” ಗೋಮಾತೆಗಾಗಿ ಸಮಾಜ ಒಗ್ಗೂಡಲು ಕಾರಣ ಶ್ರೀಗುರುಗಳು ” : ಪೂರ್ಣಿಮಾ ಈಶ್ವರ ಭಟ್, ಮಂಗಳೂರು

  ” ಸಮಾಜದ ಒಳಿತಿಗಾಗಿ ಶ್ರೀಗುರುಗಳು ಕೈಗೊಂಡಿರುವ ಅನೇಕ ಯೋಜನೆಗಳಲ್ಲಿ ಅತ್ಯಂತ ಸರಳ,ಸುಲಭವಾಗಿರುವ ಯೋಜನೆ ಮಾತೃತ್ವಮ್. ಶ್ರೀಗುರುಗಳ ಅನುಗ್ರಹವಿದ್ದರೆ ಇದರಲ್ಲಿ ಗುರಿ ತಲುಪುವುದು ಕಷ್ಟಕರವಲ್ಲ. ಇಂದು ಗೋಮಾತೆಯ ಸೇವೆಗಾಗಿ ಸಮಾಜ ಒಂದಾಗುತ್ತಿದೆ ಎನ್ನಲು ಹರ್ಷವಾಗುತ್ತಿದೆ ” ಎಂದವರು ಮಂಗಳೂರು ಮಂಡಲ ಮಧ್ಯ ವಲಯದ ಕಿಳಿಂಗಾರು ಈಶ್ವರ ಭಟ್ ಅವರ ಪತ್ನಿ ಪೂರ್ಣಿಮಾ .   ಗೃಹಿಣಿಯಾಗಿರುವ ಇವರು ಗಂಗರಮಜಲು ಈಶ್ವರ ಭಟ್ , ಶಾರದಾ ದಂಪತಿಗಳ ಪುತ್ರಿ.‌   ” ಲಕ್ಷ್ಮೀ ಪ್ರಕಾಶ್ ಹಾಗೂ ಸುಮಾ ರಮೇಶ್ […]

Continue Reading

ರಾಮಸೇತು ವೈಜ್ಞಾನಿಕ ಸತ್ಯ

ರಾಮಸೇತು ವೈಜ್ಞಾನಿಕ ಸತ್ಯ. ಇದು ಕೇವಲ ಕಾಲ್ಪನಿಕವಲ್ಲ. ವಾಲ್ಮೀಕಿ ರಾಮಾಯಣದಲ್ಲಿ ವರ್ಣನೆಯಾದ ಅದ್ಭುತ ಸಾಗರಸೇತು ಆಧುನಿಕ ವಿಜ್ಞಾನದ ವಿಶ್ಲೇಷಣೆಯಲ್ಲೂ ಅಂತೆಯೇ ಇದೆ ಎಂದು ಶ್ರೀ ರಾಘವೇಶ್ವರಭಾರತೀಸ್ವಾಮೀಜಿ ಹೇಳಿದರು. ಮೂರೂರು ರಾಮಲೀಲಾ ಮೈದಾನದಲ್ಲಿ ನಡೆದ ರಾಮಕಥೆ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, “ತಳದಲ್ಲಿ ಮರ, ಎರಡನೇ ಸ್ತರದಲ್ಲಿ ಬಂಡೆ ಮತ್ತು ಮೇಲೆ ಮರಳಿನಿಂದ ಸಾಗರಸೇತು ನಿರ್ಮಾಣವಾಗಿದೆ ಎಂಬ ವಿವರಣೆ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ವಿಶ್ವದ ಏಕೈಕ ಸಾಗರಸೇತುವನ್ನು ವಿಜ್ಞಾನದ ವಿಶ್ಲೇಷಣೆಗೆ ಒಳಪಡಿಸಿದಾಗ ಕೂಡಾ ಇಂದೇ ಅಂಶಗಳು ದೃಢಪಟ್ಟಿವೆ” ಎಂದು […]

