಿ ” : ಪಾರ್ವತಿ ಸುಬ್ಬರಾವ್

  ” ಹಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಗೋ ಉತ್ಪನ್ನಗಳ ಬಳಕೆಯಿಲ್ಲದೆ ಮಾನವನಿಗೆ ಬದುಕಲು ಸಾಧ್ಯವಿಲ್ಲ. ಗೋವಿಲ್ಲದಿದ್ದರೆ ಆರೋಗ್ಯವೂ ಇಲ್ಲ. ನಮ್ಮ ಬದುಕಿನ ಜೀವನಾಡಿಯೇ ಗೋವು. ನಮ್ಮ ಪೂಜ್ಯ ಗುರುಗಳ ವಿಶೇಷ ಸಂಕಲ್ಪವು ಇಂದು ಜನಮಾನಸವನ್ನು ತಲುಪಿ ಜನತೆ ಗೋಮಾತೆಯ ಬಗ್ಗೆ ಪೂಜ್ಯ ಭಾವನೆಯನ್ನು ತಾಳುತ್ತಿದೆ. ಜನರು ಒಳಗಣ್ಣು ತೆರೆದು ಗೋಮಾತೆಯ ಸೇವೆಗೆ ಕೈ ಜೋಡಿಸಲಾರಂಭಿಸಿದ್ದಾರೆ ” ಈ ನುಡಿಗಳು ಸಾಗರ ಮಂಡಲದ ಬೋಳುಗೋಡು ವಲಯದ ಆನೆಗುಳಿ ಸುಬ್ಬರಾವ್ ಅವರ ಪತ್ನಿ ಪಾರ್ವತಿಯವರದ್ದು. ಸಿದ್ದಾಪುರದ ಸಾತನಕೇರಿಯ […]

Continue Reading

” ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಗೊಂದಲ ನಿವಾರಣೆ ” : ತೇಜಸ್ವಿನಿ ಕೆ.ಎನ್ ಬೆಂಗಳೂರು

  ” ಮದುವೆಗೂ ಮೊದಲು ಶ್ರೀಮಠದ ಸಂಪರ್ಕ ದೊರಕಿತ್ತು. ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಶ್ರೀಮಠಕ್ಕೆ ಹೋಗುತ್ತಿದ್ದೆ. ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಅನೇಕ ಗೊಂದಲಗಳು ನಿವಾರಣೆಯಾಗಿವೆ. ಜೀವನದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೇವಲ ಪ್ರಾರ್ಥನೆಯಿಂದಲೇ ಪರಿಹಾರ ದೊರಕಿದೆ. ಮದುವೆಯ ನಂತರ ಬೆಂಗಳೂರಿಗೆ ಬಂದ ಮೇಲೆ ಶ್ರೀಮಠದ ಸಂಪರ್ಕ ಹೆಚ್ಚಾಯಿತು. ಮಠದ ವಿವಿಧ ಯೋಜನೆಗಳಿಗೂ ಕೈ ಜೋಡಿಸುವ ಅವಕಾಶ ದೊರಕಿತು ” ಎನ್ನುವವರು ದಕ್ಷಿಣ ಕನ್ನಡದ ಪುಣಚ ದಂಬೆ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ರವಿಶಂಕರ ಶಾಸ್ತ್ರಿ […]

