” ಶ್ರೀಮಠದ ಸೇವೆಯಿಂದ ದೊರಕುವುದು ಮನಕ್ಕೆ ಆನಂದ ” : ವಾಸಂತಿ ಹೆಗಡೆ ಬೆಂಗಳೂರು
” ದೊಡ್ಡ ಗುರುಗಳ ಕಾಲದಿಂದಲೇ ಶ್ರೀಮಠದ ಸಂಪರ್ಕದಲ್ಲಿ ಇರುವವರು ನಾವು, ಕೆಲವು ಕಾಲ ವಿದೇಶದಲ್ಲಿ ಇದ್ದು ಬಂದವರಾದರೂ ಮನಸ್ಸಿಗೆ ಆನಂದ ದೊರಕುವುದು ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಾಗಲೇ. ಬೇರೆಲ್ಲೂ ಸಿಗದ ನೆಮ್ಮದಿ, ಶಾಂತಿ ಇಲ್ಲಿದೆ ” ಎನ್ನುವವರು ಹೊನ್ನಾವರ ಮೂಲದ ಪ್ರಸ್ತುತ ಬೆಂಗಳೂರು ದಕ್ಷಿಣ ಮಂಡಲದ ವಿಜಯನಗರ ವಲಯ ನಿವಾಸಿಗಳಾಗಿರುವ ವಾಸಂತಿ ಹೆಗಡೆ. ಕುಮಟಾದ ಶಂಕರ ರಾಮ ಹೆಗಡೆ ಹಾಗೂ ಲಕ್ಷ್ಮೀ ಹೆಗಡೆಯವರ ಪುತ್ರಿಯಾದ ವಾಸಂತಿ ಹೆಗಡೆಯವರು ಶ್ರೀಮಠದ ವಿವಿಧ ವಿಭಾಗಗಳಲ್ಲಿ ಸೇವೆ ಮಾಡಿದ ಅನುಭವವುಳ್ಳವರು. ಮಂಡಲಾಧ್ಯಕ್ಷರಾದ […]
Continue Reading