Continue Reading

ಗೋಸೇವೆಯೇ ನಮ್ಮ ಜೀವನ : ಆಶಾಕಿರಣ ಆರ್. ಹೆಮ್ಮಣ್ಣ

  Hem’s ಸಂಸ್ಥೆಯ ಮೂಲಕ ಸಮಾಜಕ್ಕೆ ಪರಿಚಿತರಾಗಿರುವ ಆಶಾಕಿರಣ ಆರ್ ಹೆಮ್ಮಣ್ಣ ಅವರು ಎಳವೆಯಿಂದಲೇ ಶ್ರೀಮಠದ ಸಂಪರ್ಕಕ್ಕೆ ಬಂದವರು. ಶ್ರೀರಾಮಚಂದ್ರಾಪುರ ಮಂಡಲದ ಗನವಳ್ಳಿಯ ವಾಮದೇವಯ್ಯ ಹಾಗೂ ಲೀಲಾವತಿ ದಂಪತಿಗಳ ಪುತ್ರಿಯಾದ ಆಶಾಕಿರಣ ಪ್ರಸ್ತುತ ಮಂಗಳೂರು ಮಂಡಲ ಕುಂದಾಪುರ ವಲಯದ ನಿವಾಸಿಯಾಗಿದ್ದಾರೆ. ‘ ಸುರಭಿ ಸಾರ’ ದ ತಯಾರಕ ಸಂಸ್ಥೆಯಾದ ಹೆಮ್ಸ್ ಉದ್ಯಮವನ್ನು ನಡೆಸುತ್ತಿರುವ ರಾಘವೇಂದ್ರ ಹೆಮ್ಮಣ್ಣ ಅವರ ಪತ್ನಿಯಾದ ಇವರು ಎರಡು ವರ್ಷಗಳ ಗುರಿ ತಲುಪಿದ ಮಾಸದ ಮಾತೆ. ” ಬಾಲ್ಯದಲ್ಲೇ ಶ್ರೀಮಠಕ್ಕೆ ಬರುತ್ತಿದ್ದೆ.‌ಮದುವೆಯ ನಂತರ ಮತ್ತಷ್ಟು […]

Continue Reading

ಗೋಸೇವೆಗೆ ಪ್ರೇರಣೆ ಮಹಾನಂದಿ : ಶೈಲಾ ರಾಮಚಂದ್ರ ಭಟ್ ,ಪದ್ಯಾಣ

  ” ಬಾಲ್ಯದಲ್ಲೇ ಗೋವುಗಳ ಮೇಲೆ ತುಂಬಾ ಪ್ರೀತಿ ನನಗೆ. ೯೯ ರಿಂದ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಇದು ಮತ್ತಷ್ಟು ಹೆಚ್ಚಾಯಿತು. ಹೊಸನಗರದ ಗೋಶಾಲೆಗಾಗಿ ವೈವಿಧ್ಯಮಯ ತಳಿಗಳ ಅನ್ವೇಷಣೆಗಾಗಿ ಅನೇಕ ಊರುಗಳಿಗೆ ತೆರಳಿದ‌ ಅನುಭವವಿದೆ. ಸಂತೆಗಳಲ್ಲಿ ಹಸುಗಳನ್ನು ಮಾರಾಟಕ್ಕಾಗಿ ಕಟ್ಟಿ ಹಾಕುವುದನ್ನು ಕಂಡಾಗ ಮನಸ್ಸು ಕರಗಿ ಕಣ್ಣೀರು ಸುರಿಸಿದ್ದೂ ಇದೆ. ನನ್ನ ಇಷ್ಟದ ಗೋವು ಮಹಾನಂದಿ. ಅವನನ್ನು ನಾನು ‘ ದೊಡ್ಡಣ್ಣ’ ಎಂದೇ ಕರೆಯುತ್ತಿದ್ದೆ. ಅವನೇ ನನ್ನ ಗೋಸೇವೆಗೆ ಪ್ರೇರಣೆ ” ಎಂದವರು ಮಂಗಳೂರು ಮಂಡಲ […]

Continue Reading

” ಶ್ರೀಮಠದ ಸೇವೆಯೆಂದರೆ ಮಕ್ಕಳಿಗೂ ಪ್ರೀತಿ ” : ಪವಿತ್ರಾ ವಿ. ಹೆಬ್ಬಾರ್.

  ” ಬಾಲ್ಯದಿಂದಲೇ ಶ್ರೀಮಠದ ಸಂಪರ್ಕವಿತ್ತು. ಶ್ರೀ ಗುರುಗಳು ಪೀಠಾರೋಹಣದ ನಂತರ ಮೊದಲ ಬಾರಿಗೆ ನಮ್ಮೂರಿಗೆ ಬಂದಾಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಶ್ರೀಗುರುಗಳ ಆಗಮನದ ಸಂದರ್ಭದಲ್ಲಿ ಕಲಶ ಹಿಡಿಯಲು ಹೋಗಿದ್ದೆ. ಆ ನೆನಪು ಈಗಲೂ ಮನದಲ್ಲಿ ಹಸಿರಾಗಿದೆ. ಈಗ ನನ್ನ ಮಕ್ಕಳಿಗೂ ಶ್ರೀಮಠ, ಶ್ರೀಗುರುಗಳು ಎಂದರೆ ತುಂಬಾ ಶ್ರದ್ಧೆ, ಭಕ್ತಿ ” ಈ ಮಾತುಗಳು ಕುಮಟಾ ಮಂಡಲ,ಕುಮಟಾ ವಲಯದ ವಿಶ್ವೇಶ್ವರ ಬಿ. ಹೆಬ್ಬಾರ್ ಅವರ ಪತ್ನಿ ಪವಿತ್ರಾ ವಿ. ಹೆಬ್ಬಾರ್ ಅವರದ್ದು. ಹೊನ್ನಾವರ ಗೇರುಸೊಪ್ಪಾದ ಸುಬ್ರಾಯ […]