Continue Reading

ಶ್ರೀಗುರುಸೇವೆಯ ಸದವಕಾಶ ಪೂರ್ವ ಜನ್ಮದ ಸುಕೃತ : ಜಯಲಕ್ಷ್ಮಿ ವಿ. ಭಟ್ , ಪದ್ಯಾಣ

” ನಾವು ಮೈಸೂರಿನಲ್ಲಿರುವಾಗ ಮೊದಲ ಬಾರಿ ಶ್ರೀಗುರುಗಳ ದರ್ಶನ ಭಾಗ್ಯ ಪಡೆದೆವು. ಅಂದಿನಿಂದ ಇಂದಿನವರೆಗೂ ಶ್ರೀಮಠದ ವಿವಿಧ ಯೋಜನೆಗಳಿಗೆ ಕೈ ಜೋಡಿಸುತ್ತಾ ಸೇವೆ ಮಾಡುತ್ತಿದ್ದೇವೆ. ಶ್ರೀಗುರು ಸೇವೆ ಮಾಡುವ ಅವಕಾಶ ಮತ್ತು ಆರೋಗ್ಯವನ್ನು ಮಾತ್ರ ದೇವರಲ್ಲಿ ಬೇಡಿಕೊಳ್ಳುವುದು ನಾವು ” ಈ ಮಾತುಗಳು ಮಂಗಳೂರು ಮಂಡಲ ಬಾಯಾರು ವಲಯದ ಮಾಣಿಲ ಮುರುವ ನಿವಾಸಿಗಳಾಗಿರುವ ವಿಶ್ವೇಶ್ವರ ಭಟ್ ಪದ್ಯಾಣ ಇವರ ಪತ್ನಿ ಜಯಲಕ್ಷ್ಮಿ ವಿ. ಭಟ್ ಅವರದ್ದು. ಡೆಂಬಳದ ರಾಮ ಭಟ್ ,ಸರಸ್ವತಿ ದಂಪತಿಗಳ ಪುತ್ರಿಯಾದ ಜಯಲಕ್ಷ್ಮಿ ವಿ […]

Continue Reading

ಗೋಸೇವೆಯಲ್ಲಿ ದೊರಕಿದ ಅನುಭವಗಳು ಆನಂದದಾಯಕ : ಜ್ಯೋತಿ ಹೇರಂಭ ಶಾಸ್ತ್ರಿ, ಉಪ್ಪಿನಂಗಡಿ

” ಇಂದಿನ ಯಾಂತ್ರಿಕ ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ನೆಮ್ಮದಿ ನೀಡುವ ವಿಚಾರವೆಂದರೆ ಅದು ಧಾರ್ಮಿಕತೆ. ಅಂತಹ ಧಾರ್ಮಿಕ ಕಾರ್ಯಗಳನ್ನು ಮಾಡಲು ಶಿಷ್ಯರಿಗೆ ಪ್ರೇರಣೆ ನೀಡುವ ನಮ್ಮ ಶ್ರೀಸಂಸ್ಥಾನದವರ ಸಮಾಜೋನ್ಮುಖೀ ಕಾರ್ಯಗಳಲ್ಲಿ ಸೇವೆ ಮಾಡಲು ದೊರಕುವ ಅವಕಾಶಗಳು ಬದುಕಿಗೆ ಆನಂದದಾಯಕವಾಗಿರುತ್ತದೆ‌ ” ಎನ್ನುವವರು ಉಪ್ಪಿನಂಗಡಿ ಮಂಡಲ ಉಪ್ಪಿನಂಗಡಿ ವಲಯದ ಜ್ಯೋತಿ ಹೇರಂಭಶಾಸ್ತ್ರಿ. ಕೈಪ್ಪಂಗಳ ಕೃಷ್ಣಭಟ್ ಪಾರ್ವತಿ ದಂಪತಿಗಳ ಪುತ್ರಿಯಾದ ಜ್ಯೋತಿ ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆಯಾಗಿದ್ದಾರೆ. ಉಪ್ಪಿನಂಗಡಿ ಮಂಡಲದ ಅಧ್ಯಕ್ಷರಾದ ಹೇರಂಭಶಾಸ್ತ್ರಿಯವರ ಪತ್ನಿಯಾದ ಜ್ಯೋತಿಗೆ […]