Continue Reading

” ಮನದ ಭಾವನೆಗಳನ್ನು ಅರಿತು ಅನುಗ್ರಹಿಸುವವರು ಶ್ರೀಗುರುಗಳು ” : ಲಲಿತಾ ವಿ. ಹೆಗಡೆ

  ” ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಶ್ರೀಗುರು ಕಾರುಣ್ಯದ ಅನುಭವವನ್ನು ಪಡೆದವರು ನಾವು. ಜೀವನದ ಏರುಪೇರುಗಳಲ್ಲಿ ಕಂಗೆಟ್ಟು ಕುಸಿದು ಹೋಗುವಾಗಲೂ ಭರವಸೆಯ ದೀವಿಗೆಯಾಗಿ ಬಾಳಿಗೆ ಬೆಳಕು ತೋರಿದವರು ನಮ್ಮ ಗುರುಗಳು. ಜೀವನದ ಕೊನೆ ತನಕವೂ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಬೇಕೆಂಬುದೇ ನನ್ನ‌ ನಿತ್ಯ ಪ್ರಾರ್ಥನೆ ” ಎಂಬ ಭಾವಪೂರ್ಣ ನುಡಿಗಳು ಕುಮಟಾ ಮಂಡಲ , ಗುಡೇಅಂಗಡಿ ವಲಯದ ವಿಶ್ವನಾಥ ಹೆಗಡೆಯವರ ಪತ್ನಿ ಲಲಿತಾ ವಿ.ಹೆಗಡೆ ಅವರದ್ದು.   ಕಲ್ಲಬ್ಬೆಯ ಸತ್ಯನಾರಾಯಣ ಹೆಗಡೆ,ಕಮಲ ದಂಪತಿಗಳ ಪುತ್ರಿಯಾದ ಇವರು […]

Continue Reading

” ನಿರಂತರ ಶ್ರೀಗುರು ಸ್ಮರಣೆಯಿಂದ ಕಷ್ಟಗಳು ದೂರ ” : ಛಾಯಾಮೂರ್ತಿ ಹೊಸನಗರ

” ಬಾಲ್ಯದಿಂದಲೇ ಹಸುಗಳ ಮೇಲೆ ತುಂಬ ಮಮತೆ. ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದೆವು. ಜೊತೆಗೆ ಮೊದಲಿನಿಂದಲೂ ಶ್ರೀಮಠದ ಸೇವೆಯಲ್ಲಿ ಆಸಕ್ತಿ ಹೊಂದಿದವರು ನಾವು.ಹಾಗಾಗಿಯೇ ಶ್ರೀಗುರುಗಳ ನಿರ್ದೇಶಾನುಸಾರವಾಗಿ ದೊರಕಿದ ವಿವಿಧ ರೀತಿಯ ಗೋಸೇವೆಯಲ್ಲಿ ಕೈ ಜೋಡಿಸಿದ್ದೇವೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಬದುಕಿನಲ್ಲಿ ಕ್ಷೇಮಾಭಿವೃದ್ಧಿಯ ಪಥ ತೆರೆದುಕೊಂಡಿದೆ ” ಎಂದು ನುಡಿದವರು ರಾಮಚಂದ್ರಾಪುರ ಮಂಡಲ ಹೊಸನಗರ ವಲಯದ ಹೆದ್ಲಿ ನಿವಾಸಿಗಳಾಗಿರುವ ರಾಮಮೂರ್ತಿ ಅವರ ಪತ್ನಿ ಛಾಯಾ ಆರ್. ಮೂರ್ತಿ. ಹೆದ್ಲಿ ಭಾಸ್ಕರ ಭಟ್, ಸರಸ್ವತಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ […]

Continue Reading

” ನೊಂದ ಮನಸ್ಸಿಗೆ ಸಾಂತ್ವನದ ತಂಪು ದೊರಕಿದ್ದು ಶ್ರೀಗುರು ಸೇವೆಯಿಂದ ” : ಚಂದ್ರಕಲಾ ಎಸ್.ಎನ್ ಚಾಳೆತ್ತಡ್ಕ

  ” ಚಲಿಸುವ ದೇವಾಲಯ ಎಂದೇ ಕರೆಯಲ್ಪಡುವ ಗೋಮಾತೆಯ ಸೇವೆಗೆ ಅವಕಾಶ ದೊರಕಿದ್ದು ಶ್ರೀಗುರುಗಳ ಅನುಗ್ರಹದಿಂದ. ಶ್ರೀಮಠದ ಸೇವೆಯಲ್ಲಿ ನಿರತರಾದವರಿಗೆ ಬದುಕಿನಲ್ಲಿ ಕಂಡ ಕನಸುಗಳೆಲ್ಲವೂ ಶ್ರೀಗುರು ಕೃಪೆಯಿಂದ ನನಸಾಗುತ್ತವೆ. ನೊಂದ ಮನಸ್ಸಿಗೆ ಸಾಂತ್ವನದ ತಂಪು ದೊರಕುವುದು ಶ್ರೀಚರಣ ಸೇವೆಯಿಂದ ” ಎಂದು ನುಡಿದವರು ಮುಳ್ಳೇರಿಯ ಮಂಡಲ ನೀರ್ಚಾಲ್ ವಲಯದ ” ವಿಶ್ವಾಮಿತ್ರ ” ನಿವಾಸಿಗಳಾಗಿರುವ ಶಂಕರನಾರಾಯಣ ಭಟ್ ಚಾಳೆತ್ತಡ್ಕ ಅವರ ಪತ್ನಿ ಚಂದ್ರಕಲಾ ಚಾಳೆತ್ತಡ್ಕ.   ಕಾಯರಡ್ಕ ಮೂಲದ ಮುಂಡೋಳೆ ರಾಮ ಭಟ್, ಶಾರದಾ ದಂಪತಿಗಳ ಪುತ್ರಿಯಾದ […]

Continue Reading

” ನೆಮ್ಮದಿಯ ಬದುಕಿಗೆ ಶ್ರೀಗುರುಕೃಪೆಯೊಂದಿದ್ದರೆ ಸಾಕು” : ಭವಾನಿ ವಿ. ಹೆಗಡೆ , ಕುಮಟಾ

” ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದೇವೆ. ಶ್ರೀಗುರುಕೃಪೆಯಿಂದಲೇ ಬದುಕು ಇಂದು ಸರಾಗವಾಗಿ ಮುನ್ನಡೆಯುತ್ತಿದೆ. ಮನದ ಭಾವಗಳನ್ನೆಲ್ಲ ಮಾತುಗಳ ಮೂಲಕ ಹೇಳುವುದು ಕಷ್ಟ. ಅಂತರಂಗದ ಭಾವ ಸಮರ್ಪಣೆಯ ಸೇವೆ ನಮ್ಮದು. ತ್ರಿಮೂರ್ತಿಗಳ ಸಾಕ್ಷಾತ್ ಸ್ವರೂಪರಾದ ಶ್ರೀಗುರುಗಳ ಅನುಗ್ರಹವೊಂದಿದ್ದರೆ ಬದುಕಿನಲ್ಲಿ ಪವಾಡವೇ ನಡೆಯುತ್ತದೆ ” ಎಂದು ಭಾವಪೂರ್ಣವಾಗಿ ನುಡಿದವರು ಕುಮಟಾ ಮಂಡಲ, ಗುಡೇಅಂಗಡಿ ವಲಯದ ” ವರಲಕ್ಷ್ಮಿ” ನಿವಾಸದಲ್ಲಿರುವ ವೆಂಕಟ್ರಮಣ ಹೆಗಡೆಯವರ ಪತ್ನಿ ಭವಾನಿ ವಿ.ಹೆಗಡೆ.   ಕುಮಟಾದ ಮೂರೂರಿನ ವಿಷ್ಣು ಭಟ್ , ವರದಾ ಭಟ್ ದಂಪತಿಗಳ […]

Continue Reading

” ಬದುಕಿನ ಸುಭದ್ರ ನೆಲೆಗೆ ಶ್ರೀರಕ್ಷೆ ಗುರುಪೀಠ ” : ಸುವರ್ಣಿನಿ ಎನ್. ಎಸ್

    ” ಶ್ರೀಗುರುಗಳ ಮೇಲಿನ ಅಚಲ ನಂಬಿಕೆ ಬಾಳಿಗೆ ಭರವಸೆಯ ಬೆಳಕನ್ನು ನೀಡಿದೆ. ಶ್ರೀಮಠದ ಸೇವೆ, ಗೋಮಾತೆಯ ಸೇವೆಯಲ್ಲಿ ತೊಡಗಿಸುವುದರಿಂದ ಬದುಕಿನಲ್ಲಿ ನೆಮ್ಮದಿ ಶಾಂತಿ ನೆಲೆಸಿದೆ ” ಎಂದು ನುಡಿದವರು ಉಪ್ಪಿನಂಗಡಿ ಮಂಡಲ ಪಂಜ ವಲಯದ ಸುವರ್ಣಿನಿ ಎನ್.ಎಸ್.   ದಿ. ಸದಾಶಿವ ಭಟ್ ನೇರೋಳು ಅವರ ಪತ್ನಿಯಾದ ಸುವರ್ಣಿನಿ ಪಂಜ ವಲಯದ ಪುತ್ಯ ಚಕ್ರಕೋಡಿ ‘ಚಿರಶ್ಯಾಮಲ’ ದ ನಾರಾಯಣ ಶಾಸ್ತ್ರಿ ,ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.   ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಶ್ರೀಮಠದ […]