Continue Reading

ಈ ಬದುಕು ರಾಘವಾನುಗ್ರಹ ” : ಗಾಯತ್ರಿ ಎಸ್. ಗಿರಿ, ಸಾಗರ

  ” ಶ್ರೀರಾಮ , ಶ್ರೀಗುರುಗಳ ಮೇಲಿನ ಅಚಲ ನಂಬಿಕೆಯ ಪ್ರತೀಕವೇ ನಮ್ಮ ಈ ಬದುಕು. ಎಂತಹ ಕಡುಕಷ್ಟದ ಪರಿಸ್ಥಿತಿಯನ್ನಾದರೂ ಅವರೇ ನಿವಾರಿಸಿಕೊಡುತ್ತಾರೆ ಎಂಬ ಭರವಸೆ ಇದೆ. ನಮಗೆ ಶ್ರೀಗುರು ಸೇವೆ, ಗೋಸೇವೆ ಮುಖ್ಯ. ಈ ಸೇವೆ ಮಾಡುವ ಅವಕಾಶ ಒದಗಿಸಿಕೊಟ್ಟ ಅವರಿಗೆ ಸದಾ ಶರಣು ” ಎನ್ನುವವರು ಸಾಗರ ಮಂಡಲ ಪೂರ್ವ ವಲಯದ ಶೇಷಗಿರಿ ಅವರ ಪತ್ನಿ ಗಾಯತ್ರಿ ಎಸ್. ಗಿರಿ. ಅರಲಗೋಡು ಸಮೀಪದ ಮರಗೋಡಿ ವಲಯ ಕಣಗಿಲೆಘಟ್ಟದ ದೇವಪ್ಪ , ದೇವಕಿ ಅಮ್ಮ ದಂಪತಿಗಳ […]

Continue Reading

ಶ್ರೀಗುರು ಕರುಣೆಯ ಕಿರಣಗಳು ಬಾಳಿನ ಬೆಳಕು : ಯಶೋದಾ ವಿಷ್ಣು ಭಟ್, ಬೆಂಗಳೂರು

” ಶ್ರೀಮಠದ ಸಂಪರ್ಕಕ್ಕೆ ಬರುವುದಕ್ಕೆ ಮೊದಲೆ ನನ್ನ ಮನದಲ್ಲಿ ಒಂದು ರೀತಿಯ ತೊಳಲಾಟವಿತ್ತು. ಮನದಲ್ಲಿ ಮೂಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿಯದೆ ಗೊಂದಲದಲ್ಲಿದ್ದೆ. ಯಾವಾಗ ಶ್ರೀಮಠದ ಸಂಪರ್ಕಕ್ಕೆ ಬಂದೆನೋ ಅಂದಿನಿಂದ ಒಣಮರದಂತೆ ಬೋಳಾಗಿದ್ದ ಮನಸ್ಸು ಜೀವನದ ಮೌಲ್ಯಗಳನ್ನು ಅರಿತುಕೊಂಡು ಹಸಿರಾಯಿತು. ಜೀವನ ಎಂದರೇನು, ಜೀವನದ ಅರ್ಥವೇನು ಎಂಬುದು ಸರಿಯಾಗಿ ಮನದಟ್ಟಾಯಿತು. ಶ್ರೀಗುರು ಚರಣಗಳನ್ನು ನಂಬಿ ನಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಬದುಕುವುದೇ ಜೀವನದ ಗುರಿ ಎಂಬ ಭಾವ ಬಂತು ” ಎಂದು ಭಾವಪೂರ್ಣವಾಗಿ ನುಡಿದವರು ಹೊನ್ನಾವರ ಕವಲಕ್ಕಿಯ […]