Continue Reading

ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ – ಪುಟಾಣಿ ಸಂವೃತಾ

  ನಮ್ಮ ಸನಾತನ ಧರ್ಮದಲ್ಲಿ ಅಗಾಧವಾದ, ಮಾನವರಾಶಿಯ ಬದುಕಿಗೆ ಅತ್ಯಂತ ಅಗತ್ಯವಾದ ಅಪಾರವಾದ ವಿಚಾರಗಳಿವೆ ಎಂಬುದನ್ನು ಅರಿತವರು ಬಹಳ ಕಡಿಮೆ ಮಂದಿ. ಅದನ್ನು ನಮ್ಮ ಬೊಗಸೆಯಲ್ಲಿ ಹಿಡಿಯುವಷ್ಟಾದರೂ ಮೊಗೆಯಬೇಕೆಂಬ ಮನಸ್ಸಿರುವವರು, ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನ ಮಾಡಬೇಕೆಂಬ ಹಂಬಲ ಇರುವವರು ಇನ್ನೂ ಕಡಿಮೆ. ಅಂತಹ ಒಂದು ಉತ್ತಮ ಮನೋಭಾವ ಇರುವ ದಂಪತಿಗಳಿಂದಲಾಗಿ ಭಗವದ್ಗೀತೆಯೆಂಬ ಅಮೃತಧಾರೆಯನ್ನು ತನ್ನ ನಾಲಗೆಯ ತುದಿಯಲ್ಲಿ ಕುಣಿಸುವ ಪ್ರತಿಭೆಯಾಗಿ ಪುಟಾಣಿ ಸಂವೃತಾ ಮೂಡಿಬಂದಿದ್ದಾಳೆ. ಶ್ರೀಕೃಷ್ಣ ಭಗವಾನನು ಅರ್ಜುನನೆಂಬ ಓರ್ವ ಕ್ಷತ್ರಿಯನಿಗೆ ಉಪದೇಶಿಸಿದನು ಎಂಬುದಾಗಿ ಮೇಲ್ನೋಟಕ್ಕೆ […]

Continue Reading

” ಶ್ರೀಗುರು ತೋರಿದ ಪಥದಲ್ಲಿ ಮುನ್ನಡೆಯುವೆವು ” : ವಸಂತಿ ಆರ್ ಭಟ್ ಪದ್ಯಾಣ

  ” ಸಮಾಜದ ಶ್ರೇಯೋಭಿವೃದ್ಧಿಗಾಗಿ ನಮ್ಮ ಗುರುಗಳು ಕೈಗೊಳ್ಳುವ ಅನೇಕ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿರುವುದೇ ಸುಕೃತ. ಇಂತಹ ಗುರುಗಳನ್ನು ಪಡೆದ ನಾವೇ ಭಾಗ್ಯವಂತರು. ಶ್ರೀಗುರುಗಳನ್ನು ನಂಬಿದವರಿಗೆ ಬದುಕಿನಲ್ಲಿ ನೆಮ್ಮದಿ, ಶಾಂತಿ ಖಂಡಿತ ದೊರಕುತ್ತದೆ. ಅದಕ್ಕಾಗಿಯೇ ಅವರು ತೋರಿದ ಪಥದಲ್ಲಿ ಮುನ್ನಡೆಯುವ ಅಭಿಲಾಷೆ ನಮ್ಮದು ” ಹೀಗೆನ್ನುವವರು ಮಂಗಳೂರು ಮಂಡಲ ಮಧ್ಯ ವಲಯದ ನಿವಾಸಿಗಳಾಗಿರುವ ಪದ್ಯಾಣ ರಾಮಕೃಷ್ಣ ಭಟ್ಟರ ಪತ್ನಿ ವಸಂತಿ ಆರ್ ಭಟ್ . ಕಳಂಜ ವಾರಣಾಸಿಯ ಸೀತಾರಾಮಯ್ಯ ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾದ ಇವರು […]

Continue Reading

” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು

” ಶ್ರೀಮಠದ ಸೇವೆ ಅನಿರ್ವಚನೀಯ ಅನುಭೂತಿ ” : ಸವಿತಾ ಜಯರಾಮ ಭಟ್ ,ಗುಂಜಗೋಡು ” ತವರುಮನೆಯಿಂದಲೇ ಶ್ರೀಮಠದ ಸಂಪರ್ಕ ದೊರಕಿದೆ. ಬಿಳಗಿ ಸೀಮೆ ಭೀಷ್ಮ ‘ ಎಂದೇ ಶ್ರೀಗುರುಗಳಿಂದ ಬಿರುದು ಪಡೆದ ಕೆಳಗಿನಮನೆ ಸುಬ್ರಾಯ ಹೆಗಡೆಯವರ ಮಗಳು ನಾನು.‌ ಹಿಂದಿನ ಗುರುಗಳ ಕಾಲದಿಂದಲೇ ಶ್ರೀಮಠದ ಪರಂಪರೆಯ ಬಗ್ಗೆ ತಿಳಿದಿದೆ . ಮದುವೆಯ ನಂತರ ಶ್ರೀಮಠದ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶಗಳು ದೊರೆತವು. ಹನ್ನೊಂದು ವರ್ಷಗಳ ಕಾಲ ಮಾತೃಪ್ರಧಾನೆಯಾಗಿ ಸೇವೆ ಸಲ್ಲಿಸಿದ್ದೇನೆ.‌ ಶ್ರೀಗುರುಗಳ ವಿವಿಧ ಯೋಜನೆಗಳಲ್ಲಿ ಕೈ ಜೋಡಿಸುವಾಗ […]

Continue Reading

” ಆತ್ಮ ಸಾಕ್ಷಾತ್ಕಾರದ ಹಾದಿ ತೋರುವವರು ಶ್ರೀಗುರು ” : ರುಕ್ಮಾವತಿ ಆರ್. ಚಂದ್ರ, ಸಾಗರ

  ಮೂಲತಃ ರಾಮಚಂದ್ರಾಪುರ ಮಂಡಲದ ಗಡಿಕಟ್ಟೆಯವರಾದ ಪ್ರಸ್ತುತ ಸಾಗರ ಪೂರ್ವ ವಲಯದ ನಿವಾಸಿಗಳಾಗಿರುವ ರಾಮಚಂದ್ರ ಅವರ ಪತ್ನಿ ರುಕ್ಮಾವತಿ ಆರ್. ಚಂದ್ರ ಅವರು ಸುಮಾರು ಎರಡು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡವರು.   ” ಬಾಲ್ಯದಲ್ಲೇ ಹಸುಗಳ ಮೇಲೆ ವಿಶೇಷ ಮಮತೆಯಿತ್ತು.  ಗೋವುಗಳ ಮೇಲೆ ಪೂಜ್ಯ ಭಾವನೆ ಮೂಡುವಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದವಳು ನಾನು. ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಶ್ರೀಗುರುಗಳ ಪ್ರವಚನಗಳನ್ನು ಕೇಳಿ ಈ ಶ್ರದ್ಧೆ ಇನ್ನಷ್ಟು ಹೆಚ್ಚಾಗಿದೆ ” ಎನ್ನುವ ರುಕ್ಮಾವತಿ ಅವರು ಬ್ಯಾಂಕ್ […]

Continue Reading

” ಶ್ರೀ ಗುರುಕೃಪೆಯಿಂದ ನಿರಂತರ ಸೇವಾಭಾಗ್ಯ ದೊರಕಿದೆ ” : ಪ್ರತಿಮಾ ಭಟ್ಟ

  ” ಎರಡೂವರೆ ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ತವರುಮನೆಯಲ್ಲಿರುವಾಗಲೇ ಶ್ರೀಮಠದ ಸಂಪರ್ಕವಿತ್ತು. ಈಗ ಸೇವಾ ಭಾಗ್ಯವೂ ದೊರಕಿದೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ ” ಎಂಬ ನುಡಿಗಳು ಮೂಲತಃ ಸಿದ್ಧಾಪುರ ಮಂಡಲದವರಾದ ಪ್ರಸ್ತುತ ದಕ್ಷಿಣ ಬೆಂಗಳೂರು ಮಂಡಲ , ಬನಶಂಕರಿ ವಲಯ ನಿವಾಸಿಗಳಾಗಿರುವ ಗುಡ್ಡೆಕಣ ರಾಧಾಕೃಷ್ಣ ಹೆಗಡೆ ಅವರ ಪತ್ನಿ ಪ್ರತಿಮಾ ಭಟ್ ಅವರದ್ದು. ಸಿದ್ಧಾಪುರ ತಾಲೂಕು ಮುಸವಳ್ಳಿ ಗ್ರಾಮದ ಕಲಗಾರು ಮಹಾಬಲೇಶ್ವರ ಭಟ್ , ಸಾವಿತ್ರಿ ದಂಪತಿಗಳ ಪುತ್ರಿಯಾದ ಇವರು ಮಾತೃತ್ವಮ್ ಯೋಜನೆಯ […]