Continue Reading

ಹಸುವೊಂದು ಮನೆಯಲ್ಲಿದ್ದರೆ ಜೀವನವೇ ಹಸಿರು ” : ಲಕ್ಷ್ಮೀ ವಿ.ಜಿ. ಭಟ್

  ” ನಮಗೆ ಮಾತ್ರವಲ್ಲ, ನಮ್ಮ ಮಕ್ಕಳಿಗೂ ಹಸುಗಳೆಂದರೆ ತುಂಬಾ ಪ್ರೀತಿ. ಪೇಟೆಯ ಜೀವನದಲ್ಲೂ, ಉದ್ಯೋಗದ ನಡುವೆಯೂ ಮನೆಯಲ್ಲಿ ಎರಡು ದೇಶೀಯ ತಳಿಯ ಹಸುಗಳನ್ನು ಸಾಕುತ್ತಿರುವುದು ಮಕ್ಕಳ ಆಸಕ್ತಿಯಿಂದ ” ಎನ್ನುವವರು ಮೂಲತಃ ಕರ್ಕಿಯವರಾದ ಪ್ರಸ್ತುತ ಉಪ್ಪಿನಂಗಡಿ ಮಂಡಲ, ಕಬಕ ವಲಯದ ಮುರ ನಿವಾಸಿಗಳಾಗಿರುವ ಲಕ್ಷ್ಮೀ ವಿ.ಜಿ. ಭಟ್. ಗೋಕರ್ಣದ ದತ್ತಾತ್ರೇಯ ಉಪಾಧ್ಯಾಯ ,ಗಂಗಾ ಉಪಾಧ್ಯಾಯ ದಂಪತಿಗಳ ಪುತ್ರಿಯಾದ ಲಕ್ಷ್ಮಿ ಅವರು ಬಹುಮುಖ ಪ್ರತಿಭೆಯ ಮಾಸದ ಮಾತೆ. ಸಂಸ್ಕೃತ ಅಲಂಕಾರ ಶಾಸ್ತ್ರದಲ್ಲಿ ವಿದ್ವತ್ ಪದವಿ ಪಡೆದ ಇವರು […]

Continue Reading

” ಶ್ರೀಗುರುಗಳ ಕೃಪೆಯಿಂದ ದೊರಕಿದ ಅಳಿಲು ಸೇವೆ ” : ವಸಂತಿ ಭಟ್, ಉಪ್ಪಂಗಳ

  ” ತವರುಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರು. ಆಗಲೇ ಗೋವುಗಳ ಮೇಲೆ ಮಮತೆಯಿತ್ತು. ಮುಂದೆ ಕಲಿಕೆ,ಉದ್ಯೋಗಗಳ ನಡುವೆ ಹಸುಗಳ ಒಡನಾಟವೇ ತಪ್ಪಿ ಹೋದಂತಾಗಿತ್ತು. ಇದೀಗ ಶ್ರೀಗುರುಗಳ ಕೃಪೆಯಿಂದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಈ ಕಾರ್ಯಕ್ಕೆ ನನ್ನ ಅಳಿಲ ಸೇವೆ ಸಲ್ಲಿಸುತ್ತಿದ್ದೇನೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಉಪ್ಪಂಗಳ ರವಿಶಂಕರ ಭಟ್ ಅವರ ಪತ್ನಿ ವಸಂತಿ ಭಟ್. ಪಾಂಡೇಲು ಮಹಾಲಿಂಗ ಭಟ್ , ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರಿಯಾದ ವಸಂತಿ […]

Continue Reading

ಗೋಸೇವೆಯ ದಿವ್ಯತೆಯಲ್ಲಿ ಧನ್ಯತೆ : ದಿವ್ಯಶ್ರೀ ಮತ್ತು ಧನ್ಯಶ್ರೀ , ಇಳಂತಿಲ

  ತಾಯ್ತಂದೆಯರು ಶ್ರೀಮಠದ ಸೇವೆಯಲ್ಲಿ ಸದಾ ನಿಷ್ಠೆ ಹೊಂದಿರುವವರಾದುದರಿಂದ ಈ ಮಕ್ಕಳಿಗೆ ಎಳವೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ. ಶ್ರೀಗುರುಗಳ ಆಶೀರ್ವಚನಗಳನ್ನು ಕೇಳಿ ಶ್ರೀಮಠದ ಸೇವೆ ಹಾಗೂ ಗೋಸೇವೆಯ ಬಗ್ಗೆ ಈ ಸಹೋದರಿಯರಿಗೆ ವಿಶೇಷ ಶ್ರದ್ಧೆ ಮೂಡಿತು. ದಕ್ಷಿಣ ಕನ್ನಡ ಇಳಂತಿಲ ಮೂಲದ ಪ್ರಸ್ತುತ ಮಂಗಳೂರು ಮಂಡಲ ಮಧ್ಯ ವಲಯದ ಕೊಂಚಾಡಿ ನಿವಾಸಿಗಳಾಗಿರುವ ವಿಷ್ಣು ಪ್ರಕಾಶ್ ,ಲಕ್ಷ್ಮೀ ಪ್ರಕಾಶ್ ದಂಪತಿಗಳ ಪುತ್ರಿಯರಾದ ದಿವ್ಯಶ್ರೀ ಹಾಗೂ ಧನ್ಯಶ್ರೀಯರೇ ಈ ವಿದ್ಯಾ ಲಕ್ಷ್ಮಿಯರು. ಮಂಗಳೂರು ನಂತೂರಿನ ಶ್ರೀಭಾರತಿ ಕಾಲೇಜಿನಲ್ಲಿ ಪದವಿ ಅಂತಿಮ […]