Continue Reading

” ಗೋಸೇವೆಗೆ ಪ್ರೇರಣೆ ನನ್ನ ಅತ್ತೆ ” : ಶ್ವೇತಾ ಗಿರೀಶ್, ಕಲ್ಲಕಟ್ಟ

” ನಮ್ಮ ಮನೆಯಲ್ಲಿ ಅನೇಕ ಗೋವುಗಳಿವೆ. ದೇಶೀ ಗೋತಳಿಗಳ ಮಹತ್ವವನ್ನು ಸರಿಯಾಗಿ ತಿಳಿಸಿದವರು ನಮ್ಮ ಅತ್ತೆ. ಗೋಜನ್ಯ ಉತ್ಪನ್ನಗಳ ಮಹತ್ವವನ್ನು ತಿಳಿಸಿ , ಕಾಮಧೇನುವಿನ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಮಾತೃತ್ವಮ್ ಯೋಜನೆಯಲ್ಲಿ ಮಾಸದ ಮಾತೆಯಾಗಿ ಸೇವೆ ಸಲ್ಲಿಸಲು ನನ್ನ ಅತ್ತೆಯವರೇ ಪ್ರೇರಣೆ ” ಎಂದವರು ಮಂಗಳೂರು ಮಂಡಲ ಉಡುಪಿ ವಲಯ ನಿವಾಸಿಗಳಾಗಿರುವ ಶ್ವೇತಾ ಗಿರೀಶ್ ಕಲ್ಲಕಟ್ಟ. ಮೂಲತಃ ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಕಲ್ಲಕಟ್ಟ ನಿವಾಸಿಗಳಾಗಿರುವ ಗೋಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವಿಜಯಲಕ್ಷ್ಮಿ ಕಲ್ಲಕಟ್ಟ ಹಾಗೂ ನಾರಾಯಣ […]

Continue Reading

” ಗೋವು ಬದುಕಿನ ಜೀವನಾಡಿ ” : ಪಾರ್ವತಿ ಸುಬ್ಬರಾವ್

  ” ಹಸುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳು. ಗೋ ಉತ್ಪನ್ನಗಳ ಬಳಕೆಯಿಲ್ಲದೆ ಮಾನವನಿಗೆ ಬದುಕಲು ಸಾಧ್ಯವಿಲ್ಲ. ಗೋವಿಲ್ಲದಿದ್ದರೆ ಆರೋಗ್ಯವೂ ಇಲ್ಲ. ನಮ್ಮ ಬದುಕಿನ ಜೀವನಾಡಿಯೇ ಗೋವು. ನಮ್ಮ ಪೂಜ್ಯ ಗುರುಗಳ ವಿಶೇಷ ಸಂಕಲ್ಪವು ಇಂದು ಜನಮಾನಸವನ್ನು ತಲುಪಿ ಜನತೆ ಗೋಮಾತೆಯ ಬಗ್ಗೆ ಪೂಜ್ಯ ಭಾವನೆಯನ್ನು ತಾಳುತ್ತಿದೆ. ಜನರು ಒಳಗಣ್ಣು ತೆರೆದು ಗೋಮಾತೆಯ ಸೇವೆಗೆ ಕೈ ಜೋಡಿಸಲಾರಂಭಿಸಿದ್ದಾರೆ ” ಈ ನುಡಿಗಳು ಸಾಗರ ಮಂಡಲದ ಬೋಳುಗೋಡು ವಲಯದ ಆನೆಗುಳಿ ಸುಬ್ಬರಾವ್ ಅವರ ಪತ್ನಿ ಪಾರ್ವತಿಯವರದ್ದು. ಸಿದ್ದಾಪುರದ ಸಾತನಕೇರಿಯ […]

Continue Reading

” ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಗೊಂದಲ ನಿವಾರಣೆ ” : ತೇಜಸ್ವಿನಿ ಕೆ.ಎನ್ ಬೆಂಗಳೂರು

  ” ಮದುವೆಗೂ ಮೊದಲು ಶ್ರೀಮಠದ ಸಂಪರ್ಕ ದೊರಕಿತ್ತು. ಚಾತುರ್ಮಾಸ್ಯದ ಸಂದರ್ಭಗಳಲ್ಲಿ ಶ್ರೀಮಠಕ್ಕೆ ಹೋಗುತ್ತಿದ್ದೆ. ಶ್ರೀಗುರುಗಳ ದರ್ಶನ ಮಾತ್ರದಿಂದಲೇ ಮನದ ಅನೇಕ ಗೊಂದಲಗಳು ನಿವಾರಣೆಯಾಗಿವೆ. ಜೀವನದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಕೇವಲ ಪ್ರಾರ್ಥನೆಯಿಂದಲೇ ಪರಿಹಾರ ದೊರಕಿದೆ. ಮದುವೆಯ ನಂತರ ಬೆಂಗಳೂರಿಗೆ ಬಂದ ಮೇಲೆ ಶ್ರೀಮಠದ ಸಂಪರ್ಕ ಹೆಚ್ಚಾಯಿತು. ಮಠದ ವಿವಿಧ ಯೋಜನೆಗಳಿಗೂ ಕೈ ಜೋಡಿಸುವ ಅವಕಾಶ ದೊರಕಿತು ” ಎನ್ನುವವರು ದಕ್ಷಿಣ ಕನ್ನಡದ ಪುಣಚ ದಂಬೆ ಮೂಲದ ಪ್ರಸ್ತುತ ಬೆಂಗಳೂರಿನ ಸರ್ವಜ್ಞ ವಲಯ ನಿವಾಸಿಗಳಾಗಿರುವ ರವಿಶಂಕರ ಶಾಸ್ತ್ರಿ […]

Continue Reading

ಶ್ರೀಗುರುಸೇವೆಯ ಸದವಕಾಶ ಪೂರ್ವ ಜನ್ಮದ ಸುಕೃತ : ಜಯಲಕ್ಷ್ಮಿ ವಿ. ಭಟ್ , ಪದ್ಯಾಣ

” ನಾವು ಮೈಸೂರಿನಲ್ಲಿರುವಾಗ ಮೊದಲ ಬಾರಿ ಶ್ರೀಗುರುಗಳ ದರ್ಶನ ಭಾಗ್ಯ ಪಡೆದೆವು. ಅಂದಿನಿಂದ ಇಂದಿನವರೆಗೂ ಶ್ರೀಮಠದ ವಿವಿಧ ಯೋಜನೆಗಳಿಗೆ ಕೈ ಜೋಡಿಸುತ್ತಾ ಸೇವೆ ಮಾಡುತ್ತಿದ್ದೇವೆ. ಶ್ರೀಗುರು ಸೇವೆ ಮಾಡುವ ಅವಕಾಶ ಮತ್ತು ಆರೋಗ್ಯವನ್ನು ಮಾತ್ರ ದೇವರಲ್ಲಿ ಬೇಡಿಕೊಳ್ಳುವುದು ನಾವು ” ಈ ಮಾತುಗಳು ಮಂಗಳೂರು ಮಂಡಲ ಬಾಯಾರು ವಲಯದ ಮಾಣಿಲ ಮುರುವ ನಿವಾಸಿಗಳಾಗಿರುವ ವಿಶ್ವೇಶ್ವರ ಭಟ್ ಪದ್ಯಾಣ ಇವರ ಪತ್ನಿ ಜಯಲಕ್ಷ್ಮಿ ವಿ. ಭಟ್ ಅವರದ್ದು. ಡೆಂಬಳದ ರಾಮ ಭಟ್ ,ಸರಸ್ವತಿ ದಂಪತಿಗಳ ಪುತ್ರಿಯಾದ ಜಯಲಕ್ಷ್ಮಿ ವಿ […]

Continue Reading

ಹಿಮ್ಮೇಳದಲ್ಲಿ ಮಿಂಚುವ ಯುವ ಪ್ರತಿಭೆ ಅತುಲಕೃಷ್ಣ ಕೆ.ಪಿ.

ಮಕ್ಕಳಲ್ಲಿ ವೈವಿಧ್ಯಮಯವಾದ ಪ್ರತಿಭೆಗಳಿರುತ್ತವೆ. ಅವನ್ನು ಗುರುತಿಸಿ ಪೋಷಿಸುವ ಕೆಲಸವನ್ನು ಮನೆಯ ಹಿರಿಯರು ಮತ್ತು ಶಿಕ್ಷಕರು ಮಾಡಿದಾಗ ಮಾತ್ರ ಅದು ಪ್ರಕಾಶಕ್ಕೆ ಬರುತ್ತದೆ. ಯಕ್ಷಗಾನ ಎಂಬುದು ಅಗಾಧವಾದ ಜ್ಞಾನವನ್ನು ಒದಗಿಸುವ ವಿವಿಧ ರೀತಿಯ ಕಲೆಗಳ ಮಿಶ್ರಣ ಅಂತ ಹೇಳಬಹುದಾದ ಕಲೆಯಲ್ಲವೇ. ಆ ಕಲೆಯಲ್ಲಿ ನಾಟ್ಯ ವೈವಿಧ್ಯಕ್ಕೆ, ಕೈಚಳಕ್ಕೆ ಹೀಗೆ ಹಲವಾರು ರೀತಿಯ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶವಿದೆ. ಸಾಹಿತ್ಯ, ಕಲೆಯೇ ಮೊದಲಾದದ ವಿವಿಧ ರೀತಿಯ ಪ್ರಕಾರಗಳಲ್ಲಿ ಪ್ರತಿಭಾನ್ವಿತರಾಗಿ ಮೂಡಿಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ. ಅಂತಹ ಅಪೂರ್ವ ಪ್ರತಿಭೆಯಾಗಿ ಮಿಂಚುತ್ತಿರುವ […]

Continue Reading