Continue Reading

ಗೋವುಗಳ ಒಡನಾಟದ ಖುಷಿ ವರ್ಣನೆಗೆ ಸಿಲುಕದು ” : ವಾಣಿಶ್ರೀ ಶರ್ಮಾ

  ” ಐದನೇ ವಯಸ್ಸಿನಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವಳು ನಾನು. ಅಪ್ಪ ಮಾಲೂರು ಗೋಶಾಲೆಯಲ್ಲಿ ಸೇವಾ ನಿರತರಾದುದರಿಂದ ನನಗೂ ಗೋವುಗಳ ಸಾಂಗತ್ಯ ಎಳವೆಯಿಂದಲೇ ದೊರಕಿತು. ಮಾನವನ ಕಷ್ಟಗಳನ್ನು ಅರಿತು ಅವನಿಗೆ ಸಹಾಯ ಮಾಡಲು ಅನೇಕ ಮಂದಿ ಮುಂದೆ ಬರುತ್ತಾರೆ. ಆದರೆ ಗೋಮಾತೆಯ ಕಷ್ಟಗಳನ್ನು ನಾವೇ ತಿಳಿದು ಅವಳ ಸೇವೆ ಮಾಡಬೇಕಷ್ಟೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಈ ಕಾರಣದಿಂದ ನಾನು ಗೋಸೇವೆಗೆ ಕೈ ಜೋಡಿಸಿದೆ ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ಮಂಡಲದ ರಾಜರಾಜೇಶ್ವರಿ ವಲಯದ ಉಜ್ವಲ ಭಟ್ ಅವರ […]

Continue Reading

ಶ್ರೀರಾಮನ ಅನುಗ್ರಹದಿಂದ ಬದುಕಿನಲ್ಲಿ ನೆಮ್ಮದಿ ” : ಅಕ್ಷತಾ ಗಣೇಶ ಭಟ್, ತೋಟದಮೂಲೆ

  ” ದೇಶೀಯ ಗೋವುಗಳ ಮಹತ್ವವನ್ನು ಸಮಾಜಕ್ಕೆ ತಿಳಿಸಿ, ಗೋಜನ್ಯ ಉತ್ಪನ್ನಗಳ ಸದುಪಯೋಗಗಳ ಬಗ್ಗೆ ಜನರಲ್ಲಿ ಎಚ್ಚರ ಮೂಡಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಿ ಗೋಸೇವೆ ಮಾಡುವುದೆಂದರೆ ಪೂರ್ವ ಜನ್ಮದ ಸುಕೃತ ” ಎನ್ನುವವರು ಕನ್ಯಾನದ ಪಂಜಜೆ ಮೂಲದ ತೋಟದಮೂಲೆ ನಿವಾಸಿಗಳಾಗಿದ್ದ , ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ ಶ್ರೀಗಿರಿನಗರ ವಲಯದ ಹನುಮಂತ ನಗರದಲ್ಲಿ ವಾಸಿಸುವ ಗಣೇಶ ಭಟ್ ಅವರ ಪತ್ನಿ ಅಕ್ಷತಾ. ಇಪ್ಪತ್ತು ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿರುವ ಅಕ್ಷತಾ ಮುದ್ರಜೆ ಸುಬ್ರಹ್ಮಣ್ಯ ಭಟ್ ಹಾಗೂ ಇಂದಿರಾ ದಂಪತಿಗಳ ಪುತ್ರಿ. […]

Continue Reading

ಗೋಮಾತೆಯ ಸೇವೆಗಾಗಿ ಸಮಾಜದಲ್ಲಿ ಒಗ್ಗಟ್ಟು ಮೂಡಿದೆ : ಅನಿತಾ ಹೆಗಡೆ, ಬೆಂಗಳೂರು

  ” ಗೋಸೇವೆ ನಮ್ಮ ಜೀವನದ ಅವಿಭಾಜ್ಯ ಅಂಗ. ಶ್ರೀಗುರುಗಳಿಂದಾಗಿ ನಮಗೆ ಇಂತಹ ಅವಕಾಶ ಒದಗಿಬಂತು. ಪೂರ್ವ ಜನ್ಮದ ಸುಕೃತದಿಂದ ನಾವು ನಮ್ಮ ಗುರುಗಳನ್ನು ಪಡೆದೆವು. ಅವರ ಮಾರ್ಗದರ್ಶನದಿಂದ ದೊರಕಿದ ಗೋಮಾತೆಯ ಸೇವೆಗಾಗಿ ಸಮಾಜವೇ ಒಂದಾಗಿದೆ ” ಎನ್ನುವವರು ಮೂಲತಃ ಸಿದ್ಧಾಪುರ ತಾಲೂಕಿನವರಾದ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ಯಲಹಂಕ ಅವಲಳ್ಳಿಯ ನಾರಾಯಣ ಹೆಗಡೆಯವರ ಪತ್ನಿ ಅನಿತಾ ಹೆಗಡೆ. ಸಿದ್ಧಾಪುರ ತಾಲೂಕಿನ ಕರಿಬಾಳು ಶಿವರಾಮ ಭಟ್ಟ ಹಾಗೂ ಸಾವಿತ್ರಿ ಭಟ್ಟ ಅವರ ಪುತ್ರಿಯಾದ ಅನಿತಾ ಹೆಗಡೆಯವರು ಮಾತೃತ್ವಮ್ […]

Continue Reading

ಶ್ರೀಗುರುಕೃಪೆಯಿಂದ ಕಂಡ ಕನಸುಗಳೆಲ್ಲ ನನಸಾಗಿವೆ : ಸರಸ್ವತಿ ಕೂವೆತ್ತಂಡ

  ” ಎರಡು ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿ ಇದ್ದೇವೆ. ಶ್ರೀಗುರುಸೇವೆ, ಗೋಸೇವೆಯಿಂದ ಬದುಕಿಗೆ ಒಳಿತಾಗಿದೆ.‌ ಅಸಾಧ್ಯವೆಂದು ಭಾವಿಸಿದ ಅನೇಕ ಕನಸುಗಳು ಕೈಗೂಡಿವೆ. ಶ್ರೀಗುರುಗಳ ಕೃಪೆ ನಮ್ಮ ಬದುಕಿಗೆ ಆಸರೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲ ಉರುವಾಲು ವಲಯದ ಕೂವೆತ್ತಂಡ ಶ್ರೀಧರ ಭಟ್ಟರ ಪತ್ನಿ ಸರಸ್ವತಿ ಎಸ್.ಭಟ್. ಪುತ್ತೂರು ಸಮೀಪದ ಕೂಜೋಡಿ ಗೋವಿಂದ ಭಟ್, ಗೌರಿ ಅಮ್ಮ ದಂಪತಿಗಳ ಪುತ್ರಿಯಾದ ಇವರು ಫೈನಾನ್ಸ್ ಒಂದರಲ್ಲಿ ಉದ್ಯೋಗಿಯಾಗಿದ್ದಾರೆ. ರಾಮಾಯಣ ಮಹಾಸತ್ರದ ಸಂದರ್ಭದಲ್ಲಿ ೧೧ ದಿನಗಳ ಕಾಲ ಶ್ರೀರಾಮಚಂದ್ರಾಪುರ ಮಠ ,ಹೊಸನಗರದಲ್ಲಿ […]

Continue Reading

ಗೋಮಾತೆಯ ಸೇವೆ ಮಾಡಲು ಹೃದಯ ಶ್ರೀಮಂತಿಕೆ ಇದ್ದರೆ ಸಾಕು : ಪುಷ್ಪಾ ಹರೀಶ್ , ಬೆಂಗಳೂರು

  ” ಗೋಸೇವೆ ಮಾಡಲು ಮುಂದೆ ಬರುವ ಮಾತೆಯರು ಯಾವುದೇ ಕಾರಣಕ್ಕೂ ಅಳುಕಬಾರದು, ಗೋಸೇವೆ ಮಾಡಲು ಪೂರ್ವ ಜನ್ಮದ ಸುಕೃತ ಬೇಕು, ಗೋಮಾತೆಯ ಸೇವೆಗೆ ಹೃದಯ ಶ್ರೀಮಂತಿಕೆ ಅತೀ ಅಗತ್ಯ ” ಎಂದವರು ಬೆಂಗಳೂರು ಉತ್ತರ ಮಂಡಲ ಸರ್ವಜ್ಞ ವಲಯದ ಹರೀಶ್ ಭಟ್ ಅವರ ಪತ್ನಿ ಪುಷ್ಪಾ. ಮುರುಡೇಶ್ವರದ ಗಜಾನನ ಭಟ್ ಹಾಗೂ ಭವಾನಿ ದಂಪತಿಗಳ ಪುತ್ರಿಯಾದ ಇವರು ಸರ್ವಜ್ಞ ವಲಯದ ಮಾತೃ ಪ್ರಧಾನೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ” ತವರಿಗೆ ಹೋಗಿದ್ದಾಗ ಅಕ್ಕನ ಜೊತೆ ಮೊದಲ ಬಾರಿ […]

Continue Reading

ಸುರಭಿ ಸೇವೆಯ ಸಾರ್ಥಕ ಕ್ಷಣಗಳು : ಹೇಮಾವತಿ ಹೆಗಡೆ

  ” ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು. ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿಯಿದೆ. ಇತ್ತೀಚೆಗಂತೂ ಶ್ರೀಗುರುಗಳ ಪ್ರೇರಣೆಯಿಂದ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಮತ್ತೆ ಒದಗಿ ಬಂತು. ಗೋಮಾತೆಯ ಸೇವೆ ಬದುಕಿನ ಸಾರ್ಥಕ ಕ್ಷಣಗಳು ಎಂದೇ ನನ್ನ ಅನಿಸಿಕೆ ” ಎನ್ನುತ್ತಾ ತಮ್ಮ ಗೋಪ್ರೇಮ ಮೆರೆದವರು ಮೂಲತಃ ಸಿದ್ಧಾಪುರ ತಾಲೂಕು ಅಲವಳ್ಳಿಯ ಪ್ರಸ್ತುತ ಬೆಂಗಳೂರು ಉತ್ತರ ಮಂಡಲ ರಾಜಮಲ್ಲೇಶ್ವರ ವಲಯ ನಿವಾಸಿಗಳಾಗಿರುವ ಬಿ.ಎಸ್. ಹೆಗಡೆಯವರ ಪತ್ನಿ ಹೇಮಾವತಿ ಹೆಗಡೆ. ಯಲ್ಲಾಪುರ ತಾಲೂಕು ಮಂಚಿಕೇರಿಯ ವೆಂಕಟ್ರಮಣ ಭಟ್, ಅನಸೂಯಾ […]

Continue Reading

ಗೋಮಾತೆಯ ಸೇವೆಯೇ ಒಂದು ಖುಷಿ : ಸುನಂದಾ ನಾರಾಯಣ ಭಟ್, ಪೋಳ್ಯ

  ” ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.‌ ಶ್ರೀಗುರುಗಳ ಆಶೀರ್ವಚನಗಳ ಪ್ರೇರಣೆಯಿಂದ ಗೋಸೇವೆಯಲ್ಲಿ ತೊಡಗಿಸಿಕೊಂಡೆ. ಗೋಮಾತೆಯ ಸೇವೆಯಲ್ಲಿ ಮಗ್ನಳಾಗಿರುವಾಗ, ಗೋಮಾತೆಯ ಸೇವೆಗಾಗಿ ಸಮರ್ಪಣೆ ಮಾಡಿದಾಗ ದೊರಕುವ ಸಂತಸ, ನೆಮ್ಮದಿ, ಶಾಂತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ” ಎನ್ನುತ್ತಾ ಗೋಮಾತೆಯ ಸೇವೆಯಲ್ಲಿ ಆನಂದ ಕಂಡವರು ದಕ್ಷಿಣ ಕನ್ನಡದ ಪೋಳ್ಯ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲ , ಸರ್ವಧಾರಿ ವಲಯ ನಿವಾಸಿಗಳಾಗಿರುವ ನಾರಾಯಣ ಭಟ್ ಪೋಳ್ಯ ಇವರ ಪತ್ನಿ ಸುನಂದಾ ಎನ್. ಭಟ್. ಕುಮಟಾದ ಬಾಡ […]

Continue Reading

ಗೋಮಾತೆ ಸಂಪೂಜ್ಯಳು : ಸುಶೀಲಾ ವಾದ್ಯಕೋಡಿ

  ” ಗೋವು ನೀಡುವ ಎಲ್ಲಾ ಉತ್ಪನ್ನಗಳು ನಮ್ಮ ಬದುಕಿಗೆ ಬೇಕು, ನಮ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಶುದ್ಧ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಹಾಗಾಗಿ ಭಾರತೀಯ ತಳಿಯ ಹಸುಗಳ ರಕ್ಷಣೆಗೆ ಸಮಾಜವೇ ಕಟಿಬದ್ಧವಾಗಿ ನಿಲ್ಲಬೇಕಿದೆ. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ” ಎನ್ನುವವರು ಉಪ್ಪಿನಂಗಡಿ ಮಂಡಲದ ಉರುವಾಲು ವಲಯದ ವಾದ್ಯಕೋಡಿ ಶಂಕರ ಭಟ್ಟರ ಪತ್ನಿ ಸುಶೀಲಾ. ದೋಟ ಸುಬ್ರಹ್ಮಣ್ಯ ಭಟ್, ಈಶ್ವರಿ ದಂಪತಿಗಳ ಪುತ್ರಿಯಾದ ಇವರು ಉರುವಾಲು ವಲಯದ ಮಾತೃ […]

Continue Reading

ಗೋಪ್ರೇಮ ಉಸಿರಿನಷ್ಟೇ ಸಹಜ : ಕಿರಣಾ ಮೂರ್ತಿ , ಯೇತಡ್ಕ

  ” ನಮ್ಮವರು ಗೋ ಡಾಕ್ಟರ್ ಆದ ಕಾರಣ ಸಹಜವಾಗಿಯೇ ಗೋವುಗಳ ಮೇಲೆ ಪ್ರೀತಿ ಮೂಡಿತು. ಆದರೆ ಶ್ರೀಮಠದ ಸಂಪರ್ಕಕ್ಕೆ ಬರುವ ವರೆಗೂ ನನಗೆ ದೇಶೀಯ ತಳಿ ಹಾಗೂ ವಿದೇಶೀ ತಳಿಗಳ ನಡುವಿನ ವ್ಯತ್ಯಾಸ ತಿಳಿದಿರಲಿಲ್ಲ. ನಂತರ ದೇಶೀಯ ತಳಿಯ ಹಸುಗಳ ಉಪಯುಕ್ತತೆ, ಅವುಗಳ ಮೌಲ್ಯ ಅರಿವಾಯಿತು, ಈಗ ಪೇಟೆಯಲ್ಲಿದ್ದರೂ ಮೂರು ಹಸುಗಳು ಹಾಗೂ ನಾಲ್ಕು ಕರುಗಳನ್ನು ಸಾಕುತ್ತಿದ್ದೇವೆ. ಗೋಮಾತೆ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾಳೆ ” ಈ ಮಾತುಗಳು ‘ ಗೋವಿಲ್ಲದೆ ನಾವಿಲ್ಲ ‘ ಎಂಬ […]

Continue Reading